Tag: Immigrant

  • ಅಮೆರಿಕದಲ್ಲಿನ ವಲಸಿಗರ ಕೈಗೆ ಕೋಳ – ಟ್ರಂಪ್ ಆದೇಶದ ವಿರುದ್ಧ ಸಿಡಿದೆದ್ದ ಸಿಖ್ಖರು

    ಅಮೆರಿಕದಲ್ಲಿನ ವಲಸಿಗರ ಕೈಗೆ ಕೋಳ – ಟ್ರಂಪ್ ಆದೇಶದ ವಿರುದ್ಧ ಸಿಡಿದೆದ್ದ ಸಿಖ್ಖರು

    ವಾಷಿಂಗ್ಟನ್‌: ಟ್ರಂಪ್ ಸರ್ಕಾರ ಅಕ್ರಮ ವಲಸಿಗರು ವಿಚಾರದಲ್ಲಿ ಕಠಿಣ ನಿಯಮ ಅನುಸರಿಸ್ತಿದೆ. ಅಮೆರಿಕಾದಲ್ಲಿರುವ ಅಕ್ರಮ ವಲಸಿಗರನ್ನು ವಿಶೇಷ ವಿಮಾನಗಳಲ್ಲಿ ಅವರ ಸ್ವದೇಶಗಳಿಗೆ ಕಳಿಸ್ತಿದೆ. ಇದಕ್ಕೆ ಕೆಲವು ದೇಶಗಳಿಂದ ವಿರೋಧ ವ್ಯಕ್ತವಾಗ್ತಿದೆ.ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?

    ತಮ್ಮ ಪೌರರ ಕೈಗೆ ಕೋಳ ತೊಡಿಸಿ ವಾಪಸ್ ಕರೆತರುತ್ತಿರುವುದನ್ನು ಬ್ರೆಜಿಲ್ ಖಂಡಿಸಿದೆ. ಇನ್ನೂ ಕೊಲಂಬಿಯಾ ಸಹ ಮೊದಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಲಸಿಗರನ್ನು ಕರೆತರುವ ಅಮೆರಿಕಾ ವಿಮಾನಗಳನ್ನು ನಮ್ಮ ದೇಶಕ್ಕೆ ಬಿಟ್ಟುಕೊಳ್ಳಲ್ಲ ಎಂದಿತ್ತು. ಗೌರವದಿಂದ ಕಳಿಸಿಕೊಟ್ಟರೆ ಮಾತ್ರ ಒಪ್ಪುತ್ತೇವೆ ಎಂದಿತ್ತು.

    ಇದಕ್ಕೆ ಗರಂ ಆದ ಟ್ರಂಪ್, ಕೊಲಂಬಿಯಾ ಉತ್ಪನ್ನಗಳ ಮೇಲೆ ಶೇಕಡಾ 50 ಸುಂಕ ಹೆಚ್ಚಿಸುವ ಘೋಷಣೆ ಮಾಡಿದ್ದರು. ಅಲ್ಲದೇ, ಕೊಲಂಬಿಯಾ ಅಧಿಕಾರಿಗಳ ವೀಸಾ ರದ್ದು ಮಾಡುವ ಬೆದರಿಕೆ ಹಾಕಿದ್ದರು. ಈ ಬೆನ್ನಲ್ಲೇ ಕೊಲಂಬಿಯಾ ಅಧ್ಯಕ್ಷರು ಉಲ್ಟಾ ಹೊಡೆದರು. ಸ್ವದೇಶಕ್ಕೆ ವಾಪಸ್ ಆಗುವ ಅಕ್ರಮ ವಲಸಿಗರನ್ನು ಬಿಟ್ಟುಕೊಳ್ಳುವುದಾಗಿ ತಿಳಿಸಿದರು. ತಕ್ಷಣವೇ ಟ್ರಂಪ್ ಸಹ ತಮ್ಮ ಘೋಷಣೆಯನ್ನು ಹಿಂಪಡೆದರು. ಈ ಮಧ್ಯೆ, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರು ನ್ಯೂಯಾರ್ಕ್, ನ್ಯೂಜೆರ್ಸಿಯ ಗುರುದ್ವಾರಗಳಿಗೆ ನುಗ್ಗಿದ್ದಾರೆ. ಇದಕ್ಕೆ ಸಿಖ್ಖರಿಂದ ಭಾರೀ ವಿರೋಧ ವ್ಯಕ್ತವಾಗ್ತಿದೆ.ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ರೈತರಿಗೆ ಸಂಕಷ್ಟ – ಮಾ.31ರ ವರೆಗೆ ಮಾತ್ರ ಕಾಲುವೆಗೆ ನೀರು ಸಾಧ್ಯತೆ

     

     

  • 3 ಸಾವಿರ ಅಡಿ ಎತ್ತರದಲ್ಲಿ ಹಾರ್ತಿದ್ದ ವಿಮಾನದಿಂದ ಬಿದ್ದ ವ್ಯಕ್ತಿ

    3 ಸಾವಿರ ಅಡಿ ಎತ್ತರದಲ್ಲಿ ಹಾರ್ತಿದ್ದ ವಿಮಾನದಿಂದ ಬಿದ್ದ ವ್ಯಕ್ತಿ

    ಲಂಡನ್: 3 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಇಂಗ್ಲೆಂಡ್ ನ ಹೀಥ್ರೊ ವಿಮಾನ ನಿಲ್ದಾಣದ ಬಳಿ ಭಾನುವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ವಲಸಿಗ ಎಂದು ತಿಳಿದು ಬಂದಿದೆ.

    ಕೀನ್ಯಾ ಏರ್ ವೇಸ್ ಭಾನುವಾರ ಮಧ್ಯಾಹ್ನ 3.40ಕ್ಕೆ ಹೀಥ್ರೂನಲ್ಲಿ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡಿಂಗ್ ಗಿಯರ್ ಕಂಪಾರ್ಟ್‍ಮೆಂಟ್ ನಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ವಿಮಾನದಿಂದ ಜಾರಿ ಹೊರ ಬಿದ್ದಿದ್ದಾನೆ. ದಕ್ಷಿಣ ಲಂಡನ್, ಕ್ಲಾಫಮ್ ನ ಚಿಕ್ಕ ತೋಟವೊಂದರಲ್ಲಿ ವಲಸಿಗ ಬಿದ್ದು ಸಾವನ್ನಪ್ಪಿದ್ದಾನೆ. ಪ್ರತ್ಯಕ್ಷದರ್ಶಿಯ ಮೂರು ಅಡಿಯ ಅಂತರದಲ್ಲಿಯೇ ಬಿದ್ದಿದ್ದಾನೆ. ಲ್ಯಾಂಡಿಂಗ್ ಗಿಯರ್ ಕಂಪಾರ್ಟ್‍ಮೆಂಟ್ ನಲ್ಲಿ ನೀರು, ಆಹಾರ ವಸ್ತುಗಳು ದೊರಕಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿ, ನಾನು ಕುಳಿತ ಸ್ಥಳದಿಂದ ಮೂರು ಅಡಿ ಅಂತರದಲ್ಲಿಯೇ ಆತ ಬಿದ್ದನು. ಕೆಳಮುಖವಾಗಿ ತೋಟದ ಕಾರಿಡಾರ್ ನಲ್ಲಿ ಬಿದ್ದಿದರಿಂದ ಮುಖವೆಲ್ಲ ಅಪ್ಪಚ್ಚಿಯಾಗಿ ಗಾರ್ಡನ್ ತುಂಬ ರಕ್ತ ಚೆಲ್ಲಿತ್ತು ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಸ್ಥಳೀಯ ಮಹಿಳೆ, ವ್ಯಕ್ತಿ ಮೇಲಿಂದ ಬಿದ್ದಾಗ ಕಟ್ಟಡ ಕಾಮಗಾರಿಯ ಸದ್ದು ಅಂತ ಮೊದಲು ತಿಳಿದಿದ್ದೆ. ಇದೊಂದು ಭಯಾನಕ ಘಟನೆಯಾಗಿದ್ದು, ಹಸಿರು ಹುಲ್ಲಿಗಾವಲು ರಕ್ತಮಯವಾಗಿತ್ತು ಎಂದು ತಿಳಿಸಿದ್ದಾರೆ.

    ನನ್ನ ಪತಿ ಕುಳಿತ ಸ್ಥಳದಿಂದ ಕೆಲ ಅಂತರದಲ್ಲಿಯೇ ಆ ವ್ಯಕ್ತಿ ಬಿದ್ದ. ಅದೃಷ್ಟವಷಾತ್ ನನ್ನ ಪತಿಗೆ ಏನು ಆಗಿಲ್ಲ. ಆತ ಬಿದ್ದಾಗ ಪತಿ ಒಂದು ಕ್ಷಣ ಭಯಭೀತರಾಗಿದ್ದರು. ವ್ಯಕ್ತಿ ಬಿದ್ದ ಸದ್ದಿಗೆ ನೆರೆಹೊರೆಯವರು ಆಗಮಿಸಿದರು ಎಂದು ಪ್ರತ್ಯಕ್ಷದರ್ಶಿ ಪತ್ನಿ ಘಟನೆಯನ್ನು ವಿವರಿಸಿದರು.