Tag: INC

  • ಶ್ರೀದೇವಿ ನಿಧನದ ಬಗ್ಗೆ ಕಾಂಗ್ರೆಸ್ ಟ್ವೀಟ್‍ಗೆ ಜನರ ಆಕ್ರೋಶ

    ಶ್ರೀದೇವಿ ನಿಧನದ ಬಗ್ಗೆ ಕಾಂಗ್ರೆಸ್ ಟ್ವೀಟ್‍ಗೆ ಜನರ ಆಕ್ರೋಶ

    ನವದೆಹಲಿ: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಶನಿವಾರದಂದು ಕೊನೆಯುಸಿರೆಳೆದಿದ್ದು, ಈ ಬಗ್ಗೆ ಕಾಂಗ್ರೆಸ್ ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸಿದೆ. ಆದ್ರೆ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶ್ರೀದೇವಿ ನಿಧನದ ಸುದ್ದಿ ಕೇಳಿ ಬಾಲಿವುಡ್ ಮಾತ್ರವಲ್ಲದೆ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ನಟಿಯ ನಿಧನಕ್ಕೆ ಹಲವಾರು ಬಾಲಿವುಡ್ ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಐಎನ್‍ಸಿ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲೂ ಕೂಡ ಸಂತಾಪ ಸೂಚಿಸಲಾಗಿದ್ದು, “ಶ್ರೀದೇವಿ ಅವರ ನಿಧನದ ಸುದ್ದಿ ಕೇಳಿ ವಿಷಾದಿಸುತ್ತೇವೆ. ಅವರು ಅತ್ಯುತ್ತಮ ನಟಿ. ಅವರು ನಮ್ಮ ಹೃದಯದಲ್ಲಿ ಎಂದೆಂದಿಗೂ ನೆಲೆಸಿರುತ್ತಾರೆ. ಅವರ ಪ್ರೀತಿಪಾತ್ರರಿಗೆ ನಮ್ಮ ಸಂತಾಪ. ಅವರಿಗೆ 2013 ರಲ್ಲಿ ಯುಪಿಎ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು” ಎಂದು ಟ್ವೀಟ್ ಮಾಡಲಾಗಿದೆ.

    ಟ್ವೀಟ್ ಪೋಸ್ಟ್ ಆದ ಬಳಿಕ ಕಾಂಗ್ರೆಸ್ ವಿರುದ್ಧ ಟ್ವಿಟ್ಟರಿಗರು ಕಿಡಿ ಕಾರಿದ್ದಾರೆ. ಸಾವಿನ ಸಂದರ್ಭದಲ್ಲೂ ರಾಜಕೀಯ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಯುಪಿಎ ಸರ್ಕಾರದ ಸಂದರ್ಭದಲ್ಲಿ ನೀಡಿದ್ದು ಎಂದು ಹೇಳುವ ಅಗತ್ಯವೇನಿದೆ? ಅಂಥ ದೊಡ್ಡ ನಟಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಇಂಥ ಸಾಲುಗಳ ಅಗತ್ಯವಿದಯಾ? ಪ್ರಶಸ್ತಿಯನ್ನ ಭಾರತ ಸರ್ಕಾರ ನೀಡಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜನರಿಂದ ಖಂಡನೆ ವ್ಯಕ್ತವಾದ ಬಳಿಕ ಕಾಂಗ್ರೆಸ್ ಈ ಹಿಂದೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದೆ. ಬಳಿಕ 4 ಟ್ವೀಟ್ ಮಾಡಿ ತನ್ನ ಸಂತಾಪವನ್ನು ಸೂಚಿಸಿದೆ.

    ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ನಟಿಯ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಶ್ರೀದೇವಿ ಅವರ ಅಕಾಲಿಕ ಮರಣದ ಸುದ್ದಿ ಕೇಳಿ ಆಘಾತವಾಗಿದೆ. ಅವರು ಅತ್ಯುತ್ತಮ ನಟಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

    https://www.youtube.com/watch?v=Q-TaTMBm5XM