Tag: Immunity Power

  • ಕೊರೊನಾ ತಡೆಗಾಗಿ ಅಕ್ಕಿ ತೊಳೆದ ನೀರು ಕುಡಿಯುತ್ತಿರುವ ಮಹಿಳೆಯರು

    ಕೊರೊನಾ ತಡೆಗಾಗಿ ಅಕ್ಕಿ ತೊಳೆದ ನೀರು ಕುಡಿಯುತ್ತಿರುವ ಮಹಿಳೆಯರು

    ಕೊಪ್ಪಳ: ಸಾಮಾನ್ಯವಾಗಿ ಅಡುಗೆ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆದು, ತೊಳೆದ ಅಕ್ಕಿಯ ನೀರು ವೆಸ್ಟ್ ಎಂದು ಚೆಲ್ಲುವುದು ವಾಡಿಕೆ. ಆದರೆ ಈಗ ತೊಳೆದ ಅಕ್ಕಿ ನೀರನ್ನು ಯಾರು ಚೆಲ್ಲಬೇಡಿ ಬದಲಾಗಿ ಕುಡಿಯಿರಿ ಎಂದು ವೈದ್ಯರು ಹೇಳುತ್ತಿದ್ದಾರೆ.

    ಭತ್ತದ ಕಣಜವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಈಗ ಹೊಸ ಟ್ರೆಂಡ್ ಆರಂಭವಾಗಿದೆ. ಮಹಿಳೆಯರು ಅಡುಗೆಯ ಮುನ್ನ ಅಕ್ಕಿಯನ್ನು ತೊಳೆದು ಅದೇ ನೀರನ್ನು ಕುಡಿಯುತ್ತಿದ್ದಾರೆ. ಈ ನೀರು ಕುಡಿಯುವುದರಿಂದ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತೆ ಅನ್ನೋ ಸುದ್ದಿ ಹರಿದಾಡುತ್ತಿದೆ.

    ಈ ನೀರು ಕುಡಿಯುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ವೈರಲ್ ಸೋಂಕು ಬರುವುದಿಲ್ಲ. ಅಷ್ಟೇ ಅಲ್ಲದೇ ಕೊರೊನಾ ಬರದಂತೆ ಕೂಡ ಎಚ್ಚರವಹಿಸಬಹುದಾಗಿದೆ. ಇದೇ ನೀರನ್ನು ಮುಖಕ್ಕೆ ಹಾಕಿಕೊಂಡರೆ ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ ಎಂದು ಗಂಗಾವತಿಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ ಹೇಳುತ್ತಾರೆ.

    ಅಕ್ಕಿಯ ಮೇಲ್ಪದರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಮ್ ಅಧಿಕವಾಗಿರುತ್ತದೆ. ಅಕ್ಕಿ ತೊಳೆದಾಗ ಮೇಲ್ಪದರಿನಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ತೊಳೆದುಕೊಂಡು ವ್ಯರ್ಥವಾಗುತ್ತದೆ. ಅದಕ್ಕಾಗಿ ಅಡುಗೆ ಮಾಡುವ ಮಹಿಳೆಯರು ಅಕ್ಕಿ ತೊಳೆದ ನೀರನ್ನು ಚೆಲ್ಲದೆ ಕುಡಿಯಿರಿ. ದೇಹದಲ್ಲಿ ಇಮ್ಯುನಿಟಿ ಬೆಳೆಯುವುದರಿಂದ ದೇಹದಲ್ಲಿ ಕೊರೊನಾ ಸೋಂಕು ನಿಯಂತ್ರಸಿಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ :ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

  • ಕೊರೊನಾ ಸೋಂಕು ಹೆಚ್ಚಳ- ಮನೆ ಮನೆಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಿಟ್

    ಕೊರೊನಾ ಸೋಂಕು ಹೆಚ್ಚಳ- ಮನೆ ಮನೆಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಿಟ್

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಆಯುರ್ವೇದ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 85 ಸಾವಿರ ಮನೆಗಳಿದ್ದು, ಸುಮಾರು 4 ಲಕ್ಷ ಜನರಿಗೆ ಆಯುರ್ವೇದ ಕಿಟ್ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಇದೇ 29 ರಂದು ಕಿಟ್ ವಿತರಣಾ ಕಾರ್ಯಕ್ಕೆ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

    ಆಯುರ್ವೇದ ಕಿಟ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಯಾರ ಬಳಿ ಆದರೂ ಆಧಾರ್ ಕಾರ್ಡ್ ಇಲ್ಲದಿದ್ದರೆ ಅದನ್ನು ಮಾಡಿಕೊಡುತ್ತೇವೆ. ಜುಲೈ 29 ರಿಂದ ಆಯುರ್ವೇದ ಕಿಟ್ ವಿತರಣೆ ಮಾಡುವ ಕಾರ್ಯ ಆರಂಭವಾಗಲಿದೆ. ಒಮ್ಮೆಗೆ 4 ಲಕ್ಷ ಕಿಟ್ ನೀಡುವುದು ಕಷ್ಟ ಎಂದು ಹೇಳಿದ ಹಿನ್ನೆಲೆಯಲ್ಲಿ ವಾರ್ಡ್ ಹಂತದಲ್ಲಿ ವಿತರಣೆ ಕಾರ್ಯ ಮಾಡಲಿದ್ದೇವೆ. ಈ ಕಾರ್ಯಕ್ರಮ ದೇಶದಲ್ಲೇ ಮೊದಲು ಎಂದು ಭಾವಿಸಿದ್ದೇನೆ. ಪ್ರತಿ ಕಿಟ್ ಬೆಲೆ 380 ರೂ. ಇದ್ದು, ನಮ್ಮ ಮನವಿ ಮೇರೆಗೆ ಕೇವಲ 100 ರೂ.ಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.