Tag: ICC

  • 49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    ಕೋಲ್ಕತ್ತಾ: ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸದ್ಯ ನಿನ್ನೆಯಿಂದ (ನ.5) ಸುದ್ದಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಈಡನ್‌ ಗಾರ್ಡನ್‌ ಮೈದಾನದಲ್ಲಿ ಶತಕ ಸಿಡಿಸುವ ಜೊತೆಗೆ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿಯ ಈ ಮಹತ್ವದ ಸಾಧನೆಯನ್ನು ದೇಶಾದ್ಯಂತ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

    ಜಾಲತಾಣಗಳಲ್ಲಿ ವಿರಾಟ್‌ ಕೊಹ್ಲಿ ಅವರ ಕ್ರಿಕೆಟ್‌ ವೃತ್ತಿಜೀವನದಿಂದ ಈವರೆಗೆ ಕ್ರಿಕೆಟ್‌ನಲ್ಲಿ ಲೋಕದಲ್ಲಿ ಮಾಡಿದ ಸಾಧನೆಗಳ ವಿಶೇಷ ವೀಡಿಯೋ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. #ವಿರಾಟೋತ್ಸವ2023 ಟ್ರೆಂಡ್‌ ಅಲೆಯೂ ಧೂಳೆಬ್ಬಿಸಿದೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    2021ರ ಐಪಿಎಲ್‌ ಸಂದರ್ಭದಲ್ಲಿ ಕೊಹ್ಲಿ ಸಂಪೂರ್ಣ ಫಾರ್ಮ್‌ ಕಳೆದುಕೊಂಡಿದ್ದರು. ಸುಮಾರು 2 ವರ್ಷಗಳ ಕಾಲ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಕ್ರಿಕೆಟ್‌ ಲೋಕದಿಂದಲೇ ದೂರ ಉಳಿಯುತ್ತಾರೆ, ನಿವೃತ್ತಿ ಘೋಷಿಸುವುದು ಸರಿ ಎಂದು ಹೇಳಲಾಗಿತ್ತು. ಇನ್ನೂ ಕೆಲವರು ಸ್ವಲ್ಪ ಬ್ರೇಕ್‌ ತಗೊಳ್ಳಿ ಎಂದು‌ ಟ್ರೋಲ್‌ ಮಾಡಿದ್ದರು. ಆದ್ರೆ 2022ರ ಟಿ20 ಏಷ್ಯಾಕಪ್‌ ಟೂರ್ನಿಯ ಮೂಲಕ ಮತ್ತೆ ಕೊಹ್ಲಿ ಭರ್ಜರಿ ಕಮ್ಯಾಂಬ್‌ ಮಾಡಿದ್ರು. ಇಂದು ದೇಶದ ಅಭಿಮಾನಿಗಳು ಮಾತ್ರವಲ್ಲದೇ ವಿವಿಧ ದೇಶಗಳ ಹಿರಿಯ ಕ್ರಿಕೆಟಿಗರು ಕೊಹ್ಲಿಯ ಗುಣಗಾನ ಮಾಡುತ್ತಿದ್ದಾರೆ. #ವಿರಾಟೋತ್ಸವ2023 ಹ್ಯಾಟ್‌ಟ್ಯಾಗ್‌ನೊಂದಿಗೆ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಕೊಹ್ಲಿಯ ಕ್ರಿಕೆಟ್‌ ವೃತ್ತಿಜೀವನವನ್ನೇ ಜಾಲತಾಣದಲ್ಲಿ ಅನಾವರಣಗೊಳಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ತಮ್ಮ ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಗೌರವ ಸೂಚಿಸಿದರು. ಕೊಹ್ಲಿಯೂ ಸಹ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ತಮ್ಮನ್ನು ಹುರಿದುಂಬಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೊಹ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸುವ ಮೂಲಕ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ.

    ಇದೀಗ ಏಕದಿನ ಕ್ರಿಕೆಟ್‌ನಲ್ಲಿ 277 ಇನ್ನಿಂಗ್ಸ್‌ನಲ್ಲಿ 49 ಶತಕ ಸಿಡಿಸಿದ ಕೊಹ್ಲಿಯೇ ನಂ.1 ಶತಕ ವೀರನಾಗಿದ್ದು, 452 ಇನ್ನಿಂಗ್ಸ್‌ಲ್ಲಿ ಈ ಸಾಧನೆ ಮಾಡಿದ ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 251 ಇನ್ನಿಂಗ್ಸ್‌ನಲ್ಲಿ 31 ಶತಕ ಬಾರಿಸಿರುವ ರೋಹಿತ್ ಶರ್ಮಾ, 365 ಇನ್ನಿಂಗ್ಸ್‌ನಲ್ಲಿ 30 ಶತಕ ಬಾರಿಸಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್, 433 ಇನ್ನಿಂಗ್ಸ್‌ನಲ್ಲಿ 28 ಶತಕ ಬಾರಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ 79 ಶತಕಗಳನ್ನ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಇನ್ನು ಒಂದೇ ಒಂದು ಶತಕವಷ್ಟೇ ಬಾಕಿಯಿದೆ ಎಂಬುದು ವಿಶೇಷ.

  • ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೋಲ್ಕತ್ತಾ: ಚೇಸ್ ಮಾಸ್ಟರ್, ಸೂಪರ್ ಸ್ಟಾರ್ ಕ್ರಿಕೆಟಿಗ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಲೆಜೆಂಡ್ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನ ಸರಿಗಟ್ಟಿದ್ದಾರೆ. ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಸಜ್ದೇ (Ritika Sajdeh) ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ.

    ದಕ್ಷಿಣ ಆಫ್ರಿಕಾ (South Africa)  ವಿರುದ್ಧ ಆರಂಭದಿಂದಲೂ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ ಕೊಹ್ಲಿ 48.3ನೇ ಓವರ್‌ನಲ್ಲಿ ಶತಕ ಸಿಡಿಸಿದರು. ಆಗ ಮೈದಾನದಲ್ಲಿ ತುಂಬಿದ್ದ ಸಾವಿರಾರು ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುತ್ತಾ ಜೈಕಾರ ಹಾಕಿದರು. ಜೊತೆಗೆ ತಮ್ಮ ಮೊಬೈಲ್‌ ಟಾರ್ಚ್‌ ಹಿಡಿದು ಕೊಹ್ಲಿಗೆ ಶುಭಕೋರಿದರು. ಇದೇ ವೇಳೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಸಜ್ದೇ ತಾವು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. ರೋಹಿತ್‌ ಶರ್ಮಾ ಪತ್ನಿ ರಿಯಾಕ್ಷನ್‌ ಇದೀಗ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    ಕೊಹ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸುವ ಮೂಲಕ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ.

    ಇದೀಗ ಏಕದಿನ ಕ್ರಿಕೆಟ್‌ನಲ್ಲಿ 277 ಇನ್ನಿಂಗ್ಸ್‌ನಲ್ಲಿ 49 ಶತಕ ಸಿಡಿಸಿದ ಕೊಹ್ಲಿಯೇ ನಂ.1 ಶತಕ ವೀರನಾಗಿದ್ದು, 452 ಇನ್ನಿಂಗ್ಸ್‌ಲ್ಲಿ ಈ ಸಾಧನೆ ಮಾಡಿದ ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 251 ಇನ್ನಿಂಗ್ಸ್‌ನಲ್ಲಿ 31 ಶತಕ ಬಾರಿಸಿರುವ ರೋಹಿತ್ ಶರ್ಮಾ, 365 ಇನ್ನಿಂಗ್ಸ್‌ನಲ್ಲಿ 30 ಶತಕ ಬಾರಿಸಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್, 433 ಇನ್ನಿಂಗ್ಸ್‌ನಲ್ಲಿ 28 ಶತಕ ಬಾರಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಜಡೇಜಾ ಸ್ಪಿನ್‌ ಜಾದುಗೆ ಮಕಾಡೆ ಮಲಗಿದ ಹರಿಣರು – ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ

    ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ 79 ಶತಕಗಳನ್ನ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಇನ್ನು ಒಂದೇ ಒಂದು ಶತಕವಷ್ಟೇ ಬಾಕಿಯಿದೆ ಎಂಬುದು ವಿಶೇಷ.

  • 49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    ಬೆಂಗಳೂರು: 49 ಶತಕಗಳ ಮೂಲಕ ಸಚಿನ್ (Sachin) ದಾಖಲೆ ಸರಿಗಟ್ಟಿರುವ ಕೊಹ್ಲಿ (Virat Kohli) ತಮ್ಮ 35ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡರು. 49 ಶತಕ ಬಾರಿಸಿದ್ದೇನೋ ಸರಿ, ಆದು ಯಾವ ತಂಡದ ವಿರುದ್ಧ ಎಂದು ಗೊತ್ತಾಗಬೇಕಲ್ಲ. ಅದಕ್ಕೆ ಈ ಎಲ್ಲ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

    ಶತಕ ಬಾರಿಸುವುದೆಂದರೆ ಸಚಿನ್ ಹಾಗೂ ಕೊಹ್ಲಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಎಂದರೆ ಅಚ್ಚುಮೆಚ್ಚು. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿದ್ದರೆ, ಕೊಹ್ಲಿ 8 ಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಬ್ಬರೂ ತಲಾ 5 ಶತಕ ದಾಖಲಿಸಿದ್ದಾರೆ.

    ಆ `49 ಶತಕ’ಗಳು ಯಾರ ವಿರುದ್ಧ..?

    ಆಸ್ಟ್ರೇಲಿಯಾ ವಿರುದ್ಧ ಸಚಿನ್ 9, ಕೊಹ್ಲಿ 8 ಶತಕ
    ಬಾಂಗ್ಲಾದೇಶದ ವಿರುದ್ಧ ಸಚಿನ್ 1, ವಿರಾಟ್ ಕೊಹ್ಲಿ 5 ಶತಕ
    ಇಂಗ್ಲೆಂಡ್ ವಿರುದ್ಧ ಸಚಿನ್ 2, ವಿರಾಟ್ 3 ಶತಕ
    ನ್ಯೂಜಿಲೆಂಡ್ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಪಾಕಿಸ್ತಾನ ವಿರುದ್ಧ ಸಚಿನ್ 5 ಶತಕ, ವಿರಾಟ್ 3 ಶತಕ
    ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಶ್ರೀಲಂಕಾ ವಿರುದ್ಧ ಸಚಿನ್ 8 ಹಾಗೂ ವಿರಾಟ್ 10 ಶತಕ
    ವೆಸ್ಟ್ ಇಂಡೀಸ್ ವಿರುದ್ಧ ಸಚಿನ್ 4, ವಿರಾಟ್ 9 ಶತಕ
    ಜಿಂಬಾಬ್ವೆ ವಿರುದ್ಧ ಸಚಿನ್ 5, ವಿರಾಟ್ 1 ಶತಕ
    ಕೀನ್ಯಾ ವಿರುದ್ಧ ಸಚಿನ್ 4 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ
    ನಮೀಬಿಯಾ ವಿರುದ್ಧ ಸಚಿನ್ 1 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ.

  • Sachin V/S Kohli – 49=49 ಶತಕ ಆಗಿದ್ದು ಎಲ್ಲೆಲ್ಲಿ?

    Sachin V/S Kohli – 49=49 ಶತಕ ಆಗಿದ್ದು ಎಲ್ಲೆಲ್ಲಿ?

    ಬೆಂಗಳೂರು: ಈ ಬಾರಿಯ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ, ಸಚಿನ್ (Sachin Tendulkar) 49 ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಸಚಿನ್ ಹಾಗೂ ಕೊಹ್ಲಿ ಶತಕಗಳನ್ನು ಎಲ್ಲೆಲ್ಲಿ ಬಾರಿಸಿದರು ಅನ್ನೋ ಕುತೂಹಲ ನಿಮಗಿದ್ದರೆ ಮುಂದೆ ಓದಿ.

    ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 20 ಶತಕ ದಾಖಲಿಸಿದರೆ ಕೊಹ್ಲಿ 23 ಶತಕ ದಾಖಲಿಸಿದ್ದಾರೆ.

    ವಿದೇಶದಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 12 ಶತಕ ಬಾರಿಸಿದರೆ, ಕೊಹ್ಲಿ 21 ಶತಕ ಬಾರಿಸಿದ್ದಾರೆ.

    ತಟಸ್ಥ ಕೇಂದ್ರಗಳಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 17 ಸೆಂಚುರಿ ಗಳಿಸಿದ್ದು, ಕೊಹ್ಲಿ 5 ಶತಕ ಬಾರಿಸಿದ್ದಾರೆ.

    ಸಚಿನ್ ದಾಖಲೆಯನ್ನು ಒಟ್ಟು 12 ರಾಷ್ಟ್ರಗಳಲ್ಲಿ ಮಾಡಿದ್ದರೆ, ಕೊಹ್ಲಿ 9 ರಾಷ್ಟ್ರಗಳಲ್ಲಿ ಈ ಸಾಧನೆ ಮಾಡಿದ್ದಾರೆ.

    ಸಚಿನ್ 34 ಕ್ರೀಡಾಂಗಣದಲ್ಲಿ 49 ಶತಕ ದಾಖಲಿಸಿದ್ದರೆ, ಕೊಹ್ಲಿ 32 ಕ್ರೀಡಾಂಗಣದಲ್ಲಿ 49 ಶತಕ ದಾಖಲಿಸಿದ್ದಾರೆ.

    ಸಚಿನ್ 6 ತಂಡದ ವಿರುದ್ಧ 5 ಅಥವಾ 5ಕ್ಕೂ ಹೆಚ್ಚು ಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧ 9 ಶತಕ ದಾಖಲಿಸಿದ್ದೇ ತಂಡವೊಂದರ ವಿರುದ್ಧ ಸಚಿನ್ ಬಾರಿಸಿದ ಗರಿಷ್ಟ ಶತಕವಾಗಿದೆ.

    ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ 10 ಶತಕ ದಾಖಲಿಸಿದ್ದೇ ತಂಡವೊಂದರ ವಿರುದ್ಧ ಬಾರಿಸಿದ ಗರಿಷ್ಟ ಶತಕ. 6 ದೇಶಗಳ ವಿರುದ್ಧ ಕೊಹ್ಲಿ 5 ಅಥವಾ ಐದಕ್ಕಿಂತ ಹೆಚ್ಚು ಶತಕ ದಾಖಲಿಸಿದ್ದಾರೆ.

  • 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

    49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

    – ಸಚಿನ್, ಸೆಹ್ವಾಗ್, ಐಸಿಸಿಯಿಂದ ಶುಭಾಶಯ

    ಕೋಲ್ಕತ್ತಾ: ಬರ್ತ್‌ಡೇ ದಿನದಂದೇ ಸಚಿನ್ (Sachin) ದಾಖಲೆ ಸರಿಗಟ್ಟಿ ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ (Virat Kohli) ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಶುಭಾಶಯಗಳ ಸುರಿಮಳೆಯಾಗಿದೆ.

    ಕ್ರಿಕೆಟ್ ದೇವರು ಎಂದೇ ಆರಾಧಿಸಲ್ಪಡುವ ಸಚಿನ್ ತೆಂಡೂಲ್ಕರ್ ವಿರಾಟ್ ಸಾಧನೆಗೆ ಶುಭ ಕೋರಿದ್ದಾರೆ. ತನ್ನ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ ಸಾಧನೆಯನ್ನು ಕೊಂಡಾಡಿದ್ದಾರೆ. ಜೊತೆಗೆ ಶೀಘ್ರದಲ್ಲೇ 50ನೇ ಶತಕ (50th Century) ದಾಖಲಿಸಿ ಎಂದು ಶುಭ ಹಾರೈಸಿದ್ದಾರೆ.

    ಐಸಿಸಿ ಕೂಡಾ, ಗ್ರೇಟ್ ನೆಸ್ ಮೀಟ್ಸ್ ಗ್ರೇಟ್ ನೆಸ್. ಕಿಂಗ್ ಕೊಹ್ಲಿಗೆ 49ನೇ ಶತಕ ಎಂದು ಬರೆದು ಕೊಹ್ಲಿ ಹಾಗೂ ಸಚಿನ್ ಮುಖಾಮುಖಿಯಾಗಿ ನಿಂತಿರುವ ಫೋಟೋವನ್ನು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದೆ.

    ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸಚಿನ್ ದಾಖಲೆಯನ್ನು ಸರಿಗಟ್ಟಲು ಸಿಕ್ಕಿದ್ದು ಎಂಥಾ ದಿನ..? ಐತಿಹಾಸಿಕ ಈಡನ್ ಗಾರ್ಡನ್ಸ್ ನಲ್ಲಿ ಕೊಹ್ಲಿ ಬರ್ತ್ ಡೇ ಎಂದು ಬರೆದುಕೊಂಡಿದ್ದಾರೆ.

    ಟೀಂ ಇಂಡಿಯಾ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯ ಬೆಸ್ಟ್ ಬರ್ತ್ ಡೇ ಗಿಫ್ಟ್ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಆಫ್ರಿದಿ (Shahid Afridi) ಬಣ್ಣಿಸಿದ್ದಾರೆ.

    ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಭಾರತದ ಮಾಜಿ ಕ್ರಿಕೆಟಿಗ ವಿನಯ್ ಕುಮಾರ್, 35ನೇ ಹುಟ್ಟುಹಬ್ಬಕ್ಕೆ 49ನೇ ಶತಕದ ಮೂಲಕ ವಿರಾಟ್ ತಮಗೆ ತಾವೇ ಗಿಫ್ಟ್ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು, ನಿಮ್ಮ ಶತಕ ಹಾಗೂ ಸಾಧನೆಗೆ ಅಭಿನಂದನೆ ಎಂದು ಶುಭ ಕೋರಿದ್ದಾರೆ.

    ಟೀ ಇಂಡಿಯಾ ಮಾಜಿ ಆಟಗಾದ ಎಸ್.ಬದ್ರಿನಾಥ್ ಕೂಡಾ ವಿರಾಟ್ ಕೊಹ್ಲಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್, ಸೆಂಚುರಿ 49 ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಶುಭ ಕೋರಿದ್ದಾರೆ.

  • ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ

    ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ

    ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್ (World Cup 2023) ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ (Hardik Pandya) ಹೊರಗುಳಿದಿದ್ದು, ಈ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (BCCI) ಕೆಎಲ್ ರಾಹುಲ್ (KL Rahul) ಅವರನ್ನು ಉಪನಾಯಕನನ್ನಾಗಿ (Vice Captain) ನೇಮಿಸಿದೆ.

    ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಗುಳಿದಿರುವುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶನಿವಾರ ಬೆಳಗ್ಗೆ ಖಚಿತಪಡಿಸಿದೆ. ಪಾದದ ಗಾಯದಿಂದಾಗಿ ಪಾಂಡ್ಯ ಇನ್ನು ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಅವರ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ತಂಡದ ಉಳಿದ ಪಂದ್ಯಗಳಿಗೆ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ಹೇಳಿದೆ. ಇದನ್ನೂ ಓದಿ: ಕೊಹ್ಲಿಗೂ ಮುನ್ನವೇ ಸಚಿನ್‌ ಶತಕ ದಾಖಲೆ ಉಡೀಸ್‌ ಮಾಡಿದ ರಚಿನ್‌..!

    ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲು ಉಳುಕಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ನೆದರ್ಲೆಂಡ್ಸ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾಕ್ಕೆ ಮರಳುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದರು. ಆದರೀಗ ಪಾಂಡ್ಯ ವಿಶ್ವಕಪ್‌ನಿಂದಲೇ ಹೊರಗುಳಿದಿರುವುದು ಬೇಸರದ ಸಂಗತಿ. ಇದನ್ನೂ ಓದಿ: World Cup 2023: ಶತಕ ಸಿಡಿಸಿ ಮೆರೆದಾಡಿದ ರಚಿನ್‌ – ಪಾಕಿಸ್ತಾನಕ್ಕೆ 402 ರನ್‌ಗಳ ಗುರಿ

    ಆರಂಭದಲ್ಲಿ ಕಾಲು ಉಳುಕು ಹೊರತಾಗಿ ಬೇರೇನೂ ಗಂಭೀರ ಸಮಸ್ಯೆ ಇಲ್ಲ ಎನ್ನಲಾಗಿತ್ತು. ಆ ಬಳಿಕ ಪಾದದ ಅಸ್ಥಿರಜ್ಜು ಸಮಸ್ಯೆ ಎದುರಾದ ಕಾರಣ ಗಾಯವು ಗಂಭೀರ ತಿರುವು ಪಡೆಯಿತು. ಇದು ಗ್ರೇಡ್-1 ಗಾಯವಾಗಿರುವುದರಿಂದ, ಚೇತರಿಕೆಗೆ 10-15 ದಿನಗಳ ಸಮಯ ಬೇಕಾಗುತ್ತದೆ. ಹೀಗಾಗಿ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಬಿಸಿಸಿಐ ಹಾಗೂ ಐಸಿಸಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಿಂದಲೇ ಪಾಂಡ್ಯ ಔಟ್‌ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ

    ಪಾಂಡ್ಯಗೆ ಏನಾಗಿತ್ತು..?
    ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದವು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು. ಇದನ್ನೂ ಓದಿ: ನೆದರ್ಲ್ಯಾಂಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – ಅಫ್ಘಾನ್‌ ಸೆಮಿಗೆ ಪ್ರವೇಶಿಸುತ್ತಾ? ಲೆಕ್ಕಾಚಾರ ಏನು?

  • ವಿಶ್ವಕಪ್‌ ಟೂರ್ನಿಯಿಂದಲೇ ಪಾಂಡ್ಯ ಔಟ್‌ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ

    ವಿಶ್ವಕಪ್‌ ಟೂರ್ನಿಯಿಂದಲೇ ಪಾಂಡ್ಯ ಔಟ್‌ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ

    ಮುಂಬೈ: ಪ್ರಸ್ತುತ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಿಂದಲೇ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಹೊರಗುಳಿದಿದ್ದು, ಟೀಂ ಇಂಡಿಯಾಕ್ಕೆ ದೊಡ್ಡ ಆಘಾತವಾಗಿದೆ.

    ಪಾಂಡ್ಯ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆ ಅವರ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಅವರನ್ನ ಆಯ್ಕೆ ಮಾಡಲಾಗಿದೆ. ಕಳೆದ ಅಕ್ಟೋಬರ್‌ 19 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲು ಉಳುಕಿಸಿಕೊಂಡಿದ್ದ ಹಾರ್ದಿಕ್‌ ಪಾಂಡ್ಯ (Injured Hardik Pandya) ನೆದರ್ಲೆಂಡ್ಸ್‌ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾಕ್ಕೆ ಮರಳುತ್ತಾರೆ ಎಂದು ರೋಹಿತ್‌ ಶರ್ಮಾ ಹೇಳಿದ್ದರು. ಆದರೀಗ ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ. 2019ರ ವಿಶ್ವಕಪ್‌ ಟೂರ್ನಿಯಲ್ಲೂ ಶಿಖರ್‌ ಧವನ್‌ ಸಹ ಗಾಯದ ಸಮಸ್ಯೆಗೆ ತುತ್ತಾಗಿ ಅರ್ಧದಲ್ಲೇ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿಗೆ ಒಳಗಾಗಿರುವ ಹಾರ್ದಿಕ್, ಸೆಮಿಫೈನಲ್‌ ವೇಳೆಗೆ ಚೇತರಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಿತ್ತು. ಆದ್ರೆ ಸೂಕ್ತ ಸಮಯಕ್ಕೆ ಪಾಂಡ್ಯ ಚೇತರಿಕೆ ಕಾಣದ ಕಾರಣ, ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದೇ ವೇಳೆ ತಂಡಕ್ಕೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣರನ್ನು ಆಯ್ಕೆ ಮಾಡಲಾಗಿದೆ. ಆರಂಭದಲ್ಲಿ ಕಾಲು ಉಳುಕು ಹೊರತಾಗಿ ಬೇರೇನೂ ಗಂಭೀರ ಸಮಸ್ಯೆ ಇಲ್ಲ ಎನ್ನಲಾಗಿತ್ತು. ಆ ಬಳಿಕ ಪಾದದ ಅಸ್ಥಿರಜ್ಜು ಸಮಸ್ಯೆ ಎದುರಾದ ಕಾರಣ ಗಾಯವು ಗಂಭೀರ ತಿರುವು ಪಡೆಯಿತು. ಇದು ಗ್ರೇಡ್-1 ಗಾಯವಾಗಿರುವುದರಿಂದ, ಚೇತರಿಕೆಗೆ 10-15 ದಿನಗಳ ಸಮಯ ಬೇಕಾಗುತ್ತದೆ. ಹೀಗಾಗಿ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಬಿಸಿಸಿಐ ಹಾಗೂ ಐಸಿಸಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಕ್ಕೆ ಮತ್ತೆ ಆಘಾತ – ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಔಟ್‌

    ಹಾರ್ದಿಕ್‌ ಅಲಭ್ಯತೆಯಲ್ಲಿ ಸೂರ್ಯಕುಮಾರ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ಭಾರತ ತಂಡದ ಪ್ಲೇಯಿಂಗ್‌-11 ನಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅದರಲ್ಲೂ ಶಮಿ ಆಡಿದ 3 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 14 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಆದ್ರೆ ಪ್ರಸಿದ್ಧ್‌ ಕೃಷ್ಣ ಅವರನ್ನು ಸೆಮಿಸ್‌ಗೆ ಕಣಕ್ಕಿಳಿಸಲಾಗುತ್ತದೆಯೇ ಅಥವಾ ಈಗಾಗಲೇ ಭಾರತ ಸೆಮಿಸ್‌ಗೆ ಎಂಟ್ರಿ ಕೊಟ್ಟಿರುವುದರಿಂದ ಪ್ರಮುಖ ಬೌಲರ್‌ಗಳಿಗೆ ರೆಸ್ಟ್‌ ನೀಡಿ ದಕ್ಷಿಣ ಆಫ್ರಿಕಾ ಮತ್ತು ನದೆರ್ಲೆಂಡ್ಸ್‌ ವಿರುದ್ಧ ಪಂದ್ಯಗಳಿಗೆ ಕಣಕ್ಕಿಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಇಂಗ್ಲೆಂಡ್‌ ಪಂದ್ಯದಿಂದಲೂ ಔಟ್‌ – ಪಾಂಡ್ಯಗೆ ಗಾಯ ಗಂಭೀರ ಸ್ವರೂಪದ್ದು

    ಪಾಂಡ್ಯಗೆ ಏನಾಗಿತ್ತು..?
    ಐಸಿಸಿ ಏಕದಿನ ವಿಶ್ವಕಪ್ (ICC World Cup) ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದವು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್‌ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    – DRS ನಿರ್ಧಾರಗಳೂ ಭಾರತಕ್ಕೆ ಫೇವರ್‌ ಆಗಿಯೇ ಬರ್ತಿವೆ ಎಂದ ಹಸನ್ ರಾಝಾ

    ಇಸ್ಲಾಮಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ +2.102 ರನ್‌ರೇಟ್‌ನೊಂದಿಗೆ ಅಗ್ರಸ್ಥಾನಲ್ಲಿರುವ ಟೀಂ ಇಂಡಿಯಾ ಗೆಲುವಿನ ಕುರಿತು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಹಸನ್‌ ರಾಝಾ (Hasan Raza) ಟೀಕಿಸಿದ್ದಾರೆ. ಐಸಿಸಿ ಮತ್ತು ಬಿಸಿಸಿಐ (ICC, BCCI), ಟೀಂ ಇಂಡಿಯಾ ಬೌಲರ್ಸ್‌ಗೆ (Indian Bowlers) ವಿಶೇಷ ಚೆಂಡುಗಳನ್ನ ಕೊಡುತ್ತಿದೆ. ಆದ್ದರಿಂದ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಪಾಕ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಾಸಿಂ ಅಕ್ರಮ್‌, ಶೋಯೆಬ್‌ ಮಲಿಕ್‌, ಮಿಸ್ಬಾ ಉಲ್‌ ಹಕ್‌ ಮೊದಲಾದವರು ಪಾಕ್‌ ತಂಡದ ಕಳಪೆ ಪ್ರದರ್ಶನ ಬಗ್ಗೆ ವಿಶ್ಲೇಷಣೆ ನಡೆಸಿದರು. ಆದ್ರೆ ಹಸನ್‌ ರಾಝಾ ಟೀಂ ಇಂಡಿಯಾ ಬೌಲಿಂಗ್‌ (Team India Bowling) ಮತ್ತು ಡಿಆರ್‌ಎಸ್‌ ನಿರ್ಧಾರಗಳ ಕುರಿತು ಟೀಕಿಸಿದರು. ಇದನ್ನೂ ಓದಿ: World Cup 2023: ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಕ್ರಿಕೆಟ್‌ ದೇವರು

    ಗುರುವಾರ (ನ.2) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ 302 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಕುರಿತು ಪಾಕ್‌ ಸುದ್ದಿ ನಿರೂಪಕ, ಟೀಂ ಇಂಡಿಯಾ ಬೌಲಿಂಗ್‌ ವೇಳೆ ಚೆಂಡುಗಳು ಹೆಚ್ಚಾಗಿ ಸ್ವಿಂಗ್‌ ಆಗುತ್ತಿವೆ. ಒಂದು ವೇಳೆ ಅವರಿಗೆ ವಿಶೇಷ ಚೆಂಡುಗಳನ್ನು (Speical Ball) ನೀಡುತ್ತಿದ್ದಾರೆ ಅಂತ ನಿಮಗೆ ಅನ್ನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್‌, ಟೀಂ ಇಂಡಿಯಾ ಬೌಲರ್‌ಗಳ ಸ್ವಿಂಗ್‌ ಗಮನಿಸಿದ್ರೆ ಖಂಡಿತಾ ಅನುಮಾನ ಮೂಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್‌ಗೆ ನೀಲಿ ತಾರೆ ಫಿದಾ – ಕೇಂದ್ರ ಲಸ್ಟ್‌ ರಿಯಾಕ್ಷನ್‌ ಸಿಕ್ಕಾಪಟ್ಟೆ ವೈರಲ್‌

    ಭಾರತ ಬೌಲಿಂಗ್‌ಗೆ ಇಳಿದಾಗ ಚೆಂಡು ಬದಲಾಗುತ್ತದೆ. ಬಹುಶಃ ಐಸಿಸಿ ಅಥವಾ ಬಿಸಿಸಿಐ ಭಾರತಕ್ಕೆ ವಿಶೇಷ ಚೆಂಡನ್ನು ನೀಡಬಹುದು ಅನ್ನಿಸುತ್ತದೆ. ಅಲ್ಲದೇ ಭಾರತ ತೆಗೆದುಕೊಳ್ಳುವ ಡಿಆರ್‌ಎಸ್‌ ನಿರ್ಧಾರಗಳು ತಮಗೆ ಫೇವರ್‌ ಆಗಿಯೇ ಬರುತ್ತಿದ್ದು, 3ನೇ ಅಂಪೈರ್‌ ಕೂಡ ಭಾರತದ ಪರವಾಗಿಯೇ ಇದ್ದಾರೆ ಅನ್ನಿಸುತ್ತಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. 358 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ ಪಡೆ 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ನೆಲಕಚ್ಚಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ

    ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿಶ್ವಕಪ್ ( World Cup Cricket) ಪಂದ್ಯಕ್ಕೆ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆಯಿದೆ.

    ಆಸ್ಟ್ರೇಲಿಯಾ ಹಾಗೂ ಪಾಕ್ ಮ್ಯಾಚ್ ವಿರೋಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಪಾಕ್ ಆಟಗಾರ ರಿಜ್ವಾನ್ (Mohammad Rizwan) ನೆದರ್‌ಲ್ಯಾಂಡ್ಸ್ (Nederland) ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿ ನಮಾಜ್‌ (Namaz) ಮಾಡಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಇದನ್ನೇ ಮುಂದಿಟ್ಟುಕೊಂಡು ಗೋ ಬ್ಯಾಕ್ ರಿಜ್ವಾನ್ ಎಂಬ ಫಲಕಗಳನ್ನು ಹಿಡಿದು ಹೋರಾಟಕ್ಕೆ ಮುಂದಾಗಿವೆ.

    ರಿಜ್ವಾನ್, ಶ್ರೀಲಂಕಾ ವಿರುದ್ಧ ಸೆಂಚುರಿ ಸಿಡಿಸಿ ಅದನ್ನು ಪ್ಯಾಲೆಸ್ತಿನ್‍ಗೆ ಇದೀಗ ಆಟಗಾರನ ನಡೆಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ನಾಳೆ ನಡೆಯಲಿರುವ ಪಂದ್ಯಕ್ಕೆ ಪ್ರತಿಭಟನೆಯ ಶಾಕ್ ನೀಡಲು ಮುಂದಾಗಿವೆ. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಬೆಂಕಿ ಅವಘಡ ಪ್ರಕರಣ – ಮಾಲೀಕ ನಾಪತ್ತೆ

    ಮೈದಾನದಲ್ಲಿ ನಮಾಜ್ ಮಾಡಿದ ವಿಚಾರವಾಗಿ ಅಂದೇ ಪರ ವಿರೋಧ ಚರ್ಚೆಗಳು ಆರಂಭಗೊಂಡಿದ್ದವು. ಈ ವಿಚಾರವಾಗಿ ಐಸಿಸಿಗೆ (ICC) ದೂರು ಸಹ ದಾಖಲಾಗಿದೆ. ಇದನ್ನೂ ಓದಿ: ಜಾರಕಿಹೊಳಿ ಸೇರಿಗೆ ಡಿಕೆಶಿ ಸವ್ವಾ ಸೇರು – ಯಾರಿಗೆ ಸಿಗುತ್ತೆ ಲೋಕಸಭೆ ಟಿಕೆಟ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಕ್ರಿಕೆಟ್‌ ಅಭಿಮಾನಿಗಳ ವಿರುದ್ಧ ಪಾಕ್‌ ದೂರು

    ಭಾರತದ ಕ್ರಿಕೆಟ್‌ ಅಭಿಮಾನಿಗಳ ವಿರುದ್ಧ ಪಾಕ್‌ ದೂರು

    ಇಸ್ಲಾಮಾಬಾದ್‌: ಭಾರತದ ವಿರುದ್ಧದ ವಿಶ್ವಕಪ್‌ (World Cup) ಕ್ರಿಕೆಟ್‌ನಲ್ಲಿ ಪಾಕಿಸ್ತಾನ (Pakistan) ತಂಡವನ್ನು ಗುರಿಯಾಗಿಸಿ ತೋರಿದ ಅನುಚಿತ ವರ್ತನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (PCB) ಐಸಿಸಿಗೆ (ICC) ದೂರು ನೀಡಿದೆ.

    ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು ಪಾಕಿಸ್ತಾನದ ಅಭಿಮಾನಿಗಳಿಗೆ ವೀಸಾ ನೀಡದೇ ಇರುವುದನ್ನು ಉಲ್ಲೇಖಿಸಿ ದೂರು ದಾಖಲಿಸಿದೆ. ಪಿಸಿಬಿ ಸ್ಪಷ್ಟವಾಗಿ ಅನುಚಿತ ವರ್ತನೆ ಏನು ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ.

    ಭಾರತದ ಜೊತೆ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಗೆ ಆಗಮಿಸಿದ ಪಾಕ್‌ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ವಿಶ್ವಕಪ್‌ ಕ್ರಿಕೆಟ್‌ ಐಸಿಸಿ ಆಯೋಜನೆ ಮಾಡುತ್ತಿರುವ ಟೂರ್ನಿಯಂತೆ ಕಾಣುತ್ತಿಲ್ಲ. ಇದು ಬಿಸಿಸಿಐ ಆಯೋಜನೆ ಮಾಡುತ್ತಿರುವ ಟೂರ್ನಿಯಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಪಾಕ್‌ ಪಂದ್ಯದಲ್ಲಿ ಆಗಿದ್ದೇನು?
    ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳು ಪಾಕ್‌ ಆಟಗಾರ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅವರಿಗೆ ಸ್ಲೆಡ್ಜಿಂಗ್‌ ಮಾಡಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ ಜೈಶ್ರೀರಾಮ್‌ ಎಂದು ಘೋಷಣೆ ಕೂಗುತ್ತಿದ್ದರು.

    ಅಭಿಮಾನಿಗಳ ಸಿಟ್ಟಾಗಿದ್ದು ಯಾಕೆ?
    ರಿಜ್ವಾನ್‌ ಅವರ ವಿರುದ್ಧ ಟೀಂ ಇಂಡಿಯಾ (Team India) ಅಭಿಮಾನಿಗಳು ಮುಗಿಬೀಳಲು ಕಾರಣವಿದೆ. ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಜಯಗಳಿಸಿತ್ತು. ಭಾರತದ ಡ್ರಿಂಕ್ಸ್‌ ಬ್ರೇಕ್‌ ಸಮಯದಲ್ಲಿ ರಿಜ್ವಾನ್‌ ಮೈದಾನದಲ್ಲೇ ನಮಾಜ್‌ ಮಾಡಿದ್ದರು.

     

    ಮೈದಾನದಲ್ಲಿ ನಮಾಜ್‌ ಮಾಡಿದ್ದಕ್ಕೆ ಅಂದೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ನಂತರ ಪಾಕ್‌ ಮಾಜಿ ಆಟಗಾರ ವಾಕರ್ ಯೂನಿಸ್‌ (Waqar Younis) ನೀಡಿದ ಹೇಳಿಕೆ ಸುಂಟರಗಾಳಿ ಎಬ್ಬಿಸಿತ್ತು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್‌ ಗೆಲ್ಲುವುದರ ಜೊತೆಗೆ ಹಿಂದೂಗಳ ಮುಂದೆ ನಮಾಜ್‌ ಮಾಡಿದ್ದು ವಿಶೇಷವಾಗಿತ್ತು ಎಂದು ಹೇಳಿದ್ದರು.

    ಇಂಡೋ ಪಾಕ್‌ ಕ್ರಿಕೆಟ್‌ ಕದನ ನಡೆಯುವ ಮೊದಲು ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿತ್ತು. ಈ ಹೇಳಿಕೆಗೆ ಪೂರಕವಾಗಿ ಪಾಕ್‌ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಮೋದಿ ಸ್ಟೇಡಿಯಂನಲ್ಲಿ ಭಾರತ ಸೋಲಬೇಕು ಮತ್ತು ಹಿಂದೂಗಳ ಮುಂದೆ ರಿಜ್ವಾನ್‌ ನಮಾಜ್‌ ಮಾಡುವುದನ್ನು ನೋಡಬೇಕು ಎಂದು ಕಮೆಂಟ್‌ ಮಾಡುತ್ತಿದ್ದರು. ಪಾಕ್‌ ಅಭಿಮಾನಿಗಳ ಆಸೆಯಂತೆ ರಿಜ್ವಾನ್‌ ಅವರು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ನೆದರ್‌ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲೇ ನಮಾಜ್‌ ಮಾಡಿದ್ದರು.   ಇದನ್ನೂ ಓದಿ: ಇಂಗ್ಲೆಂಡಿಗೆ ಶಾಕ್‌ – ಅಫ್ಘಾನ್‌ ಗೆಲುವಿನ ಹಿಂದಿದೆ ಭಾರತದ ನೆರವು

     

    ಈಗಾಗಲೇ ನಮಾಜ್‌ ಮಾಡಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಮೈದಾನದಲ್ಲಿ ರಿಜ್ವಾನ್‌ ನಮಾಜ್‌ ಮಾಡುತ್ತಾರಾ ಎಂಬ ಕುತೂಹಲ ಇತ್ತು. ಆದರೆ ರಿಜ್ವಾನ್‌ ಅಂಗಳಕ್ಕೆ ಬರುತ್ತಿದ್ದಂತೆ ಮೋದಿ ಸ್ಟೇಡಿಯಂನಲ್ಲಿ ಜೈಶ್ರೀರಾಮ್‌ ಎಂಬ ಘೋಷಣೆ ಮೊಳಗಲು ಆರಂಭವಾಗಿತ್ತು. ರಿಜ್ವಾನ್‌ 49 ರನ್‌ಗಳಿಸಿ ಔಟಾಗಿ ಡ್ರೆಸ್ಸಿಂಗ್‌ ರೂಮ್‌ಗೆ ತೆರಳುತ್ತಿದ್ದಾಗ ಅಭಿಮಾನಿಗಳು ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದ್ದರು.

    ಈ ರೀತಿ ಸ್ಲೆಡ್ಜ್‌ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ, ಕ್ರಿಕೆಟ್‌ನಲ್ಲಿ ಧರ್ಮ ತಂದಿದ್ದು ಮೊದಲು ಅವರು. ಹಿಂದೂಗಳ ಮುಂದೆ ನಮಾಜ್‌ ಮಾಡಿದ್ದು ಎಂಬ ಹೇಳಿಕೆ ಸರಿಯೇ ಎಂದು ಅಭಿಮಾನಿಗಳು ಮರು ಪ್ರಶ್ನೆ ಹಾಕುತ್ತಾರೆ. ಅಷ್ಟೇ ಅಲ್ಲದೇ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಟೀಂ ಇಂಡಿಯಾದ ಕೊಹ್ಲಿ, ಶಮಿ ಸೇರಿದಂತೆ ಇತರೇ ಆಟಗಾರರನ್ನು ಪಾಕ್‌ ಅಭಿಮಾನಿಗಳು ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು. 2019ರ ವಿಶ್ವಕಪ್‌ ವೇಳೆ ಹೋಟೆಲಿನಲ್ಲಿ ಪಾಕ್‌ ಅಭಿಮಾನಿಗಳು ವಿಜಯ್‌ ಶಂಕರ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರನ್ನು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದು ಸರಿಯೇ ಎಂದು ಕೇಳುತ್ತಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]