Tag: IHS

  • 2030ರ ವೇಳೆಗೆ ಏಷ್ಯಾದಲ್ಲಿ ಭಾರತ ನಂಬರ್ 2

    2030ರ ವೇಳೆಗೆ ಏಷ್ಯಾದಲ್ಲಿ ಭಾರತ ನಂಬರ್ 2

    ಲಂಡನ್: 2022-23 ರಲ್ಲಿ ಭಾರತದ ಆರ್ಥಿಕತೆ ಶೇ.6.7 ರಷ್ಟು ವೇಗದಲ್ಲಿ ಬೆಳೆಯುವ ಮುನ್ಸೂಚನೆ ಇದೆ. ಇದರ ಆಧಾರದಲ್ಲಿ ಭಾರತ 2030ರ ವೇಳೆ ಜಪಾನ್ ದೇಶವನ್ನು ಹಿಂದಿಕ್ಕಿ, ಏಷ್ಯಾದಲ್ಲಿ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಮಾಹಿತಿ ನಿರ್ವಹಣಾ ಸೇವೆ (ಐಹೆಚ್‌ಎಸ್) ಮಾರುಕಟ್ಟೆ ಹೇಳಿದೆ.

    ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ ಪ್ರಪಂಚದಲ್ಲೇ ಆರ್ಥಿಕತೆಯ 3ನೇ ಸ್ಥಾನ ಪಡೆಯುವುದರೊಂದಿಗೆ ದೇಶದ ಜಿಡಿಪಿ ಜರ್ಮನಿ ಯನ್ನು ಮೀರಿಸಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಐಹೆಚ್‌ಎಸ್ ಮಾರುಕಟ್ಟೆ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪ್ರಸ್ತುತ ಅಮೇರಿಕ, ಚೀನಾ, ಜಪಾನ್, ಜರ್ಮನಿ ಬಳಿಕ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಭಾರತದ ಜಿಡಿಪಿ 2021ರಲ್ಲಿ 2.7 ಟ್ರಿಲಿಯನ್ ಯುಎಸ್ ಡಾಲರ್ ಇದ್ದು, 2030ರ ವೇಳೆಗೆ 8.4 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರುವ ಮುನ್ಸೂಚನೆ ಇದೆ.

    ಭಾರತದ ವೇಗದ ಆರ್ಥಿಕ ವಿಸ್ತರಣೆ 2030ರ ವೇಳೆ ಜಪಾನಿನ ಜಿಡಿಪಿಯನ್ನು ಮೀರಿ ಏಷ್ಯಾದಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಲ್ಲಲಿದೆ ಎಂದು ಐಹೆಚ್‌ಎಸ್ ಮಾರ್ಕೆಟ್ ಲಿಮಿಟೆಡ್ ತಿಳಿಸಿದೆ. ಇದನ್ನೂ ಓದಿ: ಭೂಮಿಯ ಸಮೀಪದಿಂದ ಹಾದುಹೋಗಲಿದೆ ಪರಮಾಣು ಬಾಂಬ್‌ಗಿಂತ 30 ಪಟ್ಟು ಹೆಚ್ಚು ಶಕ್ತಿಯ ಕ್ಷುದ್ರಗ್ರಹ

    ಕೋವಿಡ್‌ನಿಂದ ಆರ್ಥಿಕತೆ ಕುಂಠಿತವಾಗಿದ್ದರೂ ಮುಂದಿನ ಕೆಲ ವರ್ಷದಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.