Tag: income tax

  • ಓನ್ಲಿ ಫ್ಯಾನ್ಸ್‌ ಕ್ರಿಯೆಟರ್ಸ್‌ಗಳನ್ನ ಸ್ವಯಂ ಉದ್ಯೋಗಿಗಳೆಂದು ಕರೆಯಬಹುದೇ? ಇವರಿಗೂ ಆದಾಯ ತೆರಿಗೆ ಅನ್ವಯವಾಗುತ್ತಾ?

    ಓನ್ಲಿ ಫ್ಯಾನ್ಸ್‌ ಕ್ರಿಯೆಟರ್ಸ್‌ಗಳನ್ನ ಸ್ವಯಂ ಉದ್ಯೋಗಿಗಳೆಂದು ಕರೆಯಬಹುದೇ? ಇವರಿಗೂ ಆದಾಯ ತೆರಿಗೆ ಅನ್ವಯವಾಗುತ್ತಾ?

    ವೈಯಕ್ತಿಕ ಜೀವನಕ್ಕೆ ಲೈಂಗಿಕತೆ ಎಂಬುದು ತುಂಬಾನೇ ಮುಖ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸುವ ಒಂದು ಭಾಗವೂ ಆಗಿದೆ. ಜೊತೆಗೆ ಆರೋಗ್ಯ (Health) ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಆದ್ರೆ ಜೀವನಕ್ಕೆ ಸೆಕ್ಸ್ ಎಷ್ಟು ಮುಖ್ಯ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಾರೆ. ಹಾಗೆಯೇ ಹದಿಹರೆಯದವರು, ಯುವಕರು ತಮ್ಮ ದೇಹವು ಪ್ರೌಢಾವಸ್ಥೆಗೆ ಬರುವಾಗ ಹಾರ್ಮೋನ್‌ಗಳ ಪ್ರಭಾವದಿಂದ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಒಳಗಾಗುತ್ತದೆ. ಇದರಿಂದ ನಿಮ್ಮ ಸಂವಹನ ಕ್ರಿಯೆಯೂ ಬದಲಾಗಬಹುದು. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಲೈಂಗಿಕ ಆಸಕ್ತಿ ಮದುವೆಯಿಂದ ಕೆಲವರನ್ನ ದೂರ ಉಳಿಯುವಂತೆ ಮಾಡುತ್ತಿದೆ. ಆನ್‌ಲೈನ್‌ ನಂತಹ ವೇದಿಕೆಗಳನ್ನ ಬಳಸಿಕೊಂಡು ಅದನ್ನೇ ಉದ್ಯಮವಾಗಿ ಪರಿವರ್ತಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

    Lovers 1

    ಹೌದು.. ಲೈಂಗಿಕತೆಯೆಡೆಗೆ ಹೆಚ್ಚಿದ ಆಕ್ತಿ, ಹಣದ ಮೇಲಿನ ವ್ಯಾಮೋಹಕ್ಕೆ ಜನಪ್ರಿಯ ವ್ಯಕ್ತಿಗಳು ಹಾಗೂ ಕೆಲ ಯುವಕ ಯುವತಿಯರು ಇದಕ್ಕಾಗಿ ಓನ್ಲಿ ಫ್ಯಾನ್ಸ್‌ನಂತಹ ವೇದಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಇದನ್ನೇ ಉದ್ಯೋಗವೆಂದು ಭಾವಿಸಿಕೊಂಡಿದ್ದಾರೆ. ನೇರವಾಗಿ ಹೇಳುವುದಾದ್ರೆ ವಿದೇಶಿಗರಿಗೆ ಇದೊಂದು ಪೋರ್ನ್‌ ಸೈಟ್‌ ಇದ್ದಂತೆ ಹೆಚ್ಚಿನ ಸಂಖ್ಯೆಯ ನೀಲಿ ತಾರೆಗಳು ತಮ್ಮ ಖಾಸಗಿ ಫೋಟೋ, ವಿಡಿಯೋಗಳನ್ನ ಈ ವೇದಿಕೆ ಮೂಲಕ ಚಂದಾದಾರಿಗೆ ಮಾರಾಟ ಮಾಡ್ತಿದ್ದಾರೆ. ಕಳೆದ ಕೆಲವೇ ವರ್ಷಗಳಲ್ಲಿ ʻಲಿಲ್ಲಿ ಫಿಲಿಪ್ಸ್‌ʼ ಎಂಬ ನೀಲಿ ತಾರೆ ಹತ್ತಾರುಕೋಟಿ ಆಸ್ತಿ ಗಳಿಕೆ ಮಾಡಿರೋದು ಈ ಓನ್ಲಿ ಫ್ಯಾನ್ಸ್‌ ವೇದಿಕೆಯಿಂದಲೇ ಅನ್ನೋದು ಇದಕ್ಕೆ ಉದಾಹರಣೆ. ಆದ್ರೆ ಭಾರತದಲ್ಲಿ ಹಾಗಿಲ್ಲ, ಕಟ್ಟುನಿಟ್ಟಿನ ಕಾನೂನು ಇರುವ ಕಾರಣ ಒಳ್ಳೆಯ ವಿಷಯಗಳಿಗೆ ಬಳಕೆಯಾಗ್ತಿದೆ. ಹಾಗಿದ್ರೆ ಈ ಓನ್ಲಿ ಫ್ಯಾನ್ಸ್‌ ವೇದಿಕೆ ಹೇಗೆ ಕೆಲಸ ಮಾಡುತ್ತೆ? ಇದರಲ್ಲಿ ತೊಡಗಿಸಿಕೊಳ್ಳುವವರನ್ನ ಉದ್ಯೋಗಿಗಳು ಅಂತ ಕರೆಯಬಹುದೇ? ಇದರಿಂದ ಬರುವ ಆದಾಯಕ್ಕೂ ತೆರಿಗೆ ಕಡ್ಡಾಯವೇ ಎಂಬೆಲ್ಲ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಓನ್ಲಿ ಫ್ಯಾನ್ಸ್‌ ಅಂದ್ರೆ ಏನು?
    ಓನ್ಲಿ ಫ್ಯಾನ್ಸ್ (OnlyFans) ಒಂದು ಆನ್‌ಲೈನ್‌ ಚಂದಾದಾರಿಕೆ ಆಧಾರಿತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದ್ದು, ಅಲ್ಲಿ ವಿಷಯ ರಚನೆಕಾರರು (ಕಂಟೆಂಟ್ ಕ್ರಿಯೇಟರ್ಸ್) ತಮ್ಮ ವಿಶಿಷ್ಟವಾದ ವಿಷಯವನ್ನು ಪೇವಾಲ್‌ನ (paywall) ಹಿಂದೆ ಪ್ರಕಟಿಸುತ್ತಾರೆ. ಅದನ್ನ ವೀಕ್ಷಿಸುವುದಕ್ಕಾಗಿ ಅಭಿಮಾನಿಗಳು ಮಾಸಿಕ ಶುಲ್ಕ ಪಾವತಿಸುತ್ತಾರೆ. ಇದು ವಯಸ್ಕರ ವಿಷಯ, ಫಿಟ್‌ನೆಸ್, ಸಂಗೀತ, ಹಾಸ್ಯ ಇತ್ಯಾದಿ ವಿವಿಧ ರೀತಿಯ ವಿಷಯಗಳನ್ನ ಒಳಗೊಂಡಿರುತ್ತದೆ. ಭಾರತದಲ್ಲೂ ಸೇರಿದಂತೆ ವಿಶ್ವದಾದ್ಯಂತ ಹೆಚ್ಚಿನ ಜನರು ಹಣ ಗಳಿಕೆ ಉದ್ದೇಶದಿಂದ ಈ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿದ್ದಾರೆ.

    ಭಾರತದಲ್ಲಿ ಇದು ಕಾನೂನುಬದ್ಧವೇ?
    ಭಾರತದಲ್ಲಿ ಓನ್ಲಿಫ್ಯಾನ್ಸ್‌ ಬಳಸುವುದು ಕಾನೂನು ಬಾಹಿರವಲ್ಲ ಎನ್ನುತ್ತಾರೆ ಕೆಲ ತಜ್ಞರು. ಓನ್ಲಿ ಫ್ಯಾನ್ಸ್‌ನಲ್ಲಿ ಖಾತೆ ರಚಿಸುವುದು ಅಥವಾ ಇದರಿಂದ ಹಣ ಗಳಿಸುವುದನ್ನು ನಿಷೇಧಿಸುವ ಯಾವುದೇ ಕಾನೂನುಗಳು ಇಲ್ಲ. ಆದ್ರೆ ಇದು ಅಶ್ಲೀಲತೆ ಅಥವಾ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುವಂತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾನೂನುಬಾಹಿರ ಚಟುವಟಿಕೆಗಳ ಕುರಿತು ವಿಷಯಗಳನ್ನ ಹಂಚಿಕೊಳ್ಳುವುದಾದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

    ಸ್ವಯಂ ಉದ್ಯೋಗಿಗಳೆಂದು ಪರಿಗಣಿಸಬಹುದೇ?
    ಓನ್ಲಿ ಫ್ಯಾನ್ಸ್‌ ಕ್ರಿಯೇಟರ್ಸ್‌ಗಳನ್ನ ಸ್ವಯಂ ಉದ್ಯೋಗಿಗಳೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಇವರೂ ಕೂಡ ಆದಾಯ ತೆರಿಗೆ (Income Tax) ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ತಮ್ಮ ಆದಾಯಗಳನ್ನ ವರದಿ ಮಾಡಲು ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವೇಳೆ ವಾರ್ಷಿಕ ಆದಾಯ ಒಂದು ಕೋಟಿ ಮೀರಿದ್ದರೆ, ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಯಾವ ಉದ್ದೇಶಕ್ಕೆ ಪೇಜ್‌ ಕ್ರಿಯೆಟ್‌ ಮಾಡಲಾಗಿದೆ. ಆದಾಯ ಎಷ್ಟು ಬರುತ್ತಿದೆ? ಖರ್ಚು ವೆಚ್ಚ ಎಲ್ಲದರ ವಿವರಗಳನ್ನ ನೀಡಬೇಕಾಗುತ್ತದೆ. ಒಂದು ವೇಳೆ ಅಶ್ಲೀಲತೆ ಅಥವಾ ಅನೈತಿಕ ಚಟುವಟಿಕೆಗಳ ಪ್ರಸಾರದಿಂದ ಹಣ ಗಳಿಸುತ್ತಿದ್ದರೆ, ಬಂಧಕ್ಕೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ.

    ಓನ್ಲಿ ಫ್ಯಾನ್‌ ಕ್ರಿಯೇಟರ್ಸ್‌ಗೆ ಆದಾಯ ತೆರಿಗೆ ನಿಯಮ ಹೇಗೆ ಅನ್ವಯ?
    ಆನ್‌ಲೈನ್‌ ವೇದಿಕೆ ಆಗಿರೋದ್ರಿಂದ ಎಲ್ಲವೂ ಡಿಜಿಟಲ್‌ ಪಾವತಿ ಆಗಿರುತ್ತದೆ. ಹಾಗಾಗಿ ಪ್ರತಿಯೊಂದು ಪಾವತಿಯೂ ದಾಖಲಾಗುತ್ತದೆ. ಆದ್ದರಿಂದ ಒಟ್ಟು ಆದಾಯಕ್ಕೆ ವಿಧಿಸಬಹುದಾದ ತೆರಿಗೆ ಹಾಗೂ ಅನ್ವಯವಾಗುವ ಸ್ಲ್ಯಾಬ್‌ ದರಗಳ ಪ್ರಕಾರ ತೆರಿಗೆ ವಿಧಿಲಾಗುತ್ತದೆ.

    ಜಿಎಸ್‌ಟಿ ಅನ್ವಯಿಸುತ್ತಾ?
    ಓನ್ಲಿ ಫ್ಯಾನ್ಸ್‌ನಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ಗಳ ಆದಾಯವು ಒಂದು ವರ್ಷದಲ್ಲಿ 20 ಲಕ್ಷ ಮೀರಿದ್ರೆ ಜಿಎಸ್‌ಟಿ (GST) ಮಿತಿಗೆ ಒಳಪಡಬೇಕಾಗುತ್ತದೆ. ಭಾರತೀಯ ಚಂದಾದಾರರಿಗೆ ಒದಗಿಸುವ ಸೇವೆಗಳಿಗಾಗಿ 18% ಜಿಎಸ್‌ಟಿ ಅನ್ವಯ ಆಗಲಿದೆ. ಇನ್ನೂ ವಿದೇಶಿ ಸೇವೆಗಳ ಗಳಿಕೆಯನ್ನು ರಫ್ತು ಎಂದು ಪರಿಗಣಿಸಲಾಗುತ್ತದೆ.

    ಒಟ್ಟಾರೆ ಹೇಳುವುದಾದ್ರೆ, ಭಾರತದಲ್ಲಿ ಓನ್ಸಿ ಫ್ಯಾನ್ಸ್‌ ಕಾನೂನುಬದ್ಧವಾಗಿದೆ. ಆದ್ರೆ ಕಂಟೆಂಟ್‌ ಕ್ರಿಯೇಟರ್ಸ್‌ಗಳು ಅಗತ್ಯ ನಿಯಮಗಳನ್ನು ಪಾಲಿಸಿದ್ರೆ, ಆದಾಯ ದಾಖಲೆ ಮೂಲ ಎಲ್ಲವೂ ಸರಿಯಾಗಿದ್ದರೆ, ಯಾವುದೇ ಅನೈತಿಕ ಚಟುವಟಿಕೆ ನಡೆಸದೇ ಇದ್ದರೆ ಅದೂ ಕೂಡ ಸ್ವಯಂ ಉದ್ಯೋಗದ ಮಿತಿಗೆ ಬರುತ್ತದೆ.

  • ಐಟಿ ರಿಟರ್ನ್‌ ಸಲ್ಲಿಕೆ- ಲಾಸ್ಟ್‌ ಡೇಟ್‌ ಯಾವುದೇ ಕಾರಣಕ್ಕೂ ವಿಸ್ತರಣೆಯಾಗಲ್ಲ

    ಐಟಿ ರಿಟರ್ನ್‌ ಸಲ್ಲಿಕೆ- ಲಾಸ್ಟ್‌ ಡೇಟ್‌ ಯಾವುದೇ ಕಾರಣಕ್ಕೂ ವಿಸ್ತರಣೆಯಾಗಲ್ಲ

    ನವದೆಹಲಿ: 2024-25ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (IT Return Filing) ಸಲ್ಲಿಸುವ ಕೊನೆಯ ದಿನಾಂಕವನ್ನು (Last Date) ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಸ್ಪಷ್ಟಪಡಿಸಿದೆ.

    ಐಟಿಆರ್‌ಗಳನ್ನು ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಸೂಚಿಸುವ ಸುಳ್ಳು ಸುದ್ದಿಯನ್ನು ತೆರಿಗೆ ಇಲಾಖೆ ತಳ್ಳಿಹಾಕಿದೆ. ತೆರಿಗೆದಾರರು ಅಧಿಕೃತ ಆದಾಯ ತೆರಿಗೆ ಆಫ್ ಇಂಡಿಯಾ ಎಕ್ಸ್ ಹ್ಯಾಂಡಲ್‌ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ನಂಬಬೇಕು ಎಂದು ತಿಳಿಸಿದೆ.

    ಐಟಿಆರ್ ಫೈಲಿಂಗ್, ತೆರಿಗೆ ಪಾವತಿ ಮತ್ತು ಇತರ ಸಂಬಂಧಿತ ಸೇವೆಗಳಿಗೆ ತೆರಿಗೆದಾರರಿಗೆ ಸಹಾಯ ಮಾಡಲು, ನಮ್ಮ ಸಹಾಯವಾಣಿ 24/7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ನಾವು ಕರೆಗಳು, ಲೈವ್ ಚಾಟ್‌ಗಳು, ವೆಬ್ ಎಕ್ಸ್ ಸೆಷನ್‌ಗಳು, ಮತ್ತು ಎಕ್ಸ್ ಮೂಲಕ ಬೆಂಬಲವನ್ನು ಒದಗಿಸುತ್ತಿದ್ದೇವೆ ಎಂದು ತೆರಿಗೆ ಇಲಾಖೆ ಹೇಳಿದೆ.

    ಐಟಿಆರ್‌ ಫೈಲಿಂಗ್‌ಗೆ ಇಂದು(ಸೆ.15) ಕೊನೆಯ ದಿನವಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸೆ.30 ರವರೆಗೆ ವಿಸ್ತರಿಸಲಾಗಿದೆ ಎಂಬ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದೆ.

  • ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ದಾಳಿ

    ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ದಾಳಿ

    – ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ದಾಳಿ

    ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ (Lokayukta) ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ 4 ಜಿಲ್ಲೆಗಳಲ್ಲಿ 6 ಕಡೆ ದಾಳಿ ನಡೆಸಿದೆ.

    ಬೆಂಗಳೂರು (Bengaluru), ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎ ಕಚೇರಿಯ ಸಿನಿಯರ್ ಅರ್ಟಿಕಲ್ಚರ್ ಡೈರೆಕ್ಟರ್, ಓಂ ಪ್ರಕಾಶ್‌, ರಾಷ್ಟ್ರೀಯ ಹೆದ್ದಾರಿ (NHAI) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರದ ಜ್ಯೂನಿಯರ್ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಚಿತ್ರದುರ್ಗ:
    ಚಿತ್ರದುರ್ಗದ ಟಿಎಚ್‌ಓ (THO) ಡಾ.ವೆಂಕಟೇಶ್‌ ಮನೆ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯ ಮನೆ, ಆದಿವಾಲ ಗ್ರಾಮದ ಮನೆ & ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ದಾಳಿ ನಡೆಸಿದ್ದು, ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಪಹಲ್ಗಾಮ್‍ ದಾಳಿ ಉಗ್ರರು ಪಾಕ್‌ನಿಂದ ಬಂದವರಲ್ಲ: ಚಿದಂಬರಂ ಕ್ಲೀನ್‍ಚಿಟ್

    ಚಿಕ್ಕಬಳ್ಳಾಪುರ:
    ಗೌರಿಬಿದನೂರು ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಜೆಇ ಆಂಜನೇಯಮೂರ್ತಿ ಮನೆ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಲಹಂಕ ನ್ಯೂ ಟೌನ್‌ನಲ್ಲಿರುವ ಮನೆ ಹಾಗೂ ಸ್ವಗ್ರಾಮ ತುಮಕೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ತಪಾಸಣೆ ಹಿನ್ನೆಲೆ ಗೌರಿಬಿದನೂರು ಕಚೇರಿ ಮೇಲೂ ಲೋಕಾ ಪೊಲೀಸರ ದಾಳಿ ನಡೆದಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

    ಹಾಸನ:
    ಇನ್ನೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ಎಐ) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಹಾಸನ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳ ನೇತೃತ್ವದ ತಂಡ ದಾಳಿ ನಡೆಸಿದೆ. ಹಾಸನ ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ನಲ್ಲಿರುವ ಜಯಣ್ಣ ನಿವಾಸ, ಪತ್ನಿ ನಿವಾಸ, ಹಾರ್ಡ್ವೇರ್ ಅಂಗಡಿ, ಇತರೆ ಎರಡು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಹಣ ಹೊರಗಡೆ ಸಿಕ್ಕಿದ್ರೆ ಜಡ್ಜ್‌ ದುರ್ವತನೆ ಹೇಗೆ ಆಗುತ್ತೆ: ಸಿಬಲ್‌ ವಾದ

  • ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಬೆಂಗಳೂರು: ವಿಶ್ವದಲ್ಲೇ ಅತಿದೊಡ್ಡ ಆನ್‌ಲೈನ್ ಪೇಮೆಂಟ್ (Online Payment) ಕೀರ್ತಿ ಭಾರತದ್ದು. ಪ್ರಧಾನಿ ಮೋದಿ ಕನಸಿನ ಯೋಜನೆ ಡಿಜಿಟಲ್ ಇಂಡಿಯಾದ ಯುಪಿಐ (UPI) ಪೇಮೆಂಟ್‌ಗೆ ವಿಘ್ನ ಎದುರಾಗಿದೆ. ಬೇಕರಿ, ಟೀ-ಕ್ಯಾಂಡಿಮೆಂಟ್ಸ್, ತರಕಾರಿ, ಬೀಡ, ಹೂವಿನ ಅಂಗಡಿ, ಹಾಲು ಮಾರೋವ್ರು, ಡಾಬಾದವರು. ಹೀಗೆ.. ಎಲ್ಲರಿಗೂ ಯುಪಿಐ ವಹಿವಾಟು ಆಧರಿಸಿ ಲಕ್ಷಲಕ್ಷ ಟ್ಯಾಕ್ಸ್ (Tax) ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

    ಈ ನೋಟಿಸ್, ಟ್ಯಾಕ್ಸ್ ಟಾರ್ಚರ್‌ಗೆ ಹೈರಾಣಾಗಿರೋ ವರ್ತಕರು, ನಮಗೆ ಯುಪಿಐ.. ಆನ್‌ಲೈನ್ ಪೇಮೆಂಟ್ ಸಹವಾಸವೇ ಬೇಡ… ಕೇವಲ ಕ್ಯಾಶ್ ಇದ್ದರೆ ಕೊಡಿ ಅಂತ ಗ್ರಾಹಕರಿಗೆ ಮನವಿ ಮಾಡ್ತಿದ್ದಾರೆ. ತಮ್ಮ ಅಂಗಡಿಗಳಿಗೆ ಅಂಟಿಸಿರೋ ಯುಪಿಐ ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ತೆಗೆಯುತ್ತಿದ್ದಾರೆ. ಕಮ್ಮನಹಳ್ಳಿ, ಮಾರತಹಳ್ಳಿ ಭಾಗದ ಬೇಕರಿಗಳಲ್ಲಿ `ಕ್ಯಾಶ್ ಓನ್ಲಿ’ ಅಂತ ಬೋರ್ಡನ್ನೇ ಹಾಕಿಬಿಟ್ಟಿದ್ದಾರೆ. ಹೀಗಾಗಿ ಜಿಎಸ್‌ಟಿ ಟ್ಯಾಕ್ಸ್‌ ಅನ್ನು ಕಂಪ್ಲೀಟ್ ಮನ್ನಾ ಮಾಡಿ ಅಂತ ಅಂಗಡಿ ಮಾಲೀಕರು ಮನವಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ಜಿಎಸ್‌ಟಿ ಕೌನ್ಸಿಲ್, ಕೇಂದ್ರ ಸರ್ಕಾರ, ಸಿಎಂಗೂ ಕೂಡ ಪತ್ರ ಬರೆದಿದ್ದಾರೆ.

    ಇದೆಲ್ಲದರ ಮಧ್ಯೆ, ಜುಲೈ- 23ರಿಂದ 2 ದಿನಗಳ ಕಾಲ ಹಾಲು, ಸಿಗರೇಟು ಮಾರಾಟ, ಕಾಂಡಿಮೆಂಟ್ಸ್, ಬೇಕರಿ ಬಂದ್ ಮಾಡಲಿದ್ದಾರೆ. ಜುಲೈ 25 ರಂದು ರಾಜ್ಯಾದ್ಯಂತ ಅಂಗಡಿ ಬಂದ್ ಮಾಡಿ ಕುಟುಂಬ ಸಮೇತ ಪ್ರತಿಭಟನೆಗೆ ನಿರ್ಧರಿಸಿರೋ ಕಾರ್ಮಿಕ ಪರಿಷತ್ ನಂತರ ಕೋರ್ಟ್ ಮೊರೆ ಹೋಗಲೂ ಸಜ್ಜಾಗ್ತಿದೆ.

    ಯುಪಿಐ ಪೇಮೆಂಟ್ ಗೊಂದಲ ಏನು..?
    * ವಾರ್ಷಿಕವಾಗಿ 20 ಲಕ್ಷದಿಂದ 40 ಲಕ್ಷ ರೂ. ವಹಿವಾಟು ಮಾಡಿದವರಿಗೆ ನೊಟೀಸ್
    * ಬಡ್ಡಿ ಸಮೇತ 1 ಕೋಟಿಯಿಂದ ಹಿಡಿದು, 60, 30, 20 ಲಕ್ಷ ರೂ. ವರೆಗೆ ಜಿಎಸ್‌ಟಿ ಕಟ್ಟೋಕೆ ನೋಟಿಸ್
    * ಜಿಎಸ್‌ಟಿ ಕಟ್ಟದೇ ಹೋದರೆ ಅಕೌಂಟ್ ಫ್ರೀಜ್ ಮಾಡುವ ಎಚ್ಚರಿಕೆ
    * ತೆರಿಗೆ ವಿನಾಯಿತಿ ಪಡೆದ ತರಕಾರಿ, ಹಣ್ಣಿನ ಅಂಗಡಿಗೂ ಟ್ಯಾಕ್ಸ್ ನೋಟಿಸ್

    ಯಾರಿಗೆ ಟ್ಯಾಕ್ಸ್.. ಯಾರಿಗಿಲ್ಲ..?
    * ಸರಕು ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 40 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯ
    * ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 20 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯ
    * ತರಕಾರಿ, ಹಣ್ಣು ಯಾವುದೇ ತೆರಿಗೆ ವ್ಯಾಪ್ತಿಗೆ ಬರಲ್ಲ
    * ಹಾಲು, ಮೊಸರು, ಬ್ರೆಡ್‌ಗೆ ಟ್ಯಾಕ್ಸ್ ಇರಲ್ಲ
    * ಕುರುಕಲು ತಿಂಡಿಗೆ 5% ರಷ್ಟು ಟ್ಯಾಕ್ಸ್

    ಅಧಿಕಾರಿಗಳ ಎಡವಟ್ಟೇನು?
    – ವಿನಾಯಿತಿ ಇದ್ದರೂ ಹಾಲು, ತರಕಾರಿ ಅಂಗಡಿಗೂ ಟ್ಯಾಕ್ಸ್ ನೋಟಿಸ್
    – ವಿನಾಯಿತಿ ಸರಕುಗಳ ಬಿಲ್ ನೀಡಿದ್ರೆ ವಿನಾಯಿತಿ ನೀಡುವ ಸಬೂಬು
    – ಜಾಗೃತಿ ಮೂಡಿಸಿ ಜಿಎಸ್‌ಟಿ ನೋಂದಣಿ ಮಾಡಿಸದೇ ಲಕ್ಷ ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೊಟೀಸ್
    – ಅಧಿಕಾರಿಗಳ ನೋಟಿಸ್ ಎಡವಟ್ಟಿಗೆ ಹೆದರಿದ ಸಣ್ಣ ವ್ಯಾಪಾರಿಗಳು
    – ಯುಪಿಐ ಪೇಮೆಂಟ್‌ಗೆ ನಿರಾಕರಿಸಿ, ಕ್ಯಾಶ್ ಮೊರೆ ಹೋಗಲು ಇವರೇ ಕಾರಣ

    ವರ್ತಕರ ಎಡವಟ್ಟೇನು..?
    * ವರ್ತಕರಲ್ಲಿ ಜಿಎಸ್‌ಟಿ ಅರಿವಿನ ಕೊರತೆ ಇರೋದು ನಿಜ
    * ಆದರೆ, ಜಿಎಸ್‌ಟಿ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಿತ್ತು
    * ಡಿಜಿಟಲ್ ಪೇಮೆಂಟ್‌ನ ಪ್ರತಿ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗುತ್ತೆ ಅನ್ನೋದು ಗೊತ್ತು
    * ವಾರ್ಷಿಕ ವಹಿವಾಟು ನಿಯಮಾವಳಿಗಿಂತ ಹೆಚ್ಚಿದ್ದರೂ ಜಿಎಸ್‌ಟಿ ನೋಂದಣಿ ಮಾಡಿಸಿಲ್ಲ
    * ರಿಯಾಯಿತಿ ಪಡೆಯಲು ನಮ್ಮ ಬಳಿ ಬಿಲ್‌ಗಳಿಲ್ಲ ಎನ್ನುತ್ತಿರುವ ವರ್ತಕರು

    ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌
    ಯುಪಿಐ ಪೇಮೆಂಟ್ ಗೊಂದಲದ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ ಬಳಿಕ ವಾಣಿಜ್ಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಯುಪಿಐ ನಿಲ್ಲಿಸಿ ಕ್ಯಾಶ್ ರೂಪದಲ್ಲಿ ಹಣ ಸ್ವೀಕರಿಸೋದು ಗಮನಕ್ಕೆ ಬಂದಿದೆ. ವ್ಯಾಪಾರಿಗಳು ಯಾವ ರೀತಿ ವಹಿವಾಟು ನಡೆಸಿದ್ರೂ ಜಿಎಸ್‌ಟಿ ಕಾಯ್ದೆಯಡಿ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಅಂತ ಎಚ್ಚರಿಕೆ ರವಾನಿಸಿದೆ. ಅಲ್ಲದೆ, ನೋಟಿಸ್ ಕೊಟ್ಟಿರೋ ವಿಚಾರಕ್ಕೆ ಮತ್ತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನೋಟಿಸ್ ಬಂದಿರುವ ವರ್ತಕರು ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ನೀಡಿ ವಿವರಣೆ ನೀಡಬೇಕೆಂದು ತಿಳಿಸಿದೆ.

    ವಾಣಿಜ್ಯ ತೆರಿಗೆ ಇಲಾಖೆ ಹೇಳಿದ್ದೇನು..?
    * ವರ್ತಕರು ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ಜೊತೆ ವಿವರಣೆ ನೀಡಬೇಕು
    * ತೆರಿಗೆ ಇರುವ ಸರಕಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತೆ
    * ತೆರಿಗೆ ವಿನಾಯಿತಿ ಇರುವ ಸರಕು ಸೇವೆಗಳನ್ನು ಕೈಬಿಡಲಾಗುತ್ತದೆ
    * ರಾಜಿ ತೆರಿಗೆ ಪದ್ಧತಿ ಅನ್ನುವ ಉತ್ತಮ ಆಯ್ಕೆ ಇದೆ.
    * ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು.
    * ಈ ಪದ್ಧತಿಯಡಿ ಶೇ.0.5ರಷ್ಟು ಎಸ್‌ಜಿಎಸ್‌ಟಿ (ಸ್ಟೇಟ್) ಮತ್ತು ಶೇ.0.5ರಷ್ಟು ಸಿಜಿಎಸ್‌ಟಿ (ಸೆಂಟ್ರಲ್) ಪಾವತಿಸಬೇಕು. ಒಟ್ಟು 1% ನಷ್ಟು ತೆರಿಗೆ ಇದೆ.
    * ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ
    * ವಾರ್ಷಿಕ ವಹಿವಾಟು ಮಿತಿ ಮೀರಿದ್ದರೂ ನೋಂದಣಿ ಮಾಡಿಸಿಕೊಳ್ಳದ ವರ್ತಕರಿಗೆ ಮಾತ್ರ ಈಗ ನೋಟಿಸ್

  • ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    – ಹಣ್ಣು, ತರಕಾರಿ ವ್ಯಾಪಾರಿಗೆ 1 ಕೋಟಿ ರೂ. ಟ್ಯಾಕ್ಸ್‌, ನೋಟಿಸ್‌ ಕಂಡು ಹೌಹಾರಿದ ವ್ಯಕ್ತಿ

    ಬೆಂಗಳೂರು: ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳೋಣ ಅಂತ ಕನಸು ಹೊಂದಿರುತ್ತಾರೆ. ಅದಕ್ಕಂತಲೇ ಬೇಕರಿ, ಕಾಂಡಿಮೆಂಟ್ಸ್, ಟೀ-ಕಾಫಿ, ತರಕಾರಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಜಿಎಸ್‌ಟಿ (GST) ಗುನ್ನಾ ಕೊಟ್ಟಿದೆ.

    ಸಣ್ಣ-ಪುಟ್ಟ ಅಂಗಡಿಗಳು ಅಂದಮೇಲೆ ಅಲ್ಲಿ ಫೋನ್ ಪೇ, ಗೂಗಲ್ ಪೇ.. ಆನ್‌ಲೈನ್ ಪೇಮೆಂಟ್ ಮೋಡ್ ಇದ್ದೇ ಇರುತ್ತೆ, ವ್ಯಾಪಾರಿಗಳಿಗೂ ಆನ್‌ಲೈನ್ ಪೇಮೆಂಟ್ ಸ್ವೀಕರಿಸೋದು ಕಾಮನ್ ಆಗೋಗಿದೆ. ಆದ್ರೆ, ಅವ್ರು ಇದೆಂದೂ ಕಂಡಿರದ, ಕೇಳಿರದ ಶಾಕ್‌ಗೆ ಅಂಗಡಿ ಮಾಲೀಕರು (Traders) ಒಳಗಾಗಿದ್ದಾರೆ. ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

    ವ್ಯಾಪಾರಸ್ಥರು ಗರಂ
    ಇನ್ನೂ ವಾಣಿಜ್ಯ ತೆರಿಗೆ ಇಲಾಖೆ ಕಳಿಸಿರೋ ನೋಟಿಸ್‌ಗೆ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. `ನಮ್ ಕಿಡ್ನಿ ಮಾರಿ.. ಅಂಗಡಿ ಅಡವಿಟ್ರು ಈ ದಂಡ ಕಟ್ಟೋಕೆ ಆಗಲ್ಲ’.. ಸಣ್ಣ-ಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼ ಬಳಿ ಅಳಲು ತೋಡಿಕೊಂಡಿದ್ದಾರೆ. ಅದರಂತೆ ರಾಜೇಂದ್ರ ಶೆಟ್ಟಿ, ಇವ್ರು ದೂರದ ಕುಂದಾಪುರದಿಂದ ಜೀವನ ಸಾಗಿಸಲು ಬೆಂಗಳೂರು ಸೇರಿ ಅನೇಕ ವರ್ಷಗಳೇ ಕಳೆದಿದೆ, ಕೆಂಗೇರಿಯಲ್ಲಿ ಕಾಂಡಿಮೆಂಟ್ಸ್ ಮಾಡಿಕೊಂಡು ಸಂಸಾರದ ಬಂಡಿದೂಡ್ತಿದ್ದಾರೆ. ಇವ್ರಿಗೆ 2021 ರಿಂದ ಇಲ್ಲಿವರೆಗೆ ಒಟ್ಟು 67 ಲಕ್ಷ ಟ್ಯಾಕ್ಸ್ ಬಾಕಿ ಇದೆ ಅಂತಾ ನೋಟಿಸ್ ನೀಡಿದ್ದಾರೆ. ಟ್ಯಾಕ್ಸ್ ಕಟ್ಟೋದಕ್ಕೆ ಹೇಗೆ ಆಗುತ್ತೆ ಬೇಕಾದ್ರೇ ನಮ್ಮನ್ನ ಸಾಯಿಸಿ ಅಂತ ಕಣ್ಣೀರಿಟ್ಟಿದ್ದಾರೆ.

    ಬನ್ನೇರುಘಟದಲ್ಲಿ ತರಕಾರಿ-ಹಣ್ಣಿನ ವ್ಯಾಪಾರಿ ವೀರಮಾದ ಮಾತನಾಡಿ, ಆನ್‌ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ವಾಣಿಜ್ಯ ತೆರಿಗೆ ಇಲಾಖೆಯವ್ರು ನೋಟಿಸ್ ನೀಡಿದ್ದು, ಬರೋಬ್ಬರಿ 1 ಕೋಟಿ 30 ಲಕ್ಷ ಹಣ ಕಟ್ಟುವಂತೆ ತಿಳಿಸಿದ್ದಾರೆ. ಇದರಿಂದ ಅಂಗಡಿ ಮಾಲೀಕ ಹೌಹಾರಿರಿದ್ದಾರೆ.

    ಬೇಕರಿ ವ್ಯಾಪಾರಿ ರಾಜೇಂದ್ರ ಪೂಜಾರಿ ಅನ್ನೋರು ಮಾತನಾಡಿ, ನಮಗೂ 33 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ನಾವು ಕಾಫಿ, ಟೀ-ಸಿಗರೇಟ್ ಮಾರಿಕೊಂಡಿರೋರು, ನಮ್ಮ ಅಂಗಡಿಯ ವ್ಯಾಲ್ಯೂನೇ 3 ಲಕ್ಷ ಆಗೋದಿಲ್ಲ. 33 ಲಕ್ಷ ಎಲ್ಲಿಂದ ತಂದು ಕೊಟ್ಟದಕ್ಕೆ ಆಗುತ್ತೆ? ನಾವು ಟ್ಯಾಕ್ಸ್ ಪೇ ಮಾಡೋದಕ್ಕೆ ಆಗೋಲ್ಲ, ದಯಾಮರಣ ಮಾಡಿಕೊಳ್ಳಬೇಕು ಅಷ್ಟೇ ಅಂತ ಗೋಳಾಡಿದ್ದಾರೆ.

    ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ
    ಇದೇ ವಿಚಾರವಾಗಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಿಂದ ಸ್ಪಷ್ಟೀಕರಣ ನೀಡಲಾಗಿದೆ. ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ, ವಾರ್ಷಿಕ 40 ಲಕ್ಷ ವಹಿವಾಟು ಮೀರಿದರೆ ಜಿಎಸ್‌ಟಿ ಫಿಕ್ಸ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೇಕರಿಗಳಲ್ಲಿ ಬ್ರೆಡ್ ಮೇಲೆ ಜಿಎಸ್‌ಟಿ ಇಲ್ಲ, ಬ್ರೆಡ್ ಹೊರತುಪಡಿಸಿ ಕುರುಕಲು ತಿಂಡಿಗಳಿಗೆ 5% ಜಿಎಸ್‌ಟಿ, ಯುಪಿಐ ಮೂಲಕ 40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ವರ್ತಕರಿಗೆ ನೋಟಿಸ್ ನೀಡಿರೋ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

  • ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು

    ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು

    ನವದೆಹಲಿ/ಬೆಂಗಳೂರು: ಆದಾಯ ತೆರಿಗೆ ರಿಟರ್ನ್ (IT Returns) ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡುವ ಅಥವಾ ಆದಾಯವನ್ನು ಮರೆಮಾಚುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ (Income Tax Department) ಕಠಿಣ ಎಚ್ಚರಿಕೆ ನೀಡಿದೆ.

    ಹೌದು. ಹೊಸ ಆದಾಯ ತೆರಿಗೆ ನಿಯಮಗಳು ಜಾರಿಯಾಗಿದ್ದು, ತೆರಿಗೆದಾರರು ಸುಳ್ಳು ಕಡತಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ. 200ರವರೆಗೆ ದಂಡ, ವಾರ್ಷಿಕ ಶೇ. 24ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ಸೆಕ್ಷನ್ 276 ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಇನ್ಮುಂದೆ ಸಣ್ಣ ತಪ್ಪುಗಳಿಗೂ ತೆರಿಗೆ ಪಾವತಿದಾರರು ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

    ಒಂದು ವೇಳೆ ನಿಮ್ಮ ಲೆಕ್ಕ ಪರಿಶೋಧಕರು ಅಥವಾ ತೆರಿಗೆ ಸಲಹೆಗಾರರು ತಪ್ಪು ಮಾಡಿದರೂ, ಕಾನೂನಿನ ಪ್ರಕಾರ ತೆರಿಗೆದಾರರಾದ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

    ಈ ಹೊಸ ಕಠಿಣ ನಿಯಮಗಳು ಯಾವುದೇ ವಿನಾಯಿತಿ ಇಲ್ಲದೇ ಎಲ್ಲರಿಗೂ ಅನ್ವಯಿಸುತ್ತವೆ. ಅಂದರೆ, ಸಂಬಳ ಪಡೆಯುವ ನೌಕರರು, ಫ್ರೀಲ್ಯಾನ್ಸರ್‌ಗಳು ಹಾಗೂ ಡಾಕ್ಟರ್, ವಕೀಲರು ಸೇರಿದಂತೆ ಇತರ ವೃತ್ತಿಪರರು ಮತ್ತು ಉದ್ಯಮಿಗಳಿಗೂ ಅನ್ವಯಿಸುತ್ತದೆ. ಇದನ್ನೂ ಓದಿ: ರಾಜ್ಯಾಧ್ಯಕ್ಷರ ಬದಲಿಸುವ ಪ್ರಸ್ತಾಪ ದೆಹಲಿಯಲ್ಲಿ ಕೇಳಿ ಬಂದಿಲ್ಲ: ಆರ್.ಅಶೋಕ್

  • ಎಂಪುರಾನ್‌ ನಿರ್ಮಾಪಕನಿಗೆ ಶಾಕ್‌ – ಚಿಟ್‌ ಫಂಡ್‌ ಕಚೇರಿ ಮೇಲೆ ಇಡಿ ದಾಳಿ

    ಎಂಪುರಾನ್‌ ನಿರ್ಮಾಪಕನಿಗೆ ಶಾಕ್‌ – ಚಿಟ್‌ ಫಂಡ್‌ ಕಚೇರಿ ಮೇಲೆ ಇಡಿ ದಾಳಿ

    ಚೆನ್ನೈ: ಎಂಪುರಾನ್ (Empuraan) ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಗೋಕುಲಂ ಚಿಟ್‌ ಫಂಡ್‌ನ (Sree Gokulam Chits) ತಮಿಳುನಾಡು ಮತ್ತು ಕೇರಳದ ವಿವಿಧ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ.

    ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಅಡಿಯಲ್ಲಿ ಇಡಿ ಶೋಧ ನಡೆಸುತ್ತಿದೆ. ಗೋಕುಲಂ ಗೋಪಾಲನ್ (Gokulam Gopalan) ಎಂದೇ ಜನಪ್ರಿಯವಾಗಿರುವ ಎ.ಎಂ. ಗೋಪಾಲನ್ ಅವರು ತಮಿಳುನಾಡು, ಕೇರಳ, ತೆಲಂಗಾಣ, ಪುದುಚೇರಿ, ಮಹಾರಾಷ್ಟ್ರ, ನವದೆಹಲಿ, ಆಂಧ್ರಪ್ರದೇಶ ಪಾಂಡಿಚೇರಿ ಮತ್ತು ಹರಿಯಾಣದಲ್ಲಿ ಶ್ರೀ ಗೋಕುಲಂ ಚಿಟ್ಸ್ ಫಂಡ್‌ ಕಚೇರಿಯನ್ನು ತೆರೆದಿದ್ದಾರೆ.

    ಗೋಕುಲಂ ಚಿಟ್ಸ್ ಮೇಲೆ ದಾಳಿಯಾಗುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ 2017 ರಲ್ಲಿ, ತೆರಿಗೆ ವಂಚನೆಗಾಗಿ ಆದಾಯ ತೆರಿಗೆ (Income Tax) ಇಲಾಖೆ ಮೂರು ರಾಜ್ಯಗಳಲ್ಲಿ ಶ್ರೀ ಗೋಕುಲಂ ಚಿಟ್ಸ್ ಫಂಡ್‌ ಮೇಲೆ ದಾಳಿ ನಡೆಸಿತ್ತು.

    ಕಂಪನಿಯು ಭಾರೀ ಪ್ರಮಾಣದ ಆದಾಯವನ್ನು ಉದ್ದೇಶಪೂರ್ವಕವಾಗಿ ಮರೆಮಾಡಿದೆ. ಐದು ವರ್ಷಗಳಲ್ಲಿ 1,107 ಕೋಟಿ ರೂ. ಆದಾಯ ಬಹಿರಂಗಪಡಿಸದ ಕಾರಣ ದೊಡ್ಡ ಮೊತ್ತದ ತೆರಿಗೆಯನ್ನು ಪಾವತಿಸುವುದನ್ನು ವಂಚಿಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ

    ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಆಗಸ್ಟ್ 2019 ರಲ್ಲಿ ಗೋಕುಲಂ ಗೋಪಾಲನ್ ಅವರ ಪುತ್ರ ಬೈಜು ಗೋಪಾಲನ್ ಜೈಲಿಗೆ ಹೋಗಿದ್ದರು.

    ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ ನಟ ಮೋಹನ್ ಲಾಲ್(Mohanlal) ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಎಲ್2: ಎಂಪುರಾನ್ ಬಿಡುಗಡೆಯಾದ ಬಳಿಕ ವಿವಾದಕ್ಕೆ ಸಿಲುಕಿದೆ. ಈ ತಿಂಗಳ 27ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿನ ಕೆಲವು ದೃಶ್ಯಗಳು ನಿರ್ದಿಷ್ಟ ಗುಂಪಿನ ಜನರಿಗೆ ಆಕ್ಷೇಪಾರ್ಹವಾಗಿವೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಟೀಕೆಯ ಬಳಿಕ ಮೋಹನ್ ಲಾಲ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದರು.

    ವಿವಾದವಾಗುತ್ತಿದ್ದಂತೆ ಚಿತ್ರದಲ್ಲಿರುವ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು, ವಿರೋಧಿ ಬಾಬಾ ಬಜರಂಗಿ ಹೆಸರನ್ನು ಬದಲಾಯಿಸಲಾಗುವುದು ಮತ್ತು ಜೊತೆಗೆ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗುವುದು ಚಿತ್ರತಂಡ ಪ್ರಕಟಿಸಿತ್ತು.

  • ಏ.1ರಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ಏ.1ರಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ನವದೆಹಲಿ: ಏ.1ರಿಂದ ಆದಾಯ ತೆರಿಗೆ ಸೇರಿದಂತೆ ಯುಪಿಐ (UPI) ಮತ್ತು ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ (Minimum Bank Balance) ನಿಯಮಗಳಲ್ಲಿ ಬದಲಾವಣೆಯಾಗಲಿದೆ.

    ಇದೇ ಏ.1 ರಿಂದ ಹಣಕಾಸು ನಿಯಮಗಳಲ್ಲಿ ಹಲವಾರು ಬದಲಾವಣೆಗಳು ಜಾರಿಗೆ ಬರಲಿದ್ದು, ತೆರಿಗೆದಾರರು, ಯುಪಿಐ ಬಳಕೆದಾರರು, ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಪಿಂಚಣಿದಾರರ ಮೇಲೆ ಇದು ಪರಿಣಾಮ ಬೀರಲಿದೆ. 2025-26ರ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್ಗಳು, ಯುಪಿಐ ಭದ್ರತೆ, ಜಿಎಸ್‌ಟಿ ಹಾಗೂ ಬ್ಯಾಂಕಿಂಗ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಿದೆ.ಇದನ್ನೂ ಓದಿ:ಕೇಂದ್ರ ನೌಕರರಿಗೆ ಯುಗಾದಿ ಗಿಫ್ಟ್ – ಶೇ.2 ರಷ್ಟು ಡಿಎ ಏರಿಕೆ

    2025ರ ಕೇಂದ್ರ ಬಜೆಟ್‌ನಲ್ಲಿ ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ಕಡಿತಗಳನ್ನು ಪರಿಚಯಿಸಿದೆ. ಅವುಗಳನ್ನು ಈದೀಗ ಜಾರಿಗೆ ತರಲಾಗುತ್ತಿದ್ದು, ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವರ್ಷಕ್ಕೆ 12 ಲಕ್ಷ ರೂ.ವರೆಗೆ ಗಳಿಸುವವರು ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತಾರೆ. ಅದಕ್ಕೂ ಹೆಚ್ಚು ಸಂಬಳ ಪಡೆಯುವವರು 75,000 ರೂ.ಗಳ ಪ್ರಯೋಜನ ಪಡೆಯುತ್ತಾರೆ, ಇದರಿಂದಾಗಿ 12.75 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.

    ಯುಪಿಐ ನಿಯಮಗಳು:
    ಏ.1 ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಂದ ಯುಪಿಐ ವಹಿವಾಟು ನಡೆಸಲಾಗುವುದಿಲ್ಲ. ಭದ್ರತೆಯನ್ನು ಹೆಚ್ಚಿಸಲು, ಬ್ಯಾಂಕ್‌ಗಳು ಮತ್ತು ಫೋನ್ ಪೇ ಮತ್ತು ಗೂಗಲ್ ಪೇನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ದೀರ್ಘಕಾಲದವರೆಗೆ ಬಳಕೆಯಾಗದೆ ಉಳಿದಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಖಾತೆಗಳನ್ನು ಹಂತಹಂತವಾಗಿ ರದ್ದುಗೊಳಿಸಲು ಸೂಚಿಸಲಾಗಿದೆ. ಹೀಗಾಗಿ ಏ.1ರ ಮೊದಲು ಮೊಬೈಲ್ ಸಂಖ್ಯೆಗಳನ್ನು ನವೀಕರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಆದೇಶಿಸಿದೆ.

    ಪಿಂಚಣಿ ಯೋಜನೆ:
    ಮತ್ತೊಂದು ಮಹತ್ವದ ಆರ್ಥಿಕ ಬದಲಾವಣೆಯೆಂದರೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸುವ ಏಕೀಕೃತ ಪಿಂಚಣಿ ಯೋಜನೆ. 2024ರ ಆಗಸ್ಟ್ನಲ್ಲಿ ಪರಿಚಯಿಸಲಾದ ಯುಪಿಎಸ್, ಏ.1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಬದಲಾವಣೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಲಿದೆ. ಕನಿಷ್ಠ 25 ವರ್ಷಗಳ ಸೇವೆಯನ್ನು ಹೊಂದಿರುವವರು ತಮ್ಮ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ ಶೇ.50 ರಷ್ಟಕ್ಕೆ ಸಮಾನವಾದ ಪಿಂಚಣಿಯನ್ನು ಪಡೆಯಲಿದ್ದಾರೆ.

    ಕನಿಷ್ಠ ಬ್ಯಾಲೆನ್ಸ್:
    ಬ್ಯಾಂಕಿಂಗ್ ವಲಯದಲ್ಲಿ, ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾದಂತಹ ಪ್ರಮುಖ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ನವೀಕರಿಸುತ್ತಿದ್ದು, ಪರಿಷ್ಕೃತ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ಗ್ರಾಹಕರು ಹೊಸ ಬ್ಯಾಂಕಿಂಗ್ ಮಾರ್ಗಸೂಚಿಗಳ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.ಇದನ್ನೂ ಓದಿ:ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

  • ಮಧ್ಯಮ ವರ್ಗದ ಜನತೆ ಪ್ರಧಾನಿ ಮೋದಿ ಹೃದಯದಲ್ಲಿದ್ದಾರೆ: ಅಮಿತ್‌ ಶಾ

    ಮಧ್ಯಮ ವರ್ಗದ ಜನತೆ ಪ್ರಧಾನಿ ಮೋದಿ ಹೃದಯದಲ್ಲಿದ್ದಾರೆ: ಅಮಿತ್‌ ಶಾ

    ನವದೆಹಲಿ: 2025 ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಕಡಿತವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಮಧ್ಯಮ ವರ್ಗವು ಯಾವಾಗಲೂ ಪ್ರಧಾನಿ ಮೋದಿಯವರ (PM Modi) ಹೃದಯದಲ್ಲಿದೆ ಎಂದು ಬಣ್ಣಿಸಿದ್ದಾರೆ.

    12 ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಅಮಿತ್‌ ಶಾ ಅವರು, ಮಧ್ಯಮ ವರ್ಗದ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುನ್ನಡೆದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

    ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು ಎಂದು ಅಮಿತ್‌ ಶಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಕೇಂದ್ರ ಬಜೆಟ್ 2025 ಅನ್ನು ಮಂಡಿಸುತ್ತಾ, ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ 12 ಲಕ್ಷ ರೂ.ಗಳವರೆಗೆ – ಅಂದರೆ ಪ್ರಮಾಣಿತ ಕಡಿತಗಳನ್ನು ಒಳಗೊಂಡಂತೆ 12.75 ಲಕ್ಷ ರೂ.ಗಳವರೆಗೆ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ

  • Budget 2025: 12 ಲಕ್ಷದವರೆಗೆ ತೆರಿಗೆ ವಿನಾಯಿತಿ – ಒಟ್ಟು ಎಷ್ಟು ಉಳಿತಾಯ ಆಗುತ್ತೆ?

    Budget 2025: 12 ಲಕ್ಷದವರೆಗೆ ತೆರಿಗೆ ವಿನಾಯಿತಿ – ಒಟ್ಟು ಎಷ್ಟು ಉಳಿತಾಯ ಆಗುತ್ತೆ?

    ನವದೆಹಲಿ: ಬಜೆಟ್‌ 2025ರಲ್ಲಿ ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಗಿಫ್ಟ್‌ ಕೊಟ್ಟಿದೆ. ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದಾರೆ.

    ಪ್ರತಿ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆ (Income Tax) ವಿನಾಯಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಹೀಗಾಗಿ ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್‌ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್‌ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Budget 2025: ರೈತರಿಗಾಗಿ ‘ಧನ್‌ ಧಾನ್ಯ ಕೃಷಿ’ ಯೋಜನೆ ಘೋಷಿಸಿದ ಸೀತಾರಾಮನ್‌

     

     

    ಮುಂದಿನ ವಾರ ಸೀತಾರಾಮನ್‌ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

    ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಗಳಿಸುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಕ್ಕೆ 75,000 ರೂ.ಗಳ ಪ್ರಮಾಣಿತ ಕಡಿತವನ್ನು ಸೇರಿಸಿದರೆ, ವಾರ್ಷಿಕ 12.75 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ತೆರಿಗೆದಾರರು ತೆರಿಗೆ ಕಟ್ಟುವಂತಿಲ್ಲ. ಇದನ್ನೂ ಓದಿ: Union Budget 2025: ಬಡವರು, ಯುವಜನತೆ, ರೈತರು, ಮಹಿಳೆಯರ ಕೇಂದ್ರೀಕರಿಸಿದ ಬಜೆಟ್‌: ಸೀತಾರಾಮನ್‌