Tag: ifs

  • UPSC Results – ಟಾಪ್ 50ರ ಒಳಗೆ ರಾಜ್ಯದ ಇಬ್ಬರು ವೈದ್ಯರ ಸಾಧನೆ

    UPSC Results – ಟಾಪ್ 50ರ ಒಳಗೆ ರಾಜ್ಯದ ಇಬ್ಬರು ವೈದ್ಯರ ಸಾಧನೆ

    – ರಾಜ್ಯದ ಮೊದಲ 10 ಟಾಪರ್ಸ್‌

    ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾಗಿರುವ 1009 ಅಭ್ಯರ್ಥಿಗಳ ಪೈಕಿ ಶಕ್ತಿ ದುಬೆ ದೇಶದಲ್ಲಿ ನಂಬರ್‌ 1 ಸ್ಥಾನ ಪಡೆದಿದ್ದಾರೆ. ಇನ್ನೂ ಟಾಪ್‌ 50ರ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ.

    ಟಾಪ್‌ 50ರ ಒಳಗೆ ಕರ್ನಾಟಕದ ಇಬ್ಬರು ವೈದ್ಯರು ಸೇರಿದ್ದಾರೆ. ಡಾ.ರಂಗ ಮಂಜು 24ನೇ ಮತ್ತು ಡಾ.ಸಚಿನ್ ಹರಿಹರ್ 41ನೇ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಜ್ಯದ ಟಾಪರ್ಸ್‌
    – ಆರ್ ರಂಗರಾಜು – 24
    – ಸಚಿನ್ ಹರಿಹರ – 41
    – ಅನುಪ್ರಿಯಾ ಸಖ್ಯ – 120.
    – ಬಿಎಂ ಮೇಘನಾ – 425.
    – ಮಾಧವಿ ಆರ್ – 446
    – ಭರತ್ ಸಿ ಯಾರಂ – 567
    – ಡಾ.ಭಾನುಪ್ರಕಾಶ್ – 523
    – ನಿಖಿಲ್ ಎಂಆರ್- 724
    – ಟಿ ವಿಜಯ್ ಕುಮಾರ್ – 894.
    – ಹನುಮಂತಪ್ಪ ನಂದಿ – 910.
    – ವಿಶಾಕ ಕದಂ – 962
    – ಸಂದೀಪ್ ಸಿಂಗ್ – 981
    – ಮೋಹನ್ ಪಾಟೀಲ್ – 984

    ದೇಶದ ಮೊದಲ 10 ಟಾಪರ್ಸ್‌: ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೊಮ್ಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ

    1009 ಅಭ್ಯರ್ಥಿಗಳು ತೇರ್ಗಡೆ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

    ವಿಶೇಷ ಚೇತನರ ವಿಭಾಗದಿಂದ 45, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಅಭ್ಯರ್ಥಿಗಳು ಪಿಡಬ್ಲ್ಯೂಬಿಡಿ-1 (ದೃಷ್ಟಿಹೀನ), 8 ಪಿಡಬ್ಲ್ಯೂಬಿಡಿ-2 (ಶ್ರವಣದೋಷ), 16 ಪಿಡಬ್ಲ್ಯೂಬಿಡಿ-3 (ಚಲನಾ ದುರ್ಬಲತೆ) ಮತ್ತು 9 ಪಿಡಬ್ಲ್ಯೂಬಿಡಿ-5 (ಇತರ ಅಂಗವೈಕಲ್ಯ) ಅಭ್ಯರ್ಥಿಗಳಿದ್ದಾರೆ.

    2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪೈಕಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.

  • UPSC ಪರೀಕ್ಷೆ 2024 ಫಲಿತಾಂಶ ಪ್ರಕಟ – ಪ್ರಯಾಗ್‌ರಾಜ್‌ನ ಶಕ್ತಿ ದುಬೆ ದೇಶಕ್ಕೇ ಟಾಪರ್‌

    UPSC ಪರೀಕ್ಷೆ 2024 ಫಲಿತಾಂಶ ಪ್ರಕಟ – ಪ್ರಯಾಗ್‌ರಾಜ್‌ನ ಶಕ್ತಿ ದುಬೆ ದೇಶಕ್ಕೇ ಟಾಪರ್‌

    ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವೆಗಳ ಪರೀಕ್ಷೆಯ (CSE) ಫಲಿತಾಂಶವನ್ನು ಇಂದು (ಏ.22) ಪ್ರಕಟವಾಗಿದೆ. ಒಟ್ಟು 1,009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, 2018ರಿಂದ ಯುಪಿಎಸ್‌ಸಿ ತಯಾರಿ ನಡೆಸುತ್ತಿದ್ದ ಪ್ರಯಾಗ್‌ರಾಜ್‌ನ ಶಕ್ತಿ ದುಬೆ (Shakti Dubey) ಪ್ರಥಮ ರ‍್ಯಾಂಕ್‌ನೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹರ್ಷಿತಾ ಗೋಯಲ್ 2ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

    ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 1,129 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೈಕಿ ಭಾರತೀಯ ಆಡಳಿತ ಸೇವೆ (IAS) ನ 180 ಹುದ್ದೆಗಳು, ಭಾರತೀಯ ವಿದೇಶಾಂಗ ಸೇವೆ (IFS) ನ 55 ಹುದ್ದೆಗಳು ಮತ್ತು ಭಾರತೀಯ ಪೊಲೀಸ್ ಸೇವೆ (IPS) ನ 147 ಹುದ್ದೆಗಳು ಸೇರಿವೆ. ಇದನ್ನೂ ಓದಿ: ಸಂಸತ್ತೇ ಸರ್ವೋಚ್ಚ, ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್‌ ಮಾಸ್ಟರ್ಸ್‌: ಧನಕರ್‌

    ಫಲಿತಾಂಶದಲ್ಲಿ ಉತ್ತರ ಪ್ರದೇಶ (Uttar Pradesh) ಪ್ರಯಾಗ್‌ರಾಜ್‌ ಮೂಲದ ಶಕ್ತಿ ದುಬೆ, ಯುಪಿಎಸ್‌ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಶಕ್ತಿ ದುಬೆ, ಬನಾರಸ್‌ ವಿವಿಯಲ್ಲಿ ಜೀವ ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2018ರಿಂದಲೂ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದ ಶಕ್ತಿ ಪರಿಶ್ರಮಕ್ಕಿಂದು ಫಲ ಸಿಕ್ಕಿದೆ. ಇದನ್ನೂ ಓದಿ: ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್‌ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್‌

    ‌ಯುಪಿಎಸ್‌ಸಿ ಟಾಪ್‌-10 ಟಾಪರ್ಸ್‌ ಯಾರು?
    ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೋಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ ಕ್ರಮವಾಗಿ ಅಗ್ರ 10 ರ‍್ಯಾಂಕ್‌ಗಳಲ್ಲಿದ್ದಾರೆ. ಇದನ್ನೂ ಓದಿ: 1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

    1009 ಅಭ್ಯರ್ಥಿಗಳು ತೇರ್ಗಡೆ:
    ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

    ವಿಶೇಷ ಚೇತನರ ವಿಭಾಗದಿಂದ 45, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಅಭ್ಯರ್ಥಿಗಳು ಪಿಡಬ್ಲ್ಯೂಬಿಡಿ-1 (ದೃಷ್ಟಿಹೀನ), 8 ಪಿಡಬ್ಲ್ಯೂಬಿಡಿ-2 (ಶ್ರವಣದೋಷ), 16 ಪಿಡಬ್ಲ್ಯೂಬಿಡಿ-3 (ಚಲನಾ ದುರ್ಬಲತೆ) ಮತ್ತು 9 ಪಿಡಬ್ಲ್ಯೂಬಿಡಿ-5 (ಇತರ ಅಂಗವೈಕಲ್ಯ) ಅಭ್ಯರ್ಥಿಗಳಿದ್ದಾರೆ.

  • ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

    ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

    ಬೆಂಗಳೂರು: ಕರ್ನಾಟಕ ಅರಣ್ಯ ಪಡೆಗಳ(Forest Force) ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ(Meenakshi Negi) ನೇಮಕಗೊಂಡಿದ್ದಾರೆ. ಮೊದಲ ಬಾರಿಗೆ ಮಹಿಳಾ ಅಧಿಕಾರಿ ಚುಕ್ಕಾಣಿ ಹಿಡಿದಿದ್ದಾರೆ.

    ಹಿರಿಯ ಐಎಫ್‌ಎಸ್(IFS) ಅಧಿಕಾರಿಯಾಗಿದ್ದ ಮೀನಾಕ್ಷಿ ನೇಗಿ ಉತ್ತರಾಖಂಡ ರಾಜ್ಯದವರು. ಐಎಫ್‌ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಯಾಗಿದ್ದ ಅವರು 1989ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ

    ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿಯೂ ಡಿಸಿಎಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮೀನಾಕ್ಷಿ ನೇಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಆಗಿದ್ದರು. ಇದನ್ನೂ ಓದಿ: ಕುಂಭಮೇಳಕ್ಕೆ ತೆರಳುತ್ತಿದ್ದಾಗ ಅಪಘಾತ: ಹಾಸನದ ಬಿಜೆಪಿ ಯುವ ಕಾರ್ಯಕರ್ತ ಸಾವು

    ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಕುರಿತು ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ. ಆದಾದ ಬಳಿಕ ಮೀನಾಕ್ಷಿ ವೇಗಿ ಅವರನ್ನು ಕೇಂದ್ರ ಸರ್ಕಾರದ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ʻಮಹಾʼ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ತನಿಖೆ ಶುರು

  • ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ಮೊದಲ ಮಹಿಳಾ ಅಧಿಕಾರಿ

    ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ಮೊದಲ ಮಹಿಳಾ ಅಧಿಕಾರಿ

    ನವದೆಹಲಿ: ಪಾಕಿಸ್ತಾನದ (Pakistan) ಭಾರತದ ಹೈಕಮಿಷನ್‌ (High Commission) ಕಚೇರಿಗೆ ಮೊದಲ ಮಹಿಳಾ ಅಧಿಕಾರಿಯಾಗಿ ಐಎಫ್‌ಎಸ್‌ ಅಧಿಕಾರಿ ಗೀತಿಕಾ ಶ್ರೀವಾಸ್ತವ (Geetika Srivastava) ನೇಮಕಗೊಂಡಿದ್ದಾರೆ.

    ಗೀತಿಕಾ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನರ್‌ ಕಚೇರಿಗೆ ನೇಮಕವಾಗಿದ್ದಾರೆ. ಶೀಘ್ರದಲ್ಲೇ ಇಸ್ಲಾಮಾಬಾದ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: CWRC ಶಿಫಾರಸ್ಸು ಎತ್ತಿ ಹಿಡಿದ CWMA – ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಸಾಧ್ಯತೆ

    ಗೀತಿಕಾ ಶ್ರೀವಾಸ್ತವ ಅವರು 2005 ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ. ಅವರು ಈ ಹಿಂದೆ 2007 ರಿಂದ 2009 ರ ನಡುವೆ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

    ಕೋಲ್ಕತ್ತಾದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಹಿಂದೂ ಮಹಾಸಾಗರ ವಲಯ ವಿಭಾಗದ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಜನತೆಗೆ ಸಿಹಿ ಸುದ್ದಿ- ಎಲ್‌ಪಿಜಿ ಸಿಲಿಂಡರ್‌ ಬೆಲೆ 200 ರೂ. ಕಡಿತ

    ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಕಾರ್ಯಾಚರಣೆಗೆ ಇಸ್ಲಾಮಾಬಾದ್‌ ಮತ್ತು ನವದೆಹಲಿಯಲ್ಲಿ 2019 ರಿಂದ ಯಾರೂ ಹೈಕಮಿಷನರ್‌ಗಳಿಲ್ಲ.

    ಈ ಹಿಂದೆಯೂ ಭಾರತೀಯ ಮಹಿಳೆಯರು ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇಷ್ಟು ಉನ್ನತ ಹುದ್ದೆಗೆ ಯಾರೂ ಹೋಗಿರಲಿಲ್ಲ ಎನ್ನಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

    ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

    ನ್ಯೂಯಾರ್ಕ್‌: ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ಇಂದು ನೇಮಕ ಮಾಡಲಾಗಿದೆ.

    ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) 1987ರ ಬ್ಯಾಚ್‌ನ ಅಧಿಕಾರಿಯಾಗಿರುವ ರುಚಿರಾ ಅವರು ಪ್ರಸ್ತುತ ಭೂತಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದರು. ಇದೀಗ ಟಿ.ಎಸ್.ತಿರುಮೂರ್ತಿ ಅವರ ನಿವೃತ್ತಿ ನಂತರ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಯಾಗಲಿದ್ದಾರೆ. ಅವರು ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ

    ಅಲ್ಲದೆ ರುಚಿರಾ ಅವರು 1991-96ರ ಅವಧಿಯಲ್ಲಿ ಪಶ್ಚಿಮ ಯೂರೋಪ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಫ್ರಾನ್ಸ್, ಯುಕೆ, ಬೆನೆಲಕ್ಸ್ ದೇಶಗಳು, ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳೊಂದಿಗೆ ವ್ಯವಹರಿಸಿದ್ದರು. ಕಾಮನ್‌ವೆಲ್ತ್ ದೇಶಗಳೊಂದಿಗಿನ ಸಂಬಂಧವನ್ನೂ ನಿರ್ವಹಿಸಿದ್ದರು. 2011-14ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಶಿಷ್ಟಾಚಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಹಡಗು- 15 ಮಂದಿಯ ರಕ್ಷಣೆ

    ಪ್ರಸಕ್ತ ವರ್ಷದಲ್ಲಿ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ನೇಮಗೊಂಡ ಐಎಫ್‌ಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.

    Live Tv

  • ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹೈದರಾಬಾದ್: ಮಹಿಳಾ ಅರಣ್ಯಾಧಿಕಾರಿ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರೆಸ್) ಕಾರ್ಯಕರ್ತರು ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ, ಸಸಿ ನೆಡುವ ಮೂಲಕ ಅರಣ್ಯಾಧಿಕಾರಿಗಳು ತಕ್ಕ ಉತ್ತರ ನೀಡಿದ್ದಾರೆ.

    ಸುಮಾರು 400ಕ್ಕೂ ಹೆಚ್ಚು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಮಹಿಳಾ ಅಧಿಕಾರಿಗೆ ಬೆಂಬಲ ಸೂಚಿಸಿ, ಟಿಆರ್‍ಎಸ್ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜೂನ್ 30 ರಂದು ಮಹಿಳಾ ಅರಣ್ಯಾಧಿಕಾರಿ ಚೋಲೆ ಅನಿತಾ ಅವರನ್ನು ಟಿಆರ್‍ಎಸ್ ಕಾರ್ಯಕರ್ತರು ಕೋಲುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಜು.1ರಂದು ಸುಮಾರು 400ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಾಲು ಸಾಲು ಸಸಿ ನೆಡುವ ಮೂಲಕ ಅನಿತಾ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 400ಕ್ಕೂ ಹೆಚ್ಚು ಅಧಿಕಾರಿಗಳು ಸಸಿ ನೆಡುವ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ ನಲ್ಲಿ ಅಭಿಯಾನವನ್ನೇ ಪ್ರಾರಂಭಿಸಲಾಗಿದೆ.

    ವಿಡಿಯೋ ಹಾಕುವಾಗ ಕೆಲವು ಸಾಲುಗಳನ್ನು ಬರೆದಿರುವ ಪರ್ವೀಣ್ ಕಸ್ವಾನ್, ‘ಮಹಿಳಾ ರೇಂಜ್ ಆಫೀಸರ್ ಮೇಲೆ ಹಲ್ಲೆ ಮಾಡಿದ ಸ್ಥಳದಲ್ಲೇ ಸುಮಾರು 400ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಇತರರಿಂದ ಸಸಿ ನೆಡಲಾಗಿದೆ. ಈ ವೇಳೆ ಎಲ್ಲ ಹಿರಿಯ ಅಧಿಕಾರಿಗಳೂ ಸಹ ಉಪಸ್ಥಿತರಿದ್ದರು. ಅಕ್ರಮವಾಗಿ ಒತ್ತುವರಿ ಮಾಡುವುದನ್ನು ತಡೆಯಲು ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಹಲ್ಲೆ ಖಂಡಿಸಿ ಪ್ರತಿಕ್ರಿಯಿಸಲು ಇದೊಂದು ಉತ್ತಮ ಹೆಜ್ಜೆಯಾಗಿದೆ’ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಸಾಲಾಗಿ ನಿಂತಿರುವ ಅಧಿಕಾರಿಗಳ ಚಿತ್ರವನ್ನು ಹಾಕಿ ‘ಇದು ನಮ್ಮ ಪ್ರತಿಕ್ರಿಯೆ, ಚಿತ್ರವನ್ನು ಜೂಮ್ ಮಾಡಿ ನೋಡಿ, ಅದೇ ಜಾಗ. ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವುದು ಮಾತ್ರವಲ್ಲ, ಹಲ್ಲೆಗೆ ಪ್ರತಿಕ್ರಿಯೆ ನೀಡುವುದು ಆಗಿದೆ’ ಎಂದು ಬರೆದಿದ್ದು, ಇದೀಗ ಟ್ವಿಟ್ಟರ್‍ ನಲ್ಲಿ ಚಿತ್ರ ವೈರಲ್ ಆಗಿದೆ.

  • ನಾಗರಹೊಳೆ ಅರಣ್ಯದಲ್ಲಿ ಆನೆ ದಾಳಿಗೆ ಮುಖ್ಯ ಅರಣ್ಯಾಧಿಕಾರಿ ಬಲಿ

    ನಾಗರಹೊಳೆ ಅರಣ್ಯದಲ್ಲಿ ಆನೆ ದಾಳಿಗೆ ಮುಖ್ಯ ಅರಣ್ಯಾಧಿಕಾರಿ ಬಲಿ

    ಮೈಸೂರು: ಆನೆ ದಾಳಿಗೆ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಮಣಿಕಂಠನ್ (45) ಮೃತಪಟ್ಟಿದ್ದಾರೆ.  ಹೆಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ನಾಗರಹೊಳೆ ಅರಣ್ಯ ಪ್ರದೇಶದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

    ಇಂದು ಫೈರ್ ಲೈನ್  ಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸರ್ವೆ ನಡೆಸುತ್ತಿದ್ದರು. ಸ್ವತಃ ಸರ್ವೆ ನಡೆಸಲು ಸಿಎಫ್ ಮಣಿಕಂಠನ್ ಕಾಡಿನೊಳಗೆ ನುಗ್ಗಿದ್ದರು. ಈ ವೇಳೆ ಏಕಾಏಕಿ ಆನೆಯೊಂದು ಬಂದು ದಾಳಿ ನಡೆಸಿದೆ. ತಕ್ಷಣವೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಣಿಕಂಠನ್ ಸಾವನ್ನಪ್ಪಿದ್ದಾರೆ.

    ತಮಿಳುನಾಡು ಮೂಲದ 2001 ಎಎಫ್‍ಎಸ್ ಬ್ಯಾಚ್ ಅಧಿಕಾರಿಯಾಗಿದ್ದ ಮಣಿಕಂಠನ್ ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷಗಳಿಂದ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕರಾಗಿದ್ದರು.

    ಮಣಿಕಂಠನ್ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಪಾರ್ಥಿವ ಶರೀರ ತರಲಾಗಿದೆ.

  • ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಬುಲೆಟ್ ರೈಲು ಯೋಜನೆ ಸೇರಿದಂತೆ ಎರಡು ದೇಶಗಳ ನಡುವೆ ನಡೆದ ಮಹತ್ವದ ಒಪ್ಪಂದಗಳಿಗೆ ಎರಡು ಭಾಷೆಗಳ ಸೇತುವೆಯಾಗಿ ಕೆಲಸ ಮಾಡಿದವರು ಕರ್ನಾಟಕದ ಮಣ್ಣಿನ ಮಗ ರಾಜೇಶ ನಾಯ್ಕ.

    ರಾಜೇಶ ನಾಯ್ಕ ಭಾರತದ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಡೀ ವಿದೇಶಾಂಗ ಇಲಾಖೆಯಲ್ಲಿಯೇ ಜಪಾನಿ ಭಾಷೆಯನ್ನು ಕಲಿತು ಸುಲಲಿತವಾಗಿ ಮಾತನಾಡಬಲ್ಲ ವಿಶಿಷ್ಟತೆಯನ್ನು ಹೊಂದಿದ್ದಾರೆ. ಇವರಿಗೆ ಬುಲೆಟ್ ರೈಲು ಯೋಜನೆ, ಜಪಾನ್ ಪ್ರಧಾನಿ ಶಿಂಬೊ ಅಬೆ ಅವರ ಬಗ್ಗೆ ಹೇಳಿ ಅವರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ನೀಡಿತ್ತು. ಇದಕ್ಕಾಗಿ ತಿಂಗಳುಗಟ್ಟಲೇ ಶ್ರಮವಹಿಸಿ ದುಡಿದು, ಮಹತ್ವದ ಕಾರ್ಯವನ್ನು ರಾಜೇಶ ನಾಯ್ಕ ಯಶಸ್ವಿಗೊಳಿಸಿದ್ದಾರೆ.

    ರಾಜೇಶ್ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇವರು ವಕೀಲ ಎನ್.ಡಿ.ನಾಯ್ಕ ಐಸೂರು ಮತ್ತು ಲಕ್ಷ್ಮೀ ನಾಯ್ಕ ದಂಪತಿಯ ನಾಲ್ಕನೇ ಪುತ್ರ. 10 ನೇ ತರಗತಿ ಓದುತ್ತಿದ್ದಾಗಲೇ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು.

    ಮೊದಲು ಕೆಎಎಸ್ ಪರೀಕ್ಷೆಯನ್ನು ಬರೆದು ಅದರಲ್ಲಿ 7ನೇ ರ‍್ಯಾಂಕ್‌ ಪಡೆದು ಉತ್ತೀರ್ಣರಾಗಿದ್ದ ರಾಜೇಶ್ ಅವರು ಕೆಲವು ದಿನಗಳ ಕಾಲ ಉಡುಪಿ ಜಿಲ್ಲೆಯ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಕನಸಿನತ್ತಾ ಸಾಗಲು ಉತ್ಸುಕತೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2009 ರಲ್ಲಿ ಸಿಎಸ್‍ಇ ಬ್ಯಾಚ್‍ನಲ್ಲಿ 260 ನೇ ರ್ಯಾಂಕ್ ಪಡೆದು ವಿದೇಶಾಂಗ ಇಲಾಖೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.