Tag: Idly

  • ಬೆಂಗ್ಳೂರಿನ ಅರ್ಧದಷ್ಟು ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಿಗ್ತಿಲ್ಲ ಇಡ್ಲಿ!

    ಬೆಂಗ್ಳೂರಿನ ಅರ್ಧದಷ್ಟು ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಿಗ್ತಿಲ್ಲ ಇಡ್ಲಿ!

    ಬೆಂಗಳೂರು: ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಗಳ ಮತ್ತೊಂದು ಅವ್ಯವಸ್ಥೆಯಿದು. ಅರ್ಧ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ (Indira Canteen) ಇಡ್ಲಿ ಸೇರಿ ಕೆಲ ಉಪಹಾರವನ್ನ ನಿಲ್ಲಿಸಲಾಗಿದೆ.

    ಕೆ.ಆರ್ ಸಮೀಪದ ಎಸ್ ಪಿ ರಸ್ತೆಯಲ್ಲಿರೋ ಇಂದಿರಾ ಕಿಚನ್ ನಲ್ಲಿ ಇಡ್ಲಿ (Idli) ಸೇರಿ ಕೆಲ ಉಪಹಾವನ್ನ ತಯಾರಿಸುವ ಯಂತ್ರೋಪಕರಣಗಳು ಹಳೆಯದಾಗಿ, ಹಾಳಾಗಿವೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಗಳಿಗೆ ಇಡ್ಲಿ ಸಪ್ಲೈ ಆಗ್ತಿಲ್ಲ. ಇನ್ನೂ ಕೆಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ ಸಪ್ಲೈ ಆಗ್ತಿದೆ. ಇತ್ತ ವಿಶ್ವೇಶ್ವಪುರಂ ವಾರ್ಡ್ 174 ರ ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ಕೇಳಿದ ಗ್ರಾಹಕರ ಮೇಲೆ ಅಲ್ಲಿನ ಸಿಬ್ಬಂದಿಯೊಬ್ಬರು ದರ್ಪ ಮೆರೆದಿದ್ದಾರೆ. ಇಡ್ಲಿ ಸಿಗಲ್ಲ, ನಾವು ಕೊಟ್ಟಾಗಷ್ಟೆ ತಿನ್ನಬೇಕು. ಬೇಕಿದ್ರೆ ಪಕ್ಕದಲ್ಲೇ ಖಾಸಗಿ ಹೊಟೇಲ್ ಇದೆ. ಅಲ್ಲಿಗೆ ಹೋಗ್ರಿ ಅಂತ ಧಿಮಾಕು ತೋರಿಸ್ತಿದ್ದ ಅಸಾಮಿಯ ನಿಜ ಬಣ್ಣ ಪಬ್ಲಿಕ್ ಕ್ಯಾಮರಾದಲ್ಲಿ ಲಾಕ್ ಆಗಿದೆ.

    ಎರಡ್ಮೂರು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಬೆಳಗ್ಗಿನ ಸಮಯದಲ್ಲಿ ತಿಂಡಿ, ರಾತ್ರಿ ಹೊತ್ತಲ್ಲಿ ಊಟ ಸಿಗ್ತಿಲ್ಲ. ಇಂದಿರಾ ಕ್ಯಾಂಟೀನ್ ಗಳಿಗೆ ಊಟ ಸಪ್ಲೈ ಮಾಡೋಕೆ ಟೆಂಡರ್ ಪಡೆದಿದ್ದ ಮೂರು ಕಂಪನಿಗಳಿಗೆ ಬಿಬಿಎಂಪಿ ಹಣ ನೀಡಿಲ್ಲ. ಅಡ್ವಾನ್ಸ್ ಆಗಿ ಶೇ. 50% ರಷ್ಟು ಹಣವನ್ನ ನೀಡಬೇಕಿತ್ತು. ಈ ಹಣವನ್ನ ನೀಡದ ಕಾರಣ ಕ್ವಾಲಿಟಿ ಊಟ ಹಾಗೂ ಟೈಂ ಟು ಟೈಂ ಊಟ ತಲುಪಿಸೋಕೆ ಟೆಂಡರ್ ಪಡೆದ ಕಂಪನಿಗಳಿಗೂ ಆಗ್ತಿಲ್ಲ. ಇದನ್ನೂ ಓದಿ: ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ

    ಈ ಬಗ್ಗೆ ಕೇಳಿದ್ರೆ ಇಂದಿರಾ ಕ್ಯಾಂಟೀನ್ ಉಸ್ತುವಾರಿ ತ್ರಿಲೋಕ್ ಚಂದ್ರ, ಲೋಗೋ ತಳ್ಳಿ ನಾವೇನು ಮಾಡೋಕೆ ಆಗುತ್ತೆ ಎಂದು ಜಾರಿಕೊಳ್ಳಲು ನೋಡಿದ್ದಾರೆ.. ಇನ್ನು, ನ್ಯೂನ್ಯತೆ ಸರಿಪಡಿಸೋದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ.

  • ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

    ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

    ಕೋಲಾರ: ಕಳೆದ ಎರಡೂವರೆ ತಿಂಗಳಿಂದ ಎಲ್ಲೆಡೆ ಕೊರೊನಾ ಲಾಕ್‍ಡೌನ್ ಆಗಿ ಹೋಟೆಲ್ ಉದ್ಯಮ ಸೇರಿದಂತೆ ಜನಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿ ಜನ ಸಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಕೋಲಾರದಲ್ಲೊಬ್ಬ ಅಜ್ಜಿ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಪಾಲಿನ ಅನ್ನಪೂರ್ಣೆಶ್ವರಿಯಾಗಿದ್ದಾರೆ.

    ಪ್ರಸ್ತುತ ಕಾಲದಲ್ಲಿ ಒಂದು ಪುಟ್ಟ ಇಡ್ಲಿಗೆ ಐದು ರೂ. ಟೀ-ಕಾಫಿಗೆ 10 ರಿಂದ 20 ರೂಪಾಯಿ ಕೊಡಲೇಬೇಕು. ಇನ್ನೂ ಹೊಟ್ಟೆ ತುಂಬಾ ತಿನ್ನಬೇಕಂದ್ರೆ ಕನಿಷ್ಟ 40 ರಿಂದ 50 ರೂಪಾಯಿ ಕೊಡಲೇಬೇಕು. ಆದರೆ ಇಲ್ಲೊಬ್ಬ 85 ವರ್ಷದ ಅಜ್ಜಿ ಕಳೆದ 50 ವರ್ಷಗಳಿಂದ ಇಡ್ಲಿಯನ್ನು ನಾಲ್ಕಾಣೆ, ಐವತ್ತು ಪೈಸೆ, ಈಗ 1 ರೂಪಾಯಿಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ರೂಪಾಯಿಗೆ ಇಡ್ಲಿ ಮಾರುತ್ತಿರುವ ಈ ಅಜ್ಜಿಯ ಹೆಸರು ಸೆಲ್ವಮ್ಮ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪಂಪ್‍ಹೌಸ್ ಬಳಿ ಈ ಅಜ್ಜಿ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ಅಜ್ಜಿ ತಯಾರು ಮಾಡುವ ಇಡ್ಲಿಗೆ ಎಷ್ಟು ಬೇಡಿಕೆಯಿದೆ ಎಂದರೆ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಎಲ್ಲಾ ಇಡ್ಲಿ ಖಾಲಿಯಾಗುತ್ತೆ. ಬೆಳಗ್ಗೆ 7 ಗಂಟೆಯಿಂದಲೇ ಅಜ್ಜಿ ಮನೆ ಮುಂದೆ ತಿಂಡಿ ಖರೀದಿ ಮಾಡಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಈ ಇಳಿವಯಸ್ಸಿನಲ್ಲೂ ಪ್ರತಿದಿನ 300 ಇಡ್ಲಿ, ಚಟ್ನಿ ಸಾಂಬಾರು ಸಹ ಅಜ್ಜಿ ಒಬ್ಬರೇ ತಯಾರು ಮಾಡುತ್ತಾರೆ.

    ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳೇ ಆಗಿದೆ. ಇವರ ಬಳಿ ಹೆಚ್ಚಾಗಿ ಬಡವರು, ಗಾರ್ಮೆಂಟ್ಸ್ ಮಹಿಳೆಯರು. ಆಟೋ ಚಾಲಕರು ಪ್ರತಿ ನಿತ್ಯ ಇಡ್ಲಿ ಖರೀದಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಡಿಮೆ ಬೆಲೆಗೆ ಮಾರಾಟ ಮಾಡ್ತಿರೋದಕ್ಕೆ ಇನ್ನುಳಿದ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.