Tag: IED blast

  • ಛತ್ತೀಸ್‌ಗಢ | ಸೂಕ್ಮಾದಲ್ಲಿ ನಕ್ಸಲರಿಂದ ಐಇಡಿ ಬ್ಲಾಸ್ಟ್‌ – ಎಎಸ್ಪಿ ಆಕಾಶ್ ರಾವ್ ಸಾವು, ಹಲವರಿಗೆ ಗಾಯ

    ಛತ್ತೀಸ್‌ಗಢ | ಸೂಕ್ಮಾದಲ್ಲಿ ನಕ್ಸಲರಿಂದ ಐಇಡಿ ಬ್ಲಾಸ್ಟ್‌ – ಎಎಸ್ಪಿ ಆಕಾಶ್ ರಾವ್ ಸಾವು, ಹಲವರಿಗೆ ಗಾಯ

    ರಾಯ್ಪರ್‌: ಛತ್ತಿಸ್‌ಗಢದ (Chhattisgarh) ಸೂಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ (ಸುಧಾರಿತ ಸ್ಪೋಟಕ ಸಾಧನ) ಸ್ಫೋಟದಲ್ಲಿ (IED Blast) ಸ್ಥಳೀಯ ಎಎಸ್ಪಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಮೃತ ಎಎಸ್‌ಪಿಯನ್ನು (ASP) ಆಕಾಶ್ ರಾವ್ ಗಿರಿಪುಂಜೆ ಎಂದು ಗುರುತಿಸಲಾಗಿದೆ. ಕೊಂಟಾ-ಎರಾಬೋರ್ ರಸ್ತೆಯ ದೋಂಡ್ರಾ ಬಳಿ ನಡೆದ ಘಟನೆಯಲ್ಲಿ ಡಿಎಸ್‌ಪಿ ಮತ್ತು ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಕೊಂಟಾದಲ್ಲಿ ನಕ್ಸಲರೇ ಪೊಲೀಸರನ್ನ ಟ್ರ್ಯಾಪ್‌ ಮಾಡಿದ್ದಾರೆ. ಮೊದಲು ಸುಳ್ಳು ಸುದ್ದಿಯೊಂದನ್ನ ಹಬ್ಬಿಸಿದ್ದಾರೆ, ಇದನ್ನ ನಂಬಿ ಪೊಲೀಸರ ತಂಡ ಹೊರಕೆ ಬರ್ತಿದ್ದಂತೆ ಐಇಡಿ ಸ್ಫೋಟಗೊಂಡಿದೆ. ಈ ವೇಳೆ ಗಿರಿಪುಂಜೆ ಜೊತೆಗೆ ಇತರ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಎಲ್ಲರನ್ನು ಚಿಕಿತ್ಸೆಗಾಗಿ ಕೊಂಟಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ಎಎಸ್ಪಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

    ಜೂನ್‌ 10ರಂದು ಸಿಪಿಐ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಮುಂಚಿತವಾಗಿ ಸಂಭಾವ್ಯ ನಕ್ಸಲ್‌ ಚಟುವಟಿಕೆ ತಡೆಗಟ್ಟುವ ಕರ್ತವ್ಯದಲ್ಲಿ ಗಿರಿಪುಂಜೆ ನಿರತರಾಗಿದ್ದರು. ಎಎಸ್ಪಿ ಸಾವಿಗೆ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

    ಈ ತಿಂಗಳ ಆರಂಭದಲ್ಲಿ ಪಿಎಲ್‌ಜಿಎ ಬೆಟಾಲಿಯನ್‌ನ ಇಬ್ಬರು ಸದಸ್ಯರು ಸೇರಿದಂತೆ 16 ನಕ್ಸಲರು ಸೂಕ್ಮಾದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದರು. ಈ ಪೈಕಿ 6 ಜನರ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಮತ್ತೊಬ್ಬರು ಮಹಿಳೆ ಮತ್ತು ಒಬ್ಬ ಪುರುಷ ಕೇಡರ್‌ಗೆ ತಲಾ 8 ಲಕ್ಷ ರೂ. ಬಹುಮಾನವಿತ್ತು. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

  • ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ

    ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ

    – ನಕ್ಸಲರ ದಾಳಿಗೆ ಛತ್ತೀಸ್‌ಗಢ ಮುಖ್ಯಮಂತ್ರಿ ತೀವ್ರ ಖಂಡನೆ

    ನವದೆಹಲಿ: ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು (Naxals) ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿ ಸ್ಫೋಟಿಸಿದ ಘಟನೆ ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ 8 ಡಿಆರ್‌ಜಿ ಜವಾನರು, ಓರ್ವ ಚಾಲಕ ಮೃತಪಟ್ಟಿದ್ದಾರೆ. ಕಳೆದ 2 ವರ್ಷಗಳಲ್ಲಿ ಇದು ಅತಿದೊಡ್ಡ ನಕ್ಸಲ್‌ ದಾಳಿ ಎಂದು ವರದಿಗಳು ತಿಳಿಸಿವೆ. ನಕ್ಸಲರ ಈ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅಮಿತ್‌ ಶಾ ಅವರು, ಮಾರ್ಚ್ 2026 ರೊಳಗೆ ಭಾರತದಿಂದ ನಕ್ಸಲಿಸಂ ಅನ್ನು ಕೊನೆಗೊಳಿಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.

    ಬಿಜಾಪುರದಲ್ಲಿ (ಛತ್ತೀಸ್‌ಗಢ) ಐಇಡಿ ಸ್ಫೋಟದಲ್ಲಿ ಡಿಆರ್‌ಜಿ ಯೋಧರನ್ನು ಕಳೆದುಕೊಂಡ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ವೀರ ಯೋಧರ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪ ತಿಳಿಸುತ್ತೇನೆ. ಈ ದುಃಖವನ್ನು ಪದಗಳಲ್ಲಿ ಹೇಳಲು ಅಸಾಧ್ಯ, ಆದರೆ ನಾನು ಭರವಸೆ ನೀಡುತ್ತೇನೆ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ. ಮಾರ್ಚ್ 2026ರ ಒಳಗೆ ನಕ್ಸಲಿಸಂ ಅನ್ನು ಭಾರತದಿಂದ ಕೊನೆಗೊಳಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.

    ಅಲ್ಲದೇ ಛತ್ತೀಸ್‌ಗಢ ಸಿಎಂ ಕೂಡ ಈ ದಾಳಿಯನ್ನು ಖಂಡಿಸಿ‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸರ್ಕಾರದ ನಕ್ಸಲ್‌ ನಿರ್ಮೂಲನಾ ಯೋಜನೆಯಿಂದ ನಕ್ಸಲಿಗರು ಹತಾಶರಾಗಿದ್ದಾರೆ. ಹತಾಶೆಯಿಂದ ಈ ಹೇಡಿತನದ ಕೃತ್ಯ ಎಸಗಿದ್ದಾರೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲ್ಲ. ನಕ್ಸಲಿಸಂ ಅಂತ್ಯಗೊಳಿಸುವ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

  • ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ರಾಯ್ಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ (CRPF) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಸುಕ್ಮಾ (Sukma) ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

    ಸುಕ್ಮಾ ಜಿಲ್ಲೆಯ ಸಿಲ್ಗರ್ ಮತ್ತು ತೆಕುಲಗುಡೆಮ್ ಗ್ರಾಮಗಳ ನಡುವೆ ನಕ್ಸಲರು ಐಇಡಿ ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ನೌಕಪಡೆಯಿಂದ ಭಾರತದ 22 ಮೀನುಗಾರರ ಅರೆಸ್ಟ್

    ಸಿಆರ್‌ಪಿಎಫ್‌ನ ಕೋಬ್ರಾ 201 ಬೆಟಾಲಿಯನ್‌ನ ಸಿಬ್ಬಂದಿ, ಸಿಲ್ಗರ್‌ನಿಂದ ಟೇಕುಲಗುಡೆಮ್ ಕ್ಯಾಂಪ್‌ಗಳಿಗೆ ಅದರ ರಸ್ತೆ ಉದ್ಘಾಟನೆಯ ಅಂಗವಾಗಿ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಐಇಡಿ ಸ್ಫೋಟಗೊಂಡು ಘಟನೆ ನಡೆದಿದೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

    ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಯನ್ನು ಕೇರಳದ ತಿರುವನಂತಪುರದ ವಿಷ್ಣು ಆರ್ (35) ಮತ್ತು ಉತ್ತರ ಪ್ರದೇಶದ ಕಾನ್ಪುರದ ಶೈಲೇಂದ್ರ (29) ಎಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ

  • ಛತ್ತೀಸ್‍ಗಢದಲ್ಲಿ ಐಇಡಿ ಸ್ಫೋಟ- ಇಬ್ಬರು ಕಾರ್ಮಿಕರ ದುರ್ಮರಣ

    ಛತ್ತೀಸ್‍ಗಢದಲ್ಲಿ ಐಇಡಿ ಸ್ಫೋಟ- ಇಬ್ಬರು ಕಾರ್ಮಿಕರ ದುರ್ಮರಣ

    ರಾಯ್‍ಪುರ: ಕಬ್ಬಿಣದ ಅದಿರು ಗಣಿಯೊಂದರ ಬಳಿ ಸುಧಾರಿತ ಸ್ಫೋಟಕ (IED Blast) ಸ್ಫೋಟದಿಂದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಛತ್ತೀಸ್‍ಗಢದ (Chhattisgarh) ನಾರಾಯಣಪುರ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

    ಮೃತರನ್ನು ನಾರಾಯಣಪುರದ ರಿತೇಶ್ ಗಗ್ಡಾ (21) ಮತ್ತು ಶ್ರವಣ್ ಗಗ್ಡಾ (24) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವನನ್ನು ಉಮೇಶ್ ರಾಣಾ ಎಂದು ಗುರುತಿಸಲಾಗಿದೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ರಾಜ್ಯದ ರಾಜಧಾನಿ ರಾಯ್‍ಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಆಮ್ಡೈ ಘಾಟಿ ಕಬ್ಬಿಣದ ಅದಿರು ಗಣಿಗೆ ಮೂವರು ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲಿನ ಸರ್ಕಾರ ಜೆಎನ್‍ಐಎಲ್ ಸಂಸ್ಥೆಗೆ ಈ ಕಬ್ಬಿಣದ ಅದಿರು ಗಣಿ ನೀಡಿದೆ. ಈ ಯೋಜನೆಗೆ ಮಾವೋವಾದಿಗಳ ವಿರೋಧವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಫೋಟ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನವೆಂಬರ್ 6 ರಂದು ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಹಿಂದಿನ ದಿನ ಕಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಸಿಡಿಸಿದ ಐಇಡಿ ಸ್ಫೋಟದಲ್ಲಿ ಇಬ್ಬರು ಚುನಾವಣಾ ಸಿಬ್ಬಂದಿ ಮತ್ತು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಜವಾನ ಗಾಯಗೊಂಡಿದ್ದರು. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೇಗೆ ಕರೆತರುತ್ತಾರೆ ಗೊತ್ತಾ? – ಪ್ರಾತ್ಯಕ್ಷಿಕೆ ವಿಡಿಯೋ ನೋಡಿ..

  • ದಾಂತೇವಾಡ ಸ್ಫೋಟ ಪ್ರಕರಣ- ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳು ಅರೆಸ್ಟ್

    ದಾಂತೇವಾಡ ಸ್ಫೋಟ ಪ್ರಕರಣ- ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳು ಅರೆಸ್ಟ್

    ರೈಪುರ್: ದಾಂತೇವಾಡ (Dantewada) ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳನ್ನು (Maoists) ಛತ್ತೀಸ್‍ಗಢದ (Chhattisgarh) ಪೊಲೀಸರು ಬಂಧಿಸಿದ್ದಾರೆ.

    ನಾಲ್ವರು ಮಾವೋವಾದಿಗಳನ್ನು ಬುಧ್ರಾ ಮದ್ವಿ, ಜಿತೇಂದ್ರ ಮುಚಕಿ, ಹಿದ್ಮಾ ಮಡ್ಕಮ್ ಮತ್ತು ಹಿದ್ಮಾ ಮದ್ವಿ ಎಂದು ಗುರುತಿಸಲಾಗಿದೆ. ಇವರೆಲ್ಲ ನಿಷೇಧಿತ ಸಿಪಿಐನ ದರ್ಭಾ ವಿಭಾಗದ (Darbha Division) ಸದಸ್ಯರಾಗಿದ್ದಾರೆ. ಅಪ್ರಾಪ್ತರು 15 ರಿಂದ 17 ವರ್ಷದವರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

    ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಓರ್ವನನ್ನು ಜೈಲಿನಲ್ಲಿರಿಸಲಾಗಿದೆ. ಅಪ್ರಾಪ್ತರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏ. 26 ರಂದು ದಾಂತೇವಾಡದಲ್ಲಿ ಮಾವೋವಾದಿಗಳು, ಜವಾನರನ್ನು ಸಾಗಿಸುತ್ತಿದ್ದ ವಾಹನವನ್ನು ಐಇಡಿ ಬಳಸಿ ಸ್ಫೋಟಿಸಿದ್ದರು (IED Blast). ಸ್ಪೋಟದಲ್ಲಿ ಹತ್ತು ಜಿಲ್ಲಾ ಶಸ್ತ್ರಾಸ್ತ್ರ ಪಡೆಯ ಯೋಧರು (DRG) ಮತ್ತು ಓರ್ವ ಸ್ಥಳೀಯ ಚಾಲಕ ಸಾವನ್ನಪ್ಪಿದ್ದರು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

  • ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ

    ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ

    ರಾಯ್ಪುರ: ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಛತ್ತೀಸ್‍ಗಢದ ದಂತೇವಾಡದ ಬೊಡ್ಲಿ ಬಳಿ ನಡೆದಿದೆ.

    ಹುತಾತ್ಮರಾದ ಯೋಧ ಬಿಹಾರದ ನವಾಡಾ ಮೂಲದ ರೋಶನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಸಿಆರ್‌ಪಿಎಫ್ ನ 195 ಬೆಟಾಲಿಯನ್‍ನ ಭಾಗವಾಗಿದ್ದರು. ಮಂಗಳವಾರ ಬೆಳಿಗ್ಗೆ 6:15 ರ ಸುಮಾರಿಗೆ ದಂತೇವಾಡ-ಜಗದಾಲ್‍ಪುರ ಗಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಗಡಿಯಲ್ಲಿದ್ದ ಮಾಲೆವಾಹಿ ಸಿಆರ್‌ಪಿಎಫ್ ಶಿಬಿರದಿಂದ ಸುಮಾರು 700 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.

    ಸ್ಫೋಟಗೊಂಡ ಐಇಡಿ ಬಾಂಬ್‍ನಲ್ಲಿ ಒತ್ತಡದ ಕಾರ್ಯವಿಧಾನವನ್ನು ಬಳಸಲಾಗಿದೆ ಎಂದು ವರದಿಯಾಗಿದ್ದು, ಸ್ಫೋಟಗೊಂಡ ಪ್ರದೇಶದಲ್ಲಿ ಯೋಧ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

    ಸದ್ಯ ಮೃತ ಜವಾನ್ ರೋಶನ್ ಕುಮಾರ್ ಅವರ ಮೃತದೇಹವನ್ನು ಛತ್ತೀಸ್‍ಗಢದ ಬರ್ಸೂರ್ ಗೆ  ತಂದು ಬಳಿಕ ಸ್ವಗ್ರಾಮಕ್ಕೆ ಮೃತದೇಹವನ್ನು ರವಾನಿಸಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.