Tag: Illegal Trafficking

  • ಚುನಾವಣೆಗೆ ಮುನ್ನ ಭರ್ಜರಿ ಕಾರ್ಯಾಚರಣೆ – ಚೆಕ್‌ಪೋಸ್ಟ್‌ಗಳಲ್ಲಿ 15 ಲಕ್ಷ, ತಂಬಾಕು ಸೀಜ್

    ಚುನಾವಣೆಗೆ ಮುನ್ನ ಭರ್ಜರಿ ಕಾರ್ಯಾಚರಣೆ – ಚೆಕ್‌ಪೋಸ್ಟ್‌ಗಳಲ್ಲಿ 15 ಲಕ್ಷ, ತಂಬಾಕು ಸೀಜ್

    ಗದಗ: ಚುನಾವಣೆ ಮುನ್ನವೇ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ (Checkpost) ಪೊಲೀಸರು (Police) ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ, ತಂಬಾಕು (Tobacco) ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

    ನಗರದ ಮುಳಗುಂದ ರಸ್ತೆಯಲ್ಲಿನ ಚೆಕ್‌ಪೋಸ್ಟ್ ತಪಾಸಣೆ ವೇಳೆ 15 ಲಕ್ಷ ರೂ. ಹಣ (Money) ಸಿಕ್ಕಿದೆ. ಹಾವೇರಿ ಜಿಲ್ಲೆ ಹುಲಗೂರನಿಂದ ಗದಗ ಮಾರ್ಗವಾಗಿ ದೇವದುರ್ಗಕ್ಕೆ ಹೊರಟಿದ್ದ ಕಾರಿನಲ್ಲಿ ದಾಖಲೆ ಇಲ್ಲದೇ ತೆಗೆದುಕೊಂಡು ಹೊರಟಿದ್ದ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

    ಮುಂಡರಗಿ ಚೆಕ್‌ಪೋಸ್ಟ್‌ನಲ್ಲಿ ತಂಬಾಕು ಸೀಜ್ ಮಾಡಲಾಗಿದೆ. ಶಿವರಾಜ್ ನಾಗರಕಟ್ಟಿ ಎಂಬವರು ಬಿಲ್ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 1 ಲಕ್ಷ 84 ಸಾವಿರ ರೂ. ಮೌಲ್ಯದ ತಂಬಾಕು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನು ಗದಗದಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗುತ್ತಿತ್ತು. ಇದನ್ನೂ ಓದಿ: ಮದ್ಯಪಾನ ಮಾಡಿ ಒಂದೇ ವಾರದಲ್ಲಿ ಐವರ ಸಾವು – ಗ್ರಾಮಸ್ಥರಲ್ಲಿ ಮೂಡಿದ ಆತಂಕ

    ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್‌ಪೋಸ್ಟ್‌ನಲ್ಲಿ ಸಹ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1 ಲಕ್ಷ 10 ಸಾವಿರ ರೂ. ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದೆ. ಇದು ರಾಣೆಬೆನ್ನೂರಿನಿಂದ ಶಿರಹಟ್ಟಿಗೆ ಶ್ಯಾಮ ನವಲೆ ಎಂಬವರು ಸಾಗಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗದಗ ಎಸ್‌ಪಿ ಬಿಎಸ್ ನೇಮಗೌಡ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರತ್ಯೇಕ ಪ್ರಕರಣಗಳು ಕಂಡು ಬಂದಿವೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಾಯಿಗೆ ದ್ರೋಹ ಮಾಡಿದ ಬಾಬುರಾವ್ ಚಿಂಚನಸೂರು – ಗಿರೀಶ್ ಮಟ್ಟಣ್ಣನವರ್

  • ಗೋಣಿ ಚೀಲಕ್ಕೆ ಹಾಕಿ ಸಾಗಿಸಲಾಗಿದ್ದ ಕರುಗಳಿಗೆ ಪೊಲೀಸ್ ಠಾಣೆಯಲ್ಲಿ ಹಾಲು ಕುಡಿಸಿ ಆರೈಕೆ

    ಗೋಣಿ ಚೀಲಕ್ಕೆ ಹಾಕಿ ಸಾಗಿಸಲಾಗಿದ್ದ ಕರುಗಳಿಗೆ ಪೊಲೀಸ್ ಠಾಣೆಯಲ್ಲಿ ಹಾಲು ಕುಡಿಸಿ ಆರೈಕೆ

    ಚಿಕ್ಕಬಳ್ಳಾಪುರ: ಅಮಾನವೀಯವಾಗಿ ದುಷ್ಕರ್ಮಿಗಳಿಂದ ಸಾಗಿಸಲಾಗಿದ್ದ ಕರುಗಳನ್ನು ರಕ್ಷಿಸಲಾಗಿದ್ದು, ಅವುಗಳಿಗೆ ಪೊಲೀಸ್ ಠಾಣಾ ಸಿಬ್ಬಂದಿ ಹಾಲು ಕುಡಿಸಿ ಆರೈಕೆ ಮಾಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪೊಲೀಸ್ ಸಿಬ್ಬಂದಿಯ ಕಾಳಜಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

    ಶನಿವಾರ ಗೋಣಿ ಚೀಲದಲ್ಲಿ ತುಂಬಿದ 2 ಕರುಗಳನ್ನು ದ್ವಿಚಕ್ರ ವಾಹನದಲ್ಲಿ ದುಷ್ಕರ್ಮಿಗಳು ಅಮಾನವೀಯವಾಗಿ ಸಾಗಿಸುತ್ತಿದ್ದರು. ಅವುಗಳನ್ನು ಬಜರಂಗದಳದ ಕಾರ್ಯಕರ್ತರು ರಕ್ಷಿಸಿದ್ದರು. ಅಕ್ರಮ ಸಾಗಾಟದಲ್ಲಿ ರಕ್ಷಿಸಲಾಗಿದ್ದ ಕರುಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹಾಲು ಕುಡಿಸಿ, ಆರೈಕೆ ಮಾಡಿದ್ದಾರೆ. ಇದನ್ನೂ ಓದಿ: ಮುನಿರತ್ನ, ಬೈರತಿ, ಗೋಪಾಲಯ್ಯ, ನಾಗೇಶ್ ಜನೋಪಯೋಗಿ ಮಂತ್ರಿಗಳು: ಬೊಮ್ಮಾಯಿ

    ದೊಡ್ಡಬಳ್ಳಾಪುರದ ಭುವನೇಶ್ವರಿ ನಗರ 4ನೇ ಕ್ರಾಸ್ ಬಳಿ, ಗೌಡಹಳ್ಳಿ ಮೂಲಕ ಸುಮಾರು 5 ದಿನದ 2 ಕರುಗಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸಾಗಿಸುತ್ತಿದ್ದರು. ಇದನ್ನು ಕಂಡು ಅನುಮಾನಗೊಂಡ ಬಜರಂಗದಳದ ಕಾರ್ಯಕರ್ತರು ಹಾಗೂ ಸ್ಥಳೀಯರು ಬೈಕ್ ಅನ್ನು ತಡೆದು, ಚೀಲವನ್ನು ಬಿಚ್ಚಿದಾಗ ಕರುಗಳನ್ನು ಅಮಾನವೀಯವಾಗಿ ತುಂಬಿರುವುದು ಪತ್ತೆಯಾಗಿತ್ತು. ಇದನ್ನೂ ಓದಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಮಾಯಕರಲ್ಲ: ಸಿ.ಟಿ. ರವಿ

    ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಗಳು ಹಾಗೂ ಕರುಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದರು. ಇದೀಗ 6 ದಿನದ ಕರುಗಳಿಗೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಬಾಟಲ್ ಮೂಲಕ ಹಾಲು ಕುಡಿಸಿ, ಆರೈಕೆ ಮಾಡುತ್ತಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೊರ ರಾಜ್ಯಕ್ಕೆ ಪಡಿತರ ಅಕ್ಕಿ ಅಕ್ರಮ ಸಾಗಾಣೆ – ಓರ್ವನ ಬಂಧನ, 25 ಟನ್ ಅಕ್ಕಿ ವಶ

    ಹೊರ ರಾಜ್ಯಕ್ಕೆ ಪಡಿತರ ಅಕ್ಕಿ ಅಕ್ರಮ ಸಾಗಾಣೆ – ಓರ್ವನ ಬಂಧನ, 25 ಟನ್ ಅಕ್ಕಿ ವಶ

    ಬೀದರ್: ಅನ್ನಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಅನ್ಯ ರಾಜ್ಯಕ್ಕೆ ಸಾಗಿಸುವಾಗ ಜಪ್ತಿಯಾಗಿದೆ.

    ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಲಾರಿ ಸಹಿತ 25 ಟನ್ ಅಕ್ಕಿ ವಶಪಡಿಸಿಕೊಂಡ ಫಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ. ಅಕ್ಕಿ ತುಂಬಿದ ಲಾರಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65-ರ ಚಂಡಕಾಪೂರ ಸಮೀಪ ದಾಳಿ ಮಾಡಿ ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

    ಆಹಾರ ಇಲಾಖೆ ಶಿರಸ್ತೇದಾರ ರಾಮರತನ ದೇಗಲೆ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, 7.5 ಲಕ್ಷ ಮೌಲ್ಯದ 250 ಕ್ವಿಂಟಾಲ್ (25 ಟನ್) ಅಕ್ಕಿ ಸಹಿತ ಲಾರಿ ಜಪ್ತಿ ಮಾಡಿ. ಗುಜರಾತಿನ ಜಾಮ್‍ನಗರ ಮೂಲದ ಲಾರಿ ಚಾಲಕ ಭೋವನ್ ವಘೇಲಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.