Tag: income tax

  • ಕೈ ನಾಯಕರ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಕೌಂಟರ್ ನೀಡಲು ಈ ವಿಚಾರ ಮುಂದಿಟ್ಟು ಪ್ರತಿಭಟಿಸಲಿದೆ ಕಾಂಗ್ರೆಸ್

    ಕೈ ನಾಯಕರ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಕೌಂಟರ್ ನೀಡಲು ಈ ವಿಚಾರ ಮುಂದಿಟ್ಟು ಪ್ರತಿಭಟಿಸಲಿದೆ ಕಾಂಗ್ರೆಸ್

    ಬೆಂಗಳೂರು: ಐಟಿ ದಾಳಿಗೆ ಒಳಗಾದ ಕೈ ನಾಯಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

    ನಗರದಲ್ಲಿ ಐಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿಯವರೇ ದಾರಿ ಮಾಡಿ ಕೊಡುತ್ತಿದ್ದಾರೆ. ಗುಜರಾತ್ ನಲ್ಲಿ ನಮ್ಮ ಶಾಸಕರನ್ನು ಖರಿದೀಸಲು ಮುಂದಾದ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.

    ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಖರೀದಿಸಲು ಹೋಗಿದ್ದು, ಪ್ರಜಾಪ್ರಭುತ್ವದ ವಿರೋಧಿ ಬೆಳವಣಿಗೆಯಾಗಿದೆ. ಬಿಜೆಪಿಯವರು ಇಲ್ಲಿ ಐಟಿ ದಾಳಿ ಆಗಿರುವ ತಮ್ಮ ನಾಯಕರ ವಿರುದ್ಧ ಪ್ರತಿಭಟನೆ ನಡೆಸಲಿ. ಅಮಿತ್ ಶಾ ಮೊದಲು ಗುಜರಾತ್ ರಾಜ್ಯದ ಕಡೆ ಗಮನ ಹರಿಸಲಿ ಎಂದು ಅವರು ವಾಗ್ದಾಳಿ ನಡೆಸಿದರು.

    ಕರ್ನಾಟಕದ ಮಾದರಿಯನ್ನು ಕೇಂದ್ರ ಸರಕಾರ ಅನುಸರಿಸಿ ಶಾದಿ ಶಗೂನ್ ಜಾರಿ ಮಾಡುತ್ತಿರುವುದು ಸ್ವಾಗತಾರ್ಹ. ಹಸಿವು ಮುಕ್ತ ಭಾರತ, ಹಸಿವು ಮುಕ್ತ ಕರ್ನಾಟಕ ಕಾಂಗ್ರೆಸ್ ಗುರಿಯಾಗಿದ್ದು, ಇಂದಿರಾ ಕ್ಯಾಂಟೀನ್ ಕಾರ್ಯಕ್ರಮ ಮೂಲಕ ಬಡವರಿಗೆ ಆಹಾರ ಪೂರೈಕೆ ಆಗಲಿದೆ. ಇದು ನಮ್ಮ ಸರ್ಕಾರದ ದೊಡ್ಡ ಹೆಜ್ಜೆಯಾಗಿದ್ದು ಈ ಯೋಜನೆ ಜಾರಿಗೆ ತಂದ ಸರ್ಕಾರಕ್ಕೆ ಅಭಿನಂದನೆಗಳು ಎಂದು ಆಸ್ಕರ್ ಫೆರ್ನಾಂಡಿಸ್ ಹೊಗಳಿದರು.

    ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾರ್ನಿಂಗ್‍ಗೆ ಫುಲ್ ಆ್ಯಕ್ವೀವ್ ಆಗಿರುವ ಬಿಜೆಪಿ ನಾಯಕರು ಈ ಶುಕ್ರವಾರದಿಂದಲೇ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಂದಿನ ಶುಕ್ರವಾರದಿಂದ ಸತತ ಒಂದು ವಾರ ಕಾಲ, ಐಟಿ ದಾಳಿಗೆ ಒಳಗಾದ ಇಂಧನ ಸಚಿವ ಡಿ ಕೆ ಶಿವಕುಮಾರ್, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಪಂಜಿನ ಮೆರವಣಿಗೆ, ಬೈಕ್‍ರ್ಯಾಲಿ ಮೂಲಕ ಜನ ಜಾಗೃತಿ ಮೂಡಿಸುವುದಾಗಿ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಣೆ ಮಾಡಿದ್ದರು.

     

  • ಬಿಜೆಪಿ ನಾಯಕರು ಸಿದ್ದೇಶ್ವರ್ ನಿವಾಸದ ಮುಂದೆ ಮೊದಲು ಧರಣಿ ನಡೆಸಲಿ: ಜಾರಕಿಹೊಳಿ

    ಬಿಜೆಪಿ ನಾಯಕರು ಸಿದ್ದೇಶ್ವರ್ ನಿವಾಸದ ಮುಂದೆ ಮೊದಲು ಧರಣಿ ನಡೆಸಲಿ: ಜಾರಕಿಹೊಳಿ

    ಬೆಳಗಾವಿ: ಬಿಜೆಪಿ ನಾಯಕರು ಮೊದಲು ದಾವಣಗೆರೆಯ ಸಂಸದ ಸಿದ್ದೇಶ್ವರ್ ಮನೆ ಮುಂದೆ ಧರಣಿ ನಡೆಸಲಿ ಎಂದು ಸಣ್ಣ ಕೈಗಾರಿಕಾ ಮತ್ತು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಐಟಿ ದಾಳಿಗೆ ಒಳಗಾದ ಕೈ ನಾಯಕರ ವಿರುದ್ಧ ಬಿಜೆಪಿ ಪ್ರತಿಭಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಸಾಮಾನ್ಯ ಪ್ರತಿಕ್ರಿಯೆ. ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹೀಗಾಗಿ ಬಿಜೆಪಿ ಮುಖಂಡರು ಮೊದಲ ಸಿದ್ದೇಶ್ವರ್ ಮನೆ ಮುಂದೆ ಧರಣಿ ನಡೆಸಲಿ ಎಂದರು.

    ನನ್ನ ಮನೆಯಲ್ಲಿ 3 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಹಣ ಸಿಕ್ಕಿದರೆ ರಾಜಕೀಯ ನಿವೃತ್ತಿಗೆ ಸಿದ್ಧ ಎಂದು ಈ ಹಿಂದೆ ಹೇಳಿದ್ದ ಹೇಳಿಕೆಗೆ ಈಗಲೂ ಬದ್ಧ. ಐಟಿ ಇಲಾಖೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಇದಕ್ಕೆ ನಾವು ಹೇದರಲ್ಲ ಎಂದು ತಿಳಿಸಿದರು.

    10 ಜನ ನರೇಂದ್ರ ಮೋದಿ, 10 ಅಮಿಶ್ ಶಾ ಹಾಗೂ 10 ಯಡಿಯೂರಪ್ಪ ನಂತವರು ಬಂದರೂ ನಾನು ಹೆದರಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾರ್ನಿಂಗ್‍ಗೆ ಫುಲ್ ಆ್ಯಕ್ವೀವ್ ಆಗಿರುವ ಬಿಜೆಪಿ ನಾಯಕರು ಈ ಶುಕ್ರವಾರದಿಂದಲೇ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಂದಿನ ಶುಕ್ರವಾರದಿಂದ ಸತತ ಒಂದು ವಾರ ಕಾಲ, ಐಟಿ ದಾಳಿಗೆ ಒಳಗಾದ ಇಂಧನ ಸಚಿವ ಡಿ ಕೆ ಶಿವಕುಮಾರ್, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಪಂಜಿನ ಮೆರವಣಿಗೆ, ಬೈಕ್‍ರ್ಯಾಲಿ ಮೂಲಕ ಜನ ಜಾಗೃತಿ ಮೂಡಿಸುವುದಾಗಿ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

    ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಬಿಎಸ್ ಯಡಿಯೂರಪ್ಪ, ಅಮಿತ್ ಶಾ ಎಡವಟ್ಟು!

    ಇದನ್ನೂ ಓದಿ: ಕಾಂಗ್ರೆಸ್ ಅಂಜೋದಕ್ಕೆ ಅಮಿತ್ ಶಾ ದೆವ್ವನೋ, ಭೂತನೋ?: ಉಮಾಶ್ರೀ

  • ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ

    ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ

    ಬೆಂಗಳೂರು: ಬಿಜೆಪಿಯಲ್ಲಿ ಮತ್ತೆ ನಾಯಕರ ನಡುವಿನ ಮುನಿಸು ಆರಂಭವಾಗಿದ್ದು, ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಐಟಿ ದಾಳಿ ವಿಚಾರ ಬಗ್ಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜಾಣ ನಡೆಗೆ ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗಿದೆ.

    ಸಚಿವ ಡಿಕೆಶಿ ನಿವಾಸದ ಮೇಲಿನ ಐಟಿ ದಾಳಿಯನ್ನು ಲಾಭವಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಬಹುದಾಗಿತ್ತು. ಆದರೆ ಬಿಎಸ್ ಯಡಿಯೂರಪ್ಪನವರು ಈ ವಿಚಾರದಲ್ಲಿ ಅಷ್ಟೇನು ಆಸಕ್ತಿ ತೋರಿಸದಕ್ಕೆ ಬಿಜೆಪಿಯ ಅತೃಪ್ತ ನಾಯಕರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಲು ಮುಂದಾಗಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಅತೃಪ್ತರು ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸಲು ಮುಂದಾಗಿದ್ದರು. ಆದರೆ ಅಮಿತ್ ಶಾ ಭೇಟಿಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಪತ್ರದ ಮೂಲಕ ದೂರು ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೇಂದ್ರ ಸರ್ಕಾರದ ಮೇಲೆ ಕೈ ನಾಯಕರು ಟೀಕೆ ಮಾಡುತ್ತಿದ್ದಾಗ ಬಿಎಸ್‍ವೈ ಮೌನವಾಗಿದ್ದರು. ಐಟಿ ದಾಳಿಗೆ ಉತ್ತರ ಕೊಡುವ ಸಾಮಥ್ರ್ಯ ಡಿ.ಕೆ.ಶಿವಕುಮಾರ್ ಅವರಿಗೆ ಇದೆ ಎಂದು ಬಿಎಸ್‍ವೈ ಉತ್ತರಿಸಿದ್ದರು. ಅಧ್ಯಕ್ಷರು ಮೃದು ಧೋರಣೆ ತೋರಿದ ಪರಿಣಾಮ ಇತರ ನಾಯಕರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ. ಐಟಿ ದಾಳಿ ನಡೆದಿದ್ದೇ ದುರುದ್ದೇಶಪೂರ್ವಕ ಎನ್ನುವ ಭಾವನೆ ರಾಜ್ಯದ ಜನತೆಗೆ ಹೋಗಿದೆ. ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಳ್ಳಲು ರಾಜ್ಯ ನಾಯಕರೇಕೆ ಮುಂದಾಗಿಲ್ಲ? ಎಲ್ಲದಕ್ಕೂ ಮಾತನಾಡುವ ಶೋಭಾ ಕರಂದ್ಲಾಜೆ ಮೌನವಾಗಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅತೃಪ್ತ ನಾಯಕರು ಶನಿವಾರ ರಾತ್ರಿ ಅಮಿತ್ ಶಾ ಅವರಿಗೆ ದೂರಿನ ಪತ್ರವನ್ನು ತಲುಪಿಸಲು ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಗೆ ಸ್ಫೋಟಕ ಟ್ವಿಸ್ಟ್

     

     

     

     

  • ಡಿಕೆಶಿಗೆ ಸೇರಿದ 27 ಅಕೌಂಟ್‍ಗಳಿಗೆ ಐಟಿ ಮುಟ್ಟುಗೋಲು- 100 ಕೋಟಿ ವ್ಯವಹಾರದ ಬಗ್ಗೆ ಇಂದು ವಿವರಣೆ ಸಾಧ್ಯತೆ

    ಡಿಕೆಶಿಗೆ ಸೇರಿದ 27 ಅಕೌಂಟ್‍ಗಳಿಗೆ ಐಟಿ ಮುಟ್ಟುಗೋಲು- 100 ಕೋಟಿ ವ್ಯವಹಾರದ ಬಗ್ಗೆ ಇಂದು ವಿವರಣೆ ಸಾಧ್ಯತೆ

    ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಹಿಂದೆ ಬಿದ್ದಿರೋ ಆದಾಯ ತೆರಿಗೆ ಇಲಾಖೆ ಮೂರು ದಿನಗಳ ಡಿಕೆಶಿ ಮತ್ತವರ ಸಂಬಂಧಿಕರು, ಆಪ್ತರ ಮನೆ ಮೇಲಿನ ದಾಳಿಯಲ್ಲಿ ಸಿಕ್ಕ ಆಸ್ತಿ-ಪಾಸ್ತಿಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

    ಈ ಹಿನ್ಮೆಲೆಯಲ್ಲಿ ಇವತ್ತು ಎರಡನೇ ಬಾರಿಗೆ ಡಿಕೆಶಿ ಐಟಿ ಮುಂದೆ ಹಾಜರಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಇದು ಸಹಜವಾಗಿಯೇ ಗುಜರಾತ್ ರಾಜ್ಯಸಭಾ ಚುನಾವಣಾ ಗೆಲುವಿನ ಖುಷಿಯನ್ನು ಕಿತ್ತುಕೊಂಡಿದೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್‍ಗೆ ಸೇರಿದ 27 ಅಕೌಂಟ್‍ಗಳನ್ನು ಐಟಿ ಮುಟ್ಟುಗೋಲು ಹಾಕಿಕೊಂಡಿದೆ.

    ಕಳೆದ ನವೆಂಬರ್‍ನಲ್ಲಿ ನೋಟು ನಿಷೇಧವಾದ ಬಳಿಕ ಡಿಕೆಶಿಗೆ ಸೇರಿದ ಬ್ಯಾಂಕ್ ಅಕೌಂಟ್‍ಗಳಿಂದ ಹಿಡಿದು ಶಿಕ್ಷಣ ಸಂಸ್ಥೆಗಳ ಮೂಲಕ ಸುಮಾರು 100 ಕೋಟಿ ವಹಿವಾಟು ನಡೆದಿದೆಯಂತೆ. ಹೀಗಾಗಿ ಹಣದ ಮೂಲದ ಬಗ್ಗೆ ಪ್ರಶ್ನೆ ಕೇಳಿ ಡಿಕೆಶಿಗೆ ಐಟಿ ನೊಟೀಸ್ ಜಾರಿ ಮಾಡಿದ್ದು ಆ ಅನುಮಾನಗಳಿಗೆ ಡಿಕೆಶಿ ದಾಖಲೆ ಸಹಿತ ಉತ್ತರಿಸಬೇಕಿದೆ.

    ಇದನ್ನೂ ಓದಿ: ಮೋದಿ ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದ ದ್ವಾರಕಾನಾಥ ಗುರೂಜಿ 2019ರ ಬಗ್ಗೆ ಹೇಳಿದ್ದು ಹೀಗೆ

    https://www.youtube.com/watch?v=mSJl6qQnCUE

     

  • ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಗೆ ಸ್ಫೋಟಕ ಟ್ವಿಸ್ಟ್

    ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಗೆ ಸ್ಫೋಟಕ ಟ್ವಿಸ್ಟ್

    ಬೆಂಗಳೂರು: ಡಿಕೆಶಿ, ಮತ್ತವರ ಸಂಬಂಧಿಕರು, ಆಪ್ತರ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆಯ ದಾಳಿಗೆ ಸ್ಫೋಟಕ ತಿರುವು ಸಿಕ್ಕಿದ್ದು, ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೇರಿಸುವ ಪ್ರಯತ್ನ ನಡೆದಿತ್ತು ಎನ್ನುವ ಸುದ್ದಿಯೊಂದು ಹರಿದಾಡಲು ಆರಂಭವಾಗಿದೆ.

    ಐಟಿ ರೇಡ್‍ಗೂ 20 ದಿನ ಮುನ್ನ ಕೇಂದ್ರ ಸಚಿವರೊಬ್ಬರು ಡಿಕೆ ಶಿವಕುಮಾರ್‍ಗೆ ಫೋನ್ ಮಾಡಿ, ಬಿಜೆಪಿ ಸೇರುವಂತೆ ಆಹ್ವಾನ ಕೊಟ್ಟಿದ್ದರಂತೆ. ನಿಮ್ಮಂತ ಡೈನಾಮಿಕ್ ಲೀಡರ್ ಪಕ್ಷಕ್ಕೆ ಬೇಕು. ನೀವು ಒಕ್ಕಲಿಗ ಸಮುದಾಯದ ದೊಡ್ಡ ನಾಯಕರು ಎಂದು ಹೇಳಿದ್ದರಂತೆ.

    ಹೆಸರು ಪ್ರಸ್ತಾಪಿಸದೆ ನಿಮ್ಮ ನಾಯಕರೇ ಪಕ್ಷಕ್ಕೆ ಬಂದಿದ್ದಾರೆ. ನೀವು ಬಂದರೆ ಗೌರವ, ಸ್ಥಾನಮಾನ ಸಿಗುತ್ತದೆ ಎಂದು ಆ ಸಚಿವರು ಹೇಳಿದ್ದರಂತೆ. ಆದರೆ ಈ ಆಹ್ವಾನವನ್ನ ಡಿಕೆ ಶಿವಕುಮಾರ್ ತಿರಸ್ಕರಿಸಿದ್ದರಂತೆ. ಇದಾದ ಬಳಿಕವೇ ಐಟಿ ರೇಡ್ ಆಗಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.

    ಸುದ್ದಿ ಶುದ್ಧ ಸುಳ್ಳು: ಐಟಿ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲವೇ ಇಲ್ಲ. ದೆಹಲಿ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಕೇಂದ್ರ ನಾಯಕರೂ ಮಾತುಕತೆ ನಡೆಸಿಲ್ಲ. ಆಹ್ವಾನ ನೀಡಲಾಗಿದೆ ಎನ್ನುವುದೆಲ್ಲ ಶುದ್ಧ ಸುಳ್ಳು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಮುಖಂಡ ಸುರೇಶ್ ಕುಮಾರ್ ಸಹ ಈ ವಿಚಾರಕ್ಕೆ ಧ್ವನಿಗೂಡಿಸಿದ್ದಾರೆ.

    ಸದ್ಯಕ್ಕೆ ಯಾವುದೇ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲ್ಲ. ನನ್ನ ಬಗ್ಗೆ ಏನೇನು ಸುದ್ದಿ ಹರಿದಾಡುತ್ತವೋ ಹರಿಯಲಿ ಬಿಡಿ ಅಂತ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಈ ಮಧ್ಯೆ, ಡಿಕೆಶಿ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ ಎಂದು ಯಡಿಯೂರಪ್ಪ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ ಅಂತ ತಿಳಿದುಬಂದಿದೆ. ಆಗಸ್ಟ್ 12, 13, 14ರಂದು ರಾಜ್ಯ ಪ್ರವಾಸದ ಸಮಯದಲ್ಲಿ ಅಮಿತ್ ಶಾ ಈ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಐಟಿ ವಿಚಾರಣೆ ಬಳಿಕ ಡಿಕೆಶಿ ಸ್ನೇಹದ ಬಗ್ಗೆ ದ್ವಾರಕಾನಾಥ್ ಗುರೂಜಿ ಹೇಳಿದ್ದೇನು?

  • ಐಟಿ ಡ್ರಿಲ್ಲಿಂಗ್: ಅಧಿಕಾರಿಗಳ ಆ ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದು ಹೀಗೆ

    ಐಟಿ ಡ್ರಿಲ್ಲಿಂಗ್: ಅಧಿಕಾರಿಗಳ ಆ ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದು ಹೀಗೆ

    ಬೆಂಗಳೂರು: ಡಿಕೆ ಶಿವಕುಮಾರ್ ವಿಚಾರಣೆಯ 3ನೇ ದಿನವಾದ ಶುಕ್ರವಾರ ಐಟಿ ಡಿಜಿ ಬಾಲಕೃಷ್ಣನ್ ಆಗಮಿಸಿ ಪ್ರಶ್ನೆ ಕೇಳಿದ್ದಾರೆ. ಹಲವಾರು ಪ್ರಶ್ನೆಗಳನ್ನು ಕೇಳಿದ್ದು ಈ ಪ್ರಶ್ನೆಗೆ ಡಿಕೆಶಿ ಉತ್ತರಿಸಿದ್ದು, ಏನು ಉತ್ತರಿಸಿದ್ದಾರೆ ಎನ್ನುವುದು ಐಟಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ದೆಹಲಿಯಲ್ಲಿ ನಿಮ್ಮ ಆಪ್ತರ ಮನೆಯಲ್ಲಿ ದುಡ್ಡು ಸಿಕ್ಕಿದೆಯೆಲ್ಲ ಎಂದು ಕೇಳಿದ್ದಕ್ಕೆ ಡಿಕೆಶಿ, ಬೇರೆ ಮನೆಯಲ್ಲಿ ಸಿಕ್ಕ ವಸ್ತುಗಳಿಗೆ ಹಣಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅಧಿಕಾರಿಗಳು, ಅದು ನಿಮಗೆ ಸೇರಿದೆ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನೆಯಲ್ಲಿ ಏನು ಸಿಕ್ಕಿದೆ ಅದನ್ನು ಕೇಳಿದರೆ ಹೇಳುತ್ತೇನೆ ಎಂದಿದ್ದಾರೆ.

    ನಿಮ್ಮ ಪಾಲುದಾರಿಕೆಯಲ್ಲಿ ಏನೇನಿದೆ ಎಂದು ಐಟಿ ಅವರು ಕೇಳಿದದ್ದಕ್ಕೆ, ಪಾಲುದಾರಿಕೆಯ ಬಗ್ಗೆ ನನ್ನ ಕಡೆಯವರು ನೋಡಿಕೊಳ್ತಾರೆ. ಅದನ್ನೆಲ್ಲಾ ವಕೀಲರ ಜೊತೆ ಚರ್ಚಿಸಿ ಉತ್ತರ ನೀಡುತ್ತೇನೆ ಎಂದು ಉತ್ತರಿಸಿದ್ದಾರೆ. ಈ ವೇಳೆ, ನಿಮ್ಮ ಎಲ್ಲ ವ್ಯವಹಾರಗಳಿಗೂ ಐಟಿ ರಿಟರ್ನ್ ಸಲ್ಲಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಅದನ್ನೆಲ್ಲಾ ನಮ್ ಅಕೌಟೆಂಟ್ ನೋಡಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಉತ್ತರಕ್ಕೆ, ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲವೇ ಎಂದು ಐಟಿ ಮರು ಪ್ರಶ್ನೆ ಹಾಕಿದೆ. ಅದಕ್ಕೆ ಡಿಕೆಶಿ ನಾನು ರಾಷ್ಟ್ರೀಯ ರಾಜಕಾರಣದಲ್ಲಿಯೂ ಸಕ್ರಿಯವಾಗಿ ಇದ್ದೇನೆ. ಇದು ನನ್ನ ಅರಿವಿಗೆ ಇಲ್ಲ ಎಂದಿದ್ದಾರೆ.

    ಸೋಫಾ ಸೆಟ್ ಮತ್ತು ಸ್ಕ್ರೀನ್‍ಗಳನ್ನು ಎಲ್ಲಿಂದ ತರಿಸಿದ್ದು? ಇದು ಉಡುಗೊರೆನಾ ಎಂದು ಪ್ರಶ್ನಿದ್ದಕ್ಕೆ, ಡಿಕೆಶಿ, ಉಡುಗೊರೆ ಯಾವುದು ಬಂದಿಲ್ಲ. ನಮ್ಮ ಮನೆಯವರೇ ತಂದಿರುತ್ತಾರೆ ಎಂದು ಉತ್ತರಿಸಿದ್ದಾರೆ. ಕೂಡಲೇ ಅಧಿಕಾರಿಗಳು ಈಗ ಆ ಬಿಲ್‍ಗಳನ್ನು ನೀವು ಕೊಡಬಹುದೇ ಎಂದು ಕೇಳಿದ್ದಕ್ಕೆ ಶಿವಕುಮಾರ್ ತುಂಬಾ ದಿನದ ಹಿಂದೆ ಆಗಿರುವ ಕಾರಣ ಎಲ್ಲ ಬಿಲ್ ಇಟ್ಟುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

    ಬಾಲಕೃಷ್ಣನ್ ಯಾರು?: 1983ನೇ ಬ್ಯಾಚಿನ ಅಧಿಕಾರಿ ಆಗಿರುವ ಕೆ.ಆರ್.ಬಾಲಕೃಷ್ಣನ್ ಖಡಕ್ ಅಧಿಕಾರಿ ಎಂದೇ ಫೇಮಸ್. ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಪ್ರಧಾನ ನಿರ್ದೆಶಕರಾಗಿರುವ ಬಾಲಕೃಷ್ಣನ್ ತಮಿಳುನಾಡಿನಲ್ಲಿ ಹಲವಾರು ದಾಳಿಗಳನ್ನು ನಡೆಸಿ ಅಕ್ರಮಗಳನ್ನು ಬಯಲಿಗೆ ಎಳೆದಿದ್ದರು.ಅಕ್ರಮ ಗುಟ್ಕಾ ಮಾರಾಟ ಹಗರಣವನ್ನು ಇವರು ಬಯಲು ಮಾಡಿದ್ದರು. 2016ರಲ್ಲಿ ತಮಿಳುನಾಡು ಚುನಾವಣಾ ವೆಚ್ಚದ ಉಸ್ತುವಾರಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬಾಲಕೃಷ್ಣನ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಂಬಿಕಸ್ಥ ಅಧಿಕಾರಿ ಆಗಿದ್ದಾರೆ.

    ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ

     

  • ಡಿಕೆಶಿ ಆಪ್ತನ ಮನೆಯಲ್ಲಿ ಹಣದ ಗೋಪುರ: ವಿಚಾರಣೆ ವೇಳೆ ಆಂಜನೇಯ ಹೇಳಿದ್ದೇನು?

    ಡಿಕೆಶಿ ಆಪ್ತನ ಮನೆಯಲ್ಲಿ ಹಣದ ಗೋಪುರ: ವಿಚಾರಣೆ ವೇಳೆ ಆಂಜನೇಯ ಹೇಳಿದ್ದೇನು?

    ನವದೆಹಲಿ: ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸುತ್ತಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್‍ಗೆ ಈ ಬಾರಿ ಐಟಿ ಸಂಕಟ ತಂದಿಟ್ಟಿದ್ದು,  ದೆಹಲಿಯ ಆಪ್ತ ಆಂಜನೇಯ ನಿವಾಸದಲ್ಲಿ ಜೋಡಿಸಿಟ್ಟಿದ್ದ 8.5 ಕೋಟಿ ನೋಟುಗಳು ಬಹಿರಂಗವಾಗಿವೆ.

    100 ರೂ, 500 ರೂ ಮತ್ತು 2000 ಸಾವಿರ ನೋಟುಗಳನ್ನ ಪ್ರತ್ಯೇಕವಾಗಿ 3 ಸಾಲಿನಲ್ಲಿ ಕಂತೆ ಕಂತೆಯಾಗಿ ಜೋಡಿಸಿಡಲಾಗಿದೆ. ಇದೆಲ್ಲವೂ ದೆಹಲಿಯ ಸಫ್ದಾರ್‍ಜಂಗ್ ಎನ್‍ಕ್ಲೇವ್‍ನ ಡಿಕೆಶಿ ಮನೆಯಲ್ಲಿದ್ದ ಹಣವಾಗಿದೆ. ಗುರುವಾರ ವಿಚಾರಣೆ ವೇಳೆ ಆಂಜನೇಯ ಹಣ ಇರುವ ವಿಚಾರದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು ಎನ್ನುವ ಮಾಹಿತಿಯನ್ನು ಮಾಧ್ಯಮವೊಂದು ಪ್ರಸಾರ ಮಾಡಿತ್ತು.

    ಬೆಂಗಳೂರಿನ ಡಿಕೆಶಿ ನಿವಾಸದಲ್ಲಿ ಸತತ ಮೂರನೇ ದಿನವೂ ಐಟಿ ವಿಚಾರಣೆ ಮುಂದುವರಿದಿದೆ. ಬೆಳಗ್ಗಿನಿಂದಲೂ ಡ್ರಿಲ್ ಮಾಡಿರುವ ಐಟಿ ಅಧಿಕಾರಿಗಳು, ವಿವಿಧ ಬ್ಯಾಂಕ್ ಖಾತೆಗಳು ಹಾಗೂ ವಿದೇಶದ ಹಣದ ವ್ಯವಹಾರದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಮೂರು ದಿನಗಳ ತನಿಖೆಯಲ್ಲಿ ನೂರು ಕೋಟಿಗೂ ಹೆಚ್ಚಿನ ಆಸ್ತಿ ಪತ್ರಗಳು ಸಿಕ್ಕಿದೆ ಎನ್ನಲಾಗಿದೆ. ಇವತ್ತು ರಾತ್ರಿಯೂ ತನಿಖೆ ಮುಂದುವರಿಯುವ ಸಾಧ್ಯತೆ ಇದೆ.

    ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನನದಲ್ಲಿ ನಾನು 5 ಕೋಟಿ ರೂ. ಹಣವನ್ನು ಸಾಗಿಸಿದ್ದೇನೆ ಎಂದು ಎಚ್.ಆಂಜನೇಯ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು.

    ರಾಷ್ಟ್ರೀಯ ಸುದ್ದಿ ವಾಹಿನಿ ‘ಟೈಮ್ಸ್ ನೌ’ಗೆ ದೆಹಲಿಯ ಡಿಕೆಶಿ ನಿವಾಸದ ಮೇಲೆ ಮಾಡಿದ ದಾಳಿಯ ವೇಳೆ ಐಟಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರತಿ ಸಿಕ್ಕಿದ್ದು ಇದರಲ್ಲಿ ಆಂಜನೇಯ ಹಣದ ಮೂಲದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಸುದ್ದಿ ಪ್ರಸಾರ ಮಾಡಿತ್ತು.

    ಹೇಳಿಕೆಯಲ್ಲೇನಿದೆ?: ಶೈಲೇಂದರ್ 1 ಕೋಟಿ ರೂ., 2.5 ಕೋಟಿ ರೂ., 1.5 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಹಣವನ್ನು ತಂದಿದ್ದರು. ಕಳೆದ ವಾರ 1.60 ಕೋಟಿ ರೂ. ಹಣವನ್ನು ನಾನೇ ಸಾಗಿಸಿದೆ. ಸಚಿವ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ನಾನು ಹಣವನ್ನು ಬಿ2/107 ಮನೆಯಿಂದ ಬಹ/201 ಮನೆಗೆ ಸಾಗಿಸಿದ್ದೇನೆ. ಆದರೆ ಈ ಹಣವನ್ನು ನನ್ನ ಮೂಲಕವೇ ಯಾಕೆ ಸಾಗಿಸಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ಪ್ರಶ್ನಾವಳಿಗೆ ಆಂಜನೇಯ ಸಹಿ ಹಾಕಿದ್ದಾರೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.

    ಡಿಕೆಶಿ ದೆಹಲಿಗೆ ಹೋಗಿದ್ದು ಯಾಕೆ?: ಇಂಧನ ಸಚಿವ ಡಿಕೆ ಶಿವಕುಮಾರ್ ಆಗಸ್ಟ್ 1ರಂದು ದೆಹಲಿಗೆ ಆಗಮಿಸಿದ್ದರು. ಜೆಟ್ ಏರ್ ವೇಸ್ ವಿಮಾನದಲ್ಲಿ ಆಗಮಿಸಿದ್ದ ಶಿವಕುಮಾರ್ ದೆಹಲಿಯ ಏರೋಸಿಟಿಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಹಣ ಸಂದಾಯವಾಗಿದೆಯಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆಯಂತೆ. ಐಟಿ ದಾಳಿ ವೇಳೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಿಂದ 7.5 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ಇದ್ಯಾವುದನ್ನೂ ಐಟಿ ಅಧಿಕಾರಿಗಳು ಇನ್ನೂ ಖಚಿತ ಪಡಿಸಿಲ್ಲ.

  • ಬಿಜೆಪಿ ಸಚಿವರ ಮೇಲೂ ದಾಳಿ ಆಗಲಿ: ಸಚಿವ ಪ್ರಮೋದ್ ಮಧ್ವರಾಜ್

    ಬಿಜೆಪಿ ಸಚಿವರ ಮೇಲೂ ದಾಳಿ ಆಗಲಿ: ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ತಪ್ಪಲ್ಲ. ಆದ್ರೆ ಕೇವಲ ಕಾಂಗ್ರೆಸ್ ಸರ್ಕಾರವನ್ನೇ- ಕಾಂಗ್ರೆಸ್ ನ ಮಂತ್ರಿಗಳನ್ನೇ ಟಾರ್ಗೆಟ್ ಮಾಡುವುದು ಎಷ್ಟು ಸರಿ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಐಟಿ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಒಂದೆರಡು ಬಿಜೆಪಿ ಸಚಿವರ ಮೇಲೂ ದಾಳಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಪೂರಿತ ದಾಳಿ ಎಂದು ಬಣ್ಣಿಸಿದರು.

    ಗುಜರಾತ್ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದು ಕೇಂದ್ರ ಸರ್ಕಾರಕ್ಕೆ ಇರಿಸುಮುರುಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ. ದಾಳಿ ಮಾಡಿದ್ದನ್ನು ವಿರೋಧಿಸಲ್ಲ. ಆದ್ರೆ ದಾಳಿ ಮಾಡಿದ ಟೈಂ ಸರಿಯಿಲ್ಲ. ಐಟಿ ದಾಳಿ ಹಿಂದೆ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂಬ ಡಿಕೆಶಿ ತಾಯಿ ಗೌರಮ್ಮ ಗಂಭೀರ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ರಾಜಕೀಯವಾಗಿ ಎಷ್ಟು ಪರಿಪಕ್ವರು ಎಂಬುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಪ್ರಾಮಾಣಿಕ ಮಂತ್ರಿಗಳು- ಶಾಸಕರು ಸರಿಯಾಗಿ ಟ್ಯಾಕ್ಸ್ ಕಟ್ಟಿದವರು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು. ಯಾರೂ ಚಿಂತಿಸಬೇಕಾದ ಅಗತ್ಯವೇ ಇಲ್ಲ. ನೋಟ್ ಬ್ಯಾನ್ ಆದಾಗ ನನ್ನ ಬಳಿ ಕೇವಲ ಐದು ಸಾವಿರ ರೂಪಾಯಿ ಹಳೆ ನೋಟ್ ಇತ್ತು ಎಂದರು.

     

  • ಐಟಿ  ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ನವದೆಹಲಿ: ಕೊನೆಯ ಕ್ಷಣದಲ್ಲಿ ಆದಾಯ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್)  ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್.

    ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಐ.ಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.

    ಐ.ಟಿ ರಿಟರ್ನ್ಸ್  ಸಲ್ಲಿಕೆ ವೇಳೆ ಕೊನೆ ಕ್ಷಣದಲ್ಲಿ ಹಲವು ಮಂದಿಗೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಡೆಡ್‍ಲೈನ್ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳ್ಳಲು ಆಗಸ್ಟ್ 31ರ ಒಳಗಡೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಯಾಗಬೇಕು ಎಂದು ತಿಳಿಸಿದೆ.

  • ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನವದೆಹಲಿ: ನೀವು ಹೊಸ ಕಾರು ಖರೀದಿಸಿ ಫೇಸ್ ಬುಕ್‍ಗೆ ಫೋಟೋ ಹಾಕ್ತೀರಾ. ಹಾಗಾದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂದರೆ ಅಚ್ಚರಿಯಿಲ್ಲ.

    ಹೌದು. ಕಪ್ಪು ಕುಳಗಳನ್ನು ಮಣಿಸಲು ನೋಟ್ ನಿಷೇಧ ಕೈಗೊಂಡ ಮೋದಿ ಸರ್ಕಾರ ಈಗ ಆದಾಯ ತೆರಿಗೆಯನ್ನು ಕಟ್ಟದೇ ಶೋಕಿ ಮಾಡೋ ಕುಳಗಳನ್ನು ಹಿಡಿಯಲು ಪ್ಲಾನ್ ಮಾಡಿದೆ.

    ಇಲ್ಲಿಯವರೆಗೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಮೂಲಗಳನ್ನು ಮಾತ್ರ ಪರಿಶೀಲನೆ ನಡೆಸಿ ತೆರಿಗೆ ವಂಚಿಸುತ್ತಿದ್ದ ಕುಳಗಳನ್ನು ಪತ್ತೆ ಹಚ್ಚುತಿತ್ತು. ಈಗ ಇವುಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಶೋಕಿ ಮಾಡು ಮಂದಿಯನ್ನು ಪತ್ತೆ ಹಚ್ಚಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹೇಗೆ?
    ನೀವು ಎಲ್ಲಿ ಹೋಗಿದ್ದೀರಿ..? ಎಷ್ಟು ಖರ್ಚು ಮಾಡಿದ್ದೀರಿ..? ಏನು ಖರೀದಿ ಮಾಡಿದ್ದೀರಿ ಎನ್ನುವ ಮಾಹಿತಿ ಸಂಗ್ರಹಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ರೂಪಿಸಿದ್ದು ಆಗಸ್ಟ್ ನಿಂದ ಕಾರ್ಯಾರಂಭ ಮಾಡಲಿದೆ. ಒಂದು ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಫೇಸ್‍ಬುಕ್, ಇನ್‍ಸ್ಟಾ ಗ್ರಾಮ್‍ನಿಂದ ಫೋಟೋ, ವಿಡಿಯೋಗಳ ಮಾಹಿತಿಯನ್ನು ಮಾಹಿತಿಯನ್ನು ಸಂಗ್ರಹಿಸಲಿದೆ.

    ಕಾರ್ಯಾಚರಣೆ ಹೀಗೆ ಇರುತ್ತೆ:
    ಮೊದಲ ಹಂತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ, ಆಸ್ತಿ ಮತ್ತು ಸ್ಟಾಕ್ ಗಳಲ್ಲಿ ಹೂಡಿಕೆ, ಹಣವನ್ನು ಖರ್ಚು ಮಾಡಿದ್ದು ಮತ್ತು ಠೇವಣಿ ಇಟ್ಟ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಹಂತ ಡಿಸೆಂಬರ್ ನಿಂದ ಆರಂಭವಾಗಲಿದ್ದು, ತೆರಿಗೆಯನ್ನು ವಂಚಿಸಿ ವ್ಯವಹಾರ ನಡೆಸುತ್ತಾರೋ ಅವರ ಮಾಹಿತಿಯನ್ನು ಸಂಗ್ರಹಿಸಲು ವೈಯಕ್ತಿಕ ಪ್ರೊಫೈಲ್ ಕ್ರಿಯೆಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ಕಾರುಗಳು, ವಿದೇಶ ಪ್ರವಾಸದ ಫೋಟೋ, ಶಾಪಿಂಗ್ ಫೋಟೋ ಇತ್ಯಾದಿ. ಎಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ 2018ರ ಮೇ ತಿಂಗಳಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೇರವಾಗಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.

    ನವೆಂಬರ್ 8ರಂದು ನೋಟ್ ಬ್ಯಾನ್ ಮಾಡಿದ ಬಳಿಕ ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿ ಕಳೆದ ವರ್ಷ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಆದರೆ ಕೇವಲ 32 ಲಕ್ಷ ಮಂದಿ ಮಾತ್ರ ತಮ್ಮ ಬಳಿಕ 10 ಲಕ್ಷಕ್ಕೂ ಹೆಚ್ಚು ಅಧಿಕ ಆದಾಯವಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ತೆರಿಗೆ ವಂಚಿಸುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಮೋದಿ ಎಚ್ಚರಿಕೆ ನೀಡಿದ್ದರು.