Tag: ileana

  • ನನ್ನ ಮಗುವಿನ ತಂದೆ ಇವರೇ: ನಾನು ಸಿಂಗಲ್ ಪೇರೆಂಟ್ ಅಲ್ಲ ಎಂದ ನಟಿ

    ನನ್ನ ಮಗುವಿನ ತಂದೆ ಇವರೇ: ನಾನು ಸಿಂಗಲ್ ಪೇರೆಂಟ್ ಅಲ್ಲ ಎಂದ ನಟಿ

    ತಾನು ಗರ್ಭಿಣಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಇಲಿಯಾನಾ. ಮದುವೆ ಆಗದೇ ಅದು ಹೇಗೆ ಮಗು ಹುಟ್ಟಲು ಸಾಧ್ಯ? ಎಂದು ಹಲವರು ಪ್ರಶ್ನೆ ಮಾಡಿದ್ದರು. ನೀವು ಸಿಂಗಲ್ ಪೇರೆಂಟಾ? ಎಂದು ಕೇಳಿದ್ದರು. ಈಗ ಎಲ್ಲದಕ್ಕೂ ಇಲಿಯಾನಾ ಉತ್ತರಿಸಿದ್ದಾರೆ. ತಮ್ಮ ಗಂಡನ ಫೋಟೋವನ್ನು ಶೇರ್ ಮಾಡಿ, ತಾವು ಸಿಂಗಲ್ ಪೇರೆಂಟ್ ಅಲ್ಲ ಎಂದು ಹೇಳಿಕೊಂಡಿದ್ದಾರೆ.

    ಇಲಿಯಾನಾ(Ileana)  ಅವರು ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ಸುದ್ದಿ ರಿವೀಲ್ ಆಗಿರುವ ಬೆನ್ನಲ್ಲೇ ನಟಿಯ ಬಗ್ಗೆ ಮತ್ತೊಂದು ಬ್ಲಾಸ್ಟಿಂಗ್ ಸುದ್ದಿಯೊಂದು ಸಿಕ್ಕಿತ್ತು. ಸಿನಿಮಾರಂಗ, ಅಭಿಮಾನಿಗಳು ಸೇರಿದಂತೆ ಅನೇಕರು ಇಲಿಯಾನಾ ಮದುವೆಯಾಗಿಲ್ಲ ಎಂದು ಭಾವಿಸಿದ್ದರು. ಆದರೆ ಈ ಸುದ್ದಿಗೆ ನಯಾ ಟ್ವಿಸ್ಟ್‌ ಸಿಕ್ಕಿತ್ತು.

    ತಮ್ಮ ಮಗುವಿಗೆ ಕೋವಾ ಫೀನಕ್ಸ್ ಡೋಲನ್ (Koa Phoenix Dolan) ಎಂದು ಹೆಸರಿಟ್ಟಾಗಲೂ ಮಗುವಿನ ತಂದೆ ಯಾರು ರಿವೀಲ್ ಮಾಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದರು. ಇದೀಗ ಎಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾರೆ ನಟಿ.

     

    ಮೈಕಲ್ ಡೋಲನ್ (Michael Dolan) ಎಂಬುವವರ ಜೊತೆ ಇಲಿಯಾನಾ ಮೇ 13, 2023ರಂದು ವಿವಾಹವಾಗಿದ್ದಾರೆ ಎಂದು ರಿವೀಲ್ ಆಗಿತ್ತು. ಆದರೆ ಅಧಿಕೃತ ಮದುವೆ ಬಗ್ಗೆ ಯಾವುದನ್ನ ನಟಿ ತಿಳಿಸಿರಲಿಲ್ಲ. ಕಳೆದ ತಿಂಗಳು ತನ್ನ ಮಸ್ಟರಿ ಮ್ಯಾನ್ ಮೈಕಲ್ ಫೋಟೋವನ್ನ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆತನ ಪರಿಚಯವನ್ನ ನಟಿ ತಿಳಿಸಿರಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಮದುವೆ ಮಾತನಾಡುತ್ತಾರಾ? ಮೇ 13ರಂದು ಮದುವೆ ಆಗಿರೋದು ನಿಜಾನಾ ಈ ಎಲ್ಲದರ ಬಗ್ಗೆ ಇಲಿಯಾನಾ ಅಧಿಕೃತ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿತ್ತು. ಈಗ ಎಲ್ಲವೂ ಬಟಾಬಯಲಾಗಿದೆ.

  • ಮದುವೆಗೂ ಮುನ್ನ ನಟಿ ಇಲಿಯಾನ ಮಗು : ಬೆಂಬಲಿಸಿದ ತಾಯಿ

    ಮದುವೆಗೂ ಮುನ್ನ ನಟಿ ಇಲಿಯಾನ ಮಗು : ಬೆಂಬಲಿಸಿದ ತಾಯಿ

    ಬಾಲಿವುಡ್ (Bollywood) ನಟಿ ಇಲಿಯಾನ (Ileana) ಇಂದು ಅಚ್ಚರಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದರು. ‘ನಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದರು. ಮದುವೆ ಆಗಿದ್ದರ ಬಗ್ಗೆ ಯಾವತ್ತೂ ಹೇಳಿಕೊಳ್ಳದ ನಟಿಗೆ ಮಗು ಹೇಗೆ? ಎಂದು ಎಲ್ಲರಲ್ಲೂ ಪ್ರಶ್ನೆ ಮೂಡಿತ್ತು. ಇದೇನಾದರೂ ಸಿನಿಮಾ ಪ್ರಮೋಷನ್ನಾ ಇರಬಹುದಾ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿತ್ತು. ಆದರೆ, ಇಲಿಯಾನ ತಾಯಿ ಮಾಡಿರುವ ಪೋಸ್ಟ್ ಮತ್ತೊಂದು ಸುತ್ತಿನ ಚರ್ಚೆಗೆ ಮುನ್ನುಡಿ ಬರೆದಿದೆ.

    ನಾನು ಮಗುವಿನ ನಿರೀಕ್ಷೆಯಲ್ಲಿರುವೆ ಎಂದು ಹಾಕಲಾದ ಪೋಸ್ಟ್ ಗೆ ಇಲಿಯಾನ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು. ನಾನು ಮೊಮ್ಮಗುವಿನ ನಿರೀಕ್ಷೆಯಲ್ಲಿರುವೆ. ಕಾಯುವುದಕ್ಕೆ ಆಗುತ್ತಿಲ್ಲ, ಬೇಗ ಮೊಮ್ಮಗು ಮನೆಗೆ ಬರಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ನಿಜವಾಗಿಯೂ ಇಲಿಯಾನ ತಾಯಿ ಆಗುತ್ತಿದ್ದಾರಾ? ಹಾಗಾದರೆ, ಆ ಮಗುವಿನ ತಂದೆ ಯಾರಿರಬಹುದು ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ಸಲ್ಮಾನ್ ಖಾನ್ ನಾಯಕಿ ದಿಶಾ ಪಟಾನಿ

    ತಾಯಿ ಆಗುತ್ತಿರುವ ಕುರಿತು ಇಲಿಯಾನ ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನ, ‘ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.

    ಇಲಿಯಾನ ಪ್ರೆಗ್ನಿನ್ಸಿ (Pregnancy) ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.

  • ಮದುವೆ ಆಗದೇ ಮಗುವಿಗಾಗಿ ಕಾಯುತ್ತಿರುವೆ ಎಂದು ಶಾಕ್ ಕೊಟ್ಟ ಇಲಿಯಾನ

    ಮದುವೆ ಆಗದೇ ಮಗುವಿಗಾಗಿ ಕಾಯುತ್ತಿರುವೆ ಎಂದು ಶಾಕ್ ಕೊಟ್ಟ ಇಲಿಯಾನ

    ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದ ನಟಿ ಇಲಿಯಾನ (Ileana), ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇವರು, ಇನ್ನೂ ಮದುವೆ (Marriage) ಆಗಿಲ್ಲ. ಆದರೂ, ತಾಯಿ (Pregnancy) ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನ, ‘ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.

    ಇಲಿಯಾನ ಪ್ರೆಗ್ನಿನ್ಸಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.

    ಇಲಿಯಾನ ನಿಜವಾಗಿಯೂ ಗರ್ಭಿಣಿಯಾ ಅಥವಾ ಯಾವುದಾದರೂ ಸಿನಿಮಾದ ಪ್ರಮೋಷನ್ ಗೆ ಈ ರೀತಿ ಪೋಸ್ಟ್ ಮಾಡಿರಬಹುದಾ ಎನ್ನುವ ಅನುಮಾನ ಕೂಡ ಮೂಡಿದೆ. ಸದ್ಯದಲ್ಲೇ ಈ ಎಲ್ಲ ಅನುಮಾನಗಳಿಗೆ ಅವರೇ ತೆರೆ ಎಳೆಯಲಿದ್ದಾರೆ.

  • ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

    ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

    ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸಿನಿಮಾ, ನಟ, ನಟಿಯರು ಮಾಲ್ಡೀವ್ಸ್‌ಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆ ಬಿಕಿನಿ ತೊಟ್ಟು ಮಾಲ್ಡೀವ್ಸ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟು ಹುಡುಗರ ಹಾಟ್ ಬಿಟ್ ಹೆಚ್ಚಿಸಿದ್ದರು. ಇದೀಗ ಇಲಿಯಾನಾ ಮಾಲ್ಡೀವ್ಸ್‌ನಲ್ಲಿ ಬಿಕಿನಿ ತೊಟ್ಟು ಬೀಚ್‍ಗಳಲ್ಲಿ ಮಾದಕವಾಗಿ ಪೋಸ್ ನೀಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್

     

    View this post on Instagram

     

    A post shared by Ileana D’Cruz (@ileana_official)

    ಕೂಲ್ ಡ್ರಿಂಕ್ ಕುಡಿಯುತ್ತಾ ಈ ಬಿಸಿಲಿನಲ್ಲಿ ನೀಲಿ ಸಮುದ್ರ ನೋಡಿಕೊಂಡು ಕುಳಿತುಕೊಳ್ಳುವುದಕ್ಕಿಂತ ಬೇರೆ ಮಜಾ ಇದ್ಯಾ? ಎಂದು ಬರೆದುಕೊಂಡು ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇಲಿಯಾನ ಸಾಕಷ್ಟು ದಿನಗಳಿಂದ ಮಾಲ್ಡೀವ್ಸ್‌ನಲ್ಲಿಯೇ ಬಿಡು ಬಿಟ್ಟಿದ್ದು, ಆಗಾಗ ತನ್ನ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ಬಿಳಿ ಮತ್ತು ನೀಲಿ ಬಣ್ಣದ ಬಿಕಿನಿ ತೊಟ್ಟು ಫೋಟೋಗಳನ್ನು ನೋಡಬಹುದಾಗಿದೆ. ಕೆಲವರು ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಇಲಿಯಾನ ಕಾಲೆಳೆಯವಂತ ಪ್ರಶ್ನೆಗಳನ್ನು ಕೇಳುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.