Tag: Imports

  • ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ

    ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ

    ನವದೆಹಲಿ: ಭಾರತ ಸರ್ಕಾರವು (India) ಬಾಂಗ್ಲಾದೇಶದಿಂದ (Bangladesh) ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯಾದ್ಯಂತ ಎಲ್ಲಾ ಭೂಮಾರ್ಗಗಳ ಮೂಲಕ ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

    ಅಧಿಕೃತ ಮೂಲಗಳ ಪ್ರಕಾರ, ಬಾಂಗ್ಲಾದೇಶದಿಂದ ಆಮದಾಗುವ ಎಲ್ಲಾ ಸರಕುಗಳು ಕೇವಲ ಮಹಾರಾಷ್ಟ್ರದ ಜವಾಹರಲಾಲ್ ನೆಹರು ಬಂದರು (ನ್ಹಾವಾ ಶೇವಾ) ಮೂಲಕವೇ ಭಾರತಕ್ಕೆ ಪ್ರವೇಶಿಸಲು ಅನುಮತಿ ಇರಲಿದೆ ಎಂದು ತಿಳಿಸಿವೆ. ಈ ಕ್ರಮವು ಗಡಿ ವ್ಯಾಪಾರದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಜವಾಹರಲಾಲ್ ನೆಹರು ಬಂದರಿನಲ್ಲಿ ಕಟ್ಟುನಿಟ್ಟಾದ ತಪಾಸಣೆ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ – ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ

    ಬಾಂಗ್ಲಾದೇಶದಿಂದ ಆಮದಾಗುವ ಜವಳಿ, ಕೃಷಿ ಉತ್ಪನ್ನಗಳು ಮತ್ತು ಇತರ ಅಗತ್ಯವಸ್ತುಗಳು ಈಗ ಒಂದೇ ಬಂದರಿನ ಮೂಲಕ ಬರಬೇಕಾಗಿರುವುದರಿಂದ, ವ್ಯಾಪಾರಿಗಳಿಗೆ ಲಾಜಿಸ್ಟಿಕ್ಸ್ ವೆಚ್ಚ ಹೆಚ್ಚಾಗಬಹುದು ಎನ್ನಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಸರ್ಕಾರವು ಇನ್ನೂ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಗಡಿ ಭದ್ರತೆ, ಕಳ್ಳಸಾಗಾಣಿಕೆ ನಿಯಂತ್ರಣ ಮತ್ತು ಆರ್ಥಿಕ ನೀತಿಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

    ಈ ಬದಲಾವಣೆಯಿಂದ ಗಡಿಪ್ರದೇಶದ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸದ್ಯ ಚರ್ಚೆಗಳು ಆರಂಭವಾಗಿವೆ. ಸರ್ಕಾರವು ಈ ನಿರ್ಬಂಧದಿಂದ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.ಇದನ್ನೂ ಓದಿ: ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು

  • ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    – ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿ
    – ಯುಎಸ್‌ನಲ್ಲಿ 600 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಡೀಲ್‌

    ವಾಷಿಂಗ್ಟನ್‌: ಯುರೋಪಿಯನ್‌ ಒಕ್ಕೂಟದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದವನ್ನ (Biggest Trade Deal) ಘೋಷಣೆ ಮಾಡಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಒಕ್ಕೂಟದಿಂದ ಬರುವ ಆಮದುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

    ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್‌ ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲೆ ಸುಂಕ ಸಮರ (Tariffs war) ಸಾರಿದ್ದಾರೆ. ಕೆಲ ದಿನಗಳ ಹಿಂದೆ ಟ್ರಂಪ್‌ 14 ದೇಶಗಳ ಮೇಲೆ ಸುಂಕ ವಿಧಿಸಿದ್ದರು. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. ಆದ್ರೆ ಈ ಪಟ್ಟಿಯಲ್ಲಿ ಭಾರತವನ್ನ ಹೊರಗಿಟ್ಟಿದ್ದರು. ಮುಂಬರುವ ಆಗಸ್ಟ್‌ 1ರಿಂದ ಯುರೋಪಿಯನ್‌ ಒಕ್ಕೂಟದ (European Union) ರಫ್ತಿನ ಮೇಲೆ 30% ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಿದ್ದರು. ಈ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, 30% ಸುಂಕದಿಂದ ಬಚಾವ್‌ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

    ಸ್ಕಾಟ್ಲೆಂಡ್‌ನಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್‌ ನಡುವಿನ ಮಹತ್ವದ ಸಭೆಯಲ್ಲಿ ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ಯುರೋಪಿನ್‌ನಿಂದ ರಫ್ತಾಗುವ ಆಟೋಮೊಬೈಲ್, ಔಷಧಗಳು ಮತ್ತು ಅರೆವಾಹಕ ಸೇರಿದಂತೆ ಇತರೇ ಸರಕುಗಳ ಮೇಲೆ 15% ಸುಂಕವನ್ನಷ್ಟೇ ವಿಧಿಸಲಾಗುತ್ತದೆ.

    ನಾವು ಒಂದೊಳ್ಳೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಯಾವುದೇ ಸಾಮರ್ಥಯದಲ್ಲೂ ಈವರೆಗಿನ ಅತಿದೊಡ್ಡ ಒಪ್ಪಂದ ಇದೆಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಟೇಕಾಫ್‌ ವೇಳೆ ಕೈಕೊಟ್ಟ ಲ್ಯಾಂಡಿಂಗ್‌ ಗೇರ್‌ – ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

    ಮುಂದುವರಿದು… ಜೊತೆಗೆ ಒಪ್ಪಂದದ ಭಾಗವಾಗಿ 27 ರಾಷ್ಟ್ರಗಳ ಯುರೋಪಿಯನ್‌ ಒಕ್ಕೂಟ ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿಸಲಿದೆ. ಜೊತೆಗೆ ಅಮೆರಿಕದಲ್ಲಿ 600 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

  • ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ

    ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ

    ನವದೆಹಲಿ: ಪ್ರತಿ ಕೆಜಿಗೆ 50 ರೂ.ಗಿಂತಲೂ ಕಡಿಮೆಯಿರುವ ಸೇಬು ಹಣ್ಣನ್ನು (Apples) ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ (Central Government) ನಿಷೇಧಿಸಿದೆ.

    ಪ್ರತಿ ಕೆಜಿಗೆ 50ಕ್ಕಿಂತ ಹೆಚ್ಚಿದ್ದರೆ ಆಮದು (Imports) ಮಾಡಬಹುದು ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

    ಸಿಐಎಫ್ (ವೆಚ್ಚ, ವಿಮೆ, ಸರಕು ಸಾಗಣೆ) ಆಮದು ಬೆಲೆ (Price) ಪ್ರತಿ ಕೆಜಿಗೆ 50ಕ್ಕಿಂತಲೂ ಕಡಿಮೆ ಇದ್ದರೆ ಸೇಬುಗಳ ಆಮದನ್ನು ನಿಷೇಧಿಸಲಾಗಿದೆ ಎಂದು ಡಿಜಿಎಫ್‍ಟಿ ಅಧಿಸೂಚನೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕರಿ ಜೊತೆಗೆ ಅನ್ನ ಮಾಡಿಲ್ಲ ಅಂತಾ ಪತ್ನಿಯನ್ನ ಹೊಡೆದೇ ಕೊಂದ ಪಾಪಿ ಗಂಡ

    ಭೂತಾನ್‍ನಿಂದ ಆಮದು ಮಾಡುಕೊಳ್ಳುತ್ತಿರುವ ಸೇಬುಹಣ್ಣುಗಳಿಗೆ ಕನಿಷ್ಠ ಆಮದು ಬೆಲೆಯ ಷರತ್ತು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಯುಎಸ್, ಇರಾನ್, ಬ್ರೆಜಿಲ್, ಯುಎಇ, ಅಫ್ಘಾನಿಸ್ತಾನ, ಫ್ರಾನ್ಸ್, ಬೆಲ್ಜಿಯಂ, ಚಿಲಿ, ಇಟಲಿ, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪೋಲೆಂಡ್ ದಕ್ಷಿಣ ಆಫ್ರಿಕಾ ದೇಶವು ಭಾರತಕ್ಕೆ ಸೇಬು ರಫ್ತು ಮಾಡುತ್ತವೆ. ಇದನ್ನೂ ಓದಿ: Karnataka Election 2023; ಮತದಾರರ ಸೆಳೆಯಲು ಬೆಂಗಳೂರಲ್ಲಿ ವಿಶೇಷ ಮತಗಟ್ಟೆ

  • ರಷ್ಯಾ ಈಗ ಭಾರತದ 2ನೇ ಅತಿ ದೊಡ್ಡ ತೈಲ ಪೂರೈಕೆದಾರ

    ರಷ್ಯಾ ಈಗ ಭಾರತದ 2ನೇ ಅತಿ ದೊಡ್ಡ ತೈಲ ಪೂರೈಕೆದಾರ

    ನವದೆಹಲಿ: ರಷ್ಯಾ (Russia) ಇದೀಗ ಭಾರತದ (India) 2ನೇ ಅತಿ ದೊಡ್ಡ ಕಚ್ಚಾ ತೈಲ (Crude Oil) ಪೂರೈಕೆದಾರನಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಭಾರತ ರಷ್ಯಾದಿಂದ ಆಮದು ಮಾಡಿದ ತೈಲ ಶೇ.18.5 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.

    ಭಾರತ ಜೂನ್‌ನಲ್ಲಿ ರಷ್ಯಾದಿಂದ ದಿನಕ್ಕೆ 9,33,000 ಬ್ಯಾರೆಲ್‌ನಷ್ಟು ತೈಲವನ್ನು ಆಮದು ಮಾಡಿಕೊಂಡಿತ್ತು. ಬಳಿಕ ಕಚ್ಚಾ ತೈಲದ ಆಮದು 2 ತಿಂಗಳು ಕುಸಿದ ಬಳಿಕ ಸೆಪ್ಟೆಂಬರ್‌ನಲ್ಲಿ ದಿನಕ್ಕೆ 8,79,000 ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿದೆ. ಈ ಮೂಲಕ ಇದೀಗ ಭಾರತಕ್ಕೆ ಸೌದಿ ಅರೇಬಿಯಾದ ಬಳಿಕ ರಷ್ಯಾ ಅತಿ ಹೆಚ್ಚು ತೈಲ ರಫ್ತು ಮಾಡುವ ದೇಶ ಎನಿಸಿಕೊಂಡಿದೆ.

    ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಭಾರತಕ್ಕೆ ಕೇವಲ ಶೇ.1 ರಷ್ಟು ತೈಲವನ್ನು ಪೂರೈಕೆ ಮಾಡುತ್ತಿತ್ತು. ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ಕಚ್ಚಾ ತೈಲವನ್ನು ಭಾರೀ ರಿಯಾಯಿತಿಯಲ್ಲಿ ನೀಡಲು ಆರಂಭಿಸಿದ ರಷ್ಯಾದಿಂದ ಭಾರತ ಭಾರೀ ಪ್ರಮಾಣದಲ್ಲಿ ಆಮದನ್ನು ಹೆಚ್ಚಿಸಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ತೈಲ ಆಮದು ಮಾಡುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಭಾರತ ರಷ್ಯಾದಿಂದ ಆಮದನ್ನು ಹೆಚ್ಚಿಸುತ್ತಿದ್ದಂತೆ ಅಮೆರಿಕ, ಇರಾಕ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳಿಗೆ ಭಾರೀ ಹೊಡೆತ ಉಂಟಾಗಿದೆ. ಕಳೆದ ತಿಂಗಳು ಸೌದಿ ಅರೇಬಿಯಾ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರನಾಯಿತು. ಆದರೆ ಇರಾಕ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನ ಈಗ 3 ಹಾಗೂ 4 ನೇ ಸ್ಥಾನಕ್ಕೆ ಕುಸಿದಿವೆ. ಇದನ್ನೂ ಓದಿ: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗ್ತಿವೆ : ಕಾಂಗ್ರೆಸ್‌

    Live Tv
    [brid partner=56869869 player=32851 video=960834 autoplay=true]

  • ಕಷ್ಟದ ದಿನಗಳು ಹತ್ತಿರದಲ್ಲೇ ಇದೆ: ಪಾಕಿಸ್ತಾನ ಹಣಕಾಸು ಸಚಿವ ಎಚ್ಚರಿಕೆ

    ಕಷ್ಟದ ದಿನಗಳು ಹತ್ತಿರದಲ್ಲೇ ಇದೆ: ಪಾಕಿಸ್ತಾನ ಹಣಕಾಸು ಸಚಿವ ಎಚ್ಚರಿಕೆ

    ಇಸ್ಲಾಮಾಬಾದ್: ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಕಷ್ಟದ ದಿನಗಳು ಶೀಘ್ರವೇ ತಲೆದೋರಲಿದೆ. ಹೀಗಾಗಿ ಮುಂದಿನ 3 ತಿಂಗಳು ಆಮದುಗಳನ್ನು ನಿರ್ಬಂಧಿಸುವುದನ್ನು ಮುಂದುವರಿಸುವುದೇ ಉತ್ತಮ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಹೇಳಿದ್ದಾರೆ.

    ಪಾಕಿಸ್ತಾನ ಸ್ಟಾಕ್ ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ಮಾಯಿಲ್, ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್‌ನ ಆಡಳಿತದ ಆರ್ಥಿಕ ನೀತಿಗಳಿಂದ ಈಗಿನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಸಂಕಷ್ಟದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್

    ಹಿಂದಿನ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಸರ್ಕಾರದ ಅವಧಿಯಲ್ಲಿ ದೇಶದ ಬಜೆಟ್ ಕೊರತೆ 1,600 ಶತಕೋಟಿ ಡಾಲರ್‌ನಷ್ಟು(12 ಸಾವಿರ ಕೋಟಿ ರೂ.) ಆಗಿತ್ತು. ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಆಡಳಿತದಲ್ಲಿ ಆ ಅಂಕಿ 3,500 ಶತಕೋಟಿ ಡಾಲರ್‌ಗೆ(27 ಸಾವಿರ ಕೋಟಿ ರೂ.) ಏರಿತು. ಈ ರೀತಿಯ ಕೊರತೆಗಳಿಂದ ಯಾವುದೇ ದೇಶ ಬೆಳೆಯಲು ಹಾಗೂ ಸ್ಥಿರವಾಗಿರಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಈ ಹಿನ್ನೆಲೆ ಮುಂದಿನ 3 ತಿಂಗಳುಗಳವರೆಗೆ ಆಮದುಗಳನ್ನು ಹೆಚ್ಚಿಸಲು ನಾನು ಅನುಮತಿ ನೀಡುವುದಿಲ್ಲ. ಇದರಿಂದ ದೇಶ ಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನಮಗೀಗ ಬೇರೆ ದಾರಿಯಿಲ್ಲ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಪೂರೈಕೆದಾರ ರಷ್ಯಾ

    ಭಾರತದ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಪೂರೈಕೆದಾರ ರಷ್ಯಾ

    ಮಾಸ್ಕ್: ಜುಲೈನಲ್ಲಿ ರಷ್ಯಾ ಭಾರತದ ಮೂರನೇ ಅತಿದೊಡ್ಡ ಕಲ್ಲಿದ್ದಲು ಪೂರೈಕೆದಾರ ಆಗಿ ಹೊರಹೊಮ್ಮಿದೆ.

    coal

    ಜೂನ್‍ಗೆ ಹೋಲಿಸಿದರೆ ಐದನೇ ಒಂದು ಭಾಗದಷ್ಟು ಆಮದುಗಳು ದಾಖಲೆಯ 2.06 ಮಿಲಿಯನ್ ಟನ್‍ಗಳಿಗೆ ಏರಿದೆ ಎಂದು ಭಾರತೀಯ ಸಲಹಾ ಸಂಸ್ಥೆ ಕೋಲ್‍ಮಿಂಟ್‍ನ ಮಾಹಿತಿಯು ತಿಳಿಸಿದೆ. ರಷ್ಯಾ ಐತಿಹಾಸಿಕವಾಗಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಂತರ ಭಾರತಕ್ಕೆ ಕಲ್ಲಿದ್ದಲಿನ ಆರನೇ ಅತಿದೊಡ್ಡ ಪೂರೈಕೆದಾರವಾಗಿದೆ. ಟಾಪ್ ಐದರಲ್ಲಿ ಮೊಜಾಂಬಿಕ್ ಮತ್ತು ಕೊಲಂಬಿಯಾ ಕಾಣಿಸಿಕೊಂಡಿವೆ.

    ರಷ್ಯಾದೊಂದಿಗಿನ ದ್ವಿಪಕ್ಷೀಯ ವ್ಯಾಪಾರಕ್ಕೆ ಪ್ರಮುಖ ಪೂರಕತೆಯನ್ನು ಒದಗಿಸಲು ಭಾರತೀಯ ರೂಪಾಯಿಯಲ್ಲಿ ಸರಕುಗಳಿಗೆ ಪಾವತಿಗಳನ್ನು ಅನುಮತಿಸಲು ತನ್ನ ಕೇಂದ್ರೀಯ ಬ್ಯಾಂಕ್‍ನ ಇತ್ತೀಚಿನ ಅನುಮೋದನೆಯನ್ನು ಭಾರತ ನಿರೀಕ್ಷಿಸುತ್ತಿದೆ. ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವುದು ಸುಮಾರು ಐದು ಪಟ್ಟು ಹೆಚ್ಚು ಮಾಡಿದೆ. ಇದನ್ನೂ ಓದಿ:  ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್ 

    ಕಾರಣವೇನು?
    ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ, ಆಮದುದಾರ ಮತ್ತು ಕಲ್ಲಿದ್ದಲಿನ ಗ್ರಾಹಕ ಭಾರತ, ಐತಿಹಾಸಿಕವಾಗಿ ಹೆಚ್ಚು ಕೋಕಿಂಗ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಗ್ರಾಹಕರಿಗೆ ರಷ್ಯಾದ ಪೂರೈಕೆದಾರರು ನೀಡಿದ ರಿಯಾಯಿತಿಗಳು ಕಲ್ಲಿದ್ದಲಿನ ಹೆಚ್ಚಿನ ಖರೀದಿಯನ್ನು ಉತ್ತೇಜಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ

    ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ

    ನವದೆಹಲಿ: ರಷ್ಯಾ ತನ್ನ ಕಚ್ಚಾ ತೈಲದ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ್ದು, ಭಾರತ ಇದೀಗ ರಷ್ಯಾದಿಂದ ಭಾರೀ ಪ್ರಮಾಣದ ತೈಲ ಖರೀದಿಗೆ ಮುಂದಾಗಿದೆ.

    ಭಾರೀ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ 3.5 ಮಿಲಿಯನ್(35 ಲಕ್ಷ) ಬ್ಯಾರೆಲ್ ತೈಲ ಖರೀದಿಗೆ ಮುಂದಾಗಿದೆ. ಆದರೆ ಅದನ್ನು ಭಾರತಕ್ಕೆ ತರಿಸುವುದು ಸವಾಲಿನ ವಿಷಯವಾಗಿತ್ತು. ಇದೀಗ ರಷ್ಯಾ ಶಿಪ್ಪಿಂಗ್ ಮತ್ತು ವಿಮೆಯ ಜವಾಬ್ದಾರಿ ವಹಿಸಿದ್ದು ಭಾರತಕ್ಕೆ ತೈಲ ರವಾನಿಸುವಲ್ಲಿ ಸಹಾಯ ಮಾಡುವುದಾಗಿ ತಿಳಿಸಿದೆ.

    ಭಾರತ ರಷ್ಯಾದಿಂದ ತರಿಸಿಕೊಳ್ಳುತ್ತಿರುವ ತೈಲದ ಸ್ಥಳಾಂತರ ಹಾಗೂ ಸಬ್ಸಿಡಿಗಳ ಬಗ್ಗೆ ರಷ್ಯಾ ಜವಾಬ್ದಾರಿವಹಿಸುತ್ತದೆ ಎಂದು ತಿಳಿಸಿದೆ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಈರುಳ್ಳಿ, ಆಲೂಗಡ್ಡೆ ತಿಂದು ಯುದ್ಧ ಮಾಡುತ್ತಿದ್ದಾರೆ ರಷ್ಯಾ ಸೈನಿಕರು

    ಸದ್ಯ ರಷ್ಯಾ ಭಾರತದ ಬೇಡಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಪೂರೈಸಲಿದೆ ಎಂದು ತಿಳಿಸಿದೆ. ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಏಪ್ರಿಲ್ 2021 ಹಾಗೂ ಜನವರಿ 2022ರ ನಡುವೆ ರಷ್ಯಾದಿಂದ 176 ಮಿಲಿಯನ್(1.76 ಕೋಟಿ) ಟನ್‌ಗಳಷ್ಟು ಅಂದರೆ ಭಾರತದ ಬೇಡಿಕೆಯ ಶೇ.2 ರಷ್ಟು ಕಚ್ಚ ತೈಲವನ್ನು ಆಮದು ಮಾಡಿಕೊಂಡಿತ್ತು. ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

    ರಷ್ಯಾದೊಂದಿಗೆ ಡಾಲರ್ ಮೂಲಕ ವ್ಯವಹಾರ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ರುಪಿ ರೂಬೆಲ್ ಮೂಲಕ ವ್ಯವಹಾರ ನಡಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಇದು ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.

  • ಮತ್ತೊಂದು ಹೊಡೆತ – ಚೀನಾದಿಂದ ಟಿವಿ ಆಮದಿಗೆ ನಿರ್ಬಂಧ

    ಮತ್ತೊಂದು ಹೊಡೆತ – ಚೀನಾದಿಂದ ಟಿವಿ ಆಮದಿಗೆ ನಿರ್ಬಂಧ

    ನವದೆಹಲಿ: ಗಲ್ವಾನ್‌ ಘರ್ಷಣೆಯ ಬಳಿಕ ಅಪ್ಲಿಕೇಶನ್‌ಗಳು ನಿಷೇಧಿಸಿ ಹೊಡೆತ ನೀಡಲು ಆರಂಭಿಸಿದ ಭಾರತ ಈಗ ಚೀನಾದಿಂದ ಟಿವಿ ಆಮದು ಮಾಡುವುದಕ್ಕೆ ನಿರ್ಬಂಧ ಹೇರಿದೆ.

    ವಿದೇಶ ವ್ಯಾಪಾರದ ಮಹಾನಿರ್ದೇಶನಾಲಯ(ಡಿಜಿಎಫ್‌ಟಿ) ಗುರುವಾರ ಈ ಆದೇಶ ಹೊರಡಿಸಿ ಟಿವಿ ಸೆಟ್‌ಗಳ ಆಮದನ್ನು ʼಮುಕ್ತʼ ವಿಭಾಗದಿಂದ ʼನಿರ್ಬಂಧಿತʼ ವಿಭಾಗಕ್ಕೆ ಸೇರಿಸಿದೆ.

    ಈ ಆದೇಶದ ಪ್ರಕಾರ ಇನ್ನು ಮುಂದೆ 36 ಸೆಂ.ಮೀ ಒಳಗಿನ ಸ್ಕ್ರೀನ್‌ನಿಂದ ಆರಂಭಿಸಿ 105 ಸೆಂ.ಮೀಗಿಂತ ದೊಡ್ಡ ಅಳತೆಯಿ ಟಿವಿ ಸೆಟ್‌ಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಇದರ ಜೊತೆ 63 ಸೆಂ.ಮೀ ವರೆಗಿನ ಎಲ್‌ಸಿಡಿ ಟಿವಿ ಸೆಟ್‌ಗಳನ್ನು ಆಮದು ಮಾಡುವಂತಿಲ್ಲ.

    ಇನ್ನು ಮುಂದೆ ಟಿವಿಯನ್ನು ನಿರ್ಬಂಧಿತ ವಿಭಾಗದಲ್ಲಿದ್ದು, ಟೀವಿಯನ್ನು ಆಮದು ಮಾಡಬೇಕಾದರೆ ಡೀಲರ್‌ಗಳು ಡಿಜಿಎಫ್‌ಟಿಯಿಂದ ಲೈಸೆನ್ಸ್‌ ಪಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತದಲ್ಲಿ ಅತಿ ದೊಡ್ಡ ಟಿವಿ ಮಾರುಕಟ್ಟೆಯಿದ್ದು ಈ ಪೈಕಿ ಶೇ.36ರಷ್ಟು ಚೀನಾದಿಂದ ಆಮದು ಆಗುತ್ತಿದೆ. ಚೀನಾ ಅಲ್ಲದೇ ವಿಯೆಟ್ನಾಂ, ಮಲೇಷ್ಯಾ, ಹಾಂಕಾಂಗ್‌, ಕೊರಿಯಾ, ಇಂಡೋನೇಷ್ಯಾ, ಥಾಯ್ಲೆಂಡ್‌ ಮತ್ತು ಜರ್ಮನಿಯಿಂದ ಕಲರ್‌ ಟೀವಿಗಳನ್ನು ಆಮದು ಮಾಡಿಕೊಳ್ಳುತ್ತಿದೆ.

    ಸರ್ಕಾರದ ಈ ನಡಗೆ ಗೋಡ್ರೆಜ್‌ ಕಂಪನಿಯ ಬಿಸಿನೆಸ್‌ ಹೆಡ್‌ ಮತ್ತು ಉಪಾಧ್ಯಕ್ಷ ಕಮಲ್‌ ನಂದಿ ಪ್ರತಿಕ್ರಿಯಿಸಿ, ಸರ್ಕಾರ ದಿಟ್ಟ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆಮದಿನ ಮೇಲೆ ನಿರ್ಬಂಧ ಹೇರಿದ್ದರಿಂದ ಭಾರತೀಯ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಹುತೇಕ ದೊಡ್ಡ ಬ್ರಾಂಡ್‌ಗಳು ಭಾರತದಲ್ಲೇ ಉತ್ಪಾದನಾ ಘಟಕವನ್ನು ಹೊಂದಿದೆ. ಈ ನಿರ್ಧಾರದಿಂದ ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

    ಮಾರ್ಚ್‌ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 781 ದಶಲಕ್ಷ ಡಾಲರ್‌ ಮೌಲ್ಯದ ಟಿವಿ ಸೆಟ್‌ಗಳನ್ನು ಆಮದು ಮಾಡಿದೆ. ಈ ಪೈಕಿ ವಿಯೆಟ್ನಾಂನಿಂದ 428 ದಶಲಕ್ಷ ಡಾಲರ್‌, ಚೀನಾದಿಂದ 292 ದಶಲಕ್ಷ ಡಾಲರ್‌ ಮೌಲ್ಯದ ಟೀವಿಗಳನ್ನು ಆಮದು ಮಾಡಿಕೊಂಡಿದೆ.

    ಭಾರತದ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ 2014ರಲ್ಲಿ 29 ಶತಕೋಟಿ ಡಾಲರ್‌ ಆಗಿದ್ದರೆ 2019ರಲ್ಲಿ ಇದು 70 ಶತಕೋಟಿ ಡಾಲರ್‌ಗೆ ಬೆಳವಣಿಗೆಯಾಗಿದೆ.

    ಟಿವಿಗಳಲ್ಲಿ ಬಳಕೆಯಾಗುತ್ತಿರುವ ವಿಶೇಷ ಭಾಗಗಳಾದ ಓಪನ್‌ ಸೆಲ್‌, ಫಿಲ್ಮ್‌ ಚಿಪ್‌, ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ ಅಸೆಂಬ್ಲಿ(ಪಿಸಿಬಿಎ) ಈಗಲೂ ವಿನಾಯಿತಿ ನೀಡಲಾಗಿದೆ.

    ಏಷ್ಯಾ ರಾಷ್ಟ್ರಗಳ ಜೊತೆಗಿನ ವ್ಯಾಪಾರ ಸಂಬಂಧ ಯುಪಿಎ ಸರ್ಕಾರ 2009ರಲ್ಲಿ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪೈನ್ಸ್‌, ಸಿಂಗಾಪೂರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ದೇಶಗಳಿಂದ ಆಮದು ಆಗುವ ವಸ್ತುಗಳ ಮೇಲೆ ವಿನಾಯಿತಿ ನೀಡಲಾಗಿತ್ತು.

  • ಡಿಜಿಟಲ್‌ ಸ್ಟ್ರೈಕ್ ಬಳಿಕ‌ ಮತ್ತೊಂದು ಭಾರೀ ಹೊಡೆತ ನೀಡಲು ಕೇಂದ್ರದ ಸಿದ್ಧತೆ

    ಡಿಜಿಟಲ್‌ ಸ್ಟ್ರೈಕ್ ಬಳಿಕ‌ ಮತ್ತೊಂದು ಭಾರೀ ಹೊಡೆತ ನೀಡಲು ಕೇಂದ್ರದ ಸಿದ್ಧತೆ

    ನವದೆಹಲಿ: 59 ಅಪ್ಲಿಕೇಶನ್‌ ನಿಷೇಧಿಸಿ ಡಿಜಿಟಲ್‌ ಸ್ಟ್ರೈಕ್‌ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ.

    ಎರಡು ದೇಶಗಳ ವ್ಯಾಪಾರ ವಿಚಾರದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಹೆಚ್ಚಾಗಿ ಚೀನಾದಿಂದ ಆಮದು ಜಾಸ್ತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗ ಭಾರತ ಚೀನಾದಿಂದ ಆಮದು ಆಗುವ ವಸ್ತುಗಳ ಮೇಲೆ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಏರಿಸಲು ಸಿದ್ಧತೆ ನಡೆಸುತ್ತಿದೆ.

    ಕೇಂದ್ರ ಸರ್ಕಾರ ಈಗಾಗಲೇ ಭಾರತದಲ್ಲಿ ತಯಾರಾಗುವ ವಸ್ತುಗಳು ಮತ್ತು ಚೀನಾದಲ್ಲಿ ತಯಾರಾಗುವ ವಸ್ತುಗಳ ಮಾಹಿತಿಯನ್ನು ಪಡೆಯುತ್ತಿದೆ. ಯಾವ ವಸ್ತುಗಳ ಮೇಲೆ ಸುಂಕ ಏರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ 2-3 ತಿಂಗಳ ಒಳಗಡೆ ಯಾವ ವಸ್ತುಗಳಿಗೆ ಎಷ್ಟು ಪ್ರಮಾಣದಲ್ಲಿ ಏರಿಸಬಹುದು ಎಂಬ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಈಗಾಗಲೇ ಕೈಗಾರಿಕಾ ಒಕ್ಕೂಟಗಳಿಗೆ ಪತ್ರ ಬರೆದು ಅಭಿಪ್ರಾಯಗಳನ್ನು ಕೇಳಿದೆ. ಭಾರತದಲ್ಲೇ ತಯಾರಾಗುವ ವಸ್ತುಗಳು ಯಾವುದು? ಮೇಕ್‌ ಇನ್‌ ಇಂಡಿಯಾ ಅಡಿ  ಸಮಸ್ಯೆ ಆಗದಂತೆ ಉತ್ಪಾದಿಸಬಹುದು? ಚೀನಾದಿಂದ ಅಗತ್ಯವಾಗಿ ಆಮದು ಮಾಡಬೇಕಾದ ವಸ್ತುಗಳು ಯಾವುದು? ಇವುಗಳ ಬಗ್ಗೆ ಒಕ್ಕೂಟಗಳು ಪ್ರತಿಕ್ರಿಯೆ ನೀಡಿದೆ.

    ಒಕ್ಕೂಟಗಳು ಚೀನಾದಿಂದ ಆಮದಾಗುವ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಆಟಿಕೆ ಸಾಮಾಗ್ರಿಗಳು ಸೇರಿದಂತೆ ಹಲವು ಉತ್ಪನ್ನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಮೇಕ್‌ ಇನ್‌ ಇಂಡಿಯಾದ ಅಡಿ ತಯಾರಿಸಬಹುದಾದ ವಸ್ತುಗಳ ಬಗ್ಗೆ ತಿಳಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ.

    ಒಂದು ದೇಶದ ಆಮದು ಹೆಚ್ಚಾಗಿ ರಫ್ತು ಕಡಿಮೆಯಾದಾಗ ಉಂಟಾಗುವ ಸ್ಥಿತಿಯನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ. ಆದು ಇಳಿದರೆ ಸಹಜವಾಗಿ ವ್ಯಾಪಾರ ಕೊರತೆ ಇಳಿಕೆಯಾಗುತ್ತದೆ.

    2018-19ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾದ ಮಧ್ಯೆ 88 ಶತಕೋಟಿ ಡಾಲರ್‌ ವ್ಯವಹಾರ ನಡೆದಿದೆ ಭಾರತಕ್ಕೆ ಒಟ್ಟು 53.5 ಶತಕೋಟಿ ಡಾಲರ್‌ ವ್ಯಾಪಾರ ಕೊರತೆಯಿದೆ.