Tag: illegal cow trafficking

  • ಲಾರಿಯಲ್ಲಿ ಅಕ್ರಮ ಗೋಸಾಗಾಟ ಪತ್ತೆ: 24 ಗೋವುಗಳ ರಕ್ಷಣೆ

    ಲಾರಿಯಲ್ಲಿ ಅಕ್ರಮ ಗೋಸಾಗಾಟ ಪತ್ತೆ: 24 ಗೋವುಗಳ ರಕ್ಷಣೆ

    ಮಡಿಕೇರಿ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿ 24 ಗೋವುಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಚೆಕ್‍ಪೊಸ್ಟ್ ಬಳಿ ನಡೆದಿದೆ.

    ಸಂಪಾಜೆ ಅರಣ್ಯ ತಪಾಸಣಾ ಗೇಟ್ ಬಳಿ ತಡರಾತ್ರಿ ಲಾರಿಯಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಅರಣ್ಯ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ, ಲಾರಿ ಸಮೇತ 24 ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖಾ ಸಿಬ್ಬಂದಿ ತಪಾಸಣೆಗೆ ಮುಂದಾಗುತ್ತಿದ್ದಂತೆ ಆರೋಪಿಗಳು ಲಾರಿಯಿಂದ ಜಿಗಿದು ಓಡಿ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಒಂದಷ್ಟು ದೂರ ಅರಣ್ಯ ಇಲಾಖೆಯ ಸಿಬ್ಬಂದಿ ಬೆನ್ನಟ್ಟಿದರಾದರೂ ಕತ್ತಲು ಆವರಿಸಿದ್ದ ಕಾರಣ ಆರೋಪಿಗಳು ಪರಾರಿಯಾಗಿದ್ದಾರೆ.

    ಆರೋಪಿಗಳು ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗದಿಂದ ಸುಳ್ಯ ಕಡೆಗೆ ತೆರಳುತ್ತಿದ್ದು, ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋಸಾಗಾಟ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆಯೂ ಸಹ ತಡರಾತ್ರಿ ಮದೆನಾಡು ಬಳಿ ಲಾರಿಯೊಂದು ಅಪಘಾತಕ್ಕೀಡಾದಾಗ ಅದರಲ್ಲಿ 25ಕ್ಕೂ ಹೆಚ್ಚು ಗೋವುಗಳಿದ್ದು, ಆರೋಪಿಗಳು ಕೂಡಲೇ ಗೋವುಗಳನ್ನು ಕೆಳಗಿಳಿಸಿ ತಪ್ಪಿಸಿಕೊಂಡಿದ್ದರು. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

    ಸಂಪಾಜೆ ಚೆಕ್‍ಪೋಸ್ಟ್ ಮೂಲಕ ನಿರಂತರವಾಗಿ ಕೇರಳ ಮತ್ತು ಮಂಗಳೂರಿನ ಕಸಾಯಿಖಾನೆಗಳಿಗೆ ಸಿಬ್ಬಂದಿ ಸಹಕಾರದಿಂದಲೇ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಬಗ್ಗೆ ಹಿಂದೂ ಜಾಗರಣಾ ವೇದಿಕೆಯು ಹಲವು ಬಾರಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು.

    ಇದೀಗ ಪತ್ತೆಯಾದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ