Tag: Income Certificate

  • ಸಿಇಟಿ: 30,000 ಮಂದಿಯ ಆರ್‌ಡಿ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ, ಇಂದೇ ಸರಿ ಮಾಡಿಕೊಳ್ಳಿ

    ಸಿಇಟಿ: 30,000 ಮಂದಿಯ ಆರ್‌ಡಿ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ, ಇಂದೇ ಸರಿ ಮಾಡಿಕೊಳ್ಳಿ

    ಆರ್ ಡಿ ಸಂಖ್ಯೆ ಸರಿಪಡಿಸದಿದ್ದರೆ ಸಾಮಾನ್ಯ ಕೋಟಾದಲ್ಲಿ ಸೀಟು ಹಂಚಿಕೆ

    ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ (Professional Courses) ಪ್ರವೇಶಾತಿ ಬಯಸಿ ಸಿಇಟಿ (CET) ಬರೆದಿರುವ ಅಭ್ಯರ್ಥಿಗಳು (Candidate) ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್.ಡಿ ಸಂಖ್ಯೆಯನ್ನು (RD Number) ಸರಿಪಡಿಸಿಕೊಳ್ಳದಿದ್ದರೆ ಮೀಸಲಾತಿ ಸೌಲಭ್ಯಗಳು ರದ್ದಾಗಿ, ಜನರಲ್ ಮೆರಿಟ್ ಕೋಟಾದಡಿ ಬರಲಿದ್ದಾರೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಯ ಆರ್.ಡಿ ಸಂಖ್ಯೆ ಜತೆ ತಾಳೆಯಾಗುವಂತೆ ಜೂನ್ 12ರ ಬೆಳಿಗ್ಗೆ 11 ಗಂಟೆಯ ವೇಳೆಗೆ ಸೂಕ್ತ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಮ್ಮೆ ಹೇಳಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

    ಸಿಇಟಿ ಬರೆದಿರುವ 2.6 ಲಕ್ಷ ಅಭ್ಯರ್ಥಿಗಳ ಪೈಕಿ 80 ಸಾವಿರಕ್ಕೂ ಹೆಚ್ಚು ಮಂದಿ ಆರ್.ಡಿ ಸಂಖ್ಯೆಯನ್ನು ತಪ್ಪಾಗಿ ಅರ್ಜಿಯಲ್ಲಿ ನಮೂದಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಅದರ ತಿದ್ದುಪಡಿಗೆ ಜೂನ್ 7ರಿಂದ 12ರವರೆಗೆ ಕೊನೆಯ ಅವಕಾಶ ನೀಡಿದೆ. ಆದರೂ ಇನ್ನೂ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳಲ್ಲಿನ ದೋಷಗಳು ಹಾಗೆಯೇ ಉಳಿದುಕೊಂಡಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ

    ಇದರ ಜತೆಗೆ ಕೆಲವರು ಆದಾಯ ಪ್ರಮಾಣ ಪತ್ರದ (Income Certificate) ಬದಲು ಇಡಬ್ಲ್ಯುಎಸ್ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಸಿಇಟಿ ನಿಯಮಗಳ ಪ್ರಕಾರ ಇದಕ್ಕೆ ಮನ್ನಣೆ ಇಲ್ಲ. ಆದ್ದರಿಂದ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್‍ನಲ್ಲಿ ಜೂನ್ 12ರ ನಿಗದಿತ ಕಾಲಮಿತಿಯೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

    ಆರ್‌ಡಿ ಸಂಖ್ಯೆಗಳು ತಾಳೆಯಾಗದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಈಗಾಗಲೇ ಈ ಸಂಖ್ಯೆಗಳನ್ನು ಕಂದಾಯ ಇಲಾಖೆಯ ಆರ್‌ಡಿ ಸಂಖ್ಯೆ ಜತೆ ನಮೂದಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಿದ್ದುಪಡಿಗೆ ನೀಡಿರುವ ಕೊನೆಯ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

  • ನಕಲಿ ದಾಖಲಿ ಸೃಷ್ಟಿಸಿ ಸೇನೆಗೆ ಸೇರ್ಪಡೆ – 9 ಮಂದಿ ಅರೆಸ್ಟ್

    ನಕಲಿ ದಾಖಲಿ ಸೃಷ್ಟಿಸಿ ಸೇನೆಗೆ ಸೇರ್ಪಡೆ – 9 ಮಂದಿ ಅರೆಸ್ಟ್

    ವಿಜಯನಗರ: ನೂರಕ್ಕೂ ಹೆಚ್ಚು ಮಹಾರಾಷ್ಟ್ರ ನಿವಾಸಿಗಳು ಸೇನೆಗೆ ಸೇರಲು ನಕಲಿ ದಾಖಲೆ ಸೃಷ್ಟಿ ಮಾಡಿದ್ದು, ನಗರದ ಪೊಲೀಸರು ಅಕ್ರಮವನ್ನು ಪತ್ತೆ ಮಾಡಿದ್ದಾರೆ.

    ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್, ಮನೋಜ್ ಇದರ ಜೊತೆಗೆ ಬಳ್ಳಾರಿ ಜಂಬಣ್ಣ ಮನೋಜ್, ಹನುಮಂತ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಮಾಹಿತಿ ಬಂದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿ ಇನ್ನೂ ಹಲವು ಜನ ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನವಿದೆ. ಇದನ್ನೂ ಓದಿ: 13ರ ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ – ನೋವಿನ ಕಥೆ ಬಿಚ್ಚಿಟ್ಟ ತಂದೆ!

    ಸರ್ಕಾರಿ ಅಧಿಕಾರಿಗಳು ದೇಶಸೇವೆ ಮಾಡುವ ಕೆಲಸಕ್ಕಾಗಿಯೂ ಅಡ್ಡದಾರಿ ಹಿಡಿದ ಯುವಕರ ಹಣಕ್ಕಾಗಿ ದಾಖಲೆ ನೀಡಿದ್ದಾರೆ. ನೂರಕ್ಕೂ ಹೆಚ್ಚು ಮಹಾರಾಷ್ಟ್ರ ನಿವಾಸಿಗಳು ರಾಜ್ಯದ ವಿವಿಧ ಭಾಗದಿಂದ ನಕಲಿ ಸರ್ಟಿಫಿಕೇಟ್ ನೀಡಿ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ: 7 ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

    ಈ ಕುರಿತು ವಿಜಯನಗರ ಜಿಲ್ಲೆಯಲ್ಲಿ 9 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 11 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ವಿಜಯನಗರದ ಹೊಳಲು ಠಾಣೆ, ಬಳ್ಳಾರಿ ನಗರದ ಬ್ರೂಸ್ ಪೇಟ್, ಗಾಂಧಿನಗರ, ಕೌಲ ಬಜಾರ್ ಮತ್ತು ಎಪಿಎಂಸಿ ಠಾಣೆಗಳಲ್ಲಿ ದೂರು ದಾಖಲಾಗಿದೆ.

    BRIBE

    ಇನ್ನೂ ಇದರಲ್ಲಿ ಇಬ್ಬರು ಪೊಲೀಸರು ಸಹಕಾರ ನೀಡಿದ ಆರೋಪವಿರುವ ಹಿನ್ನೆಲೆ ಪೊಲೀಸರನ್ನು ಅಮಾನತು ಮಾಡಲಾಗಿದೆ. ಸೇನೆಯಲ್ಲಿ ಕೆಲಸಕ್ಕೆ ಸೇರಲು ದಾಖಲಾತಿಗಳು ತಿದ್ದುಪಡಿ ಮಾಡಿ, ನಕಲಿ ದಾಖಲೆ ಕೊಟ್ಟ ಆರೋಪ ವ್ಯಕ್ತವಾಗಿದೆ.

    ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳ ಸೃಷ್ಟಿ ಮಾಡಿದ್ದರು. ಮಹಾರಾಷ್ಟ್ರದ ವಿವಿಧ ಊರಿನವರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಲಾಗಿದ್ದು, ನಕಲಿ ದಾಖಲೆಗಾಗಿ ಲಕ್ಷಾಂತರ ಹಣದ ವ್ಯವಹಾರ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

  • ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

    ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

    ತುಮಕೂರು: ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಬಂದ ಸಾರ್ವಜನಿಕರಿಗೆ ಗ್ರೇಡ್-2 ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ಡಿ.ಸಿ.ಕಚೇರಿಯಲ್ಲಿರುವ ಪ್ರಮಾಣಪತ್ರ ವಿತರಣಾ ಕೇಂದ್ರದ ಬಳಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ನೂರಾರು ಜನರು ಸಾಲಿನಲ್ಲಿ ನಿಂತಿದ್ರು. ಪ್ರಮಾಣ ಪತ್ರ ವಿತರಣೆ ವೇಳೆ ಕಂಪ್ಯೂಟರ್ ಆಪರೇಟರ್ ತಾಂತ್ರಿಕ ಕಾರಣ ಹೇಳಿ ಸರ್ಟಿಫಿಕೇಟ್ ನೀಡಲು ವಿಳಂಬ ಮಾಡುತ್ತಿದ್ದರು.

    ಹೀಗೆ ಕಂಪ್ಯೂಟರ್ ಆಪರೇಟರ್ ವಿನಾಕಾರಣ ವಿಳಂಬ ಮಾಡುತ್ತಿದ್ದುದನ್ನು ಅಲ್ಲಿ ನಿಂತಿದ್ದ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಗ್ರೇಡ್ -2 ತಹಶೀಲ್ದಾರ್ ಇಂದಿರಾ, ಯುವತಿಯೋರ್ವಳಿಗೆ ಕಚೇರಿಯಲ್ಲೇ ಅವಾಜ್ ಹಾಕಿದ್ದಾರೆ.

    ನೀನೇನ್ ಸಾಫ್ಟ್ ವೇರ್ ಇಂಜಿನಿಯರಾ? ಹಾಗಾದ್ರೆ ಬಂದು ರಿಪೇರಿ ಮಾಡು ಎಂದಿದ್ದಾರೆ. ಬ್ಯಾಂಕಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತೀರಾ? ಇಲ್ಲಿ ನಿಂತುಕೊಳ್ಳೋಕೆ ಏನಾಗತ್ತೆ ನಿಮಗೆ? ಎಂದು ದರ್ಪ ಮೆರೆದಿದ್ದಾರೆ. ಯಾರಿಗೆ ಬೇಕಾದ್ರೂ ಈ ಕುರಿತು ದೂರು ಕೊಡಿ ನಮಗೆ ಏನೂ ಮಾಡೋಕೆ ಆಗಲ್ಲ ಎಂದು ಅವಾಜ್ ಹಾಕಿದ್ದಾರೆ.