Tag: illicit realationship

  • Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ

    Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ

    ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ (Illicit Relationship) ಬೇಸತ್ತ ಪತ್ನಿ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಗಲಗುಂಟೆಯಲ್ಲಿ (Bagalgunte) ನಡೆದಿದೆ.

    ಶೃತಿ (33) ಆತ್ಮಹತ್ಯೆ ಮಾಡಿಕೊಂಡ ಪತ್ನಿ. ಪಾವಘಡದ ಗುಂಡಾರನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಶೃತಿ ಮಗಳು ರೋಶಿಣಿಯನ್ನು (5) ಫ್ಯಾನ್‌ಗೆ ನೇಣು ಹಾಕಿ ಬಳಿಕ ಅದೇ ಫ್ಯಾನಿಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಜಾತ್ರೆಗೆ ಒಂದು ದಿನ ಇರುವಾಗಲೇ ದೇವಾಲಯದ ಹುಂಡಿ ಕಳವು!

    ಶೃತಿ, ಈ ಹಿಂದೆ ಪಂಚಾಯತ್ ಕಚೇರಿಯಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣನನ್ನ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಭಾನುವಾರ ಸಂಜೆ ಪತಿ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಮನೆಯ ಹೊರಗಡೆ ಆಟವಾಡುತ್ತಿದ್ದ. ಮಗ ಮನೆಯೊಳಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಲಸ ಮಾಡದ ಮೋದಿಯನ್ನು ಕೆಳಗಿಳಿಸಿ, ಗಡ್ಕರಿಯನ್ನು ಪ್ರಧಾನಿ ಮಾಡಿ: ಸಂತೋಷ್‌ ಲಾಡ್‌

    ಗಂಡ ಗೋಪಾಲಕೃಷ್ಣನ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ಡೆತ್ ನೋಟ್ ಬರೆದಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದೆ. ಸ್ಥಳಕ್ಕೆ ಬಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಪತಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 17ರ ಬಾಲಕಿ ಮೇಲೆ ಅತ್ಯಾಚಾರ – ಮೃತ ವ್ಯಕ್ತಿಯ ವಿರುದ್ಧ ಪೋಕ್ಸೋ ಕೇಸ್‌

  • ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

    ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

    ದಾವಣಗೆರೆ: ಕಾಣೆಯಾಗಿದ್ದ ಮಹಿಳೆಯೊಬ್ಬರ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ನಿಟ್ಟೂರು ಗ್ರಾಮದ ಕವಿತಾ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ. ಈಕೆ ವಿವಾಹಿತೆಯಾಗಿದ್ದು, ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎಂಬಾತನ ಜೊತೆ ಅಕ್ರಮ ಸಂಬಂಧವನ್ನು (Illicit Relationship) ಹೊಂದಿದ್ದಳು. ಕಳೆದ ಫೆಬ್ರವರಿ 23ರಂದು ಕವಿತಾ ಹಾಗೂ ಸಲೀಂ ನಡುವೆ ಜಗಳ ನಡೆದಿತ್ತು. ಬಳಿಕ ಸಲೀಂ ಕವಿತಾಳನ್ನು ಬೈಕಿನಲ್ಲಿ ಕೂರಿಸಿಕೊಂಡು ಕುಂಚೂರು ಕೆರೆಯ ನಿರ್ಜನ ಪ್ರದೇಶಕ್ಕೆ ತೆರಳಿದ್ದ. ಇದನ್ನೂ ಓದಿ: ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ನಿರ್ಜನ ಪ್ರದೇಶಕ್ಕೆ ಕವಿತಾಳನ್ನು ಕರೆದೊಯ್ದ ಸಲೀಂ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಅಲ್ಲಿಯೇ ಸುಟ್ಟು ಹಾಕಿದ್ದಾನೆ. ದಾವಣಗೆರೆಯ ಅಲೂರು ಗ್ರಾಮದಲ್ಲಿದ್ದ ಕವಿತ ಕಳೆದ ಫೆಬ್ರವರಿ 23 ರಂದು ಹರಿಹರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಬಂದಿರಲಿಲ್ಲ. ಅಲ್ಲದೆ ಗಂಡನ ಮನೆ ನಿಟ್ಟೂರಿಗೂ ಕೂಡ ಹೋಗದ ಕಾರಣ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಗೂಡ್ಸ್ ರೈಲಿನಡಿಯಿಂದ ಹಳಿ ದಾಟಲು ಮುಂದಾಗಿ ಮಹಿಳೆ ತಲೆಗೆ ಗಂಭೀರ ಗಾಯ!

    ಯಾವಾಗಲೂ ಪೋನ್ ಬ್ಯೂಝಿ ಬರ್ತಾ ಇರುತ್ತದೆ. ನನ್ನನ್ನು ಬಿಟ್ಟು ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಸಲೀಂ ಕವಿತಾಳನ್ನು ಪ್ರಶ್ನೆಸಿ ಜೋರಾಗಿ ಜಗಳವಾಡಿದ್ದಾರೆ. ಅಲ್ಲದೇ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಸಲೀಂ ಕವಿತಾಳ ಕತ್ತು ಹಿಸುಕಿ ಸಾಯಿಸಿದ್ದಾನೆ, ಈ ವಿಷಯ ಯಾರಿಗೂ ಗೊತ್ತಾಗದಂತೆ ತಡೆಯಲು ಸಲೀಂ ಪರಿಚಯಸ್ಥರ ಜಮೀನಿನಲ್ಲಿ ಆಕೆಯ ಶವ ಕಟ್ಟಿಗೆಯಲ್ಲಿ ಸುಟ್ಟು ಹಾಕಿ ಮನೆಗೆ ಹಿಂತಿರುಗಿದ್ದಾನೆ. ಇದನ್ನೂ ಓದಿ: ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

    ಕಳೆದ ಕೆಲ ದಿನಗಳ ನಂತರ ಅಲ್ಲಿ ನಡೆದಿರುವ ಘಟನೆಯನ್ನು ಆರೋಪಿ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾನೆ.‌ ನೀನು ಕೂಡ ಅದೇ ಸಮುದಾಯಕ್ಕೆ ಸೇರಿದ ವ್ಯಕ್ತಿ ನೀನು ನನ್ನನ್ನು ಕಾಪಾಡು. ನನಗೆ ಹೆಂಡತಿ ಮಕ್ಕಳಿದ್ದಾರೆ ಎಂದು ಬೇಡಿಕೊಂಡ ಹಿನ್ನೆಲೆ ಪ್ರಕರಣ ಬಯಲಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಈ ಕುರಿತು ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಾರ್ಶ್ವವಾಯು ಬಾರದಂತೆ 150 ರೂ. ಇಂಜೆಕ್ಷನ್ ಪಡೆದ CA – ಕೆಲವೇ ನಿಮಿಷಗಳಲ್ಲಿ ಆರೋಗ್ಯವಂತ ಮಹಿಳೆ ಸಾವು

  • ಆ ಕೊಲೆ ಮನೆ ಮುಂದಿದ್ದ ಚಪ್ಪಲಿಯಿಂದ ಬಯಲಾಯ್ತು!

    ಆ ಕೊಲೆ ಮನೆ ಮುಂದಿದ್ದ ಚಪ್ಪಲಿಯಿಂದ ಬಯಲಾಯ್ತು!

    ಪುಣೆ: ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಜೊತೆಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಾಹಿತ ಮಹಿಳೆಯ ಪತಿ ಸೇರಿ ಮೂವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    POLICE JEEP

    ಕೊಲೆಯಾದ ವ್ಯಕ್ತಿಯ ಚಪ್ಪಲಿಯ ಸಾಕ್ಷ್ಯ ಆಧಾರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಕೊಲೆಯಾದ 27 ವರ್ಷದ ಯುವಕ ಬಂದಿದ್ದ. ಇದೇ ಮನೆಯ ಮುಂಭಾಗದಲ್ಲಿ ಚಪ್ಪಲಿಯೊಂದು ಸಿಕ್ಕಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯ ಪತಿ ಹಾಗೂ ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ.

    ಕೊಲೆಯಾದ ಯುವಕ ಕಳೆದ ಅಕ್ಟೋಬರ್ 22ರಂದು ಬಾವ್ಧಾನ್ ಎಂಬಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಆತನ ತಾಯಿ ದೂರು ನೀಡಿದ್ದರು. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕಿಡ್ನ್ಯಾಪ್ ಆಗಿರಬಹುದು ಎಂದು ಕೂಡಾ ವಿಚಾರಣೆ ನಡೆಸಿದ್ದರು. ಇದೇ ವೇಳೆ ಮನೆಯೊಂದರ ಮುಂದೆ ಯುವಕ ಬಳಸುತ್ತಿದ್ದ ಚಪ್ಪಲಿ ಸಿಕ್ಕಿದೆ.

    ಏನಾಯ್ತು?: ಪೊಲೀಸರು ಹೇಳುವ ಪ್ರಕಾರ, ಕೊಲೆಯಾದ ಯುವಕ ಚಪ್ಪಲಿ ಸಿಕ್ಕಿದ ಮನೆಯ ಮಾಲೀಕನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಹತ್ಯೆ ಮಾಡುವುದಕ್ಕೂ ಮುನ್ನ ಆರೋಪಿ ತನ್ನ ಪತ್ನಿಯ ಮೊಬೈಲ್‍ನಲ್ಲಿ 2 ಮಿಸ್ಡ್ ಕಾಲ್ ಬಂದಿರೋದನ್ನ ನೋಡಿದ್ದಾನೆ. ಇದರಿಂದ ಆಕೆಯ ಪತಿಗೆ ಅನುಮಾನ ಶುರುವಾಗಿದೆ. ಅಕ್ಟೋಬರ್ 21ರಂದು ರಾತ್ರಿ ಇದೇ ನಂಬರ್‍ನಿಂದ ಯುವಕನಿಗೆ ಕಾಲ್ ಹೋಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ

    ಮಧ್ಯರಾತ್ರಿ ಬಳಿಕ ಯುವಕ ಮಹಿಳೆಯ ಮನೆಯತ್ತ ಹೋಗಿದ್ದಾನೆ. ಇದಕ್ಕಾಗಿ ಹೊಂಚು ಹಾಕಿ ಕೂತಿದ್ದ ಆರೋಪಿ ಇನ್ನಿಬ್ಬರ ಜೊತೆ ಸೇರಿ ಯುವಕನ ಎದೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿದ್ದಾರೆ. ಆತ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ ಆರೋಪಿಗಳಲ್ಲೊಬ್ಬನ ಕಳ್ಳಭಟ್ಟಿ ಕೇಂದ್ರಕ್ಕೆ ಕೊಂಡೊಯ್ದು ಮೃತದೇಹವನ್ನು ಸುಟ್ಟಿದ್ದಾರೆ. ಬಳಿಕ ಅಳಿದುಳಿದ ಅವಶೇಷಗಳನ್ನು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದರು.

    ಪೊಲೀಸರ ತನಿಖೆ ವೇಳೆ ಒಬ್ಬ ಪುಣೆಯಲ್ಲಿ ಪತ್ತೆಯಾದರೆ, ಪರಾರಿಯಾಗಿದ್ದ ಪ್ರಮುಖ ಆರೋಪಿ ಹಾಗೂ ಆತನ ಸಹಚರನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.