Tag: IFS Officer

  • ಮೋದಿ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್‌ಎಸ್‌ ಅಧಿಕಾರಿ ನಿಧಿ ತಿವಾರಿ ನೇಮಕ

    ಮೋದಿ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್‌ಎಸ್‌ ಅಧಿಕಾರಿ ನಿಧಿ ತಿವಾರಿ ನೇಮಕ

    ನವದೆಹಲಿ: ಯುವ ಐಎಫ್‌ಎಸ್ (IFS) ಅಧಿಕಾರಿ ನಿಧಿ ತಿವಾರಿ (Nidhi Tewari) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

    2014 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ ನಿಧಿ ತಿವಾರಿ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿಯನ್ನು ಅನುಮೋದಿಸಿದೆ. ಇದನ್ನೂ ಓದಿ: ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

    ನಿಧಿ ತಿವಾರಿ ಯಾರು?
    ವಾರಣಾಸಿಯ ಮೆಹಮುರ್ಗಂಜ್ ಮೂಲದ ನಿಧಿ ತಿವಾರಿ 2013 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 96ನೇ ರ‍್ಯಾಂಕ್ ಗಳಿಸಿದ್ದರು. ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರಧಾನಿ ಮೋದಿ 2014ರಿಂದ ಪ್ರತಿನಿಧಿಸುತ್ತಿದ್ದಾರೆ.

    2016ರಲ್ಲಿ ಅತ್ಯುತ್ತಮ ತರಬೇತಿ ಅಧಿಕಾರಿ ಮತ್ತು ಪ್ರಬಂಧಕ್ಕೆ ರಾಯಭಾರಿ ಬಿಮಲ್ ಸನ್ಯಾಲ್ ಸ್ಮಾರಕ ಪದಕವನ್ನು (Ambassador Bimal Sanyal Memorial Medal) ನೀಡಿ ಪುರಸ್ಕರಿಸಲಾಗಿತ್ತು. ತಿವಾರಿ ಅವರು ಜನವರಿ 6, 2023 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2022ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇರ್ಪಡೆಯಾದರು. ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    ಈ ಹಿಂದೆ ವಿದೇಶಾಂಗ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ತಿವಾರಿ ಅವರು ಪ್ರಧಾನಿ ಸಚಿವಾಲಯದಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

    2013ರಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೊದಲು ಅವರು ವಾರಣಾಸಿಯಲ್ಲಿ ಸಹಾಯಕ ಆಯುಕ್ತರಾಗಿ (ವಾಣಿಜ್ಯ ತೆರಿಗೆ) ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸದೊಂದಿಗೆ ತಯಾರಿ ನಡೆಸಿ ಪರೀಕ್ಷೆಯನ್ನು ತೇರ್ಗಡೆಯಾಗಿದ್ದರು. ಇದನ್ನೂ ಓದಿ: ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಂಚ್ ಡೇಟ್- ಮತ್ತೆ ಡೇಟಿಂಗ್‌ ಬಗ್ಗೆ ಶುರುವಾಯ್ತು ಚರ್ಚೆ

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ವರದಿ ಮಾಡುವ ‘ವಿದೇಶಾಂಗ ಮತ್ತು ಭದ್ರತೆ’ ವಿಭಾಗದಲ್ಲಿ ಉಪ ಕಾರ್ಯದರ್ಶಿಯಾಗಿ ನಿಧಿ ತಿವಾರಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೆ ಶಾಕ್‌ – ಟ್ರಾನ್ಸ್‌ಫಾರ್ಮರ್‌, ಜನರೇಟರ್ ಪರಿಶೀಲನೆ & ರಿನೀವಲ್ ಶುಲ್ಕ 3 ಪಟ್ಟು ಏರಿಕೆ!

    ಸದ್ಯ ವಿವೇಕ್ ಕುಮಾರ್ ಮತ್ತು ಹಾರ್ದಿಕ್ ಸತೀಶ್ಚಂದ್ರ ಶಾ ಅವರು ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

  • ನೇಣಿಗೆ ಶರಣಾದ ಐಎಫ್‍ಎಸ್ ಅಧಿಕಾರಿ

    ನೇಣಿಗೆ ಶರಣಾದ ಐಎಫ್‍ಎಸ್ ಅಧಿಕಾರಿ

    ಬೆಂಗಳೂರು: ನಗರದ ಯಲಹಂಕದ ಅಪಾರ್ಟ್ ಮೆಂಟ್‍ನಲ್ಲಿ ಐಎಫ್‍ಎಸ್ ಹಿರಿಯ ಅಧಿಕಾರಿ ಡಾ.ಅವತಾರ್ ಸಿಂಗ್ ಅವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಹರ್ಯಾಣದ ಯಮುನಾನಗರ ಮೂಲದ ಅವತಾರ್ ಸಿಂಗ್ (58) ಅವರು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವತಾರ್ ಸಿಂಗ್ ಅವರು ಪತ್ನಿ, ಇಬ್ಬರು ಮಕ್ಕಳ ಜೊತೆಗೆ ಯಲಹಂಕದ ಪ್ರೆಸ್ಟೀಜ್ ಮೌಂಟ್ ಕಾರ್ಲೋ ಅಪಾರ್ಟ್ ಮೆಂಟ್‍ನ 4ನೇ ಮಹಡಿಯ 3,401 ನಂಬರ್ ಫ್ಲಾಟ್‍ನಲ್ಲಿ ವಾಸವಾಗಿದ್ದರು.

    ಅರಣ್ಯ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವತಾರ್ ಸಿಂಗ್ ಅವರು 1 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಅವರ ನಿವೃತ್ತಿಗೆ ಇನ್ನು ಎರಡೇ ವರ್ಷಗಳು ಬಾಕಿಯಿದ್ದವು. ಆದರೆ ಇಂದು ಬೆಳಗ್ಗೆ ವಾಕಿಂಗ್ ಹೋಗಿ ವಾಪಸ್ ಮನೆಗೆ ಬಂದ ಅವತಾರ್ ಸಿಂಗ್ ಬಳಿಕ ತಮ್ಮ ರೂಂ ಸೇರಿಕೊಂಡಿದ್ದರು. ಈ ವೇಳೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

    1990ರ ಬ್ಯಾಚ್‍ನ ಎಕ್ಸ್ ಕೆಡರ್ ಐಎಫ್‍ಎಸ್ ಅಧಿಕಾರಿಯಾಗಿದ್ದ ಅವತಾರ್ ಸಿಂಗ್ ಅವರು ಕೋಲಾರದಿಂದ ಕೆಲಸ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆ, ಮಂಡಳಿಗಳಲ್ಲಿ ಕೆಲಸ ನಿರ್ವಹಿಸಿದ್ದರು. ಶನಿವಾರ ಅರಣ್ಯಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

    ಅವತಾರ್ ಸಿಂಗ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.