Tag: IMF Agency

  • ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಕೊಲಂಬೊ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿಟ್ಟು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಒಗ್ಗೂಡಿ ದೇಶದ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಮನವಿ ಮಾಡಿದರು.

    ತಮ್ಮ ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭುಗಿಲೆದ್ದಿರುವ ಬಿಕ್ಕಟ್ಟನ್ನು ನಿಭಾಯಿಸಲು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಹಣಕಾಸು ತಜ್ಞರು ಒಟ್ಟಾಗಿ ಕುಳಿತುಕೊಂಡು ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಮತ್ತೆ ಉಮೇಶ ಕತ್ತಿ ಒತ್ತಾಯ

    ಬಿಕ್ಕಟ್ಟಿಗೆ ಕಾರಣವಾದ ಹಲವಾರು ಅಂಶಗಳಿವೆ. ಇದು ಒಂದೇ ದಿನದಲ್ಲಿ ಬಂದಿಲ್ಲ. ಇದು ಸಾಂಕ್ರಾಮಿಕ ಸಮಯ. ಉದ್ಯೋಗಗಳು ಕಳೆದುಹೋಗಿವೆ. ತೈಲ ಬೆಲೆಗಳು ಹೆಚ್ಚಾಗುತ್ತಿವೆ. ಸಹಜವಾಗಿ, ದುರಾಡಳಿತವೂ ಇದೆ. ಆದರೂ ದೇಶದಲ್ಲಿ ಇನ್ನೂ ಸಹ ದುರಾಡಳಿತ ತಪ್ಪಿಲ್ಲ ಎಂದರು.

    ಈಗಾಗಲೇ ಶ್ರೀಲಂಕಾದ ನೆರೆಹೊರೆಯವರಾದ ಭಾರತ ಮತ್ತು ಚೀನಾ ಸಹಾಯಕ್ಕಾಗಿ ಮುಂದೆ ಬಂದಿವೆ. ನಮಗೆ ಭಾರತ ಮತ್ತು ಚೀನಾದಂತಹ ನಮ್ಮ ನೆರೆಹೊರೆಯವರಿಂದ ಸಹಾಯ ಬೇಕು ಎಂದು ಐಎಮ್‍ಎಫ್ ನಂತಹ ಏಜೆನ್ಸಿಗಳಿಗೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ

    ಶ್ರೀಲಂಕಾದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಒಂದೇ ದಿನದಲ್ಲಿ ಉದ್ಭವಿಸಿಲ್ಲ. ದೇಶದಲ್ಲಿ ಸದಾ ಈ ರೀತಿಯಾದಂತಹ ಬಿಕ್ಕಟ್ಟುಗಳು ನಿರ್ಮಾಣವಾಗುತ್ತಲೇ ಇವೆ. ನಮ್ಮ ದೇಶವು ಹೆಚ್ಚು ಆಮದು ಮತ್ತು ಕಡಿಮೆ ರಫ್ತು ಹೊಂದಿರುವ ಸಣ್ಣ ಆರ್ಥಿಕತೆಯ ರಾಷ್ಟ್ರವಾಗಿದೆ ಎಂದು ಹೇಳಿದರು.