Tag: IIFA Awards

  • ಐಫಾ ಅವಾರ್ಡ್ 2019- ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

    ಐಫಾ ಅವಾರ್ಡ್ 2019- ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

    ಮುಂಬೈ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾಡ್ರ್ಸ್ (ಐಫಾ) ಬುಧವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.

    ಕಳೆದ ಬಾರಿ ಜೋಹಾನ್ಸ್ ಬರ್ಗ್, ಮ್ಯಾಡ್ರಿಡ್, ದುಬೈ, ಕೊಲಂಬೊ, ನ್ಯೂಯಾರ್ಕ್ ಅಂತಹ ನಗರಗಳಲ್ಲಿ ಐಫಾ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ ಐಫಾ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಕಪೂರ್ ಹಾಗೂ ಆಯುಷ್ಮಾನ್ ಖುರಾನಾ ನಿರೂಪಣೆ ಮಾಡಿದ್ದಾರೆ.

    ಇತ್ತ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್, ರಣ್‍ವೀರ್ ಸಿಂಗ್, ವಿಕ್ಕಿ ಕೌಶಾಲ್, ಮಾಧುರಿ ದೀಕ್ಷಿತ್, ಕತ್ರಿನಾ ಕೈಫ್ ಹಾಗೂ ಸಾರಾ ಅಲಿ ಖಾನ್ ಸೇರಿದಂತೆ ಹಲವು ಕಲಾವಿದರು ನೃತ್ಯ ಪ್ರದರ್ಶನ ಮಾಡಿದ್ದಾರೆ. ‘ರಾಝಿ’ ಚಿತ್ರಕ್ಕೆ ನಟಿ ಅಲಿಯಾ ಭಟ್ ಅತ್ಯತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ‘ಪದ್ಮಾವತ್’ ಚಿತ್ರಕ್ಕಾಗಿ ನಟ ರಣ್‍ವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.

    ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ;

    ಅತ್ಯುತ್ತಮ ಚಿತ್ರ: ರಾಝಿ
    ಅತ್ಯುತ್ತಮ ಕತೆ: ಅಂಧಾಧುನ್
    ಅತ್ಯುತ್ತಮ ನಟಿ: ಆಲಿಯಾ ಭಟ್(ರಾಝಿ)
    ಅತ್ಯುತ್ತಮ ನಟ: ರಣ್‍ವೀರ್ ಸಿಂಗ್(ಪದ್ಮಾವತ್)
    ಅತ್ಯುತ್ತಮ ನಿರ್ದೇಶಕ: ಶ್ರೀರಾಮ್ ರಾಘವನ್(ಅಂಧಾಧುನ್)

    ಅತ್ಯುತ್ತಮ ಪೋಷಕ ನಟಿ: ಅದಿತಿ ರಾವ್ ಹೈದ್ರಿ(ಪದ್ಮಾವತ್)
    ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಾಲ್(ಸಂಜು)
    ಅತ್ಯುತ್ತಮ ಡೆಬ್ಯೂ ನಟಿ: ಸಾರಾ ಅಲಿ ಖಾನ್(ಕೇದಾರ್‍ನಾಥ್)
    ಅತ್ಯುತ್ತಮ ಡೆಬ್ಯೂ ನಟ: ಇಶಾನ್ ಖಟ್ಟರ್ (ದಢಕ್)
    ಭಾರತೀಯ ಸಿನಿಮಾದ ಜೀವಮಾನ ಶ್ರೇಷ್ಠ ಪ್ರಶಸ್ತಿ: ಪ್ರಸಿದ್ಧ ನಟ ಮತ್ತು ಹಾಸ್ಯನಟ ಜಗದೀಪ್ ಜಾಫೆರಿ

    20 ವರ್ಷಗಳ ಅತ್ಯುತ್ತಮ ನಟಿ: ದೀಪಿಕಾ ಪಡುಕೋಣೆ
    20 ವರ್ಷಗಳ ಅತ್ಯುತ್ತಮ ನಟ: ರಣ್‍ಬೀರ್ ಕಪೂರ್
    20 ವರ್ಷಗಳ ಅತ್ಯುತ್ತಮ ಮ್ಯೂಸಿಕ್: ಪ್ರೀತಂ
    20 ವರ್ಷಗಳ ಅತ್ಯುತ್ತಮ ನಿರ್ದೇಶಕ: ರಾಜ್‍ಕುಮಾರ್ ಹಿರಾನಿ(ಸಂಜು)
    20 ವರ್ಷಗಳ ಅತ್ಯುತ್ತಮ ಚಿತ್ರ: ಕಹೋ ನಾ ಪ್ಯಾರ್ ಹೇ

    ಅತ್ಯುತ್ತಮ ಸಾಹಿತ್ಯ: ಅಮಿತಾಬ್ ಭಟ್ಟಾಚಾರ್ಯ(ದಡಕ್)
    ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ರಾಝಿ ಚಿತ್ರದ ‘ಎ ವತನ್’ ಹಾಡಿಗೆ)
    ಅತ್ಯುತ್ತಮ ಗಾಯಕಿ: ಹರ್ಷದೀಪ್ ಕೌರ್ ಹಾಗೂ ವಿಭಾ ಸರಫ್ (ರಾಝಿ ಚಿತ್ರದ ದಿಲ್ಬರೋ ಹಾಡಿಗೆ)
    ಅತ್ಯುತ್ತಮ ಸಂಗೀತ: ಸೋನು ಕೀ ಟೀಟು ಕೀ ಶಾದಿ

  • 63ನೇ ವಯಸ್ಸಿನಲ್ಲಿಯೂ 23ರ ನಟಿಯಂತೆ ಹೆಜ್ಜೆ ಹಾಕಿದ ರೇಖಾ-ವಿಡಿಯೋ ನೋಡಿ

    63ನೇ ವಯಸ್ಸಿನಲ್ಲಿಯೂ 23ರ ನಟಿಯಂತೆ ಹೆಜ್ಜೆ ಹಾಕಿದ ರೇಖಾ-ವಿಡಿಯೋ ನೋಡಿ

    ಮುಂಬೈ: 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ರೇಖಾ. ಇಂದಿಗೂ ತಮ್ಮ ಮೋಹಕ ನಗೆ, ಫಿಟ್‍ನೆಸ್ ಮೂಲಕ ಸದ್ಯದ ಯುವ ನಟಿಯರಿಗೂ ಚಾಲೆಂಜ್ ಹಾಕುವಂತಹ ಸೌಂದರ್ಯವನ್ನು ಹಿರಿಯ ನಟಿ ರೇಖಾ ಹೊಂದಿದ್ದಾರೆ. ಭಾನುವಾರ ನಡೆದ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಹೆಜ್ಜೆ ಹಾಕುವ ಮೂಲಕ ನೋಡುಗರು ಮೂಗಿನ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.

    ವಯಸ್ಸು 63 ಆದ್ರೂ, 23ರ ಯುವತಿಯೂ ನಾಚುವಂತೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ರೆ ನೋಡುವವರ ಹೃದಯ ಝಲ್ ಅನ್ನುವಂತಿತ್ತು ಎಂದು ಹಲವು ಬಾಲಿವುಡ್ ತಾರೆಯರು ಹೇಳಿಕೊಂಡಿದ್ದಾರೆ. ತಮ್ಮ ನಟನೆಯ ಎವರ್ ಗ್ರೀನ್ ಹಾಡುಗಳಾದ ‘ಸಲಾಮೇ ಇಶ್ಕ್ ಮೇರಿ ಜಾನ್’, ‘ದಿಲ್ ಚೀಜ್ ಕ್ಯಾ ಹೈ’ ಮತ್ತು ‘ಆಕೋಂ ಕೀ ಮಸ್ತಿ’ ಹಾಡುಗಳಿಗೆ ನೃತ್ಯ ಮಾಡಿರುವ ವಿಡಿಯೋವನ್ನು ಐಫಾ ತನ್ನ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದೆ. ಇದನ್ನೂ ಓದಿ: IIFA ಫಿಲ್ಮ್ ಅವಾರ್ಡ್ಸ್- ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

    ಬರೋಬ್ಬರಿ 20 ವರ್ಷಗಳ ಬಳಿಕ ಕಾರ್ಯಕ್ರಮವೊಂದರಲ್ಲಿ ರೇಖಾ ಹೆಜ್ಜೆ ಹಾಕಿದ್ದಾರೆ. ನೃತ್ಯದಲ್ಲಿ ತಮ್ಮ ಕಣ್ಸನ್ನೆಯ ಮೂಲಕವೇ ಅಭಿಮಾನಿಗಳನ್ನು ರಂಜಿಸಿದ್ದಾರೆ. ರೇಖಾ ಡ್ಯಾನ್ಸ್ ಮುಗಿಯುತ್ತಿದ್ದಂತೆ ವೇದಿಕೆಯ ಮೇಲೆ ಬಂದ ವರುಣ್ ಧವನ್, ಶ್ರದ್ಧಾ ಕಪೂರ್, ಅರ್ಜುನ್ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ಜೊತೆಯಾಗಿ ಎಲ್ಲರೂ ಒಟ್ಟಾಗಿ ಕುಣಿದು ಕುಪ್ಪಳಿಸಿದ್ದಾರೆ.

    1966ರಲ್ಲಿ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ರೇಖಾ ತೆಲುಗಿನ ರಂಗಲು ರತ್ನಂ ಚಿತ್ರದಲ್ಲಿ ನಟಿಸಿದ್ರು. ಮುಂದೆ 1969ರಲ್ಲಿ ಡಾ.ರಾಜ್‍ಕುಮಾರ್ ಅಭಿನಯದ ‘ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿಐಡಿ 999’ ಸಿನಿಮಾದಲ್ಲಿಯೂ ನಟಿಸಿದ ನಂತರ ಹಿಂದಿ ಸಿನಿಮಾಗಳತ್ತ ಮುಖ ಮಾಡಿದ್ರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರೇಖಾ ಚಿತ್ರರಂಗದಲ್ಲಿ ತಮ್ಮದೇ ಆದ ಟ್ರೆಂಡ್ ಕ್ರಿಯೇಟ್ ಸೃಷ್ಟಿ ಮಾಡುವ ಮೂಲಕ ಇಂದಿಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

    https://twitter.com/TheRekhaFanclub/status/1010983479566364673

    https://twitter.com/ShraddhaxDaily/status/1011088387976060928