Tag: Imliwali Mosque

  • ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    ಲಕ್ನೋ: ಆಗ್ರಾದಲ್ಲಿ ಪೊಲೀಸರ ಅನುಮತಿಯಿಲ್ಲದೆ ಮಸೀದಿಯ ಮುಂಭಾಗದ ರಸ್ತೆಯಲ್ಲಿ ನಮಾಜ್ ಮಾಡಿದ 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಸಂಘನೆಗಳು ಪ್ರತಿಭಟನೆ ನಡೆಸಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಆದೇಶ ಹೊರಡಿಸಿದೆ. ಆದರೂ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸೆಕ್ಷನ್ 144 ಉಲ್ಲಂಘಿಸಿದ್ದು, ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದೆ ಎಂದು ಹೇಳಿ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದ್ರೆ ಎಲ್ಲರೂ ತಪ್ಪು ಮಾಡಿದ್ದಾರೆ ಎಂದರ್ಥವಲ್ಲ: ಸಿದ್ದು

    IMLI VALI MASID

    ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜು ರಸ್ತೆಯಲ್ಲಿರುವ ಇಮ್ಲಿವಾಲಿ ಮುಂಭಾಗದ ಮಸೀದಿ ರಸ್ತೆಯಲ್ಲಿ 5 ದಿನಗಳ ಕಾಲ ರಾತ್ರಿ 9 ರಿಂದ 11 ಗಂಟೆ ವರೆಗೆ ಭಕ್ತರಿಗೆ ನಮಾಜ್ ಮಾಡಲು ಅನುಮತಿ ನೀಡಲಾಗಿತ್ತು. ಇದಕ್ಕಾಗಿ ಸ್ಥಳೀಯ ಮಳಿಗೆದಾರರು ಹಾಗೂ ಅಡಳಿತದ ಒಪ್ಪಿಗೆಯನ್ನೂ ಪಡೆದಿದ್ದರು. ಆದರೆ ಈ ವರ್ಷ ರಸ್ತೆಯಲ್ಲಿ ಪ್ರಾರ್ಥನೆ ಮಾಡಲು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೆ ಹನುಮಾನ್ ಚಾಲೀಸಾ ಪಠಿಸುವುದಾಗಿಯೂ ಬೆದರಿಕೆ ಹಾಕಿದ್ದವು. ಹೀಗಾಗಿ ಅನಿರೀಕ್ಷಿತ ಕೋಮು ಸಂಘರ್ಷವನ್ನು ತಪ್ಪಿಸಲು ಜಿಲ್ಲಾಡಳಿತ ತಕ್ಷಣ ಅನುಮತಿ ಹಿಂಪಡೆಯಿತು. ಇದನ್ನೂ ಓದಿ: ಕುಂಕುಮ ಇಟ್ಟವರು ಯಾರು ಬಾಂಬ್ ಹಾಕಿಲ್ಲ, ಬಾಂಬ್ ಹಾಕೋರು ಟೋಪಿ ಹಾಕಿದವರು: ಸಿ.ಟಿ ರವಿ

    mosque-loudspeakers
    ಸಾಂದರ್ಭಿಕ ಚಿತ್ರ

    ಇಮ್ಲಿವಾಲಿ ಮಸೀದಿ ಮುಂಭಾಗದ ರಸ್ತೆಯಲ್ಲಿ ಕಳೆದ 40 ವರ್ಷಗಳಿಂದ ನಮಾಜ್‌ಗೆ ಅವಕಾಶ ನೀಡಲಾಗುತ್ತಿತ್ತು ಎಂದು ಮಸೀದಿಯ ವ್ಯವಸ್ಥಾಪಕ ಇರ್ಫಾನ್ ಸಲೀಂ ಮತ್ತು ಅವರ ಬೆಂಬಲಿಗರು ಹೇಳಿದರು. ಆದರೆ ಈ ಬಾರಿ ಸಂಜಯ್ ಜಾಟ್ ಅವರ ನೇತೃತ್ವದಲ್ಲಿ ಹಿಂದೂ ಮಹಾಸಭಾದ ಸದಸ್ಯರು ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದರು. ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಲಾಗಿದೆ.