Tag: idiga

  • ಬಜೆಟ್‌ನಲ್ಲಿ ಕಡೆಗಣನೆ – ರಾಜ್ಯ ಸರ್ಕಾರಕ್ಕೆ ಈಡಿಗ ಸಮುದಾಯದಿಂದ ಎಚ್ಚರಿಕೆ

    ಬಜೆಟ್‌ನಲ್ಲಿ ಕಡೆಗಣನೆ – ರಾಜ್ಯ ಸರ್ಕಾರಕ್ಕೆ ಈಡಿಗ ಸಮುದಾಯದಿಂದ ಎಚ್ಚರಿಕೆ

    ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಬಜೆಟ್‌ನಲ್ಲಿ(Budget) ಕಡೆಗಣಿಸಿರುವುದನ್ನು ವಿರೋಧಿಸಿ ಈಡಿಗ ಸಮುದಾಯ (Idiga Community) ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಬಿಲ್ಲವ, ನಾಮಧಾರಿ ಸೇರಿದಂತೆ 26 ಉಪ ಪಂಗಡಗಳಿರುವ ಈಡಿಗ ಸಮುದಾಯ ಸರಿಸುಮಾರು 70 ರಿಂದ 80 ಲಕ್ಷ ಸಂಖ್ಯಾಬಲ ಹೊಂದಿದ್ದು, ನಮ್ಮದೇ ಆದ ನಿಗಮ ನೀಡುವುದಾಗಿ ಸರ್ಕಾರ ಭರವಸೆ ನೀಡಿ ಮಾತು ತಪ್ಪಿದೆ ಎಂದು ಈಡಿಗ ಸಮುದಾಯ ಆರೋಪಿಸಿದೆ.

    ಬೆಂಗಳೂರಿನಲ್ಲಿ‌ ಮಾತನಾಡಿದ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಸುಂಟ್ರಳ್ಳಿ , ಮೊದಲಿನಿಂದಲೂ ಸಾಮಾಜಿಕ, ಶೈಕ್ಷಣಿಕವಾಗಿ ಈಡಿಗ ಸಮುದಾಯ ತುಳಿತಕ್ಕೊಳಗಾಗುತ್ತಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯರ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿ.ಎಂ ಬಂಗಾರಪ್ಪನವರ ಹೆಸರಿಡುವಂತೆ ಈಡಿಗ ಸಮುದಾಯ ಇಟ್ಟಿದ್ದ ಬೇಡಿಕೆಗಳು ಈಡೇರಿಲ್ಲ. ಉದ್ಯೋಗದ ವಿಚಾರ ಬಂದಾಗ ನಿಗಮ ಮಂಡಳಿಯನ್ನು ನೀಡುವುದಾಗಿ ಮೂರು ವರ್ಷದಿಂದ ಸರ್ಕಾರ ಹೇಳಿಕೊಂಡು ಬಂದಿದ್ದು ಈ ಬಾರಿಯೂ ನೆರವೇರಿಲ್ಲ. ಯಾವಾಗ ಈಡಿಗ ಸಮುದಾಯ ಎಚ್ಚೆತ್ತುಕೊಂಡು ಪ್ರತಿಭಟನೆಗೆ ಮುಂದಾಯಿತೋ ಆಯಾ ಭಾಗದ ಜನನಾಯಕರ ಮೂಲಕ ಭರವಸೆಯ ನೆಪದಲ್ಲಿ ಪ್ರತಿಭಟನೆಯನ್ನ ತಣ್ಣಗಾಗಿಸಲಾಗಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸಿಎಂ ಮಾಡ್ಬೇಕು: ಭೈರತಿ ಸುರೇಶ್

    ರಾಜ್ಯ ಸರ್ಕಾರ ಬಜೆಟ್ ನಲ್ಲಿ ನಾರಾಯಣಗುರು (Narayana Guru) ವಸತಿ ಶಾಲೆಗೆ ನೀಡಿರುವ ಅನುದಾನದ ಬಗ್ಗೆ ಹೇಳಲಾಗಿದೆ. ಆದರೆ ನಾರಾಯಣಗುರು ವಸತಿ ಶಾಲೆಯಲ್ಲಿ ಕೇವಲ ಈಡಿಗ ಸಮುದಾಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿಲ್ಲ. ಅದು ಈಡಿಗ ಸಮುದಾಯಕ್ಕೆ ಸರ್ಕಾರದ ಕೊಡುಗೆಯೂ ಅಲ್ಲ. ಆದ್ದರಿಂದ ಇನ್ನುಮುಂದೆ ಈಡಿಗ ಸಮುದಾಯ ಸರಿಯಾದ ಪಾಠ ಕಲಿಸಲು ಮುಂದಾಗಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಟ ಶ್ರೀನಿವಾಸ ಪೂಜಾರಿ ಸಿಎಂ ಆಗಲಿ: ಪ್ರಣವಾನಂದ ಸ್ವಾಮೀಜಿ

    ಕೋಟ ಶ್ರೀನಿವಾಸ ಪೂಜಾರಿ ಸಿಎಂ ಆಗಲಿ: ಪ್ರಣವಾನಂದ ಸ್ವಾಮೀಜಿ

    ಕಾರವಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆ ನಂತರ ಈಡಿಗ ಸಮುದಾಯದವರೇ ಮುಖ್ಯಮಂತ್ರಿ ಆಗುತ್ತಾರೆ. ಬಿಜೆಪಿಯೂ ಹಿಂದುತ್ವವಾದಿ ಎಂದು ಹೇಳಿ ಜಾತಿ ಜಾತಿಗಳ ನಡುವೆ ಜಗಳ ಹುಟ್ಟುಹಾಕಲು ಹೊರಟಿದೆ. ಚಿಕ್ಕ ಸಮುದಾಯಕ್ಕೆ ನಿಗಮ ಮಂಡಳಿಯನ್ನು ಘೋಷಣೆ ಮಾಡುವ ಸರ್ಕಾರ ದೊಡ್ಡ ಸಮಾಜವಾದ ಆರ್ಯ ಈಡಿಗರ ಸಮುದಾಯಕ್ಕೆ ನಿಗಮ ಮಂಡಳಿಯನ್ನು ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.

    ಆರ್ಯ ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿ, 500 ಕೋಟಿ ರೂ. ಬಿಡುಗಡೆ ಮಾಡಬೇಕು. ಈಡಿಗ ಸಮಾಜದ ಕುಲಕಸಬು ಶೇಂದಿ ಇಳಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ

    ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕೇರಳ ರಾಜ್ಯ ಸರ್ಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರ (ಟ್ಯಾಬ್ಲೋ) ಪ್ರದರ್ಶನಕ್ಕೆ ಅವಕಾಶ ಕೋರಿದರೂ, ಅದರ ಬದಲು ಆದಿ ಶಂಕರಾಚಾರ್ಯರ ಟ್ಯಾಬ್ಲೋ ಮಾಡುವಂತೆ ಸೂಚಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಈಡಿಗ ಸಮುದಾಯವನ್ನು ಅಪಮಾನ ಮಾಡುತ್ತಿದೆ ಎಂದರು. ಇದನ್ನೂ ಓದಿ:  ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!