Tag: Icon

  • ಬೆಂಗಳೂರು ಐಕಾನ್ ಆಗಿ ಗಾಯಕ ಮೋಹನ್, ನಟ ಮಾಸ್ಟರ್ ಆನಂದ್ ಆಯ್ಕೆ

    ಬೆಂಗಳೂರು ಐಕಾನ್ ಆಗಿ ಗಾಯಕ ಮೋಹನ್, ನಟ ಮಾಸ್ಟರ್ ಆನಂದ್ ಆಯ್ಕೆ

    ತದಾರರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಬೃಹತ್ ಬೆಂಗಳೂರು (Bangalore) ಮಹಾನಗರ ಪಾಲಿಕೆ (BBMP) ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಅದರಲ್ಲೂ ಬೆಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಇದೀಗ ಬೆಂಗಳೂರು ಐಕಾನ್ ಗಳೆಂದು (Icon)  ಐವರು ಪ್ರಮುಖ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

    ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವಂತಹ ಐದು ವ್ಯಕ್ತಿಗಳನ್ನು ಬೆಂಗಳೂರು ಐಕಾನ್ ಹೆಸರಿನಲ್ಲಿ ಆಯ್ಕೆ ಮಾಡಲಾಗಿದ್ದು, ಇವರು ಬೆಂಗಳೂರಿನ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲಿದ್ದಾರೆ. ಈ ಐವರಲ್ಲಿ ಕನ್ನಡ ಸಿನಿಮಾ ರಂಗದ ಒಬ್ಬರು ಗಾಯಕರನ್ನು ಮತ್ತು ನಟರನ್ನು ಬಿಬಿಎಂಪಿ ಆಯ್ಕೆ ಮಾಡಿಕೊಂಡಿದೆ. ಇದನ್ನೂ ಓದಿ:ನಮ್ಮ ನಡುವೆ ಏನಿಲ್ಲ, ಡಾಲಿಗೆ ಹೆಣ್ಣು ಕೊಡುತ್ತಿಲ್ಲ: ನಟಿ ಅಮೃತಾ

    ಬಾಲ್ಯದಿಂದಲೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿರುವ ಮಾಸ್ಟರ್ ಆನಂದ್ಅ (Master Anand)ವರನ್ನು ಬೆಂಗಳೂರು ಐಕಾನ್ ಎಂದು ಗುರುತಿಸಿರುವ ಬಿಬಿಎಂಪಿ, ಇವರ ಮೂಲಕ ಮತದಾನದ ಜಾಗೃತಿಗೆ ಮುಂದಾಗುತ್ತಿದೆ. ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆನಂದ್, ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾದಲ್ಲಿ ಜುಂಜಪ್ಪ ಗೀತೆಯನ್ನು ಹಾಡಿರುವ ಗಾಯಕ ಮೋಹನ್ ಕುಮಾರ್ (Mohan Kumar) ಕೂಡ ಬೆಂಗಳೂರು ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಕಾಡುಗೊಲ್ಲರ  ಹಾಡುಗಳನ್ನು ಹಾಡುತ್ತಾ ಗಮನ ಸೆಳೆದಿರುವ ಮೋಹನ್ ಅವರಿಗೆ ಇತ್ತೀಚೆಗಷ್ಟೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಅತ್ಯುತ್ತಮ ಗಾಯಕ ಪ್ರಶಸ್ತಿ ನೀಡಿ ಗೌರವಿಸಿತ್ತು.

  • ಸ್ಟೈಲಿಶ್ ಸ್ಟಾರ್ ಅಲ್ಲುಗೆ ಜೋಡಿ ಆಗ್ತಾರಾ ಈ ಕನ್ನಡದ ನಟಿಯರು?

    ಸ್ಟೈಲಿಶ್ ಸ್ಟಾರ್ ಅಲ್ಲುಗೆ ಜೋಡಿ ಆಗ್ತಾರಾ ಈ ಕನ್ನಡದ ನಟಿಯರು?

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‍ರ ಮುಂದಿನ ಸಿನಿಮಾದಲ್ಲಿ ಕನ್ನಡದ ಇಬ್ಬರು ಬಿಗ್ ಸ್ಟಾರ್ ನಟಿಯರು ಜೋಡಿ ಆಗಲಿದ್ದಾರೆ ಎಂಬ ಸುದ್ದಿ ಇದೀಗ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್ ಬಳಿಕ ವೇಣು ಶ್ರೀ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಐಕಾನ್’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇರಲಿದ್ದಾರೆ ಎನ್ನಲಾಗುತ್ತಿದೆ.

    ಅದರಲ್ಲಿಯೂ ಈ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಕನ್ನಡದ ನಟಿ ಪೂಜಾ ಹೆಗ್ಡೆ ಹಾಗೂ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯರಾಗಿ ಆಯ್ಕೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಿಜೆ ಹಾಗೂ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದರು. ಈ ಎರಡು ಸಿನಿಮಾಗಳು ಟಾಲಿವುಡ್ ಬಾಕ್ಸ್ ಆಫಿಸ್‍ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು.

    ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಈ ಸಿನಿಮಾ ಕುರಿತಂತೆ ಟಾಲಿವುಡ್‍ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿದೆ.

    ಈ ಮಧ್ಯೆ ಐಕಾನ್ ಸಿನಿಮಾಕ್ಕಾಗಿ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣರಿಗೆ ಚಿತ್ರತಂಡ ಕಾಲ್ ಶೀಟ್ ಕೇಳಿದ್ದು, ಒಂದೇ ಸಿನಿಮಾದಲ್ಲಿ ಈ ಇಬ್ಬರು ನಟಿಯರು ಅಲ್ಲು ಅರ್ಜುನ್ ಜೊತೆಗೆ ಅಭಿನಯಿಸುತ್ತಾರಾ ಅಂತ ಕಾದು ನೋಡಬೇಕಾಗಿದೆ.  ಇದನ್ನೂ ಓದಿ:ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ