Tag: Ilakal

  • ಕಾರವಾರ ಇಳಕಲ್ ರಾಷ್ಟ್ರೀಯ ಹೆದ್ದಾರಿ ಶೀಘ್ರ ಕಾಮಗಾರಿ ಆರಂಭಿಸಲು ಗಡ್ಕರಿಗೆ ಸಂಸದ ಬೊಮ್ಮಾಯಿ ಮನವಿ

    ಕಾರವಾರ ಇಳಕಲ್ ರಾಷ್ಟ್ರೀಯ ಹೆದ್ದಾರಿ ಶೀಘ್ರ ಕಾಮಗಾರಿ ಆರಂಭಿಸಲು ಗಡ್ಕರಿಗೆ ಸಂಸದ ಬೊಮ್ಮಾಯಿ ಮನವಿ

    ನವದೆಹಲಿ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರವಾರ ಇಳಕಲ್ ರಾಷ್ಟ್ರೀಯ ಹೆದ್ದಾರಿಯನ್ನು (Karwar-Ilakal National Highway) ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವೇ ಡಿಪಿಆರ್ ಮಾಡಿ ಕಾಮಗಾರಿ ಪ್ರಾರಂಭಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಮನವಿ ಮಾಡಿದ್ದಾರೆ.

    ನವದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿರುವ ಅವರು, ಕಾರವಾರ, ಕೈಗಾ, ಮುಂಡಗೋಡ, ಸವಣೂರು, ಗದಗ, ಗಜೇಂದ್ರಗಡ ಮಾರ್ಗವಾಗಿ ಇಳಕಲ್ ತಲುಪುವ ಸುಮಾರು 318 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದ್ದು, ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಸಿಎಂ

    ಪ್ರಸ್ತುತ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿರುವುದರಿಂದ ರಾಜ್ಯ ಸರ್ಕಾರದ ಸರಿಯಾದ ನಿರ್ವಹಣೆ ಇಲ್ಲದ ಕಾರಣ ವಾಹನ ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇನ್ನೊಂದೆಡೆ ಯೋಜನೆಗೆ ಅಧಿಕೃತ ಅನುಮತಿ ನೀಡದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೂ ಯಾವುದೇ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಕಾಮಗಾರಿ ಆರಂಭಿಸುವಂತೆ ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: 2-3 ದಿನಗಳಲ್ಲಿ SEP ವರದಿ ಸಿಎಂಗೆ ಸಲ್ಲಿಕೆ – ಡಾ.ಸುಧಾಕರ್

    ಅಲ್ಲದೇ ಇದಕ್ಕೆ ಹೊಂದಿಕೊಂಡ ಸಂಚರಿಸಲು ಸಾಧ್ಯವಾಗದಿರುವಂತಹ ಇತರ ಸಿಆರ್‌ಎಫ್ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ತಮ್ಮ ಅನುಭವದ ಆಧಾರದಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೊಪ್ಪಳದ ಗವಿಸಿದ್ದಪ್ಪ ಕೊಲೆ ಕೇಸನ್ನ NIAಗೆ ವಹಿಸಿ – ಛಲವಾದಿ ನಾರಾಯಣಸ್ವಾಮಿ

  • ಹಿರೇಕೊಡಗಲಿ ಗ್ರಾಮದ ಅಭಿಮಾನಿ ಮನೆಗೆ ಧ್ರುವ ಸರ್ಜಾ ಅಚ್ಚರಿಯ ಭೇಟಿ

    ಹಿರೇಕೊಡಗಲಿ ಗ್ರಾಮದ ಅಭಿಮಾನಿ ಮನೆಗೆ ಧ್ರುವ ಸರ್ಜಾ ಅಚ್ಚರಿಯ ಭೇಟಿ

    ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ನಿನ್ನೆ ರಾತ್ರಿ ಚಿತ್ರನಟ ಧ್ರುವ ಸರ್ಜಾ ಭೇಟಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಗ್ರಾಮದ ದರ್ಶನ ಮಾದರ ಎನ್ನುವ ಯುವಕ ಧ್ರುವ ಸರ್ಜಾ ಅವರ ಕಟ್ಟಾ ಅಭಿಮಾನಿ. ನಿನ್ನೆ ರಾತ್ರಿ ಸರ್ಜಾ ಅವರು ದರ್ಶನ್ ಅವ್ರ ಮನೆಗೆ ಭೇಟಿ ನೀಡಿ ಅಭಿಮಾನಿಯ ಆನಂದವನ್ನು ಇಮ್ಮಡಿಗೊಳಿಸಿದ್ದಾರೆ.

    ದರ್ಶನ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಗುನಗುತ್ತ ಎಲ್ಲರೊಂದಿಗೆ ಕೆಲ ಸಮಯ ಕಳೆದು ಅಲ್ಲಿಂದ ನಿರ್ಗಮಿಸಿದ್ದಾರೆ. ಚಿತ್ರನಟ ಧ್ರುವ ಸರ್ಜಾ ಆ ಪುಟ್ಟ ಗ್ರಾಮಕ್ಕೆ ಬಂದಿದ್ದರಿಂದ ಅಲ್ಲಿನ ಯುವಕರು ಸರ್ಜಾ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ಇನ್ನು ದರ್ಶನ ಮಾದರ  ಇಳಕಲ್ ನಗರದಲ್ಲಿ ದೃವ ಸರ್ಜಾ ಹೆಸರಿನಲ್ಲೆ ಜಿಮ್ ಆರಂಭಿಸಿದ್ದಾನೆ. ನಿನ್ನೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಧ್ರುವ ಸರ್ಜಾ, ಕುಷ್ಟಗಿಗೆ ಸಮೀಪದಲ್ಲಿ ಇರುವ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ಬಂದು ತಮ್ಮನೆಚ್ಚಿನ ಅಭಿಮಾನಿ ಮನೆಗೆ ಭೇಟಿ ನೀಡಿ ಹೋಗಿದ್ದಾರೆ. ನಟ ಧ್ರುವ ಸರ್ಜಾ ಅವ್ರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 12 ಮಂದಿ ಅಂತರ್ ರಾಜ್ಯ ಕಳ್ಳರ ಬಂಧನ: 3 ಲಕ್ಷ ಮೌಲ್ಯದ ನಗದು ಚಿನ್ನಾಭರಣ ವಶ

    12 ಮಂದಿ ಅಂತರ್ ರಾಜ್ಯ ಕಳ್ಳರ ಬಂಧನ: 3 ಲಕ್ಷ ಮೌಲ್ಯದ ನಗದು ಚಿನ್ನಾಭರಣ ವಶ

    ಬಾಗಲಕೋಟೆ: 12 ಜನ ಅಂತರ್ ರಾಜ್ಯ ಕಳ್ಳರನ್ನು ಜಿಲ್ಲೆಯ ಇಳಕಲ್ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 1.50 ಲಕ್ಷ ರೂ. ನಗದು, 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಬೈಕ್ ವಶಕ್ಕೆ ಪಡೆದಿದ್ದಾರೆ.

    ಆಂಧ್ರಪ್ರದೇಶ ಮೂಲದ ಗೂಗಲ್ ಜಿನ್ನಾ, ದಾಸ್ ಬಾಬು, ನಾನಿ ಗುಗಲಾ, ಬಾಣಾಲ್ ಚಿನ್ನಾ, ವಿಜಯ ಅಕುಲಾ, ಇಳಯ ರಾಜಾ, ಪ್ರಸಂಗಿ ಬಾನಾಲಾ, ರಾಜು, ಮೈಕಲ್ ರಾಜು ಉಪತೊಲ್ಲಾ, ಆಂಜನೇಯ ಬೆಲ್ದಾರಾ, ಎಲಿಜಾ ಬಾಣಾಲ್ ಹಾಗೂ ನಂದಾ ಚೆಲ್ಲಾ ಬಂಧಿತ ಆರೋಪಿಗಳು.

    ಬಂಧಿತರು ಇದೇ ವರ್ಷ ಮಾರ್ಚ್ 29ರಂದು ಇಳಕಲ್ ನಗರದ ವಿಶ್ವನಾಥ ಪಾಟೀಲ್ ಮನೆಯಲ್ಲಿ 3 ಲಕ್ಷ ರೂ. ನಗದು, 151 ಗ್ರಾಂ ಚಿನ್ನ ದೋಚಿದ್ದರು. ಮಾರ್ಕಂಡಯ್ಯ ವಗ್ಗಾ ಎಂಬವರು ಆಗಸ್ಟ್ 16ರಂದು ಇಳಕಲ್ ನ ಎಸ್.ಬಿ.ಐ ಬ್ಯಾಂಕಿನಿಂದ ಹಣ ಬ್ಯಾಗ್ ಹಿಡಿದು ಹೊರಗೆ ಬಂದಿದ್ದರು. ಆಗ ಹಿಂಬದಿಯಿಂದ ಬಂದ ಆರೋಪಿಗಳು ಬ್ಯಾಗ್ ಕಿತ್ತುಕೊಂಡು ಹೋಗಿದ್ದರು.

    ರಾಜ್ಯದ ವಿವಿಧ ಭಾಗದಲ್ಲಿ ಇವರು ಕಳ್ಳತನ ಮಾಡುತ್ತಿದ್ದು, ಇವರ ಪತ್ತೆಗಾಗಿ ಬಲೆ ಬೀಸಿದ್ದ ಇಳಕಲ್ ಪೊಲೀಸರು 12 ಜನರನ್ನು ತುಮಕೂರಿನಲ್ಲಿ ಬಂಧಿಸಿದ್ದಾರೆ. ಇವರೆಲ್ಲರೂ ವಿವಿಧ ಗ್ರಾಮಗಳಿಗೆ ಹೋಗಿ, ಅಲ್ಲಿ ಕೆಲವು ದಿನಗಳ ಕಾಲವಿದ್ದು, ಎಲ್ಲವನ್ನೂ ವೀಕ್ಷಿಸಿ ಕಳ್ಳತನ ಮಾಡುತ್ತಿದ್ದರು. ಇವರ ಜೊತೆಗೆ ದೊಡ್ಡ ತಂಡವೇ ಬಂಧಿತರ ಹಿಂದಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಉಳಿದವರನ್ನು ಪತ್ತೆ ಹಚ್ಚಲು ವಿಚಾರಣೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೇ ಮಗನೇ ನಿನಗೆಷ್ಟು ತಾಕತ್ತಿದೆ- ಬಿಜೆಪಿ ಅಭ್ಯರ್ಥಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

    ಲೇ ಮಗನೇ ನಿನಗೆಷ್ಟು ತಾಕತ್ತಿದೆ- ಬಿಜೆಪಿ ಅಭ್ಯರ್ಥಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

    ಬಾಗಲಕೋಟೆ: ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಘಟನೆ ನಡೆದಿದೆ.

    ಇಳಕಲ್ ನಗರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಶಪ್ಪನವರ್, ಲೇ ಮಗನೆ ಎಂದು ಸಂಬೋಧಿಸಿ, ನಿನಗೆಷ್ಟು ತಾಕತ್ತಿದೆ.. ಲೇ ಗಂಡುಮಗನೆ ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ಎಷ್ಟಿದೆ ನಿನಗೆ ತಾಕತ್ತು. ಪದೇ ಪದೇ ಇಳಕಲ್ ನಲ್ಲಿ ಬಿಜೆಪಿ ಇದೆ ಅಂತ ಹೇಳ್ತಾನೆ. ಕಳೆದ ಬಾರಿ ಇಟ್ಟಿಲ್ಲವೇ ಎಣ್ಣಿ. ಈ ಸಾರಿನೂ ಮುಟ್ಟಿ ಮಟ್ಟಿ ನೋಡಿಕೊಳ್ಳುವಂಗೆ ಎಣ್ಣಿ ಇಡ್ತಿನಿ. ಇಬ್ಬರು ಹುಚ್ಚನಾಯಿಗಳು ನಮ್ಮ ಮನೆಯಲ್ಲಿ ಉಂಡು ಈಗ ಬಿಜೆಪಿ ಸೇರಿ ನಮಗೆ ದ್ರೋಹಾ ಮಾಡ್ತಿದ್ದಾರೆ. ಇನ್ನಿಬ್ರು ಎಂಐಎಂ ಸೇರಿದ್ದಾರೆ ಅಂತ ಆಕ್ರೋಶದ ಮಾತುಗಳನ್ನು ಹೊರಹಾಕಿದ್ದಾರೆ.

    ಕೊಪ್ಪಳದಿಂದ ಜೆರ್ಸಿ ಆಕಳ ಬಂದಿದೆ ಎಂದು ಪಕ್ಷೇತರ ಅಭ್ಯರ್ಥಿ ಎಸ್ ಆರ್ ನವಲಿಹಿರೆಮಠ ಬಗ್ಗೆ ಲೇವಡಿ ಮಾಡಿದ ಕಾಶಪ್ಪನವರ್, ಜೆರ್ಸಿ ಆಕಳಾನು ಕಾಂಗ್ರೆಸ್ದೇ ತಿಂದು ಬೆಳೆದಿದೆ. ಎಂಐಎಂ, ಬಿಜೆಪಿ, ಜೆಡಿಎಸ್, ಬಹುಜನ ಸಮಾಜ ಪಾರ್ಟಿಯವರು ಕೂಡಿದ್ದಾರೆ. ಇನ್ನೂ ಹತ್ತು ಜನ ಕೂಡಿರಿ, ನಾನೂ ಅಂಜೋದಿಲ್ಲ ಅಂತ ಗರಂ ಆಗಿದ್ದಾರೆ.

    ಕುಮಾರಸ್ವಾಮಿ ಗೆ ಇಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಡೋದಕ್ಕೆ ಧಮ್ ಇಲ್ಲ. ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾನೆ ಅದಕ್ಕೆ ರಾಹುಲ್ ಗಾಂಧಿ ಜೆಡಿಎಸ್ ಅನ್ನ ಬಿ.ಟೀಂ ಅಂತ ಕರೆದಿದ್ದು ಅಂತ ಹೇಳಿದ್ರು.

  • ನೀವೆಂದೂ ಕಂಡರಿಯದ ಲೈವ್ ಮರ್ಡರ್: ನೋಡ ನೋಡುತ್ತಲೇ ತಂದೆಯನ್ನ ಕೊಂದೇಬಿಟ್ರು!

    ನೀವೆಂದೂ ಕಂಡರಿಯದ ಲೈವ್ ಮರ್ಡರ್: ನೋಡ ನೋಡುತ್ತಲೇ ತಂದೆಯನ್ನ ಕೊಂದೇಬಿಟ್ರು!

    ಬಾಗಲಕೋಟೆ: ಮಗ ಹಾಗೂ ತಮ್ಮಂದಿರು ಸೇರಿ ಮನೆಯ ಯಜಮಾನನ್ನೇ ಕೊಲೆಮಾಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕೊಡಿಹಾಳ ಗ್ರಾಮದಲ್ಲಿ 2016 ಅಕ್ಟೋಬರ್ 29 ರಂದು ನಡೆದಿದೆ. ಸದ್ಯ ಲೈವ್ ಮರ್ಡರ್ ವಿಡಿಯೋ ವಾಟ್ಸಪ್‍ನಲ್ಲಿ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಮಲ್ಲಪ್ಪ ಕೈರವಾಡಗಿ ಎಂಬವರೇ ಮಕ್ಕಳು ಮತ್ತು ಸಹೋದರರಿಂದ ಕೊಲೆಯಾದ ವ್ಯಕ್ತಿ. ಆಸ್ತಿ ವಿಚಾರವಾಗಿ ತಂದೆ ಮಲ್ಲಪ್ಪ ಹಾಗೂ ಮಗ ದೇವಪ್ಪ ಮಧ್ಯೆ ಗಲಾಟೆಯಾಗಿತ್ತು. ದೇವಪ್ಪ ಹಾಗು ಮಲ್ಲಪ್ಪರ ಸಹೋದರ ಶಿವಪ್ಪ ತಮ್ಮ ಸಹಚರೊಂದಿಗೆ ಸೇರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

    ಏನಿದು ಪ್ರಕರಣ?: ಕೋಡಿಹಾಳ ಗ್ರಾಮದ ನಿವಾಸಿಯಾಗಿರುವ ಮಲ್ಲಪ್ಪ 20 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದರು. ಆದರೆ ಮಲ್ಲಪ್ಪರ ಮಗ ದೇವಪ್ಪ ತನಗೆ ಆಸ್ತಿಯಲ್ಲಿ ಪಾಲು ಬೇಕೆಂದು ಜಗಳ ಮಾಡಿಕೊಂಡಿದ್ದನು. ಮಲ್ಲಪ್ಪ ಅವರು ದೇವಪ್ಪನಿಗೆ ಅವನ ಪಾಲಿನ ಆಸ್ತಿಯನ್ನು ಹಂಚಿಕೊಟ್ಟು, ತಮ್ಮ ಜೀವನೋಪಯಾಕ್ಕಾಗಿ 4 ಎಕರೆ ಭೂಮಿಯನ್ನು ಉಳಿಸಿಕೊಂಡಿದ್ರು. ಈ ವಿಚಾರವಾಗಿ ತಂದೆ ಮತ್ತು ಮಗನ ಮಧ್ಯೆ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಕೊನೆಗೆ ದೇವಪ್ಪ ತನ್ನ ಚಿಕ್ಕಪ್ಪಂದಿರ ಸಹಾಯದಿಂದ ತಂದೆಯನ್ನು ಕೊಲೆ ಮಾಡಿದ್ದಾನೆ.

    ಹೊಲದಲ್ಲಿ ದೇವಪ್ಪ, ಶಿವಪ್ಪ ಸೇರಿ ಹಲವರು ಮಲ್ಲಪ್ಪನ ಮೇಲೆ ಹಲ್ಲೆ ಮಾಡುವ ವೇಳೆ ಪಕ್ಕದ ಹೊಲದ ರೈತರು ತಡೆಯಲು ಮುಂದಾಗಿದ್ದರು. ಆದರೆ ದೇವಪ್ಪ ಮಲ್ಲಪ್ಪನ ನೆರವಿಗೆ ಬಂದ ಗ್ರಾಮಸ್ಥರಿಗೆ ಕೊಲೆಯ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಕೊಲೆಯ ನಂತರ ಮೃತ ದೇಹವನ್ನು ಗ್ರಾಮಕ್ಕೆ ತಂದು ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: 2016 ಅಕ್ಟೋಬರ್‍ನಲ್ಲಿ ಕೊಲೆ ಮಾಡವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದು, ಅದನ್ನು ಈಗ ಯಾರೋ ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇಳಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    https://www.youtube.com/watch?v=Dza3ulNSEc0