Tag: Illegal Relation

  • ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿ

    ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿ

    – ಸಾಯುತ್ತೇನೆಂದವಳ ಕುಣಿಕೆಯ ಹಗ್ಗ ಎಳೆದು ಕುರ್ಚಿ ತಳ್ಳಿ ಸಾಯಿಸಿದ ಪ್ರಿಯಕರ

    ಬೆಂಗಳೂರು: ಅನೈತಿಕ ಸಂಬಂಧ (Illegal Relation) ಹೊಂದಿದ್ದನ್ನು ಪ್ರಶ್ನಿಸಿ ಸಾಯುತ್ತೇನೆ ಎಂದು ಹೆದರಿಸಿದ ಮಹಿಳೆಯ ಕುಣಿಕೆ ಎಳೆದು ಕುರ್ಚಿಯನ್ನು ತಳ್ಳಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಬಸವೇಶ್ವರನಗರದಲ್ಲಿ (Basaveshwar Nagar) ನಡೆದಿದೆ.

    ಸರವಣ (35) ಮೃತ ಮಹಿಳೆ. ಈಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಸಹ ಗಣೇಶ್ (22) ಎಂಬ ಯುವಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಯುವಕನಿಗೆ 50 ಸಾವಿರ ರೂ. ಹಣ ಹಾಗೂ ಒಂದು ಮನೆಯನ್ನೂ ಸಹ ಮಾಡಿಕೊಟ್ಟಿದ್ದಳು. ಇಷ್ಟೆಲ್ಲಾ ಇದ್ದರೂ ಗಣೇಶ್ ಬೇರೆ ಹುಡುಗಿಯೊಂದಿಗೆ ಸಲುಗೆಯನ್ನು ಬೆಳೆಸಿಕೊಂಡಿದ್ದ. ಇದನ್ನು ತಿಳಿದ ಮಹಿಳೆ ಆತನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಆತ ಸಲುಗೆ ಬೆಳೆಸಿಕೊಂಡಿರುವ ಹುಡುಗಿ ಯಾರೆಂದು ಪ್ರಶ್ನಿಸಿದ್ದಾಳೆ. ಅಲ್ಲದೇ ತಾನು ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಇದರಿಂದಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದನ್ನೂ ಓದಿ: ನಕಲಿ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಹಾರಲು ಸಂಚು ರೂಪಿಸಿದ್ದ ಆರೋಪಿ ಅಂದರ್‌

    ಈ ವೇಳೆ ಗಣೇಶ್ ಸಾಯುತ್ತೇನೆ ಎಂದು ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಮುಂದಾಗಿದ್ದ. ಇದನ್ನು ನೋಡಿದ ಮಹಿಳೆ ತಾನೂ ಕೂಡಾ ಸಾಯುವುದಾಗಿ ಕುಣಿಕೆ ಹಾಕಿಕೊಂಡಿದ್ದಾಳೆ. ಈ ವೇಳೆ ಗಣೇಶ್ ಆಕೆಯ ಕುಣಿಕೆಯ ಹಗ್ಗ ಎಳೆದು ಕುರ್ಚಿಯನ್ನು ತಳ್ಳಿದ್ದಾನೆ. ಇದರಿಂದಾಗಿ ಕುಣಿಕೆ ಕುತ್ತಿಗೆಗೆ ಬಿಗಿದು ಮಹಿಳೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

    ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಣೇಶ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಲಿಫ್ಟ್‌ಗೆ ಸಿಲುಕಿ 26ರ ಯುವಕ ಸಾವು

  • ಕುದಿಯುವ ನೀರಿನಲ್ಲಿ ಮುಳುಗಿಸಿ ಮಗು ಕೊಂದ ಪಾಪಿ

    ಮುಂಬೈ: ಒಂದೂವರೆ ವರ್ಷದ ಅಂಬೆಗಾಲಿಡುವ ಮಗುವನ್ನು ಕುದಿಯುವ ನೀರಿದ್ದ ಬಕೆಟ್‌ನಲ್ಲಿ ಮುಳುಗಿಸಿ ಕೊಂದ ಆರೋಪಿಯನ್ನು ಪುಣೆ (Pune) ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಆರೋಪಿಯನ್ನು ವಿಕ್ರಮ್ ಕೋಲೇಕಾರ್ ಎಂದು ಗುರುತಿಸಲಾಗಿದೆ. ಈತ ಮಗುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ (Illegal Relation) ಹೊಂದಿದ್ದ ಎನ್ನಲಾಗಿದೆ. ಕಿರಣ ಎಂಬಾಕೆ ಮೃತ ಮಗುವಿನ ತಾಯಿ. ವಿಕ್ರಮ್, ಕಿರಣಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ತನ್ನನ್ನು ನಿರಾಕರಿಸಿದ ಕೋಪಕ್ಕೆ ಆಕೆಯ ಮಗುವನ್ನು ಕೊಂದಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ಮಹಾರಾಷ್ಟ್ರದ (Maharashtra) ಪಿಂಪ್ರಿ ಚಿಂಚ್‌ವಾಡ್‌ನಲ್ಲಿ (Pimpri-Chinchwad) ಈ ಘಟನೆ ನಡೆದಿದ್ದು, ಏಪ್ರಿಲ್ 6ರಂದು ವಿಕ್ರಮ್ ಒಂದೂವರೆ ವರ್ಷದ ಮಗುವನ್ನು ಕುದಿಯುತ್ತಿದ್ದ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ. ಈ ದುಷ್ಕೃತ್ಯವನ್ನು ಮಹಿಳೆಯೊಬ್ಬರು ನೋಡಿದ್ದರಾದರೂ ಭಯಗೊಂಡ ಕಾರಣ ಈ ವಿಷಯವನ್ನು ಯಾರಿಗೂ ಹೇಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಶಿಂಗಾರೆ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ

    ಇವರಿಬ್ಬರ ಪ್ರೇಮದಾಟಕ್ಕೆ ಏನೂ ಅರಿಯದ ಮುದ್ದು ಕಂದಮ್ಮ ಬಲಿಯಾಗಿದೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು

  • ಅಕ್ರಮ ಸಂಬಂಧ ಇಟ್ಕೊಂಡವಳೊಂದಿಗೆ ಮಲಗಿರೋ ವಿಡಿಯೋ ತೋರಿಸಿ ಕಿರುಕುಳ- ಪತ್ನಿಯಿಂದ ದೂರು ದಾಖಲು

    ಅಕ್ರಮ ಸಂಬಂಧ ಇಟ್ಕೊಂಡವಳೊಂದಿಗೆ ಮಲಗಿರೋ ವಿಡಿಯೋ ತೋರಿಸಿ ಕಿರುಕುಳ- ಪತ್ನಿಯಿಂದ ದೂರು ದಾಖಲು

    ಕೊಪ್ಪಳ: ಇಲ್ಲೊಬ್ಬ ಪತಿ ಮಹಾಶಯ ಅಕ್ರಮ ಸಂಬಂಧ ಇಟ್ಟುಕೊಂಡ ಮಹಿಳೆಯೊಂದಿಗಿನ ವಿಡಿಯೋ ತೋರಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಪತಿಯ ವಿಚಿತ್ರ ನಡವಳಿಕೆಯಿಂದ ಬೇಸತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಈ ಫೊಟೋದಲ್ಲಿರೋ ಭೂಪನ ಹೆಸರು ವೀರಭದ್ರಗೌಡ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ನಿವಾಸಿ. ಈತನಿಗೆ ಕಟ್ಟಿಕೊಟ್ಟ ಹೆಂಡತಿಗಿಂತ ಇಟ್ಕೊಂಡವಳೊಂದಿಗೆ ಜಾಸ್ತಿ ಸರಸವಂತೆ. ಈತ ಅಕ್ರಮ ಸಂಬಂಧ ಹೊಂದಿದ ಮಹಿಳೆಯೊಂದಿಗೆ ಮಲಗಿರೋ ವಿಡಿಯೋ, ಅವಳೊಂದಿಗೆ ಅಸಹ್ಯವಾಗಿ ಮಾತನಾಡುವ ಆಡಿಯೋವನ್ನ ತಂದು ತೋರಿಸಿ ಕಿರುಕುಳ ಕೊಡುತ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.

    2011ರಲ್ಲಿ ವೀರಭದ್ರಗೌಡ ತನ್ನ ಅಕ್ಕನ ಮಗಳಾದ ವಿಶಾಲಾಕ್ಷಿಯನ್ನ ಮದುವೆಯಾಗಿದ್ದ. ಮದುವೆ ಆದ ಕೆಲವು ದಿನಗಳು ಮಾತ್ರ ಪತ್ನಿಯೊಂದಿಗೆ ಚೆನ್ನಾಗಿ ಸಂಸಾರ ಮಾಡಿದ್ದಾನೆ. ಆ ಬಳಿಕ ಈತನ ವಿಚಿತ್ರ ವರಸೆ ಶುರುವಾಗಿದೆ.

    ವೀರಭದ್ರಗೌಡ ಅಕ್ರಮ ಸಂಬಂಧ ಇಟ್ಟುಕೊಂಡವಳೊಂದಿಗೆ ಇರೋದಕ್ಕಾಗಿ ಮೊದಲ ಪತ್ನಿಗೆ ಕಿರುಕುಳ ಕೊಡ್ತಿದ್ದಾನೆ. ಪತ್ನಿಗೆ ಕಿರುಕುಳ ಕೊಟ್ಟರೆ ತನಗೆ ವಿಚ್ಛೇದನ ಕೊಡಬಹುದು ಎಂದು ಈ ರೀತಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಪತ್ನಿಗೆ ನೀನು ಚೆಂದವಿಲ್ಲ, ಮುದುಕಿ ತರಹ ಇದ್ದೀಯಾ. ನೀನು ನನಗೆ ಡೈವೋರ್ಸ ಕೊಡು ಎಂದು ಹೊಡೆಯೋದು ಬಡಿಯೋದು ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

    ಇನ್ನು ಒಂದು ತಿಂಗಳಿಂದಲ್ಲೂ ಈತ ಮನೆಗೆ ಬಂದಿಲ್ಲ. ಐದು ವರ್ಷದ ಗಂಡು ಮಗನಿಗೆ ಬೈಯುತ್ತಾನೆ. ಈಚೆಗೆ ಈತನ ತಂದೆಗೆ ಆರಾಮವಿಲ್ಲವೆಂದು ವಿಶಾಲಾಕ್ಷಿ ತಂದೆ ತಾಯಿ ಬಂದರೆ ಅವರನ್ನ ನಿಂಸಿದಿ ಹಲ್ಲೆ ಮಾಡಿದ್ದಾನೆ. ಆಗ ಬಿಡಿಸೋಕೆ ಹೋದ ವಿಶಾಲಾಕ್ಷಿ ಅಕ್ಕ ಶಶಿಕಲಾ ಮೇಲೂ ಹಲ್ಲೆ ಮಾಡಿ, ಅವಳನ್ನ ಹಿಡಿದು ಎಳದಾಡಿದ್ದಾನೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಿರೋ ಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೊಂದ ಮಹಿಳೆ ದೂರು ನೀಡಿದ್ದಾರೆ.