Tag: ICICI Bank

  • ಬ್ಯಾಂಕ್ ಸಿಬ್ಬಂದಿಯಿಂದಲೇ 12 ಕೋಟಿ ದರೋಡೆ – ಗುರುತು ಮುಚ್ಚಿಡಲು ಬುರ್ಕಾ ಧರಿಸಿದ

    ಬ್ಯಾಂಕ್ ಸಿಬ್ಬಂದಿಯಿಂದಲೇ 12 ಕೋಟಿ ದರೋಡೆ – ಗುರುತು ಮುಚ್ಚಿಡಲು ಬುರ್ಕಾ ಧರಿಸಿದ

    ಮುಂಬೈ: ಥಾಣೆಯ ಮಾನ್ಪಾಡಾದ ಐಸಿಐಸಿಐ ಬ್ಯಾಂಕ್‍ನಿಂದ (ICICI Bank) 12 ಕೋಟಿ ರೂ. ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಎರಡುವರೆ ತಿಂಗಳ ನಂತರ ಪೊಲೀಸರು (Police) ಬಂಧಿಸಿದ್ದಾರೆ.

    ಮುಂಬ್ರಾದ ನಿವಾಸಿ ಅಲ್ತಾಫ್ ಶೇಖ್ (43) ಬಂಧಿತ (Arrest) ಆರೋಪಿ. ಈತ ಬ್ಯಾಂಕ್‍ನಲ್ಲಿ (Bank) ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಕಸ್ಟೋಡಿಯನ್ ಆಗಿ, ಈತ ಬ್ಯಾಂಕಿನ ಲಾಕರ್ ಕೀಗಳ ಕೇರ್‍ಟೇಕರ್ ಆಗಿದ್ದ.

    ಇದರ ಲಾಭವನ್ನು ಪಡೆದುಕೊಂಡಿದ್ದ ಅಲ್ತಾಫ್ ಶೇಖ್ ತನ್ನ ಸಹೋದರಿ ನೀಲೋಫರ್ ಸೇರಿ ಐವರೊಂದಿಗೆ ಬ್ಯಾಂಕ್‍ನಲ್ಲಿ ದರೋಡೆ ಮಾಡಲು ಒಂದು ವರ್ಷದಿಂದ ಪ್ಲ್ಯಾನ್ ಮಾಡಿಕೊಂಡಿದ್ದ. ಇದರ ಪ್ರಕಾರವಾಗಿಯೇ ಬ್ಯಾಂಕ್‍ನಲ್ಲಿದ್ದ ಲೋಪದೋಷಗಳನ್ನು ಹಾಗೂ ಎಲ್ಲಾ ವ್ಯವಸ್ಥೆಯನ್ನು ಗಮನಿಸಿದ್ದ. ಆ ಬಳಿಕ ಅಲ್ತಾಫ್ ಹಾಗೂ ಆತನ ಸಹಚರರು ಸೇರಿ ಜು.12 ರಂದು ಕಳ್ಳತನ ಮಾಡಿದ್ದರು.

    ತನ್ನ ಪ್ಲ್ಯಾನ್ ಪ್ರಕಾರದಂತೆ ಎಸಿ ಡಕ್ಟ್‍ನೊಳಗೆ ಒಳ ಹೋಗಿ ಹಾಗೂ ಸಿಸಿಟಿವಿ ಫೂಟೇಜ್ ಅನ್ನು ಧ್ವಂಸಗೊಳಿಸಿ ಹಣವನ್ನು ಕದ್ದಿದ್ದಾನೆ. ಈ ವೇಳೆ ಅಲರಾಮ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿ ಮಾರನೇ ದಿನ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಘಟನೆ ಬಳಿಕ ಅಲ್ತಾಫ್ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೇ ತನ್ನ ಗುರುತನ್ನು ಬದಲಾಯಿಸಿಕೊಂಡು ಬುರ್ಕಾ ಹಾಕಿ ಓಡಾಡುತ್ತಿದ್ದ.

    ಅಲ್ತಾಫ್ ಸಹೋದರಿ ನೀಲೋಫರ್ ತನ್ನ ಮನೆಯಲ್ಲಿ ಸ್ವಲ್ಪ ಹಣವನ್ನು ಬಚ್ಚಿಟ್ಟಿದ್ದಳು. ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿ ಎಂದು ದಾಖಲಿಸಿ ಬಂಧಿಸಲಾಗಿತ್ತು. ಈ ವೇಳೆ ದರೋಡೆಯ ಎಲ್ಲಾ ಸತ್ಯವನ್ನು ಹಾಗೂ ಅಲ್ತಾಫ್ ಎಲ್ಲಿದ್ದಾನೆ ಎನ್ನುವುದರ ಕುರಿತು ಬಾಯ್ಬಿಟ್ಟಿದ್ದಾಳೆ. ಅದಾದ ಬಳಿಕ ಆಕೆಯ ಮಾಹಿತಿಯನ್ನು ಆಧರಿಸಿ ಪುಣೆಯಲ್ಲಿ (Pune) ಅಲ್ತಾಫ್ ಶೇಖ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಬ್ಯಾಂಕ್‍ನಿಂದ ಕದ್ದ 12.20 ಕೋಟಿಯಲ್ಲಿ ಸುಮಾರು 9 ಕೋಟಿ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • FD Interest- ಈ 2 ಬ್ಯಾಂಕ್‍ಗಳಲ್ಲಿನ ಠೇವಣಿಗೆ ಸಿಗುತ್ತೆ ಹೆಚ್ಚು ಬಡ್ಡಿ ದರ

    FD Interest- ಈ 2 ಬ್ಯಾಂಕ್‍ಗಳಲ್ಲಿನ ಠೇವಣಿಗೆ ಸಿಗುತ್ತೆ ಹೆಚ್ಚು ಬಡ್ಡಿ ದರ

    ನವದೆಹಲಿ: ನೀವು ಫಿಕ್ಸೆಡ್‌ ಡೆಪಾಸಿಟ್ (ಎಫ್‍ಡಿ) ಮೂಲಕ ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುವವರಾಗಿದ್ದಲ್ಲಿ ಇಲ್ಲಿದೆ ನಿಮಗೆ ಸಿಹಿ ಸುದ್ದಿ. ಭಾರತದ ಅತೀ ದೊಡ್ಡ ಬ್ಯಾಂಕ್‍ಗಳ ಪಟ್ಟಿಯಲ್ಲಿ ಬರುವ 2 ಸಂಸ್ಥೆಗಳು ಎಫ್‍ಡಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದ್ದು, ಜನರಿಗೆ ಸಿಹಿ ಸುದ್ದಿಯನ್ನು ನೀಡಿದೆ.

    ಹೆಚ್‍ಡಿಎಫ್‍ಸಿ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‍ಗಳು ತಮ್ಮ ಎಫ್‍ಡಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಇದರಿಂದ ನೀವು ಮೊದಲಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಲಿದ್ದೀರಿ. ಇದನ್ನೂ ಓದಿ: ಭಾರತಕ್ಕೆ ಕಂಟಕವಾಗುವುದೇ ಓಮಿಕ್ರಾನ್ – ಹೈರಿಸ್ಕ್ ದೇಶಗಳಿಂದ 7,976 ಮಂದಿ ಆಗಮನ?

    ಹೆಚ್‍ಡಿಎಫ್‍ಸಿ ಬ್ಯಾಂಕ್
    ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಹೆಚ್‍ಡಿಎಫ್‍ಸಿ ತನ್ನ ಹೊಸ ಎಫ್‍ಡಿ ಬಡ್ಡಿಯ ದರಗಳನ್ನು ಪಟ್ಟಿ ಮಾಡಿದ್ದು, ಇದು ಡಿಸೆಂಬರ್ 1 ರಿಂದ ಜಾರಿಯಾಗಿದೆ.

    7-14 ದಿನಗಳು: 2.50%
    15-29 ದಿನಗಳು: 2.50%
    30-45 ದಿನಗಳು: 3.00%
    46-60 ದಿನಗಳು: 3.00%
    61-90 ದಿನಗಳು: 3.00%
    91 ದಿನಗಳಿಂದ 6 ತಿಂಗಳು: 3.50%
    6 ತಿಂಗಳು 1 ದಿನದಿಂದ 9 ತಿಂಗಳು: 4.40%
    9 ತಿಂಗಳು 1 ದಿನದಿಂದ 1 ವರ್ಷ: 4.40%
    1 ವರ್ಷ: 4.90%
    1 ವರ್ಷ 1 ದಿನದಿಂದ 2 ವರ್ಷ: 5.00%
    2 ವರ್ಷ 1 ದಿನದಿಂದ 3 ವರ್ಷ: 5.15%
    3 ವರ್ಷ 1 ದಿನದಿಂದ 5 ವರ್ಷ: 5.35%
    5 ವರ್ಷ 1 ದಿನದಿಂದ 10 ವರ್ಷ: 5.50%

    ಐಸಿಐಸಿಐ ಬ್ಯಾಂಕ್
    ಐಸಿಐಸಿಐ ಬ್ಯಾಂಕ್ ಎಫ್‍ಡಿಗಳಿಗೆ 7 ದಿನಗಳಿಂದ 10 ವರ್ಷಗಳ ವರೆಗಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಶೇ. 2.5 ದಿಂದ ಪ್ರಾರಂಭವಾಗಿ ಶೇ. 5.50 ವರೆಗೆ ಬಡ್ಡಿ ದರವನ್ನು ನೀಡುತ್ತಿದೆ. ಈ ಹೊಸ ದರ ನವೆಂಬರ್ 16 ರಿಂದಲೇ ಪ್ರಾರಂಭವಾಗಿದೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 300 ಸೀಟ್‌ಗಳನ್ನು ಗೆಲ್ಲುವುದಿಲ್ಲ: ಗುಲಾಮ್ ನಬಿ ಆಜಾದ್

    7-14 ದಿನಗಳು: 2.50%
    15-29 ದಿನಗಳು: 2.5%
    30-45 ದಿನಗಳು: 3%
    46-60 ದಿನಗಳು: 3%
    61-90 ದಿನಗಳು: 3%
    91-120 ದಿನಗಳು: 3.5%
    121-184 ದಿನಗಳು: 3.5%
    185-210 ದಿನಗಳು: 4.40%
    211-270 ದಿನಗಳು: 4.40%
    271-289 ದಿನಗಳು: 4.40%
    290 ದಿನಗಳಿಂದ 1 ವರ್ಷದ ಒಳಗೆ: 4.40%
    1 ವರ್ಷದಿಂದ 389 ದಿನಗಳು: 4.9%
    390 ದಿನಗಳಿಂದ 18 ತಿಂಗಳು: 4.9%
    18 ತಿಂಗಳಿನಿಂದ 2 ವರ್ಷ: 5%
    2 ವರ್ಷ 1 ದಿನದಿಂದ 3 ವರ್ಷ: 5.15%
    3 ವರ್ಷ 1 ದಿನದಿಂದ 5 ವರ್ಷ: 5.35%
    5 ವರ್ಷ 1 ದಿನದಿಂದ 10 ವರ್ಷ: 5.50%

    ಇನ್ನೊಂದು ಗಮನಾರ್ಹ ವಿಚಾರವೆಂದರೆ ಹಿರಿಯ ನಾಗರಿಕರು ಬ್ಯಾಂಕ್ ಎಫ್‍ಡಿಗಳಲ್ಲಿ ಸಾಮಾನ್ಯರಿಗಿಂತ ಶೇ. 0.50 ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.

  • ಎಟಿಎಂನಲ್ಲಿ ಹಣ ಕದಿಯಲು ಯತ್ನ- ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದ ಕಳ್ಳತನ!

    ಎಟಿಎಂನಲ್ಲಿ ಹಣ ಕದಿಯಲು ಯತ್ನ- ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದ ಕಳ್ಳತನ!

    ವಿಜಯಪುರ: ಬೆಳಗಿನ ಜಾವ ಕಳ್ಳರು ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿ, ಪೊಲೀಸರನ್ನು ಕಂಡು ಪರಾರಿಯಾದ ಘಟನೆ ನಗರದ ಬಾಗಲಕೋಟೆ ರಸ್ತೆಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಸುಮಾರು 4ರ ಹೊತ್ತಿಗೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂನಲ್ಲಿ ಹಣ ಕದಿಯಲು ಕಳ್ಳರು ಪ್ರಯತ್ನಿಸಿದ್ದಾರೆ. ಗ್ಯಾಸ್ ಕಟ್ಟರ್ ಸಹಾಯದಿಂದ ಎಟಿಎಂ ಕತ್ತರಿಸುತ್ತಿದ್ದಾಗ, ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಗಾಂಧಿಚೌಕ್ ಠಾಣೆಯ ಎಎಸೈ ಪ್ರೇಮಾ ಕೂಚಬಾಳ ಕಣ್ಣಿಗೆ ಕದೀಮರು ಬಿದ್ದಿದ್ದಾರೆ. ಕೂಡಲೇ ಜಾಗೃತರಾದ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.

    ಸ್ಥಳದಲ್ಲಿ ಗ್ಯಾಸ್ ಕಟರ್ ಹಾಗೂ ಇತರೆ ವಸ್ತುಗಳು ಸಿಕ್ಕಿದ್ದು, ಕಳ್ಳರು ಕೆಎ 32 ಎಂ 4527 ಕಾರಿನಲ್ಲಿ ಪರಾರಿಯಾಗಿದ್ದಾರೆ. ಕದೀಮರನ್ನು ಬೆನ್ನತ್ತಿದ ಎಎಸೈ ಪ್ರೇಮಾರವರ ಕೈಗೆ ಸಿಗದೇ ಪರಾರಿಯಾಗಿದ್ದಾರೆ. ಐಸಿಐಸಿಐ ಎಟಿಎಂನಲ್ಲಿ ಹಣ ಸೇಫಾಗಿದ್ದು, ಘಟನೆ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ನವದೆಹಲಿ: ಆಪಲ್ ಐ ಫೋನ್ ಪ್ರಿಯರಿಗೆ ಫ್ಲಿಪ್ ಕಾರ್ಟ್ ತನ್ನ ಆಪಲ್ ವೀಕ್ ಮಾರಾಟದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ.

    ಒಂದು ವಾರ ನಡೆಯುವ ಆಪಲ್ ವೀಕ್ ಮಾರಾಟ ಮೇ 27 ರಂದು ಕೊನೆಯಾಗಲಿದೆ. ಕೆಲವು ಐಫೋನ್ ಮಾದರಿಗಳು, ಮ್ಯಾಕ್ ಬುಕ್ ಏರ್, ಐಪಾಡ್, ಐಪಾಡ್ ಪ್ರೊ ಮತ್ತು ಆಪಲ್ ವಾಚ್ ಗಳ ಮೇಲೆ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ.

    ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಮೂಲಕ ಹಣ ಪಾವತಿಸಿದಲ್ಲಿ ಶೇ10 ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ.

    ಆಪಲ್ ವೀಕ್ ಮಾರಾಟದ ಕೆಲವು ಪ್ರಾಡಕ್ಟ್ ಗಳ ದರಗಳು

    ಐ ಪೋನ್ 6(32 ಜಿಬಿ) – ನಿಖರ ಬೆಲೆ 29,500 ರೂ. – ಮಾರಾಟ ಬೆಲೆ 23,999 ರೂ.
    ಐ ಪೋನ್ 6 ಎಸ್(32 ಜಿಬಿ) – ನಿಖರ ಬೆಲೆ 40,000 ರೂ. – ಮಾರಾಟ ಬೆಲೆ 33,999 ರೂ.
    ಐ ಪೋನ್ ಎಸ್ ಇ(32 ಜಿಬಿ) – ನಿಖರ ಬೆಲೆ 26,000 ರೂ. – ಮಾರಾಟ ಬೆಲೆ 17,999 ರೂ.
    ಐ ಪೋನ್ 7(32 ಜಿಬಿ) – ನಿಖರ ಬೆಲೆ 49,000 ರೂ. – ಮಾರಾಟ ಬೆಲೆ 46,999 ರೂ.
    ಐ ಪೋನ್ ಎಕ್ಸ್(32 ಜಿಬಿ) – ನಿಖರ ಬೆಲೆ 89,000 ರೂ. – ಮಾರಾಟ ಬೆಲೆ 85,999 ರೂ.
    ಐ ಪೋನ್ 8 & 8 ಪ್ಲಸ್(32 ಜಿಬಿ) – ನಿಖರ ಬೆಲೆ 67,940 ರೂ. – ಮಾರಾಟ ಬೆಲೆ 62,999 ರೂ.
    ಏರ್ ಪಾಡ್ಸ್ ಮತ್ತು ಇಯರ್ ಪಾಡ್ಸ್ – ನಿಖರ ಬೆಲೆ 2,199 ರೂ. – ಮಾರಾಟ ಬೆಲೆ ಕನಿಷ್ಠ 1,899 ರೂ.
    ಆಪಲ್ ಐ ಪಾಡ್ಸ್ – ನಿಖರ ಬೆಲೆ 28,000 ರೂ. – ಮಾರಾಟ ಬೆಲೆ 21,900 ರೂ.
    ಆಪಲ್ ವಾಚ್ ಸೀರೀಸ್ ಕನಿಷ್ಠ 20,900 ರೂ.
    ಆಪಲ್ ಲ್ಯಾಪ್ ಟಾಪ್ – ನಿಖರ ಬೆಲೆ 57,990 ರೂ. – ಮಾರಾಟ ಬೆಲೆ 55,990 ರೂ.

  • ಬೆಂಗ್ಳೂರಲ್ಲಿ ಬೆಳ್ಳಂಬೆಳ್ಳಗೆ ದರೋಡೆ- ಎಟಿಎಂಗೆ ಹಣ ತುಂಬುವಾಗ 18 ಲಕ್ಷ ರೂ. ಕಸಿದು ಪರಾರಿ

    ಬೆಂಗ್ಳೂರಲ್ಲಿ ಬೆಳ್ಳಂಬೆಳ್ಳಗೆ ದರೋಡೆ- ಎಟಿಎಂಗೆ ಹಣ ತುಂಬುವಾಗ 18 ಲಕ್ಷ ರೂ. ಕಸಿದು ಪರಾರಿ

    ಬೆಂಗಳೂರು: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾಗಿರುವ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

    ಇಂದು ಬೆಳ್ಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್‍ ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ಕರ್ಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದಾರೆ.

    ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜೆನ್ಸಿಯ ಸಿಬ್ಬಂದಿಗಳು. ಎಟಿಎಂ ಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು.  ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.

    ಈ ಘಟನೆಯಿಂದ ಮೋಹನ್ ಗೆ ಗಂಭೀರ ಗಾಯವಾಗಿದ್ದು ಗೂರುಗುಂಟೆಪಾಳ್ಯದ ಸ್ವರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.