Tag: iftar

  • ಟೋಪಿ ತೊಟ್ಟು, ನಮಾಜ್‌ ಮಾಡಿ ಇಫ್ತಾರ್‌ ಕೂಟದಲ್ಲಿ ನಟ ವಿಜಯ್‌ ಭಾಗಿ – ‘ಕುಂಭಮೇಳಕ್ಕೆ ಹೋಗಿದ್ರಾ’ ಅಂತ ನೆಟ್ಟಿಗರು ಪ್ರಶ್ನೆ

    ಟೋಪಿ ತೊಟ್ಟು, ನಮಾಜ್‌ ಮಾಡಿ ಇಫ್ತಾರ್‌ ಕೂಟದಲ್ಲಿ ನಟ ವಿಜಯ್‌ ಭಾಗಿ – ‘ಕುಂಭಮೇಳಕ್ಕೆ ಹೋಗಿದ್ರಾ’ ಅಂತ ನೆಟ್ಟಿಗರು ಪ್ರಶ್ನೆ

    ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ದಳಪತಿ ವಿಜಯ್‌ (Thalapathy Vijay) ಅವರು ರಂಜಾನ್‌ ಸಮಯದಲ್ಲಿ ‘ಇಫ್ತಾರ್‌’ (Iftar) ಕೂಟ ಆಯೋಜಿಸಿದ್ದರು. ಈ ವೇಳೆ, ಅವರು ಸ್ಕಲ್‌ ಕ್ಯಾಪ್‌ (ಮುಸ್ಲಿಮರ ಟೋಪಿ) ಧರಿಸಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

    ಚೆನ್ನೈನಲ್ಲಿ ನಟ ಹಾಗೂ ರಾಜಕಾರಣಿ ವಿಜಯ್‌ ಅವರು ಚೆನ್ನೈನಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದರು. ಟೋಪಿ ತೊಟ್ಟು, ಮುಸ್ಲಿಂ ಬಾಂಧವರೊಂದಿಗೆ ನಮಾಜ್‌ ಮಾಡಿರುವ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಸ್‌ ಮಾಡಿದ್ದಾರೆ. ಇದನ್ನೂ ಓದಿ: ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

    ‘ಅವರು ಕುಂಭಮೇಳಕ್ಕೆ ಭೇಟಿ ನೀಡಿದ್ದಾರಾ? ಇದು ಜಾತ್ಯತೀತತೆ ಅಥವಾ ಈ ಗೂಂಡಾಗಳಿಗೆ ಎಲ್ಲಾ ಧರ್ಮಗಳನ್ನು ಗೌರವಿಸುವ ಬಗ್ಗೆ ಕೇಳುತ್ತಿಲ್ಲ. ಇದು ಕೇವಲ ಸಮಾಧಾನಕ್ಕಾಗಿ. ನಾಚಿಕೆಗೇಡಿನ ಸಂಗತಿ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, ‘ಅವರಿಗೆ ಈ ಆಟ ಚೆನ್ನಾಗಿ ತಿಳಿದಿದೆ’ ಎಂದು ಕಾಲೆಳೆದಿದ್ದಾರೆ.

    ‘ತಮಿಳುನಾಡಿನಲ್ಲಿ ಕೇವಲ ಶೇ.5 ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಆದ್ದರಿಂದ ಯಾವುದೇ ಪಕ್ಷಕ್ಕೆ ಚುನಾವಣೆ ಗೆಲ್ಲಲು ಅವರ ಬೆಂಬಲ ಅಗತ್ಯವಿಲ್ಲ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಾಸ್ಟರ್ ಆನಂದ್ ಪತ್ನಿಯ 2 ಕಾಲಿಗೆ ಬ್ಯಾಂಡೇಜ್- ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್

    ‘ಇದು ತುಷ್ಟೀಕರಣ ರಾಜಕೀಯ. ಇದನ್ನು ಒಂದು ದಿನಕ್ಕಷ್ಟೇ ಯಾಕೆ ಸೀಮಿತಿಗೊಳಿಸಿಕೊಳ್ಳಬೇಕು? ಅವರು ಮುಸ್ಲಿಮರ ಭಾಗವಹಿಸುವಿಕೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಯಾವಾಗಲೂ ಮತಗಳನ್ನು ಕೇಳುವತ್ತ ಗಮನಹರಿಸುತ್ತಾರೆ’ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

    ದಳಪತಿ ವಿಜಯ್‌ ಅವರು ಸಿನಿಮಾ ರಂಗವನ್ನು ಬಿಟ್ಟು ರಾಜಕೀಯದತ್ತ ಗಮನ ಹರಿಸಿದ್ದಾರೆ. ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಕಟ್ಟಿರುವ ಅವರು ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದಾರೆ.

  • ಶಿಕ್ಷಣ ಕೇಂದ್ರವನ್ನು ಧಾರ್ಮಿಕ ಆಚರಣೆಗಳ ಸ್ಥಳವನ್ನಾಗಿ ಮಾಡುವುದು ಸರಿಯಲ್ಲ – ಸಂಜಯ್ ಸರೋಗಿ

    ಶಿಕ್ಷಣ ಕೇಂದ್ರವನ್ನು ಧಾರ್ಮಿಕ ಆಚರಣೆಗಳ ಸ್ಥಳವನ್ನಾಗಿ ಮಾಡುವುದು ಸರಿಯಲ್ಲ – ಸಂಜಯ್ ಸರೋಗಿ

    ಪಾಟ್ನಾ: ಶಿಕ್ಷಣ ಕೇಂದ್ರವನ್ನು ಧಾರ್ಮಿಕ ಆಚರಣೆಗಳ ಸ್ಥಳವನ್ನಾಗಿ ಮಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಬಿಹಾರದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾನಿಲಯದಲ್ಲಿ ಏಪ್ರಿಲ್ 26 ರಂದು ಆಯೋಜಿಸಲಾದ ಆಜಾನ್ ಮತ್ತು ಇಫ್ತಾರ್ ಕೂಟಕ್ಕೆ ಬಿಜೆಪಿ ಶಾಸಕ ಸಂಜಯ್ ಸರೋಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇದೊಂದು ಗಂಭೀರ ವಿಚಾರ. ಶಿಕ್ಷಣ ಸಂಸ್ಥೆಗಳನ್ನು ಧಾರ್ಮಿಕ ಸ್ಥಳಗಳನ್ನಾಗಿ ಪರಿವರ್ತಿಸುವುದನ್ನು ಸಹಿಸಲಾಗುವುದಿಲ್ಲ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ವಿಶ್ವವಿದ್ಯಾನಿಲಯ ಉಪಕುಲಪತಿ ಹಾಗೂ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ವಿರುದ್ಧ ಸಂಜಯ್ ಸರೋಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಇದಕ್ಕೆ ಪ್ರತಿಕ್ರಿಯಿಸಿದ ಮುಷ್ತಾಕ್ ಅಹ್ಮದ್ ಅವರು, ಇಫ್ತಾರ್ ಕೂಟವನ್ನು ವಿಶ್ವವಿದ್ಯಾಲಯದ ಆಡಳಿತ ಆಯೋಜಿಸಿಲ್ಲ. ವಿಶ್ವವಿದ್ಯಾಲಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಕಾರ್ಯಕ್ರಮವನ್ನು ಕೆಲವು ವಿದ್ಯಾರ್ಥಿಗಳು ಆಯೋಜಿಸಿದ್ದರು. ತಪ್ಪು ಮನಸ್ಥಿತಿ ಹೊಂದಿರುವ ಜನರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಧ್ಯಾಪಕ ಅಮಾನತು

  • ಇಫ್ತಾರ್ ಕೂಟಕ್ಕೂ ರಾಜಕೀಯಕ್ಕೂ ಏನು ಸಂಬಂಧ – ನಿತೀಶ್ ಪ್ರಶ್ನೆ

    ಇಫ್ತಾರ್ ಕೂಟಕ್ಕೂ ರಾಜಕೀಯಕ್ಕೂ ಏನು ಸಂಬಂಧ – ನಿತೀಶ್ ಪ್ರಶ್ನೆ

    ಪಾಟ್ನಾ: ರಾಷ್ಟ್ರೀಯ ಜನತಾದಳ (RJD) ನಾಯಕ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್‌ಕೂಟದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಪಾಲ್ಗೊಂಡಿದ್ದು ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

    NITHISHKUMAR

    ಇದಕ್ಕೆ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ ಅವರು, ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ ಪ್ರತಿವರ್ಷವೂ ಇದು ನಡೆಯುತ್ತಲೇ ಬಂದಿದೆ. ಇಫ್ತಾರ್‌ಗೆ ಅನೇಕ ಜನರನ್ನು ಆಹ್ವಾನಿಸಲಾಗುತ್ತದೆ. ನಾವೂ ಇತರರನ್ನು ಆಹ್ವಾನಿಸುತ್ತೇವೆ. ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ

    ಕಳೆದ 5 ವರ್ಷಗಳಿಂದ ಆರ್‌ಜೆಡಿಯಿಂದ ದೂರ ಉಳಿದಿದ್ದ ನಿತೀಶ್‌ಕುಮಾರ್ ಇಫ್ತಾರ್‌ಕೂಟದಲ್ಲಿ ಪಾಲ್ಗೊಂಡಿದ್ದು, ಹಲವರಲ್ಲಿ ಕುತೂಹಲ ಮೂಡಿಸಿದೆ. 2017ರಲ್ಲಿ, ಕುಮಾರ್ ಬಿಹಾರದ ಮಹಾಮೈತ್ರಿಕೂಟ ತೊರೆದು ಬಿಜೆಪಿ ಮಿತ್ರರಾದರು. ಬಿಹಾರದಲ್ಲಿ ಈಗಾಗಲೇ ಬಿಜೆಪಿ ಜಾತಿ ಆಧಾರಿತ ಜನಗಣತಿ, NDA ನಾಯಕತ್ವ, ಮದ್ಯ ನಿಷೇಧ ಮತ್ತು ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ ಒಳಜಗಳಗಳು ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ 5 ವರ್ಷಗಳ ನಂತರ ಮತ್ತೆ ಇಫ್ತಾರ್‌ಕೂಟದಲ್ಲಿ ಪಾಲ್ಗೊಂಡಿದ್ದು, ಊಹಾಪೋಹಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR 

  • ಹೆಂಡ ಕುಡಿದ ಕೋತಿ ರೀತಿ ಪಾಕ್ ಆಡ್ತಿದೆ: ಶಿವಸೇನೆ

    ಹೆಂಡ ಕುಡಿದ ಕೋತಿ ರೀತಿ ಪಾಕ್ ಆಡ್ತಿದೆ: ಶಿವಸೇನೆ

    ಮುಂಬೈ: ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ಅಡ್ಡಿಪಡಿಸಿ, ಪಾಕ್ ಹೆಂಡ ಕುಡಿದ ಕೋತಿಯಂತೆ ಆಡುತ್ತಿದೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.

    ರಂಜಾನ್ ಹಬ್ಬದ ಪ್ರಯುಕ್ತ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಪಾಕ್ ಸೇನಾ ಸಿಬ್ಬಂದಿ ತಡೆಯುಂಟು ಮಾಡಿದ್ದು, ಪಾಕ್ ಹೆಂಡ ಕುಡಿದ ಕೋತಿಯಂತೆ ಆಡುತ್ತಿದೆ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

    ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಾಕಿಸ್ತಾನದ ಸೇನಾ ಸಿಬ್ಬಂದಿ ಇಫ್ತಾರ್ ಕೂಟಕ್ಕೆ ಅಡ್ಡಿ ಪಡಿಸಿದ್ದಕ್ಕೆ ತೀವ್ರವಾಗಿ ಖಂಡಿಸಿ, ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪಾಕ್ ಸೇನೆಯನ್ನು ಮದ್ಯಪಾನ ಮಾಡಿದ ಕೋತಿಗಳಿಗೆ ಹೋಲಿಸಿದ್ದಾರೆ. ಹಾಗೆಯೇ ಪಾಕ್ ಕೋತಿಗಳು ಮಾಡಿದ ಈ ಅವಮಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಅಷ್ಟೇ ಅಲ್ಲದೆ, ಉಗ್ರ ಮಸೂದ್ ವಿಚಾರದಲ್ಲಿ ಪಾಕಿಸ್ತಾನ ದ್ವಂದ್ವ ನೀತಿ ಪಾಲಿಸುತ್ತಿದೆ. ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನೆ ತಿಳಿಸಿ, ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆ. ಆದರೆ, ಪಾಕ್ ಸೇನಾ ಸಿಬ್ಬಂದಿ ಮಾತ್ರ ಇಂತಹ ಹೀನ ವರ್ತನೆ ತೋರಿಸಿದ್ದಾರೆ. ಇಫ್ತಾರ್ ಊಟಕ್ಕೆ ಬಂದ ಗಣ್ಯರಿಗೆ ಅಗೌರವ ತೋರಿದ್ದಾರೆ. ಇದು ಯಾವ ರೀತಿಯ ಶಾಂತಿ ಪಾಲನೆ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

    ಭಾರತದ ರಾಯಭಾರಿ ಕಚೇರಿ ವತಿಯಿಂದ ಇಫ್ತಾರ್ ಊಟಕ್ಕೆ ಪಾಕಿಸ್ತಾನದ ಗೌರವಾನ್ವಿತ ಪ್ರಜೆಗಳಿಗೆ ಆಹ್ವಾನ ನೀಡಲಾಗಿತ್ತೆ ಹೊರತು ಜೈಷ್-ಇ-ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಆಜಾದ್‍ಗೆ ಆಹ್ವಾನಿಸಿರಲಿಲ್ಲ ಎಂದು ಟಾಂಗ್ ಕೊಟ್ಟರು.

    ಭಾರತ ಪಠಾಣ್‍ಕೋಟ್, ಉರಿ, ಪುಲ್ವಾಮಾ ದಾಳಿಗಳ ಬಗ್ಗೆ ಪಾಕಿಸ್ತಾನಕ್ಕೆ ಸಾಕ್ಷ್ಯಗಳನ್ನು ನೀಡಿದ್ದರೂ ಪಾಕ್ ಮಾತ್ರ ಉಗ್ರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಕ್ ಉಗ್ರರನ್ನು ಉತ್ಪಾದಿಸುವ ಕಾರ್ಖನೆಯಾಗಿ ಮಾರ್ಪಟ್ಟಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು.

  • ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಲಕ್ನೋ: ರಂಜಾನ್‍ನ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿಲ್ಲ ಎಂದು ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಮಕ್ಕಳನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ.

    ಆಸ್ಮಾ, ಅಲೀಮಾ ಮೋಹೆ ಹಾಗೂ ಅಬ್ದುಲ್ಲಾ ಮೃತ ದುರ್ದೈವಿಗಳು. ಮೂವರು ಮಕ್ಕಳು 7ರಿಂದ 8 ವರ್ಷದವರು ಎಂದು ಹೇಳಲಾಗಿದ್ದು, ಇವರ ಕುಟುಂಬದವರು ಶುಕ್ರವಾರ ಇಫ್ತಾರ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ತನ್ನನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ವ್ಯಕ್ತಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

    ವ್ಯಕ್ತಿ ಬೇಸರದಿಂದ ಮೂವರನ್ನು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಿದಲ್ಲದೇ ಅವರ ಮೃತದೇಹವನ್ನು ದುತೂರಿ ಗ್ರಾಮದ ಅರಣ್ಯದಲ್ಲಿದ್ದ ಬಾವಿಯಲ್ಲಿ ಎಸೆದಿದ್ದನು. ಮಕ್ಕಳು ಕಾಣಿಸದೇ ಇದ್ದಾಗ ಪೋಷಕರು ಶುಕ್ರವಾರ ರಾತ್ರಿ ಸುಮಾರು 9.22ಕ್ಕೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಹಾಗೂ ದೂರು ಕೂಡ ದಾಖಲಿಸಿಲ್ಲ. ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಧೃವ್ ಭುಷಣ್ ದುಬೆ ಹಾಗೂ ಮುಂಶಿಯ ಎಸ್‍ಎಸ್‍ಪಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.

  • ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ಆಹಾರ ನೀಡಿದ ಗಗನಸಖಿ!

    ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ಆಹಾರ ನೀಡಿದ ಗಗನಸಖಿ!

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದ ಮುಸ್ಲಿಂ ಪ್ರಯಾಣಿಕರೊಬ್ಬರು ಇಫ್ತಾರ್ ಸಮಯವಾದಾಗ ಗಗನಸಖಿಯೊಬ್ಬರ ಬಳಿ ನೀರು ಕೇಳಿದ್ದರು. ಆದರೆ ಪ್ರಯಾಣಿಕ ಉಪವಾಸವಿದ್ದ ಬಗ್ಗೆ ತಿಳಿದ ಗಗನಸಖಿ ಅವರಿಗೆ ಇಫ್ತಾರ್ ಆಹಾರವನ್ನು ನೀಡಿ ಎಲ್ಲರ ಮನ ಗೆದ್ದಿದ್ದಾರೆ.

    ಹೌದು. ರಂಜಾನ್ ಹಬ್ಬದ ಹಿನ್ನೆಲೆ ಪತ್ರಕರ್ತ ರಿಫಾತ್ ಜಾವೈದ್ ಅವರು ಉಪವಾಸದಲ್ಲಿದ್ದರು. ಶನಿವಾರದಂದು ರಿಫಾತ್ ಜಾವೈದ್ ಗೊರಖ್‍ಪುರದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಂಜೆ ತಮ್ಮ ಉಪವಾಸ ಮುರಿಯುವ ಸಮಯವಾದಗ ಗಗನಸಖಿ ಮಂಜುಳ ಅವರ ಬಳಿ ಒಂದು ಬಾಟಲ್ ನೀರನ್ನು ಕೇಳಿದ್ದಾರೆ. ಆದರೆ ಪ್ರಯಾಣಿಕ ಉಪವಾಸವಿರುವ ಬಗ್ಗೆ ಅರಿತ ಗಗನಸಖಿ ರಿಫಾತ್ ಅವರಿಗೆ ಟ್ರೇನಲ್ಲಿ ಇಫ್ತಾರ್ ಆಹಾರವನ್ನು ನೀಡಿ ಮಾನವೀಯತೆ ಮರೆದಿದ್ದಾರೆ.

    ತಮಗೆ ಇಫ್ತಾರ್ ಆಹಾರ ನೀಡಿದ ಗಗನಸಖಿಯ ಸಹಾಯಕ್ಕೆ ಸಂತೋಷಗೊಂಡ ರಿಫಾತ್ ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಗಗನಸಖಿಯ ಗುಣಕ್ಕೆ ಮನಸೋತಿದ್ದಾರೆ. ನಾನು ದೆಹಲಿಗೆ ವಿಮಾನದಲ್ಲಿ ವಾಪಾಸ್ ತೆರೆಳುತ್ತಿದ್ದೆ. ಈ ವೇಳೆ ಇಫ್ತಾರ್ ನ ಸಮಯವಾಗಿತ್ತು. ಆದರಿಂದ ನಾನು ಗಗನಸಖಿ ಮಂಜುಳ ಅವರ ಬಳಿ ಹೋಗಿ ನೀರು ಕೇಳಿದೆ. ಆಗ ಅವರು ನನಗೆ ಒಂದು ಬಾಟರ್ ನೀರು ಕೊಟ್ಟರು. ಬಳಿಕ ನಾನು ಉಪವಾಸದಲ್ಲಿದ್ದೇನೆ ಇನ್ನೊಂದು ಬಾಟಲ್ ನೀರು ಬೇಕಿತ್ತು ಎಂದೆ. ಆಗ ಗಗನಸಖಿ ನೀವು ನಿಮ್ಮ ಸೀಟ್‍ಗೆ ಹೋಗಿ ತಂದು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದರು. ನಂತರ ನನಗೆ ಟ್ರೇ ತುಂಬಾ ಇಫ್ತಾರ್ ಆಹಾರವನ್ನೂ ನೀಡಿ ಸತ್ಕರಿಸಿದರು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ನೆಟ್ಟಿಗರು ರಿಫಾತ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಧರ್ಮ ಬೇರೆಯಾಗಿದ್ದರು, ಮಾನವೀಯತೆಯಿಂದ ಒಬ್ಬರಿಗೆ ಸಹಾಯ ಮಾಡುವುದು ದೊಡ್ಡ ವಿಷಯ. ಜಾತಿ ಧರ್ಮವೆಂದು ಜಗಳವಾಡುವವರ ಮಧ್ಯೆ ಮನವೀಯತೆ ಎಲ್ಲದಕ್ಕಿಂತ ಮಿಗಿಲಾದದ್ದು ಎಂದು ಸಾರಿರುವ ಗಗನಸಖಿ ಸಹಾಯವನ್ನು ನಿಜಕ್ಕೂ ಮೆಚ್ಚಲೇಬೇಕು. ಈ ಮೂಲಕ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನ ಗಗನಸಖಿ ತೋರಿಸಿದ್ದಾರೆ. ಇದು ನಮ್ಮ ಭಾರತದ ವಿಶೇಷತೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

  • ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

    ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

    ದುಬೈ: ಕೇರಳ ಮೂಲದ ಕ್ರಿಶ್ಚಿಯನ್ ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆಂದು ಪ್ರತ್ಯೇಕ ಮಸೀದಿ ನಿರ್ಮಿಸುವುದರೊಂದಿಗೆ ರಂಜಾನ್ ತಿಂಗಳಲ್ಲಿ ಇಫ್ತಾರ್ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಕೇರಳದ ಕಯಾಕುಲಂ ಮೂಲದವರಾಗಿರುವ ಉದ್ಯಮಿ ಸಾಜಿ ಚೆರಿಯನ್(49) 2003ರಿಂದ ಯುಎಇನಲ್ಲಿ ವಾಸವಾಗಿದ್ದಾರೆ. ತಾವು ಕ್ರಿಶ್ಚಿಯನ್ ಆಗಿದ್ದರು ಧರ್ಮಬೇಧ ಮರೆತು ಯುಎಇನಲ್ಲಿ ಮಸೀದಿ ಕಟ್ಟಿಸಿದ್ದಾರೆ. ಜೊತೆಗೆ ರಂಜಾನ್ ತಿಂಗಳ ಪೂರ್ತಿ 800 ಮಂದಿ ಜನರಿಗೆ ಇಫ್ತಾರ್ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ.

    ಪ್ರತಿನಿತ್ಯ ನಮಾಜ್‍ಗೆ ತಮ್ಮ ಸಂಸ್ಥೆಯ ಸಿಬ್ಬಂದಿ ಸಂಬಳದ ಹಣ ಖರ್ಚು ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ಈ ಹಣವನ್ನು ಉಳಿಸಲು ಉದ್ಯಮಿ ಸಾಜಿ ಈ ಉಪಾಯ ಮಾಡಿದ್ದಾರೆ. ಸಿಬ್ಬಂದಿಗಾಗಿ ಮಸೀದಿಯನ್ನೂ ನಿರ್ಮಿಸಿದ್ದಾರೆ. ಮಸೀದಿಗೆ `ಮೇರಿ ದಿ ಮದರ್ ಆಫ್ ಜೀಸಸ್’ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ಇಫ್ತಾರ್ ಊಟದಲ್ಲಿ ಬಿರಿಯಾನಿ, ಹಣ್ಣು, ಖರ್ಜೂರ ಸೇರಿದಂತೆ ಹಲವು ಖಾದ್ಯಗಳನ್ನು ಸಿಬ್ಬಂದಿಗೆ ನೀಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚೆರಿಯನ್, ಸಿಬ್ಬಂದಿ ನಮಾಜ್ ಮಾಡಲು ದೂರದ ಪ್ರದೇಶಕ್ಕೆ ತೆರಳಬೇಕಾಗಿತ್ತು. ಹಾಗೆಯೇ ಇದಕ್ಕಾಗಿ ಸಂಬಳದ ಹಣವನ್ನು ಖರ್ಚು ಮಾಡುತ್ತಿದ್ದರು. ಜೊತೆಗೆ ಇಫ್ತಾರ್ ಊಟಕ್ಕೂ ಹಣ ಖರ್ಚಾಗುತ್ತಿತ್ತು. ಆದ್ದರಿಂದ ಸಿಬ್ಬಂದಿಯ ಹಣ ಉಳಿಸಲು ಈ ರೀತಿ ಮಾಡಿದ್ದೇನೆ. ರಂಜಾನ್ ಮುಗಿಯುವ ತನಕ ಒಂದೇ ರೀತಿಯ ಆಹಾರ ನೀಡಿದರೆ ಅವರಿಗೆ ಬೇಸರವಾಗುತ್ತದೆ. ಹೀಗಾಗಿ ವಿವಿಧ ರೀತಿಯ ಬಿರಿಯಾನಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಪತ್ರಿಕೆಯೊಂದರ ವರದಿ ಪ್ರಕಾರ ರಂಜಾನ್ ಆಚರಣೆಯ 17 ನೇ ರಾತ್ರಿಯಂದು ಈ ಮಸೀದಿಯನ್ನು ಉದ್ಘಾಟಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ದುಬೈನಲ್ಲಿ ಅಲ್ ಹೈಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಸಂಕೀರ್ಣದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಇದು ಒಂದೇ ಸಮಯದಲ್ಲಿ 250 ಮಂದಿ ಪ್ರಾರ್ಥನೆಯನ್ನು ಸಲ್ಲಿಸುವಷ್ಟು ದೊಡ್ಡ ಸಭಾಂಗಣವನ್ನು ಹೊಂದಿದೆ. ಅಷ್ಟೇ ಅಲ್ಲದೆ ಮಸೀದಿಯ ಹೊರಗಡೆ ತೆರೆದ ಆವರಣದಲ್ಲಿ 700 ಮಂದಿ ಆರಾಧಕರು ಪ್ರಾರ್ಥನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

  • ಇಫ್ತಾರ್ ಕೂಟದ ಬದಲಿ ಸ್ನೇಹ ಕೂಟ ಆಯೋಜನೆ – ಪೇಜಾವರ ಶ್ರೀ

    ಇಫ್ತಾರ್ ಕೂಟದ ಬದಲಿ ಸ್ನೇಹ ಕೂಟ ಆಯೋಜನೆ – ಪೇಜಾವರ ಶ್ರೀ

    ಉಡುಪಿ: ಈ ಬಾರಿ ಬೇರೆ ಕಾರ್ಯಕ್ರಮಗಳು ನಿಗಧಿಯಾಗಿದ್ದರಿಂದ ಇಫ್ತಾರ್ ಕೂಟ ಏರ್ಪಡಿಸಲು ಸಾಧ್ಯವಾಗಿಲ್ಲ, ಬದಲಾಗಿ ಸ್ನೇಹ ಕೂಟವನ್ನು ಏರ್ಪಡಿಸಬಹುದು ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

    ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಇಂದು ಮುಸ್ಲಿಂ ಬಾಂಧವರು ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದರು. ಈ ವೇಳೆ ಶ್ರೀಗಳು ಹಬ್ಬದ ಶುಭಾಶಯವನ್ನು ಸಲ್ಲಿಸಿ ಫಲ, ಖರ್ಜೂರವನ್ನು ನೀಡಿದರು.

    ಈ ವೇಳೇ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟವೇ ಆಗಬೇಕಿಲ್ಲ, ಸ್ನೇಹ ಕೂಟ ಯಾವಾಗ ಬೇಕಾದರೂ ಮಾಡಬಹುದು. ಉತ್ತರ ಭಾರತ ಪ್ರವಾಸದಲ್ಲಿದ್ದರಿಂದ ಈ ಭಾರೀ ಅವಕಾಶ ಸಿಕ್ಕಿಲ್ಲ. ಬೇರೆ ಕಾರ್ಯಕ್ರಮಗಳೆಲ್ಲಾ ಫಿಕ್ಸ್ ಆಗಿತ್ತು, ಹೀಗಾಗಿ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ನೇಹ ಕೂಟ ಮಾಡುತ್ತೇವೆ. ಕ್ರೈಸ್ತರು, ಮುಸಲ್ಮಾನರನ್ನು ಈ ಸ್ನೇಹ ಕೂಟಕ್ಕೆ ಕರೆಯುತ್ತೇವೆ. ಯೋಗ್ಯ ಸಂದರ್ಭ ನೋಡಿ ಸ್ನೇಹ ಕೂಟ ಮಾಡುತ್ತೇವೆ ಎಂದು ತಿಳಿಸಿದರು.

    ಇದೇ ವೇಳೆ ಈ ಬಾರಿಯ ಸ್ನೇಹ ಕೂಟಕ್ಕೆ ಯಾರ ವಿರೋಧವು ಇರಲಿಲ್ಲ. ಸಂಘದ ಪ್ರಮುಖರೇ ನಮ್ಮ ವಿರೋಧವಿಲ್ಲ ಎಂದು ಹೇಳಿದ್ದರು. ಆದರೆ ಕಳೆದ ಬಾರಿ ಹಿಂದೂಗಳಲ್ಲೇ ಕೆಲವರು ನೀವು ಮಾಡಿದ್ದು ತಪ್ಪು ಎಂದು ಹೇಳಿದ್ದರು. ಆ ವೇಳೆ ನಮ್ಮ ಪರಮಗುರುಗಳು ಪರ್ಯಾಯ ಪೂರ್ವದಲ್ಲಿ ಹಾಜೀ ಅಬ್ದುಲ್ಲಾ ಅವರಿಂದ ಪಾದ ಪೂಜೆ ಸ್ವೀಕಾರ ಮಾಡಿದ್ದಾರೆ. ನಾವು ಅವರನ್ನು ಕರೆಸಿ ಊಟ ಹಾಕಿದರೆ ಏನು ತಪ್ಪಾಗುತ್ತದೆ ಎಂದು ಹೇಳಿದ್ದೆ ಎಂದು ತಿಳಿಸಿದರು.

    ಹಿಂದೂಗಳು ಕೆಲ ಬೇಡಿಕೆ ನಡೆಸಬೇಕು, ಮುಸಲ್ಮಾನರು ನಮ್ಮ ಕೆಲ ಬೇಡಿಕೆ ನಡೆಸಬೇಕು ಹೀಗಾಗಿ ಸ್ನೇಹಕೂಟ, ಮಾತುಕತೆ ನಡೆಯುತ್ತಿದ್ದರೆ ಮತ್ತಷ್ಟು ಸಮನ್ವಯ ಬೆಳೆಯಲು ಅನುಕೂಲ, ನಮ್ಮಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಜಕಾರಣಿಗಳು ಮಾಡುವುದೆಲ್ಲಾ ಮುಸ್ಲಿಂ ತುಷ್ಟೀಕರಣಕ್ಕೆ, ಓಟಿಗಾಗಿ ಆದರೆ ನಮ್ಮದು ಹಾಗೆ ಅಲ್ಲ ಬರೀ ತುಷ್ಟೀಕರಣ ಅಲ್ಲ. ಎಲ್ಲರ ಜೊತೆ ಸೌಹಾರ್ದ ಇರಬೇಕು ಎಂದು ಹೇಳಿದರು. ಇದೇ ಸಂದರ್ಭ ಮಾತನಾಡಿದ ಮುಸ್ಲಿಂ ಮುಖಂಡ ಅನ್ಸಾರ್ ಅಹಮ್ಮದ್ ಪ್ರತಿವರ್ಷದಂತೆ ಈ ಬಾರಿಯು ರಂಜಾನ್ ದಿನದಂದು ಸ್ವಾಮೀಜಿಗೆ ಫಲ ಸಲ್ಲಿಸಿ ಆಶೀರ್ವಾದ ಪಡೆದಿದ್ದೇವೆ ಎಂದು ಹೇಳಿದರು.

  • ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

    ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

    ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಡದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ ವಕ್ತಾರರಾದ ರಣ್‍ದೀಪ್ ಸಿಂಗ್ ಸೂರಜ್‍ವಾಲಾ ಅವರು, ಪ್ರಣಬ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ತಮ್ಮ ಆಹ್ವಾನವನ್ನು ಮನ್ನಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಈ ಹಿಂದೆ ಕಾಂಗ್ರೆಸ್ 2015 ರಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು. ಆದರೆ ಇದಾದ ಬಳಿಕ ಎರಡು ವರ್ಷ ಕಾರ್ಯಕ್ರಮವನ್ನು ಏರ್ಪಡಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಎಐಸಿಸಿ ಅಧಕ್ಷರಾದ ಬಳಿಕ ಮೊದಲ ಬಾರಿಗೆ ಇಫ್ತಾರ ಕೂಟವನ್ನು ಏರ್ಪಡಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಹಾಗೂ ನಾಯಕರು ಭಾಗವಹಿಸಿದ್ದರು.

    ಕಳೆದ ಕೆಲ ದಿನಗಳ ಹಿಂದೆ ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸುವ ಕುರಿತು ಹಲವು ಕಾಂಗ್ರೆಸ್ ನಾಯಕರು ಅಸಮಾಧಾನವನ್ನು ಹೊರಹಾಕಿದ್ದರು. ಸ್ವತಃ ಪ್ರಣಬ್ ಅವರ ಪುತ್ರಿ ಸಹ ಈ ಕುರಿತು ಟ್ವೀಟ್ ಮಾಡಿ ಆರ್ ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.

  • ಮಂಗಳವಾರ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ಸಿನಿಂದ ಇಫ್ತಾರ್ ಕೂಟ

    ಮಂಗಳವಾರ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ಸಿನಿಂದ ಇಫ್ತಾರ್ ಕೂಟ

    ನವದೆಹಲಿ: ಎರಡು ವರ್ಷಗಳ ನಂತರ ಜೂನ್ 13 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

    ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕಗೊಂಡ ನಂತರದ ಮೊದಲ ಇಫ್ತಾರ್ ಕೂಟ ಇದಾಗಿದ್ದು, ಜೂನ್ 13 ರಂದು ದೆಹಲಿಯ ತಾಜ್ ಪ್ಯಾಲೆಸ್ ಹೋಟೆಲ್ ನಲ್ಲಿ ಏರ್ಪಾಡು ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನದೀಮ್ ಜಾವೆದ್ ಹೇಳಿದ್ದಾರೆ.

    ಕಾಂಗ್ರೆಸ್ ನ ಎಲ್ಲಾ ನಾಯಕರುಗಳನ್ನು ಹಾಗೂ ಕೆಲವು ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಸೋನಿಯಾ ಗಾಂಧಿ ಅವರು 2015 ರಲ್ಲಿ ಇಫ್ತಾರ್ ಕೂಟವನ್ನು ಏರ್ಪಾಡು ಮಾಡಿದ್ದರು.

    2016ಕ್ಕಿಂತ ಮುಂಚೆ ಕಾಂಗ್ರೆಸ್ ಇಫ್ತಾರ್ ಕೂಟವನ್ನು ಏರ್ಪಾಡು ಮಾಡುತ್ತಿತ್ತು. ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಏರ್ಪಾಡು ಮಾಡುತ್ತಿದ್ದರು. ವಿರೋಧ ಪಕ್ಷದಲ್ಲಿದ್ದಾಗ ಸೋನಿಯಾ ಗಾಂಧಿಯವರು ಏರ್ಪಾಡು ಮಾಡಿದ್ದರು.

     

    2016ರಲ್ಲಿ ಈ ಬಾರಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವುದಿಲ್ಲ ಅದರ ಬದಲು ಬಡವರಿಗೆ ರೇಷನ್ ಕೊಡುತ್ತೇವೆ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಈ ಹಿಂದೆಯೂ ಕೆಲವು ಬಾರಿ ದೇಶದಲ್ಲಿ ಬರ ಅಥವಾ ನೈಸರ್ಗಿಕ ವಿಕೋಪ ಸಂಭವಿಸಿದಾಗ ಕಾಂಗ್ರೆಸ್ ಇಫ್ತಾರ್ ಕೂಟ ಆಯೋಜನೆ ಮಾಡಿರಲಿಲ್ಲ.