Tag: Idgah Maidan

  • ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿಂದು ಗಣೇಶ ಪ್ರತಿಷ್ಠಾಪನೆ- ಮೆರವಣಿಗೆ, ವಿಶೇಷ ಪೂಜೆಗೆ ಸಿದ್ಧತೆ

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿಂದು ಗಣೇಶ ಪ್ರತಿಷ್ಠಾಪನೆ- ಮೆರವಣಿಗೆ, ವಿಶೇಷ ಪೂಜೆಗೆ ಸಿದ್ಧತೆ

    – ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ

    ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ (Idgah Maidan) ಇಂದು ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಬೆಳಗ್ಗೆ 9.30ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಪ್ರತಿಷ್ಠಾಪನಾ ಗಣೇಶ ಮೂರ್ತಿ ಈದ್ಗಾ ಮೈದಾನಕ್ಕೆ ಕರೆಯಲಾಗುತ್ತದೆ. ಬಳಿಕ ಹಿಂದೂ ಮುಖಂಡರ ಸಮ್ಮುಖದಲ್ಲಿ ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆಯಾಗಲಿದೆ. ನಂತರ ಹೋಮ, ಹವನ ಜೊತೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಿದೆ. ತದನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

    ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಮೈದಾನದಲ್ಲಿ ನಮಾಝ್ ಮಾಡುವ ಸ್ಥಳ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ಮಧ್ಯೆ ಟೀನ್ ಶೀಟ್ ಹಾಕಿ ಅದರ ಮೇಲೆ ಪರದೆ ಕಟ್ಟಲಾಗಿದೆ. ಮೈದಾನದಲ್ಲಿ ಸುತ್ತಲೂ ಸಿಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಿದೆ. ಮೈದಾನದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ. ಖಾಕಿಪಡೆ ಫುಲ್ ಹೈಅಲರ್ಟ್ ಆಗಿದ್ದು, ಶಾಂತಿ ಭಂಗ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ

    ಹಿಂದೂ ಸಂಘಟನೆಗಳು ಪ್ರತಿಷ್ಠಾಪನೆಗೂ ಮುನ್ನ ಮೈದಾನದಲ್ಲಿ ಪೂಜೆ ಜೊತೆಗೆ ಮೈದಾನ ಶುದ್ಧಿ ಪೂಜೆ ಮಾಡಿ ಮಂಟಪ ಸಿದ್ಧಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.. ರಾಜ್ಯದ ಹೆಸರಾಂತ ಸ್ವಾಮಿಗಳು, ಹಿಂದೂಪರ ಮುಖಂಡರು ಭೇಟಿ ನೀಡಲಿದ್ದಾರೆ.. ಒಟ್ನಲ್ಲಿ ಇಂದು ನಿರ್ವಿಘ್ನವಾಗಿ ವಿನಾಯಕ ಪ್ರತಿಷ್ಠಾಪನೆಯಾಗಲಿ, ಹುಬ್ಬಳ್ಳಿ ಶಾಂತಿ ತವರು ಎಂಬ ಸಂದೇಶ ಎಲ್ಲ ಕಡೆ ಹಬ್ಬಲಿ ಎಂಬುವುದು ಇಲ್ಲಿನ ಜನರ ಆಶಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಮಣ್ಣನ ಪ್ರತಿಷ್ಠಾಪನೆಗೆ ನಿರಾಕರಣೆ- ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಹುಬ್ಬಳ್ಳಿ ಈದ್ಗಾ ಮೈದಾನ

    ಕಾಮಣ್ಣನ ಪ್ರತಿಷ್ಠಾಪನೆಗೆ ನಿರಾಕರಣೆ- ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಹುಬ್ಬಳ್ಳಿ ಈದ್ಗಾ ಮೈದಾನ

    ಹುಬ್ಬಳಿ: ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳಿ (Hubballi) ರಾಣಿ ಚೆನ್ನಮ್ಮ (Rani Chennamma) ಈದ್ಗಾ ಮೈದಾನದಲ್ಲಿ (Idgah Maidan) ಮತ್ತೆ ವಿವಾದದ ಕಿಡಿ ಹೊತ್ತಿಕೊಂಡಿದೆ. ಕಾಮಣ್ಣನ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳ ಮನವಿಗೆ ಮಹಾನಗರ ಪಾಲಿಕೆಯ ದ್ವಂದ್ವ ನೀತಿಯಿಂದಾಗಿ ಮತ್ತೆ ಈದ್ಗಾ ಮೈದಾನ ಸುದ್ದಿಯಾಗಿದೆ.

    ಹಿಂದೂಪರ ಸಂಘಟನೆಗಳ ಮನವಿಯ ಮೇರೆಗೆ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಮೆಯರ್ ಈರೇಶ್ ಅಂಚಟಗೇರಿ ಅನುಮತಿ ನೀಡಿದ್ದರು. ಆದರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನೀಡಲು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ನಿರಾಕರಣೆ ಮಾಡಿದ್ದಾರೆ. ಆಯುಕ್ತರ ನಿರ್ಧಾರಕ್ಕೆ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮಾಡಾಳ್ ಭ್ರಷ್ಟಾಚಾರ ಪಕ್ಷಕ್ಕೆ ಮುಜುಗರ; ಆರೋಪಿಗಳ ಪರ ಜೈಕಾರ ಹಾಕೋದು ಡಿಕೆಶಿ ಸಂಸ್ಕೃತಿ – ಸಿ.ಟಿ ರವಿ

    ಅನುಮತಿ ನೀಡಿದರೆ ಈದ್ಗಾ ಮೈದಾನದ ಆವರಣದೊಳಗೆ ಕಾಮಣ್ಣನ ಕೂರಿಸುತ್ತೇವೆ. ಇಲ್ಲದಿದ್ದರೆ ಮೈದಾನದ ಹೊರಗಡೆಯೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಮೂರು ದಿನಗಳ ಕಾಲ ಹೋಳಿ (Holi) ಆಚರಣೆ ಮಾಡುತ್ತೇವೆ ಎಂದು ಮೈದಾನದ ಎದುರು ಪ್ರತಿಭಟಿಸಿ ಪಾಲಿಕೆಗೆ ಎಚ್ಚರಿಕೆ ನೀಡಿವೆ. ಪ್ರತಿಭಟನೆ ಬೆನ್ನಲ್ಲೇ ಮೈದಾನಕ್ಕೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ. ಈ ಹಿಂದೆ ಗಣಪತಿ ಪ್ರತಿಷ್ಠಾಪನೆ (Ganesh Chaturth) ವಿಚಾರದಲ್ಲಿ ಈದ್ಗಾ ಮೈದಾನ ಸುದ್ದಿಯಾಗಿತ್ತು. ಇದನ್ನೂ ಓದಿ: ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯ ಕೊಂದೇ ಬಿಟ್ಟ ಯುವಕರು!

  • ಈದ್ಗಾ ಮೈದಾನದ ಎದುರು ಹಾರಾಡಿತು ಭಗವಾಧ್ವಜ – ಹಳಿಯಾಳದಲ್ಲಿ 144 ಸೆಕ್ಷನ್‌ ಜಾರಿ

    ಈದ್ಗಾ ಮೈದಾನದ ಎದುರು ಹಾರಾಡಿತು ಭಗವಾಧ್ವಜ – ಹಳಿಯಾಳದಲ್ಲಿ 144 ಸೆಕ್ಷನ್‌ ಜಾರಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶಕ್ತಿದೇವತೆ ಗ್ರಾಮದೇವಿಗೆ ಸಂಬಂಧಪಟ್ಟ ಧಾರ್ಮಿಕ ಜಾಗದಲ್ಲಿ ಪುರಸಭೆ ನಡೆಸುತ್ತಿರುವ ಕಾಮಗಾರಿಗಳನ್ನು ವಿರೋಧಿಸಿ ಇಂದು ಹಳಿಯಾಳ ಬಂದ್‌ಗೆ (Haliyal Bandh) ಹಿಂದೂ ಸಂಘಟನೆಗಳು ಕರೆ ನೀಡಿದ್ದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

    ಹಳಿಯಾಳದಲ್ಲಿ ಇಂದು ನಗರವನ್ನು ಬಂದ್ ಮಾಡಿ ಪ್ರತಿಭಟನೆ ಹೊರಟಿದ್ದ ಹಿಂದೂ (Hindu) ಕಾರ್ಯಕರ್ತರು ಈದ್ಗಾ ಮೈದಾನದ (Idgah Maidan) ಎದುರು ಇರುವ ಗ್ರಾಮದೇವಿ ಗದ್ದುಗೆ ಜಾಗಕ್ಕೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು (Police) ಹಾಗೂ ಹಿಂದೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದು ಭದ್ರತೆ ನಡುವೆಯೇ ಬ್ಯಾರಿಕೇಡ್‌ ಕಿತ್ತೆಸೆದಿದ್ದಾರೆ. ದೇವಿಯ ಗದ್ದುಗೆ ಇಡುವ ಸ್ಥಳದಲ್ಲಿ ಪುರಸಭೆಯಿಂದ ನಿರ್ಮಾಣವಾಗುತ್ತಿದ್ದ ನೆಲಹಾಸಿನ ಸಿಮೆಂಟ್ ಬ್ಲಾಕ್‌ಗಳನ್ನು ಕಿತ್ತುಹಾಕಿ ಈದ್ಗಾ ಮೈದಾನದ ಎದುರು ಹಿಂದೂ ಕಾರ್ಯಕರ್ತರು ಭಗವಾಧ್ವಜ (Bhagwa Flag)  ಹಾರಿಸಿದ್ದಾರೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ144 ಸೆಕ್ಷನ್ (144 Section) ಜಾರಿ ಮಾಡಿ ತಹಶೀಲ್ದಾರ್ ಪ್ರಕಾಶ ಗಾಯಕ್‌ವಾಡ್‌ ಆದೇಶ ಹೊರಡಿಸಿದ್ದಾರೆ. ಹಳಿಯಾಳ ನಗರದ ಮರಡಿಗುಡ್ಡ ಸಮೀಪ ಒಂದು ಕಿ. ಮೀ. ಅಂತರದಲ್ಲಿ ಫೆಬ್ರವರಿ 17 ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ದಾವೂದಿ ಬೋಹ್ರಾ ಸಮುದಾಯದ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದ ಮೋದಿ

    ಏನಿದು ವಿವಾದ?
    ಹಳಿಯಾಳ ನಗರದ ಈದ್ಗಾ ಮೈದಾನದ ಎದುರು ಇರುವ ಸರ್ಕಾರಿ ಜಾಗದಲ್ಲಿ ತಲೆತಲಾಂತರದಿಂದ ಗ್ರಾಮದೇವಿಯ ಗದ್ದುಗೆ ಇಟ್ಟು ವರ್ಷಕ್ಕೊಮ್ಮೆ ಜಾತ್ರೆ ನಡೆಸಲಾಗುತ್ತಿತ್ತು. ಆದರೆ ಕೆಲ ತಿಂಗಳ ಹಿಂದೆ ಪುರಸಭೆ ಅಧ್ಯಕ್ಷ ಅಜರ್ ಬಸರಿಗದ್ದೆ ಅವರು ಈ ಸ್ಥಳದ ಎದುರು ಇರುವ ಈದ್ಗಾ ಮೈದಾನಕ್ಕೆ ನಮಾಜ್ ಮಾಡಲು ಬರುವವರಿಗೆ ಸಹಾಯವಾಗಲು ನೆಲಹಾಸನ್ನು ಹಾಕಲು, ಗಾರ್ಡನ್ ನಿರ್ಮಿಸಲು ಕಾಮಗಾರಿ ಮಂಜೂರು ಮಾಡಿಸಿದ್ದರು. ಈ ನಿರ್ಧಾರಕ್ಕೆ ಗ್ರಾಮದೇವಿ ದೇವಸ್ಥಾನದ ಟ್ರಸ್ಟ್‌ನವರು ಇದು ದೇವರ ಗದ್ದುಗೆ ಇಡುವ ಸ್ಥಳವಾಗಿದ್ದು ಹಾಗೆಯೇ ಬಿಡುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿಗೆ ಸ್ಪಂದಿಸದ ಪುರಸಭೆ ಕಾಮಗಾರಿ ಮುಂದುವರೆಸಿತ್ತು.

    ಪುರಸಭೆ ನಿರ್ಧಾರವನ್ನು ಖಂಡಿಸಿ ಹಳಿಯಾಳದ ವಿವಿಧ ಸಂಘಟನೆಗಳು ಪ್ರತಿಭಟನೆಯಾಗಿ ಹಳಿಯಾಳ ನಗರ ಬಂದ್‌ಗೆ ಕರೆಕೊಟ್ಟಿದ್ದವು. ಸಾವಿರಾರು ಹಿಂದೂ ಕಾರ್ಯಕರ್ತರು ಏಕಾಏಕಿ ಸೇರಿದ್ದರಿಂದ ಬಂದ್ ಗಲಾಟೆಗೆ ತಿರುಗಿ ಈದ್ಗಾ ಮೈದಾನದೆದುರು ನುಗ್ಗಿದ ಕಾರ್ಯಕರ್ತರು ಸಿಮೆಂಟ್ ಬ್ಲಾಕ್ ತೆಗೆದು ಭಗವಾಧ್ವಜವನ್ನು ಹಾರಿಸಿದರು.

    ಸ್ಥಳೀಯವಾಗಿ 150 ಪೊಲೀಸರನ್ನು ಹಾಗೂ ಎರಡು ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಈದ್ಗಾ ಮೈದಾನದಲ್ಲಿ ಶಾಂತಿಯುತ ಕನಕದಾಸ ಜಯಂತಿ

    ಈದ್ಗಾ ಮೈದಾನದಲ್ಲಿ ಶಾಂತಿಯುತ ಕನಕದಾಸ ಜಯಂತಿ

    ಹುಬ್ಬಳ್ಳಿ: ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ (Idgah Maidan) ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬೆನ್ನಲ್ಲೇ, ಇಂದು ಶ್ರೀರಾಮಸೇನೆಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು (Kanakadasa Jayanti) ಶ್ರದ್ಧಾ ಮತ್ತು ಭಕ್ತಿ ಪೂರ್ವಕವಾಗಿ ಆಚರಣೆ ಮಾಡಲಾಯಿತು.

    ಎಐಎಂಐಎಂ (AIMIM) ಪಕ್ಷದಿಂದ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೇಳಿಬಂದ ಹಿನ್ನೆಲೆ, ಶ್ರೀರಾಮಸೇನೆಯೂ ಸಹ ಕನಕದಾಸರ ಜಯಂತಿ ಆಚರಣೆಗೆ ಅನುಮತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದ ಮೇಯರ್ ಸರ್ವ ಪಕ್ಷಗಳ ಸಭೆ ನಡೆಸಿ, ಮೈದಾನದಲ್ಲಿ ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಅನುಮತಿ ನೀಡುವ ಮೂಲಕ, ವಿವಾದಿತ ಸ್ಥಳವನ್ನು ಸಾರ್ವಜನಿಕವಾಗಿಸಿದ್ದರು. ಹೀಗಾಗಿ ಶ್ರೀರಾಮಸೇನೆಯಿಂದ ಕನಕದಾಸ ಜಯಂತಿಯನ್ನು ಶಾಂತಿಯುತವಾಗಿ ಆಚರಣೆ ಮಾಡಲಾಯಿತು.

    ಜಯಂತಿ ಆಚರಣೆಗೆ ಕೇವಲ 1 ಗಂಟೆ ಅವಕಾಶ ನೀಡಲಾಗಿತ್ತು. ಅಲ್ಲದೆ ಈ ಹಿಂದಿನಂತೆ ಮೈದಾನದ ನಡುವೆ ಪರದೆಯನ್ನು ಕಟ್ಟಲಾಗಿತ್ತು. ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲಿಯೇ, ಅದೇ ಅಳತೆಯ ಪೆಂಡಾಲ್ ಟೆಂಟ್ ಹಾಕಲಾಗಿತ್ತು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik), ಕನಕದಾಸರ ಚಿಂತನೆಗಳನ್ನು ಸ್ಮರಣೆ ಮಾಡಿದರು. ಇದನ್ನೂ ಓದಿ: ನಾವೇನಾದರೂ ಸಿಡಿದೆದ್ದರೆ ನೀವು ಉಳಿಯುವುದಿಲ್ಲ – ಕಾಂಗ್ರೆಸ್‍ಗೆ ಮುತಾಲಿಕ್ ವಾರ್ನಿಂಗ್

    ಇದಕ್ಕೂ ಮುನ್ನ ಮುತಾಲಿಕ್ ಮೈದಾನಕ್ಕೆ ಬರುತ್ತಿದ್ದಂತೆ, ನಿನ್ನೆ ಟಿಪ್ಪು ಜಯಂತಿ ಮಾಡಿದ್ದ ಸ್ಥಳದಲ್ಲಿ ಗೋ ಮೂತ್ರ ಸಿಂಪಡಣೆ ಮಾಡಿ ಸ್ಥಳ ಶುದ್ಧೀಕರಣ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ

    Live Tv
    [brid partner=56869869 player=32851 video=960834 autoplay=true]

  • ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ (Idgah Maidan) ಕೊನೆಗೂ ಟಿಪ್ಪು ಜಯಂತಿ (Tippu Jayanti) ಆಚರಣೆಯಾಗಿದೆ. ಶ್ರೀರಾಮ ಸೇನೆ ಮತ್ತು ತಮ್ಮ ಪಕ್ಷದ ಜಿಲ್ಲಾಧ್ಯಕ್ಷರ ತೀವ್ರ ವಿರೋಧದ ನಡುವೆಯೂ ಪಾಲಿಕೆಯಿಂದ ಅಧಿಕೃತ ಅನುಮತಿ ಪಡೆದ ಎಎಂಐಎಂ (AMIM) ಪಕ್ಷದ ಮುಖಂಡರು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಂತೆ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ.

    ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಅಧಿಕೃತ ಘೋಷಣೆ ಹೊರಡಿಸುತ್ತಿದ್ದಂತೆ ಪರ ವಿರೋಧ ಚರ್ಚೆ ಆರಂಭವಾಗಿದ್ದವು. ಅನುಮತಿ ಕೇಳಿದ್ದ ಸ್ವತಃ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷರೇ ಮೈದಾನದಲ್ಲಿ ಜಯಂತಿ ಬೇಡ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಶ್ರೀರಾಮಸೇನೆ ಮತ್ತು ವಿಪಕ್ಷ ಕಾಂಗ್ರೆಸ್ ಸಹ ಪಾಲಿಕೆ ನಿರ್ಣಯದ ವಿರುದ್ಧ ಕೆಂಡಾಮಂಡಲವಾಗಿದ್ದವು. ಹೀಗಾಗಿ ಇಂದು ಎಲ್ಲರ ಚಿತ್ತ ಈದ್ಗಾ ಮೈದಾನದತ್ತ ಎಂಬುವಂತಾಗಿತ್ತು.

    ಇಂದು ನಿರೀಕ್ಷೆಯಂತೆ ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಮತ್ತು ಇತರ ಸದಸ್ಯರು ಈದ್ಗಾ ಮೈದಾನದಲ್ಲಿ ಟಿಪ್ಪು ಭಾವ ಚಿತ್ರವಿಟ್ಟು, ಪುಷ್ಪಾಪರ್ಣೆ ಮಾಡಿ, ಟಿಪ್ಪು ಪರ ಜಯಘೋಷ ಹಾಕುವ ಮೂಲಕ ಜಯಂತಿ ಆಚರಣೆ ಮಾಡಿದರು. ಈ ಮೂಲಕ ಈದ್ಗಾ ಮೈದಾನ ಈಗ ಸಾರ್ವಜನಿಕವಾಗಿದ್ದು, ಪಾಲಿಕೆ ಅನುಮತಿ ಪಡೆದು ಯಾವ ಸಮುದಾಯವಾದರೂ ಮಹಾನಾಯಕರ ಜಯಂತಿ ಆಚರಣೆಗೆ ಮುಕ್ತವಾಗಿದೆ. ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ: ಮುತಾಲಿಕ್

    ಇಷ್ಟು ದಿನ ವಿವಾದದ ಕೇಂದ್ರ ಬಿಂದುವಾಗಿದ್ದ ಈದ್ಗಾ ಮೈದಾನ ಈಗ ಸಾರ್ವಜನಿಕವಾಗಿದೆ. ಕೇವಲ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಮುಕ್ತವಾಗಿದೆ. ಸರ್ವ ಧರ್ಮಗಳ ಹಿತಕ್ಕಾಗಿ ಪಾಲಿಕೆ ತೆಗೆದುಕೊಂಡ ಐತಿಹಾಸಿಕ ನಿರ್ಣಯ ಪರಿಣಾಮ ಇದಾಗಿದ್ದು, ಇನ್ನು ಮುಂದೆಯಾದರೂ ಈದ್ಗಾ ಮೈದಾನಕ್ಕಿರುವ ರಕ್ತಸಿಕ್ತ ಇತಿಹಾಸದ ಕಳಂಕ ದೂರವಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಲಿ ಎನ್ನುವುದು ಹು-ಧಾ ಜನರ ಆಶಯ. ಇದನ್ನೂ ಓದಿ: ಪಕ್ಷಕ್ಕೆ ಡ್ಯಾಮೇಜ್‌ ತಡೆಯಲು ಹೇಳಿಕೆ ವಾಪಸ್‌ – ಸತೀಶ್‌ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಶುರುವಾಯಿತು ಚಾಮರಾಜಪೇಟೆ ಮೈದಾನ ಫೈಟ್ – ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು

    ಮತ್ತೆ ಶುರುವಾಯಿತು ಚಾಮರಾಜಪೇಟೆ ಮೈದಾನ ಫೈಟ್ – ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು

    ಬೆಂಗಳೂರು: ಚಾಮರಾಜಪೇಟೆ (Chamrajpet)  ಆಟದ ಮೈದಾನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಸ್ವಾತಂತ್ರ್ಯೋತ್ಸವ ಆಯ್ತು, ಗಣೇಶೋತ್ಸವ ವಿವಾದವು ಮುಗಿತು. ಈಗ ಕನ್ನಡ ರಾಜೋತ್ಸವದ (Kannada Rajyotsava) ಸರದಿ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ (Idgah Maidan) ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ಕೊಡುವಂತೆ ಕೂಗು ಕೇಳಿ ಬಂದಿದೆ.

    ಸ್ವಾತಂತ್ರ್ಯ ದಿನಾಚರಣೆಯ ರೀತಿಯೇ ಕನ್ನಡ ರಾಜ್ಯೋತ್ಸವ ಆಚರಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಕೋರ್ಟ್ ಆದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಎರಡಕಷ್ಟೇ ಅನುಮತಿ ನೀಡಲಾಗಿತ್ತು. ಹೀಗಾಗಿ ಇದೀಗ ಸರ್ಕಾರ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಇದೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಿರ್ಧಾರ

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ, ಈಗಾಗಲೇ ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ (R.Ashok) ನಮ್ಮ ಜೊತೆ ಮಾತನಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಿಸುವಂತೆ ಸಲಹೆ ನೀಡಿದ್ದಾರೆ. ಒಕ್ಕೂಟದ ಕಡೆಯಿಂದ ಕನ್ನಡ ಸಾಹಿತ್ಯ ಪರಿಷತ್‍ನಿಂದ ಆಚರಣೆಗೆ ಒಪ್ಪಿಗೆ ಇದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿದ್ದೇವೆ. ಸರ್ಕಾರ ಅನುಮತಿ ನೀಡಿದ್ರೆ ನಾಡಹಬ್ಬದ ರೀತಿ ಆಚರಣೆಗೆ ಸಲಹೆ ಬಂದಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸರ್ಕಾರ ಕೋರ್ಟ್ ಮೊರೆ ಹೋಗಿ ಕನ್ನಡ ರಾಜ್ಯೋತ್ಸವಕ್ಕೆ ಅನುಮತಿ ಕೇಳುವ ನಿರೀಕ್ಷೆಯಿದೆ ಎಂದರು. ಇದನ್ನೂ ಓದಿ: ಉದ್ಘಾಟನೆಗೊಂಡ ನಾಲ್ಕೇ ದಿನಕ್ಕೆ ಗುಂಡಿ ಬಿದ್ದ 18 ಕೋಟಿಯ ಮೇಲ್ಸೇತುವೆ

    Live Tv
    [brid partner=56869869 player=32851 video=960834 autoplay=true]

  • ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಸಂಘಟನೆಗಳ ಪಟ್ಟು

    ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಸಂಘಟನೆಗಳ ಪಟ್ಟು

    ಬೆಂಗಳೂರು: ಚಾಮರಾಜಪೇಟೆ (Chamarajpet) ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ, ಗಣೇಶ ಗಲಾಟೆ ಬಳಿಕ ಇದೀಗ ಕನ್ನಡ ಸಂಘಟನೆಗಳು ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ಕೋರಿದ್ದಾರೆ.

    ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Idgah Maidan) ಸರ್ಕಾರದಿಂದಲೇ ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ವಜಾರೋಹಣ ನೆರವೇರಿಸಿತ್ತು. ಆದರೆ ಗಣೇಶೋತ್ಸವದಂದು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೇಳಿ ಹೈಡ್ರಾಮವೇ ನಡೆದಿತ್ತು. ಕೊನೆ ಕ್ಷಣದವರೆಗೂ ಒತ್ತಾಯಿಸಿದ್ದರೂ ಗಣೇಶೋತ್ಸವಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಸಿಕ್ಕಿರಲಿಲ್ಲ. ಇದೀಗ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava) ಪಟ್ಟು ಹಿಡಿಯಲಾಗಿದೆ.

    ಕನ್ನಡ ಸಂಘಟನೆಗಳಿಗೆ ಕನ್ನಡ ಬಾವುಟ ಹಾರಿಸಲು ಅವಕಾಶ ಕೊಡಬೇಕು. ಈ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಬೇಕೆಂಬ ಧ್ವನಿ ಎತ್ತಿದ್ದು ನಾವು. ಸರ್ಕಾರ ಕನ್ನಡ ಹೋರಾಟಗಾರರಿಗೆ ಅವಕಾಶ ಕೊಡಬೇಕು. ಇದರಲ್ಲಿಯೂ ರಾಜಕೀಯ ಮಾಡಲು ಹೋಗಬೇಡಿ ಎಂದು ಕನ್ನಡ ಪರ ಹೋರಾಟಗಾರ ಶಿವಕುಮಾರ್ ಕಟುವಾಗಿ ಹೇಳಿದ್ದಾರೆ.

    ಧ್ವಜಾರೋಹಣ, ಗಣೇಶೋತ್ಸವ ಮುಗಿದರೂ ಈ ಗಲಾಟೆ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆಗೊಂಡಿರುವ ಹಿಂದೂ ಸಂಘಟನೆಗಳು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿವೆ. ಕನ್ನಡ ಸಾಹಿತ್ಯ ಪರಿಷತ್‌ನಿಂದ ನಾಡಧ್ವಜ ಹಾರಿಸುವಂತೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮನವಿ ಮಾಡಿದೆ.

    ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿದಂತೆ ಕನ್ನಡ ಧ್ವಜ ಹಾರಿಸುವ ಬಗ್ಗೆ ಚರ್ಚಿಸಲು ನಿನ್ನೆ ಸಂಜೆ 6 ಗಂಟೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಭೆ ನಡೆಸಿದೆ. ಸಭೆ ಬಳಿಕ ಸಿಎಂ ಬೊಮ್ಮಾಯಿ ಹಾಗೂ ಕಂದಾಯ ಸಚಿವರ ಭೇಟಿ ಮಾಡಿ ರಾಷ್ಟ್ರ ಧ್ವಜ ಹಾರಿದ ರೀತಿಯೇ ನಾಡಧ್ವಜವನ್ನು ಹಾರಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯೂ ಸರ್ಕಾರದ ವತಿಯಿಂದಲೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಚಾಮರಾಜಪೇಟೆ ಮೈದಾನ ಬಳಿ ಗಣೇಶ ಗಲಾಟೆ – ಗಣೇಶ ಪ್ರತಿಷ್ಠಾಪನೆಗೆ ಪಟ್ಟು, ಠಾಣೆಗೆ ಮುತ್ತಿಗೆ

    ಚಾಮರಾಜಪೇಟೆ ಮೈದಾನ ಬಳಿ ಗಣೇಶ ಗಲಾಟೆ – ಗಣೇಶ ಪ್ರತಿಷ್ಠಾಪನೆಗೆ ಪಟ್ಟು, ಠಾಣೆಗೆ ಮುತ್ತಿಗೆ

    ಬೆಂಗಳೂರು: ಚಾಮರಾಜಪೇಟೆ ಮೈದಾನ ಗಲಾಟೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈದ್ಗಾ ಮೈದಾನದ ಸನಿಹದಲ್ಲಿಯೇ ಇರುವ ಮಲೆಮಹದೇಶ್ವರ ದೇಗುಲದ ಮುಂದೆ ಗಣೇಶ ಪ್ರತಿಷ್ಠಾಪನೆ ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಕೆಲ ಹೊತ್ತು ಹೈಡ್ರಾಮಾವೇ ನಡೆದಿದೆ.

    ಈದ್ಗಾ ಮೈದಾನದ ಸನಿಹದಲ್ಲಿಯೇ ಇರುವ ಮಲೆಮಹದೇಶ್ವರ ದೇಗುಲದ ಮುಂದೆ ಗಣೇಶ ಪ್ರತಿಷ್ಠಾಪನೆ ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಕೆಲವೊತ್ತು ಹೈಡ್ರಾಮಾವೇ ನಡೀತು. ಈದ್ಗಾ ಸನಿಹದಲ್ಲಿರೋ ಮಹದೇಶ್ವರ ದೇವಾಲಯದ ಅರಳಿಮರದ ಬಳಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆ ಮುಂದಾಗಿತ್ತು. ಆದರೆ ಸುಪ್ರೀಂಕೋರ್ಟ್ ಯಥಾಸ್ಥಿತಿ ಸೂಚನೆ ಹಿನ್ನೆಲೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಗಣೇಶನ ಮೆರವಣಿಗೆ ರೂಟ್ ಬಗ್ಗೆ ಮಾಹಿತಿ ನೀಡದೇ, ಪ್ರತಿಷ್ಠಾಪನೆ ಮಾಡಲಿರುವ ಗಣೇಶನ ಎತ್ತರ ತಿಳಿಸದ ಕಾರಣ ಗಣೇಶನನ್ನು ಕೂರಿಸಲು ಅವಕಾಶ ನೀಡಲ್ಲ ಎಂದು ಪೊಲೀಸರು ಖಡಕ್ ಸೂಚನೆ ನೀಡಿದರು. ಇದನ್ನೂ ಓದಿ: ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ – ಪ್ರಚಾರಕ್ಕೂ ಬರುತ್ತಾರೆ: ಬಿಎಸ್‍ವೈ

    ಬಳಿಕ ಪಾದರಾಯನಪುರ, ಜೆಜೆಆರ್ ನಗರ, ಸಿರ್ಸಿ ಸರ್ಕಲ್, ಗೋರಿಪಾಳ್ಯದಲ್ಲಿ ಮೆರವಣಿಗೆ ಮಾಡ್ತೀವಿ. ಅನುಮತಿ ನೀಡಿ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದವು. ಆದ್ರೆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ರು. ಇದನ್ನು ಖಂಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಗಣೇಶ ಉತ್ಸವ ಸಮಿತಿ ಸದಸ್ಯರು ಚಾಮರಾಜಪೇಟೆ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಮತ್ತು ಗಣೇಶ ಉತ್ಸವ ಸಮಿತಿ ಸದಸ್ಯರ ಮಧ್ಯೆ ವಾಗ್ವಾದ ನಡೀತು. 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ರು. ಈ ಮಧ್ಯೆ ಈದ್ಗಾ ಮೈದಾನಕ್ಕೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ರು. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವವನ್ನು ಸ್ವಾಗತಿಸಲ್ಲ, ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್‌ : ಅಂಜುಮನ್ ಸಂಸ್ಥೆ

    ಗಣೇಶೋತ್ಸವವನ್ನು ಸ್ವಾಗತಿಸಲ್ಲ, ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್‌ : ಅಂಜುಮನ್ ಸಂಸ್ಥೆ

    ಹುಬ್ಬಳ್ಳಿ: ನಾವು ಗಣೇಶೋತ್ಸವವನ್ನು ಸ್ವಾಗತಿಸಲ್ಲ. ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್‌ ಹಾಕುತ್ತೇವೆ. ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯುಸೂಫ್ ಸವಣೂರ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 200 ವರ್ಷಗಳಿಂದ ಗಣೇಶೋತ್ಸವ ವಿಚಾರ ಬಂದೇ ಇರಲಿಲ್ಲ. ಈಗ ಮುನ್ನೆಲೆಗೆ ಬಂದಿದ್ದು ಯಾಕೆ ಎಂದು ಪ್ರಶ್ನಿಸಿದರು.

    ಗಣೇಶೋತ್ಸವ ವಿಚಾರವಾಗಿ ಮೇಯರ್ ಅವರು ಸಮಿತಿ ರಚನೆ ಮಾಡಿದ್ದರು. ಅದರಲ್ಲಿ ಮೂವರು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರಿದ್ದರು. ಉಳಿದ ಜೆಡಿಎಸ್, ಎಂಐಎಂ ಹಾಗೂ ಪಕ್ಷೇತರ‌ ಸದಸ್ಯರನ್ನ ಅವರು ಸಮಿತಿಯಲ್ಲಿ ಹಾಕಿರಲಿಲ್ಲ ಎಂದು ದೂರಿದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ಈ ಹಿಂದೆ ಬಸವರಾಜ್ ಶೆಟ್ಟರ್ ಎಂಬುವವರು ಈದ್ಗಾ ಮೈದಾನದಲ್ಲಿ ಚಾಂಗ ದೇ‌ವ ಜಾತ್ರೆ ಮಾಡಲು ಅನುಮತಿಗೆ ಕೇಳಿದ್ದು ಅರ್ಜಿ ಹಾಕಿದ್ದರು. ನಮಾಜ್ ಆದ ಮೇಲೆ ಜಾತ್ರೆಗೆ ಅವಕಾಶ ಕೇಳಿದ್ದನ್ನ ಜಿಲ್ಲಾ ಹಾಗೂ ಹೈಕೋರ್ಟ್ ವಜಾ ಮಾಡಿದೆ. ಇಲ್ಲಿ ವಾಣಿಜ್ಯ ಮಳಿಗೆ‌ ಇತ್ತು. ಕೋರ್ಟ್‌ ಆದೇಶದಂತೆ ಆ ಕಟ್ಟಡವನ್ನು ನೆಲಸಮ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್‌

    ಈಗ ವಿಶೇಷ ಸಭೆ ಮಾಡಿ ಗಣೇಶೋತ್ಸವ ಮಾಡಲು ಅವಕಾಶಕ್ಕಾಗಿ ಸಮಿತಿ ಮಾಡಿದ್ದಾರೆ. ಆ ಈದ್ಗಾ ಒಪ್ಪಂದದಲ್ಲಿ ಬೇರೆ ಉದ್ದೇಶಕ್ಕಾಗಿ ಮೈದಾನವನ್ನು ಬಳಕೆ ಮಾಡುವಂತಿಲ್ಲ. ಹೈಕೋರ್ಟ್‌ನಲ್ಲಿ ಈ ಬಗ್ಗೆ ವಾದ ವಿವಾದ ನಡೆದಾಗ ಹುಬ್ಬಳ್ಳಿ ಪಾಲಿಕೆ ಆಯುಕ್ತರು ಆಗಲೇ‌ ಗಣೇಶೋತ್ಸವಕ್ಕೆ ಜಾಗ ಕೊಡಲಾಗಿದೆ ಎಂದು ಆದೇಶ ಪ್ರತಿ ನೀಡಿದ್ದಾರೆ ಎಂದು ಹೇಳಿದರು.

    1990 ಪ್ರಕಾರ ಆದೇಶದ ಪ್ರಕಾರ ಪಾಲಿಕೆಯಿಂದ ನ್ಯಾಯಾಂಗ ನಿಂದನೆ ಆಗಿದೆ. ಹೀಗಾಗಿ ಪಾಲಿಕೆ ಆಯುಕ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ. ಈ‌ ಹಬ್ಬ ಮಾಡುವ ಮೊದಲೇ ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್, ಬಸವರಾಜ್ ಹೊರಟ್ಟಿ ಹಾಗೂ ಪ್ರಸಾದ ಅಬ್ಬಯ್ಯಗೆ ಕರೆದು ಸಭೆ ಮಾಡಬಹುದಿತ್ತು. ಅಂಜುಮನ್ ಸಂಸ್ಥೆಯವರನ್ನು ಕರೆದು ಮೂರು ಸಾವಿರಮಠದಲ್ಲಿ‌ ಸಭೆ ಮಾಡಬಹುದಿತ್ತು ಎಂದರು.

    ನಾವು ಗಣೇಶೋತ್ಸವವನ್ನು ಸ್ವಾಗತ ಮಾಡುವುದಿಲ್ಲ. ಹೈಕೋರ್ಟ್ ಆದೇಶವನ್ನು ಸ್ವಾಗತ ಮಾಡುತ್ತೇವೆ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ನಾವು ಮಾಡುತ್ತೇವೆ ಎಂದು ಅವರು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ –  ತ್ರಿಸದಸ್ಯ ಪೀಠಕ್ಕೆ ಕೇಸ್‌ ವರ್ಗಾವಣೆ

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ – ತ್ರಿಸದಸ್ಯ ಪೀಠಕ್ಕೆ ಕೇಸ್‌ ವರ್ಗಾವಣೆ

    ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಮೈದಾನದ ಗಣೇಶೋತ್ಸವ ಪ್ರಕರಣ ಸುಪ್ರೀಂ ಕೋರ್ಟ್‌ ಮುಖ್ಯ ತ್ರಿಸದಸ್ಯರ ಪೀಠಕ್ಕೆ ವರ್ಗಾವಣೆ

    ಹೈಕೋರ್ಟ್‌ ದ್ವಿಸದಸ್ಯ ಪೀಠ ಗಣೇಶೋತ್ಸವ ಆಚರಣೆ ಅನುಮತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಆದೇಶ ಪ್ರಕಟಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಬೋರ್ಡ್‌ ಸುಪ್ರೀಂ ಮೊರೆ ಹೋಗಿತ್ತು. ಇಂದು ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಕ್ಫ್‌ ಬೋರ್ಡ್‌ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿದರು. ಸರ್ಕಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

    ಎರಡು ಕಡೆಯ ವಾದ ಆಲಿಸಿದ ಜಡ್ಜ್‌ಗಳ ಮಧ್ಯೆ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ನೀಡಲು ಕೋರ್ಟ್ ನಿರಾಕಣೆ ಮಾಡಿತು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸುಪ್ರೀಂ ಕೋರ್ಟ್‌  ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ. ಎಎಸ್‌ ಒಕಾ, ನ್ಯಾ. ಎಂಎಂ ಸುಂದರೇಶ್‌ ಅವರ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.

    ವಕ್ಫ್‌ ಬೋರ್ಡ್‌ ವಾದ ಏನು?
    ಸರ್ವೆ 40 ಜಾಗ ಸಾಕಷ್ಟು ವರ್ಷಗಳಿಂದ ಬಳಕೆಯಾಗುತ್ತಿದ್ದು, ವಕ್ಫ್ ತನ್ನ ಆಸ್ತಿ ಎಂದು ಘೋಷಣೆ ಮಾಡಿದೆ. ಈಗ ವಕ್ಫ್ ತಿರ್ಮಾನವನ್ನು ಪ್ರಶ್ನೆ ಮಾಡಲಾಗುತ್ತಿದೆ. 200 ಅಧಿಕ ವರ್ಷಗಳಿಂದ ಒಂದು ಸಮುದಾಯ ಬಳಕೆ ಮಾಡುತ್ತಿದೆ.

    ಇಲ್ಲಿ ಬೇರೆ ಸಮುದಾಯದವರು ಹಬ್ಬ ಆಚರಿಸುವುದು ಸರಿಯಲ್ಲ. ಇದು ಸಮಸ್ಯೆಗೆ ಕಾರಣ ಆಗಬಹುದು. ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ ಆದೇಶದ ಬೆನ್ನಲ್ಲೇ ದ್ವಿಸದಸ್ಯ ಪೀಠ ಅದರ ವಿರುದ್ಧ ಆದೇಶ ನೀಡಿದೆ. ಆದರೆ ಈದ್ಗಾ ವಕ್ಪ್ ಆಸ್ತಿಯಾಗಿದ್ದು ಮುಸ್ಲಿಂ ಸಮುದಾಯ ಇದನ್ನು ಪ್ರಾರ್ಥನೆಗೆ ಬಳಸುತ್ತಿದೆ. ವರ್ಷಕ್ಕೆ ಎರಡು ಹಬ್ಬಗಳನ್ನು ಇಲ್ಲಿ ಆಚರಣೆ ಮಾಡಲಾಗುತ್ತಿದೆ. ಬಯಲು ಜಾಗ ಎನ್ನುವ ಕಾರಣಕ್ಕೆ ಬೇಕಾದ ಹಾಗೆ ಬಳಕೆ ಮಾಡಲು ಸಾಧ್ಯವಿಲ್ಲ. ವಕ್ಫ್ ಆಸ್ತಿ ಎನ್ನುವುದಕ್ಕೆ ಎಲ್ಲಾ ದಾಖಲೆಗಳು ಇದೆ.

    ಕಂದಾಯ ಅಧಿಕಾರಿಗಳು ಈ ಆಸ್ತಿ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ. ವಕ್ಪ್ ಆಸ್ತಿ ಅಲ್ಲ ಎನ್ನುವುದಾದರೆ ಅದನ್ನು ಪ್ರಶ್ನೆ ಮಾಡಬಹುದು. ಆದರೆ ಯಾರು ಇದನ್ನು ಪ್ರಶ್ನೆ ಮಾಡಿಲ್ಲ. ಹೈಕೋರ್ಟ್ ನಲ್ಲಿ ಒಂದೇ ದಿನದ ಅಂತರದಲ್ಲಿ ಹೇಗೆ ಆದೇಶಗಳು ಬದಲಾದವು? ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗ ಏಕಾಏಕಿ ಈ ವಿಚಾರ ಮುನ್ನಲೆಗೆ ಬಂದಿದೆ.

    ಸರ್ಕಾರದ ವಾದ ಏನು?
    ಎರಡು ದಿನ ಸರ್ಕಾರ ಈ ಸ್ಥಳ ಬಳಕೆ ಮಾಡಲಿದೆ. ಬಳಿಕ ಆಟದ ಮೈದಾನವಾಗಿ ಮುಂದುವರೆಯಲಿದೆ. ಭದ್ರತೆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಗಣೇಶ ಚತುರ್ಥಿ ಆಚರಿಸಲು ಬಳಕೆ ಮಾಡಲಾಗುತ್ತದೆ.

    ವಕ್ಪ್ ಆಸ್ತಿ ಎನ್ನಲು ತೃಪ್ತಿಕರ ದಾಖಲೆಗಳಿಲ್ಲ. ಇದಕ್ಕೆ ಯಾವುದೇ ಮಾಲೀಕರು ಇಲ್ಲ. ಇದೊಂದು ಖಾಲಿ ಮೈದಾನ. 1930ರಲ್ಲಿ ಈದ್ಗಾ ಎಂದು ದಾಖಲಿಸಲಾಗಿದೆ. ಆಸ್ತಿ ಬಗ್ಗೆ ಸಿವಿಲ್ ಕೋರ್ಟ್ ನಿರ್ಧರಿಸಬೇಕು. ವಕ್ಫ್ ಬೋರ್ಡ್ ಇಲ್ಲಿಯವರೆಗೂ ಸಿವಿಲ್ ನ್ಯಾಯಾಲಯಕ್ಕೆ ಹೋಗಿಲ್ಲ. ಸರ್ಕಾರ ಹಲವು ದಾಖಲೆಗಳಲ್ಲಿ ಸರ್ಕಾರಿ ಜಾಗ, ಇನ್ನು ಕೆಲವು ದಾಖಲೆಗಳಲ್ಲಿ ಆಟದ ಮೈದಾನ ಎಂದು ದಾಖಲೆಗಳಿವೆ.

    ಸುಪ್ರೀಂ ಪ್ರಶ್ನೆ
    ಹಳೆಯ ಸ್ಥಳಗಳನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಈ ಹಿಂದೆ ಆದೇಶ ನೀಡಿದೆ. ಈದ್ಗಾ ಆಗಿ ಇದು ಬಹಳಷ್ಟು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ. ಮೆಹ್ತಾ ನಿಮಗೆ ಈ ಕಾನೂನು ಬಗ್ಗೆ ಗೊತ್ತಿದೆ ಅಲ್ವಾ? ತುಷಾರ್ ಮೆಹ್ತಾಗೆ ನ್ಯಾಯಾಧೀಶರ ಪ್ರಶ್ನೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]