Tag: Ilkal Saree

  • ಆನ್‌ಲೈನ್ ಬೆಟ್ಟಿಂಗ್ ಆಪ್‌ ನಿಷೇಧಿಸಿ – ಮೋದಿಗೆ ಇಳಕಲ್ ಸೀರೆಯಲ್ಲಿ ನೇಯ್ಗೆ ಮಾಡಿ ನೇಕಾರನ ಮನವಿ

    ಆನ್‌ಲೈನ್ ಬೆಟ್ಟಿಂಗ್ ಆಪ್‌ ನಿಷೇಧಿಸಿ – ಮೋದಿಗೆ ಇಳಕಲ್ ಸೀರೆಯಲ್ಲಿ ನೇಯ್ಗೆ ಮಾಡಿ ನೇಕಾರನ ಮನವಿ

    ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್‌ಗಳ (Online Betting Apps) ಹಾವಳಿ ಹೆಚ್ಚಾಗಿದೆ. ಬಹುತೇಕ ಯುವಕರು ಮತ್ತು ಮಧ್ಯಮ ವರ್ಗದ ಜನರು ಈ ಬೆಟ್ಟಿಂಗ್ ಆ್ಯಪ್ ಮಾರುಹೋಗಿ, ದುಡ್ಡು ಕಳಿದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೆಲ್ಲವನ್ನ ಅರಿತ ಬಾಗಲಕೋಟೆಯ (Bagalkot) ಇಳಕಲ್ ನಗರದ ನಿವಾಸಿ ನೇಕಾರ ಮೇಘರಾಜ್ ಗುದ್ದಟ್ಟಿ ಆನ್‌ಲೈನ್ ಆ್ಯಪ್‌ಗಳನ್ನು ನಿಷೇಧಿಸಿ ಎಂದು ವಿಭಿನ್ನ ಅಭಿಯಾನ ಹಮ್ಮಿಕೊಂಡಿದ್ದಾರೆ.

    ನಾಡಿನ ಹೆಮ್ಮೆಯ ಜಗತ್ಪ್ರಸಿದ್ಧ ಇಳಕಲ್ ಸೀರೆಯ (Ilkal Saree) ಸೆರಗಿನಲ್ಲಿ, ರಮ್ಮಿ ಮತ್ತು ಡ್ರೀಮ್ ಇಲೆವೆನ್ ಆಪ್‌ಗಳನ್ನು ಬ್ಯಾನ್‌ ಇನ್ ಇಂಡಿಯಾ ಪಿಎಂ ಮೋದಿ (PM Narendra Modi) ಎಂದು ಭಾರತದ ಲಾಂಛನದ ಚಿತ್ರ ಸಹಿತ ನೈಗೇ ಮಾಡಿ ಆನ್‌ಲೈನ್ ಆ್ಯಪ್ ಬ್ಯಾನ್ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ

    ಮಧ್ಯಮ ವರ್ಗದ ಜನರ ಹಿತದೃಷ್ಟಿ ಹಾಗೂ ಆಪ್‌ ಹುಚ್ಚಿಗೆ ಬಿದ್ದು ಹಾಳಾಗುತ್ತಿರುವ ಯುವಕರ ತಾಯಂದಿರ ಪರವಾಗಿ ಈ ಸೀರೆಯನ್ನು ನೇಯ್ಗೆ ಮಾಡಿದ್ದೇನೆ. ಈ ಸೀರೆಯನ್ನು ಪ್ರಧಾನಿ‌ ಮೋದಿಯವರ ಕಾರ್ಯಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

    ಈ ಹಿಂದೆ ಮೇಘರಾಜ್, ಇಳಕಲ್ ಸೀರೆಯಲ್ಲಿ ಆಯೋಧ್ಯೆಯ ಶ್ರೀರಾಮ ಮಂದಿರ, ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ್ದರು. ಪುನೀತ್ ರಾಜಕುಮಾರ್‌ ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದು ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು.

     

  • ಇಳಕಲ್‌ ಸೀರೆಯಲ್ಲಿ ಅರಳಿತು ರಾಷ್ಟ್ರಧ್ವಜ, ಚಂದ್ರಯಾನ -3

    ಇಳಕಲ್‌ ಸೀರೆಯಲ್ಲಿ ಅರಳಿತು ರಾಷ್ಟ್ರಧ್ವಜ, ಚಂದ್ರಯಾನ -3

    ಬಾಗಲಕೋಟೆ: ನೇಕಾರ ಕಲಾವಿದ ಮೇಘರಾಜ್ ಗುದಟ್ಟಿ (Meghraj Gudatti) ಅವರು ಇಳಕಲ್‌ ಸೀರೆಯಲ್ಲಿ ರಾಷ್ಟ್ರಧ್ವಜ (National Flag) ಮತ್ತು ಚಂದ್ರಯಾನ-3 (Chandrayaan-3) ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ನಾನು ನನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸಿ ನೇಯ್ಗೆಯ ಮೂಲಕ ಇಸ್ರೋ ವಿಜ್ಞಾನಿಗಳಿಗೆ (ISRO Scientist) ಗೌರವ ಸಲ್ಲಿಸಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಲ ವಾಂತಿ ವಶ – ಇಬ್ಬರು ಅರೆಸ್ಟ್‌

    ದೇಶದಲ್ಲೇ ಪ್ರಖ್ಯಾತಿ ಹಾಗೂ ಪ್ರಸಿದ್ದಿಯನ್ನು ಪಡೆದಿರುವ ಇಳಕಲ್ ಸೀರೆಯ (Ilkal Saree) ಮೇಲೆ ಮೇಘರಾಜ್ ಅವರು ಕಲಾ ನೈಪುಣ್ಯ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಅಯೋಧ್ಯೆಯ ರಾಮಮಂದಿರದ (Ram mandir) ಅಡಿಗಲ್ಲು ಹಾಕುವಾಗ ಸೀರೆಯಲ್ಲಿ ರಾಮಮಂದಿರದ ನೀಲನಕ್ಷೆಯನ್ನು ಬಿಡಿಸಿ ಅಭಿಮಾನ ಮೆರೆದಿದ್ದರು.

    ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಕೊನೆಯ ಜೇಮ್ಸ್‌ (James) ಚಿತ್ರಕ್ಕೆ ವಿಶೇಷ ಶುಭಾಶಯಗಳನ್ನು ಕೋರಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದ್ದರು. ಅಲ್ಲದೇ ಕಾಂತಾರ (Kantara) ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಸೀರೆಯಲ್ಲಿ ಶುಭ ಕೋರಿದ್ದರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಇನ್ಮುಂದೆ ಸಿಗುತ್ತೆ ಇಳಕಲ್ ಸೀರೆ

    ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಇನ್ಮುಂದೆ ಸಿಗುತ್ತೆ ಇಳಕಲ್ ಸೀರೆ

    ಹುಬ್ಬಳ್ಳಿ: ನಗರದ ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಪ್ರದರ್ಶನ ಮತ್ತು ಮಳಿಗೆ ತೆರೆಯಲಾಗಿದೆ. ಈ ಮಳಿಗೆಗಳಿಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಚಾಲನೆ ನೀಡಿದರು.

    ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ಸ್ಥಳೀಯ ಉತ್ಪನ್ನಗಳು, ಕುಶಲಕರ್ಮಿಗಳು ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದೆ. ಒಂದು ನಿಲ್ದಾಣ-ಒಂದು ಉತ್ಪನ್ನ ಎಂಬ ಕಾರ್ಯಕ್ರಮದಡಿ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ 4ನೇ ಸ್ಥಳೀಯ ಉತ್ಪನ್ನಗಳಲ್ಲಿ ಒಂದಾದ ಇಳಕಲ್ ಸೀರೆಯ ಮಳಿಗೆ ಆರಂಭಿಸಿಲಾಗಿದೆ. ಮೇ 25 ರಿಂದ ಜೂನ್ 7 ರವರೆಗೆ ಪ್ರದರ್ಶನ ಇರಲಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಸಂಜೀವ್ ಕಿಶೋರ್ ಅವರು ಈ ಕುರಿತು ಮಾತನಾಡಿದ್ದು, ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹಿಸುವ ಮತ್ತು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದೆ. ಪ್ರತಿ ನಿತ್ಯ ರೈಲ್ವೆ ನಿಲ್ದಾಣಕ್ಕೆ ಅನೇಕ ಜನರು ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಇಳಕಲ್ ಸೀರೆಯನ್ನು ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

    ಮಳಿಗೆ ಸ್ಥಾಪನೆಯಿಂದ ಸಾರ್ವಜನಿಕರಿಗೆ ಸ್ಥಳೀಯ ಉತ್ಪನ್ನಗಳ ಬಗ್ಗೆ ತಿಳಿಸಿಕೊಳ್ಳಲು ಮತ್ತು ಖರೀದಿಸಲು ಅನುಕೂಲವಾಗುತ್ತದೆ. ನಿಜವಾಗಲೂ ಒಂದು ಉತ್ತಮ ಯೋಜನೆ ಇದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಗೆ ಕೊಲೆ ಬೆದರಿಕೆ – ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲು