Tag: Illegal activities

  • 300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ – ಎಸ್‍ಪಿಯಿಂದ ವಾರ್ನಿಂಗ್

    300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ – ಎಸ್‍ಪಿಯಿಂದ ವಾರ್ನಿಂಗ್

    ದಾವಣಗೆರೆ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನೂತನ ಎಸ್‍ಪಿ ಹನುಮಂತರಾಯ ಅವರು ರೌಡಿಗಳ ಪರೇಡ್ ನಡೆಸಿದರು.

    ನಗರದ ಡಿಆರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ 300ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಕರೆ ತರಲಾಯಿತು. ಎಸ್‍ಪಿ ಹನುಮಂತರಾಯ ಅವರು ಪ್ರತಿಯೊಬ್ಬ ರೌಡಿಶೀಟರ್ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

    ಅಲ್ಲದೆ ಎಸ್‍ಪಿ ಹನುಮಂತರಾಯ ರೌಡಿಶೀಟರ್‌ಗಳಿಗೆ ವಾರ್ನಿಂಗ್ ಕೂಡ ಮಾಡಿದರು. ಯಾವುದೇ ಪ್ರಕರಣದಲ್ಲಿ ಭಾಗಿಯಾದರೆ ಮುಂದಿನ ದಿನಗಳಲ್ಲಿ ಸನ್ನಡತೆಯ ಆಧಾರದ ಮೇಲೆ ರೌಡಿಶೀಟರ್ ತೆಗೆದು ಹಾಕಲಾಗುವುದು. ಇನ್ಮುಂದೆಯಾದರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಪಿ, ಜಿಲ್ಲೆಯಲ್ಲಿ 697 ರೌಡಿಶೀಟರ್ ಗಳಿದ್ದು, ಕೆಲವರು ಕೋರ್ಟ್ ಕೇಸ್‍ಗಳಿದೆ ಹಾಗಾಗಿ ಅವರು ಗೈರಾಗಿದ್ದಾರೆ. ಅವರನ್ನು ಮುಂದಿನ ದಿನಗಳಲ್ಲಿ ಪರೇಡ್ ನಡೆಸಲಾಗುವುದು, ಮತ್ತೊಂದು ಪ್ರಕರಣ ಏನಾದ್ರು ಭಾಗಿಯಾದ್ರೆ ರೌಡಿಶೀಟರ್‌ಗಳನ್ನು ಗಡಿ ಪಾರು ಮಾಡಲಾಗುತ್ತದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.

  • ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ್ ನಿಲ್ಲಿಸಿ-ಒಳಗಡೆಯೇ ಶುರುವಾಯ್ತು ಯುವಕ-ಯುವತಿಯ ಕುಚ್..ಕುಚ್..!

    ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ್ ನಿಲ್ಲಿಸಿ-ಒಳಗಡೆಯೇ ಶುರುವಾಯ್ತು ಯುವಕ-ಯುವತಿಯ ಕುಚ್..ಕುಚ್..!

    ಚಿಕ್ಕಬಳ್ಳಾಪುರ: ಈವರೆಗೂ ಕುಡುಕರ ಪಾಲಿನ ಬಾರ್ ಆಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಜಿಲ್ಲಾಸ್ಪತ್ರೆಯ ಆವರಣದಲ್ಲೇ ಕಾರೊಂದರಲ್ಲಿ ಯುವಕ ಮತ್ತು ಕಾಲೇಜು ಯುವತಿ ಕಾಮದಾಟ ಆಡಿದ್ದಾರೆ.

    ಜಿಲ್ಲೆಯ ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ನಡಿಯಬಾರದ ಕೆಲಸಗಳು ನಡೆಯುತ್ತಿವೆ. ಜಿಲ್ಲಾಸ್ಪತ್ರೆಯ ಆವರಣದ ಕಾರೊಂದರಲ್ಲಿ ಕಾಲೇಜು ಯುವತಿ ಹಾಗೂ ಯುವಕನೊಬ್ಬ ಕಾಮದಾಟ ಆಡುತ್ತಿರುವುದು ಪಬ್ಲಿಕ್ ಟಿವಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

    ಜಿಲ್ಲಾಸ್ಪತ್ರೆಯ ಆವರಣದಲ್ಲೇ ಕಾರಿನ ಒಳಗೆ ಯುವತಿ ಮೈಮೇಲೆ ಎರಗಿದ ಯುವಕನೊಬ್ಬ ಲೈಂಗಿಕವಾಗಿ ಆಕೆಗೆ ಕಾಟ ಕೊಟ್ಟಿದ್ದಾನೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಇನ್ನೂ ಕಳೆದ 8 ತಿಂಗಳ ಹಿಂದೆಯಷ್ಟೇ ಆರಂಭಗೊಂಡಿರುವ ಹೈಟೆಕ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶೌಚಾಲಯಗಳು ಕುಡುಕರ ಪಾಲಿನ ಬಾರ್ ಆಗಿದೆ. ಆದರೆ ಈಗ ಆಸ್ಪತ್ರೆಯ ಆವರಣ ಹಾಗೂ ಪಾರ್ಕಿಂಗ್ ಪ್ಲಾಟ್ ನ ಖಾಲಿ ಜಾಗಗಳು ಲೈಂಗಿಕ ಕ್ರಿಯೆ ಮಾಡುವ ಅಡ್ಡಗಳಾಗಿ ಮಾರ್ಪಾಡಾಗಿವೆ.

    ಇನ್ನೂ ಈ ಸಂಬಂಧ ಇಂತಂಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿಬೇಕಾದ ಆಧಿಕಾರಿಗಳು ಮಾತ್ರ ತಮಗೇನು ಸಂಬಂಧವಿಲ್ಲದಂತೆ ಸುಮ್ಮನಾಗಿದ್ದಾರೆ.

    ಇದನ್ನು ಓದಿ: ಜಿಲ್ಲಾಸ್ಪತ್ರೆಯ ಶೌಚಾಲಯಗಳೇ ಬಾರ್- ಕಸದ ಬುಟ್ಟಿಯಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪ್ಯಾಕೆಟ್

     

  • ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

    ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

    ಕೋಲಾರ: ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಮೇಲೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದ ತಂಡ ದಾಳಿ ನಡೆಸಿದೆ.

    ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಹಲವಾರು ಜನ ಅಕ್ರಮವಾಗಿ ಆವರಣದಲ್ಲಿ ಕುಳಿತು ಮದ್ಯ ಸೇವನೆ ಮಾಡೋದು ಜೊತೆಗೆ ಕಾರ್ ಗಳನ್ನು ತಂದು ಪಾರ್ಕ್ ಮಾಡಿ, ಕಾರ್ ನಲ್ಲೇ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವ ಮಾಹಿತಿ ಮೇರೆಗೆ ಡಿಸಿ ಸತ್ಯವತಿ ದಾಳಿ ಮಾಡಿದರು.

    ಇದೇ ವೇಳೆ ಡಿಸಿ ಅಲ್ಲಿಗೆ ಬರುತ್ತಿದ್ದಂತೆ ಅಲ್ಲಿದ್ದ ಜನರೆಲ್ಲಾ ಕುಡಿಯೋದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲಿ ಕೆಲವರ ಫೋಟೋಗಳನ್ನು ತೆಗೆದುಕೊಂಡರು. ಈ ವೇಳೆ ಅಲ್ಲಿ ಬಿಟ್ಟು ಓಡಿ ಹೋಗಿದ್ದ ಸುಮಾರು ಎಂಟು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಇದೇ ವೇಳೆ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರ ಇದಾಗಿರುವ ಕಾರಣ ಸ್ಥಳಕ್ಕೆ ಬಂದ ಮುಖ್ಯ ಎಂಜಿನಿಯರ್ ಮುನಿ ಆಂಜಿನಪ್ಪ ಅವರಿಗೆ ಡಿಸಿ ಜಿ.ಸತ್ಯವತಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂಡಲೇ ನಿಮ್ಮೆ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಸ್ಥಳದಲ್ಲೇ ಇದೇನು ಐಬಿ ನಾ ಇಲ್ಲಾ ಬಾರ್ ಎಂದು ತರಾಟೆಗೆ ತೆಗೆದುಕೊಂಡರು.

    ಇನ್ನು ಮುಂದೆ ಈ ರೀತಿಯ ಅಕ್ರಮ ಚಟುವಟಿಕೆಗಳು ಬಂದ್ ಆಗಬೇಕು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ರಸ್ತೆಗಳು ಹಾಳಾಗಿದ್ದು ಕೂಡಲೇ ಅವುಗಳನ್ನು ಸರಿಮಾಡಿ ಎಂದು ಆದೇಶ ಮಾಡಿದರು.