Tag: illicit realtionship

  • ಮಾಜಿ ಪ್ರೇಯಸಿಯಿಂದ ಬ್ಲ್ಯಾಕ್‌ಮೇಲ್- ಟ್ರಾಫಿಕ್ ಜಾಮ್‌ನಲ್ಲಿ ಪತ್ನಿಯನ್ನು ತೊರೆದು ಪತಿ ಪರಾರಿ

    ಮಾಜಿ ಪ್ರೇಯಸಿಯಿಂದ ಬ್ಲ್ಯಾಕ್‌ಮೇಲ್- ಟ್ರಾಫಿಕ್ ಜಾಮ್‌ನಲ್ಲಿ ಪತ್ನಿಯನ್ನು ತೊರೆದು ಪತಿ ಪರಾರಿ

    ಬೆಂಗಳೂರು: ಟ್ರಾಫಿಕ್ ಜಾಮ್‌ನಲ್ಲಿ (Traffic Jam) ನವ ವಿವಾಹಿತ ವರ ತನ್ನ ಪತ್ನಿಯನ್ನು ಬಿಟ್ಟು ಓಡಿ ಹೋದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಈ ಘಟನೆ ಬೆಂಗಳೂರಿನ ಮಹದೇವಪುರದ (Mahadevapura) ಟೆಕ್ ಕಾರಿಡಾರ್‌ನಲ್ಲಿ ನಡೆದಿದ್ದು, ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ಮೂಲದ ವರ ವಿಜಯ್ ಜಾರ್ಜ್ (Vijay George) (ಹೆಸರು ಬದಲಾಯಿಸಲಾಗಿದೆ) ಫೆಬ್ರವರಿ 16ರಂದು ಟೆಕ್ ಕಾರಿಡಾರ್‌ನ ಟ್ರಾಫಿಕ್ ಜಾಮ್‌ನಲ್ಲಿ ಕಾರ್ ಸಿಲುಕಿಕೊಂಡ ಸಂದರ್ಭ, ಕಾರಿನ ಬಾಗಿಲು ತೆರೆದು ಪತ್ನಿಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಇದರಿಂದ ಗಾಬರಿಗೊಂಡ ಪತ್ನಿ ತಾನೂ ಕಾರಿನಿಂದ ಇಳಿದು ಅವನ ಹಿಂದೆ ಓಡಿದ್ದಾಳೆ. ಆದರೆ ಆತ ಅವಳ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ವಿಜಯ್ ಜಾರ್ಜ್ ಅವರ ತಂದೆ ಕರ್ನಾಟಕ (Karnataka) ಮತ್ತು ಗೋವಾದಲ್ಲಿ (Goa) ಮ್ಯಾನ್ ಪವರ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಈ ವಿಷಯವಾಗಿ ವಿಜಯ್ ತನ್ನ ತಂದೆಗೆ ಸಹಾಯ ಮಾಡುತ್ತಿದ್ದ. ಗೋವಾದಲ್ಲಿದ್ದಾಗ ತಮ್ಮ ಕಂಪೆನಿಯ ಕಾರ್ ಚಾಲಕನ ಪತ್ನಿಯ ಜೊತೆ ವಿಜಯ್ ಜಾರ್ಜ್ ಅಕ್ರಮ ಸಂಬಂಧ (Illicit Realtionship) ಹೊಂದಿದ್ದ. ಎರಡು ಮಕ್ಕಳ ತಾಯಿಯಾಗಿದ್ದ ಆ ಮಹಿಳೆ ಅದೇ ಕಂಪನಿಯಲ್ಲಿ ಕ್ಲರ್ಕ್ (Clerk) ಆಗಿ ಕೆಲಸ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ತಾಯಿಗೆ ವಿಷಯ ತಿಳಿದ ಬಳಿಕ ಜಾರ್ಜ್  ತಮ್ಮ ಸಂಬಂಧವನ್ನು ಕೊನೆಗೊಳಿಸುವುದಾಗಿ ಹೇಳಿದ್ದ. ಆದರೂ ಜಾರ್ಜ್ ಕದ್ದುಮುಚ್ಚಿ ಮಹಿಳೆಯನ್ನು ಭೇಟಿಯಾಗುತ್ತಿದ್ದ. ಈ ಸಂಬಂಧವನ್ನು ತಡೆಯಲು ಜಾರ್ಜ್ ಕುಟುಂಬವು ಬೇರೆ ಯುವತಿಯೊಡನೆ ಮದುವೆ ನಿಶ್ಚಯಿಸಿದರು. ಮದುವೆಗೆ ಮೊದಲೇ ವಿಜಯ್ ತಮ್ಮ ಪ್ರೇಮದ ಬಗ್ಗೆ ಯುವತಿಯೊಡನೆ ಹೇಳಿಕೊಂಡಿದ್ದ. ಅಲ್ಲದೇ ಆಕೆಯ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಯುವತಿ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇದನ್ನೂ ಓದಿ: LACಯಲ್ಲಿ ಸಂಘರ್ಷ, ಭಾರತದಲ್ಲಿ ಉಗ್ರ ದಾಳಿ- ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ

     

    ಆದರೆ ವಿಜಯ್ ಜಾರ್ಜ್ ನ ಮಾಜಿ ಪ್ರೇಮಿ ಅವರಿಬ್ಬರ ಖಾಸಗಿ ಕ್ಷಣಗಳ ವೀಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ವಿಜಯ್ ಅವರಿಗೆ ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿದ್ದರು. ಮದುವೆಯ ನಂತರ ತನ್ನ ಪತ್ನಿಯೊಡನೆ ವಿಜಯ್ ತನ್ನ ಮಾಜಿ ಪ್ರೇಮಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆಂದು ಹೇಳಿಕೊಂಡಿದ್ದ. ಇದಕ್ಕೆ ಪತ್ನಿ ಹಾಗೂ ಆಕೆಯ ತಂದೆ ಆತನ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಳು. ಇದನ್ನೂ ಓದಿ: ಮೊದಲು ನಿಮ್ಮ ದೇಶವನ್ನು ನೋಡಿಕೊಳ್ಳಿ – ಪಾಕಿಸ್ತಾನಕ್ಕೆ ಭಾರತ ವಾರ್ನಿಂಗ್

    ಭರವಸೆಯ ಹೊರತಾಗಿಯೂ, ಮದುವೆಯ ಮರುದಿನ ದಂಪತಿ ಚರ್ಚ್‌ (Church)  ಭೇಟಿ ನೀಡಿ ಹಿಂದಿರುಗುವ ವೇಳೆ ಮಹಿಳೆಯ ಬ್ಲ್ಯಾಕ್‌ಮೇಲ್‌ಗೆ, ಟ್ರಾಫಿಕ್ ಜಾಮ್‌ನಲ್ಲಿ ವಿಜಯ್ ಜಾರ್ಜ್ ಓಡಿಹೋಗಿದ್ದಾನೆ ಎಂದು ಆತನ ಪತ್ನಿ ತಿಳಿಸಿದ್ದಾಳೆ.

    ಈ ಕುರಿತು ಎರಡು ವಾರಗಳಿಗೂ ಹೆಚ್ಚು ಕಾಲ ವಿಜಯ್ ಜಾರ್ಜ್ ಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಾರ್ಚ್ 5ರಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ & ವೈಟ್ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್

  • ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

    ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

    ನವದೆಹಲಿ: ಮಗನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ತಾರಕಕ್ಕೇರಿ ಪತಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ.

    28 ವರ್ಷದ ದಿವ್ಯ ತನ್ನ ಪತಿ ಅಫ್ತಬ್ ಅಹ್ಮದ್(32) ನಿಂದ ಕೊಲೆಗೀಡಾಗಿದ್ದಾಳೆ. ಪತಿಗೆ ಅಕ್ರಮ ಸಂಬಂಧ ಇರುವ ಶಂಕೆಯೇ ಈಕೆಯ ಕೊಲೆಗೆ ಕಾರಣವಾಗಿದೆ.

    ಘಟನೆ ವಿವರ:
    ದಿವ್ಯಾ ಹಾಗೂ ಅಫ್ತಬ್ ಮನೆಯ ವಿರೋಧದ ನಡುವೆಯೇ ಮದುವೆಯಾಗಿದ್ದು, ಬಳಿಕ ದೆಹಲಿಯ ನಜಾಫ್ ಗ್ರಹ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳವರೆಗೆ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಮಾತುಕತೆಗಳು ನಡೆಯುತ್ತಿತ್ತು. ತದನಂತರ ದಿವ್ಯ, ಪತಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನಕಳೆದಂತೆ ಇಬ್ಬರ ಮಧ್ಯೆ ಮೈನಸ್ಸು ಮೂಡಿತ್ತು. ಹೀಗಾಗಿ ಬುಧವಾರ ರಾತ್ರಿ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

    ಪ್ರಕರಣ ಸಂಬಂಧ ಆರೋಪಿ ಪತಿ ಅಫ್ತಬ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದು, ಅಫ್ತಬ್ ಪತ್ತೆಗೆ ಬಲೆ ಬೀಸಲಾಗಿದೆ. ಈ ಘಟನೆ ನಜಾಫ್ ಗ್ರಹ್ ನ ರಣಜಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಆರೋಪಿ ಅಫ್ತಬ್ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

    ದಂಪತಿಗೆ 3 ವರ್ಷದ ಮಗನಿದ್ದಾನೆ. ಅಫ್ತಬ್ ಗೆ ಅಕ್ರಮ ಸಂಬಂಧವಿದೆಯೆಂದು ದಿವ್ಯ ಸಂಶಯ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತಿತ್ತು. ಕಳೆದ ಎರಡು ವಾರಗಳ ಹಿಂದೆ ತನ್ನ ಮಗನನ್ನ ಅಫ್ತಬ್ ತಂದೆ-ತಾಯಿ ಮನೆಯಲ್ಲಿ ಬಿಟ್ಟು ಮಂಗಳವಾರವಷ್ಟೇ ವಾಪಸ್ಸಾಗಿದ್ದನು. ಆದ್ರೆ ಮಗನನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು ಬಂದಿರೋ ವಿಚಾರವನ್ನು ಅಫ್ತಬ್, ಪತ್ನಿ ದಿವ್ಯಳ ಬಳಿ ಹೇಳಿರಲಿಲ್ಲ ಅಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಅಫ್ತಬ್ ಮಂಗಳವಾರ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಜೊತೆ ಮಗ ಇಲ್ಲದಿರುವುದನ್ನು ಕಂಡು ರೊಚ್ಚಿಗೆದ್ದ ದಿವ್ಯ, ಪತಿ ಜೊತೆ ಖ್ಯಾತೆ ತೆಗೆದಿದ್ದಾಳೆ. ಅಲ್ಲದೇ ನನ್ನ ಮಗನನ್ನು ಮಾರಾಟ ಮಾಡಿದ್ದಿ ಅಂತ ಹೇಳಿ ತಗಾದೆ ತೆಗೆದಿದ್ದಾಳೆ. ಪತ್ನಿಯ ಗಲಾಟೆಯಿಂದ ಬೇಸತ್ತ ಅಫ್ತಬ್, ಪಕ್ಕದಲ್ಲೇ ಇದ್ದ ಸುತ್ತಿಗೆಯನ್ನು ತೆಗೆದುಕೊಂಡು ದಿವ್ಯ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಚಾಕುವಿನಿಂದ ಕುತ್ತಿಗೆಯನ್ನು ಸೀಳಿದ್ದಾನೆ. ಪರಿಣಾಮ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬಳಿಕ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಬುಧವಾರ ಸಂಜೆಯಾಗುತ್ತಿದ್ದಂತೆಯೇ ದಿವ್ಯ ಕಾಣದಿದ್ದರಿಂದ ಸಂಶಯಗೊಂಡ ನೆರೆಮನೆಯವರು ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಈ ಮೂಲಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪತಿ, ಪತ್ನಿಯನ್ನು ಬಿಟ್ಟು ಬಂದು ಅಕ್ರಮ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ

    ಪತಿ, ಪತ್ನಿಯನ್ನು ಬಿಟ್ಟು ಬಂದು ಅಕ್ರಮ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ

    ಮೈಸೂರು: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರ ಮತ್ತು ಆತನ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

    ವರದಮ್ಮ(35) ಹಾಗೂ ಮಹದೇವಸ್ವಾಮಿ(31) ಮೃತ ಪ್ರೇಮಿಗಳು. ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ವರದಮ್ಮ ತಮ್ಮ ಪತಿ ಹಾಗೂ ಮಹದೇವಸ್ವಾಮಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದರು. ಎರಡು ವರ್ಷದಿಂದ ಬೇರೊಂದು ಮನೆ ಮಾಡಿ ಸಂಸಾರ ನಡೆಸುತ್ತಿದ್ದರು. ಆದ್ರೆ ಭಾನುವಾರ ಬೆಳಗ್ಗೆ ವರದಮ್ಮ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ಮಹದೇವಸ್ವಾಮಿ ಕೂಡ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಬ್ಬರ ಮೃತದೇಹವನ್ನು ನಿನ್ನೆಯೇ ಹೆಚ್‍ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಹೆಚ್‍ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.