Tag: ICU

  • 4 ದಿನ ಐಸಿಯುನಲ್ಲೇ ಚಿಕಿತ್ಸೆ- ಮತ್ತಷ್ಟು ಚೇತರಿಸಿಕೊಂಡಿದ್ದಾರೆ ನಡೆದಾಡೋ ದೇವ್ರು

    4 ದಿನ ಐಸಿಯುನಲ್ಲೇ ಚಿಕಿತ್ಸೆ- ಮತ್ತಷ್ಟು ಚೇತರಿಸಿಕೊಂಡಿದ್ದಾರೆ ನಡೆದಾಡೋ ದೇವ್ರು

    ಚೆನ್ನೈ: ಸಿದ್ದಗಂಗಾ ಶ್ರೀಗಳಿಗೆ ಸೋಂಕು ತಾಗಿರುವ ಹಿನ್ನೆಲೆಯಲ್ಲಿ ವಾರ್ಡ್ ನಿಂದ ಮತ್ತೆ ಐಸಿಯುಗೆ ಶಿಫ್ಟ್ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಅಂತಾ ರೇಲಾ ಆಸ್ಪತ್ರೆಯ ವೈದ್ಯ ಡಾ. ಪರಮೇಶ್ವರ್ ತಿಳಿಸಿದ್ದಾರೆ.

    ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶ್ರೀಗಳಿಗೆ ಸೋಂಕು ತಾಗಿದ್ದರಿಂದ ಅವರನ್ನು ರೇಲಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಲಾಗಿದೆ. ಗುರುವಾರದಂದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಈಗ ಸೋಂಕು ತಗಲಿರುವ ಪರಿಣಾಮ ಅವರನ್ನು ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಹಾಗೆಯೇ ಇನ್ನು 4 ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಯುತ್ತದೆ. ಅಲ್ಲದೆ ಸದ್ಯ ಶ್ರೀಗಳು ಐಸಿಯುನಲ್ಲಿ ಮತ್ತಷ್ಟು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಸಿದ್ದಗಂಗಾ ಶ್ರೀಗಳನ್ನು ನೋಡಲು ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾದ್ದರಿಂದ ಅವರಿಗೆ ಸೋಂಕು ತಗುಲಿದೆ. ಇದು ಸೂಕ್ಷ್ಮವಾದ ಸಂಗತಿ ಹೀಗೆ ಸೋಂಕು ಹೆಚ್ಚಾದರೆ ಶ್ರೀಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಡಾ. ರೇಲಾ ಅವರು ಶ್ರೀಗಳನ್ನು ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲು ನಿರ್ಧರಿಸಿದರು. ಈಗ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಶ್ರೀಗಳು ಕ್ಷೇಮವಾಗಿದ್ದಾರೆ. ಬಹುಶಃ ಮುಂದಿನ ವಾರ ಶ್ರೀಗಳನ್ನು ಡಿಸ್ಚಾರ್ಜ್ ಮಾಡುಬಹುದು ಎಂದು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್  ವಾರ್ಡ್ ಗೆ ಶಿಫ್ಟ್

    ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್ ವಾರ್ಡ್ ಗೆ ಶಿಫ್ಟ್

    – ಆಸ್ಪತ್ರೆಗೆ ಯಾರೂ ಬರಬೇಡಿ ಕಿರಿಯ ಶ್ರೀ ಮನವಿ

    ಚೆನ್ನೈ: ಇಲ್ಲಿನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದ್ದು, ಇಂದು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

    ವೈದ್ಯ ಡಾ.ಪರಮೇಶ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ. ಬುಧವಾರ ರಾತ್ರಿಯಿಂದ ಇಡ್ಲಿ ಹಾಗೂ ಬೇಯಿಸಿದ ಬೆಳೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕಿರಿಯ ಶ್ರೀಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಗಳನ್ನ ಭೇಟಿ ಮಾಡಲು 4 ದಿನಗಳು ಅವಕಾಶವಿಲ್ಲ. ಏಕೆಂದರೆ ಶ್ರೀಗಳನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಐಸಿಯೂನಲ್ಲಿ ಇದ್ದಂತೆ ವಾರ್ಡ್ ನಲ್ಲಿಯೂ ಎಚ್ಚರಿಕೆ ನೀಡಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಶ್ರೀಗಳನ್ನು ನೋಡಲು ಯಾರೂ ಬರಬೇಡಿ. ಮತ್ತೊಮ್ಮೆ ಶ್ರೀಗಳಿಗೆ ಸೋಂಕಾದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ ಭಕ್ತರು ಶ್ರೀಗಳನ್ನು ಮಠದಲ್ಲೇ ನೋಡಬಹುದು. ಶ್ರೀಗಳನ್ನು ನೋಡಲು ಬರೋರ ಸಂಖ್ಯೆ ಹೆಚ್ಚಾದರೆ ಅಕ್ಕಪಕ್ಕದ ರೋಗಿಗಳಿಗೂ ತೊಂದರೆಯಾಗುತ್ತೆ. ಹೀಗಾಗಿ ಯಾರೂ ಬರಬೇಡಿ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.

    ವೈದ್ಯರೊಂದಿಗೆ ಚರ್ಚೆ ನಡೆಸಿ ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಶ್ರೀಗಳ ಆರೋಗ್ಯ ಚೇತರಿಕೆ ಬಗ್ಗೆ ಭಕ್ತರು ದೇವರಲ್ಲಿ ಮನವಿ ಮಾಡಿಕೊಳ್ಳಿ. ಶೀಘ್ರವೇ ದರ್ಶನಕ್ಕೆ ಅವಕಾಶ ಲಭಿಸುತ್ತದೆ ಎಂದು ಸ್ಪಷ್ಟಪಡಿಸಿದರು.

    ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಡಿ.08 ರಂದು ಪಿತ್ತಕೋಶ ಸೋಂಕಿನ ಆಪರೇಷನ್‍ಗೆ ಸಿದ್ದಗಂಗಾ ಶ್ರೀಗಳು ಒಳಗಾಗಿದ್ದರು. ಬಳಿಕ ಅವರಿಗೆ ಐಸಿಯೂನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಮಂಗಳವಾರದಿಂದ ಶ್ರೀಗಳಿಗೆ ದ್ರವರೂಪದ ಆಹಾರ ನೀಡಲಾಗಿತ್ತು. ಸದ್ಯ ಶ್ರೀಗಳು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಆದರೆ ವಾಕಿಂಗ್ ಮಾಡುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಸಿಯುವಿನಲ್ಲಿ ನರಳಾಡ್ತಿರುವಾಗ್ಲೇ ಡಿಸ್ಚಾರ್ಜ್ ಮಾಡಿದ ವೈದ್ಯರು!

    ಐಸಿಯುವಿನಲ್ಲಿ ನರಳಾಡ್ತಿರುವಾಗ್ಲೇ ಡಿಸ್ಚಾರ್ಜ್ ಮಾಡಿದ ವೈದ್ಯರು!

    – ದಿಗ್ವಿಜಯ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ

    ಬೆಂಗಳೂರು: ದುಡ್ಡಿದ್ರೆ ಆಸ್ಪತ್ರೆ ರೂಲ್ಸ್ ಗಳೇ ಮಂಗಮಾಯ ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಬನಶಂಕರಿಯ ದಿಗ್ವಿಜಯ ಆಸ್ಪತ್ರೆಯಲ್ಲಿಯೊಂದು ಅಮಾನವೀಯ ಘಟನೆ ನಡೆದಿದೆ.

    ಸಾಮಾನ್ಯವಾಗಿ ದುಡ್ಡಿನ ಆಸೆಗಾಗಿ ಸತ್ತ ರೋಗಿಯನ್ನು ಐಸಿಯುನಲ್ಲಿಟ್ಟ ಆಸ್ಪತ್ರೆಯವರ ಕಥೆ ಕೇಳಿರ್ತೀವಿ. ಆದ್ರೇ ಇದು ದುಡ್ಡಿನ ಆಮಿಷಕ್ಕೆ ಬಲಿಯಾಗಿ ಐಸಿಯುನಲ್ಲಿ ರೋಗಿ ನರಳಾಡುತ್ತಿರುವಾಗಲೇ ಡಿಸ್ಚಾರ್ಜ್ ಮಾಡಲಾಗಿದೆ.


    ಗಂಡನ ಕಿರುಕುಳ ತಾಳಲಾರದೇ ನಿದ್ರೆ ಮಾತ್ರೆ ಸೇವಿಸಿ ಬನಶಂಕರಿಯ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಮಹಿಳೆಯನ್ನು ಬನಶಂಕರಿಯಲ್ಲಿದ್ದ ದಿಗ್ವಿಜಯ ಆಸ್ಪತ್ರೆಗೆ ಗಂಡ ದಾಖಲು ಮಾಡಿಸಿದ್ದಾರೆ. ಆದ್ರೆ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡದಂತೆ ಪತಿ ಒತ್ತಡ ಹೇರಿದ್ರಿಂದ ಆಸ್ಪತ್ರೆಯವರು ಪೊಲೀಸರಿಗೆ ದೌರ್ಜನ್ಯ ಪ್ರಕರಣದ ಬಗ್ಗೆ ಮಾಹಿತಿ ನೀಡಲ್ಲ. ಈ ಬಗ್ಗೆ ಸ್ಥಳಕ್ಕೆ ಬಂದ ಸಂತ್ರಸ್ತೆ ಪರಿಚಯಸ್ತರಾದ ಅನಿತಾ ಹಾಗೂ ಯಶೋಧ ಪೊಲೀಸರಿಗೆ ದೂರು ನೀಡದ ಬಗ್ಗೆ ಪ್ರಶ್ನಿಸಿ ಗಲಾಟೆ ಮಾಡಿದ್ದಾರೆ.

    ಆಗ ಪತಿ ಹೇಳಿದಕ್ಕೆ ದೂರು ಕೊಟ್ಟಿಲ್ಲ ಅಂತಾ ಆಸ್ಪತ್ರೆಯವರೇ ಒಪ್ಪಿಕೊಂಡಿದ್ದಲ್ಲದೇ ಫ್ಯಾಮಿಲಿಯವರ ಜೊತೆ ಐಸಿಯುನಲ್ಲಿಯೇ ವಾಗ್ವಾದಕ್ಕಿಳಿಯುತ್ತಾರೆ. ಇನ್ನು ಇಪ್ಪತ್ತನಾಲ್ಕು ಗಂಟೆ ವಿಷ ಕುಡಿದವರನ್ನು ಅಬ್ಸರ್‍ವೇಷನ್‍ನಲ್ಲಿ ಐಸಿಯುನಲ್ಲಿ ಇಡಬೇಕು ಅನ್ನೂ ರೂಲ್ಸ್ ಇದ್ರೂ, ನರಳಾಡುತ್ತಿದ್ದ ಸಂತ್ರಸ್ತೆಯನ್ನು ಯಾರು ಇಲ್ಲದ ವೇಳೆಯಲ್ಲಿ ಡಿಸ್ಚಾರ್ಜ್ ಮಾಡಿ ಗಂಡನ ಜೊತೆ ಹೋಗಮ್ಮ ಅಂತಾ ಕಳಿಸಿದ್ದಾರೆ.

    ಇತ್ತ ಮಹಿಳೆ ತನಗೆ ನಡೆಯೋದಕ್ಕೆ ಸಾಧ್ಯವಿಲ್ಲ ಅಂದ್ರೂ ಪತಿ ಬಳಿಯಿಂದ ಹಣ ಪಡೆದು ಯಾರು ಇಲ್ಲದ ವೇಳೆಯಲ್ಲಿ ಆಸ್ಪತ್ರೆಯಿಂದ ಹೊರದಬ್ಬಿದ್ದಾರೆ ಅಂತಾ ಸಂತ್ರಸ್ತೆ ಕಣ್ಣೀರು ಹಾಕಿದ್ದಾರೆ. ಸದ್ಯ ಪತಿ ಮನೆಯಿಂದ ಪಾರಾಗಿ ಬಂದಿರುವ ಮಹಿಳೆ ಖಾಸಗಿ ಆಸ್ಪತ್ರೆಯ ಅಮಾನವೀಯ ಕೃತ್ಯದ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

    ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

    ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಮೃತಪಟ್ಟಿದ್ದ 70 ವರ್ಷದ ವ್ಯಕ್ತಿಯ ದೇಹದಲ್ಲಿ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

    ಸೋಮವಾರ ರಾತ್ರಿ ಸುಖಾ ಸಪ್ತಾರ ಹಳ್ಳಿಯ ವಿರೇಂದ್ರ ಚಾದರ್ ಅವರ ತಂದೆ ಜಗದೀಶ್ ಚಾದರ್(70) ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಸೋಮವಾರ ಐಸಿಯುನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಮೃತದೇಹವನ್ನು ಪಡೆದುಕೊಳ್ಳುವಾಗ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

    ಮಧ್ಯರಾತ್ರಿ 2 ಗಂಟೆಗೆ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು. ಮೃತಪಟ್ಟ ದೇಹವನ್ನು ಪಡೆದುಕೊಳ್ಳುವಾಗ ದೇಹದ ಎಡಗಣ್ಣಿನ ಬಳಿ ಕೆಲವು ಗಂಭೀರ ಗುರುತುಗಳಾಗಿದ್ದವು ಮತ್ತು ಆ ಗಾಯಗಳಿಗೆ ಮುಲಾಮು ಹಾಕಲಾಗಿತ್ತು. ಅದನ್ನು ಕಂಡು ಏನಿದು ಎಂದು ಪ್ರಶ್ನಿಸಿದ್ದಾಗ ಸಿಬ್ಬಂದಿ ಇಲಿ ಕಚ್ಚಿದೆ ಎಂದು ಹೇಳಿದ್ದಾರೆ ಎಂಬುದಾಗಿ ವೀರೇಂದ್ರ ಚಾದರ್ ತಿಳಿಸಿದ್ದಾರೆ.

    ಸಿವಿಲ್ ಸರ್ಜನ್ ಡಾ. ಮಮ್ತಾ ಟಿಮೊರಿರವರು ಈ ಘಟನೆ ನನಗೆ ಬುಧವಾರ ಬೆಳಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಯಾರೊಬ್ಬ ಸಿಬ್ಬಂದಿಯೂ ನನ್ನ ಗಮನಕ್ಕೆ ತಂದಿಲ್ಲ. ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದು ತನಿಖೆಗೆ ಆದೇಶಿಸಿದ್ದೇನೆ. ಇಲಿಗಳನ್ನು ನಿಯಂತ್ರಿಸಲು ಈಗಾಗಲೇ ಇಂದೋರ್ ಮೂಲದ ಕ್ರೀಮಿನಾಶಕ ಕಂಪೆನಿಯನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದರು.

    ಮಾನವ ಹಕ್ಕು ಕಾರ್ಯಕರ್ತ ಮನೋಜ್ ದಿವಾರಿಯಾ ಪ್ರತಿಕ್ರಿಯಿಸಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿ ಅಲ್ಲ ಈ ಹಿಂದೆಯೂ ಸಂಭವಿಸಿತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಐಸಿಯು ನಲ್ಲಿ ಇಲಿಗಳು ಕಂಡುಬಂದಿರುವುದು ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ಮಾಡಲು ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವಿಷ ಸೇವಿಸಿದ ಪ್ರೇಮಿಗಳು-ಕೊನೆಗೆ ಐಸಿಯುನಲ್ಲಿಯೇ ಮದುವೆ

    ವಿಷ ಸೇವಿಸಿದ ಪ್ರೇಮಿಗಳು-ಕೊನೆಗೆ ಐಸಿಯುನಲ್ಲಿಯೇ ಮದುವೆ

    ಚಂಡೀಗಢ: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರೇಮಿಗಳಿಗೆ ಐಸಿಯುನಲ್ಲಿ ಯೇ ಕುಟುಂಬಸ್ಥರು ಮದುವೆ ಮಾಡಿಸಿರುವ ಘಟನೆಯೊಂದು ಹರಿಯಾಣ ರಾಜ್ಯದ ಹಿಸ್ಸಾರ್ ನಗರದಲ್ಲಿ ನಡೆದಿದೆ.

    23 ವರ್ಷದ ಗುರುಮುಖ್ ಸಿಂಗ್ ಮತ್ತು 22 ವರ್ಷದ ಕುಸುಮ ಆಸ್ಪತ್ರೆಯಲ್ಲಿಯೇ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ದಂಪತಿ. ಗುರುಮುಖ್ ಮತ್ತು ಕುಸುಮ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ತಮಗೆ ಮದುವೆ ಮಾಡಿಸಬೇಕೆಂದು ಇಬ್ಬರು ಕುಟುಂಬಸ್ಥರಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ಆದ್ರೆ ಕಾರಣಾಂತರಗಳಿಂದ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    ತಮ್ಮ ಮದುವೆಗೆ ವಿರೋಧ ವ್ಯಕ್ತವಾದ ಕೂಡಲೇ ಮೂರು ದಿನಗಳ ಹಿಂದೆ ಸೈಬರ್ ಕೆಫೆಯಲ್ಲಿ ವಿಷ ಸೇವಿಸಿದ್ದರು. ಕೂಡಲೇ ಇಬ್ಬರನ್ನು ಒಂದೇ ಆಸ್ಪತ್ರಗೆ ದಾಖಲಿಸಲಾಗಿತ್ತು. ಇಬ್ಬರನ್ನು ಒಂದೇ ಐಸಿಯುನಲ್ಲಿರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆಸ್ಪತ್ರೆಗೆ ಆಗಮಿಸಿದ ಎರಡು ಕುಟುಂಬಸ್ಥರ ಮನಸ್ಸು ಬದಲಿಸಿ, ಐಸಿಯುನಲ್ಲಿಯೇ ವೈದ್ಯರು, ಆಪ್ತ ಮಿತ್ರರ ಸಮ್ಮುಖದಲ್ಲಿ ಮದುವೆ ಮಾಡಿಸಿದ್ದಾರೆ.

    ಯುವತಿ ಸ್ಥಿತಿ ಗಂಭೀರ: ಚಿಕಿತ್ಸೆಯ ಬಳಿಕ ಯುವಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಗುರುಮುಖ್ ಮತ್ತು ಕುಸುಮ ಹಿಸ್ಸಾರ್ ನಗರದ ಡಿಎನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಶಿಕ್ಷಣ ಮುಗಿದ ಬಳಿಕ ಇಬ್ಬರು ತಮ್ಮ ಪೋಷಕರ ಮುಂದೆ ಮದುವೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ರು. ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತವಾಗುತ್ತಲೇ ಮನನೊಂದ ಜೋಡಿ ನಗರದ ದೇವಿ ಭವನ ದೇವಸ್ಥಾನದ ಬಳಿಯ ಸೈಬರ್ ಕೆಫೆಗೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ಸೇವಿಸುವ ಮುನ್ನ ಗುರುಮುಖ್ ತನ್ನ ಅಣ್ಣನಿಗೆ ಕರೆ ಮಾಡಿ ಆತ್ಮಹತ್ಯೆಯ ಮುನ್ಸೂಚನೆಯನ್ನು ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸುವಷ್ಟರಲ್ಲಿ ಇಬ್ಬರು ವಿಷ ಸೇವಿಸಿ ಅಸ್ವಸ್ತರಾಗಿದ್ದಾರೆ. ಕೂಡಲೇ ಗುರುಮುಖ್ ಸಹೋದರ ಇಬ್ಬರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಭಾರೀ ಮಳೆಯಿಂದಾಗಿ ಆಸ್ಪತ್ರೆಯ ಐಸಿಯುನಲ್ಲೇ ಹರಿದಾಡಿದ ಮೀನುಗಳು- ವಿಡಿಯೋ ನೋಡಿ

    ಭಾರೀ ಮಳೆಯಿಂದಾಗಿ ಆಸ್ಪತ್ರೆಯ ಐಸಿಯುನಲ್ಲೇ ಹರಿದಾಡಿದ ಮೀನುಗಳು- ವಿಡಿಯೋ ನೋಡಿ

    ಪಾಟ್ನಾ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದ ಪಾಟ್ನಾದಲ್ಲಿನ ನಳಂದ ಮೆಡಿಕಲ್ ಕಾಲೇಜ್ ಆಸ್ಪತ್ರೆಯೊಳಗೆ ಮಳೆನೀರಿನ ಜೊತೆಗೆ ಮೀನುಗಳು ಬಂದಿದ್ದು, ಐಸಿಯುನಲ್ಲಿ ಹರಿದಾಡುತ್ತಿವೆ.

    ನಳಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ರೋಗಿಗಳು ಹಾಸಿಗೆ ಮೇಲೆ ಮಲಗಿದ್ದರೆ ಕೊಠಡಿಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ತುಂಬಿಕೊಂಡಿದೆ. ಅಲ್ಲದೇ ಈ ನೀರಿನಲ್ಲಿ ಮೀನುಗಳು ಈಜಾಡುತ್ತಿರುವುದು ಭಾರಿ ಸುದ್ದಿ ಮಾಡುತ್ತಿದೆ.

    ಪಾಟ್ನಾದ ಎರಡನೇ ದೊಡ್ಡ ಆಸ್ಪತ್ರೆಗೆ ಮಳೆ ನೀರು ನುಗ್ಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಆರೋಗ್ಯಾಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಮಳೆನೀರನ್ನು ಆಸ್ಪತ್ರೆಯಿಂದ ಹೊರಹಾಕುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದಿದ್ದಾರೆ.

    ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಆಗಸ್ಟ್ 1ರವರೆಗೂ ಬಿಹಾರದ ಹಲವೆಡೆ ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

    ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

    ನವದೆಹಲಿ: ವೆಂಟಿಲೇಟರ್ಸ್, ವೈದ್ಯರ ಸೇವೆಗಳು ಮನೆಯ ಬಾಗಿಲಿಗೆ ಬಂದಾಯ್ತು ಈಗ ತುರ್ತು ನಿಘಾ ಘಟಕ(ಐಸಿಯು) ಸೇವೆಯು ದೊರೆಯಲಿದೆ.

    ಜನವರಿ 2 ರಂದು 77 ವರ್ಷದ ಡಿ ಸಿ ಗಂಭೀರ್ ಎಂಬವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಜ್ಞಾನ ತಪ್ಪಿದ್ದರು. ನಂತರ ಫರಿಧಾಬಾದ್ ಆಸ್ಪತ್ರೆಯಲ್ಲಿ 2 ತಿಂಗಳು ಚಿಕಿತ್ಸೆ ಪಡೆದ ಅವರು ಕೋಮಾ ಸ್ಥಿತಿಯಲ್ಲಿ ಮನೆಯ ಗೆಸ್ಟ್ ರೂಮ್ ನಲ್ಲಿ ಮಲಗಿದ್ದಾರೆ. ಗಂಭೀರ್ ಅವರಿರುವ ರೂಮ್ ಸದ್ಯ ಐಸಿಯು ಆಗಿ ಮಾರ್ಪಾಡಾಗಿದೆ. ಉಸಿರಾಡುವ ಯಂತ್ರ, ಆಮ್ಲಜನಕ ಸಿಲಿಂಡರ್, ಹೃದಯ ಸಂಬಂಧಿ ಯಂತ್ರಗಳು ಹಾಗೂ ಇತರೆ ಜೀವ ಉಳಿಸುವ ಸಾಧನಗಳು ಹಾಸಿಗೆ ಸುತ್ತಾ ಇದೆ.

    ಗಂಭೀರ್ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರದಿದ್ದರು ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದಕ್ಕಿಂತ ಮನೆಯಲ್ಲಿ ನೋಡಿಕೊಳ್ಳುವುದು ಸುರಕ್ಷಿತ ಹಾಗೂ ಸುಲಭ ಎಂದು ಅವರ ಮಗ ವಿಕಾಸ್ ಹೇಳುತ್ತಾರೆ.

    ಐಸಿಯುನಲ್ಲಿ ಇದ್ದಾಗ ಹುಣ್ಣುಗಳು ಆಗುತ್ತಿತ್ತು. ಐಸಿಯು ಸಿಬ್ಬಂದಿ ಪ್ರತಿ ರೋಗಿಗೂ ಪ್ರತ್ಯೇಕ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ರೋಗಿಗೆ ಸಮಸ್ಯೆಯನ್ನು ಹೇಳಲು ಆಗದಿದ್ದಾಗ ಪರಿಸ್ಥಿತಿ ಉಲ್ಭಣವಾಗುತ್ತದೆ. ಒಂದು ಹಂತವನ್ನು ಮೀರಿ ಐಸಿಯು ನಲ್ಲಿ ರೋಗಿಯನ್ನು ಇರಿಸಿದಾಗ ಮೂಲ ಸಮಸ್ಯೆ ಗುಣವಾಗುವುದಕ್ಕಿಂತ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಮನೆಯಲ್ಲಿ ಸೋಂಕನ್ನು ಹತೋಟಿಯಲ್ಲಿ ಇಡಬಹುದು ಜೊತೆಗೆ ಎಷ್ಟು ಹೊತ್ತು ಬೇಕು ಅಷ್ಟು ಹೊತ್ತು ಇವರ ಜೊತೆ ಇರಬಹುದು. ಐಸಿಯು ನಲ್ಲಿ 15 ನಿಮಿಷದಂತೆ ಎರಡು ಸಲ ದಿನಕ್ಕೆ ಭೇಟಿ ಮಾಡಬಹುದಿತ್ತು ಎಂದು ಹೇಳಿದರು.

    ಐಸಿಯು ಭೇಟಿ ರೋಗಿಗಳಿಗೆ ಹಾಗೂ ಭೇಟಿ ಮಾಡುವವರಿಗೆ ಆರೋಗ್ಯಕರವಲ್ಲ. ಈಗ ಫಿಲಿಪ್ಸ್, ಡಾಬರ್ ಹಾಗೂ ಕೆಲ ಹೊಸ ಸ್ಟಾರ್ಟ್ ಅಪ್ ಕಂಪೆನಿಗಳು ಐಸಿಯು ಸೇವೆಯನ್ನು ಒದಗಿಸುತ್ತಿವೆ.

    ಕಳೆದ ವರ್ಷ ದೆಹಲಿ ಎನ್‍ಸಿಆರ್ ಪ್ರದೇಶದಲ್ಲಿ ಫಿಲಿಪ್ಸ್ ಐಸಿಯು ಸೇವೆಯನ್ನು ಆರಂಭಿಸಿತು. 10 ರಿಂದ 25 ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ಕಂಪೆನಿಯ ರಿಚಾ ಸಿಂಗ್ ತಿಳಿಸಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನ್ಯೂಕ್ಲಿಯಸ್ ಕುಟುಂಬಗಳು ಹೆಚ್ಚಾಗುತ್ತಿವೆ. ಹಾಗಾಗಿ ಮನೆಯಲ್ಲಿ ಐಸಿಯು ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

    ಆಸ್ಪತ್ರೆಗಳು ಮನೆಯಿಂದ ದೂರ ಇದ್ದಾಗ ತುರ್ತು ಚಿಕಿತ್ಸೆಗೆ ಐಸಿಯು ಸೇವೆ ಬಹಳ ಸಹಾಯವಾಗುತ್ತದೆ ಎಂದು ಜನರಲ್ಲಿ ಭಾವನೆ ಮೂಡುತ್ತಿದೆ ಎಂದು ಹೆಲ್ತ್ ಕೇರ್ ವಿಭಾಗದ ನೌಕರರೊಬ್ಬರು ತಿಳಿಸಿದರು.

    ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಸೇವೆ ಪಡೆಯಲು ದಿನಕ್ಕೆ 30 ರಿಂದ 50 ಸಾವಿರ ಪಾವತಿ ಮಾಡಬೇಕಾಗುತ್ತದೆ. ಮನೆಯಲ್ಲೇ ಆದರೆ 7,500 ರೂ ರಿಂದ 12,500 ರೂಗಳಿಗೆ ವೆಚ್ಚ ತಗ್ಗಲಿದೆ ಎಂದು ಸ್ಟಾರ್ಟ್ ಅಪ್ ಕಂಪೆನಿಯ ಕಾರ್ಯನಿರ್ವಾಣಾಧಿಕಾರಿ ರಾಜೀವ್ ಮಾಥೂರ್ ತಿಳಿಸಿದ್ದಾರೆ. ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ 630 ರೋಗಿಗಳಿಗೆ ಸೇವೆಯನ್ನು ಕಲ್ಪಿಸಿದ್ದು ಸದ್ಯದಲ್ಲೇ ಇನ್ನೊಂದು ಶಾಖೆಯನ್ನು ಮುಂಬೈಯಲ್ಲಿ ತೆರೆಯಲಿದ್ದೇವೆ ಎಂದು ತಿಳಿಸಿದರು.

    ಐಸಿಯು ಸೇವೆ ಒದಗಿಸಲು ಮನೆಯಲ್ಲಿ ವ್ಯವಸ್ಥಿತವಾದ ಶುಚಿಯಾದ ರೂಮ್ ಇದ್ದು ಅನಿಯಂತ್ರಿತ ಪವರ್ ಬ್ಯಾಕ್ ಅಪ್ ಮತ್ತು ಸ್ಟೆಬಿಲೈಜರ್ಸ್ ಇರಬೇಕು. ಆಸ್ಪತ್ರೆಯವರ ಅನುಮತಿ ಪಡೆದ ಮೇಲೆ ರೋಗಿಯನ್ನು ಮನೆಯ ಐಸಿಯುಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದರು.

  • ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ 75 ದಿನವೂ ಅಪೋಲೋ ಆಸ್ಪತ್ರೆಯ ಎಲ್ಲಾ ಸಿಸಿಟಿವಿಗಳೂ ಆಫ್ ಆಗಿತ್ತು ಎಂದು ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರತಾಪ್ ರೆಡ್ಡಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾ. ಎ.ಅರ್ಮುಗಂಸ್ವಾಮಿ ಆಯೋಗದ ಮುಂದೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು, ಆಯೋಗಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಕ್ಷಮಿಸಿ, ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ 75 ದಿನವೂ ಆಸ್ಪತ್ರೆಯ ಸಿಸಿಟಿವಿ ಸ್ವಿಚ್ ಆಫ್ ಆಗಿತ್ತು. ಜಯಲಲಿತಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಐಸಿಯುವನ್ನೂ ಮುಚ್ಚಿದ್ದೆವು. ಜಯಾ ಆಗಮನಕ್ಕೂ ಆಗಮಿಸಿದ್ದ ರೋಗಿಗಳನ್ನು ಬೇರೆ ಐಸಿಯುವಿಗೆ ವರ್ಗಾಯಿಸಿದೆವು. ಒಟ್ಟು 24 ಕೊಠಡಿಯಿರುವ ಐಸಿಯುವಿನಲ್ಲಿ ಜಯಲಲಿತಾಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೆವು. ಯಾರೂ ಏನೂ ನೋಡಬಾರದು ಎಂದು ಅವರು ಸಿಸಿಟಿವಿಯನ್ನು ಆಫ್ ಮಾಡಿಸಿದ್ದರು. ಜಯಲಲಿತಾ ಭೇಟಿಗೆ ಯಾವುದೇ ಸಂದರ್ಶಕರಿಗೂ ಅವಕಾಶ ನೀಡಿರಲಿಲ್ಲ ಎಂದರು.

    ಜಯಲಲಿತಾರ ಹತ್ತಿರದ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಿದ್ದೆವು. ಜಯಲಲಿತಾ ಸ್ಥಿತಿ ಗಂಭೀರವಾಗಿದ್ದರಿಂದ ನಾವು ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ಭೇಟಿಗೆ ಡ್ಯೂಟಿಯಲ್ಲಿದ್ದ ವೈದ್ಯರ ಅನುಮತಿ ಪಡೆಯಬೇಕಿತ್ತು ಎಂದು ಪ್ರತಾಪ್ ರೆಡ್ಡಿ ಹೇಳಿದರು.

    ವಾರ್ಡ್ ಬಾಯ್ ನಿಂದ ತೊಡಗಿ ನರ್ಸ್‍ಗಳು, ವೈದ್ಯರವರೆಗೆ ಎಲ್ಲರೂ ಜಯಲಲಿತಾರನ್ನು ಚೆನ್ನಾಗಿ ನೋಡಿಕೊಂಡರು. ವಿದೇಶದಿಂದಲೂ ವೈದ್ಯರು ಬಂದಿದ್ದರು. ಜಯಲಲಿತಾ ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಈಗಾಗಲೇ ನಾವು ಆಯೋಗಕ್ಕೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ. ಆಯೋಗವು ನಮಗೆ ಸೂಚಿಸಿದರೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ ಎಂದರು.

  • ವಿಡಿಯೋ: ವೈದ್ಯರ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ!

    ವಿಡಿಯೋ: ವೈದ್ಯರ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ!

    – ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ವೈದ್ಯ

    ಮುಂಬೈ: ನರಶಸ್ತ್ರಚಿಕಿತ್ಸಕರು ಡ್ಯೂಟಿಯಲ್ಲಿಲ್ಲದ ಕಾರಣ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ರೋಗಿಯ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂಳೆ ತಜ್ಞರಾದ ಡಾ.ರೋಹನ್ ಮಾಮುಂಕರ್ ಮೇಲೆ ಭಾನುವಾರದಂದು ಹಲ್ಲೆ ನಡೆದಿದೆ.

    ನಡೆದಿದ್ದೇನು?: ಭಾನುವಾರ ರಾತ್ರಿ ತಲೆಗೆ ತೀವ್ರ ಗಾಯವಾಗಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದ್ರೆ ನರಶಸ್ತ್ರಚಿಕಿತ್ಸಕರು ಆಸ್ಪತ್ರೆಯಲ್ಲಿ ಇಲ್ಲದ ಕಾರಣ ರೋಗಿಯನ್ನು ಬೇರೊಂದು ಅಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ವೈದ್ಯ ರೋಹನ್ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದು ರೋಗಿಯ ಸಂಬಂಧಿಕರಾದ ಸುಮಾರು 20 ಮಂದಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ರೋಹನ್ ಅವರ ಮೇಲೆ ರಾಡ್ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ರೋಹನ್ ಅವರ ತಲೆ ಹಾಗೂ ಎದೆಯ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿವೆ. ವೈದ್ಯರ ಕಣ್ಣಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ವೈದ್ಯ ರೋಹನ್ ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದೀಗ ಮಹಾರಾಷ್ಟ್ರ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್, ವೈದ್ಯ ರೋಹನ್ ಮೇಲಿನ ಹಲ್ಲೆ ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದು, ಮೊಂಬತ್ತಿ ಹಿಡಿದು ಮೆರವಣಿಗೆ ಮಾಡಲು ನಿರ್ಧರಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

    https://www.youtube.com/watch?v=8ver-Y2FgcQ