Tag: income tax raid

  • IT Raid In Bengaluru: 42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!

    IT Raid In Bengaluru: 42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!

    ಬೆಂಗಳೂರು: ಸಿಲಿಕಾನ್ ಸಿಟಿಯ ಇತಿಹಾಸದಲ್ಲಿಯೇ ಅತೀ ದೊಡ್ಡ ಐಟಿ (Income Tax) ದಾಳಿಯಾಗಿದ್ದು, ಅಧಿಕಾರಿಗಳಿಗೆ ಬರೋಬ್ಬರಿ 42 ಕೋಟಿ ರೂ. ಸಿಕ್ಕಿದೆ. ಈ ಹಣ ಸಿಕ್ಕಿದ್ದು ಬಿಬಿಎಂಪಿ (BBMP) ಗುತ್ತಿಗಾರರ ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ (R. Ambikapathy) ಮಗಳ ನಿವಾಸದಲ್ಲಿ.

    ಹೌದು. ಅಂಬಿಕಾಪತಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಇದೀಗ ಓರ್ವ ಮಗಳು ದಿವ್ಯಾ (Divya) ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಕಂತೆ ಕಂತೆ ಹಣ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಮನೆ ಮೇಲೆ ಗುರುವಾರ ಮಧ್ಯರಾತ್ರಿಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

    ಅಂಬಿಕಾಪತಿ ಕಳೆದ ಜನವರಿಯಲ್ಲಿ ಕಾವಲ್ ಬೈಸಂದ್ರದ ಗಣೇಶ ಬ್ಲಾಕ್‍ನಲ್ಲಿರುವ (Ganesha Block) ಮನೆ ಖಾಲಿ ಮಾಡಿದ್ದರು. ಬಳಿಕ ಇತ್ತೀಚೆಗಷ್ಟೇ ಕುಟುಂಬ ಮಾನ್ಯತಾ ಪಾರ್ಕ್‍ಗೆ (Manyatha Park) ಶಿಫ್ಟ್ ಆಗಿತ್ತು. ಅಲ್ಲಿ ಅವರು ನಾಲ್ಕು ವರ್ಷದ ಹಿಂದೆ ದಾಳಿಯಾದ ಬಿಲ್ಡಿಂಗ್ ಖರೀದಿಸಿದ್ದರು. ಕೆಳಗಿರುವ ಮನೆಯನ್ನ ಬಾಡಿಗೆ ನೀಡಿ ಮೊದಲ ಅಂತಸ್ತಿನ ಮನೆಯಲ್ಲಿ ಕುಟುಂಬ ವಾಸವಿತ್ತು. ಜನವರಿಯಲ್ಲಿ ಮೇಲಿನ ಮನೆ ಖಾಲಿ ಮಾಡಿರುವ ಅಂಬಿಕಾಪತಿ ಖಾಲಿ ಮನೆಗೆ ಗಾಗ ಬಂದು ಹೋಗುತ್ತಿದ್ದರು.

    ಅಂಬಿಕಾಪತಿ ಹೊಸ ಮನೆಗೆ ಶಿಫ್ಟ್ ಆದರೂ ಹಳೆಯ ಮನೆಯಲ್ಲೇ ಎಲ್ಲಾ ವ್ಯವಹಾರ ನಡೆಸುತ್ತಿದ್ದರು. ಕಾವಲ್ ಬೈರಸಂದ್ರದ ಗಣೇಶ್ ಬ್ಲಾಕ್‍ನ ಹಳೆ ಮನೆಯಲ್ಲೇ ಆಗಾಗ ಮೀಟಿಂಗ್‍ಗಳು ನಡೆಯುತ್ತಿತ್ತು. ಈ ಮೂಲಕ ಹೊಸ ಮನೆಗೆ ಶಿಫ್ಟ್ ಆದ ಬಳಿಕವೂ ಕಛೇರಿ ರೀತಿಯಲ್ಲಿ ಹಳೆ ಮನೆ ಬಳಕೆ ಮಾಡುತ್ತಿದ್ದರು. ಇದೇ ಮನೆಯಲ್ಲಿ ಕೆಲ ಪತ್ರ ವ್ಯವಹಾರ, ಹಣ ಸಾಗಣೆ ಸೇರಿದಂತೆ ಕೆಲ ಅವ್ಯವಹಾರ ನಡೆದಿರೋ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಅಂಬಿಕಾಪತಿ ಆಗಾಗ ಹಳೆ ಮನೆಗೆ ಕೆಲ ಆಪ್ತರೊಂದಿಗೆ ಭೇಟಿ ನೀಡುತ್ತಿದ್ದರು. ಸದ್ಯ ಹಳೆ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದವರಿಸಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ

    ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ

    ಲಕ್ನೋ: ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ರೈಡ್ ಮಾಡಿದ್ದು, 150 ಕೋಟಿ ರೂಪಾಯಿಯ ಕಂತೆ ಕಂತೆ ನೋಟುಗಳು ಸಿಕ್ಕಿವೆ.

    ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‍ನಲ್ಲಿ ದಾಳಿ ನಡೆಯುತ್ತಿದೆ. ತೆರಿಗೆ ವಂಚನೆಗಾಗಿ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ವಶಪಡಿಸಿಕೊಂಡ ಒಟ್ಟು ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ. ಗುರುವಾರದಿಂದ ದಾಳಿ ಆರಂಭವಾಗಿದ್ದು, ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೋಕನೈಸೇಶನ್ ಜಾರಿ 6 ತಿಂಗಳು ವಿಳಂಬ: RBI

    ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‍ನಲ್ಲಿ ದಾಳಿ ನಡೆಯುತ್ತಿದೆ. ತೆರಿಗೆ ವಂಚನೆಗಾಗಿ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ವಿವರಗಳನ್ನು ಪತ್ತೆಹಚ್ಚಿದ ನಂತರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

    ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‍ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ. 50 ಸಾವಿರ ರೂ. ನಕಲಿ ಇನ್‌ವಾಯ್ಸ್‌ಗಳನ್ನು ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ಮಾಡಲಾಗಿದೆ. ಗೋದಾಮಿನಲ್ಲಿದ್ದ ನಾಲ್ಕು ಟ್ರಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್‍ಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಅನುಮೋದಿಸಿದ ಸಮಾಜವಾದಿ ಸುಗಂಧ ದ್ರವ್ಯವನ್ನು ಜೈನ್ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರಾರಂಭಿಸಿದ್ದರು. ಇ-ವೇ ಬಿಲ್‍ಗಳನ್ನು ಉತ್ಪಾದಿಸುವುದನ್ನು ತಪ್ಪಿಸಲು ಟ್ರಾನ್ಸ್‌ಪೋರ್ಟರ್ ಅಸ್ತಿತ್ವದಲ್ಲಿಲ್ಲದ ಸಂಸ್ಥೆಗಳ ಹೆಸರಿನಲ್ಲಿ ಬಹು ಇನ್‌ವಾಯ್ಸ್‌ಗಳನ್ನು ಉತ್ಪಾದಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಹ ನಾಲ್ಕು ಟ್ರಕ್‍ಗಳನ್ನು ಕಾರ್ಖಾನೆ ಆವರಣದ ಹೊರಗೆ ತಡೆಹಿಡಿಯಲಾಗಿದೆ ಎಂದು ಅವರು ಹೇಳಿದರು.

    ಈ ಹಿಂದೆ ಜಿಎಸ್‍ಟಿ ಪಾವತಿಸದೆ ಸಾಗಣೆಗೆ ಬಳಸಲಾಗಿದ್ದ 200ಕ್ಕೂ ಹೆಚ್ಚು ನಕಲಿ ಇನ್‌ವಾಯ್ಸ್‌ಗಳನ್ನು ಟ್ರಾನ್ಸ್‌ಪೋರ್ಟರ್‌ನ ಗೋದಾಮಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

  • ಥೂ ಇವ್ರ ಯೋಗ್ಯತೆಗೆ ನಾಚಿಕೆ ಆಗಬೇಕು: ಬಿಜೆಪಿ ವಿರುದ್ಧ ಸಚಿವ ಪುಟ್ಟರಾಜು ಕಿಡಿ

    ಥೂ ಇವ್ರ ಯೋಗ್ಯತೆಗೆ ನಾಚಿಕೆ ಆಗಬೇಕು: ಬಿಜೆಪಿ ವಿರುದ್ಧ ಸಚಿವ ಪುಟ್ಟರಾಜು ಕಿಡಿ

    ಮಂಡ್ಯ: ಥೂ ಇವರ ಯೋಗ್ಯತೆಗೆ ನಾಚಿಕೆ ಆಗಬೇಕು. ಇಂಥ ನೀತಿಗೆಟ್ಟ, ಕೀಳು ಮಟ್ಟದ ರಾಜಕಾರಣವನ್ನು ಯಾರೂ ಮಾಡಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ನಗರಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಆತ್ಮಾನಂದ ಮನೆ ಮೇಲಿನ ಐಟಿ ದಾಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಸಾವಿರ ಐಟಿ ದಾಳಿ ಮಾಡಿದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನು ಹೆದರಿಸಲು ಸಾಧ್ಯವಿಲ್ಲ. ಮೈತ್ರಿ ಪಕ್ಷಗಳ ಮುಖಂಡರ ಸಭೆ ಆತ್ಮಾನಂದ ಅವರ ಮನೆಯಲ್ಲಿ ನಡೆಯಿತು. ಈ ಮೂಲಕ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹುನ್ನಾರ ನಡೆಸುತ್ತಿರುವುದು ನಮಗೆ ಗೊತ್ತಾಗುತ್ತಿದೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟರು. ಇದನ್ನು ಓದಿ: ಮಂಡ್ಯದ ಕೈ ನಾಯಕ, ಆತ್ಮಾನಂದ ಮನೆ ಮೇಲೆ ಐಟಿ ದಾಳಿ

    ಮಾಜಿ ಸಚಿವ ಆತ್ಮಾನಂದ ಅವರು ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟಿದ್ದರು. ಐಟಿ ಅಧಿಕಾರಿಗಳೇ ಮಾಜಿ ಸಚಿವರಿಗೆ ಶಹಬ್ಬಾಸ್‍ಗಿರಿ ಕೊಟ್ಟು ಹೋಗುತ್ತಾರೆ. ಇದು ರಾಜಕೀಯ ಪ್ರೇರಿತ ದಾಳಿ. ಒಬ್ಬ ಕೋಳಿ ವ್ಯಾಪಾರ ಮಾಡುವ ಜೆಡಿಎಸ್ ಕಾರ್ಯಕರ್ತನ ಮೇಲೆ ದಾಳಿ ಮಾಡುತ್ತಾರೆ. ಅಂದ್ರೆ ಥೂ ಇವರ ಯೋಗ್ಯತೆಗೆ ನಾಚಿಕೆಯಾಗಬೇಕು. ದೇಶದ ಇತಿಹಾಸದಲ್ಲಿ ಚುನಾವಣೆ ವೇಳೆ ಇಂತಹ ನೀತಿಗೆಟ್ಟ ರಾಜಕಾರಣ ಯಾರೂ ಮಾಡಿರಲಿಲ್ಲ. ಅಧಿಕಾರ ಇದೆ ಎಂದು ಕೀಳುಮಟ್ಟದ ರಾಜಕಾರಣ ಮಾಡಿದರೆ ಮುಂದೆ ಜಿಲ್ಲೆಯ ಜನ ಉತ್ತರಿಸುತ್ತಾರೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒನ್ ಸೈಡ್ ಚುನಾವಣೆ ಆಗುತ್ತದೆ. ಸಿಎಂ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಋಣವನ್ನು ಜಿಲ್ಲೆಯ ಜನ ತೀರಿಸುತ್ತಾರೆ ಎಂದು ತಿಳಿಸಿದರು.

  • ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

    ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

    ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ನಡೆಯುತ್ತಿದ್ದ ಐಟಿ ದಾಳಿ ಇದೀಗ ಅಂತ್ಯವಾಗಿದ್ದು, ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳದಂತೆ ಐಟಿ ಸೂಚನೆ ನೀಡಿದೆ.

    ಸಚಿವ ಡಿಕೆಶಿ ಮೇಲೆ ನಿಗಾ ಇಡುವಂತೆ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳಿಗೂ ಆದಾಯ ತೆರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ.

    ದೆಹಲಿಯಲ್ಲೂ ಕೂಡ ಐಟಿ ದಾಳಿ ಅಂತ್ಯವಾಗಿದ್ದು, ಆಂಜನೇಯ ಮನೆಯಲ್ಲಿ ಕೂಡ ಐಟಿ ಅಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯ ಮೂರು ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳ ತಪಾಸಣೆ ಮಾಡಿದ್ದಾರೆ. ನಿನ್ನೆಯೇ ಎರಡು ಮನೆಯ ಮೇಲಿನ ದಾಳಿ ಅಂತ್ಯಗೊಳಿಸಿದ್ದ ಅಧಿಕಾರಿಗಳು ಇಂದು ಆಂಜನೇಯ ಮನೆ ಮೇಲೆ ದಾಳಿಯಲ್ಲಿ ಅಂತ್ಯಗೊಳಿಸಿದ್ದಾರೆ.

    ದೇವಸ್ಥಾನಕ್ಕೆ ಭೇಟಿ: ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆ, ನೊಣವಿಕೆರೆಯಕಲ್ಲಿರುವ ಕೆರೆಯ ಕಾಡು ಸಿದ್ದೇಶ್ವರ ಅವರ ವಿಜಯನಗರದಲ್ಲಿರೋ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ.

    ಆತ್ಮದೊಂದಿಗಿನ ಸಂವಾದವನ್ನು ಹಾಳೆಯಲ್ಲಿ ಬರೆದುಕೊಡುವ ಕಾಡು ಸಿದ್ದೇಶ್ವರ ಅಜ್ಜನ ಅಣತಿಯಂತೆ ನಡೆದುಕೊಳ್ಳುವ ಡಿಕೆಶಿ, ಅಜ್ಜಯ್ಯ ಹಾಳೆಯಲ್ಲಿ ಬರೆದಿದ್ದು ಫಲಿಸುತ್ತದೆ ಎಂಬುದು ಅವರ ನಂಬಿಕೆ. ಹೀಗಾಗಿ ಅಜ್ಜಯ್ಯನ ಭಕ್ತರಾಗಿರೋ ಡಿಕೆಶಿ ಸದ್ಯ ಅವರನ್ನು ಭೇಟಿ ಮಾಡಿ ಪಾದ ಪೂಜೆ ಮಾಡಿದ್ದಾರೆ. ಈ ವೇಳೆ ನಿನಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ. ನೀನು ನೆಮ್ಮದಿಯಿಂದಿರು ಅಂತ ಅಜ್ಜಯ್ಯ ಆಶೀರ್ವದಿಸಿದ್ದಾರೆ. ಈ ಹಿಂದೆಯೂ ಅಜ್ಜಯ್ಯನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಸಚಿವರಿಗೆ ನರೇಂದ್ರಬಾಬು ಸಾಥ್ ನೀಡಿದ್ದಾರೆ.

    ಬಳಿಕ ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿರುವ ಡಿಕೆಶಿ, ಇದೀಗ ಗುಜರಾತ್ ಶಾಕೆ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕುಟುಂಬಸ್ಥರು ಕನಕಪುರ ತಾಲೂಕಿನಲ್ಲಿರುವ ಶಕ್ತಿದೇವತೆ ಕಬ್ಬಾಳಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.

  • ರಾಜಕಾರಣಿಗಳ ಮೇಲಿನ ಐಟಿ ದಾಳಿಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದ ಉಪ್ಪಿ

    ರಾಜಕಾರಣಿಗಳ ಮೇಲಿನ ಐಟಿ ದಾಳಿಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದ ಉಪ್ಪಿ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಇಂದಿನ ಸಚಿವ ಡಿ.ಕೆ ಶಿವಕುಮಾರ್ ಮನೆಯ ಮೇಲಿನ ಐಟಿ ದಾಳಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ಸ್ಯಾಂಡಲ್‍ವುಡ್‍ನ ನಟ ಕಮ್ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

    ರಾಜಕಾರಣ, ರಾಜಕೀಯ, ರಾಜನೀತಿ ಬೇಕೆಂದು ಯಾರು ಬಯಸಬಾರದು ಐಟಿ ದಾಳಿಯ ಬಗ್ಗೆ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

    ನಮ್ಮಗೆಲ್ಲ ಬೇಕಾಗಿರುವುದು ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ. ದೊಡ್ಡ ದೊಡ್ಡ ವ್ಯಕ್ತಿಗಳ ಮನೆ ಮೇಲೆ ನಡೆಯುವ ಐಟಿ ದಾಳಿಯನ್ನ ಕ್ಯಾಮೆರಾದಲ್ಲಿ ಶೂಟ್ ಮಾಡಿ ಜನರಿಗೆ ತೋರಿಸಬೇಕು. ನಿಜವಾದ ಸತ್ಯ ಏನು ಎಂಬುದು ಜನಸಾಮಾನ್ಯರಿಗೆ ಗೊತ್ತಾಬೇಕು ಎಂದು ತಮ್ಮದೇ ಸ್ಟೈಲ್‍ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.

    ಈ ಮೊದಲ ಚೀನಾ ದೇಶ ಗಡಿತಂಟೆ ಮಾಡುತ್ತಿರುವುದನ್ನ ವಿರೋಧಿಸಿ ನಮ್ಮ ಸೈನಿಕರಿಗೆ ಭಾರತ್ ಬಂದ್ ಮಾಡಿ ಬೆಂಬಲ ಸೂಚಿಸಬೇಕೆಂದು ಈ ಹಿಂದೆ ಟ್ವೀಟ್ ಮಾಡಿದ್ದರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಡಿಕೆಶಿ ಮನೆಯಲ್ಲಿ 3ನೇ ದಿನವೂ ಮುಂದುವರಿದ ಐಟಿ ರೇಡ್

    ಡಿಕೆಶಿ ಮನೆಯಲ್ಲಿ 3ನೇ ದಿನವೂ ಮುಂದುವರಿದ ಐಟಿ ರೇಡ್

    – ದ್ವಾರಕನಾಥ ಗುರೂಜಿ ನಿವಾಸದಲ್ಲಿ ತನಿಖೆ ಅಂತ್ಯ
    – ಡಿಕೆಶಿ ಮಾವನ ಮನೆಯಲ್ಲಿ 3ನೇ ದಿನವೂ ಪರಿಶೀಲನೆ

    ಬೆಂಗಳೂರು/ಮೈಸೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್‍ಗೆ ಈ ಬಾರಿ ವರಮಹಾಲಕ್ಷ್ಮೀ ಐಟಿ ಸಂಕಟ ತಂದೊಡ್ಡಿದ್ದಾಳೆ. ಸತತ ಮೂರನೇ ದಿನವೂ ಡಿಕೆಶಿ ಮನೆಯಲ್ಲಿ ಐಟಿ ಶೋಧ ನಡೆಯುತ್ತಿದೆ.

    ಬೆಳ್ಳಂಬೆಳಗ್ಗೆ ಐದು ಅಧಿಕಾರಿಗಳ ತಂಡ ಡಿಕೆಶಿ ಮನೆಗೆ ಆಗಮಿಸಿದ್ದಾರೆ. ವಿವಿಧೆಡೆ ನಡೆಸಿದ್ದ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ಡಿಕೆಶಿ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ವಿವಿಧ ಬ್ಯಾಂಕ್ ಖಾತೆಗಳ ಡಿಟೈಲ್ಸ್ ಹಾಗೂ ವಿದೇಶದ ಬ್ಯಾಂಕ್ ಅಕೌಂಟ್‍ಗೆ ಟ್ರಾನ್ಸ್‍ಫರ್ ಆಗಿರುವ ಮಾಹಿತಿಗಳನ್ನು ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಎಲ್ಲಾ ದಾಖಲಾತಿಗಳನ್ನು ಡಿಕೆಶಿ ಮುಂದಿಟ್ಟು ವಿಚಾರಣೆ ನಡೆಸಲಿದ್ದಾರೆ.

    ಡಿಕೆಶಿ ಮಾವ ತಿಮ್ಮಯ್ಯ ನಿವಾಸದಲ್ಲೂ ಕೂಡ ಸತತ 3ನೇ ದಿನವೂ ಐಟಿ ಶೋಧ ಮುಂದುವರೆದಿದೆ. ಬರೋಬ್ಬರಿ 40 ಗಂಟೆಗಳ ಬಳಿಕ ಗುರುವಾರ ರಾತ್ರಿ 10.30ಕ್ಕೆ ತಾತ್ಕಾಲಿಕವಾಗಿ ಆಪರೇಷನ್ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ತಿಮ್ಮಯ್ಯ ನಿವಾಸದಲ್ಲಿ ಐಟಿ ಅಧಿಕಾರಿಯೊಬ್ಬರು ಹಾಗೂ ಇಬ್ಬರು ಪೇದೆಗಳು ವಾಸ್ತವ್ಯ ಹೂಡಿದ್ರು.

    ತಿಮ್ಮಯ್ಯ ಅವರ ಮನೆ ಹೊರಗೆ ಎಂದಿನಂತೆ ಪೊಲೀಸ್ ಕಾವಲು ಹಾಕಲಾಗಿದೆ. ಗುರುವಾರ ತಿಮ್ಮಯ್ಯ ಕುಟುಂಬ ಮತ್ತು ಆಪ್ತ ಎಡ್ವಿನ್‍ರನ್ನು ವಿಚಾರಣೆಗೆ ಒಳಪಡಿಸಿದ್ದ ಐಟಿ ಅಧಿಕಾರಿಗಳು, 60 ಲಕ್ಷ ನಗದು ವಶಪಡಿಸಿಕೊಂಡಿದ್ದರು.

    ಈ ನಡುವೆ ಡಿಕೆ ಶಿವಕುಮಾರ್ ಆಪ್ತರನ್ನ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಹಾಗೂ ಚಾರ್ಟೆಡ್ ಅಕೌಂಟೆಂಟ್ ಚಂದ್ರಶೇಖರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅತ್ತ ಡಿಕೆ ಶಿವಕುಮಾರ್ ಆಪ್ತರಾದ ದ್ವಾರಕನಾಥ ಗುರೂಜಿ ಅವರ ಆರ್‍ಟಿ ನಗರದ ಮೇಲೆ ಮೇಲಿನ ದಾಳಿ ಮಧ್ಯರಾತ್ರಿ ಮುಕ್ತಾಯವಾಗಿದೆ. ದಾಖಲೆಗಳನ್ನ ಮಧ್ಯರಾತ್ರಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇನ್ನು ಶರ್ಮಾ ಟ್ರಾವೆಲ್ಸ್ ಮಾಲೀಕ ಸುರೇಶ್ ಶರ್ಮಾ ಮನೆಯಲ್ಲೂ ತಪಾಸಣೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಸುರೇಶ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ಸೀಜ್ ಮಾಡಿದ್ದಾರೆ.

    ಇದೇ ವೇಳೆ, ಗ್ಲೋಬಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇರ್ ಟೇಕರ್ ನಂದೀಶ್ ಮನೆ ಮೇಲೂ ದಾಳಿ ನಡೆದಿದ್ದು, ಸುಮಾರು 11 ಕೆಜಿ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜರಾಜೇಶ್ವರಿನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ಒಡೆತನದ ಇಂಟರ್‍ನ್ಯಾಷನಲ್ ಹಿಲ್ ವ್ಯೂವ್ ಶಾಲೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಡಿಕೆಶಿ ನಿವಾಸದ ಮೇಲೆ ನಡೆದ ಐಟಿ ದಾಳಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ಸಂಸದರ ಸಭೆ ಕರೆದಿದ್ದಾರೆ. ಬೆಳಗ್ಗೆ 8.30ಕ್ಕೆ ಉಪಹಾರ ಕೂಟ ನೆಪದಲ್ಲಿ ಸಭೆ ಕರೆದಿದ್ದು ರಾಜ್ಯದ ಬೆಳವಣಿಗೆ ಕುರಿತು ಸಂಸದರಿಂದ ಮಾಹಿತಿ ಪಡೆಯಲಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಪ್ರತ್ಯೇಕ ನಾಡ ಧ್ವಜ ವಿವಾದ, ಮಂಗಳೂರು ಕೋಮು ಗಲಭೆ ವಿಚಾರದಲ್ಲಿ ರಾಜ್ಯ ಬಿಜೆಪಿಗೆ ಆದ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಸಂಸದರ ಸಮ್ಮುಖದಲ್ಲಿ ಮೋದಿ ಪ್ಲ್ಯಾನ್ ರೂಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.