Tag: IIT Bombay

  • ವಿದ್ಯಾರ್ಥಿ ಸೋಗಿನಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ಗೆ ಅಕ್ರಮ ಪ್ರವೇಶ – ಮಂಗಳೂರು ಯುವಕ ಅರೆಸ್ಟ್‌

    ವಿದ್ಯಾರ್ಥಿ ಸೋಗಿನಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ಗೆ ಅಕ್ರಮ ಪ್ರವೇಶ – ಮಂಗಳೂರು ಯುವಕ ಅರೆಸ್ಟ್‌

    ಮುಂಬೈ: ವಿದ್ಯಾರ್ಥಿ ಸೋಗಿನಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ಗೆ (IIT Bombay Campus) ಅಕ್ರಮ ಪ್ರವೇಶ ಮಾಡಿದ್ದ ಮಂಗಳೂರು ಯುವಕನನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿರುವ ಘಟನೆ ನಡೆದಿದೆ. ಘಟನೆ ಬಳಿಕ ಭದ್ರತಾ ಲೋಪದ ಬಗ್ಗೆ ಕಳವಳ ಹುಟ್ಟಿಕೊಂಡಿದ್ದು, ಸಾರ್ವಜನಿಕರು ಪ್ರಶ್ನಿಸಿದ್ದಾರೆ.

    ಬಿಲಾಲ್ ಅಹ್ಮದ್ ಫಯಾಜ್ ಅಹ್ಮದ್ ತೇಲಿ ಬಂಧಿತ ಯುವಕ. ಜೂನ್‌ 17ರಂದು ಕಾಲೇಜು ಕ್ಯಾಂಪಸ್‌ನ ಭದ್ರತಾ ಸಿಬ್ಬಂದಿ ಆತನನ್ನ ಹಿಡಿದು ಪೊವೈ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ದೂರು ನೀಡಿದೆ. ಇದನ್ನೂ ಓದಿ: ಜೈ ಹಿಂದ್‌.. ಜೈ ಭಾರತ್..‌: ಬಾಹ್ಯಾಕಾಶದಿಂದಲೇ ಶುಭಾಂಶು ಶುಕ್ಲಾ ಮೊದಲ ಸಂದೇಶ

    ಬೆಳಕಿಗೆ ಬಂದಿದ್ದು ಹೇಗೆ?
    ಪೊಲೀಸರು ಹೇಳುವಂತೆ, ಬಿಲಾಲ್‌ ಶಿಕ್ಷಣ ಸಂಸ್ಥೆಯ (Educational institution) ಪ್ರಮುಖ ಕಾರ್ಯಕ್ರಮವೊಂದಕ್ಕೆ ಬಂದಿದ್ದ, ಆದ್ರೆ ವಾಪಸ್‌ ಹೋಗಿರಲಿಲ್ಲ. ಮೊದಲು ಒಂದು ದಿನದ ಅಧ್ಯಯನಕ್ಕೆ ಕ್ಯಾಂಪಸ್‌ ಪ್ರವೇಶಿಸಿದವನು ಬಳಿಕ ಕ್ಯಾಂಪಸ್‌ನಲ್ಲಿಯೇ ಉಳಿದುಕೊಂಡು, ಉಪನ್ಯಾಸಗಳಿಗೆ ಹಾಜರಾಗಲು ಶುರು ಮಾಡಿದ್ದ. ಯಾವುದೇ ಮಾನ್ಯತಾ ದಾಖಲೆಗಳನ್ನು ಹೊಂದಿರದ ಬಿಲಾಲ್‌ ತರಗತಿಗಳಿಗೆ ಹಾಜರಾಗುತ್ತಿದ್ದ.

    ಒಮ್ಮೆ ತರಗತಿಯಲ್ಲಿದ್ದಾಗ ಪ್ರಾಧ್ಯಾಪಕರೊಬ್ಬರು ತನ್ನ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ರು. ಆಗ ಅಕ್ರಮ ಪ್ರವೇಶ ಮಾಡಿರುವುದು, ಕ್ಯಾಂಪಸ್‌ನಲ್ಲೇ ಅಕ್ರಮವಾಗಿ ವಾಸ್ತವ್ಯ ಹೂಡಿರುವುದು ಬೆಳಕಿಗೆ ಬಂದಿತು. ನಂತರ ಆಡಳಿತ ಮಂಡಳಿ ಆತನನ್ನ ಪೊಲೀಸರಿಗೆ ಒಪ್ಪಿಸಿ, ದೂರು ದಾಖಲಿಸಿತು. ಇದನ್ನೂ ಓದಿ: ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

    ಮೂಲಗಳು ಹೇಳುವುದೇನು? 
    ಇದೇ ಜೂನ್‌ 2 ರಿಂದ 7ರ ವರೆಗೆ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿದ್ದ ಬಿಲಾಲ್‌ ಬಳಿಕ ಸ್ವಲ್ಪ ಸಮಯ ಕಣ್ಮರೆಯಾಗಿದ್ದ. ಜೂನ್‌ 17ರಂದು ಮತ್ತೆ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಾಗ ಅನುಮಾನ ಬಂದು ಆತನನ್ನ ವಿಚಾರಿಸಲಾಯಿತು ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

    ಸದ್ಯ ಆತನನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಆತನ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಜೊತೆಗೆ ಅವನ ಮೂಲ ಉದ್ದೇಶ ಏನೆಂಬುದೂ ತಿಳಿದುಬಂದಿಲ್ಲ. ಅವನಿಗೆ ಕ್ಯಾಂಪಸ್‌ನಲ್ಲಿ ಯಾರಾದ್ರೂ ಸ್ನೇತರಿದ್ದಾರಾ? ಯಾರೊಂದಿಗೆ ಸಂಪರ್ಕದಲ್ಲಿದ್ದ ಎಂಬೆಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್

  • ರಾಮಾಯಣ ನಾಟಕ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ

    ರಾಮಾಯಣ ನಾಟಕ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ

    ಮುಂಬೈ: ರಾಮಾಯಣ (Ramayan) ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ (IIT Bombay) 1.02 ಲಕ್ಷ ರೂ. ದಂಡ ವಿಧಿಸಿದೆ. ಈ ನಾಟಕವು ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಆರೋಪಿಸಲಾಗಿದೆ.

    ಮಾರ್ಚ್ 31 ರಂದು ಇನ್ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ‘ರಾಹೋವನ’ ಎಂಬ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು. ಎಲ್ಲಾ ಎಂಟು ವಿದ್ಯಾರ್ಥಿಗಳ ಮೇಲೆ ಬಾಂಬೆ ಐಐಟಿ ದಂಡ ಹಾಕಿದೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಕರ ಪೈಕಿ 68 ಮಂದಿ ಭಾರತೀಯರು!

    ಮೇ 8 ರಂದು ನಡೆದ ಶಿಸ್ತು ಕ್ರಮ ಸಮಿತಿ (ಡಿಎಸಿ) ಸಭೆಯಲ್ಲಿ ಐಐಟಿ ಈ ವಿಷಯವನ್ನು ಪ್ರಸ್ತಾಪಿಸಿ ಕ್ರಮಕೈಗೊಂಡಿದೆ. ಜೂನ್ 4 ರಂದು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದೆ. ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ 1.20 ಲಕ್ಷ ರೂ. ದಂಡ ವಿಧಿಸಿದೆ. ಪದವಿಪೂರ್ವ ವಿದ್ಯಾರ್ಥಿಗಳಾದ ಇತರ ನಾಲ್ವರು ವಿದ್ಯಾರ್ಥಿಗಳಿಗೆ 40,000 ರೂ. ದಂಡವನ್ನು ಪಾವತಿಸುವಂತೆ ಹೇಳಲಾಗಿದೆ. ಅಲ್ಲದೇ ಹಾಸ್ಟೆಲ್ ವಸತಿಗಳನ್ನು ಖಾಲಿ ಮಾಡುವಂತೆ ಅವರಿಗೆ ಆದೇಶಿಸಲಾಗಿದೆ.

    ‘ರಾವೋಹಣ’ದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಲಾತ್ಮಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂವೇದನೆಗಳ ಬಗ್ಗೆ ಭಾರಿ ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ಐಐಟಿ ವಿದ್ಯಾರ್ಥಿಗಳ ಗುಂಪೊಂದು ಸಂಸ್ಥೆಯಲ್ಲಿ ಔಪಚಾರಿಕ ದೂರು ದಾಖಲಿಸಿದೆ. ನಾಟಕವು ಹಿಂದೂ ನಂಬಿಕೆಗಳ ಅವಹೇಳನಕಾರಿ ಉಲ್ಲೇಖಗಳನ್ನು ಒಳಗೊಂಡಿದೆ. ರಾಮನನ್ನು ‘ದೆವ್ವ’ ಎಂದು ಚಿತ್ರಿಸಲಾಗಿದೆ. ಸೀತಾ, ರಾಮ ಮತ್ತು ಲಕ್ಷ್ಮಣನ ಪಾತ್ರಗಳಲ್ಲಿ ಅನುಚಿತ ಭಾಷೆ ಮತ್ತು ಸನ್ನೆಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

  • ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

    ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

    – ಚಾಯೋಸ್ ಸಂಸ್ಥೆ ಆರಂಭಿಸಿದ್ದು ಯಾಕೆ..?

    ಚೆನ್ನಾಗಿ ಓದಿ ಕೆಲಸಕ್ಕೆ ವಿದೇಶಕ್ಕೆ ಹೋಗಬೇಕು ಎಂದು ಎಲ್ಲರೂ ಕನಸು ಕಾಣುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿದೇಶದಲ್ಲಿದ್ದ ಉತ್ತಮ ಸಂಪಾದನೆಯ ಉದ್ಯೋಗವನ್ನೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ಟೀ ವ್ಯಾಪಾರ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಹೌದು. ವ್ಯಾಪಾರ ಕುಟುಂಬದಿಂದ ಬಂದಿರುವ ನಿತಿನ್ ಸಲೂಜಾ (Nitin Saluja) ಅವರ ಕಥೆಯನ್ನು ಕೇಳಿದರೆ ನೀವೂ ಒಂದು ಬಾರಿ ಅಚ್ಚರಿಗೊಳಗಾಗುತ್ತೀರಿ. ಐಐಟಿ ಬಾಂಬೆ (IIT Bombay) ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿರುವ ಹರಿಯಾಣ ಮೂಲದ ನಿತಿನ್ ಪದವಿ ಮುಗಿದ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು.

    ಸುಮಾರು 5 ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ ಅವರು, ತಮ್ಮದೇ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದರು. ಇದೇ ಗುರಿಯನ್ನು ಇಟ್ಟುಕೊಂಡ ನಿತಿನ್ ಅಮೆರಿಕಾ ನೆಲಕ್ಕೆ ಗುಡ್ ಬೈ ಹೇಳಿ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಇಲ್ಲಿ ಬಂದು ತಾನು ಸ್ಟಾರ್ಟಪ್ ಪ್ರಾರಂಭಿಸುವ ಕನಸನ್ನು ತಂದೆಯ ಮುಂದೆ ಬಿಚ್ಚಿಟ್ಟರು. ಆದರೆ ಇದಕ್ಕೆ ತಂದೆ ಬೆಂಬಲ ನೀಡಿಲ್ಲ. ಇದರಿಂದ ಬೇಸರಗೊಂಡರೂ ನಿತಿನ್ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡರು. ಇದನ್ನೂ ಓದಿ: ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ಒಂದು ಕಪ್ ಟೀಗೂ ಕಷ್ಟ: ಅಮೆರಿಕದಲ್ಲಿ ಒಂದು ಕಪ್ ಟೀ ಕುಡಿಯಬೇಕಾದರೆ ಪರದಾಡುವಂತಹ ಸ್ಥಿತಿಯನ್ನು ನಿತಿನ್ ತಮ್ಮ ಕಣ್ಣಾರೆ ಕಂಡಿದ್ದರು. ಹೀಗಾಗಿ ಭಾರತದಲ್ಲಿ ಟೀ ಮಾರಾಟ ಮಾಡುವ ಮೂಲಕ ಸಂಪಾದನೆ ಮಾಡಬಹುದೆಂಬುದನ್ನು ಮನದಟ್ಟು ಮಾಡಿಕೊಂಡಿದ್ದರು. ಇಲ್ಲಿ ಈಗಾಗಲೇ ಸಾಕಷ್ಟು ಕೆಫೆಗಳು ತಲೆಯೆತ್ತಿವೆ. ಆದರೆ ಕೆಲವೆಡೆ ಕಾಫಿ ಮಾತ್ರ ಸಿಗುತ್ತವೆ ಎಂಬುದನ್ನು ಕೂಡ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡುವತ್ತ ದಾಪುಗಾಲಿಟ್ಟರು. ಇದು ಅವರ ಜೀವನವನ್ನೇ ಬದಲಿಸಿದ್ದು, ಸದ್ಯ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ.

    ಅಂತೆಯೇ ಸಹೋದ್ಯೋಗಿ ಹಾಗೂ ಸ್ನೇಹಿತ ರಾಘವ್ ವರ್ಮಾ ಜೊತೆಗೆ ಅವರು ಗುರ್ಗಾಂವ್ನ ಸೈಬರ್ ಸಿಟಿಯಲ್ಲಿ ಮೊದಲ ಚಾಯೋಸ್ ಅಂಗಡಿಯನ್ನು ತೆರೆದರು. ಅಲ್ಲದೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆದರು. ಸದ್ಯ ಇದು ಅವರಿಗೆ ಟೀ ಕೆಫೆಗಳ ಶಾಖೆಗಳನ್ನು ತೆರೆಯಲು ದಾರಿ ಮಾಡಿ ಕೊಟ್ಟಿತು. ಬೆಂಗಳೂರಿನಲ್ಲಿಯೂ ಒಂದು ಶಾಖೆ ಇದೆ. ಒಟ್ಟಿನಲ್ಲಿ ಇಂದು ಚಾಯೋಸ್ (Chaayos) ದೇಶಾದ್ಯಂತ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಸುಮಾರು 2051 ಕೋಟಿ ರೂ. ಆದಾಯ ಗಳಿಸುತ್ತಿದೆ.

    ಓದುತ್ತಿದ್ದ ಸಂದರ್ಭದಲ್ಲಿ ಕಾಫಿ ಕುಡಿಯಲು 20 ರೂ. ಕೂಡ ಇರಲಿಲ್ಲ. ಆಗ ಗೆಳೆಯರ ಬಳಿಯಿಂದ ತಲಾ ಒಂದೊಂದು ರೂ. ಕಲೆಕ್ಟ್ ಮಾಡಿ ಕಾಫಿ ಕುಡಿದಿರುವ ಬಗ್ಗೆ ನಿತಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬಾಂಬೆ ಐಐಟಿಗೆ 315 ಕೋಟಿ ರೂ. ದೇಣಿಗೆ ನೀಡಿದ ಇನ್ಫೋಸಿಸ್ ಸಹ ಸಂಸ್ಥಾಪಕ

    ಬಾಂಬೆ ಐಐಟಿಗೆ 315 ಕೋಟಿ ರೂ. ದೇಣಿಗೆ ನೀಡಿದ ಇನ್ಫೋಸಿಸ್ ಸಹ ಸಂಸ್ಥಾಪಕ

    ನವದೆಹಲಿ: ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಅವರು ತಾವು ಎಂಜಿನಿಯರಿಂಗ್ ಪದವಿ ಪಡೆದ ‘ಬಾಂಬೆ ಐಐಟಿ’ಗೆ (IIT Bombay) ಬರೋಬ್ಬರಿ 315 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಉತ್ತೇಜಿಸಲು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಸಂಶೋಧನೆಗೆ ಸಹಾಯ ಮಾಡಲು ಹಾಗೂ ಬಾಂಬೆಯ ಐಐಟಿಯಲ್ಲಿ ಉತ್ತಮವಾದ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಈ ದೇಣಿಗೆಯ (Donation) ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಮಾತ್ರವಲ್ಲದೇ ಇದು ಭಾರತದಲ್ಲಿ ಹಳೆ ವಿದ್ಯಾರ್ಥಿಯೊಬ್ಬರು ನೀಡಿರುವ ಅತಿ ದೊಡ್ಡ ದೇಣಿಗೆಗಳಲ್ಲಿ ಒಂದು ಎನಿಸಿಕೊಂಡಿದೆ.

    ಈ ಬಗ್ಗೆ ತಿಳಿಸಿರುವ ನಿಲೇಕಣಿ, ಬಾಂಬೆ ಐಐಟಿ ನನ್ನ ಜೀವನದ ಮೂಲಾಧಾರವಾಗಿದೆ. ನನ್ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ, ಈ ಪ್ರಯಾಣಕ್ಕೆ ಅಡಿಪಾಯ ಹಾಕಿದೆ. ಈ ಗೌರವಾನ್ವಿತ ಸಂಸ್ಥೆಯೊಂದಿಗೆ ನನ್ನ 50 ವರ್ಷಗಳ ಒಡನಾಟ ಈಗ ಪೂರೈಸಿದ್ದು, ಅದಕ್ಕೆ ಭವಿಷ್ಯ ಹಾಗೂ ಕೊಡುಗೆಯನ್ನು ನೀಡಲು ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಡ್ರೈವರ್‌ ಕ್ಯಾಬಿನ್‌ಗಳು ಕಡ್ಡಾಯ: ನಿತಿನ್‌ ಗಡ್ಕರಿ

    ಈ ದೇಣಿಗೆ ಕೇವಲ ಹಣಕಾಸಿನ ಕೊಡುಗೆಗಿಂತಲೂ ಹೆಚ್ಚಿನದ್ದಾಗಿದೆ. ಇದು ನನಗೆ ಹೆಚ್ಚಿನದನ್ನು ನೀಡಿರುವ ಸ್ಥಳಕ್ಕೆ ಗೌರವವಾಗಿದ್ದು, ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳಿಗೆ ಬದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ.

    ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿರುವ ನಿಲೇಕಣಿ 1973ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಂಸ್ಥೆಯೊಂದಿಗಿನ ಒಡನಾಟಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಅವರು ಈಗ 315 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಹಿಂದೆ ಅವರು 85 ಕೋಟಿ ರೂ. ದೇಣಿಗೆ ನೀಡಿದ್ದರು. ಹೀಗಾಗಿ ಅವರು ಸಂಸ್ಥೆಗೆ ಒಟ್ಟು 400 ಕೋಟಿ ರೂ. ದೇಣಿಗೆ ನೀಡಿದಂತಾಗುತ್ತದೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

  • ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಮುಂಬೈ: ಚಂಡೀಗಢ ವಿಶ್ವವಿದ್ಯಾಲಯದ (Chandigarh University) ವಿದ್ಯಾರ್ಥಿನಿಯರ ಬಾತ್‌ರೂಮ್ ವೀಡಿಯೋ (Bathroom Video) ಲೀಕ್ ಪ್ರಕರಣ ಮಾಸುವುದಕ್ಕೂ ಮೊದಲೇ ಇಂತಹುದೇ ಮತ್ತೊಂದು ಆಘಾತಕಾರಿ ಘಟನೆ ಐಐಟಿ ಬಾಂಬೆಯಲ್ಲಿ (IIT Bombay) ನಡೆದಿದೆ. ವಿದ್ಯಾರ್ಥಿನಿಯರ ವಸತಿ ನಿಲಯದ (Hostel) ಸ್ನಾನಗೃಹದಲ್ಲಿ ಕ್ಯಾಂಟೀನ್ ಕೆಲಸಗಾರನೊಬ್ಬ (Canteen Staff) ಇಣುಕಿ ನೋಡಿರುವ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ವರದಿಗಳ ಪ್ರಕಾರ, ವಿದ್ಯಾರ್ಥಿನಿಯೊಬ್ಬಳು ಸ್ನಾನಗೃಹದಲ್ಲಿದ್ದಾಗ ಆರೋಪಿ ಕಿಟಕಿಯ ಸೀಳುಗಳ ಮೂಲಕ ಇಣುಕಿ ನೋಡಿದ್ದಾನೆ. ವಿದ್ಯಾರ್ಥಿನಿಗೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಕಿರುಚಿಕೊಂಡಿದ್ದಾಳೆ. ಬಳಿಕ ಹಾಸ್ಟೆಲ್‌ನ ಕ್ಯಾಂಟೀನ್ ಉದ್ಯೋಗಿ ವಿದ್ಯಾರ್ಥಿನಿಯರ ಸ್ನಾನ ಗೃಹದಲ್ಲಿ ಇಣುಕಿ ನೋಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    ಇದೀಗ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಆರೊಪಿ ತನ್ನ ಫೋನ್‌ನಿಂದ ವಿದ್ಯಾರ್ಥಿನಿಯರ ಯಾವುದೇ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿಲ್ಲ. ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ, ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂದು ಐಐಟಿ ಬಾಂಬೆ ತಿಳಿಸಿದೆ. ಇದನ್ನೂ ಓದಿ: ನೀರು ಕೇಳಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ – ಫುಡ್ ಡೆಲಿವರಿ ಏಜೆಂಟ್ ಅರೆಸ್ಟ್

    ಇದೀಗ ವಿದ್ಯಾರ್ಥಿನಿಲಯದ ಕ್ಯಾಂಟೀನ್ ಅನ್ನು ಮುಚ್ಚಲಾಗಿದ್ದು, ಮಹಿಳಾ ಸಿಬ್ಬಂದಿಯನ್ನು ಮಾತ್ರವೇ ನೇಮಿಸಿ. ಬಳಿಕ ಮತ್ತೆ ಕ್ಯಾಂಟೀನ್ ಅನ್ನು ತೆರೆಯುತ್ತೇವೆ ಎಂದು ಸಂಸ್ಥೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]