ಇಂಫಾಲ್: ಮಣಿಪುರದಲ್ಲಿ (Manipur) ಶಾಂತಿ ಸ್ಥಾಪನೆಯಾಗಬೇಕು ಎನ್ನುವ ಹೊತ್ತಲ್ಲೇ ಇಂಫಾಲ್‌ನ ಹೊರ ವಲಯದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ.
ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್‌ನ ಟ್ರಕ್ (Assam Rifles) ಮೇಲೆ ಬಂದೂಕುಧಾರಿಗಳ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದೆ. ಪರಿಣಾಮ ಇಬ್ಬರು ಯೋಧರು (Soldiers) ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಇಂಫಾಲ್‌ನಲ್ಲಿರುವ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ 6 ಗಂಟೆ ಸುಮಾರಿಗೆ 33 ಅಸ್ಸಾಂ ರೈಫಲ್ಸ್ ಘಟಕದ ಸೈನಿಕರ ತಂಡ ಇಂಫಾಲದಿಂದ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಬಿಷ್ಣುಪುರ ಕಡೆಗೆ ಹೊರಟಿತ್ತು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಬಂಧೂಕುದಾರಿಗಳ ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆಂದು ಗುವಾಹಟಿಯ ರಕ್ಷಣಾ ಪಿಆರ್‌ಒ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ ಸೂಚಿಸಿತ್ತು. ಇದರಿಂದ ಮಣಿಪುರದಲ್ಲಿ ಶಾಂತಿ ನೆಲೆಸಿತ್ತು. ಪ್ರಧಾನಿ ಮೋದಿ ಕೂಡ ಕಳೆದವಾರ ಭೇಟಿ ನೀಡಿ, ಅಭಿವೃದ್ಧಿ ಯೋಜನೆಗಳನ ಉದ್ಘಾಟನೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಮತ್ತೆ ಗುಂಡಿನ ದಾಳಿ ನಡೆಸಿರುವುದು ಜನರ ನಿದ್ದೆಗೆಡಿಸಿದೆ.
ಇಂಫಾಲ್: ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ 3 ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಸಡಿಲಗೊಳಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಆದೇಶ ಹೊರಡಿಸಿದೆ.
ಮೈತೇಯಿ ಸಮುದಾಯದ ಅರಂಬಾಯಿ ತೆಂಗೋಲ್ ಸಂಘಟನೆಯ ನಾಯಕನ ಬಂಧನದ ವಿರುದ್ಧ ಮಣಿಪುರದಲ್ಲಿ ಪ್ರತಿಭಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜೊತೆಗೆ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್, ಬಿಷ್ಣುಪುರ ಮತ್ತು ಕಕ್ಟಿಂಗ್ ಜಿಲ್ಲೆಗಳಲ್ಲಿ ವಿಎಸ್‌ಎಟಿ, ವಿಪಿಎನ್ ಸೇರಿದಂತೆ ಇಂಟರ್‌ನೆಟ್ ಹಾಗೂ ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.
ಪ್ರತಿಭಟನಾಕಾರರು ಮೈತೆಯಿ ಸ್ವಯಂಸೇವಕ ಗುಂಪು ಅರಂಬಾಯಿ ತೆಂಗೋಲ್‌ಗೆ ಸೇರಿದವರಾಗಿದ್ದು, ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದರು. ಅಲ್ಲದೇ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ
ಇಂಫಾಲ: ಗಲಭೆ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ನಂತರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಶನಿವಾರ ಕಾಂಗ್‌ಪೊಕ್ಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕುಕಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಒಬ್ಬ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಮಹಿಳೆಯರು ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು 30 ವರ್ಷದ ಲಾಲ್‌ಗೌತಾಂಗ್ ಸಿಂಗ್ಸಿಟ್ ಎಂದು ಗುರುತಿಸಲಾಗಿದೆ. ಕೀಥೆಲ್‌ಮಂಬಿಯಲ್ಲಿ ನಡೆದ ಘರ್ಷಣೆಯ ವೇಳೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಮ್ಗಿಫೈ, ಮೋಟ್‌ಬಂಗ್ ಮತ್ತು ಕೀಥೆಲ್‌ಮಂಬಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ 25 ಪ್ರತಿಭಟನಾಕಾರರು ವಿವಿಧ ರೀತಿಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur violence) ಶಾಂತಿ ಸುವ್ಯವಸ್ಥೆ ಕಾಪಾಡಲು 10,800 ಸೈನಿಕರನ್ನು (Soldiers) ಕಳುಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ನಿಯೋಜಿಸಲಾದ ಕೇಂದ್ರೀಯ ಭದ್ರತಾ ಪಡೆಗಳ ಒಟ್ಟು ಸಂಖ್ಯೆ 288ಕ್ಕೆ ತಲುಪಿದೆ ಎಂದು ರಾಜ್ಯದ ಮುಖ್ಯ ಭದ್ರತಾ ಸಲಹೆಗಾರ ತಿಳಿಸಿದ್ದಾರೆ.
ನಾಗರಿಕರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ಹಾಗೂ ದುರ್ಬಲ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗುತ್ತಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಸಮನ್ವಯ ಘಟಕಗಳು ಹಾಗೂ ಜಂಟಿ ನಿಯಂತ್ರಣ ಕೊಠಡಿಗಳನ್ನ ಸ್ಥಾಪಿಸಲಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಎಲ್ಲಾ ಪ್ರದೇಶಗಳು ನಿಯಂತ್ರಣಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರರು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು.
ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.
ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು, ಶಾಂತಿಯನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿಗಳನ್ನ ನೇರವಾಗಿ ಹೊಣೆ ಮಾಡಿತು. ಇದನ್ನೂ ಓದಿ: ಅಘಾಡಿಗೆ ಆಪರೇಷನ್ ಭೀತಿ – ಮತ್ತೆ ರೆಸಾರ್ಟ್ ಪಾಲಿಟಿಕ್ಸ್ , ಕರ್ನಾಟಕಕ್ಕೆ ಶಾಸಕರು?
ಇಂಪಾಲ: ಮಣಿಪುರದ ಹಿಂಸಾಚಾರ (Manipur Violence) ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರ ನಡುವಿನ ಘರ್ಷಣೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಕೆ ಅಥೌಬಾ (21) ಎಂಬ ಯುವಕ ಸಾವನ್ನಪ್ಪಿದ್ದಾನೆ. ಯುವಕನ ಸಾವಿಗೆ ಕಾರಣವಾದ ಬುಲೆಟ್ ಯಾರದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು, ಮಣಿಪುರದ ವಿಶೇಷ ಪೊಲೀಸ್ ಕಮಾಂಡೋಗಳು ಗುಂಪನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅಥೌಬಾ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪ್ರತಿಭಟನಾಕಾರರ ಗುಂಪು ಭಾನುವಾರ ರಾತ್ರಿ ವಿವಿಧ ನಾಯಕರ ಮನೆಗಳು ಮತ್ತು ರಾಜಕೀಯ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಹಲವಾರು ವಸ್ತುಗಳನ್ನು ಧ್ವಂಸ ಮಾಡಿದೆ. ಪ್ರತಿಭಟನಾಕಾರರು ನ.11 ರಂದು ನಡೆದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಹತ್ಯೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದರು. ರಾಜ್ಯ ರಾಜಧಾನಿ ಇಂಫಾಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಮತ್ತು ಮೂವರು ಶಾಸಕರು ಸೇರಿದಂತೆ ಕನಿಷ್ಠ ಇಬ್ಬರು ಮಂತ್ರಿಗಳ ಮನೆಗಳ ಹೊರಗೆ ಗುಂಪು ಪ್ರತಿಭಟನೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಪೊಲೀಸರು ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಇತ್ತೀಚೆಗೆ ಶಂಕಿತ ಕುಕಿ ಉಗ್ರರ ಪೈಕಿ ಹತ್ತು ಮಂದಿಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಮಣಿಪುರದ ಕುಕಿ ಪ್ರಾಬಲ್ಯದ ಚುರಾಚಂದ್‌ಪುರಕ್ಕೆ ಸಾಗಿಸಲು ಆಸ್ಪತ್ರೆಯಿಂದ 10 ಶವಗಳನ್ನು ಹೊರತೆಗೆಯಲು ಯತ್ನಿಸಿದ ಪೊಲೀಸರನ್ನು ಪ್ರತಿಭಟನಾಕಾರರು ತಡೆದಿದೆ ಎಂದು ವರದಿಯಾಗಿದೆ.
ಇಂಫಾಲ: ಮಣಿಪುರದ (Manipur) ಜಿರಿಬಾಮ್ ಜಿಲ್ಲೆಯಲ್ಲಿ ಒತ್ತೆಯಾಳಾಗಿದ್ದ ಆರು ಜನರ ಹತ್ಯೆಯನ್ನು ಖಂಡಿಸಿ ಇಂಫಾಲನಲ್ಲಿ (Imphal) ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಇಬ್ಬರು ಮಣಿಪುರದ ಸಚಿವರು ಮತ್ತು ಮೂವರು ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಪ್ರತಿಭಟನೆ ನಡೆಯುತ್ತಿರುವ ಪಶ್ಚಿಮ ಇಂಪಾಲ, ಪೂರ್ವ ಇಂಪಾಲ, ಬಿಷ್ಣುಪುರ್, ತೌಬಲ್, ಕಾಕ್ಚಿಂಗ್, ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರದಲ್ಲಿ ಎರಡು ದಿನಗಳ ಕಾಲ ಅಧಿಕಾರಿಗಳು ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಅವರ ಲ್ಯಾಂಫೆಲ್ ಸನಕೀತೆಲ್ ಪ್ರದೇಶದಲ್ಲಿರುವ ನಿವಾಸಕ್ಕೆ ಪ್ರತಿಭಟನಾಕಾರರ ಗುಂಪು ನುಗ್ಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಸಗೋಲ್‌ಬಂದ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಬಿಜೆಪಿ ಶಾಸಕ ಆರ್‌ಕೆ ಇಮೊ ಅವರ ನಿವಾಸದ ಮುಂದೆ ಸೇರಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಹತ್ಯೆಗೈದವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕೇಶಾಮ್‌ಥಾಂಗ್ ಕ್ಷೇತ್ರದ ಸ್ವತಂತ್ರ ಶಾಸಕ ಸಪಂ ನಿಶಿಕಾಂತ ಸಿಂಗ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಲು ಬಂದಿದ್ದ ಪ್ರತಿಭಟನಾಕಾರರು, ಶಾಸಕರು ರಾಜ್ಯದಲ್ಲಿ ಇಲ್ಲ ಎಂದು ತಿಳಿಸಿದ ನಂತರ ಅವರ ಒಡೆತನದ ಸ್ಥಳೀಯ ಪತ್ರಿಕೆಯ ಕಚೇರಿ ಕಟ್ಟಡವನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.
ಶಂಕಿತ ಕುಕಿ ಬಂಡುಕೋರು 8 ತಿಂಗಳ ಮಗು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಐದು ದಿನಗಳ ನಂತರ ಆರು ಶವಗಳು ಪತ್ತೆಯಾಗಿದ್ದವು. ಇದನ್ನೂ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ.
ಇಂಫಾಲ: ವ್ಯಕ್ತಿಯೊಬ್ಬನ ಕಣ್ಣಿಗೆ ಬಟ್ಟೆ ಕಟ್ಟಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಣಿಪುರದ (Manipur) ಇಂಫಾಲ (Imphal) ಜಿಲ್ಲೆಯಲ್ಲಿ ನಡೆದಿದೆ. ಲ್ಯಾಮ್ಲೈನ್‍ನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೆಕ್ಚಾಮ್ ಎಂಬಲ್ಲಿ ಈ ಘಟನೆ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಆರ್.ಕೆ ಪೃಥ್ವಿ ಸಿಂಗ್ ಎಂದು ಗುರುತಿಸಲಾಗಿದೆ. ಹತ್ಯೆಯ ವೇಳೆ ವ್ಯಕ್ತಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಅವನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಲಾಗಿತ್ತು. ಬಳಿಕ ಪಾಯಿಂಟ್ ಬ್ಲಾಂಕ್ ರೇಂಜ್‍ನಿಂದ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಥಿಲಾವಸ್ಥೆಯಲ್ಲಿ ರಾಯಚೂರು ಬಿಇಒ ಕಚೇರಿ – ಜೀವಭಯದಲ್ಲೇ ಸಿಬ್ಬಂದಿ ಕೆಲಸ
ಸಿಂಗ್ ಭದ್ರತಾ ಪಡೆಗಳ (Indian Army) ಪರವಾಗಿ ಗೂಢಚಾರಿಕೆ ಮಾಡುತ್ತಿದ್ದಾನೆ ಎಂದು ನಿಷೇಧಿತ ಸಂಘಟನೆ ಕೆಸಿಪಿ ಈ ಹತ್ಯೆ ಮಾಡಿದೆ. ಕೊಲೆಯ ಹೊಣೆಗಾರಿಕೆಯನ್ನು ಸಂಘಟನೆ ವಹಿಸಿಕೊಂಡಿದೆ. ಸಿಂಗ್ ಮಾಜಿ ಬಂಡುಕೋರನಾಗಿದ್ದು, ಸೇನೆಗೆ ಶರಣಾಗಿದ್ದ. ಬಳಿಕ ಆತ ಸೇನೆಗಾಗಿ ಗೂಢಚಾರಿಕೆ ಕೆಲಸ ಮಾಡುತ್ತಿದ್ದ ಎಂದು ಕೆಸಿಪಿ ಸಂಘಟನೆ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಬೆನ್ನಲ್ಲೇ ಓರ್ವ ಬಂಡುಕೋರನನ್ನು ಬಂಧಿಸಲಾಗಿದೆ. ಬಂಧಿತನನ್ನು ನಿಂಗ್ತೌಜಮ್ ಆಶಾಕುಮಾರ್ ಮೀಟೆಯಿ (33) ಎಂದು ಗುರುತಿಸಲಾಗಿದೆ. ಆತ ಸುಲಿಗೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಮಸ್ಯೆ ಕೇಳಲು ಬಂದ ಸಚಿವ ಬೋಸರಾಜುಗೆ ಸಂತ್ರಸ್ತರಿಂದ ತರಾಟೆ
ಇಂಫಾಲ: ಮಣಿಪುರದಲ್ಲಿ (Manipur) 2024ರ ವರ್ಷಾರಂಭದ ಮೊದಲ ದಿನದಿಂದಲೇ ಹಿಂಸಾಚಾರ ಭುಗಿಲೆದ್ದಿದೆ. ಮಂಗಳವಾರ (ಜ.30) ಮತ್ತೆ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ಓರ್ವ ಬಿಜೆಪಿ ಮುಖಂಡ (BJP Leader) ಸೇರಿ ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
2024ರ ವರ್ಷಾರಂಭದ ಮೊದಲ ದಿನವೇ ಮಣಿಪುರದಲ್ಲಿ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದರು. ಆ ನಂತರ ಇಲ್ಲಿನ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವೆ ಗುಂಡಿನ ಚಮಮಕಿ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಮಣಿಪುರದಲ್ಲಿ ಗುಂಡಿನ ಸುರಿಮಳೆಗೈದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭದ್ರತಾ ಪಡೆ-ಬಂಡುಕೋರರ ನಡುವೆ ಗುಂಡಿನ ಚಕಮಕಿ
ಇಂಫಾಲದ ಪಶ್ಚಿಮ ಜಿಲ್ಲೆಯ ಕೌತ್ರುಕ್ ಗ್ರಾಮದಲ್ಲಿ ಗುಂಡಿನ ದಾಳಿ (Firing) ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಓಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಇದಲ್ಲದೇ ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿ ಎರಡು ಸಮುದಾಯಗಳ ಗ್ರಾಮ ಸ್ವಯಂಸೇವಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಿಂಸಾಚಾರದ ನಂತರ ಇಂಫಾಲ್ ಕಣಿವೆಯ ಕಡಂಗ್‌ಬಂಡ್, ಕೌಟ್ರುಕ್ ಮತ್ತು ಕಾಂಗ್‌ಚುಪ್ ಗ್ರಾಮಗಳಿಂದ ಹಲವು ನಿವಾಸಿಗಳು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಇಂಫಾಲ್: ಅಸ್ಸಾಂ ರೈಫಲ್ಸ್‌ನ (Assam Rifles) ಸೈನಿಕನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಮಣಿಪುರದಲ್ಲಿ (Manipur) ನಡೆದಿದೆ. ಘಟನೆಯಲ್ಲಿ ಆರು ಯೋಧರಿಗೆ ಗಾಯಗಳಾಗಿದ್ದು, ಅವರನ್ನು ಚುರಾಚಂದ್‍ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಆರ್ ಬೆಟಾಲಿಯನ್ ಆವರಣದಲ್ಲಿ ಈ ಘಟನೆ ನಡೆದಿದೆ. ಗುಂಡು ಹಾರಿಸಿದ್ದು ಕಲಹ ಪೀಡಿತ ಮಣಿಪುರದ ಚುರಾಚಂದ್‍ಪುರ ಮೂಲದ ಯೋಧ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಮೇಲೆ ಅಸ್ಸಾಂನಲ್ಲಿ ಎಫ್‌ಐಆರ್- ಅಮಿತ್ ಶಾಗೆ ಖರ್ಗೆ ಪತ್ರ
ಈ ಬಗ್ಗೆ ಸೇನೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಇದೊಂದು ದುರದೃಷ್ಟಕರ ಘಟನೆಯಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ವಿಚಾರವಾಗಿ ಯೋಧರು ಯಾವುದೇ ಸಂಬಂಧವನ್ನು ಹೊಂದಿರಬಾರದು. ಎಲ್ಲಾ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಮಣಿಪುರದ ವಿವಿಧ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿಬ್ಬಂದಿ ಒಟ್ಟಿಗೆ ಉಳಿದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ಮಣಿಪುರದಲ್ಲಿ ಕಳೆದ ಮೇ ತಿಂಗಳಿನಿಂದ ಮೇಥಿ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ (Manipur violence) ನಡೆಯುತ್ತಿದೆ. ಹಿಂಸಾಚಾರದಲ್ಲಿ ಕನಿಷ್ಠ 207 ಇಲ್ಲಿಯವರೆಗೆ ಸಾವಿಗೀಡಾಗಿದ್ದಾರೆ. ಅಲ್ಲದೇ ಸುಮಾರು 50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ
ಇಂಫಾಲ್: ಮಣಿಪುರದ ಕಾಂಗ್‍ಪೊಕ್ಪಿ ಜಿಲ್ಲೆಯ ಹರಾಥೆಲ್ ಮತ್ತು ಕೊಬ್ಶಾ ಗ್ರಾಮಗಳ ಮತ್ತೆ ಹಿಂಸಾಚಾರ (Manipur Violence) ಆರಂಭಗೊಂಡಿದೆ. ಕಿಡಿಗೇಡಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಓರ್ವ ಇಂಡಿಯಾ ರಿಸರ್ವ್ ಬೆಟಾಲಿಯನ್ (India Reserve Batallion) ಸಿಬ್ಬಂದಿ ಮತ್ತು ಚಾಲಕ ಹುತಾತ್ಮರಾಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಕುಕಿ-ಜೋ ಸಮುದಾಯದ ಮೇಲಿನ ಪ್ರಚೋದಿತ ದಾಳಿಯನ್ನು ಖಂಡಿಸಿ ಕಾಂಗ್‍ಪೋಕ್ಪಿ ಮೂಲದ ಬುಡಕಟ್ಟು ಐಕ್ಯತೆಯ ಸಮಿತಿ ಪ್ರತಿಭಟನೆ ನಡೆಸಿದೆ. ಬಳಿಕ ದಾಳಿಯ ನಂತರ ಕರೆದ ಸಭೆಯಲ್ಲಿ ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಡಳಿತ ಮಂಡಳಿಯನ್ನು ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಇದನ್ನೂ ಓದಿ: 30 ವರ್ಷದ ಇತಿಹಾಸ ಮುರಿದ ಕಾಂಗ್ರೆಸ್: ಸ್ವಕ್ಷೇತ್ರದಲ್ಲೇ ವಿಜಯೇಂದ್ರಗೆ ಹಿನ್ನಡೆ
ದಾಳಿ ನಡೆದ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ.