Tag: IMA case

  • ಐಎಂಎ ಹಗರಣ – ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ  ಇಡಿ ನೋಟಿಸ್

    ಐಎಂಎ ಹಗರಣ – ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ ಇಡಿ ನೋಟಿಸ್

    ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಪರವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜು.7ರ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ಇಡಿ(ಜಾರಿ ನಿರ್ದೇಶನಾಲಯ) ಸಮನ್ಸ್ ಜಾರಿ ಮಾಡಿದೆ.

    ಈ ಬಗ್ಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಜಾರಿ ನಿರ್ದೇಶನಾಲಯ ಜುಲೈ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದು ನಿಜ, ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

    ಜು.7ರೊಳಗೆ ವಿವರ ನೀಡುವಂತೆ ಜಾರಿ ನಿರ್ದೇಶನಾಲಯದ ನೋಟಿಸಿನಲ್ಲಿ ತಿಳಿಸಲಾಗಿದೆ. ಈ ಕುರಿತು ಇಡಿಗೆ ಮಾಹಿತಿ ನೀಡುತ್ತೇನೆ. ಇದನ್ನೇ ಮಾಧ್ಯಮದವರು ದೊಡ್ಡದು ಮಾಡುತ್ತಿದ್ದಾರೆ. ರಿಚ್ಮಂಡ್ ಟೌನ್‍ನಲ್ಲಿ ಖರೀದಿಸಿದ ಎರಡು ಪ್ರಾಪರ್ಟಿ ಕುರಿತು ಮಾಹಿತಿ ಕೇಳಿದ್ದಾರೆ. ಈ ಪ್ರಾಪರ್ಟಿ ಖರೀದಿಸಲು 2 ಕೋಟಿ ರೂ. ಮುಂಗಡ ಹಣ ಪಾವತಿಸಿ ಜೂನ್‍ನಲ್ಲಿ ನೋಂದಾಯಿಸಿಕೊಂಡಿದ್ದೇನೆ. ಈ ಕುರಿತು ಮಾಧ್ಯಮಗಳಿಗೂ ವಿವರ ನೀಡಿದ್ದೇನೆ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

    ಇಡಿ ಸಮನ್ಸ್ ನೀಡಿರುವುದೂ ಇದೇ ಕಾರಣಕ್ಕೆ. ಮುಂದಿನ ತಿಂಗಳು ವಿಚವಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ. ಸಮನ್ಸ್ ಬರುವ ಕುರಿತು ನನಗೆ ನಿರೀಕ್ಷೆ ಇತ್ತು. ಅದರಂತೆ ಇಂದು ಬಂದಿದೆ. ಸೂಕ್ತ ದಾಖಲೆಗಳೊಂದಿಗೆ ಉತ್ತರಿಸುತ್ತೇನೆ. ಮನ್ಸೂರ್ ಖಾನ್ ಬರಬೇಕು. ರಾಜಕಾರಣಿಗಳಿಗೆ ದುಡ್ಡು ನೀಡಿದ್ದೇನೆ ಎನ್ನುತ್ತಾರೆ. ಈ ಕುರಿತು ಯಾರು ದುಡ್ಡು ಪಡೆದಿದ್ದಾರೆ. ಯಾರಿಗೆ ದುಡ್ಡು ನೀಡಬೇಕು ಎಂಬುದರ ಸಂಪೂರ್ಣ ಮಾಹಿತಿ ನೀಡಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಜಮೀರ್ ತಿಳಿಸಿದ್ದಾರೆ.

    ಎಸ್‍ಐಟಿ ತನಿಖೆಯಿಂದ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಸಿಬಿಐಗೆ ವಹಿಸುವಂತೆ ನಾನೇ ಮನವಿ ಮಾಡುತ್ತೇನೆ. ಇಡಿ ಈಗಾಗಲೇ ತನಿಖೆ ನಡೆಸುತ್ತಿದೆ. ಈ ವರೆಗೆ ಎಸ್‍ಐಟಿಯಿಂದ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ನಾನು ಎಲ್ಲ ರೀತಿಯ ಐಟಿ ಫೈಲ್ ಮಾಡಿದ್ದೇನೆ. ಯಾವುದೇ ತೊಂದರೆ ಇಲ್ಲ. ಎಸ್‍ಐಟಿ, ಇಡಿ, ಸಿಬಿಐ ಯಾವ ತನಿಖೆಯನ್ನಾದರೂ ನಡೆಸಲಿ ಒಟ್ಟಿನಲ್ಲಿ ಬಡವರಿಗೆ ನ್ಯಾಯ ಸಿಗಬೇಕು ಎಂದು ಜಮೀರ್ ಹೇಳಿದರು.

  • ಐಎಂಎ ವಂಚನೆಯಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿ – ಅಶ್ವತ್ಥನಾರಾಯಣ

    ಐಎಂಎ ವಂಚನೆಯಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿ – ಅಶ್ವತ್ಥನಾರಾಯಣ

    ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿಯಾಗಿದ್ದಾರೆ. ಹೀಗಾಗಿ ಈ ಹಗರಣವನ್ನು ಸಿಬಿಐಗೆ ನೀಡಬೇಕೆಂದು ಮಲ್ಲೇಶ್ವರ ಶಾಸಕ ಡಾ.ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದರೂ, ಎಸ್‍ಐಟಿಗೆ ವಹಿಸಲಾಗಿದೆ. 2019ರಿಂದಲೇ ಈ ಸಂಸ್ಥೆಯ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ನೇರವಾಗಿ ಸರ್ಕಾರ ಹಾಗೂ ವಿವಿಧ ತನಿಖಾ ಸಂಸ್ಥೆಗಳ ಗಮನಕ್ಕೆ ತಂದು ಎಚ್ಚರಿಕೆ ನೀಡುತ್ತಲೇ ಇದೆ. ಆದರೆ ಆರ್ಥಿಕ ಇಲಾಖೆ ಶಿಫಾರಸ್ಸಿನಂತೆ ಸಿಐಡಿ ತನಿಖೆ ಮಾಡಿ ಐಎಂಎಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಆರೋಪಿಸಿದರು.

    ಐಎಂಎ ಸಂಸ್ಥೆ ಹೂಡಿಕೆದಾರ ಸಂಸ್ಥೆ ಎಂದು ಸರ್ಕಾರ ವಾದಿಸುತಿತ್ತು. ಆದರೆ ವಾಸ್ತವದಲ್ಲಿ ಐಎಂಎ ಬ್ಯಾಂಕಿಂಗ್ ವ್ಯವಹಾರವನ್ನೂ ನಡೆಸಿದ್ದು, ಅದಕ್ಕೆ ಪೂರಕ ದಾಖಲೆಗಳಿವೆ. ಆದರೂ ಸರ್ಕಾರ ಕೇವಲ ಕಂದಾಯ ಇಲಾಖೆ ಮತ್ತು ಕಾನೂನು ಇಲಾಖೆ ನಡುವೆ ಪತ್ರ ವ್ಯವಹಾರ ಮಾಡಿ ಸಮಯ ವ್ಯರ್ಥ ಮಾಡಿವೆ. ರಾಜ್ಯ ಸರ್ಕಾರದಿಂದಲೂ ಐಎಂಎಗೆ 600 ಕೋಟಿ ರೂ. ಸಾಲಕ್ಕೆ ಗ್ಯಾರಂಟಿ ಕೊಡಲು ಸಿದ್ದವಾಗಿತ್ತು ಎಂದು ಅಶ್ವತ್ಥ ನಾರಾಯಣ ಕಿಡಿ ಕಾರಿದ್ದಾರೆ.

    ಕಳ್ಳನಿಂದಲೇ ಕಳ್ಳತನ: ಮನ್ಸೂರ್ ಕಳ್ಳ ಅವನಿಂದಲೇ ಅಧಿಕಾರಿಗಳು ಹಾಗೂ ಸರ್ಕಾರದ ಪ್ರಮುಖರು ಕಳ್ಳತನ ಮಾಡಿದ್ದಾರೆ. ಐಎಂಎ ಕಂಪನಿಯದ್ದು ಶೇರ್ ಯೋಜನೆಯಲ್ಲ, ಅದು ಠೇವಣಿ ಯೋಜನೆ ಎಂಬುದು ಖಚಿತವಾಗಿದೆ. ಐಎಂಎ ಸಂಸ್ಥೆ ವಾರ್ಷಿಕ ಲೆಕ್ಕ ತಪಾಸಣೆ ಹಾಗೂ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿ ಎಷ್ಟೋ ವರ್ಷಗಳಾಗಿವೆ. ಮನ್ಸೂರ್ ಖಾನ್ ಯಾವ ದೇಶದಲ್ಲಿದ್ದಾನೆ ಎಂಬುದೇ ಸರ್ಕಾರಕ್ಕೆ ಇನ್ನೂ ಖಚಿತವಿಲ್ಲ. ಅಲ್ಲದೆ, ಅವನನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಸರ್ಕಾರದಿಂದಲೇ ರಕ್ಷಣೆ: ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖರ ರಕ್ಷಣೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು, ಎಸ್‍ಐಟಿ ತನಿಖೆಯಿಂದ ಪ್ರಯೋಜನವಿಲ್ಲ. ಹೀಗಾಗಿ ಸಿಬಿಐ ತನಿಖೆಯೇ ಆಗಬೇಕು. ಐಎಂಎ ಪ್ರಕರಣದಲ್ಲಿ ಸರ್ಕಾರವೇ ಭಾಗಿಯಾಗಿದ್ದು, ಸಚಿವರು, ಶಾಸಕರು ಶಾಮೀಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‍ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಸ್‍ಐಟಿ ಮೂಲಕ ಸಾಕ್ಷ್ಯ ನಾಶಕ್ಕೂ ಪ್ರಯತ್ನಗಳು ನಡೆಸಬಹುದು. ಹೀಗಾಗಿ ಸಾಕ್ಷ್ಯ ನಾಶದ ಭೀತಿ ಇದೆ ಎಂದು ಶಾಸಕ ಅಶ್ವಥನಾರಾಯಣ ಅನುಮಾನ ವ್ಯಕ್ತಪಡಿಸಿದರ

  • ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ವರ್ತಿಸಲಿ: ಎಂಬಿಪಿ ಕಿವಿ ಮಾತು

    ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ವರ್ತಿಸಲಿ: ಎಂಬಿಪಿ ಕಿವಿ ಮಾತು

    ಮೈಸೂರು: ಸಂಸದೆ ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ವರ್ತಿಸಲಿ. ನಾವು ಬಿಜಾಪುರದವರು ನಮ್ಮ ಬಾಯಲ್ಲಿ ಬೇರೆ ಪದಗಳು ಬರುತ್ತೆ. ಆದರೆ ಅವರು ಹೆಣ್ಣುಮಗಳು ಅಂತ ನಾನು ಯಾವ ಪದಗಳನ್ನು ಪ್ರಯೋಗಿಸುತ್ತಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆಗೆ ಗೃಹಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೃಹ ಸಚಿವರಿಗೆ ಕಾನೂನಿನ ಜ್ಞಾನವೇ ಇಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಗೆ ತಿರುಗೇಟು ನೀಡಿದರು. ಬಳಿಕ ಜಿಂದಾಲ್ ಬಗ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಶೋಭಾ ಕರಂದ್ಲಾಜೆಯಂತಹ ಹೆಣ್ಣು ಮಕ್ಕಳ ಬಾಯಲ್ಲಿ ಅಂತ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ಜನರಿಗೆ ಗೊತ್ತಿದೆ. ಅದೆ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯು ಜನರಿಗೆ ಗೊತ್ತಿದೆ. ಜಿಂದಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ತಕರಾರಿದ್ದರೆ ಕಮಿಟಿ ಮುಂದೆ ಹೋಗಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

    ಐಎಂಎ ವಂಚನೆ ಪ್ರಕರಣದ ಬಗ್ಗೆ ಮಾತನಾಡಿ, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರು ಸಚಿವರಾಗಿದ್ದರು ಸರಿ, ಶಾಸಕರಾಗಿದ್ದರು ಸರಿ. ನಮ್ಮ ಇಲಾಖೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. ಎಸ್.ಐ.ಟಿ. ಇದನ್ನ ಸಮರ್ಪಕವಾಗಿ ನಿಭಾಯಿಸಲಿದೆ. ಸಿಬಿಐಗೆ ಕೊಟ್ಟ ಕೇಸ್‍ಗಳು ಏನಾಗಿವೆ ಅಂತ ನಮಗೆ ಗೊತ್ತಿವೆ. ದಿಢೀರ್ ನೆ ಬಿಜೆಪಿಯವರಿಗೆ ಸಿಬಿಐ ಮೇಲೆ ನಂಬಿಕೆ ಶುರುವಾಗಿದೆ ಎಂದು ಕಿಡಿಕಾರಿದರು.

    ಹಾಗೆಯೇ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೂಡಿಸೋದು ನಮ್ಮ ಗುರಿ. ವಂಚನೆಕಾರರ ಆಸ್ತಿ ಜಪ್ತಿ ಮಾಡೋದು. ಇಂತಹ ಬೇರೆ ಕಂಪನಿಗಳ ತಲೆ ಎತ್ತದಂತೆ ನೋಡಿಕೊಳ್ಳುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಲ್ಲದೆ ಚಾರ್ಜ್ ಶೀಟ್ ಆಗದೆ ಯಾರ ಹೆಸರನ್ನು ಪ್ರಕರಣಕ್ಕೆ ಜೊಡಿಸಿ ಹೇಳೋದು ಸರಿಯಲ್ಲ. ಈ ಪ್ರಕರಣ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.

  • ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು  ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಬೆಂಗಳೂರು: ಐಎಂಎ ಗೋಲ್ಡ್ ಕಂಪನಿಗೆ ಎನ್‍ಒಸಿ ನೀಡುವಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರು ಆರ್.ವಿ ದೇಶಪಾಂಡೆ ಬಳಿ ಮನ್ಸೂರ್ ಖಾನ್‍ನನ್ನು ಕರೆದೊಯ್ದಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಃ ಕಂದಾಯ ಸಚಿವರೇ ಬಾಯಿಬಿಟ್ಟಿದ್ದಾರೆ.

    ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶಪಾಂಡೆ ಈ ಬಗ್ಗೆ ಬಿಚ್ಚಿಟ್ಟಿದ್ದಾರೆ. ಕಳೆದ ತಿಂಗಳು ವಂಚಕ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ನನ್ನನ್ನು ಭೇಟಿ ಆಗಿದ್ದರು. ಮನ್ಸೂರ್ ಖಾನ್ ನನ್ನ ಕ್ಷೇತ್ರದವರು, ತುಂಬಾ ಒಳ್ಳೆಯ ಮನುಷ್ಯ. ಮನ್ಸೂರ್ ಖಾನ್ ಕಂಪನಿಗೆ ಎನ್‍ಒಸಿ ಕೊಡುವಂತೆ ನನ್ನ ಬಳಿ ಬೇಗ್ ಮನವಿ ಮಾಡಿದ್ದರು. ಯಾಕೆಂದರೆ ಎನ್‍ಒಸಿ ಸಿಕ್ಕಿದ್ದರೆ ಮನ್ಸೂರ್ ಖಾನ್ ಕಂಪನಿಗೆ ಬ್ಯಾಂಕ್‍ನಿಂದ 600 ಕೋಟಿ ಸಾಲ ಸಿಗುತ್ತಿತ್ತು. ಆದರೆ ಕಾನೂನಿನ ಚೌಕ್ಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನಷ್ಟೇ ಮಾಡಲು ಸಾಧ್ಯ ಎಂದು ಬೇಗ್‍ಗೆ ನಾನು ಸ್ಪಷ್ಟವಾಗಿ ಹೇಳಿದ್ದೆ ಎಂದು ತಿಳಿಸಿದರು.ಇದನ್ನೂ ಓದಿ:ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

    ಈ ಮೂಲಕ ಮನ್ಸೂರ್ ಖಾನ್ ಕಂಪನಿಯನ್ನು ಉಳಿಸಲು ಶಿವಾಜಿನಗರದ ಕಾಂಗ್ರೆಸ್ ಶಾಸಕ ಯತ್ನಿಸಿದ್ದರಾ? ದೇಶಪಾಂಡೆ ಬಳಿಗೆ ಖಾನ್‍ನನ್ನು ಕರೆದುಕೊಂಡು ಹೋಗಿದ್ದ ಬೇಗ್ ಅವರಿಗೆ ಇದರಿಂದ ಲಾಭವೇನಿತ್ತು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಒಟ್ಟಿನಲ್ಲಿ ಈ ಪ್ರಕರಣ ಯಾವೆಲ್ಲಾ ತಿರುವು ಪಡೆದುಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.