Tag: Ice Cream

  • ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಬೆಂಗಳೂರು: ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ ಜೀವ ತೆಗೆಯುತ್ತದೆ. ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳನ್ನು ಬಾಯಿ ಚಪ್ಪರಿಸಿ ತಿನ್ನುವ ಮುನ್ನ ಈ ಸ್ಟೋರಿ ಓದಿ.

    ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಆದರೆ ಇದು ಅಪಾಯಕಾರಿ ಎಂಬುದು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದೆ.

    ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಹಾಗೂ ಸೆಂಟರ್ ಗಳ ಮುಂದೆ ಹೀಗೆ ಎಲ್ಲ ಕಡೆ ಐಸ್ ಕ್ರೀಂ ಗಾಡಿಯವರು ಕಾಣಸಿಗುತ್ತಾರೆ. ಕಂಡ ತಕ್ಷಣ ವಿವಿಧ ಬಗೆಯ ಐಸ್ ಕ್ರೀಂಗಳನ್ನು ತಿನ್ನಲು ಬಯಸುತ್ತೇವೆ. ಆದರೆ ಟೇಸ್ಟಿ ಎಂದು ತಿನ್ನುವ ಐಸ್ ಕ್ರೀಂ ಗಾಡಿಗಳತ್ತ ಅಥವಾ ಗಾಡಿಗಳಲ್ಲಿನ ಕ್ರೀಂ, ಅದಕ್ಕೆ ಬಳಸುವ ನೀರು, ಪಾಚಿ ಕಟ್ಟಿರುವ ಬಾಕ್ಸ್ ನೋಡಿದರೆ ಖಂಡಿತಾ ಐಸ್ ಕ್ರೀಂ ತಿನ್ನುವ ಗೋಜಿಗೆ ಹೋಗಲ್ಲ.

    ಗಲೀಜು, ಪಾಚಿ ತುಂಬಿರುವ ನೀರು, ತೊಳೆಯದೇ ವರ್ಷ ಆಯಿತೇನೋ ಅನ್ನುವಷ್ಟೂ ಹಳೆಯ, ತುಕ್ಕು ಹಿಡಿದಿರುವ, ಅಲ್ಲಲ್ಲಿ ಕಪ್ಪು ಕಪ್ಪಾಗಿ ಗಲೀಜು ತುಂಬಿರುವ ಐಸ್ ಕ್ರೀಂ ಪೆಟ್ಟಿಗೆಯನ್ನು ಕಂಡರೆ ಗಾಬರಿಯಾಗುತ್ತದೆ. ಐಸ್ ಕ್ರೀಂ ನೋಡಿದರೇನೆ ವಾಕರಿಕೆ ಬರುವಂತೆ ಅನ್ನಿಸುತ್ತದೆ. ಈ ಐಸ್ ಕ್ರೀಂಗೆ ಬಳಸುವ ನೀರಿನಿಂದಲೇ ನಿಮಗೆ ರೋಗ ಬರುತ್ತದೆ. ಐಸ್ ಕ್ರೀಂನ್ನು ಕೋನ್‍ಗೆ ಹಾಕುವ ಚಮಚದೊಳಗೆ ಕೂಡ ಗಲೀಜು ತುಂಬಿರುತ್ತದೆ.

    ಬೆಂಗಳೂರಿನ ಎಂಜಿ ರಸ್ತೆ, ಜಯನಗರದ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಇಂತಹ ಏರಿಯಾದಲ್ಲೇ ಈ ರೀತಿಯಾದರೆ ಇನ್ನು ಗಲ್ಲಿಗಳಲ್ಲಿ ಇನ್ಯಾವ ರೀತಿಯ ಐಸ್ ಕ್ರೀಂ ಸಿಗುತ್ತವೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

    ಈ ಐಸ್ ಕ್ರೀಂ ತಿಂದರೆ ನಿಮ್ಮ ಹೊಟ್ಟೆ ಕೆಡುವುದು, ಆರೋಗ್ಯ ಹದಗೆಡುವುದು ಮಾತ್ರವಲ್ಲ, ಕ್ರೀಂಗಳಿಗೆ ಕಲರ್ ಬರಲು ವಿವಿಧ ರೀತಿಯ ಕೆಮಿಕಲ್ ಸುರಿಯುತ್ತಾರೆ. ಹೀಗಾಗಿ ನೀವು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯ ಕೆಡಿಸಬಹುದು. ಕಂಡ ಕಂಡಲ್ಲಿ ಐಸ್ ಕ್ರೀಂ ತಿನ್ನುವ ಮುನ್ನ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಹದಗೆಡುವುದು ಪಕ್ಕಾ.

  • ಮ್ಯಾಂಗೋ ಐಸ್ ಕ್ರೀಂ ಮಾಡುವ ವಿಧಾನ

    ಮ್ಯಾಂಗೋ ಐಸ್ ಕ್ರೀಂ ಮಾಡುವ ವಿಧಾನ

    ಐಸ್ ಕ್ರಿಂ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಸೀಸನ್ ನಲ್ಲಿ ಬರುವ ಮ್ಯಾಂಗೋ ಐಸ್ ಕ್ರೀಂ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಮ್ಯಾಂಗೋ ಐಸ್ ಕ್ರೀಂ ಮಾಡುವ ಸರಳ ಹಾಗೂ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮಾವಿನ ಹಣ್ಣು -2-3
    2. ಸಕ್ಕರೆ – ಚಮಚ ( ನಿಮ್ಮ ರುಚಿಗೆ ತಕ್ಕಷ್ಟು)
    3. ಫ್ರೆಶ್ ಕ್ರೀಮ್ – 100 ಗ್ರಾಂ

    ಮಾಡುವ ವಿಧಾನ
    * ಒಂದು ಮಿಕ್ಸರ್ ಜಾರ್ ಗೆ ಸಿಪ್ಪೆ ತೆಗೆದ ಮಾವಿನಹಣ್ಣಿನ ಪಲ್ಫ್ ಹಾಗೂ ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್ ಗೆ ಫ್ರಿಜ್ಡ್ ನಲ್ಲಿಟ್ಟಿದ್ದ ಫ್ರೆಶ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ.
    * ಬ್ಲೆಂಡ್ ಮಾಡಿದ ಫ್ರೆಶ್ ಕ್ರೀಮ್ ಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ.
    * ಈಗ ಒಂದು ಫ್ರೀಜರ್ ಬೌಲ್ ಗೆ ಮಿಶ್ರಣವನ್ನು ಹಾಕಿ 6-7 ಗಂಟೆ ಕಾಲ ಫ್ರೀಜ್ ಮಾಡಿ.
    * ಬಳಿಕ ಸರ್ವ್ ಮಾಡಿ. ಎಂಜಾಯ್ ಮಾಡಿ
    * ಜೊತೆಗೆ ಐಸ್ ಕ್ರೀಂ ಗೆ ಟುಟಿ, ಫ್ರೂಟಿ, ಸಣ್ಣಗೆ ಕಟ್ ಮಾಡಿದ ಡ್ರೈ ಫ್ರೂಟ್ಸ್, ಕ್ಯಾರಮಲ್ ಪೀಸಸ್ ಸೇರಿಸಬಹುದು.

  • ಐಸ್ ಕ್ರೀಂ ಪ್ರಿಯರೆ ಎಚ್ಚರ: ಪ್ರತಿಷ್ಠಿತ ಕಂಪೆನಿಯ ಐಸ್ ಕ್ರೀಂನಲ್ಲಿ ಹುಳುಗಳು ಪ್ರತ್ಯಕ್ಷ!

    ಐಸ್ ಕ್ರೀಂ ಪ್ರಿಯರೆ ಎಚ್ಚರ: ಪ್ರತಿಷ್ಠಿತ ಕಂಪೆನಿಯ ಐಸ್ ಕ್ರೀಂನಲ್ಲಿ ಹುಳುಗಳು ಪ್ರತ್ಯಕ್ಷ!

    ಬೆಂಗಳೂರು: ಪ್ರತಿಷ್ಠಿತ ಕಂಪನಿಯೊಂದರ ಐಸ್ ಕ್ರೀಂನಲ್ಲಿ ಹುಳುಗಳು ಕಾಣಿಸಿಕೊಂಡಿವೆ. ಈ ಘಟನೆ ಐಸ್ ಕ್ರೀಂ ಪ್ರಿಯರಿಗೆ ಎಚ್ಚರ ನೀಡಿದ್ದು, ಹುಳು ಇದೇ ಇಲ್ಲವೋ ಅಂತಾ ನೋಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಶನಿವಾರ ನೆಲಮಂಗಲ ತಾಲೂಕಿನ ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಆಟೋದಲ್ಲಿ ಮಾರುತ್ತಿದ್ದ ಐಸ್ ಕ್ರೀಂನಲ್ಲಿ ಹುಳುಗಳು ಇರುವುದನ್ನು ಕಂಡು, ಐಸ್ ಕ್ರೀಂ ಪ್ರಿಯರು ಬೆಚ್ಚಿ ಬಿದ್ದಿದ್ದಾರೆ.

    ಆಟೋದಲ್ಲಿ ಐಸ್ ಕ್ರೀಂ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾಗ, ಸ್ಥಳೀಯ ನಿವಾಸಿ ಮಂಗಳ ಎಂಬವರು, ತಮ್ಮ ಮಗಳಿಗಾಗಿ ಐಸ್‍ಕ್ರೀಂ ಖರೀದಿಸಿದ್ದರು. ನಂತರ ಐಸ್ ಕ್ರೀಂ ಮುಚ್ಚಳ ತೆರೆದು ನೋಡಿದಾಗ ಹುಳುಗಳಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಆಟೋದಲ್ಲಿ ಐಸ್‍ಕ್ರೀಂ ಮಾರಾಟ ಮಾಡುತ್ತಿದ್ದವರನ್ನು ತಡೆದು, ತರಾಟೆಗೆ ತೆಗೆದುಕೊಂಡಿದ್ದಾರೆ.

    ತುಮಕೂರು ಮೂಲದ ಕಂಪೆನಿಯ ಐಸ್‍ಕ್ರೀಂ ಇದಾಗಿದ್ದು, ಪ್ರತಿಷ್ಠಿತ ಕಂಪೆನಿಯ ಐಸ್‍ಕ್ರೀಂನಲ್ಲಿಯೇ ಹುಳುಗಳಿರುವುದು ಸ್ಥಳೀಯರಲ್ಲಿ ಬೇಸರ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.