Tag: illegal sand mining

  • ಅಕ್ರಮ ಮರಳು ಗಣಿಗಾರಿಕೆ – ಲಕ್ಷಾಂತರ ರೂ. ಮೌಲ್ಯದ ಬೋಟ್‌ಗೆ ಬೆಂಕಿ ಇಟ್ಟ ಅಧಿಕಾರಿಗಳು

    ಅಕ್ರಮ ಮರಳು ಗಣಿಗಾರಿಕೆ – ಲಕ್ಷಾಂತರ ರೂ. ಮೌಲ್ಯದ ಬೋಟ್‌ಗೆ ಬೆಂಕಿ ಇಟ್ಟ ಅಧಿಕಾರಿಗಳು

    ಬೀದರ್‌: ಯಾವುದೇ ಪರವಾನಿಗೆ ಇಲ್ಲದೇ ಭಾಲ್ಕಿ (Bhalki) ತಾಲೂಕಿನ ಹಲಸಿ ತೂಗಾಂವ್‌ನ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ದಂಧೆಗೆ (Illegal Sand Mining) ಬಳಸುತ್ತಿದ್ದ ಬೋಟ್‌ಗೆ ಗಣಿ ಅಧಿಕಾರಿಗಳು ಬೆಂಕಿ ಹಾಕಿ ಶಾಕ್ ನೀಡಿದ್ದಾರೆ.

    ಹಲವು ವರ್ಷಗಳಿಂದ ಕದ್ದು ಮುಚ್ಚಿ ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಅಕ್ರಮ ದಂಧೆಕೋರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದರು. ಆದರೂ ಸಹ ಅಕ್ರಮ ಮರಳು ದಂಧೆ ಮುಂದುವರೆದಿತ್ತು.

    ಇದೀಗ ಮರಳು ದಂಧೆಕೋರರು ಬಳಸುತ್ತಿದ್ದ ಬೋಟ್‌ಗೆ ಅಧಿಕಾರಿಗಳು ಬೆಂಕಿ ಹಾಕಿದ್ದು, ಲಕ್ಷಾಂತರ ರೂ. ಬೆಲೆಯ ಬೋಟ್‌ಗೆ ಬೆಂಕಿ ಹಚ್ಚಿದ್ದು, ಸಂಪೂರ್ಣವಾಗಿ ನಾಶವಾಗಿದೆ.

    ಹಲವು ವರ್ಷಗಳಿಂದ ಅಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯ ಮಾಂಜ್ರಾ ನದಿಯಲ್ಲಿ ಮರಳು ದಂಧೆ ನಡೆಯುತ್ತಿದೆ. ಈ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಬಂದು ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಬಿಟ್ಟಿದ್ದ ಬೋಟ್‌ಗೆ ಅಧಿಕಾರಿಗಳು ಬೆಂಕಿ ಹಾಕಿದ್ದಾರೆ.

    ಕಾರ್ಯಾಚರಣೆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಧನರಾಜ್ ಹಾಗೂ ಸಿಬ್ಬಂದಿಗೆ ಸ್ಥಳೀಯ ತಹಶಿಲ್ದಾರ್ ಹಾಗೂ ಭಾಲ್ಕಿ ಗ್ರಾಮೀಣ ಪೋಲೀಸರು ಸಾಥ್ ನೀಡಿದ್ದರು.

  • ಮುಧೋಳದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ

    ಮುಧೋಳದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ

    ಬಾಗಲಕೋಟೆ: ಮುಧೋಳ (Mudhol) ತಾಲೂಕು ವ್ಯಾಪ್ತಿಯ ಅಕ್ರಮ ಮರಳು (Illegal Sand Mining) ಅಡ್ಡೆಗಳ ಮೇಲೆ ದಾಳಿ‌ ನಡೆಸಿರುವ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳನ್ನು (Sand) ವಶಕ್ಕೆ ಪಡೆದುಕೊಂಡಿದ್ದಾರೆ.

    ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಾಲೂಕಿನ‌ ವಿವಿಧ ಭಾಗಗಳಲ್ಲಿ ಸಂಗ್ರಹ ಮಾಡಿರುವ ಅಕ್ರಮ ಮರಳು ಅಡ್ಡೆಗಳ ಮೇಲೆ‌ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಒಂಟಗೋಡಿ ಗ್ರಾಮದ ಹಾಗೂ ನಾಗರಾಳ ಗ್ರಾಮಗಳ ಅಡ್ಡೆಗಳ ಮೇಲೆ‌ ದಾಳಿ ನಡೆಸಿರುವ ಅಧಿಕಾರಿಗಳು ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

    ಕಂದಾಯ ಇಲಾಖೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮರಳು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮರಳು ದಂಧೆ ತಡೆಯಲು ಹೋಗಿದ್ದ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

    ಮರಳು ದಂಧೆ ತಡೆಯಲು ಹೋಗಿದ್ದ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

    ಭೋಪಾಲ್: ಅಕ್ರಮ ಮರಳು ದಂಧೆ (Illegal Sand Mining) ತಡೆಯಲು ತೆರಳಿದ್ದ ಕಂದಾಯ ಅಧಿಕಾರಿಯೊಬ್ಬರ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಶಾಹದೋಲ್ ಎಂಬಲ್ಲಿ ನಡೆದಿದೆ. ಅಧಿಕಾರಿಯನ್ನು ಹತ್ಯೆಗೈದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಟ್ರ್ಯಾಕ್ಟರ್ ಹರಿದು ಸಾವಿಗೀಡಾದ ಅಧಿಕಾರಿಯನ್ನು ಪಟ್ವಾರಿ ಪ್ರಸನ್ನ ಸಿಂಗ್ ಎಂದು ಗುರುತಿಸಲಾಗಿದೆ. ಸಿಂಗ್ ಸೇರಿದಂತೆ ಇಲಾಖೆಯ ಕೆಲವು ಸಿಬ್ಬಂದಿ ಗೋಪಾಲ್‍ಪುರ ಪ್ರದೇಶದ ಸೋನ್ ನದಿಯ ಬಳಿ ಅಕ್ರಮವಾಗಿ ಗಣಿಗಾರಿಕೆ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಟ್ರಾಕ್ಟರ್ ಒಂದನ್ನು ತಡೆಯಲು ಯತ್ನಿಸಿದ್ದಾರೆ, ಆದರೆ ಚಾಲಕ ಅಧಿಕಾರಿಯ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ. ಟ್ರಾಕ್ಟರ್ ಮೈಮೇಲೆ ಹರಿದ ಪರಿಣಾಮ ಪಟ್ಟಾರಿ ಪ್ರಸನ್ನ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ಘಟನೆ ಬಳಿಕ ಆರೋಪಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದ. ಕೂಡಲೇ ಪೊಲೀಸರು ವಾಹನದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಚಾಲಕ ಶುಭಂ ವಿಶ್ವಕರ್ಮ (25) ಎಂಬಾತನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಟ್ರ್ಯಾಕ್ಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕಂಬಳ ನೋಡಿ ವಾಪಸ್ಸಾಗ್ತಿದ್ದ ವೇಳೆ ಭೀಕರ ಅಪಘಾತ- ಇಬ್ಬರು ಸಾವು, ಮೂವರು ಗಂಭೀರ

  • ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದಿದ್ದ ಅಧಿಕಾರಿಗಳ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ

    ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದಿದ್ದ ಅಧಿಕಾರಿಗಳ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ

    ಪಾಟ್ನಾ: ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು (Illegal Sand Mining) ತಡೆಯಲು ಬಂದಿದ್ದ ಮಹಿಳಾ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಗಣಿಗಾರಿಕೆ ಅಧಿಕಾರಿಗಳ (Officials) ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

    ಬಿಹಾರದ ಬಿಹ್ತಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಅಕ್ರಮ ಗಣಿಗಾರಿಕೆಯ ಕಡಿವಾಣ ಹಾಕಲು ಮೂವರು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗುಂಪೊಂದು ಅಧಿಕಾರಿಗಳ ಮೇಲೆ ಕಲ್ಲು ಎಸೆದು ದೊಣ್ಣೆಗಳಿಂದ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ?: ಗುಂಪೊಂದು ಮರಳು ತುಂಬಿದ ಟ್ರಕ್‍ಗಳು ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಅಲ್ಲಿದ್ದ ಅಧಿಕಾರಿಗಳು ತಡೆದಿದ್ದಾರೆ. ಈ ವೇಳೆ ಆ ಗುಂಪು, ಜಿಲ್ಲಾ ಗಣಿ ಅಧಿಕಾರಿ ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು.

    ಆ ಗುಂಪಿನಲ್ಲಿದ್ದ ಕಿಡಿಗೇಡಿಗಳು ಅಧಿಕಾರಿಗಳನ್ನು ಹೊಡೆಯಿರಿ ಎನ್ನುತ್ತಿರುವುದನ್ನು ಕೇಳಬಹುದಾಗಿದೆ. ಅಷ್ಟೇ ಅಲ್ಲದೇ ಆ ಅಧಿಕಾರಿಗಳನ್ನು ಕಿಡಿಗೇಡಿಗೇಡಿಗಳು ಸುತ್ತುವರೆದು ಕೋಲು ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: BWSSB ಅರೆಬರೆ ಕಾಮಗಾರಿ – ಗುಂಡಿಗೆ ಬಿದ್ದ ಬಾಲಕ ಬಲಿ

    ಘಟನೆಗೆ ಸಂಬಂಧಿಸಿ 44 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, 50 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್

  • ಕಾವೇರಿ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಕಾವೇರಿ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ 40 ಎಕರೆ ಭಾಗದಲ್ಲಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ಗ್ರಾಮಸ್ಥರೇ ಲಾರಿಯನ್ನು ತಡೆದು ಕಳೆದ ರಾತ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಳೆದ 2 ತಿಂಗಳಿನಿಂದ 40 ಎಕರೆ ಪ್ರದೇಶದಿಂದ ಕೆ.ಆರ್.ನಗರ ಮತ್ತಿತರೆಡೆಗೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ. ಸಿಸಿ ಕ್ಯಾಮರಾ ಅಳವಡಿಸಿದ್ದರೂ ನಿರಂತರವಾಗಿ ಮರಳು ದಂಧೆ ನಡೆಯುತ್ತಿದೆ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರೇ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಬೇಕಾಯಿತು.

    ರಾತ್ರಿ ವೇಳೆ ಮರಳು ಸಾಗಾಟವಾಗುತ್ತಿದ್ದು, ಲಾರಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಿಟಾಚಿ ಯಂತ್ರ ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಮಧ್ಯ ರಾತ್ರಿಯಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದ್ದು, ನೆಲ್ಯಹುದಿಕೇರಿಯ ವಿವಿಧ ಪ್ರದೇಶಗಳಲ್ಲಿ ಇದು ನಿರಂತರವಾಗಿದೆ. ನಿಯಮ ಬಾಹಿರ ಮರಳುಗಾರಿಕೆಯ ಹಿಂದೆ ಮರಳು ಮಾಫಿಯಾ ಕೆಲಸ ಮಾಡುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ ನಾಯಕರಿಂದ ರಾಜಭವನ ಚಲೋ- ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

    POLICE JEEP

    ಅನಾಹುತ ಸಂಭವಿಸುವ ಮೊದಲು ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮರಳುಗಾರಿಕೆಗೆ ಬಳಸಿದ ಹಿಟಾಚಿ ವಾಹನ ಸೇರಿದಂತೆ ಎಲ್ಲಾ ಯಂತ್ರಗಳನ್ನು ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ವಶಕ್ಕೆ ಪಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ ಮತ್ತೆ ಏರಿಕೆ; ಸರ್ಕಾರದಿಂದ ಪರಿಷ್ಕೃತ Guidelines ಪ್ರಕಟ – ಮಾರ್ಗಸೂಚಿಯಲ್ಲೇನಿದೆ?

    Live Tv

  • ಬೆಂಜ್ ಕಾರಲ್ಲಿ ಬಂದು ಲಕ್ಷ, ಲಕ್ಷ ರೂ. ಮರಳು ಹಫ್ತಾ ವಸೂಲಿ – ಹೈಟೆಕ್ ದರೋಡೆಕೋರರು ಅರೆಸ್ಟ್‌

    ಬೆಂಜ್ ಕಾರಲ್ಲಿ ಬಂದು ಲಕ್ಷ, ಲಕ್ಷ ರೂ. ಮರಳು ಹಫ್ತಾ ವಸೂಲಿ – ಹೈಟೆಕ್ ದರೋಡೆಕೋರರು ಅರೆಸ್ಟ್‌

    ದಾವಣಗೆರೆ: ರಾಜ್ಯದಲ್ಲಿ ಮರಳು ಮಾಫಿಯಾ ದಂಧೆ ಸದ್ದು ಮಾಡಿದೆ. ದಾವಣಗೆರೆಯ ಖಡಕ್ ಎಸ್‍ಪಿ ರಿಷ್ಯಂತ್ ನಡೆಸಿದ ಕಾರ್ಯಾಚರಣೆಯಲ್ಲಿ ಹೈಟೆಕ್ ದರೋಡೆಕೋರಾದ ಮೊಹ್ಮದ್ ಸಿದ್ದಿಕ್, ಅಶೋಕ್ ಸಿಕ್ಕಿ ಬಿದ್ದಿದ್ದಾನೆ.

    ಮರಳುದಂಧೆಕೋರರನ್ನು ಬೆದರಿಸಿ ಲಂಚ ವಸೂಲಿ ಮಾಡಲು ಬೆಂಜ್ ಕಾರಲ್ಲಿ ಬಂದಿದ್ದಾಗಲೇ ಲೂಟಿಕೋರನ ಹೆಡೆಮುರಿಯನ್ನು ಎಸ್‍ಪಿ ರಿಷ್ಯಂತ್ ಕಟ್ಟಿದ್ದಾರೆ. ಬಂಧಿತನಿಂದ 70 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಮರಳುಗಾರಿಕೆಯಲ್ಲಿ ತೊಡಗಿದ್ದ ದಾವಣಗೆರೆಯ ಮುಬಾರಕ್‍ಗೆ ಕರೆ ಮಾಡಿದ್ದ ಮೊಹ್ಮದ್ ಸಿದ್ದಿಕ್, ತಿಂಗಳಿಗೆ 4 ಲಕ್ಷ ಕೊಡ್ಬೇಕು ಎಂದು ಬೇಡಿಕೆ ಇಟ್ಟಿದ್ದ. ಆದ್ರೆ, ಮುಬಾರಕ್ 2 ಲಕ್ಷ ಮಾತ್ರ ನೀಡಿದ್ದ. ಬಳಿಕ ಸಿದ್ದಿಕ್ ಫುಲ್ ಪೇಮೆಂಟ್ ಮಾಡುವಂತೆ ಕಿರುಕುಳ ನೀಡಿದ್ದ. ಇದನ್ನು ತಡೆಯಲಾಗದೇ ಮುಬಾರಕ್ ಪೊಲೀಸರ ಮೊರೆ ಹೋಗಿದ್ದ. ಇದನ್ನೂ ಓದಿ: ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

     

    ಈ ಪ್ರಕರಣದಲ್ಲಿ ಖುದ್ದು ಫೀಲ್ಡಿಗಿಳಿದ ಎಸ್‍ಪಿ ರಿಷ್ಯಂತ್, ಬೆಂಜ್ ಕಾರ್ ಲೂಟಿಕೋರರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಹೈಟೆಕ್ ಲೂಟಿಕೋರ ಮೊಹ್ಮದ್ ಸಿದ್ದಿಕ್ ಮತ್ತು ಅಶೋಕ್‌ ಜಿಮ್ಮಿ ಎಂಬಾತನನ್ನು ಹಿಡಿದಿದ್ದು, ಸಿದ್ದಿಕ್ ದಾವಣಗೆರೆ ಜಿಲ್ಲೆ ಮಾತ್ರವಲ್ಲದೇ ಚಿತ್ರದುರ್ಗ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದವರನ್ನು ಹೆದರಿಸಿ, ಬೆದರಿಸಿ ಲಕ್ಷ, ಲಕ್ಷ ಹಣ ವಸೂಲಿ ಮಾಡಿ ಕೋಟಿ ಕೋಟಿ ರೂ. ಸಂಪಾದನೆ ಮಾಡಿದ್ದಾನೆ. ಈತನಿಗೆ ಗೃಹ ಇಲಾಖೆಯ ಕೆಲ ಉನ್ನತ ಅಧಿಕಾರಿಗಳ ಸಂಪರ್ಕ ಇತ್ತು. ಕೆಲ ಪೊಲೀಸ್ರು ಕೂಡ ಈತನಿಗೆ ಲಂಚ ಕೊಡಬೇಕಾದ ಸ್ಥಿತಿ ಇತ್ತು ಎನ್ನಲಾಗುತ್ತಿದೆ. ಪೊಲೀಸ್ರು ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮೇ 5 ರಿಂದ 20 ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ‌

  • ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

    ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

    ಚಂಡೀಗಢ: ಅಕ್ರಮ ಮರಳುಗಾರಿಕೆಯಲ್ಲಿ ತನ್ನ ಸೋದರಳಿಯನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲೇ, ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡಿದೆ. ಅದಕ್ಕೆ ನಾವು ಯಾವುದೇ ಆಕ್ಷೇಪಣೆ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

    ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚನ್ನಿ ಅವರ ಸೋದರಳಿಯನ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಒತ್ತಡ ಸೃಷ್ಟಿಸಲು ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಲೋಕ ಕಾಂಗ್ರೆಸ್ ಸಂಸ್ಥಾಪಕ ಕ್ಯಾಪ್ಟನ್ ಅಮರೀಂದರ್ ಸಿಂಗ್, ತನಿಖಾ ಸಂಸ್ಥೆ ತನ್ನ ಕೆಲಸವನ್ನು ಮಾಡಿದೆ. ಇದಕ್ಕೆ ರಾಜಕೀಯ ಪಕ್ಷವನ್ನು ಏಕೆ ದೂಷಿಸಬೇಕು ಎಂದು ಪ್ರಶ್ನಿಸಿದ್ದಾರೆ.

    ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಭೂಪೇಂದ್ರ ಸಿಂಗ್ ಹನಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿತ್ತು. ನಂತರ ಜಾರಿ ನಿರ್ದೇಶನಾಲಯ ಗುರುವಾರ ತಡರಾತ್ರಿ ಬಂಧಿಸಿದೆ. ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‍ಎ)ಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಜಲಂಧರ್‍ನಿಂದ ಬಂಧಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪೇಂದ್ರ ಸಿಂಗ್ ಹನಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಫೋನ್‍ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿದೆ.

  • ಇಡಿ ಅಧಿಕಾರಿಗಳಿಂದ ಚರಣ್‍ಜಿತ್ ಸಿಂಗ್ ಚನ್ನಿ ಸೋದರಳಿಯನ ಬಂಧನ

    ಇಡಿ ಅಧಿಕಾರಿಗಳಿಂದ ಚರಣ್‍ಜಿತ್ ಸಿಂಗ್ ಚನ್ನಿ ಸೋದರಳಿಯನ ಬಂಧನ

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

    ತಡರಾತ್ರಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ)ಯ ನಿಬಂಧನೆಗಳ ಅಡಿಯಲ್ಲಿ ತನಿಖಾ ಸಂಸ್ಥೆ ಭೂಪೇಂದ್ರ ಸಿಂಗ್ ಹನಿ ಅವರನ್ನು ಬಂಧಿಸಿದೆ. ಇಂದು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ ಈ ಘಟನೆ ನಡೆದಿದೆ. ಫೆಬ್ರವರಿ 20ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪೇಂದ್ರ ಸಿಂಗ್ ಹನಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿತ್ತು. ಈ ವೇಳೆ 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಜೊತೆಗೆ ಆಸ್ತಿ ವಹಿವಾಟಿಗೆ ಸಂಬಂಧಿಸಿದ ದೋಷಪೂರಿತ ದಾಖಲೆಗಳು ಮೊಬೈಲ್ ಫೋನ್‍ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿದೆ.

    ವಿಧಾನಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೂ ಸಹ ದಾಳಿ ನಡೆಸಲಾಗಿತ್ತು. ಅದೇ ರೀತಿ ನನ್ನ ಮೇಲೆ ಒತ್ತಡ ಹೇರಲು ಪಂಜಾಬ್‍ನಲ್ಲಿ ಇಡಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಸದಸ್ಯರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಒತ್ತಡವನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

  • ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

    ಕಾಡು ಪ್ರಾಣಿಗಳ ಭಯದ ಮಧ್ಯೆ ಮರಳು ಕಾಯುತ್ತಿದ್ದಾರೆ ಅಧಿಕಾರಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ, ಅಕ್ರಮ ಮರಳು ಜಪ್ತಿ ಮಾಡಿದ್ದಾರೆ. ಆದರೆ ಜಪ್ತಿ ಮಾಡಿದ ಮರಳು ಸಾಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಕ್ರಮ ಮರಳು ಕಾಯುವುದೇ ಕಂದಾಯ ಇಲಾಖೆಯ ಸಿಬ್ಬಂದಿಗೆ ಸಂಕಷ್ಟವಾಗಿ ಮಾರ್ಪಟಿದೆ.

    ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು, ನಾಗನಹಳ್ಳಿ ಸಮೀಪದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಆಪಾರ ಪ್ರಮಾಣದ ಮರಳು ಸಂಗ್ರಹ ಮಾಡಲಾಗಿದ್ದು, ಮಾಹಿತಿ ತಿಳಿದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜೂನ್ 30 ರಂದು ದಾಳಿ ನಡೆಸಿ, 20 ಟ್ರ್ಯಾಕ್ಟರ್‍ಗೂ ಅಧಿಕ ಮರಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಮರಳು ಇರುವುದರಿಂದ ದಂಧೆಕೋರರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಸದ್ಯ ಮರಳಿನ ಬೆಲೆಯ ಪ್ರಕಾರ 1 ಲಕ್ಷ ರೂ.ಗೂ ಅಧಿಕ ಬೆಲೆಬಾಳುವ ಮರಳು ಇದಾಗಿದ್ದು, ಸದ್ಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿ ಈಗಾಗಲೇ 4 ದಿನಗಳು ಕಳೆದಿವೆ. ಆದರೂ ಕೂಡ ಜಪ್ತಿ ಮರಳು ಸಾಗಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಕಂದಾಯ ಇಲಾಖೆಯವರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಪಾರ ಪ್ರಮಾಣದ ಮರಳು ಇರುವುರಿಂದ ಅಕ್ರಮ ಮರಳು ಸಾಗಾಟಗಾರರು ರಾತ್ರೋ ರಾತ್ರಿ ಸಾಗಿಸುತ್ತಾರೆ ಎನ್ನುವ ಭಯದಲ್ಲಿ ಕಂದಾಯ ಇಲಾಖೆಯವರು ಹಗಲು, ರಾತ್ರಿ ಎನ್ನದೆ ಮರಳು ರಾಶಿಗಳನ್ನು ಕಾಯಬೇಕಾಗಿದೆ. ರಾತ್ರಿ ವೇಳೆಯಲ್ಲಿ ಮರಳು ರಾಶಿಗಳ ಮುಂದೆಯೇ ಗ್ರಾಮ ಸಹಾಯಕರು ಮಲಗುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ಒಬ್ಬಂಟಿಯಾಗಿ ಮಲಗುವುದರಿಂದ ಕಾಡು ಪ್ರಾಣಿಗಳ ಕಾಟವನ್ನೂ ಸಿಬ್ಬಂದಿ ಎದುರಿಸುತ್ತಿದ್ದಾರೆ. ಸದ್ಯ ಜೀವ ಭಯದಲ್ಲಿಯೇ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ: ಟಾಸ್ಕ್ ಫೋರ್ಸ್ ಸಮಿತಿಯಲ್ಲಿನ ಅಧಿಕಾರಿಗಳು ದಾಳಿ ನಡೆಸಿ, ಮರಳು ಜಪ್ತಿ ಮಾಡಿದರೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿ, ಇರುವ ಮರಳಿನ ಪ್ರಮಾಣ, ಅಂದಾಜು ಬೆಲೆಯನ್ನು ನಿಗದಿ ಮಾಡಿ, ಸುರಕ್ಷಿತವಾಗಿರುವ ಬೇರೆ ಕಡೆಗೆ ಸ್ಥಳಾಂತರಿಸಬೇಕು. ನಂತರ ಅದಕ್ಕೆ ಟೆಂಡರ್ ಕರೆದು ಮಾರಾಟ ಮಾಡಬೇಕು. ಆದರೆ ಆದ್ಯಾವುದು ಇಲ್ಲಿ ನಡೆಸಯುತ್ತಿಲ್ಲ. ದಾಳಿ ನಡೆಸಿ, ಮೂರು ದಿನ ಕಳೆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಸದ್ಯ ಗ್ರಾಮಸ್ಥರಲ್ಲಿ ನಾನಾ ಅನುಮಾನಗಳಿಗೆ ಕಾರಣವಾಗುತ್ತಿದೆ.

  • ಭೀಮಾತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ – ಪ್ರಶ್ನಿಸಿದ ಪಿಎಸ್‍ಐ ಮೇಲೆ ಕಲ್ಲು ತೂರಾಟ

    ಭೀಮಾತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ – ಪ್ರಶ್ನಿಸಿದ ಪಿಎಸ್‍ಐ ಮೇಲೆ ಕಲ್ಲು ತೂರಾಟ

    ವಿಜಯಪುರ: ಅಕ್ರಮ ಮರಳು ಗಣಿಕಾರಿಕೆ ಪ್ರಶ್ನಿಸಲು ಹೋದ ಪಿಎಸ್ ಐ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಭೀಮಾತೀರದ ಗಡಿ ಗ್ರಾಮ ದಸೂರು ಬಳಿ ನಡೆದಿದೆ.

    ಶುಕ್ರವಾರ ಬೆಳಗಿನ ಜಾವ 2 ರಿಂದ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಗಡಿ ಗ್ರಾಮದ ಅಕ್ರಮ ಮರಳು ದಂಧೆಕೋರರಿಂದ ಕೃತ್ಯ ನಡೆದಿದೆ.

    ಅಕ್ರಮವನ್ನು ಮೊದಲು ದಸೂರು ಗ್ರಾಮಸ್ಥರು ತಡೆಯಲು ಹೋಗಿದ್ದಾರೆ ಆಗ ಅಕ್ರಮ ಮರಳು ದಂಧೆ ಕೋರರು ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ಚೆಡಚಣ ಪಿಎಸ್‍ಐ ಗೋಪಾಲ ಹಳ್ಳುರಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಅಕ್ರಮ ಮರಳು ದಂಧೆಕೋರರು ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಪೊಲೀಸರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಘಟನೆಯಲ್ಲಿ ಪಿಎಸ್‍ಐ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಜಖಂಗೊಂಡಿದೆ. ಇನ್ನು ಈ ಘಟನೆ ನಡೆದ ನಂತರ ಇದುವರೆಗೂ ಪೊಲೀಸರು ಘಟನಾ ಸ್ಥಳಕ್ಕೆ ಬಂದಿಲ್ಲ ಎಂದು ದಸೂರು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.