Tag: Ilaiyaraaja

  • ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

    ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

    ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika) ತಾಯಿಗೆ ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಅವರು 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು (Diamond crown) ಅರ್ಪಿಸಿದ್ದಾರೆ.

    ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿರುವ ಇಳಯರಾಜ (Ilaiyaraaja) ಅವರು, ಈ ಹಿಂದೆಯೂ ಮೂಕಾಂಬಿಕೆ ದೇವಿಗೆ ಬಗೆಬಗೆಯ ಆಭರಣ ನೀಡಿ ಭಕ್ತಿ ತೋರಿದ್ದರು. ಈ ಬಾರಿ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ. ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ. ಇದನ್ನೂ ಓದಿ: ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ಆಭರಣ ಅರ್ಪಿಸುವ ಮುನ್ನ ದೇಗುಲದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಾಗಿಯಾಗಿದ್ದರು. ಕೋಟ್ಯಂತರ ಮೌಲ್ಯದ ಆಭರಣಗಳನ್ನು ಅರ್ಪಿಸಿ ಇಳೆಯರಾಜ ಅವರು ಭಾವುಕರಾಗಿದ್ದು, ಮೂಕಾಂಬಿಕೆಯಿಂದ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದಿದ್ದಾರೆ. ಬಳಿಕ ದೇಗುಲದ ವತಿಯಿಂದ ಮಹಾದಾನಿ ಇಳಯರಾಜ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

  • ದುಬಾರಿ ದಂಡ ತೆತ್ತ ಚಿತ್ರತಂಡ- ಇಳಯರಾಜಗೆ 60 ಲಕ್ಷ ನೀಡಿದ ‘ಮಂಜುಮ್ಮೆಲ್ ಬಾಯ್ಸ್’

    ದುಬಾರಿ ದಂಡ ತೆತ್ತ ಚಿತ್ರತಂಡ- ಇಳಯರಾಜಗೆ 60 ಲಕ್ಷ ನೀಡಿದ ‘ಮಂಜುಮ್ಮೆಲ್ ಬಾಯ್ಸ್’

    ನಧಿಕೃತವಾಗಿ ಹಾಡು ಬಳಸಿದಕ್ಕೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಇದೀಗ ಇಳಯರಾಜಗೆ 60 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಳಯರಾಜ (Ilaiyaraaja) ಸಂಗೀತ ಸಂಯೋಜನೆಯ ‘ಕಣ್ಮಣಿ’ ಹಾಡನ್ನು ಬಳಸಿದಕ್ಕೆ ಇದೀಗ ದುಬಾರಿ ಹಣವನ್ನು ದಂಡ ತೆತ್ತಿದ್ದಾರೆ. ಇದನ್ನೂ ಓದಿ:ಸತತ ಸಿನಿಮಾಗಳ ಸೋಲಿನ ಬೆನ್ನಲ್ಲೇ ಬಿಗ್ ಚಾನ್ಸ್ ಬಾಚಿಕೊಂಡ ಕೃತಿ ಶೆಟ್ಟಿ

    ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಸಿನಿಮಾದಲ್ಲಿ ಅನಧಿಕೃತವಾಗಿ ಹಾಡು ಬಳಸಿದ ಹಿನ್ನೆಲೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಇಳಯರಾಜ ಕೇಳಿದ್ದರು. ಬಳಿಕ ಅವರನ್ನು ಚಿತ್ರದ ನಿರ್ಮಾಪಕರು ವೈಯಕ್ತಿಕವಾಗಿ ಭೇಟಿಯಾಗಿ ಮಾತಕತೆಯ ಬಳಿಕ ಒಪ್ಪಂದದಂತೆ 60 ಲಕ್ಷ ರೂ. ಇಳಯರಾಜಗೆ ಪಾವತಿಸಿದ್ದಾರೆ.

    ಅಂದಹಾಗೆ, ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ತಂಡ ಅನುಮತಿ ಇಲ್ಲದೇ ಚಿತ್ರದಲ್ಲಿ ಬಳಸಿದ್ದರು. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಇಳಯರಾಜ ನೋಟಿಸ್ ನೀಡಿದ್ದರು.

  • ಇಳಯರಾಜ ಬಯೋಪಿಕ್ ಹೊಸ ಪೋಸ್ಟರ್ ರಿಲೀಸ್ ಮಾಡಿದ ಧನುಷ್

    ಇಳಯರಾಜ ಬಯೋಪಿಕ್ ಹೊಸ ಪೋಸ್ಟರ್ ರಿಲೀಸ್ ಮಾಡಿದ ಧನುಷ್

    ಸಂಗೀತ ಮಾಂತ್ರಿಕ ಇಳಯರಾಜ (Ilaiyaraaja) ಅವರಿಗೆ ಇಂದು (ಜೂನ್ 2) 81ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಳಯರಾಜ ಜೀವನದ ಕಥೆ ಸಿನಿಮಾ ರೂಪದಲ್ಲಿ ಬರುತ್ತಿದ್ದು, ಚಿತ್ರದ ಪೋಸ್ಟರ್ ಅನ್ನು ಧನುಷ್ (Dhanush) ರಿಲೀಸ್ ಮಾಡಿ ಸಂಗೀತ ಮಾಂತ್ರಿಕ ಇಳಯರಾಜಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಮದುವೆಯಾದ್ರೂ ಮಕ್ಕಳಾಗಲ್ಲ- ಆರೋಗ್ಯ ಸಮಸ್ಯೆ ಬಗ್ಗೆ ಬಾಯ್ಬಿಟ್ಟ ಶ್ರುತಿ ಹಾಸನ್

    ಕಾಲಿವುಡ್ ನಟ ಧನುಷ್ ಅವರು ಇಳಯರಾಜ ಅವರ ಬಯೋಪಿಕ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಳಯರಾಜ್ ಬರ್ತಡೇಗೆ ಧನುಷ್ & ಚಿತ್ರತಂಡ ವಿಶೇಷವಾಗಿ ಶುಭಕೋರಿದೆ. ಸಾವಿರಾರು ಜನರ ಮುಂದೆ ಹಾರ್ಮೋನಿಯಂ ಹಿಡಿದು ವೇದಿಕೆಯಲ್ಲಿ ನಿಂತಿರುವ ಪೋಸ್ಟರ್ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮೇಷ್ಟ್ರೇ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.


    ಇಳಯರಾಜ ಬರೋಪಿಕ್‌ನಲ್ಲಿ ಧನುಷ್ ನಟಿಸೋದು ಅಧಿಕೃತವಾಗಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ. ಈ ಸಿನಿಮಾ ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

  • ಎಸ್‍ಪಿಬಿ ನೆನಪು- ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿದ ಇಳಯರಾಜ

    ಎಸ್‍ಪಿಬಿ ನೆನಪು- ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿದ ಇಳಯರಾಜ

    ಚೆನ್ನೈ: ತಮ್ಮ ಗೆಳೆಯ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನೆನಪಿನಲ್ಲೇ ಇರುವ ಸಂಗೀತ ನಿರ್ದೇಶಕ ಇಳಯರಾಜ, ಶನಿವಾರ ರಾತ್ರಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿದ್ದಾರೆ.

    ಸರ್ಕಾರದ ಸೂಚನೆ ಹಿನ್ನೆಲೆ ಇಳಯರಾಜ ತಮ್ಮ ಪ್ರಾಣ ಸ್ನೇಹಿತನ ಅಂತಿಮ ದರ್ಶನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿ ತಮ್ಮ ಗೆಳೆಯನನ್ನು ನೆನೆದಿದ್ದಾರೆ. ಅಲ್ಲದೆ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಸದ್ಗತಿ ದೊರೆಯಲಿ ಎಂದು ಇಳಯರಾಜ ಬೇಡಿಕೊಂಡಿದ್ದಾರೆ.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಹಾಗೂ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಚೆನ್ನೈನ ಫಾರ್ಮ್ ಹೌಸ್‍ನಲ್ಲಿ ಮಾಡಲಾಯಿತು. ಆದರೆ ಬಹುತೇಕ ಗಣ್ಯರು ಎಸ್‍ಪಿಬಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಳಯರಾಜ ಸಹ ಹೋಗಲಿಲ್ಲ. ಹೀಗಾಗಿ ದೇವಸ್ಥಾನಕ್ಕೆ ತೆರಳಿ ದೀಪ ಬೆಳಗಿಸಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    இசைஞானி இளையராஜா அவர்கள் திரு SP பாலசுப்ரமணியம் அவர்களின் ஆத்மா சாந்தி அடைய திருவண்ணாமலையில் சற்று முன் மோட்ச தீபம்…

    Posted by Ilaiyaraaja on Saturday, September 26, 2020

    ಸಿನಿಮಾ ರಂಗಕ್ಕೆ ಪ್ರವೇಶ ಮಾಡುವುದಕ್ಕೂ ಮುನ್ನವೇ ಇಳಯರಾಜ ಹಾಗೂ ಎಸ್‍ಪಿಬಿ ಸ್ನೇಹಿತರಾಗಿದ್ದರು. ಅಲ್ಲದೆ ಸಿನಿಮಾ ರಂಗಕ್ಕೆ ಬಂದ ನಂತರ ಇಳಯರಾಜ ನಿರ್ದೇಶನದ ಹಲವು ಸಿನಿಮಾಗಳ ಹಾಡುಗಳನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಹೀಗಾಗಿ ಇಳಯರಾಜ ಹಾಗೂ ಎಸ್‍ಪಿಬಿ ಮಧ್ಯೆ ಆಳವಾದ ಸ್ನೇಹವಿತ್ತು.

    ಎಸ್‍ಪಿಬಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಶ್ಚರ್ಯ ವ್ಯಕ್ತಪಡಿಸಿದ್ದ ಇಳಯರಾಜ, ಬಾಲು ನೀನೆಲ್ಲಿಗೆ ಹೋದೆ, ಯಾಕೆ ಹೋದೆ? ಬಾಲು ಬೇಗನೆ ಮರಳಿ ಬಾ, ನಿನಗಾಗಿ ನಾನು ಕಾಯುತ್ತಿದ್ದೇನೆ. ಆದರೆ ನೀನು ಕೇಳುತ್ತಿಲ್ಲ. ನೀನು ಹೋಗಿದ್ದೀಯಾ, ಎಲ್ಲಿಗೆ ಹೋದೆ, ಗಂಧರ್ವರಿಗೆ ಹಾಡು ಹೇಳಲು ಹೋದೆಯಾ? ಈಗ ಜಗತ್ತಿನಲ್ಲಿ ನನಗೆ ಏನನ್ನೂ ನೋಡಲು ಆಗುತ್ತಿಲ್ಲ. ಶಬ್ದಗಳನ್ನು ಕಳೆದುಕೊಂಡಿದ್ದೇನೆ, ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಯಾವುದೇ ದುಃಖಕ್ಕೆ ಒಂದು ಮಿತಿಯಿದೆ. ಆದರೆ ಈ ದುಃಖಕ್ಕೆ ಮಿತಿಯಿಲ್ಲ ಎಂದು ಹೇಳಿದ್ದರು.