Tag: Identity Card

  • ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ: ಚುನಾವಣಾ ಆಯೋಗ

    ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ: ಚುನಾವಣಾ ಆಯೋಗ

    ನವದೆಹಲಿ: ಹೊಸ ಮತದಾರರ ಪಟ್ಟಿ (Voter List) ದೃಢೀಕರಣಕ್ಕಾಗಿ ಮತದಾರರ ಆಧಾರ್ ಸಂಖ್ಯೆಯ (Aadhaar Number) ವಿವರಗಳನ್ನು ಕೇಳುವ 6 ಹಾಗೂ 6ಬಿ ನಮೂನೆಗಳಲ್ಲಿ (ಇ-ರೋಲ್‌ನಲ್ಲಿ ನೋಂದಣಿಗಾಗಿ) ಸೂಕ್ತವಾದ ಸ್ಪಷ್ಟ ಬದಲಾವಣೆಗಳನ್ನು ಮಾಡುವುದಾಗಿ ಭಾರತದ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ.

    ಚುನಾವಣಾ ಆರೋಗದ ಪರ ಹಾಜರಾದ ಹಿರಿಯ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ಮತದಾರರ ನೋಂದಣಿ (ತಿದ್ದುಪಡಿ) ನಿಯಮ 26-ಬಿ 2022ರ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಹೇಳಿದ್ದಾರೆ.

    ತೆಲಂಗಾಣ ಪ್ರದೇಶ ಸಮಿತಿಯ ಹಿರಿಯ ಉಪಾಧ್ಯಕ್ಷ ಜಿ ನಿರಂಜನ್ ಅವರು ಅರ್ಜಿ ಸಲ್ಲಿಸಿದ್ದಾರೆ. ಇ-ರೋಲ್‌ನಲ್ಲಿ ನೋಂದಣಿಗಾಗಿ ಇಸಿಐ ಫಾರ್ಮ್ಗಳ ನಮೂನೆ 6 (ಹೊಸ ಮತದಾರರಿಗೆ ಅರ್ಜಿ ನಮೂನೆ) ಮತ್ತು ಫಾರ್ಮ್ 6ಬಿ (ಮತದಾರರ ಪಟ್ಟಿ ದೃಢೀಕರಣದ ಉದ್ದೇಶಕ್ಕಾಗಿ ಆಧಾರ್ ಸಂಖ್ಯೆಯ ಮಾಹಿತಿಯ ಪತ್ರ) ಸಮಸ್ಯೆಗಳನ್ನು ಸೂಚಿಸುವ ಮನವಿಗೆ ಇದನ್ನು ಸ್ಪಷ್ಟಪಡಿಸಲಾಗಿದೆ.

    ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ಸುಕುಮಾರ್ ಪಟ್ಟಜೋಶಿ, ವಕೀಲ ಅಮಿತ್ ಶರ್ಮಾ, ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಈಗಾಗಲೇ ಸುಮಾರು 66,23,00,000 ಆಧಾರ್ ಸಂಖ್ಯೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಿದರು. ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022ರ ನಿಯಮ 26-ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ. ಹೀಗಾಗಿ ಚುನಾವಣಾ ಆಯೋಗವು ಪರಿಚಯಿಸಲಾದ ನಮೂನೆಗಳಲ್ಲಿ ಸೂಕ್ತ ಸ್ಪಷ್ಟೀಕರಣ ಬದಲಾವಣೆಗಳನ್ನು ನೀಡಲು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಪ್ರೀಂ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಿನ್ನಡೆ- KRS ಡ್ಯಾಂ ಬಳಿ ಬಿಗಿ ಭದ್ರತೆ

    ಇಸಿಐ ಮಾಡಿದ ಒಪ್ಪಂದದ ಆಧಾರದ ಮೇಲೆ ನ್ಯಾಯಾಲಯವು ರಿಟ್ ಅರ್ಜಿಯನ್ನು ನೀಡಿದೆ. ಅರ್ಜಿದಾರರ ಪರವಾಗಿ ವಕೀಲ ನರೇಂದ್ರರಾವ್ ತನೀರ್ ಮತ್ತು ಎಒಆರ್ ಶ್ರವಣ್ ಕುಮಾರ್ ಕರ್ಣಂ ವಾದ ಮಂಡಿಸಿದರು.

    ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022 ಅನ್ನು ಕೇಂದ್ರ ಸರ್ಕಾರ ಜೂನ್ 2022 ರಲ್ಲಿ ಚುನಾವಣಾ ಗುರುತಿನ ಚೀಟಿಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಒದಗಿಸುವಂತೆ ಸೂಚಿಸಿದೆ. ನಮೂನೆ 6ಬಿ ಎನ್ನುವುದು ಮತದಾರರ ಪಟ್ಟಿ ದೃಢೀಕರಣದ ಉದ್ದೇಶಕ್ಕಾಗಿ ಮತದಾರರು ಆಧಾರ್ ಸಂಖ್ಯೆಯನ್ನು ತಿಳಿಸುವ ಅರ್ಜಿ ನಮೂನೆಯಾಗಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಶಾಕ್‌ – ತ.ನಾಡಿಗೆ ನಿತ್ಯ 5,000 ಕ್ಯೂಸೆಕ್‌ ನೀರು ಹರಿಸುವಂತೆ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚರಂಡಿ ನೀರು ಮೈಮೇಲೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

    ಚರಂಡಿ ನೀರು ಮೈಮೇಲೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

    – ಗುರುತಿನ ಚೀಟಿಗಾಗಿ ಮಹಿಳೆಯರ ಹೋರಾಟ
    – ತುರ್ತು ಸಭೆ ಕರೆದು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಡಿಸಿ

    ರಾಯಚೂರು: ಗುರುತಿನ ಚೀಟಿಗಾಗಿ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸಿದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.

    raichuru women (3)

    ಸಫಾಯಿ ಕರ್ಮಾಚಾರಿ ಗೀತಾ ಸಿಂಗ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಮಹಿಳೆಯರು ಚರಂಡಿ ನೀರಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೀತಾ ಸಿಂಗ್ ಮೈಮೇಲೆ ಚರಂಡಿ ನೀರನ್ನು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!

    ಕೆಪಿಸಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುವವರಿಗೆ ಗುರುತಿನ ಚೀಟಿ ನೀಡಲಾಗಿದೆ. ಕಷ್ಟಪಟ್ಟು ದುಡಿಯುವ ನಿಜವಾದ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಿಲ್ಲ ಅಂತ ಆರೋಪಿಸಿದ್ದಾರೆ. ಗುರುತಿನ ಚೀಟಿ ಇಲ್ಲದಿದ್ದರಿಂದ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಅಂತ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಮುಂದೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನನಗೆ ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ – ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ

    ಘಟನೆ ಹಿನ್ನೆಲೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದು ಕುಂದು ಕೊರತೆ ಆಲಿಸಿದರು. 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ನಗರಾಭಿವೃದ್ದಿ ಯೋಜನಾಧಿಕಾರಿಗೆ ಡಿ.ಸಿ ಖಡಕ್ ಸೂಚನೆ ನೀಡಿದರು ಮತ್ತು ಕೂಡಲೇ ಗುರುತಿನ ಚೀಟಿ ಸಿಗಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.