Tag: IIITB

  • ಮಾನಸಿಕ ಆರೋಗ್ಯಕ್ಕೆ ಟೆಲಿ-ಮೆಂಟಲ್‌ ಆರೋಗ್ಯ ಕಾರ್ಯಕ್ರಮ – ಬೆಂಗಳೂರಿನ IIITB ತಾಂತ್ರಿಕ ಬೆಂಬಲ

    ಮಾನಸಿಕ ಆರೋಗ್ಯಕ್ಕೆ ಟೆಲಿ-ಮೆಂಟಲ್‌ ಆರೋಗ್ಯ ಕಾರ್ಯಕ್ರಮ – ಬೆಂಗಳೂರಿನ IIITB ತಾಂತ್ರಿಕ ಬೆಂಬಲ

    ನವದೆಹಲಿ: ಸಂಸತ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಡಿಜಿಟಲ್‌ ಆಧಾರಿತ ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗಿದೆ.

    ದೇಶಾದ್ಯಂತ ಆರೋಗ್ಯ ಮತ್ತು ವೈದ್ಯಕೀಯ ಸೇವೆ ಒದಗಿಸುವಲ್ಲಿ ಡಿಜಿಟಲ್‌ ತಂತ್ರಜ್ಞಾನ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಹೊಸ ಡಿಜಿಟಲ್‌ ಆಧಾರಿತ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Budget: 2 ಲಕ್ಷ ಅಂಗನವಾಡಿಗಳನ್ನು ‘ಸಕ್ಷಮ್ ಅಂಗನವಾಡಿ’ಗಳಾಗಿ ಮಾರ್ಪಾಡು – ಮಹಿಳಾ ಸಬಲೀಕರಣಕ್ಕೆ ಒತ್ತು

    CORONA-VIRUS.

    ರಾಷ್ಟ್ರೀಯ ಟೆಲಿ-ಮೆಂಟಲ್‌ ಆರೋಗ್ಯ ಕಾರ್ಯಕ್ರಮ
    ಕೋವಿಡ್‌ ಸಾಂಕ್ರಾಮಿಕವು ಎಲ್ಲಾ ವಯಸ್ಸಿನ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸಿದೆ. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳನ್ನು ಒದಗಿಸುವ ಸಲುವಾಗಿ ʼರಾಷ್ಟ್ರೀಯ ಟೆಲಿ-ಮೆಂಟಲ್‌ ಹೆಲ್ತ್‌ ಕಾರ್ಯಕ್ರಮʼ ಘೋಷಿಸಲಾಗಿದೆ. ಇದು 23 ಟೆಲಿ-ಮೆಂಟಲ್‌ ಆರೋಗ್ಯ ಉತ್ಕೃಷ್ಟ ಕೇಂದ್ರಗಳ ಜಾಲವನ್ನು ಒಳಗೊಂಡಿರುತ್ತದೆ. ನಿಮ್ಹಾನ್ಸ್‌ ಇದಕ್ಕೆ ನೋಡಲ್‌ ಕೇಂದ್ರವಾಗಿದೆ. ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫಾರ್ಮೇಷನ್‌ ಟೆಕ್ನಾಲಜಿ-ಬೆಂಗಳೂರು (ಐಐಐಟಿಬಿ) ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ. ಇದನ್ನೂ ಓದಿ: Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

    ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌
    ರಾಷ್ಟ್ರೀಯ ಡಿಜಿಟಲ್‌ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಹೊಸ ಮುಕ್ತ ವೇದಿಕೆಯನ್ನು ಹೊರತರಲಾಗುವುದು. ಇದು ಆರೋಗ್ಯ ಪೂರೈಕೆದಾರರು ಮತ್ತು ಆರೋಗ್ಯ ಸೌಲಭ್ಯಗಳ ಡಿಜಿಟಲ್‌ ದಾಖಲಾತಿಗಳನ್ನು ಸಮಗ್ರವಾಗಿ ಒಳಗೊಂಡಿರುತ್ತದೆ.