Tag: incident

  • ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ಕಠಿಣ ಶಿಕ್ಷೆಗೆ ಬಾಲಿವುಡ್ ಆಗ್ರಹ

    ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ಕಠಿಣ ಶಿಕ್ಷೆಗೆ ಬಾಲಿವುಡ್ ಆಗ್ರಹ

    ಣಿಪುರದ (Manipur) ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದೆ. ತಪ್ಪು ಮಾಡಿರುವ ದುಷ್ಟರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ ಎಂದು ಬಾಲಿವುಡ್ ಕಲಾವಿದರು ಕೂಡ ಆಗ್ರಹ ಮಾಡಿದ್ದಾರೆ.

    ಖ್ಯಾತ ನಟರಾದ ಸಂಜಯ್ ದತ್ (Sanjay Dutt), ಅಕ್ಷಯ್ ಕುಮಾರ್, ರಿತೇಶ್ ದೇಶಮುಖ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri), ಕಿಯಾರಾ ಅಡ್ವಾನಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣರಾದ ದುರುಳರಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಜಯಣ್ಣ ಪಾಲಾದ ‘ಜೈಲರ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕು

    ‘ಈ ಘಟನೆಯು ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನನಗೆ ಅತ್ಯಂತ ನೋವು ತಂದಿದೆ. ತಪ್ಪು ಮಾಡಿದರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ಮಹಿಳೆಯರ ನೋವಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.

    ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದು, ಇಂತಹ ಘಟನೆಗಳನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಮನಸ್ಸು ತುಂಬಾ ಘಾಸಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ನುಡಿದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • VIDEO: ಉಡುಪಿಯಲ್ಲಿ ಕಾಂತಾರ ಸಿನಿಮಾ ಮಾದರಿ ಘಟನೆ..?

    VIDEO: ಉಡುಪಿಯಲ್ಲಿ ಕಾಂತಾರ ಸಿನಿಮಾ ಮಾದರಿ ಘಟನೆ..?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಿಳೆಗೆ ಕೊಟ್ಟ ಮುತ್ತು ತಂದ ಆಪತ್ತು- 7 ವರ್ಷಗಳ ನಂತರ ಬಂತು ಕುತ್ತು

    ಮಹಿಳೆಗೆ ಕೊಟ್ಟ ಮುತ್ತು ತಂದ ಆಪತ್ತು- 7 ವರ್ಷಗಳ ನಂತರ ಬಂತು ಕುತ್ತು

    ಪಣಜಿ: ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ ಒಮ್ಮೊಮ್ಮೆ ವಿಪರೀತ ಜನರ ಮಧ್ಯೆ ಬರುವ ಕಿಡಿಗೇಡಿಗಳು ಮಹಿಳೆಯರು, ಹುಡುಗಿಯರನ್ನು ಸುಮ್ಮನೆ ಟಚ್ ಮಾಡಿಕೊಂಡು ಹೋಗುವುದು, ಎದುರು ಕುಳಿತರೆ ದಿಟ್ಟಿಸಿ ನೋಡುವುದು ಹೀಗೆ.. ಅನೇಕ ರೀತಿಯಲ್ಲಿ ಅಸಭ್ಯವಾಗಿ ವರ್ತಿಸುವುದನ್ನೇ ಚಾಳಿ ಮಾಡಿಕೊಂಡಿರುತ್ತಾರೆ. ತನ್ನ ಸ್ಟಾಪ್ ಬರುವಷ್ಟರಲ್ಲಿ ಈ ವ್ಯಕ್ತಿ ಕೆಳಗೆ ಬೇಗನೆ ಇಳಿದು ಹೋದರೆ ಸಾಕಪ್ಪಾ ದೇವರೇ ಎಂದು ಮಹಿಳೆಯರು ತಮ್ಮ ಮನಸ್ಸಿನಲ್ಲಿ ಅಂದು ಕೊಳ್ಳುತ್ತಾರೆ. ಹಾಗೇ ಕೆಲ ಧೈರ್ಯಶಾಲಿ ಮಹಿಳೆಯರು ಕಿಡಿಗೇಡಿಗಳಿಗೆ ತಕ್ಕಪಾಠವನ್ನು ಕಲಿಸುವ ಘಟನೆಯೂ ಆಗಾಗ್ಗೆ ನಡೆಯುತ್ತಿದೆ.

    ಇದೀಗ ಇಂತಹದ್ದೇ ಒಂದು ಪ್ರಕರಣದಲ್ಲಿ ರೋಡ್ ರೋಮಿಯೋ ಒಬ್ಬನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2015ರಲ್ಲಿ ನಡೆದ ಘಟನೆಗೆ ಈಚೆಗೆ ಶಿಕ್ಷೆ ವಿಧಿಸಿದ್ದು, ಮಹಿಳೆಗೆ ನ್ಯಾಯ ಕಲ್ಪಿಸಿದೆ. ಇದನ್ನೂ ಓದಿ: ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

    ಏನಿದು ಘಟನೆ?: 2015ರಲ್ಲಿ ಮುಂಬೈನ ಸ್ಥಳೀಯ ರೈಲಿನಲ್ಲಿ 37 ವರ್ಷದ ಗೋವಾ ಮೂಲದ ವ್ಯಕ್ತಿಯೊಬ್ಬ ಮಹಿಳೆಯನ್ನು ಕೆಲ ಕಾಲ ಗುರಾಯಿಸಿ ನೋಡಿ ಎದ್ದು ಹೋಗಬೇಕಾದರೆ ಥಟ್ಟನೆ ಆಕೆಯ ಕೆನ್ನೆಗೆ ಚುಂಬಿಸಿದ್ದಾನೆ. ಬಳಿಕ ಮಹಿಳೆ ನೀಡಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಹಿಳೆಯ ಮೇಲಿನ ದೌರ್ಜನ್ಯವೆಂದು ಪರಿಗಣಿಸಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

    law

    10 ಸಾವಿರ ದಂಡ: ಆರೋಪಿಗೆ ನ್ಯಾಯಾಲಯವು ಶಿಕ್ಷೆಯೊಂದಿಗೆ 10 ಸಾವಿರ ರೂ .ಗಳ ದಂಡವನ್ನು ವಿಧಿಸಿತ್ತು. ಅದರಲ್ಲಿ 5 ಸಾವಿರ ರೂ. ಮಹಿಳೆಗೆ ಪರಿಹಾರವಾಗಿ ನೀಡುವಂತೆ ನಿರ್ದೇಶಿಸಿತು. ಆರೋಪಿ ತನ್ನ ಹಿಂದಿನ ಪ್ರಯಾಣಿಕನು ತನ್ನನ್ನು ತಳ್ಳಿದ್ದಾನೆ ಮತ್ತು ಅವನು ಅವಳ ಮೇಲೆ ಬಿದ್ದಿದ್ದಾನೆ. ಅವನ ತುಟಿಗಳು ಅವಳ ಕೆನ್ನೆಯನ್ನು ಸ್ಪರ್ಶಿಸಿವೆ ಎಂದು ಆ ವ್ಯಕ್ತಿ ತನ್ನ ಸಮರ್ಥನೆಯಲ್ಲಿ ಹೇಳಿ ಕೊಂಡಿದ್ದನು. ಅವಳು ತಪ್ಪು ತಿಳುವಳಿಕೆಯಿಂದ ದೂರು ದಾಖಲಿಸಿದ್ದಾಳೆ ಎಂದು ಕೋರಿದ್ದರು. ಆರೋಪಿಯ ವಾದವನ್ನು ತಳ್ಳಿಹಾಕಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ – ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

    ಸಂತ್ರಸ್ತೆ ಹೇಳಿದ್ದೇನು?
    ವಿಚಾರಣೆಯ ಸಮಯದಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಳು ಮತ್ತು 2015 ಆಗಸ್ಟ್ 28 ರಂದು, ತನ್ನ ಸ್ನೇಹಿತನನ್ನು ಭೇಟಿಯಾಗಲು ಗೋವಂಡಿಗೆ ಹೋಗಿದ್ದೆ ಎಂದು ವಿವರಿಸಿದ್ದಳು. ಅಲ್ಲಿಂದ ಮಧ್ಯಾಹ್ನ 1.20ರ ಸುಮಾರಿಗೆ ಇಬ್ಬರೂ ಗೋವಂಡಿಯಿಂದ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದರು. ಈ ವೇಳೆ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

  • ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ 9 ತಿಂಗಳ ಮಗು ಜೊತೆ ತಾಯಿ ಬಚಾವ್

    ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ 9 ತಿಂಗಳ ಮಗು ಜೊತೆ ತಾಯಿ ಬಚಾವ್

    ಚೆನ್ನೈ: ರೈಲ್ವೇ ಅಧಿಕಾರಿಗಳು ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ ತಾಯಿ ಮತ್ತು 9 ತಿಂಗಳ ಮಗು ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ತಮಿಳುನಾಡಿನ ಕಟಪಾಡಿ ರೈಲ್ವೆ ಜಂಕ್ಷನ್‍ನಲ್ಲಿ ನಡೆದಿದೆ.

    ಯುವರಾಣಿ (37) ಮಹಿಳೆ ಹಾಗೂ ಮಗು ಅದೃಷ್ಟವಶಾತ್ ಪಾರಾದವರು. ತಾಯಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕಟಪಾಡಿ ರೈಲ್ವೆ ಜಂಕ್ಷನ್ ದಾಟುತ್ತಿದ್ದರು. ಈ ವೇಳೆ ರೈಲು ಹಳಿಯನ್ನು ಎಡವಿ ಕಾಲು ಜಾರಿ ಇಬ್ಬರೂ ರೈಲು ಹಳಿ ಮೇಲೆ ಬಿದ್ದಿದ್ದಾರೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ

    ರೈಲು ಬರುತ್ತಿರುವ ಸಂದರ್ಭದಲ್ಲಿ ರೈಲ್ವೇ ಹಳಿಗಳು ಲೈನ್ ಚೇಂಜ್ ಆಗುತ್ತಿರುವದನ್ನು ಯುವರಾಣಿಯವರು ಗಮನಿಸಿರಲಿಲ್ಲ. ಈ ವೇಳೆ ಅವರು ರೈಲು ಬರುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿ ಅವರಿಗೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಕಂಡ ರೈಲ್ವೇ ಅಧಿಕಾರಿಗಳು ಎರ್ನಾಕುಲಂ ಎಕ್ಸ್‍ಪ್ರೆಸ್‍ನ್ನು ಸರಿಯಾದ ಸಮಯಕ್ಕೆ ನಿಲ್ಲಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ಯುವರಾಣಿ ತಲೆಗೆ ಗಾಯವಾಗಿತ್ತು. ರೈಲ್ವೇ ಅಧಿಕಾರಿಗಳು ಮತ್ತು ಪ್ರಯಾಣಿಕರು ಅವರನ್ನು ಹಳಿಯಿಂದ ಮೇಲಕ್ಕೆತ್ತಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಘಟನೆಯ ನಂತರ ಯುವರಾಣಿ ಆಘಾತಕ್ಕೊಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ ಮತ್ತು ಮಗುವನ್ನು ಚಿಕಿತ್ಸೆಗಾಗಿ ವೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಸಿಐಎಸ್‍ಎಫ್ ಫೈರಿಂಗ್ ರೇಂಜ್‍ನ ಬುಲೆಟ್‍ನಿಂದ ಬಾಲಕ ಜಸ್ಟ್ ಮಿಸ್

    ಸಿಐಎಸ್‍ಎಫ್ ಫೈರಿಂಗ್ ರೇಂಜ್‍ನ ಬುಲೆಟ್‍ನಿಂದ ಬಾಲಕ ಜಸ್ಟ್ ಮಿಸ್

    ಚೆನ್ನೈ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್), ಸಿಬ್ಬಂದಿ ಶೂಟಿಂಗ್ ರೇಂಜ್‍ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಫೈರಿಂಗ್ ರೇಂಜ್‍ನಿಂದ ಅಡ್ಡಾದಿಡ್ಡಿ ಹಾರಿದ ಬುಲೆಟ್‍ವೊಂದು ಬಾಲಕನ ತಲೆಗೆ ತಾಗಿದ ಘಟನೆ ತಮಿಳುನಾಡಿನ ಪುದುಕೊಟ್ಟೈನ ನರ್ತಮಲೈ ಆವರಣದಲ್ಲಿ ನಡೆದಿದೆ.

    ಕೆ ಪುಗಝೆಂಡಿ ಬುಲೆಟ್ ತಗುಲಿದ ಬಾಲಕ. ಪುಗಝೆಂಡಿಯು ತರಬೇತಿ ಮೈದಾನದಿಂದ ಸ್ವಲ್ಪ ದೂರದಲ್ಲಿರುವ ತನ್ನ ಅಜ್ಜನ ಮನೆಯಲ್ಲಿದ್ದನು. ಆಟವಾಡಲೆಂದು ಬಾಲಕನು ಮೈದಾನಕ್ಕೆ ಬಂದಿದ್ದನು. ಇತ್ತ (ಸಿಐಎಸ್‍ಎಫ್) ಸಿಬ್ಬಂದಿ ತರಬೇತಿಯಲ್ಲಿ ನಿರತರಾಗಿದ್ದು, ಬಾಲಕನನ್ನ ಗಮನಿಸಿದೆ ಅವರು ರೈಫಲ್‍ಗಳಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಒಂದು ಬುಲೆಟ್ ಮಿಸ್ ಆಗಿ ಅವನ ತಲೆಗೆ ತಗುಲಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

    ಬಾಲಕನನ್ನು ತಕ್ಷಣವೇ ಪುದುಕೊಟ್ಟೈ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಂಜಾವೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಪ್ರಕರಣದ ಹಿನ್ನೆಲೆ ಪುದುಕೊಟ್ಟೈ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆಗೆ ಕಾರಣವೇನು ಎಂಬುದರ ಕುರಿತು (ಸಿಐಎಸ್‍ಎಫ್) ಸಿಬ್ಬಂದಿಯೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ವಿಚಾರಣೆ ವರದಿ ಬರುವವರೆಗೂ ಫೈರಿಂಗ್ ರೇಂಜ್ ಕಾರ್ಯಾಚರಣೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

     

  • ಮದ್ಯ ಖರೀದಿಸಲು ಹಣ ನೀಡದ್ದಕ್ಕೆ ಗೆಳತಿಯ ಮೂಗನ್ನೇ ಕತ್ತರಿಸಿದ!

    ಮದ್ಯ ಖರೀದಿಸಲು ಹಣ ನೀಡದ್ದಕ್ಕೆ ಗೆಳತಿಯ ಮೂಗನ್ನೇ ಕತ್ತರಿಸಿದ!

    ಭೋಪಾಲ್: ವ್ಯಕ್ತಿಯೊಬ್ಬ ಮದ್ಯಕ್ಕೆ 200 ರೂ. ಹಣ ನೀಡದ ಕಾರಣ ಲಿವ್-ಇನ್ ರಿಲೆಷನ್‍ಶಿಪ್‍ನಲ್ಲಿದ್ದ ಗೆಳತಿಯ ಮೂಗನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಮಂಗಾವ್‍ನಲ್ಲಿ ನಡೆದಿದೆ.

    ಸೋನು (35) ಹಲ್ಲೆಗೊಳಗಾದ ಮಹಿಳೆ. ಸೋನು ತನ್ನ ಪ್ರೇಮಿ ಲವಕುಶ್ ಜೊತೆ 2 ವರ್ಷ ಲಿವ್-ಇನ್ ರಿಲೆಷನ್‍ಶಿಪ್‍ನಲ್ಲಿದ್ದಳು. ಮಹಿಳೆಯ ಪತಿ 8 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದನು. ಆ ಬಳಿಕದಿಂದ ಆಕೆ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಆದರೆ ಆಕೆಯ ಪ್ರೇಮಿ ಸದಾ ಮದ್ಯದ ಅಮಲಿನಲ್ಲಿರುತ್ತಿದ್ದು, ಯಾವುದೇ ಕೆಲಸ ಕಾರ್ಯವಿಲ್ಲದೆ ಅಲೆದಾಡುತ್ತಿದ್ದನು. ಇದನ್ನೂ ಓದಿ: 17 ವರ್ಷ ಹಿಂದಿನ ಕೊಲೆಯ ಗುಟ್ಟು- ಕೈದಿ ಮತ್ತೆ ಅರೆಸ್ಟ್

    ಶನಿವಾರ ಬೆಳಗ್ಗೆ ಮದ್ಯದ ಅಮಲಿನಲ್ಲಿದ್ದ ಆತ, ಮತ್ತೆ ಕುಡಿಯಲು ಅವಳ ಹತ್ತಿರ ಹಣ ಕೇಳಿದ್ದಾನೆ. ಆದರೆ ಸೋನು ಕೂಲಿಗಾಗಿ ಅವರಿವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಅವಳ ಜೀವನ ದುಡಿದ ಕೂಲಿಯ ಮೇಲೆ ನಡೆಯುತ್ತಿತು. ಆದ ಕಾರಣ ಪ್ರೇಮಿಗೆ ಹಣ ಕೊಡಲು ಆಕೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಲವಕುಶ್ ಅಲ್ಲೇ ಇದ್ದ ಕೊಡಲಿ ತೆಗೆದುಕೊಂಡು ಆಕೆಯ ಮೂಗನ್ನು ಕತ್ತರಿಸಿ ಬಿಟ್ಟಿದ್ದಾನೆ.

    ಘಟನೆಯಿಂದ ಗಂಭೀರಗಾಯಗೊಂಡ ಮಹಿಳೆಯನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆ ಭಾರೀ ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಖಾಂಡ್ವಾ ಸಿಟಿ ಕೊಟ್ವಾಲಿ ಉಸ್ತುವಾರಿ ಬಲ್ಜಿತ್ ಸಿಂಗ್ ಬಿಸೆನ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

    ಆರೋಪಿಯ ವಿರುದ್ಧ ಮಹಿಳೆ ದೂರು ನೀಡಿದ್ದು, ಕೊಟ್ವಾಲಿ ಪೊಲೀಸರು ಐಪಿಸಿ ಸೆಕ್ಷೆನ್ 307 ರ ಅಡಿ ಪ್ರಕರಣ ದಾಖಲಿಸಿದ್ದಾರೆ.

  • ಮೃತ ತಾಯಿಯ ತೋಳುಗಳಲ್ಲಿ 2 ರಾತ್ರಿಗಳನ್ನು ಕಳೆದ 3 ರ ಬಾಲಕಿ!

    ಮೃತ ತಾಯಿಯ ತೋಳುಗಳಲ್ಲಿ 2 ರಾತ್ರಿಗಳನ್ನು ಕಳೆದ 3 ರ ಬಾಲಕಿ!

    ಭುವನೇಶ್ವರ್: 3 ವರ್ಷದ ಬಾಲಕಿ ತನ್ನ ಮೃತ ತಾಯಿಯ ತೋಳುಗಳಲ್ಲಿ ಎರಡು ರಾತ್ರಿಗಳನ್ನು ಕಳೆದ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಸಾಗರ್‌ಪಾಡಾ ಪ್ರದೇಶದ ಶಿವ ದೇವಾಲಯದ ಬಳಿಯ ಒಂದು ಕೋಣೆಯ ಬಾಡಿಗೆ ಮನೆಯಲ್ಲಿ ನಡೆದಿದೆ.

    ಕುನಿ ನಾಯ್ಕ್ ಮೃತ ಮಹಿಳೆ. ತಾಯಿಯ ಬಾಯಿಯಿಂದ ಕೀಟಗಳು ಹೊರಬರುವುದನ್ನು ಬಾಲಕಿಯು ಗಮನಿಸಿದ್ದು, ಸಹಾಯಕ್ಕಾಗಿ ಅಳುತ್ತಾ ತನ್ನ ನೆರೆಹೊರೆಯವರ ಬಳಿಗೆ ಹೋಗಿದ್ದಾಳೆ. ಅಕ್ಕಪಕ್ಕದವರು ಮೃತಳ ಮನೆಗೆ ಧಾವಿಸಿ ನೋಡಿದಾಗ ಆಕೆ ಶವವಾಗಿ ಬಿದ್ದಿರುವುದನ್ನು ಕಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೋಳಂಗಿರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಲಕಿಯನ್ನು ಚೈಲ್ಡ್ ಲೈನ್ ಮೂಲಕ ಸಮೀಪದ (ಸಿಡಬ್ಲ್ಯುಸಿ) ಮಕ್ಕಳ ಕಲ್ಯಾಣ ಸಮಿತಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ: ನಾಳೆಯಿಂದ ಜ.4ರ ವರೆಗೆ ರಾತ್ರಿ 10 ಗಂಟೆಯಿಂದ ಎಲ್ಲಾ ಫ್ಲೈಓವರ್ ಕ್ಲೋಸ್: ಕಮಲ್ ಪಂಥ್

    ಮೃತ ಮಹಿಳೆಯು ಸಾಗರ್‌ಪಾಡಾ ಪ್ರದೇಶದಲ್ಲಿ ಮನೆಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ತನ್ನ ಅತ್ತೆ ಮತ್ತು ಪೋಷಕರಿಂದ ಬೇರ್ಪಟ್ಟು, ತನ್ನ ಮೂರು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು. ಎರಡು ಮೂರು ದಿನಗಳ ಹಿಂದೆ ಕುನಿ ನಾಯ್ಕ್ ಮೃತಪಟ್ಟಿದ್ದಳು. ನೆರೆಹೊರೆಯವರು ನೀರು ಮತ್ತು ಆಹಾರವನ್ನು ತರುವ ಮೊದಲು ಬಾಲಕಿ ಮೂರು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದಳು ಎಂದು ಸದರ್ ಪೊಲೀಸ್‌ನ ಎಸ್‌ಡಿಪಿಒ ತೂಫಾನ್ ಬಾಗ್ ಹೇಳಿದರು. ಇದನ್ನೂ ಓದಿ: ಚರಂಡಿ ಸ್ವಚ್ಛಗೊಳಿಸುವ ವಿಚಾರಕ್ಕೆ ಜಗಳ – ದೆಹಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಗನ ಹತ್ಯೆ

    ನಾವು ಬಾಲಕಿಯನ್ನು ರಕ್ಷಿಸಿದ್ದೇವೆ. ಸದ್ಯಕ್ಕೆ ಆಕೆಯನ್ನು ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಇರಿಸಲಾಗಿದ್ದು, ಆಕೆಯ ಸಂಬAಧಿಕರನ್ನು ಸಂಪರ್ಕಿಸಿ ಹಸ್ತಾಂತರಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಚೈಲ್ಡ್ಲೈನ್ ತಂಡದ ಸದಸ್ಯ ಬಿಜಯ್ ಕುಮಾರ್ ಸಾಹು ಹೇಳಿದರು. ಇತ್ತ ಸದರ್ ಪೊಲೀಸರು ಮಹಿಳೆಯ ಕೊಳೆತ ದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  • ಲಾರಿಗೆ ವ್ಯಾನ್ ಡಿಕ್ಕಿ – 4  ಮೀನುಗಾರರು ಸಾವು

    ಲಾರಿಗೆ ವ್ಯಾನ್ ಡಿಕ್ಕಿ – 4 ಮೀನುಗಾರರು ಸಾವು

    ತಿರುವನಂತಪುರಂ: ಮಂಗಳವಾರ ಮುಂಜಾನೆ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ಸಂಭವಿಸಿದೆ.

    ಕರುಣಾಂಬರಂ (56) ಮತ್ತು ಬಾರ್ಕುಮಾನ್ಸ್ (45), ಜಸ್ಟಿನ್ (56) ಮತ್ತು ತಮಿಳುನಾಡು ಮೂಲದ ಬಿಜು (35) ಮೃತ ದುರ್ದೈವಿಗಳು. ಮೀನುಗಾರರು ಮೀನುಗಾರಿಕೆಗಾಗಿ ವಿಝಿಂಜಂನಿಂದ ಬೇಪೂರ್‍ಗೆ ತೆರಳುತ್ತಿದ್ದ ವ್ಯಾನ್ ನಿಂದಕರ್ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

    ವ್ಯಾನ್‍ನಲ್ಲಿ 34 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ಕರುನಾಗಪಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕನಿಷ್ಠ 12 ಮಂದಿ ತಮಿಳುನಾಡು ಮೂಲದವರಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಗಾಯಗೊಂಡ ಇಬ್ಬರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

  • ಬಸ್ಸಿನಿಂದ ಬಿದ್ದು ವಿದ್ಯಾರ್ಥಿ ಸಾವು

    ಬಸ್ಸಿನಿಂದ ಬಿದ್ದು ವಿದ್ಯಾರ್ಥಿ ಸಾವು

    ಹಾವೇರಿ: ಬಸ್ಸಿನಿಂದ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ನಗರದ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರುವ ಗಂಗಿಭಾವಿ ಕ್ರಾಸ್‍ನಲ್ಲಿ ನಡೆದಿದೆ.

    ವಿನಾಯಕ ಪಾಟೀಲ್ (17) ವರ್ಷ ಮೃತ ದುರ್ದೈವಿ. ವಿದ್ಯಾರ್ಥಿಯು ಶಿಗ್ಗಾಂವಿ ಪಟ್ಟಣದ ಎಸ್‍ಆರ್‍ಜೆವಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ. ಕಾಲೇಜು ಮುಗಿಸಿ ತಮ್ಮೂರು ದುಂಡಸಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬಸ್ಸಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪ್ರಾಂಶುಪಾಲೆಯ ಕಿರುಕುಳಕ್ಕೆ 5ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ 13 ವರ್ಷದ ಬಾಲಕಿ

    ಬಸ್ ಫುಲ್ ಆಗಿದ್ದರಿಂದ ಬಾಗಿಲಲ್ಲಿ ನಿಂತುಕೊಂಡಿದ್ದ ಅವನು ಬಸ್ಸಿನಿಂದ ಕೆಳಗೆ ಬೀಳುತ್ತಿದ್ದಂತೆ, ಬಸ್ಸಿನ ಗಾಲಿ ವಿದ್ಯಾರ್ಥಿ ಮುಖದ ಮೇಲೆ ಹಾಯ್ದು ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – 6 ಅಪ್ರಾಪ್ತರು ಪೊಲೀಸರ ವಶಕ್ಕೆ

    ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕಳಸ ತಾಲೂಕಿನ ರುದ್ರಪಾದ ಬಳಿ ನಡೆದಿದೆ.

    ಜೀವನ್ ದಾಸ್ (೧೭) ಮೃತದೇಹ ಪತ್ತೆಯಾಗಿದ್ದು, ನೀರು ಪಾಲಾಗಿರುವ ಮತ್ತೊಬ್ಬ ವಿದ್ಯಾರ್ಥಿ ನಿಕ್ಷೇಪ್ ಗಾಗಿ ಮುಂದುವರಿದ ಶೋಧವನ್ನು ನಡೆಸಿದ್ದಾರೆ. ಇದನ್ನೂ ಓದಿ: ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ

    ಗುರುವಾರ ಕಾಲೇಜಿಗೆ ಹೋದವರು ಮನೆಗೆ ಬಂದಿರಲಿಲ್ಲ. ಇಂದು ಹುಡುಕಾಟ ನಡೆಸಿದಾಗ ಭದ್ರಾ ನದಿಯ ದಡದಲ್ಲಿ ಅವರ ಮೊಬೈಲ್, ಡ್ರೆಸ್ ಪತ್ತೆಯಾಗಿದೆ. ನೀರುಪಾಲಾದ ವಿದ್ಯಾರ್ಥಿಗಳು ಹಿರೇಬೈಲ್ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿರುವದಾಗಿ ತಿಳಿದು ಬಂದಿದ್ದು, ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು