Tag: ilayaraja

  • ಅಜಿತ್ ಸಿನಿಮಾ ವಿರುದ್ಧ ಇಳಯರಾಜ ಕಾನೂನು ಸಮರ- 5 ಕೋಟಿ ಪರಿಹಾರ ಕೋರಿ ನೋಟಿಸ್

    ಅಜಿತ್ ಸಿನಿಮಾ ವಿರುದ್ಧ ಇಳಯರಾಜ ಕಾನೂನು ಸಮರ- 5 ಕೋಟಿ ಪರಿಹಾರ ಕೋರಿ ನೋಟಿಸ್

    ಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಬೆನ್ನಲ್ಲೇ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ತನ್ನ ಸಂಯೋಜನೆಯ 3 ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿದ್ದಕ್ಕಾಗಿ ಚಿತ್ರತಂಡಕ್ಕೆ ಇಳಯರಾಜ 5 ಕೋಟಿ ರೂ. ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದನ್ನೂ ಓದಿ:ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏ.10ರಂದು ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಹಳೆಯ ತಮಿಳು ಸಿನಿಮಾಗಳ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಒತ್ತಾ ರುಪಾಯುಮ್ ಥಾರೆನ್, ಇಲಮೈ ಇಧೊ ಇಧೋ, ಎನ್ ಜೋಡಿ ಮಂಜಾ ಕುರುವಿ ಹಾಡುಗಳನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಹಾಡುಗಳನ್ನು ಸಂಗೀತ ಸಂಯೋಜನೆ ಮಾಡಿರೋದು ಇಳಯರಾಜ. ಆದರೆ ಈ ಹಾಡುಗಳನ್ನು ಬಳಕೆ ಮಾಡಿಕೊಳ್ಳಲು ಚಿತ್ರತಂಡ ಇಳಯರಾಜ ಬಳಿ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ.

    ಹಾಗಾಗಿ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ವಿರುದ್ಧ ಇಳಯರಾಜ (Ilayaraja) ಕಾನೂನು ಸಮರ ಸಾರಿದ್ದಾರೆ. ತಮ್ಮ ಅನುಮತಿ ಪಡೆಯದೆ ಹಾಡು ಬಳಸಿದ್ದಕ್ಕೆ ಚಿತ್ರತಂಡಕ್ಕೆ 5 ಕೋಟಿ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಹಾಗಾದ್ರೆ ಚಿತ್ರತಂಡ ಮುಂದಿನ ನಡೆಯೇನು ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

    ಈ ಸಿನಿಮಾದಲ್ಲಿ ಅಜಿತ್ ಜೊತೆ ತ್ರಿಷಾ, ಪ್ರಿಯಾ ವಾರಿಯರ್ ನಟಿಸಿದ್ದರು. ಈ ಸಿನಿಮಾ ಆಗಿ 5 ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡಿದೆ. ಈ ಸಿನಿಮಾದ ಯಶಸ್ಸಿಗೆ ಈ ಹಾಡುಗಳು ಪ್ಲಸ್ ಆಗಿತ್ತು.

  • ಇಳಯರಾಜ ಹಾಡಿನ ಮೋಡಿಗೆ ತಲೆದೂಗಿದ ಸಾಂಸ್ಕೃತಿಕ ನಗರಿ ಜನ

    ಇಳಯರಾಜ ಹಾಡಿನ ಮೋಡಿಗೆ ತಲೆದೂಗಿದ ಸಾಂಸ್ಕೃತಿಕ ನಗರಿ ಜನ

    – ಮೈಸೂರು ಯುವ ದಸರಾಗೆ ಅದ್ದೂರಿ ತೆರೆ
    – ರೆಟ್ರೋ, ಮೆಲೋಡಿ ಕಾಂಬಿನೇಷನ್‌ಗೆ ಯುವಸಮೂಹ ಫಿದಾ

    ಮೈಸೂರು: ಮೈಸೂರು ದಸರಾದಲ್ಲಿ ಕಳೆದ 5 ದಿನದಿಂದ ಯುವ ಸಮೂಹವನ್ನ ರಂಜಿಸಿದ ಯುವ ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ಕೊನೆಯ ದಿನವಾದ ಗುರುವಾರ ಕೂಡ ಸ್ವರ ಮಾಂತ್ರಿಕ ಇಳಯರಾಜ ಮೋಡಿಗೆ ಮೈಸೂರಿಗರು ತಲೆ ದೂಗಿದರು.

    ಕಳೆದ 5 ದಿನದಿಂದ ದಸರಾ ಮೆರುಗನ್ನ ಡಬಲ್ ಮಾಡಿದ್ದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ಕೊನೆಯ ದಿನವಾದ ನಿನ್ನೆ ಇಳಯರಾಜರ ಮೋಡಿ ಮೈಸೂರಿಗರನ್ನ ಸ್ವರ ಸಾಲುಗಳಲ್ಲಿ ಮಿಂದೆಳಿಸುವ ಮೂಲಕ ಸಾವಿರಾರು ಸಂಖ್ಯೆಯ ಜನರನ್ನ ರಂಜಿಸಿತು.

    ನಗರದ ಹೊರ ವಲಯದ ನಡೆದ ಕಾರ್ಯಕ್ರಮದ ಕೊನೆಯ ದಿನವಾದ ಗುರುವಾರ ಇಳಿಯರಾಜ್ ಮೂಸಿಕಲ್ ನೈಟ್ ಆರಂಭವಾಗುತ್ತಿದ್ದಂತೆ ಜನ ಕುಳಿತಲ್ಲೇ ಸಂಗೀತದಲ್ಲಿ ತೇಲಿದರು. ಮೊದಲ ಬಾರಿಗೆ ತಾವು ಕೊಲ್ಲೂರು ಮೂಕಾಂಬಿಕ ಬಗ್ಗೆ ಹಾಡಿದ ಮೊದಲ ಹಾಡದ ಅಮ್ಮ ಎಂದೂ ಕೂಗಿದರೆ ಹಾಡಿನ ಮೂಲಕ ನೆರದಿದ್ದವರನ್ನ ಭಕ್ತಿಯಲ್ಲಿ ತೇಲುವಂತೆ ಮಾಡಿದರು. ಬಳಿಕ ಡಾ. ರಾಜಕುಮಾರ್ ಅಭಿನಯದ ನನ್ನ ನೀನು ಗೆಲ್ಲಲಾರೆ, ಜೀವ ಹೂವಾಗಿದೆ ಹಾಡು ಸೇರಿದಂತೆ ಡಾ. ವಿಷ್ಣುವರ್ಧನ್ ಅಭಿನಯದ ಹಾಡುಗಳನ್ನ ಹಾಡುವ ಮೂಲಕ ರಂಚಿಸಿದರು. ಅಲ್ಲದೇ ಶಂಕರ್ ನಾಗ್ ನಟನೆಯ ಗೀತಾ ಚಿತ್ರದ ಹಾಡಾದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡನ್ನ ದಿವಂಗತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್‌.ಬಿ ಚರಣ್ ಹಾಡುವ ಮೂಲಕ ನೆರದಿದ್ದವರನ್ನ ಕುಣಿದು ಕುಪ್ಪಳಿಸುಂತೆ ಮಾಡಿದ್ರು. ಅಲ್ಲದೇ ಅನೇಕ ಕನ್ನಡದ ಪ್ರಖ್ಯಾತ ರೆಟ್ರೋ, ಮತ್ತು ಮೆಲೋಡಿ ಹಾಡುಗಳನ್ನ ಹಾಡುವ ಮೂಲಕ ಜಿಟಿ ಜಿಟಿ ಮಳೆಯ ನಡುವೆಯೂ ಜನ ಸಂಗೀತಕ್ಕೆ ತಲೆದೂಗುವಂತೆ ಮಾಡಿದ್ರು.

    ಇದೇ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಇಳಯರಾಜ ಕನ್ನಡನಾಡು ಮತ್ತು ಕನ್ನಡದ ಹಿರಿಯ ನಟ, ನಿರ್ದೇಶಕರು, ಬರಹಗಾರರ ಜೊತೆಗಿನ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡ್ರು. 1974 ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದ ಇಳಯರಾಜ ಮೈಸೂರಿನ ಕಾರ್ಯಕ್ರಮದಲ್ಲಿ ಕೀಬೋರ್ಡ್ ವಾದಕರಾಗಿ ಭಾಗಿಯಾಗಿದ್ರಂತೆ. ಕಾರ್ಯಕ್ರಮ ಮುಗಿಸಿ ಬಳಿಕ ಕೊಲ್ಲೂರು ಮೂಕಾಂಬಿಕಾ ದರ್ಶನ ಮಾಡಿದ್ದ ಅನುಭವ ಹಂಚಿಕೊಂಡರು. ಅಲ್ಲದೇ ಮೊದಲ ಬಾರಿಗೆ ಖುದ್ದು ನಟ ಸಾರ್ವಭೌಮ ರಾಜಕುಮಾರ್ ಅವರ ಬಳಿ ಹಾಡಿಸಿದ್ದು ಕೂಡ ಇದೇ ಇಳಯರಾಜರೇ ಯಂತೆ. ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಿನ ಸಂಯೋಜನೆ ಸಂಧರ್ಭದ ಘಟನೆ ನೆನಪು ಮಾಡಿಕೊಂಡ ಅವರು, ಆ ಸಮಯದಲ್ಲಿ ಬೇರೆ ಅವರು ಹಾಡೋದು ಬೇಡ, ರಾಜಕುಮಾರ್ ಅವರೇ ಹಾಡಲಿ ಎಂದು ಹೇಳಿದ್ದ ಅನುಭವದ ಬಗ್ಗೆ ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ಕರ್ನಾಟಕ ಮತ್ತು ಕನ್ನಡದ ನಟರ ಜೊತೆಗಿನ ಬಾಂಧ್ಯವ ಬಗ್ಗೆ ಹೇಳಿಕೊಂಡರು.

  • ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ಕ್ಷಿಣದ ಹೆಸರಾಂತ ನಟ ರಜನಿಕಾಂತ್ (Rajinikanth) ನಟನೆಯ ಕೂಲಿ (Coolie) ಸಿನಿಮಾ ತಂಡಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ilayaraja) ನೋಟಿಸ್ (Notice) ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಸಂಗೀತ ಸಂಯೋಜನೆಯನ್ನು ಅನುಮತಿ ಇಲ್ಲದೇ ಬಳಸಿದ್ದಾರೆ ಎಂದು ನೋಟಿಸ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.

    ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ವಾ ವಾ ಪಾಕಂ ವಾ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಲಾಗಿದೆ. ಇದಕ್ಕೆ ತಮ್ಮ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

     

    ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ ಕೂಡ ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು. ಈಗ ಮತ್ತೆ ಲೋಕೇಶ್ ತಪ್ಪು ಮಾಡಿದ್ದಾರೆ.

  • ಕನ್ನಡದಲ್ಲೂ ಬರಲಿದೆ ಇಳಯರಾಜ ಬಯೋಪಿಕ್: ಚಿತ್ರದಲ್ಲಿ ಇರಲಿದೆ ಕನ್ನಡದ ನಂಟು

    ಕನ್ನಡದಲ್ಲೂ ಬರಲಿದೆ ಇಳಯರಾಜ ಬಯೋಪಿಕ್: ಚಿತ್ರದಲ್ಲಿ ಇರಲಿದೆ ಕನ್ನಡದ ನಂಟು

    ನಿನ್ನೆಯಷ್ಟೇ ಸಂಗೀತ ಮಾಂತ್ರಿಕ ಇಳಯರಾಜ ಅವರ ಬಯೋಪಿಕ್‍ ಚಿತ್ರಕ್ಕೆ ಚಾಲನೆ ದೊರೆತಿದೆ. ಮೂಲ ಅದು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದರೂ, ಕನ್ನಡದಲ್ಲೂ ಈ ಚಿತ್ರವನ್ನು ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಕನ್ನಡದಲ್ಲೂ (Kannada) ಇಳಯರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಸಾಕಷ್ಟು ಚಿತ್ರಗಳಿವೆ. ಕನ್ನಡದೊಂದಿಗೆ ಅವರ ಜೀವನ ಬೆಸೆದುಕೊಂಡಿದೆ. ಹಾಗಾಗಿ ಕನ್ನಡದಲ್ಲೂ ಚಿತ್ರವನ್ನು ಡಬ್ ಮಾಡುತ್ತಾರಂತೆ. ಈ ಸಿನಿಮಾದ ಕಥೆಯಲ್ಲಿ ಕನ್ನಡಿಗರು ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

    ನಿನ್ನೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಕಮಲ್ ಹಾಸನ್ (Kamal Haasan) ಮತ್ತು ಇಳಯರಾಜ ಅವರೇ ಬಿಡುಗಡೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    ಇಳಯರಾಜ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ನಟ ಧನುಷ್ (Dhanush) ಅವರು ಆ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದು ಕೂಡ ನಿಜವಾಗಿದೆ. ಧನುಷ್ ಅವರೇ ಇಳಯರಾಜ ಪಾತ್ರವನ್ನು ಮಾಡಲಿದ್ದಾರೆ. ಇಂದು ಅವರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು.

    ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಅದು ಈಗ ನಿಜವಾಗಿದೆ.

     

    ಈ ಚಿತ್ರಕ್ಕೆ ಇಳಯರಾಜ ಎಂದು ಹೆಸರಿಡಲಾಗಿದ್ದು, ಅರುಣ್ ಮಾದೇಶ್ವರನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ನೀರವ್ ಶಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯೂರಿ ಮೂವಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

  • ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

    ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

    ಸಂಗೀತದ ಜೀವಂತ ದಂತಕಥೆ ಇಳಯರಾಜ ಅವರ ಬಯೋಪಿಕ್ (Biopic) ಗೆ ಕೊನೆಗೂ ಚಾಲನೆ ಸಿಕ್ಕಿದೆ. ಇಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಫಸ್ಟ್ ಲುಕ್ ಅನ್ನು ಕಮಲ್ ಹಾಸನ್ (, Kamal Haasan) ಮತ್ತು ಇಳಯರಾಜ ಅವರೇ ಬಿಡುಗಡೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    ಇಳಯರಾಜ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ನಟ ಧನುಷ್ (Dhanush) ಅವರು ಆ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದು ಕೂಡ ನಿಜವಾಗಿದೆ. ಧನುಷ್ ಅವರೇ ಇಳಯರಾಜ ಪಾತ್ರವನ್ನು ಮಾಡಲಿದ್ದಾರೆ. ಇಂದು ಅವರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು.

    ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಅದು ಈಗ ನಿಜವಾಗಿದೆ.

    ಈ ಚಿತ್ರಕ್ಕೆ ಇಳಯರಾಜ ಎಂದು ಹೆಸರಿಡಲಾಗಿದ್ದು, ಅರುಣ್ ಮಾದೇಶ್ವರನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ನೀರವ್ ಶಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯೂರಿ ಮೂವಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

  • ಇಳಯರಾಜ ಬಯೋಪಿಕ್: ನಾಳೆಯಿಂದ ಚಿತ್ರಕ್ಕೆ ಚಾಲನೆ

    ಇಳಯರಾಜ ಬಯೋಪಿಕ್: ನಾಳೆಯಿಂದ ಚಿತ್ರಕ್ಕೆ ಚಾಲನೆ

    ಭಾರತೀಯ ಸಿನಿಮಾ ರಂಗದ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್ ಸದ್ದಿಲ್ಲದೇ ಸೆಟ್ಟೇರುತ್ತಿದೆ. ನಾಳೆಯಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದ್ದು, ಮುಹೂರ್ತದ ದಿನದಿಂದಲೇ ಚಿತ್ರೀಕರಣಕ್ಕೂ ಹೊರಡಲಿದೆಯಂತೆ ಚಿತ್ರತಂಡ. ಇಳಯರಾಜ ಅವರ ಪಾತ್ರವನ್ನು ಧನುಷ್ (Dhanush) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತವಾಗಿ ಮಾಹಿತಿ ಲಭ್ಯವಿಲ್ಲ.

    ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು.

    ಇದೀಗ ಸಿಗುತ್ತಿರುವ ಮಾಹಿತಿಯ ಪ್ರಕಾರ, ಇಳಯರಾಜ ಅವರ ಬಯೋಪಿಕ್ ಅನ್ನು ಸ್ವತಃ ಯುವನ್ ಶಂಕರ್ ರಾಜ್ (Yuvan Shankar Raj) ಅವರೇ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಾನಾ ನಿರ್ದೇಶಕರ ಜೊತೆಯೂ ಯುವನ್ ಮಾತನಾಡಿದ್ದಾರೆ ಎನ್ನುವುದು ವರ್ತಮಾನ.

     

    ಈಗಾಗಲೇ ಧನುಷ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ಒಂದು ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಅದೇ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ನಡುವೆಯೇ ಅವರು ಇಳಯರಾಜ ಅವರ ಚಿತ್ರಕ್ಕೂ ಕಾಲ್ ಶೀಟ್ ನೀಡಲಿದ್ದಾರಂತೆ.

  • ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ

    ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ

    ಭಾರತೀಯ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ilayaraja) ಪುತ್ರಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗಾಯಕಿ ಭವತಾರಿಣಿ (Bhavatarini) ಜನವರಿ 25ರಂದು ವಿಧಿವಶರಾಗಿದ್ದಾರೆ (Passed away). ಕೆಲ ವರ್ಷಗಳಿಂದ ಅವರು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಚಿಕಿತ್ಸೆ ಪಡೆಯುವುದಕ್ಕಾಗಿ ಅವರು ಶ್ರೀಲಂಕಾಗೆ ತೆರಳಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಶ್ರೀಲಂಕಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಗುತ್ತಿದೆ ಎಂದು ಅವರ ಪತಿ ಬಾಲಾಜಿ ತಿಳಿಸಿದ್ದಾರೆ.

     

    ಇಳಯರಾಜ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಯುವನ್ ಶಂಕರ್ ರಾಜಾ ಮತ್ತು ಭವತಾರಿಣಿ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಯುವನ್ ಶಂಕರ್ ಸಂಗೀತ ನಿರ್ದೇಶಕರಾಗಿದ್ದರೆ ಭವತಾರಿಣಿ ಗಾಯಕಿ. ಮಾಯಿಲ್ ಪೋಲ ಪೊನ್ನು ಒನ್ನು ಚಿತ್ರಕ್ಕಾಗಿ ಇವರಿಗೆ ರಾಷ್ಟ್ರೀಯ ಪುರಸ್ಕಾರ ಕೂಡ ಲಭಿಸಿತ್ತು.

  • ಇಳಯರಾಜ ಬಯೋಪಿಕ್: ಇಳಯರಾಜ ಪಾತ್ರದಲ್ಲಿ ನಟ ಧನುಷ್

    ಇಳಯರಾಜ ಬಯೋಪಿಕ್: ಇಳಯರಾಜ ಪಾತ್ರದಲ್ಲಿ ನಟ ಧನುಷ್

    ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ತಮಿಳಿನಲ್ಲಿ ಸಿದ್ದತೆ ನಡೆದಿದ್ದು, ಇಳಯರಾಜ ಅವರ ಪಾತ್ರವನ್ನು ಧನುಷ್ (Dhanush) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಇಳಯರಾಜ ಕುರಿತಾದ ಸಿನಿಮಾ ಬಗ್ಗೆ ಚರ್ಚೆ ಆಗುತ್ತಲೇ ಇತ್ತು. ಅದಕ್ಕೀಗ ಅಂತಿಮ ಸ್ವರೂಪ ಸಿಗುತ್ತಿದೆ.

    ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಇದನ್ನೂ ಓದಿ:‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಇದೀಗ ಸಿಗುತ್ತಿರುವ ಮಾಹಿತಿಯ ಪ್ರಕಾರ, ಇಳಯರಾಜ ಅವರ ಬಯೋಪಿಕ್ ಅನ್ನು ಸ್ವತಃ ಯುವನ್ ಶಂಕರ್ ರಾಜ್ (Yuvan Shankar Raj) ಅವರೇ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಾನಾ ನಿರ್ದೇಶಕರ ಜೊತೆಯೂ ಯುವನ್ ಮಾತನಾಡಿದ್ದಾರೆ ಎನ್ನುವುದು ವರ್ತಮಾನ.

     

    ಈಗಾಗಲೇ ಧನುಷ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ಒಂದು ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಅದೇ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಹೀಗಾಗಿ ಇಳಯರಾಜ ಸಿನಿಮಾ ಯಾವಾಗ ಸೆಟ್ಟೇರತ್ತೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ವಿಡುದಲೈ’ ಸಿನಿಮಾದ ಭರ್ಜರಿ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ನಲ್ಲಿ ವಿಜಯ್ ಸೇತುಪತಿ

    ‘ವಿಡುದಲೈ’ ಸಿನಿಮಾದ ಭರ್ಜರಿ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ನಲ್ಲಿ ವಿಜಯ್ ಸೇತುಪತಿ

    ಕಾಲಿವುಡ್ (Kollywood) ನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ (Vetrimaran) ನಿರ್ದೇಶನದ ‘ವಿಡುದಲೈ’ (Vidudalai) ಚಿತ್ರವು ಎರಡು ಭಾಗಗಳಲ್ಲಿ ನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಈಗ ಈ ಚಿತ್ರಕ್ಕಾಗಿ ಕೊಡೈಕೆನಾಲ್ನಲ್ಲಿ ವಿಜಯ್ ಸೇತುಪತಿ (Vijay Sethupathi), ಸೂರಿ ಮತ್ತು ನೂರಾರು ಫೈಟರ್ಗಳ ಅಭಿನಯದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಆರ್‌ಎಸ್ ಇನ್ಫೋಟೈನ್‌ಮೆಂಟ್ನಡಿ ಎಲ್ಡ್ರೆಡ್ ಕುಮಾರ್ ಅವರು ‘ವಿಡುದಲೈ’ ಚಿತ್ರವನ್ನು ನಿರ್ಮಿಸುತ್ತಿದ್ದು, ರೆಡ್ ಜೈಂಟ್ ಮೂವೀಸ್ನ  ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.

    ಅದ್ಧೂರಿ ನಿರ್ಮಾಣಕ್ಕಾಗಿ ಸಾಕಷ್ಟು ಸುದ್ದಿಯಾಗಿರುವ ಈ ಚಿತ್ರಕ್ಕಾಗಿ ಇತ್ತೀಚೆಗೆ ಪೀಟರ್ ಹೇಯ್ನ್ ಅವರ ನೇತೃತ್ವದಲ್ಲಿ ಮೈನವಿರೇಳಿಸುವಂತಹ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಈ ಸಾಹಸ ದೃಶ್ಯಗಳಿಗಾಗಿಯೇ ಬಲ್ಗೇರಿಯಾದಿಂದ ಫೈಟರ್ಗಳನ್ನು ಕರೆಸಲಾಗಿರುವುದು ವಿಶೇಷ. ಕೊಡೈಕೆನಾಲ್‌ನ ಪೂಂಬರೈನ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ಈ ಸನ್ನಿವೇಶಗಳು ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಹೆರಿಗೆಯ ನಂತರ ಬದಲಾಯ್ತು ಪ್ರಣಿತಾ ಸುಭಾಷ್ ಲುಕ್

    ‘ವಿಡುದಲೈ’ ಚಿತ್ರವು ಈಗಾಗಲೇ ತನ್ನ ಅದ್ಭುತ ತಾರಾಗಣ, ತಾಂತ್ರಿಕ ವರ್ಗ, ಮೇಕಿಂಗ್ ಮತ್ತು ಫಸ್ಟ್ಲುಕ್ ಪೋಸ್ಟರ್ಗಳಿಂದ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಆಡಿಯೋ, ಟ್ರೈಲರ್ ಮತ್ತು ಚಿತ್ರ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ.

    ‘ವಿಡುದಲೈ’ ಚಿತ್ರದ ತಾರಾಬಳಗದಲ್ಲಿ ವಿಜಯ್ ಸೇತುಪತಿ, ಸೂರಿ (Suri), ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ರಾಜೀವ್ ಮೆನನ್, ಚೇತನ್ ಮತ್ತು ಅನೇಕ ಪ್ರಮುಖ ನಟರು ನಟಿಸಿದ್ದು,  ಇಸೈಜ್ಞಾನಿ ಇಳಯರಾಜ (Ilayaraja) ಸಂಗೀತ ಸಂಯೋಜಿಸುತ್ತಿದ್ದಾರೆ. ವೇಲ್ರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಟ್ರಿಮಾರನ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

    ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

    ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ 16ನೇ ದಿನಕ್ಕೆ ಮುನ್ನುಗ್ಗುತ್ತಿದ್ದು, ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಅಭಿಮಾನಿಗಳಲ್ಲಿ ಮಾತ್ರ ಸಿನಿಮಾದ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ. ದಿನೇ ದಿನೆ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಥಿಯೇಟರ್‌ನತ್ತ ಮುಖ ಮಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಸಂಗೀತ ಲೋಕದ ದಿಗ್ಗಜ, ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಕಾಲಿವುಡ್ ನಟ ಕಮಲ್ ಹಾಸನ್ ಕೆಜಿಎಫ್-2 ಸಿನಿಮಾವನ್ನು ಒಟ್ಟಿಗೆ ಕುಳಿತು ವೀಕ್ಷಿಸಿದ್ದಾರೆ.

    ಹೌದು, ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕೆಜಿಎಫ್-2 ಸಿನಿಮಾ ಹಲವಾರು ದಾಖಲೆಗಳನ್ನು ಬ್ರೇಕ್ ಮಾಡಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಕೆಜಿಎಫ್-2 ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಹಾಗೂ ಸಂಗೀತಾ ನಿರ್ದೇಶಕ ಇಳಯರಾಜ ಅವರು ಚೆನ್ನೈನಲ್ಲಿ ಕೆಜಿಎಫ್-2 ಸಿನಿಮಾದ ಶೋ ವೀಕ್ಷಿಸಿದ್ದಾರೆ. ಸದ್ಯ ಇವರಿಬ್ಬರು ಒಟ್ಟಿಗೆ ಕುಳಿತು ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಬಂಗಾರದ ಬೆಳೆ ತೆಗೆದ `ಕೆಜಿಎಫ್ 2′: ಬಾಕ್ಸ್ಆಫೀಸ್‌ನಲ್ಲಿ 336 ಕೋಟಿ ಕಲೆಕ್ಷನ್

    ಪ್ರಶಾಂತ್‍ನೀಲ್ ಮತ್ತು ಯಶ್ ಕಾಂಬಿನೇಷನ್‍ನ `ಕೆಜಿಎಫ್ 2′ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಿತ್ತು. ಬಿಡುಗಡೆಯಾಗಿ 16 ದಿನಗಳಾದರೂ ಕಲೆಕ್ಷನ್‍ನಲ್ಲಿ ಹಿಂದುಳಿದಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಒಂದೇ ದಿನ ಬಿಡುಗೆಯಾದ ಕೆಜಿಎಫ್-2 ಸಿನಿಮಾ 1,000ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡುವ ಮೂಲಕ ಮುನ್ನುಗ್ಗುತ್ತಿದೆ. ಪರಭಾಷೆಗಳಲ್ಲಿ ಕೂಡ ಕೆಜಿಎಫ್-2 ಹೊಸ ದಾಖಲೆ ಸೃಷ್ಟಿಸುವ ಮುನ್ನ ಬಾಕ್ಸ್ ಆಫೀಸ್‍ ಕೊಳ್ಳೆ ಹೊಡೆಯುತ್ತಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ:  ರಾಷ್ಟ್ರ ಭಾಷೆ ವಿವಾದದ ನಡುವೆಯೂ ಹಿಂದಿ ಬಾಕ್ಸ್ಆಫೀಸ್‌ನಲ್ಲಿ 343 ಕೋಟಿ ಬಾಚಿದ `ಕೆಜಿಎಫ್ 2′