Tag: ihole

  • ಅಬ್ಬರಿಸುತ್ತಿರುವ ಮಲಪ್ರಭಾ – ಪಟ್ಟದಕಲ್ಲು, ಐಹೊಳೆ ರಸ್ತೆ ಸಂಪರ್ಕ ಸ್ಥಗಿತ

    ಅಬ್ಬರಿಸುತ್ತಿರುವ ಮಲಪ್ರಭಾ – ಪಟ್ಟದಕಲ್ಲು, ಐಹೊಳೆ ರಸ್ತೆ ಸಂಪರ್ಕ ಸ್ಥಗಿತ

    ಬಾಗಲಕೋಟೆ: ಕ್ಷಣ ಕ್ಷಣಕ್ಕೂ ಮಲಪ್ರಭಾ ನದಿಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳು ಜಲಾವೃತವಾಗಿದೆ. ಇತ್ತ ವಿಶ್ವಪಾರಂಪರಿಕ ಪಟ್ಟಿಗೆ ಸೇರಿರುವ ಪಟ್ಟದಕಲ್ಲು, ಐಹೊಳೆ ರಸ್ತೆ ಸಂಪರ್ಕ ಕೂಡ ಸ್ಥಗಿತಗೊಂಡಿದೆ.

    ಭಾರೀ ಮಳೆಯಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಾಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಗ್ರಾಮಗಳು ನೀರಿನಲ್ಲಿ ಮುಳುಗಿಹೋಗಿದೆ. ಅಲ್ಲಿನ ಗ್ರಾಮಸ್ಥರು ಮನೆ-ಮಠ ಕಳೆದುಕೊಂಡ ಕಂಗಾಲಾಗಿದ್ದಾರೆ. ಜೊತೆಗೆ ಮೇವಿನ ಬಣವೆ, ಬೆಳೆಗಳು ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

    ಇತ್ತ ಪಟ್ಟದಕಲ್ಲು, ಐಹೊಳೆ ಗ್ರಾಮಗಳ ರಸ್ತೆ ಸಂಪರ್ಕ ಬಂದ್ ಆಗಿದೆ. ಗುಳೇಸಗುಡ್ಡ, ಆಸಂಗಿ, ಕೊಟ್ನಳ್ಳಿ, ಕಟಗಿನಹಳ್ಳಿ, ಲಯಲಗುಂದಿ ಮಾರ್ಗವಾಗಿ ಹೋಗುವ ಮಾರ್ಗದಲ್ಲಿ ನೀರು ತುಂಬಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದು ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ದಯವಿಟ್ಟು ಅಗತ್ಯ ಸೌಲಭ್ಯ ಒದಗಿಸಿ ಎಂದು ಕೋರಿಕೊಂಡಿದ್ದಾರೆ.

  • ಅಪಘಾತಕ್ಕೀಡಾಗಿ ಮೃತಪಟ್ಟಂತೆ ರಸ್ತೆಯಲ್ಲಿ ದಂಪತಿ ಶವ ಪತ್ತೆ- ಕೊಲೆ ಶಂಕೆ

    ಅಪಘಾತಕ್ಕೀಡಾಗಿ ಮೃತಪಟ್ಟಂತೆ ರಸ್ತೆಯಲ್ಲಿ ದಂಪತಿ ಶವ ಪತ್ತೆ- ಕೊಲೆ ಶಂಕೆ

    ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ-ಐಹೊಳೆ ಮಧ್ಯದ ರಸ್ತೆಯಲ್ಲಿ ದಂಪತಿ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

    ಮೃತರನ್ನು ಸಂಗಮೇಶ (28) ಮತ್ತು ಆತನ ಪತ್ನಿ ಹನಮವ್ವ ಸರೂರ್ ಎಂದು ಗುರುತಿಸಲಾಗಿದೆ. ಬೈಕ್ ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ.

    ಮೃತರು ಹುನಗುಂದ ತಾಲೂಕಿನ ಕೈರವಾಡಗಿ ಗ್ರಾಮದವರು ಎನ್ನಲಾಗಿದ್ದು, ಪ್ರೀತಿಸಿ ಎರಡು ತಿಂಗಳ ಹಿಂದೆಯಷ್ಟೇ ಇವರಿಬ್ಬರು ರಿಜಿಸ್ಟಾರ್ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಇವರ ಶವ ಬಿದ್ದರೋ ಪಕ್ಕದಲ್ಲಿಯೇ ಬೈಕ್ ಕೂಡ ಬಿದ್ದಿರುವುದು ಕಂಡುಬಂದಿದೆ. ಆದ್ರೆ ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಸ್ಥಳಕ್ಕೆ ಅಮೀನಗಡ ಪೊಲೀಸ್ ವರಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.