Tag: immersion of ganesha

  • ಪೊಲೀಸ್ ಸರ್ಪಗಾವಲಿನಲ್ಲಿ ಗಣಪತಿ ಶೋಭಾ ಯಾತ್ರೆ ಆರಂಭ

    ಪೊಲೀಸ್ ಸರ್ಪಗಾವಲಿನಲ್ಲಿ ಗಣಪತಿ ಶೋಭಾ ಯಾತ್ರೆ ಆರಂಭ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದು ಪೊಲೀಸ್ ಸರ್ಪಗಾವಲಿನಲ್ಲಿ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ ಆರಂಭವಾಗಿದೆ. ವಿದ್ಯಾಗಣಪತಿ ಮೆರವಣಿಗೆಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಮೂರು ದಶಕಗಳ ಹಿಂದೆ ಗಣಪತಿ ವಿಸರ್ಜನಾ ಮಹೋತ್ಸವದ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಕೆಲ ದಿನಗಳ ನಂತರ ಪೊಲೀಸರೇ ಗಣಪತಿ ವಿಸರ್ಜನೆ ಮಾಡಿದ್ದರು. ಅಂದಿನಿಂದ ವಿಸರ್ಜನಾ ಮಹೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿಕೊಂಡು ಬರಲಾಗುತ್ತಿದೆ.

    ಮೆರವಣಿಗೆ ಸಂದರ್ಭದಲ್ಲಿ ಎಲ್ಲೆಲ್ಲೂ ಪೊಲೀಸರೇ ಕಾಣಿಸುತ್ತಾರೆ. ಹಾಗಾಗಿ ಇದಕ್ಕೆ ‘ಪೊಲೀಸ್ ಗಣಪತಿ’ ಎಂಬ ಖ್ಯಾತಿಯೂ ಇದೆ. ನಗರದ ರಥದ ಬೀದಿಯಿಂದ ಶೋಭಾ ಯಾತ್ರೆ ಆರಂಭಗೊಂಡಿದ್ದು, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯುತ್ತಿದೆ.

    ಮಹಿಳಾ ವೀರಗಾಸೆ, ಕಂಸಾಳೆ, ಚಂಡೆಮದ್ದಳೆ, ಪೂಜಾ ಕುಣಿತ, ಗೊರವರ ಕುಣಿತ ಮೊದಲಾದ ಜಾನಪದ ಕಲಾ ತಂಡಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಶೋಭಾ ಯಾತ್ರೆ ದೊಡ್ಡರಸನಕೊಳದಲ್ಲಿ ಅಂತ್ಯಗೊಳ್ಳಲ್ಲಿದ್ದು ಇಂದು ಮಧ್ಯೆರಾತ್ರಿ ವೇಳೆಗೆ ವಿದ್ಯಾಗಣಪತಿ ವಿಸರ್ಜನೆ ನಡೆಯಲಿದೆ.

  • ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

    ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

    ತುಮಕೂರು: ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸಿದ್ದಾರೆ.

    ಸಂಸದ ನಾರಾಯಣಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ್ ಹೇಳಿಕೆಯನ್ನು ಪಾಲಿಸಿದ್ದಾರೆ. ಭಾನುವಾರ ನಡೆದ ಗಣೇಶೋತ್ಸವದಲ್ಲಿ ರಸ್ತೆಗಳು ಮಲೀನವಾಗಿತ್ತು. ಹಾಗಾಗಿ ನಾರಾಯಣಗೌಡ ಅವರು ನಮ್ಮ ಕಸ ನಾವು ತೆಗೆಯಬೇಕು ಎಂದು ಹೇಳುವ ಮೂಲಕ ರಸ್ತೆಗಳನ್ನು ಸ್ವಚ್ಛ ಮಾಡಿದ್ದಾರೆ.

    ನಾರಾಯಣಸ್ವಾಮಿ ಅವರು ಭಾನುವಾರ ಬೆಳಗ್ಗೆನಿಂದಲೂ ಗಣೇಶೋತ್ಸವದಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಮುಗಿದ ಮೇಲೆ ರಾತ್ರಿ ಎಲ್ಲಾ ರಸ್ತೆಗಳನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಸಂಸದರಿಗೆ ಸ್ಥಳೀಯ ಬಿಜೆಪಿ ಮುಖಂಡರ ಎಸ್.ಆರ್ ಗೌಡ ಸೇರಿದಂತೆ ಹಲವರು ಸಾಥ್ ನೀಡಿದ್ದರು.

    ಸದ್ಯ ಸಂಸದರು ಭಾನುವಾರ ತುಮಕೂರು ಜಿಲ್ಲೆ ಶಿರಾನಗರದ ಮಲಿಕ್ ರೇಹಾನ್ ದರ್ಗಾ ಮತ್ತು ಬಸ್ ನಿಲ್ದಾಣಗಳಲ್ಲಿ ಸ್ವಚ್ಛಗೊಳಿಸಿದ್ದಾರೆ.

  • ಗಣೇಶ ವಿಸರ್ಜನೆ ವೇಳೆ ಚಾಕು ಇರಿತ – ವಿದ್ಯಾರ್ಥಿ ಸಾವು

    ಗಣೇಶ ವಿಸರ್ಜನೆ ವೇಳೆ ಚಾಕು ಇರಿತ – ವಿದ್ಯಾರ್ಥಿ ಸಾವು

    ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದಿದ್ದರಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಬಸವರಾಜ್ ವಿರೇಶ್ ಶಿವುರ (21) ಮೃತಪಟ್ಟ ವಿದ್ಯಾರ್ಥಿ. ಬಸವರಾಜ್ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಬಸವರಾಜ್ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದನು.

    ಗುರುವಾರ ಬಸವರಾಜ್ ತನ್ನ ಗೆಳೆಯರ ಜೊತೆ ಗಣೇಶ ವಿಸರ್ಜನೆ ನೋಡಲು ಬಂದಿದ್ದನು. ಈ ವೇಳೆ ಹರ್ಷ ಕಾಂಪ್ಲೆಕ್ಸ್ ಕಡೆ ಗಲಾಟೆಯಾಗಿ ಗಣೇಶ ಮೆರವಣಿಗೆ ನೋಡುತ್ತ ನಿಂತಿದ್ದ ಬಸವರಾಜ್‍ನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜ್‍ನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಈ ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿ ನಗರದ ಐದು ಕಡೆ ಚಾಕು ಇರಿತವಾಗಿದೆ. ಹರ್ಷ ಕಾಂಪ್ಲೆಕ್ಸ್, ದುರ್ಗದ ಬೈಲ್ ನಲ್ಲಿ ಎರಡು ಕಡೆ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತವಾಗಿದೆ.

    ಈ ಕುರಿತು ಶಹರ, ಉಪನಗರ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

  • ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಸಿಲುಕಿ ಯುವಕನ ಕೈಕಟ್

    ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಸಿಲುಕಿ ಯುವಕನ ಕೈಕಟ್

    ರಾಮನಗರ: ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಯುವಕನ ಕೈ ಸಿಲುಕಿ ಕಟ್ ಆಗಿರುವ ಘಟನೆ ರಾಮನಗರದಲ್ಲಿ ತಡರಾತ್ರಿ ನಡೆದಿದೆ.

    ನರೇಂದ್ರ ಕೈ ಕಳೆದುಕೊಂಡ ಯುವಕ. ನರೇಂದ್ರ ರಾಮನಗರದ ಚಾಮುಂಡೇಶ್ವರಿ ಬಡಾವಣೆ ನಿವಾಸಿ. ಶನಿವಾರ ಬಡಾವಣೆಯಲ್ಲಿ ಕೂರಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಟ್ರಾಕ್ಟರಿನಲ್ಲಿ 6.5 ಅಡಿ ಎತ್ತರದ ಗಣೇಶನನ್ನು ವಿಸರ್ಜಿಸಲು ನಗರದ ರಂಗರಾಯರದೊಡ್ಡಿ ಕೆರೆಯ ಬಳಿಗೆ ತೆಗೆದುಕೊಂಡು ಹೋಗಲಾಗಿತ್ತು.

    ಕೆರೆಯ ಬಳಿ ಆಗಮಿಸಿದ ಟ್ರಾಕ್ಟರಿನಲ್ಲಿ ಇದ್ದ ಯುವಕನ ಕೇಸರಿ ಟವಲ್ ಚಾಲನೆಯಲ್ಲಿದ್ದ ಜನರೇಟರ್‌ಗೆ ಸಿಲುಕಿಕೊಂಡಿದೆ. ಟವಲ್‍ನ ಜೊತೆ ಆತನ ಕೈ ಕೂಡ ಜನರೇಟರ್ ನ ಫ್ಯಾನ್ ಗೆ ಸಿಲುಕಿದ್ದು, ಅರ್ಧ ಕೈಕಟ್ ಆಗಿದೆ.

    ಸದ್ಯ ಕೈ ಕಳೆದುಕೊಂಡ ಯುವಕ ನರೇಂದ್ರನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಸಲ್ಮಾನ್ ಖಾನ್ ಮಸ್ತ್ ಡ್ಯಾನ್ಸ್: ವಿಡಿಯೋ

    ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಸಲ್ಮಾನ್ ಖಾನ್ ಮಸ್ತ್ ಡ್ಯಾನ್ಸ್: ವಿಡಿಯೋ

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

    ಸಲ್ಮಾನ್ ಖಾನ್ ಅವರು ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಗಣೇಶ ವಿಸರ್ಜನೆ ಸಮಯದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಸಲ್ಮಾನ್ ಅವರಿಗೆ ನಟಿಯರು ಸಾಥ್ ನೀಡಿದ್ದರು.

    ನಟಿಯರಾದ ಸ್ವರಾ ಭಾಸ್ಕರ್ ಹಾಗೂ ಡೇಸಿ ಶಾ ಅವರು ಸಲ್ಮಾನ್ ಖಾನ್ ಅವರ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅರ್ಪಿತಾ ಅವರ ಮನೆಯ ಗಣೇಶ ಪೂಜೆಯಲ್ಲಿ ಇಡೀ ಖಾನ್ ಕುಟುಂಬಸ್ಥರು ಭಾಗವಹಿಸಿದ್ದರು. ಖಾನ್ ಕುಟುಂಬಸ್ಥರು ಹೊರತಾಗಿ ನಟಿ ಸೋನಾಕ್ಷಿ ಸಿನ್ಹಾ, ಸ್ವರಾ ಭಾಸ್ಕರ್, ಡೇಸಿ ಶಾ, ಅಂಗದ್ ಬೇಡಿ ಹಾಗೂ ಅವರ ಪತ್ನಿ ನೇಹಾ ದುಪಿಯಾ ಸೇರಿದಂತೆ ಹಲವು ಕಲಾವಿದರು ಅರ್ಪಿತಾ ಅವರ ಮನೆಯಲ್ಲಿ ಉಪಸ್ಥಿತರಿದ್ದರು.

    ಅರ್ಪಿತಾ ಅವರ ಮನೆಯಲ್ಲಿ ನಡೆದ ಪೂಜೆಯ ಫೋಟೋ ಹಾಗೂ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋವೊಂದರಲ್ಲಿ ನಟಿ ನೇಹಾ ದುಪಿಯಾ ಹಾಗೂ ಅವರ ಪತಿ ಅಂಗದ್ ಬೇಡಿ ಪೂಜೆ ಮಾಡಿದ್ದಾರೆ. ಅಲ್ಲದೆ ಮತ್ತೊಂದು ವಿಡಿಯೋದಲ್ಲಿ ಸಲ್ಮಾನ್ ಡೈಸಿ ಶಾ ಹಾಗೂ ಸ್ವರಾ ಭಾಸ್ಕರ್ ಅವರ ಜೊತೆ ಡೋಲು ಸದ್ದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    Swara Bhaskar killing it with @shahdaisy and @beingsalmankhan at ganpati

    A post shared by Ashley Rebello (@ashley_rebello) on