Tag: Inaugration

  • ವಾಸ್ತು ಪ್ರಕಾರ ಮೀಟಿಂಗ್ ಹಾಲ್ ಟೇಬಲ್ ದಿಕ್ಕು ಬದಲಾಯಿಸಲು ರೇವಣ್ಣ ಸೂಚನೆ

    ವಾಸ್ತು ಪ್ರಕಾರ ಮೀಟಿಂಗ್ ಹಾಲ್ ಟೇಬಲ್ ದಿಕ್ಕು ಬದಲಾಯಿಸಲು ರೇವಣ್ಣ ಸೂಚನೆ

    ಹುಬ್ಬಳ್ಳಿ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಪ್ರವಾಸಿ ಮಂದಿರ ಉದ್ಘಾಟನೆಗೆ ಹೋಗಿ ವಾಸ್ತು ಪ್ರಕಾರ ಮೀಟಿಂಗ್ ಹಾಲ್ ಟೇಬಲ್‍ನ ದಿಕ್ಕನ್ನೇ ಬದಲಾಯಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಗಾಗಿ ಸಚಿವ ರೇವಣ್ಣ ಅವರು ಆಗಮಿಸಿದ್ದರು. ಈ ವೇಳೆ ಮೀಟಿಂಗ್ ಹಾಲ್ ನ ಟೇಬಲ್ ನ ದಿಕ್ಕು ಬದಲಿಸುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ರೇವಣ್ಣ ಬೆಳಿಗ್ಗೆ ಐಬಿ ಉದ್ಘಾಟನೆ ಮಾಡಿ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದರು. ಅಲ್ಲಿ ವಾಸ್ತು ಸರಿ ಬಾರದ ಕಾರಣ ಮೀಟಿಂಗ್ ಹಾಲಿನ ಟೇಬಲ್ ಗಳನ್ನು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಹಾಕಲು ಸೂಚಿಸಿದ್ದಾರೆ. ಹೀಗಾಗಿ ಸಚಿವ ರೇವಣ್ಣ ಅವರ ಸೂಚನೆ ಹಿನ್ನಲೆಯಲ್ಲಿ ಸಿಬ್ಬಂದಿ ಮತ್ತೆ ಕೆಲಸ ಶುರು ಮಾಡಿದ್ದಾರೆ. ಮೀಟಿಂಗ್ ಹಾಲಿನಲ್ಲಿ ಹಾಕಲಾಗಿದ್ದ ಉದ್ದ ಟೇಬಲ್ ಗಳನ್ನು ಈಗ ಬದಲಿಸುವ ಕಾರ್ಯ ನಡೆಯುತ್ತಿದೆ.

    ಕೆಲ ದಿನಗಳ ಹಿಂದೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆಶಿಪ್) ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ರೇವಣ್ಣ ಅವರು ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರೂ ಕಾರಿನಿಂದ ಇಳಿದಿರಲಿಲ್ಲ. ರಾಹುಕಾಲ ಮುಗಿದ ಬಳಿಕವೇ ರೇವಣ್ಣ ವಾಹನದಿಂದ ಇಳಿದಿದ್ದಾರೆ. ರೇವಣ್ಣ ಅವರು ಕಾರ್ಯಕ್ರಮಕ್ಕೆ 9.40ಕ್ಕೆ ಆಗಮಿಸಿದ್ದರೂ ರಾಹುಕಾಲ ಮುಗಿದ ಬಳಿಕ 9.54ಕ್ಕೆ ಕಾರಿನಿಂದ ಇಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಲ್ಲಿ ಯುವ ದಸರಾ ಸಂಭ್ರಮ – ಯೂತ್ಸ್ ಉತ್ಸಾಹ ಹೆಚ್ಚಿಸಿದ್ರು ನಟಿ ಹರ್ಷಿಕಾ

    ಮೈಸೂರಲ್ಲಿ ಯುವ ದಸರಾ ಸಂಭ್ರಮ – ಯೂತ್ಸ್ ಉತ್ಸಾಹ ಹೆಚ್ಚಿಸಿದ್ರು ನಟಿ ಹರ್ಷಿಕಾ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2018ರ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಯುವ ಸಂಭ್ರಮಕ್ಕೆ ಚಾಲನೆ ನೀಡಲಾಗಿದ್ದು, ನಟಿ ಹರ್ಷಿಕಾ ಪೂಣಚ್ಚ ಯೂತ್ಸ್ ಉತ್ತಾಹ ಹೆಚ್ಚಿಸಿದ್ದಾರೆ.

    ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಡೋಲು ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಎಸ್‍ಪಿ ಅಮಿತ್ ಸಿಂಗ್ ಉಪಸ್ಥಿತರಿದ್ದರು.

    ಯುವ ಸಂಭ್ರಮಕ್ಕೆ ನಟಿ ಹರ್ಷಿಕಾ ಪೂರ್ಣಚ್ಚ ತಾರಾ ಮೆರಗು ನೀಡಿದರು. ಭಾನುವಾರದಿಂದ ಅಕ್ಟೋಬರ್ 7ರ ವರೆಗೂ ಯುವ ಸಂಭ್ರಮ ನಡೆಯಲಿದ್ದು, ಪ್ರತಿದಿನ 20 ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

    ಯುಕ್ರೆನ್ ದೇಶದ ಯುಲಿಯಾ ನೃತ್ಯಗಾರ್ತಿ ವಿಶೇಷ ನೃತ್ಯ ಮಾಡಿದ್ದಾರೆ. ಕ್ಲಸ್ಟರ್ ಇಲಿಯಂ ಬಲೂನ್ ಮೂಲಕ ನೃತ್ಯ ಮಾಡಲಾಗಿದ್ದು, ಬಯಲು ರಂಗಮಂದಿರದ ಯುವ ಸಂಭ್ರಮದಲ್ಲಿ ಯುವ ಸಮೂಹ ಮಿಂದೆದ್ದಿದ್ದಾರೆ.

    ವಿಂಟೇಜ್ ಕಾರು ರ‍್ಯಾಲಿ ಕೂಡ ಮೈಸೂರಿಗೆ ತಲುಪಿದೆ. ಐತಿಹಾಸಿಕ ವಾಹನಗಳ ಭಾರತದ ಕಾರು ಒಕ್ಕೂಟ ಹಾಗೂ ಯುನೆಸ್ಕೋ ಸಹಯೋಗದಲ್ಲಿ ಕಾರ್ ರ‍್ಯಾಲಿ ನಡೆದಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ರ‍್ಯಾಲಿ ಉದ್ಘಾಟಿಸಿದ್ದರು. ವಿಧಾನಸೌಧ ಆವರಣದಲ್ಲಿ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದರು.

    ಬೆಂಜ್, ಫೋಕ್ಸ್ ವಾಗನ್, ಬೀಡಲ್ ಕಾರು ಸೇರಿದಂತೆ 19ನೇ ಶತಮಾನದ ಕಾರ್ ಗಳ ರ‍್ಯಾಲಿ ನಡೆದಿದೆ. ಸದ್ಯ ವಿಂಟೇಜ್ ಕಾರುಗಳನ್ನು ನೋಡಲು ಜನತೆ ಮುಗಿಬಿದ್ದಿದ್ದು, ಕಾರುಗಳು ಲಲಿತ್ ಮಹಲ್ ತಲುಪಿದೆ. ಸಚಿವ ಜಿ.ಟಿ ದೇವೇಗೌಡ ವಿಂಟೇಜ್ ಕಾರಿನಲ್ಲಿ ಸುತ್ತು ಹೊಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಬಳ್ಳಾಪುರದಲ್ಲಿ ನಟಿ ಖುಷ್ಬುರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ

    ಚಿಕ್ಕಬಳ್ಳಾಪುರದಲ್ಲಿ ನಟಿ ಖುಷ್ಬುರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ

    ಚಿಕ್ಕಬಳ್ಳಾಪುರ: ಶಾಸಕ ಕೆ.ಸುಧಾಕರ್ ಓಡೆತನದ ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಹುಭಾಷಾ ತಾರೆ ಖ್ಯಾತ ನಟಿ ಖುಷ್ಬು ಉದ್ಘಾಟಿಸಿದ್ದಾರೆ.

    ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ನಟಿ ಖುಷ್ಬು ನಗರದ 5 ವಾರ್ಡ್‍ಗಳಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿದರು.

    ಶಾಸಕ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರ 20 ವಾರ್ಡ್ ಗಳಲ್ಲಿ ಅಮೃತ ಗಂಗೆ ಎನ್ನುವ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.