Tag: illegal sand mafia

  • ಅಕ್ರಮ ಮರಳುಗಾರಿಕೆಗೆ ಎಸ್.ಪಿ, ಡಿ.ಸಿಗಳೇ ಹೊಣೆ: ಸಚಿವ ಸಿಸಿ ಪಾಟೀಲ್

    ಅಕ್ರಮ ಮರಳುಗಾರಿಕೆಗೆ ಎಸ್.ಪಿ, ಡಿ.ಸಿಗಳೇ ಹೊಣೆ: ಸಚಿವ ಸಿಸಿ ಪಾಟೀಲ್

    ರಾಯಚೂರು: ರಾಜ್ಯದಲ್ಲಿ ಮರಳಿನ ಸಮಸ್ಯೆ ಕಾಡುತ್ತಿದೆ. ಎಲ್ಲರಿಗೂ ಮರಳು ಸಿಗುವಂತೆ ಮರಳು ನೀತಿ ಜಾರಿಗೆ ತರಲಾಗುವುದು ಅಂತ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ವೇಳೆ ಮಾತನಾಡಿದ ಸಿಸಿ ಪಾಟೀಲ್, ಗಣಿ ಇಲಾಖೆಗೆ ಮರಳಿನ ಸಮಸ್ಯೆ ಕಾಡುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಯತ್ನಿಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಕ್ರಮ ತಡೆಗೆ ವಿಶೇಷ ತಂಡ ರಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಮರಳುಗಾರಿಕೆ ಬಗ್ಗೆ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನ ತೆಲಂಗಾಣಕ್ಕೆ ಕಳುಹಿಸಲಾಗುವುದು ಎಂದರು.

    ಮಾನ್ವಿಯಲ್ಲಿ ಮರಳು ಲಾರಿ ತಡೆಯಲು ಹೋದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಸಾವು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಜಿಲ್ಲಾಧಿಕಾರಿಯಿಂದ ಹೆಚ್ಚಿನ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ. ಹಟ್ಟಿ ಚಿನ್ನದ ಗಣಿ ಹಾಗು ರಾಯಚೂರಿನಲ್ಲಿನ ಮರಳುಗಾರಿಕೆ ಬಗ್ಗೆ ಪ್ರವಾಸ ಮಾಡಲಿದ್ದೇನೆ ಅಂತ ತಿಳಿಸಿದರು.

    ಇನ್ನೂ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಮುಖ್ಯಮಂತ್ರಿಗಳು ಹಾಗು ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತೆ. ಸಂಪುಟ ವಿಸ್ತರಣೆ ಬಗ್ಗೆ ನಾನು ಮಾತನಾಡುವುದಿಲ್ಲ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಅಂತ ಕೈ ಮುಗಿದರು.

  • ‘ಫಾರಿನ್ ಮರಳು’ ಭಾಗ್ಯ ಕಲ್ಪಿಸಲು ಮುಂದಾದ ಸಿದ್ದರಾಮಯ್ಯ ಸರ್ಕಾರ

    ‘ಫಾರಿನ್ ಮರಳು’ ಭಾಗ್ಯ ಕಲ್ಪಿಸಲು ಮುಂದಾದ ಸಿದ್ದರಾಮಯ್ಯ ಸರ್ಕಾರ

    ಬೆಂಗಳೂರು: ಅನ್ನಭಾಗ್ಯದಿಂದ ಹಿಡಿದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಗ ಫಾರಿನ್ ಮರಳು ಭಾಗ್ಯ ಕಲ್ಪಿಸಲು ಮುಂದಾಗಿದೆ.

    ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಮಂದಿನ ತಿಂಗಳಿಂದ ಮಯನ್ಮಾರ್, ಮಲೇಷಿಯಾ, ಥೈಲ್ಯಾಂಡ್ ಸೇರಿ ಇನ್ನಿತರೆ ದೇಶಗಳಿಂದ 25 ಕೆಜಿ ತೂಕದ ಬ್ಯಾಗ್‍ಗಳಲ್ಲಿ ಮರಳು ಆಮದು ಮಾಡಿಕೊಳ್ಳಲಾಗುತ್ತದೆ.

    ಮರಳು ಆಮದು ಮಾಡಿಕೊಳ್ಳಲು 6 ಕಂಪೆನಿಗಳಿಗೆ ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ನೀಡಿದೆ. ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ಮರಳು ಪೂರೈಸುವಂತೆ ಕಂಪೆನಿಗಳ ಜೊತೆ ಸರ್ಕಾರ ಮಾತುಕತೆ ನಡೆಸಿದ್ದು, ನೈಸರ್ಗಿಕ ಸಂಪತ್ತು, ಜಲಮೂಲಗಳಿಗೆ ಆಗುತ್ತಿರುವ ಹಾನಿ ತಪ್ಪಿಸಲು ಈ ಪ್ಲಾನ್ ಮಾಡಲಾಗಿದೆ ಎಂದು ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.

  • ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸಾವು

    ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸಾವು

    ಚಿಕ್ಕಮಗಳೂರು: ಮಧ್ಯರಾತ್ರಿ ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.

    ಮೃತರನ್ನ ತಾಲೂಕಿನ ಗೇರಮರಡಿ ನಿವಾಸಿಗಳಾದ 23-24ರ ಹರೆಯದ ಮಂಜುನಾಥ್, ನವೀನ್ ಹಾಗೂ ಅರುಣ್ ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು ತರೀಕೆರೆಗೆ ಬಂದು ವಾಸವಿದ್ದರು.

    ಬುಧವಾರ ಮಧ್ಯರಾತ್ರಿ ರಂಗಾಪರುದ ಬಳಿ ಒಣಗಿದ ಕೆರೆಯೊಂದರಲ್ಲಿ ಎಂಟು ಜನರ ತಂಡ ಬಂದಿದ್ದು, ಟ್ರ್ಯಾಕ್ಟರ್ ನಲ್ಲಿ ಮರಳು ತೆಗೆಯುವಾಗ ಈ ಅವಘಡ ನಡೆದಿದೆ. ಎಲ್ಲರ ಮೇಲೂ ದಿಬ್ಬ ಕುಸಿದಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು ತರೀಕೆರೆ ಸರ್ಕಾರ ಆಸ್ಪತ್ರೆಗೆ ದಾಖಲಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ವಶಪಡಿಸಿಕೊಂಡಿರೋ ಪೊಲೀಸರು ತಲೆಮರೆಸಿಕೊಂಡಿರೋ ಟ್ರ್ಯಾಕ್ಟರ್ ಮಾಲೀಕ ರವಿ ಹಾಗೂ ಅಕ್ರಮ ಮರಳುಗಾರಿಕೆ ನಡೆಸ್ತಿದ್ದ ಆನಂದ್ ಎಂಬುವರಿಗೆ ಹುಡುಕಾಟ ನಡೆಸ್ತಿದ್ದಾರೆ.

    https://www.youtube.com/watch?v=EKT3RKZSloM