Tag: imphala

  • ಮಣಿಪುರದಲ್ಲಿ ಬಾಂಬ್ ಬ್ಲಾಸ್ಟ್: ನಾಲ್ವರು ಅಪಾಯದಿಂದ ಪಾರು

    ಮಣಿಪುರದಲ್ಲಿ ಬಾಂಬ್ ಬ್ಲಾಸ್ಟ್: ನಾಲ್ವರು ಅಪಾಯದಿಂದ ಪಾರು

    ಇಂಫಾಲ: ಬಾಂಬ್ ಸ್ಫೋಟವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಇಂಫಾಲ್ ಜಿಲ್ಲೆಯ ಈಸ್ಟ್ ಮಣಿಪುರದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಯ ಆವರಣದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

    ಮಂತ್ರಿಪುಖ್ರಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಸುಧಾರಿತ ಸ್ಫೋಟಕ ಸಾಧನ(ಐಇಡಿ) ವನ್ನು ಸಂಜೆ 5.30 ಕ್ಕೆ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅವಘಡದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಓರ್ವರನ್ನು ಹಿಂದೂಸ್ತಾನ್ ಕನ್‍ಸ್ಟ್ರಕ್ಷನ್ ಲಿಮಿಟೆಡ್‍ನ ಮೆಕಾನಿಕಲ್ ಮೇಲ್ವಿಚಾರಕರು ಎಂದು ಗುರುತಿಸಲಾಗಿದೆ.

    ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಆಸ್ಪತ್ರೆಯ ಮೂಲಗಳು ತಿಳಿಸಿವೆ.