Tag: ICC

  • Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    ಮುಂಬೈ: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ, ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಹೇಳಿದ್ದಾರೆ.

    2025ರ ಏಪ್ರಿಲ್‌ 7ರಿಂದ ಮೇ 20ರ ವರೆಗೆ ಪಾಕ್‌ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಯಲಿದ್ದು, ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳಲಿದೆಯೇ ಅನ್ನೋ ಬಗ್ಗೆ ಮಾತನಾಡಿದ ರಾಜೀವ್ ಶುಕ್ಲಾ, ಕೇಂದ್ರ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಅನುಮತಿ ನೀಡಿದರೆ ಭಾರತ ತಂಡವನ್ನು (Team India) ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

    ಚಾಂಪಿಯನ್ಸ್‌ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಕಳುಹಿಸಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    ಹೈಬ್ರಿಡ್‌ ಮಾದರಿಯಲ್ಲಿ ಆಯೋಜನೆಯಾಗುತ್ತಾ?
    2023ರ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    2008ರ ನವೆಂಬರ್ 26 ರಂದು ಪಾಕ್‌ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಟ್ಟಿತು. ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು. ಇದನ್ನೂ ಓದಿ: ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

  • T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    – ಈ ಬಾರಿ ಪಾಕ್‌ ವಿಶ್ವಕಪ್‌ ಗೆಲ್ಲಲಿದೆ, ಇದು ದೇವರ ಇಚ್ಛೆ ಎಂದ ಪಿಸಿಬಿ ಮುಖ್ಯಸ್ಥ

    ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. 1 ಕಿಲೋ ಗೋಧಿ ಹಿಟ್ಟಿಗೆ 800 ಪಾಕಿಸ್ತಾನಿ ರೂ.ಗಳು, 1 ರೊಟ್ಟಿಯ ಬೆಲೆ 25 ಪಾಕಿಸ್ತಾನಿ ರೂ. ತಲುಪಿದೆ. ಪೆಟ್ರೋಲ್‌ ದರವಂತು ಹೇಳತೀರದಾಗಿದೆ. ಹೀಗಿದ್ದರೂ ಕ್ರಿಕೆಟ್‌ ಆಟಗಾರರಿಗೆ (Pak Cricketers) ಬಂಪರ್‌ ಬಹುಮಾನ ಘೋಷಿಸಿದೆ.

    ಹೌದು. ಜೂನ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆದ್ದರೆ ತಂಡದ ಪ್ರತಿ ಆಟಗಾರನಿಗೂ 1 ಲಕ್ಷ US ಡಾಲರ್‌ (ಭಾರತದ ರೂಪಾಯಿ 83.44 ಲಕ್ಷ ರೂ.) ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಘೋಷಣೆ ಮಾಡಿದೆ.

    ಪಾಕ್‌ ತಂಡವು ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಹೊರಡುವ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಆಟಗಾರರೊಂದಿಗೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಬಹುಮಾನದ ಮೊತ್ತವನ್ನು ಘೋಷಣೆ ಮಾಡಿದರಲ್ಲದೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯುವ ಘನತೆಗೆ ಹೋಲಿಸಿದ್ರೆ, ಈ ಹಣ ಏನೇನು ಅಲ್ಲ. ಆದ್ದರಿಂದ ಟಿ20 ವಿಶ್ವಕಪ್‌ ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 100,000 ಯುಎಸ್‌ ಡಾಲರ್‌ ಬಹುಮಾನ ನೀಡುವುದಾಗಿ ಘೋಷಿಸಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ಆಟಗಾರರಿಗೆ ಖಡಕ್‌ ಸೂಚನೆ ನೀಡಿದ ಪಿಸಿಬಿ ಮುಖ್ಯಸ್ಥ, ಸದ್ಯಕ್ಕೆ ನೀವು ಯಾರ ಬಗ್ಗೆಯೂ ಕಾಳಜಿ ವಹಿಸಬೇಡಿ, ತಂಡಕ್ಕಾಗಿ, ದೇಶಕ್ಕಾಗಿ ಆಡುವ ಬಗ್ಗೆ ಮಾತ್ರ ಗಮನಹರಿಸಿ. ತಂಡದಲ್ಲಿ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ, ವೇಗಿ ಶಾಹೀನ್ ಶಾ ಆಫ್ರಿದಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯೂ ನಮಗಿದೆ. ಈ ಸಲ ಟ್ರೋಫಿ ಗೆಲ್ಲಬೇಕು ಎಂಬುದು ದೇವರ ಇಚ್ಚೆ. ಖಚಿತವಾಗಿ ನಮ್ಮ ತಂಡ ಗೆಲುವು ಸಾಧಿಸುತ್ತದೆ. ಈ ದೇಶವು ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದೆ. ಅವುಗಳನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

    ಇದೇ ವೇಳೆ ವಿಕೆಟ್‌ ಕೀಪರ್‌-ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ ಟಿ20 ಕ್ರಿಕೆಟ್‌ನಲ್ಲಿ 3,000 ರನ್‌ ಪೂರೈಸಿದ್ದರ ನೆನಪಿಗಾಗಿ ಕೆಲ ಆಟಗಾರರಿಗೆ ಪಾಕ್‌ ತಂಡದ ಜೆರ್ಸಿಯನ್ನು ವಿತರಿಸಲಾಯಿತು.

  • ಟೆಸ್ಟ್‌ ಕ್ರಿಕೆಟ್‌ನಲ್ಲಿ ʻಪೆನಾಲ್ಟಿ ಟೈಮ್‌ʼ, ʻಟರ್ನಿಂಗ್‌ ಟ್ರ್ಯಾಕ್‌ʼ ಕುತೂಹಲ!

    ಟೆಸ್ಟ್‌ ಕ್ರಿಕೆಟ್‌ನಲ್ಲಿ ʻಪೆನಾಲ್ಟಿ ಟೈಮ್‌ʼ, ʻಟರ್ನಿಂಗ್‌ ಟ್ರ್ಯಾಕ್‌ʼ ಕುತೂಹಲ!

    ಭಾರತದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದ್ದ ಕ್ರಿಕೆಟ್‌ ಇದೀಗ ವಿಶ್ವದ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದೆ. ಅದರಲ್ಲೂ ಇತ್ತೀಚೆಗೆ ದೀರ್ಘ ಸ್ವರೂಪದ ಟೆಸ್ಟ್‌ ಕ್ರಿಕೆಟ್‌ (Test Cricket) ಸಹ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ, ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ (Ind vs Eng) ನಡುವಿನ ಟೆಸ್ಟ್‌ ಸರಣಿ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಏಕೆಂದರೆ ಕ್ರಿಕೆಟ್ ತನ್ನ ವಿಶಿಷ್ಟ ನಿಯಮಗಳಿಂದಲೇ ಜಗತ್ತಿನ ಕ್ರೀಡಾಸಕ್ತರ ಮನಗೆದ್ದಿದೆ. ಹೌದು. ಟೆಸ್ಟ್‌, ಏಕದಿನ ಅಥವಾ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಒಬ್ಬ ಆಟಗಾರ ಪ್ಲೇಯಿಂಗ್‌-11ನಲ್ಲಿ ಆಯ್ಕೆಯಾದ ನಂತರ ಸಮಯ ಪರಿಪಾಲನೆ ತುಂಬಾ ಮುಖ್ಯ. ಏಕದಿನ ಕ್ರಿಕೆಟ್‌ನಲ್ಲಿ (ODI Cricket) ಒಂದು ಪಂದ್ಯಕ್ಕೆ 7 ಗಂಟೆ, ಟಿ20 ಪಂದ್ಯಕ್ಕೆ 3 ಗಂಟೆ (2:30 ನಿಮಿಷದ ಎರಡು ಸ್ಟ್ರೆಟಜಿಕ್‌ ಟೈಮ್ಔ‌ಟ್‌ ಸೇರಿ) ಸಮಯವಿರುತ್ತದೆ. ಆದ್ರೆ ಟೆಸ್ಟ್‌ ಕ್ರಿಕೆಟ್‌ ಒಂದು ಪಂದ್ಯ 5 ದಿನ ನಡೆಯುತ್ತದೆ. ಪ್ರತಿದಿನ 90 ಓವರ್‌ ಮ್ಯಾಚ್‌ಗಳೊಂದಿಗೆ ಇತ್ತಂಡಗಳಿಗೂ ಎರಡು ಇನ್ನಿಂಗ್ಸ್‌ಗಳನ್ನಾಡುವ ಅವಕಾಶವಿರುತ್ತದೆ. ಇದನ್ನೂ ಓದಿ: ಧ್ರುವ್ ಜುರೆಲ್, ಗಿಲ್ ತಾಳ್ಮೆಯ ಜೊತೆಯಾಟ – ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತಕ್ಕೆ ಸರಣಿ ಜಯ

    ಪಂದ್ಯ ಆರಂಭಗೊಂಡ ನಂತರ ಯಾವೊಬ್ಬ ಆಟಗಾರ ಉದ್ದೇಶಪೂರ್ವಕವಾಗಿ ಸಮಯವ್ಯರ್ಥ ಮಾಡಿದರೆ ದಂಡ ತೆರಬೇಕಾಗುತ್ತದೆ. ಇದು ಇಡೀ ತಂಡದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಭಾರತದ ಆಥಿತ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿ (ODI Worldcup) ವೇಳೆ ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್‌ ಔಟ್‌ಗೆ ತುತ್ತಾಗಿದ್ದು ಇದಕ್ಕೆ ಉದಾಹರಣೆ. ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯದಲ್ಲಿಯೂ ಅಶ್ವಿನ್‌ (R Ashwin) ಅವರು ಅನವಶ್ಯಕವಾಗಿ ಕಾಲಹರಣ ಮಾಡಿದ್ದಕ್ಕೆ 5 ರನ್‌ ದಂಡ ವಿಧಿಸಲಾಗಿತ್ತು. ಅಲ್ಲದೇ 3ನೇ ಟೆಸ್ಟ್‌ ಪಂದ್ಯದ ವೇಳೆ ಅಶ್ವಿನ್‌ ತುರ್ತು ಕಾರ್ಯದ ನಿಮಿತ್ತ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಬಳಿಕ ಹೊರಗುಳಿದಿದ್ದರು. ಈ ವೇಳೆ ಟೀಂ ಇಂಡಿಯಾ 10 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. 2ನೇ ಇನ್ನಿಂಗ್ಸ್‌ ಫೀಲ್ಡಿಂಗ್‌ ಮಧ್ಯಂತರಲ್ಲಿ ಮತ್ತೆ ಪ್ಲೇಯಿಂಗ್‌-11 (ಆಡುವ 11ರ ಬಳಗ) ಸೇರಿದರು. ಇದು ಭಾರೀ ಚರ್ಚೆ ಹುಟ್ಟುಹಾಕಿತ್ತು. ಆಟಗಾರರೊಬ್ಬರು ಪಂದ್ಯದಿಂದ ಹೊರಗುಳಿದ ಮೇಲೆ ಮತ್ತೆ ಅವರು ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡಿತ್ತು. ಹೌದು, ಇದಕ್ಕೆ ಖಂಡಿತವಾಗಿಯೂ ಅವಕಾಶವಿದೆ. ಅದಕ್ಕಾಗಿಯೇ ಆಟಗಾರರು ಇಂತಿಷ್ಟೇ ಸಮಯದಲ್ಲಿ ತಂಡವನ್ನು ಸೇರಿಕೊಳ್ಳಬೇಕು. ಇಲ್ಲದಿದ್ದರೆ ಪೆನಾಲ್ಟಿ ಟೈಮ್‌ (Penalty Time) ಆಧಾರದಲ್ಲಿ ಅವರಿಗೆ ದಂಡ ವಿಧಿಸಬಹುದು. ಅಷ್ಟಕ್ಕೂ ಪೆನಾಲ್ಟಿ ಟೈಮ್‌ ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತದೆ ಅನ್ನೋ ಬಗ್ಗೆ ಕುತೂಹಲವಿದ್ದರೆ ಮುಂದೆ ಓದಿ….

    ಪೆನಾಲ್ಟಿ ಟೈಮ್‌ ಎಂದರೇನು? ಹೇಗೆ ಕೆಲಸ ಮಾಡುತ್ತೆ?
    ಯಾವುದೇ ಒಬ್ಬ ಆಟಗಾರನು ಆಡುವ 11ರ ಬಳಗದಲ್ಲಿ ಸೇರ್ಪಡೆಯಾದ ನಂತರ ಅನಾರೋಗ್ಯ, ಗಾಯದ ಸಮಸ್ಯೆ ಹೊರತುಪಡಿಸಿ ಉಳಿದ ಯಾವುದೇ ಕಾರಣಗಳಿಂದ ತಂಡವನ್ನು ತೊರೆಯಬೇಕಿದ್ದರೆ, ಸ್ವೀಕೃತಕ್ಕೆ ಅರ್ಹವಾದ ಕಾರಣ ನೀಡಬೇಕು. ಇಲ್ಲದಿದ್ದರೆ, MCC (ಮೇರಿಲ್ಬೋನ್ ಕ್ರಿಕೆಟ್ ಕ್ಲಬ್) ನಿಯಮದ ಅನ್ವಯ ಆ ಆಟಗಾರನು ದಂಡಕ್ಕೆ ಒಳಗಾಗುತ್ತಾನೆ. ಅಥವಾ ಆ ಟೂರ್ನಿಯಿಂದ ನಿಷೇಧಿಸಲ್ಪಡುತ್ತಾನೆ. ಆದ್ರೆ ಇಂಗ್ಲೆಂಡ್‌ (England) ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ತೊರೆದಿದ್ದ ಅಶ್ವಿನ್‌ ಮತ್ತೆ ಕಣಕ್ಕಿಳಿದರು. ಕೌಟುಂಬಿಕ ಕಾರಣಗಳಿಂದಾಗಿ ಮೈದಾನ ತೊರೆದಿದ್ದರಿಂದ ಬಿಸಿಸಿಐ ಸಹ ಅಶ್ವಿನ್‌ ಅವರು ಮತ್ತೆ ಪ್ಲೇಯಿಂಗ್‌ -11 ಸೇರಲು ಅವಕಾಶ ಮಾಡಿಕೊಟ್ಟಿತು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್‌ ಕಮಾಲ್‌ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್‌ ಮಾಂತ್ರಿಕ

    ಈ ನಿಯಮಗಳನ್ನು ಅನುಸರಿಸಲೇಬೇಕು?
    ಯಾವುದೇ ಒಬ್ಬ ಕ್ರೀಡಾಳು ತಂಡವೊಂದಕ್ಕೆ ಸೇರ್ಪಡೆಗೊಂದ ನಂತರ ಎಂಸಿಸಿ ಪ್ರಕಾರ ಕೆಲವೊಂದು ನಿಯಮಗಳನ್ನು ಅನುಸರಿಸಲೇಬೇಕು. ಅವುಗಳ ಪೈಕಿ ಕೆಲವು ಹೀಗಿವೆ.
    *MCC 24.2.2.1 ಪ್ರಕಾರ ಆಟಗಾರ ಗೈರು ಹಾಜರಿಗೆ ಕಾರಣವನ್ನು ಫೀಲ್ಡ್‌ ತೊರೆಯುವ ಮುನ್ನ ಅಂಪೈರ್‌ಗೆ ತಿಳಿಸಬೇಕು.
    *MCC 24.2.2.2 ಪ್ರಕಾರ ಅವನು/ಅವಳು ಅಂಪೈರ್‌ನ ಒಪ್ಪಿಗೆಯಿಲ್ಲದೇ ಆಟದ ಅವಧಿಯಲ್ಲಿ ಮೈದಾನಕ್ಕೆ ಬರಬಾರದು.
    * MCC 24.2.2.3, 24.2.3, 24.2.7 ಮತ್ತು 24.3 ಪ್ರಕಾರ ಪೆನಾಲ್ಟಿ ಸಮಯ ಮುಗಿಯುವವರೆಗೆ ಬೌಲಿಂಗ್‌ ಅಥವಾ ಬ್ಯಾಟಿಂಗ್‌ ಮಾಡುವಂತಿಲ್ಲ.
    * ಮೈದಾನದಲ್ಲಿರುವ ಆಟಗಾರನು ಗಾಯದ ಸಮಸ್ಯೆ ಹೊರತುಪಡಿಸಿ ಅಂಪೈರ್‌ ಅನುಮತಿ ಪಡೆದು ಹೊರಗೆ ಹೋಗುವುದಾದರೆ 24.2.3 ನಿಯಮದ ಪ್ರಕಾರ 90 ನಿಮಿಷಗಳ ವರೆಗೆ ಮಾತ್ರ ಸಮಯ ಪಡೆಯಬಹುದು.
    * ಕೌಟುಂಬಿಕ ಕಾರಣಗಳಿಗಾಗಿ ಮೈದಾನ ತೊರೆಯುವಂತಿದ್ದರೆ ಅದಕ್ಕೆ ಆಡಳಿತ ಮಂಡಳಿಯ ಒಪ್ಪಿಗೆಯೂ ಅವಶ್ಯಕವಿರುತ್ತದೆ. ಇದಕ್ಕೆ 24 ಗಂಟೆ ಅಥವಾ 48 ಗಂಟೆಯ ಸಮಯ ಇರುತ್ತದೆ. ಇಲ್ಲದಿದ್ದರೆ ಅವರನ್ನು ಪಂದ್ಯದಿಂದ ಹೊರಗಿಡಲಾಗುತ್ತದೆ. ತಂಡದಿಂದ ಹೊರಗುಳಿದ ಆಟಗಾರನ ಬದಲಿಗೆ ಬ್ಯಾಟಿಂಗ್‌ನಲ್ಲಿ ಅವಕಾಶ ಇರುವುದಿಲ್ಲ. ಫೀಲ್ಡಿಂಗ್‌ಗೆ ಮಾತ್ರ ಬದಲಿ ಆಟಗಾರನನ್ನು ಬಳಸಿಕೊಳ್ಳಬಹದು. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‍ನಲ್ಲಿ 4,000 ರನ್‍ ಪೂರೈಸಿ ವಿಶೇಷ ಸಾಧನೆ ಮಾಡಿದ ಹಿಟ್‍ಮ್ಯಾನ್

    ಅಶ್ವಿನ್‌ ವಿಷಯದಲ್ಲಿ ಆಗಿದ್ದೇನು?
    ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಿನ್‌ ಅವರ ತಾಯಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್‌ ಟೀಂ ಇಂಡಿಯಾವನ್ನು ತೊರೆದಿದ್ದರು. ಅಶ್ವಿನ್‌ ಅವರ ಸೇವೆ ಇನ್ನುಮುಂದೆ ತಂಡಕ್ಕೆ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಸಹ 10 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಫೀಲ್ಡಿಂಗ್‌ನಲ್ಲಿ ಮಾತ್ರ ಬದಲಿ ಆಟಗಾರನಿಗೆ ಅವಕಾಶವಿದ್ದ ಕಾರಣ ಅಶ್ವಿನ್‌ ಬದಲಿಗೆ ದೇವದತ್‌ ಪಡಿಕಲ್‌ ಅವರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳಲಾಗಿತ್ತು. ಮರುದಿನವೇ ಅಶ್ವಿನ್‌ ಟೀಂ ಇಂಡಿಯಾ ಬಳಗವನ್ನು ಸೇರಿಕೊಂಡರು. ಐಸಿಸಿ ನಿಯಮ 24.3.2 ಪ್ರಕಾರ ಆಟಗಾರನು ಸಂಪೂರ್ಣ ಸ್ವೀಕಾರಾರ್ಹ ಕಾರಣಕ್ಕಾಗಿ ಮೈದಾನ ತೊರೆದಿದ್ದರೆ ಅದು ದಂಡಕ್ಕೆ ಒಳಪಡುವುದಿಲ್ಲ. ಆದ್ದರಿಂದ ಅಶ್ಚಿನ್‌ ಅವರಿಗೆ ಪೆನಾಲ್ಟಿ ವಿಧಿಸಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ನಿಲ್ಲದ ಟರ್ನಿಂಗ್‌ ಟ್ರ್ಯಾಕ್‌ ಕಾಂಟ್ರವರ್ಸಿ:
    ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.ಆದ್ರೆ ಈ ಸರಣಿ ಆರಂಭಗೊಂಡ ದಿನದಿಂದಲೂ ಭಾರತದ ಟರ್ನಿಂಗ್​ ಟ್ರ್ಯಾಕ್​ಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೊಂದೇ ಸರಣಿಗಲ್ಲ, ಭಾರತದಲ್ಲಿ ಯಾವುದೇ ತಂಡದ ವಿರುದ್ಧ ಟೆಸ್ಟ್ ಸರಣಿ ನಡೆದರೂ ಈ ಚರ್ಚೆ ಮುನ್ನೆಲೆಗೆ ಬರುತ್ತದೆ. ಆ ಸರಣಿ ಮುಗಿದು ತಿಂಗಳಾದರೂ ಚರ್ಚೆ ನಿಲ್ಲಲ್ಲ. ಹಾಗಾದರೆ ಟರ್ನಿಂಗ್​ ಟ್ರ್ಯಾಕ್ ಎಂದರೇನು? ಭಾರತದಲ್ಲಿ ಟೆಸ್ಟ್ ಆರಂಭಗೊಂಡಾಗಲೇ ಈ ಚರ್ಚೆ ಮುನ್ನೆಲೆಗೆ ಬರುವುದೇಕೆ? ಎಂಬುದನ್ನೂ ಇಲ್ಲಿ ತಿಳಿಯಬಹುದು.

    ಟರ್ನಿಂಗ್​ ಟ್ರ್ಯಾಕ್​​​ ಅಂದರೆ ಸ್ಪಿನ್ನರ್​ಗಳಿಗೆ ನೆರವಾಗುವ ಪಿಚ್​​ಗಳು ಎಂದರ್ಥ. ಸ್ಪಿನ್ ಬೌಲರ್‌ಗಳು ಚೆಂಡನ್ನು ಅದ್ಭುತವಾಗಿ ತಿರುಗಿಸಬಲ್ಲ ಪಿಚ್. ಅಂತಹ ಪಿಚ್​​​ಗಳು ಟೆಸ್ಟ್​​ ಪಂದ್ಯದ ಮೊದಲ ದಿನದಿಂದಲೇ ಸ್ಪಿನ್ ಬೌಲರ್ಸ್​ಗೆ ಸಹಾಯ ಮಾಡುತ್ತವೆ. ಸ್ಪಿನ್ನರ್ ​​ಗಳಿಂದ ಅನಿರಿಕ್ಷಿತ ತಿರುವು ಮತ್ತು ಹೆಚ್ಚು ಬೌನ್ಸ್ ಕಂಡು ಬರುತ್ತದೆ. ಯಾವಾಗ ಹೇಗೆ ಚೆಂಡು ತಿರುವು ಪಡೆಯುತ್ತದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿದಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದಲೇ ಪ್ರವಾಸಿ ತಂಡಗಳು ತಿಂಗಳಿಗೆ ಮುಂಚೆಯೇ ಪಿಚ್‌ಗಳಲ್ಲಿ ಅಭ್ಯಾಸ ಮಾಡುತ್ತವೆ.

    ಟೆಸ್ಟ್‌ ಕ್ರಿಕೆಟ್‌ಗೆ ಏಕಿಲ್ಲ ಸ್ಟಾಪ್‌ ಕ್ಲಾಕ್‌?
    ಐಸಿಸಿ ನಿಯಮದ ಪ್ರಕಾರ, ಏಕದಿನ ಕ್ರಿಕೆಟ್‌, ಟಿ20 ಕ್ರಿಕೆಟ್‌ಗಳಲ್ಲಿ ನಿಧಾನಗತಿಯ ಬೌಲಿಂಗ್‌ ತಡೆಯಲು ಐಸಿಸಿ ಸ್ಟಾಪ್‌ ಕ್ಲಾಕ್‌ ನಿಯಮ ವಿಧಿಸಿದೆ. ಅಂದ್ರೆ ಒಂದು ಓವರ್ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್ ಆರಂಭಿಸದೇ ಹೋದರೆ 3ನೇ ನಿರ್ದೇಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಲಭಿಸಲಿದೆ. ಮೊದಲೆರಡು ಬಾರಿ ಈ ರೀತಿಯ ವಿಳಂಬಕ್ಕೆ ರಿಯಾಯಿತಿ ಇರಲಿದೆ. ಆದರೆ ಮೂರನೇ ಬಾರಿಯೂ ಹಾಗೆಯೇ ವಿಳಂಬ ಮಾಡಿದರೆ ಸ್ಟಾಪ್ ಕ್ಲಾಕ್ ನಿಯಮ ಅನ್ವಯವಾಗಲಿದೆ. ಕ್ರಿಕೆಟ್ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ತಡೆಯಲು ಐಸಿಸಿ ಈ ಹೊಸ ಯೋಜನೆ ಪರಿಚಯಿಸಲು ನಿಧರಿಸಿದೆ. ಆದ್ರೆ ಈ ನಿಯಮ ಟೆಸ್ಟ್‌ ಕ್ರಿಕೆಟ್‌ಗೆ ಅನ್ವಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

  • ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್‌

    ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್‌

    ದುಬೈ: ಐಸಿಸಿ (ICC) ಟಿ20 ಬೌಲಿಂಗ್‌ನಲ್ಲಿ ಭಾರತ ತಂಡದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ (Ravi Bishnoi) ನಂಬರ್‌ 1 ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ಐಸಿಸಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ.

    ರವಿ ಬಿಷ್ಣೋಯ್, ಈಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ICC T20I ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್‌ 1 ಸ್ಥಾನದಲ್ಲಿದ್ದ ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿ ರವಿ ಬಿಷ್ಣೋಯ್‌ ಅಗ್ರಸ್ಥಾನ ಗಳಿಸಿದ್ದಾರೆ. 699 ರೇಟಿಂಗ್‌ ಪಾಯಿಂಟ್ಸ್‌ ಮೂಲಕ ಬಿಷ್ಣೋಯ್‌ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಕ್ರಿಕೆಟಿಗನ ಮುಶ್ಫಿಕರ್ ಎಡವಟ್ಟು – ʻಹ್ಯಾಂಡ್ಲಿಂಗ್ ದಿ ಬಾಲ್‌ʼಗೆ ಬಲಿಯಾದ ದೇಶದ ಮೊದಲ ಬ್ಯಾಟರ್‌

    ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ODI ಬ್ಯಾಟರ್, ಟೆಸ್ಟ್ ಬೌಲರ್ ಮತ್ತು T20I ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

    ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. ಬಿಷ್ಣೋಯ್ ಅವರೊಂದಿಗೆ ಭಾರತೀಯ ಆಟಗಾರರು ಈಗ ಐಸಿಸಿ ಶ್ರೇಯಾಂಕದ 8 ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಈಗ ಹೇಳಿ ಯಾರು ಪನೌತಿ – ರಾಹುಲ್‍ಗೆ ಟಾಂಗ್ ಕೊಟ್ಟ ಪಾಕ್ ಮಾಜಿ ಆಟಗಾರ

    ಟೆಸ್ಟ್‌, ಏಕದಿನ ಅಂತಾರಾಷ್ಟ್ರೀಯ, ಟಿ20 ಅಂತಾರಾಷ್ಟ್ರೀಯ, ಒಡಿಐ ಮತ್ತು ಟಿ20ಐ ಬ್ಯಾಟರ್‌, ಟೆಸ್ಟ್‌ ಮತ್ತು ಟಿ20ಐ ಬೌಲರ್‌, ಟೆಸ್ಟ್‌ ಆಲ್‌ರೌಂಡರ್‌ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ನಂ.1 ಸ್ಥಾನದಲ್ಲಿದೆ.

    ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 3,434 ಪಾಯಿಂಟ್ಸ್‌ ಮತ್ತು 118 ರೇಟಿಂಗ್‌ ಮೂಲಕ ಭಾರತ ತಂಡ ನಂಬರ್‌ 1 ಸ್ಥಾನ ಗಳಿಸಿದೆ. 16,137 ಪಾಯಿಂಟ್ಸ್‌ ಮತ್ತು 265 ರೇಟಿಂಗ್‌ನೊಂದಿಗೆ ಐಸಿಸಿ ಟಿ20ಐ ರ‍್ಯಾಂಕಿಂಗ್‌ನಲ್ಲೂ ಭಾರತ ಮುಂದಿದೆ.

    6,640 ಪಾಯಿಂಟ್ಸ್‌ ಮತ್ತು 121 ರೇಟಿಂಗ್‌ನೊಂದಿಗೆ ಅಂತಾರಾಷ್ಟ್ರೀಯ ಏಕದಿನ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ 1 ನೇ ಸ್ಥಾನ ಪಡೆದುಕೊಂಡಿದೆ. ಒಡಿಐ ಬ್ಯಾಟ್ಸ್‌ಮನ್‌ ರ‍್ಯಾಂಕಿಂಗ್‌ನಲ್ಲಿ 826 ಪಾಯಿಂಟ್ಸ್‌ನೊಂದಿಗೆ ಶುಭಮನ್‌ ಗಿಲ್‌ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧದ 3 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ – ಏಡನ್‌ ಮಾರ್ಕ್ರಮ್‌ ನಾಯಕ

    ಟಿ20ಯಲ್ಲಿ 855 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ ಸೂರ್ಯಕುಮಾರ್‌ ಯಾದವ್‌ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ 879 ರೇಟಿಂಗ್‌ ರವಿಚಂದ್ರನ್‌ ಅಶ್ವಿನ್‌ ನಂಬರ್‌ 1 ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ನಲ್ಲಿ 455 ರೇಟಿಂಗ್‌ ಪಾಯಿಂಟ್ಸ್‌ನಿಂದ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ.

  • ಬೌಲರ್‌ಗಳಿಗೆ ಶಾಕ್‌ ಕೊಟ್ಟ ಐಸಿಸಿ – ನಿಗದಿತ ಸಮಯದಲ್ಲಿ ಓವರ್‌ ಆರಂಭಿಸದಿದ್ದರೆ ಬೀಳುತ್ತೆ ದಂಡ

    ಬೌಲರ್‌ಗಳಿಗೆ ಶಾಕ್‌ ಕೊಟ್ಟ ಐಸಿಸಿ – ನಿಗದಿತ ಸಮಯದಲ್ಲಿ ಓವರ್‌ ಆರಂಭಿಸದಿದ್ದರೆ ಬೀಳುತ್ತೆ ದಂಡ

    ಕ್ರಿಕೆಟ್ (Cricket) ತನ್ನ ನಿಯಮಗಳಿಂದಲೇ ಜಗತ್ತಿನ ಕ್ರೀಡಾಸಕ್ತರ ಮನಗೆದ್ದಿದೆ. ಕೆಲವೊಮ್ಮೆ ಚರ್ಚೆಯನ್ನೂ ಹುಟ್ಟುಹಾಕಿದೆ. ನಿಗದಿತ ಅವಧಿಯಲ್ಲಿ ಆಟಗಾರನೊಬ್ಬ ಕ್ರೀಸ್‌ಗೆ ಆಗಮಿಸದಿದ್ದರೆ ಏನಾಗುತ್ತೆ ಎಂಬುದಕ್ಕೆ ಈ ವಿಶ್ವಕಪ್‌ನ ಏಂಜೆಲೊ ಮ್ಯಾಥ್ಯೂಸ್ ಪ್ರಕರಣ ಉತ್ತಮ ನಿದರ್ಶನ. ಹಾಗೆಯೇ ಬೌಲರ್ ನಿಗದಿತ ಅವಧಿಯಲ್ಲಿ ಬೌಲಿಂಗ್ ಆರಂಭಿಸದಿದ್ದರೆ ಏನಾಗಲಿದೆ? ಈ ಪ್ರಶ್ನೆಗೆ ಉತ್ತರವೆಂಬಂತೆ ಐಸಿಸಿ ನೂತನ ನಿಯಮವೊಂದನ್ನು ಜಾರಿಗೆ ತಂದಿದೆ.

    ಯಾವುದೇ ಕ್ರೀಡೆಗೆ ಸಮಯ ಪರಿಪಾಲನೆ ತುಂಬಾ ಮುಖ್ಯ. ಸಮಯದ ವಿಚಾರದಲ್ಲಿ ಯಾಮಾರಿದರೆ ಕೆಲ ನಿಯಮಗಳು ಆಟವನ್ನೂ, ಆಟಗಾರರನ್ನೂ ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿಗದಿತ ಸಮಯಕ್ಕೆ ಕ್ರೀಸ್‌ಗೆ ಬರದೇ ಒಂದು ಬಾಲ್ ಕೂಡ ಆಡದ ಬ್ಯಾಟರ್ ‘ಟೈಮ್ಡ್ ಔಟ್’ ನಿಯಮದಿಂದಾಗಿ ಔಟಾಗಿ ಹೊರನಡೆದ. ಇದನ್ನ ಈಗ ಬೌಲಿಂಗ್‌ಗೂ ಅನ್ವಯಿಸಿದೆ ಐಸಿಸಿ. ಈ ತಲೆನೋವು ಬ್ಯಾಟರ್‌ಗಳಿಗಷ್ಟೇ ಎನ್ನಲಾಗುತ್ತಿತ್ತು. ಆದರೆ ಬೌಲರ್‌ಗಳಿಗೂ ಐಸಿಸಿ (ICC) ಶಾಕ್ ಕೊಟ್ಟಿದೆ. ಬೌಲರ್ ನಿಗದಿತ ಅವಧಿಯಲ್ಲಿ ಬೌಲಿಂಗ್ ಆರಂಭಿಸದಿದ್ದರೆ ‘ಸ್ಟಾಪ್ ಕ್ಲಾಕ್’ ನಿಯಮವನ್ನ ಎದುರಿಸಬೇಕಾಗುತ್ತೆ. ಇದನ್ನೂ ಓದಿ: ಔಟ್‌ ಮಾಡುವ ಭರದಲ್ಲಿ ಇಶಾನ್‌ ಕಿಶನ್‌ ಯಡವಟ್ಟು – ಎಂಸಿಸಿ ಕಾನೂನು 27.3.1 & 27.3.2 ಹೇಳೋದೇನು?

    ಅಹಮದಾಬಾದ್‌ನಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕರ ಸಭೆಯಲ್ಲಿ ಈ ರೂಲ್ಸ್ ಜಾರಿಗೆ ನಿರ್ಧರಿಸಲಾಯಿತು. ಏನಿದು ಸ್ಟಾಪ್ ಕ್ಲಾಕ್ ನಿಯಮ? ಇದರ ಜಾರಿ ಯಾಕೆ? ಬೌಲರ್ ನಿಯಮ ಮೀರಿದ್ರೆ ಶಿಕ್ಷೆಯೇನು? ಇದರಿಂದ ಶಿಕ್ಷೆಗೊಳಗಾದ ತಂಡ ಎದುರಿಸಬಹುದಾದ ಸವಾಲೇನು? ಎಂಬ ಬಗ್ಗೆ ವಿಸ್ತೃತವಾಗಿ ಇಲ್ಲಿ ಚರ್ಚಿಸಲಾಗಿದೆ.

    ಸ್ಟಾಪ್ ಕ್ಲಾಕ್ ನಿಯಮ
    ಒಂದು ಓವರ್ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್ ಆರಂಭಿಸದೇ ಹೋದರೆ 3ನೇ ನಿರ್ದೇಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ (5 Run Penalty) ರನ್ ಲಭಿಸಲಿದೆ. ಮೊದಲೆರಡು ಬಾರಿ ಈ ರೀತಿಯ ವಿಳಂಬಕ್ಕೆ ರಿಯಾಯಿತಿ ಇರಲಿದೆ. ಆದರೆ ಮೂರನೇ ಬಾರಿಯೂ ಹಾಗೆಯೇ ವಿಳಂಬ ಮಾಡಿದರೆ ಸ್ಟಾಪ್ ಕ್ಲಾಕ್ (Stop Clock) ನಿಯಮ ಅನ್ವಯವಾಗಲಿದೆ. ಕ್ರಿಕೆಟ್ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ತಡೆಯಲು ಐಸಿಸಿ ಈ ಹೊಸ ಯೋಜನೆ ಪರಿಚಯಿಸಲು ನಿಧರಿಸಿದೆ. 2023ರ ಡಿಸೆಂಬರ್‌ನಿಂದ 2024ರ ಏಪ್ರಿಲ್ ವರೆಗೆ ಏಕದಿನ ಹಾಗೂ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಈ ನಿಯಮ ಬಳಕೆಯಾಗಲಿದೆ. ಇದನ್ನೂ ಓದಿ: ಟೀಂ ಇಂಡಿಯಾದ ಕೋಚ್‌ ಆಗಿ ಮುಂದುವರಿಯಲಿದ್ದಾರೆ ದ್ರಾವಿಡ್‌

    ಹೊಸ ರೂಲ್ಸ್ ಏಕೆ?
    ಅಂತಾರಾಷ್ಟ್ರೀಯ ಪಂದ್ಯಗಳು ಸಮಯಕ್ಕೆ ಮುಕ್ತಾಯವಾಗುತ್ತಿಲ್ಲ. ಓವರ್‌ಗಳ ಮಧ್ಯೆ ತಂಡಗಳು ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಿವೆ. ಇದನ್ನು ನಿಯಂತ್ರಿಸಲು ಸ್ಟಾಪ್ ಕ್ಲಾಕ್‌ಗಳ ಬಳಕೆ ಮಾಡಲಾಗುತ್ತದೆ ಎಂದು ಐಸಿಸಿ ಹೇಳಿದೆ. ಟೆನಿಸ್ ಆಟದಲ್ಲೂ ಈ ನಿಯಮ ಬಳಸಲಾಗುತ್ತದೆ. ಪ್ರಸ್ತುತ ನಿಧಾನಗತಿಯ ಬೌಲಿಂಗ್‌ಗೆ ತಂಡದ ನಾಯಕ ಅಥವಾ ಇಡೀ ಟೀಂಗೆ ಪಂದ್ಯದ ಸಂಭಾವನೆಯಲ್ಲಿ ಇಂತಿಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತಿದೆ. ಅಷ್ಟೇ ಅಲ್ಲ, ನಿರ್ದಿಷ್ಟ ಸಮಯದೊಳಗೆ ಓವರ್ ಮುಗಿಸದಿದ್ದರೆ 30 ಯಾರ್ಡ್ ವೃತ್ತದೊಳಗೆ ಒಬ್ಬ ಕ್ಷೇತ್ರರಕ್ಷಕ ಹೆಚ್ಚುವರಿಯಾಗಿ ಇರಬೇಕು ಎಂಬ ನಿಯಮವನ್ನು ಐಸಿಸಿ ಜಾರಿ ಮಾಡಿತ್ತು. ಆದರೂ ತಂಡಗಳು ಓವರ್-ರೇಟ್‌ನಲ್ಲಿ ಹಿಂದೆ ಬಿದ್ದಿರುವ ಕಾರಣ ರನ್ ಪೆನಾಲ್ಟಿ ಹಾಕಲು ನಿರ್ಧರಿಸಲಾಗಿದೆ.

    ಐಸಿಸಿ ಇತರೆ ಕಠಿಣ ನಿಯಮಗಳು
    ಏಕದಿನ ವಿಶ್ವಕಪ್ ನಡುವೆಯೇ ಐಸಿಸಿ ಸದಸ್ಯತ್ವ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಮತ್ತೊಂದು ಬಿಗ್ ಶಾಕ್ ನೀಡಲಾಗಿತ್ತು. ಇದೇ ಮೊದಲ ಬಾರಿಗೆ 19 ವರ್ಷದೊಳಗಿನವರ ವಿಶ್ವಕಪ್ ನಡೆಸಲು ತಯಾರಿ ಮಾಡಿಕೊಂಡಿದ್ದ ಶ್ರೀಲಂಕಾ ಮಂಡಳಿಗೆ ಈ ಅವಕಾಶ ಕೈತಪ್ಪಿದೆ. ಅಂಡರ್-19 ವಿಶ್ವಕಪ್ (2024) ಆತಿಥ್ಯವನ್ನು ಲಂಕಾ ಮಂಡಳಿ ಕೈಯಿಂದ ಕಸಿದುಕೊಂಡು ಐಸಿಸಿ ದಕ್ಷಿಣ ಆಫ್ರಿಕಾಗೆ ನೀಡಿದೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ 21 ರನ್‌ ಚೇಸ್; ದಾಖಲೆ ಬರೆದ ಆಸೀಸ್‌

    ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತಿತರಾದವರು ಅಂತಾರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಆಡುವಂತಿಲ್ಲ ಎಂದು ಐಸಿಸಿ ಈಚೆಗೆ ಪ್ರಮುಖ ನಿರ್ಧಾರವೊಂದನ್ನು ಪ್ರಕಟಿಸಿತು. ಅಂತಾರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಆಟಗಾರ್ತಿಯರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಆಟವನ್ನು ಸೇರ್ಪಡೆಗೊಳಿಸಲಾಗುವುದು. ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಕೂಡ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಬದಲಾದ ಆಥ್ಲೀಟ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದೆ. ಕ್ರಿಕೆಟ್ ಸಹ ಒಲಿಂಪಿಕ್ ಕ್ರೀಡೆಯಾಗಲಿರುವ ಕಾರಣ, ಅದೂ ಕೂಡ ಒಲಿಂಪಿಕ್ ನಿಯಮಾವಳಿಗಳ ಅಧೀನಕ್ಕೆ ಬರಲಿದೆ.

    5 ರನ್ ಸಿಗುವುದೆಲ್ಲಿ?
    ಬೌಲಿಂಗ್ ವೇಳೆ ವೈಡ್ ಆಗಿ ಬಾಲ್ ಬೌಂಡರಿ ಲೈನ್ ಸೇರಿದಾಗ, ನೋ-ಬಾಲ್ ಆಗಿ ಬ್ಯಾಟರ್ ಫೋರ್ ಬಾರಿಸಿದಾಗ ಒಮ್ಮೆಲೆ ಐದು ರನ್ ಬರುತ್ತೆ. ಬಾಲ್ ಕೌಂಟ್ ಆಗದೇ ಐದು ರನ್ ಸಿಗುವುದು ಈ ಸಂದರ್ಭಗಳಲ್ಲಿ ಮಾತ್ರ. ಈ ಸಾಲಿಗೆ ಸ್ಟಾಪ್ ಕ್ಲಾಕ್ ನಿಯಮದಿಂದ ದೊರಯಬಹುದಾದ ರನ್ ಕೂಡ ಸೇರಿದಂತಾಗಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ 23 ರನ್‌, ಮ್ಯಾಕ್ಸಿ ಸ್ಫೋಟಕ ಶತಕ – ರನ್‌ ಮಳೆಯಲ್ಲಿ ಗೆದ್ದ ಆಸ್ಟ್ರೇಲಿಯಾ

    5 ರನ್ ಪೆನಾಲ್ಟಿ ಸಿಗುವ ಇತರೆ ನಿಯಮಗಳು
    ಹಿಂದಿನ ಮಹಿಳಾ ಬಿಗ್ ಬ್ಯಾಷ್ ಲೀಗ್ 2023 ರ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ವಿರುದ್ಧ ಸಿಡ್ನಿ ಸಿಕ್ಸರ್ಸ್ ಆರು ವಿಕೆಟ್‌ಗಳ ಜಯ ಸಾಧಿಸಿತ್ತು. ಆಟದ ಮಧ್ಯೆ ಸಿಡ್ನಿ ಆಟಗಾರ್ತಿ ಹೊಡೆದ ಬಾಲನ್ನು ಫೀಲ್ಡರ್ ಹಿಡಿದು ಬೌಲರ್ ಕಡೆಗೆ ಎಸೆಯುತ್ತಾರೆ. ಆದರೆ ಬೌಲರ್ ಆ ಬಾಲನ್ನು ತಮ್ಮಲ್ಲಿದ್ದ ಕರವಸ್ತ್ರ ಬಳಸಿ ಹಿಡಿಯುತ್ತಾರೆ. ಆಗ 5 ರನ್ ಪೆನಾಲ್ಟಿಹಾಕಲಾಗುತ್ತದೆ. ಇದರಿಂದ ಬ್ಯಾಟರ್ ತಂಡಕ್ಕೆ ಸುಲಭವಾಗಿ 5 ರನ್ ಒಲಿದು ಬರುತ್ತದೆ. ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ನಿಯಮಗಳ ಪ್ರಕಾರ, ವಿಕೆಟ್ ಕೀಪರ್ ಹೊರತುಪಡಿಸಿ ಯಾವುದೇ ಫೀಲ್ಡರ್ ಗ್ಲೌಸ್ ಅಥವಾ ಬಾಹ್ಯ ಲೆಗ್ ಗಾರ್ಡ್ಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ. ಕೈ ಅಥವಾ ಬೆರಳುಗಳಿಗೆ ರಕ್ಷಣೆಯನ್ನು ಅಂಪೈರ್‌ಗಳ ಒಪ್ಪಿಗೆಯೊಂದಿಗೆ ಮಾತ್ರ ಧರಿಸಬಹುದು ಎಂದಿದೆ.

    ಈಚೆಗೆ ಶ್ರೀಲಂಕಾ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್‌ಗೆ ಐದು ರನ್ ಪೆನಾಲ್ಟಿ ನೀಡಲಾಯಿತು. ಚಾಮಿಕಾ ಕರುಣಾರತ್ನೆ ಅವರ ಆಫ್-ಪೇಸ್ ಎಸೆತವು ಬ್ಯಾಟರ್ ಹೊಡೆತದಿಂದ ತಪ್ಪಿಸಿಕೊಂಡು, ವಿಕೆಟ್‌ಕೀಪರ್ ಕುಸಾಲ್ ಮೆಂಡಿಸ್ ಅವರ ಹಿಂದೆ ಇಟ್ಟಿದ್ದ ಹೆಲ್ಮೆಟ್‌ಗೆ ತಾಗಿತು. ಇದರಿಂದ ನೆದರ್ಲೆಂಡ್ಸ್‌ಗೆ ಐದು ರನ್ ಸುಲಭವಾಗಿ ಒಲಿದುಬಂತು. ಇದನ್ನೂ ಓದಿ: ಆಸೀಸ್‌ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್‌

    ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಒಂದು ರನ್ ಅಥವಾ ಒಂದು ಬಾಲ್ ಇಡೀ ಆಟದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಅಂತಹ ಸಂದಿಗ್ಧ ಸಂದರ್ಭದಲ್ಲಿ ಆಟಗಾರರು ತುಂಬಾ ಶ್ರಮ ಹಾಕಬೇಕಾಗುತ್ತದೆ. ಆದರೆ ಕೆಲ ಕಠಿಣ ನಿಯಮಗಳಿಂದ ಎಷ್ಟೋ ಪಂದ್ಯಗಳು ಕೊನೆ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡಿದ್ದುಂಟು.

  • 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

    2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

    ದುಬೈ: 2025ರಲ್ಲಿ ನಡೆಯಬೇಕಿದ್ದ ಐಸಿಸಿ ಚಾಂಪಿಯನ್ಸ್‌ ಕ್ರಿಕೆಟ್‌ ಟೂರ್ನಿ (ICC Champions Trophy 2025) ಪಾಕಿಸ್ತಾನದಲ್ಲಿ (Pakistan) ನಡೆಯುವುದು ಅನುಮಾನ.

    ಹೌದು. ಚಾಂಪಿಯನ್ಸ್‌ ಟ್ರೋಫಿ ಆಯೋಜನೆ ಮಾಡಲು ಪಾಕಿಸ್ತಾನ ಉತ್ಸುಕವಾಗಿದ್ದರೂ ಐಸಿಸಿ (ICC) ಇನ್ನೂ ಗ್ರೀನ್‌ ಸಿಗ್ನಲ್‌ ನೀಡಿಲ್ಲ. ಹೀಗಾಗಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳು ದುಬೈಯಲ್ಲಿ (Dubai) ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

     

    ಐಸಿಸಿ ಪಾಕಿಸ್ತಾನದಲ್ಲಿ ಪಂದ್ಯ ಆಯೋಜಿಸಲು ಅನುಮತಿ ನೀಡದೇ ಇರಲು ಕಾರಣ ಬಿಸಿಸಿಐ. ಮುಂಬೈ ದಾಳಿಯ ನಂತರ ರಾಜಕೀಯ ಮತ್ತು ಆಟಗಾರರ ಭದ್ರತಾ ಕಾರಣದಿಂದ ಟೀಂ ಇಂಡಿಯಾವನ್ನು (Team India) ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ (Indian Government) ಇಲ್ಲಿಯವರೆಗೆ ಬಿಸಿಸಿಐಗೆ (BCCI) ಅನುಮತಿ ನೀಡಿಲ್ಲ. ಹೀಗಾಗಿ 2025ರಲ್ಲೂ ಟೀಂ ಇಂಡಿಯಾವನ್ನು ಪಾಕ್‌ಗೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಭಾರೀ ಕಡಿಮೆ.

    ಪಾಕಿಸ್ತಾನ ಮುಂದೆ ಸದ್ಯ ಎರಡು ಆಯ್ಕೆ ಇದೆ. ಒಂದನೇಯದ್ದು ಭಾರತದ ಪಂದ್ಯಗಳನ್ನು ಮಾತ್ರ ದುಬೈಯಲ್ಲಿ ನಡೆಸುವುದು ಎರಡನೇಯದ್ದು ಸಂಪೂರ್ಣ ಟೂರ್ನಿಯನ್ನೇ ದುಬೈಗೆ ಸ್ಥಳಾಂತರ ಮಾಡುವುದು. ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯದೇ ಇದರೆ ಆದ ನಷ್ಟಕ್ಕೆ ಐಸಿಸಿ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ಗೆ ಪರಿಹಾರ ನೀಡಬೇಕಾಗುತ್ತದೆ.  ಇದನ್ನೂ ಓದಿ: RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    2023ರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯನ್ನು ಪಾಕಿಸ್ತಾನವೇ ಆಯೋಜಿಸಿದ್ದರೂ ಭಾರತದ ಪಂದ್ಯಗಳು ಹೈಬ್ರಿಡ್‌ ಮಾದರಿಯಲ್ಲಿ ನಡೆದಿತ್ತು. ಫೈನಲ್‌ ಸೇರಿದಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿತ್ತು.

     

    ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ?
    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.

  • ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

    ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

    ಮುಂಬೈ: ಗಡಿಯಾಚೆಗಿರುವ ಪಾಕಿಸ್ತಾನದ (Pakistan) ಕೆಲ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಂ ಇಂಡಿಯಾ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ (Mohammed Shami) ತಿರುಗೇಟು ನೀಡಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ, ನನ್ನಂತೆಯೇ ಪ್ರದರ್ಶನ ನೀಡುವ ಇನ್ನೂ 10 ಬೌಲರ್‌ಗಳು ಹುಟ್ಟಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಾರ ಬಗ್ಗೆಯೂ ಅಸೂಯೆ ಪಡುವುದಿಲ್ಲ. ನೀವು ಬೇರೆಯವರ ಯಶಸನ್ನು ಆನಂದಿಸಿದ್ರೆ, ಉತ್ತಮ ಆಟಗಾರರಾಗುತ್ತೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ಕೆಲವರು ಅನಗತ್ಯ ವಿವಾದಗಳನ್ನ ಸೃಷ್ಟಿಸುತ್ತಿದ್ದಾರೆ. ಬೇರೆ ಬೇರೆ ಚೆಂಡುಗಳನ್ನು (Different Ball) ಪಡೆಯುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ಬಹಳಷ್ಟು ಕೇಳುತ್ತಿದ್ದೇನೆ. ಆರಂಭಿಕ ಪಂದ್ಯಗಳಲ್ಲಿ ಪ್ಲೇಯಿಂಗ್‌-11 ಭಾಗವಾಗಿರಲಿಲ್ಲ. ನನ್ನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡ ಮೊದಲ ಪಂದ್ಯದಲ್ಲೇ 5 ವಿಕೆಟ್‌ ಪಡೆದೆ, ಮುಂದಿನ 2 ಪಂದ್ಯಗಳಲ್ಲಿ ಕ್ರಮವಾಗಿ 4 ಮತ್ತು 5 ವಿಕೆಟ್‌ ಪಡೆದೆ. ಹಾಗಾಗಿ ಪಾಕಿಸ್ತಾನದ ಕೆಲ ಆಟಗಾರರು ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಪ್ರಕಾರ ಹೇಳುವುದಾದ್ರೇ ಸರಿಯಾದ ಸಮಯಕ್ಕೆ ಸೂಕ್ತ ಪ್ರದರ್ಶನ ನೀಡುವವರೇ ಉತ್ತಮ ಆಟಗಾರ ಎಂದು ನುಡಿದಿದ್ದಾರೆ.

    ಅನುಭವಿ ವೇಗಿ ಮೊಹಮ್ಮದ್‌ ಶಮಿ ಅವರು ಹಾರ್ದಿಕ್‌ ಪಾಂಡ್ಯ (Hardik Pandya) ಅವರಿಂದಾಗಿ ಮೊದಲ 4 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದ್ರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲಿಗೆ ಪೆಟ್ಟಾಗಿಸಿಕೊಂಡ ಪರಿಣಾಮ ವಿಶ್ವಕಪ್‌ನಿಂದಲೇ (World Cup 2023) ಪಾಂಡ್ಯ ಹೊರಗುಳಿಯಬೇಕಾಯಿತು. ಹಾಗಾಗಿ ಶಮಿ ಹಾರ್ದಿಕ್‌ ಪಾಂಡ್ಯ ಬದಲಿಗೆ ತಂಡದಲ್ಲಿ ಸೇರ್ಪಡೆಯಾದರು. ಆ ನಂತರ ಮುಂದಿನ 7 ಪಂದ್ಯಗಳನ್ನಾಡಿದ ಮೊಹಮ್ಮದ್‌ ಶಮಿ ಬರೋಬ್ಬರಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ‌ ಪ್ರಸಕ್ತ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಶ್ರೇಷ್ಠ ಸಾಧನೆ ಮಾಡಿದರು. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

    ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಶಮಿ:
    ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ 50ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟಾಪ್‌-5 ದಿಗ್ಗಜರ ಎಲೈಟ್‌ ಪಟ್ಟಿ ಸೇರಿಕೊಂಡರು. 39 ವಿಶ್ವಕಪ್‌ ಪಂದ್ಯಗಳನ್ನಾಡಿರುವ ಆಸೀಸ್‌ ಬೌಲಿಂಗ್‌ ದಿಗ್ಗಜ ಗ್ಲೇನ್‌ ಮೆಕ್‌ಗ್ರಾತ್‌ 71 ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೇ, ಶ್ರೀಲಂಕಾದ ಮುತ್ತಯ್ಯ ಮುರಳಿಧರನ್‌ (40 ಮ್ಯಾಚ್‌, 68 ವಿಕೆಟ್‌), ಆಸೀಸ್‌ನ ಮಿಚೆಲ್‌ ಸ್ಟಾರ್ಕ್‌ (28 ಮ್ಯಾಚ್‌, 65 ವಿಕೆಟ್‌), ಶ್ರೀಲಂಕಾದ ಮಾಲಿಂಗ (29 ಮ್ಯಾಚ್‌, 56 ವಿಕೆಟ್‌) ಪಡೆದು ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿದ್ದಾರೆ. ಕೇವಲ 18 ಪಂದ್ಯಗಳಲ್ಲಿ 55 ವಿಕೆಟ್‌ಗಳನ್ನು ಪಡೆದಿರುವ ಶಮಿ 5ನೇ ಸ್ಥಾನದಲ್ಲಿದ್ದಾರೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 57 ರನ್‌ಗಳಿಗೆ 7 ವಿಕೆಟ್‌ ಪಡೆದಿರುವುದು ಶಮಿಯ ಶ್ರೇಷ್ಠ ಪ್ರದರ್ಶನವಾಗಿದೆ.

    ಹಸನ್‌ ರಾಝಾ ಹೇಳಿದ್ದೇನು?
    ಪಾಕ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದ ವಿಶ್ವಕಪ್‌ ಟೂರ್ನಿಯ ಕುರಿತು ಮಾತುಕತೆ ನಡೆಯುತ್ತಿತ್ತು. ವಾಸಿಂ ಅಕ್ರಮ್‌, ಶೋಯೆಬ್‌ ಮಲಿಕ್‌, ಮಿಸ್ಬಾ ಉಲ್‌ ಹಕ್‌ ಮೊದಲಾದವರು ಪಾಕ್‌ ತಂಡದ ಕಳಪೆ ಪ್ರದರ್ಶನ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದರು. ಆಗ ಹಸನ್‌ ರಾಝಾ ಟೀಂ ಇಂಡಿಯಾ ಬೌಲಿಂಗ್‌ (Team India Bowling) ಮತ್ತು ಡಿಆರ್‌ಎಸ್‌ ನಿರ್ಧಾರಗಳ ಕುರಿತು ಟೀಕಿಸಿದ್ದರು.

    ಶ್ರೀಲಂಕಾ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ, ಟೀಂ ಇಂಡಿಯಾ ಬೌಲಿಂಗ್‌ ವೇಳೆ ಚೆಂಡುಗಳು ಹೆಚ್ಚಾಗಿ ಸ್ವಿಂಗ್‌ ಆಗುತ್ತಿವೆ. ಒಂದು ವೇಳೆ ಅವರಿಗೆ ವಿಶೇಷ ಚೆಂಡುಗಳನ್ನು (Speical Ball) ನೀಡುತ್ತಿದ್ದಾರೆ ಅಂತ ನಿಮಗೆ ಅನ್ನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್‌, ಟೀಂ ಇಂಡಿಯಾ ಬೌಲರ್‌ಗಳ ಸ್ವಿಂಗ್‌ ಗಮನಿಸಿದ್ರೆ ಖಂಡಿತಾ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

  • ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ದುಬೈ: ಕ್ರೀಡೆಯ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿರುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿಳಿಸಿದೆ.

    ಐಸಿಸಿ ಸಭೆಯಲ್ಲಿ (ICC Meeting) ಈ ನಿರ್ಧಾರ ಪ್ರಕಟಿಸಲಾಗಿದೆ. ಈ ನಿರ್ಧಾರವು ಮಹಿಳಾ ಕ್ರಿಕೆಟ್​​ನ ಸಾರವನ್ನು ರಕ್ಷಿಸುವ ಗುರಿ ಹೊಂದಿದೆ. ಆಟದ ಸಮಗ್ರತೆ, ಸುರಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ಈ ನಿಯಮಗಳನ್ನ ಮಾಡಲಾಗಿದ್ದು,  2 ವರ್ಷಗಳಲ್ಲಿ ಮೌಲ್ಯಮಾಪನಕ್ಕೆ ಒಳಗಾಗುತ್ತವೆ ಎಂಬುದಾಗಿ ತಿಳಿಸಿದೆ. ಇದನ್ನೂ ಓದಿ: ವಿಶ್ವಕಪ್‌ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!

    ಜನನದ ಸಮಯದಲ್ಲಿ ಪುರುಷನಾಗಿದ್ದು, ಪುರುಷನಾಗಿಯೇ ಪ್ರೌಢಾವಸ್ಥೆಗೆ ಒಳಗಾದ ವ್ಯಕ್ತಿ, ನಂತರದಲ್ಲಿ ಲಿಂಗ ಬದಲಾವಣೆ ಕಾರ್ಯವಿಧಾನಗಳಿಗೆ ಒಳಗಾಗಿದ್ದರೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​​ ತಂಡಕ್ಕೆ ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಐಸಿಸಿ ದೃಢೀಕರಿಸಿದೆ. 9 ತಿಂಗಳ ಸಮಾಲೋಚನೆಯ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಸೇರಿದಂತೆ ಐಸಿಸಿ ಮಂಡಳಿಯು ಈ ಲಿಂಗ ಅರ್ಹತಾ ನಿಯಮಗಳನ್ನು ಅಂತಿಮಗೊಳಿಸಿತು. ಇದನ್ನೂ ಓದಿ: 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!

  • ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

    ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

    ಅಹಮದಾಬಾದ್: 2023ರ ಏಕದಿನ ವಿಶ್ವಕಪ್ (World Cup) ಅಂತಿಮ ಹಂತಕ್ಕೆ ತಲುಪಿದೆ. ಭಾನುವಾರ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ತಂಡದ ಮಧ್ಯೆ ನಡೆಯಲಿರುವ ಫೈನಲ್ (Final) ಪಂದ್ಯದೊಂದಿಗೆ ಈ ಮಹಾ ಟೂರ್ನಿಯ ಪಯಣ ಕೊನೆಗೊಳ್ಳಲಿದೆ. ಗುಜರಾತ್‌ನ (Gujarat) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ವಿಶ್ವಕಪ್‌ನ ಕೊನೆಯ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಮ್ಯಾಚ್ ವೀಕ್ಷಿಸಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಈ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರ (Player of Tournament) ಪ್ರಶಸ್ತಿಗಾಗಿ 9 ಆಟಗಾರರನ್ನು ಐಸಿಸಿ (ICC) ನಾಮನಿರ್ದೇಶನ ಮಾಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಐಸಿಸಿ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೂ ಹಂಚಿಕೊಂಡಿಲ್ಲ.

    ಈ 9 ಆಟಗಾರರ ಪೈಕಿ ಟೀಂ ಇಂಡಿಯಾದ ನಾಲ್ವರು ನಾಮನಿರ್ದೇಶನಗೊಂಡಿದ್ದು, ಆಸ್ಟ್ರೇಲಿಯಾಮತ್ತು ನ್ಯೂಜಿಲೆಂಡ್ ತಂಡಗಳ ತಲಾ 2 ಆಟಗಾರರು ಮತ್ತು ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

    ಭಾರತ ತಂಡದಿಂದ ಆಯ್ಕೆಯಾದವರು ಯಾರು?
    ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli)), ಮೊಹಮ್ಮದ್ ಶಮಿ (Mohammed Shami) ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಹೆಸರುಗಳು ಸೇರಿವೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಇವರಿಂದ ಉತ್ತಮ ಪ್ರದರ್ಶನ ಕಂಡುಬಂದಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ ಕೂಡ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದು, 500ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದನ್ನೂ ಓದಿ: ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!

    ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಶಮಿ, ಪ್ರಸ್ತುತ ಟೂರ್ನಿಯಲ್ಲಿ 23 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬುಮ್ರಾ ಕೂಡ ಇಲ್ಲಿಯವರೆಗೆ ಮ್ಯಾಚ್ ವಿನ್ನಿಂಗ್ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದನ್ನೂ ಓದಿ: ಜೀತೇಗ ಇಂಡಿಯಾ ಜೀತೇಗ – ವಿಶ್ವ ಮಹಾಸಮರಕ್ಕೆ ಮೋದಿ ಅಂಗಳ ಸಜ್ಜು, ಕೋಟ್ಯಂತರ ಅಭಿಮಾನಿಗಳ ಕಾತರ!

    ಇತರ ದೇಶಗಳಿಂದ ಯಾರ್ಯಾರು?
    ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಇತರ ದೇಶಗಳ ಆಟಗಾರರ ಬಗ್ಗೆ ಹೇಳುವುದಾದರೆ, ಆಸೀಸ್ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಮತ್ತು ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್  ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಝಂಪಾ 22 ವಿಕೆಟ್‌ಗಳೊಂದಿಗೆ ಇದುವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮ್ಯಾಕ್ಸ್ವೆಲ್ ಕೂಡ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರೊಂದಿಗೆ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರೂ ಸಹ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯವಾಗಿ ಸೋಲುತ್ತೆ, ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯುತ್ತೆ – ಮಿಚೆಲ್‌ ಮಾರ್ಷ್‌ ಭವಿಷ್ಯವಾಣಿ ವೈರಲ್‌

    ರಚಿನ್ ರವೀಂದ್ರ ತಮ್ಮ ಮೊದಲ ವಿಶ್ವಕಪ್‌ನಲ್ಲಿಯೇ 64.22 ಸರಾಸರಿಯಲ್ಲಿ 578 ರನ್ ಕಲೆಹಾಕಿದ್ದಾರೆ. ಡೇರಿಲ್ ಮಿಚೆಲ್ ಕೂಡ 69ರ ಸರಾಸರಿಯಲ್ಲಿ 552 ರನ್ ಬಾರಿಸಿದ್ದರು. ಟೂರ್ನಿಯಲ್ಲಿ ನಾಲ್ಕು ಶತಕ ಸೇರಿದಂತೆ 59.40 ಸರಾಸರಿಯಲ್ಲಿ 594 ರನ್ ಬಾರಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2023 World Cup Final – 20 ವರ್ಷದ ಹಿಂದಿನ ಸೇಡನ್ನು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?

  • ಸೋಲಿನ ಬೆನ್ನಲ್ಲೇ ಲಂಕಾಗೆ ಮತ್ತೆ ಶಾಕ್‌ – ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ICC

    ಸೋಲಿನ ಬೆನ್ನಲ್ಲೇ ಲಂಕಾಗೆ ಮತ್ತೆ ಶಾಕ್‌ – ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ICC

    ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ (ICC ODI World Cup 2023) ಕಳಪೆ ಪ್ರದರ್ಶನ ನೀಡಿ ಸೆಮಿಫೈನಲ್​ಗೆ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ (Sri Lanka Cricket) ಮತ್ತೊಂದು ಆಘಾತವಾಗಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Board) ಶ್ರೀಲಂಕಾ ಕ್ರಿಕೆಟ್​ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶ್ರೀಲಂಕಾ ಸರ್ಕಾರ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಇದನ್ನೂ ಓದಿ: World Cup 2023: ಮೈಲಿಗಲ್ಲು ಸ್ಥಾಪಿಸಲು RO-KO ವೇಯ್ಟಿಂಗ್‌ – ಸೂಪರ್‌ ಸಂಡೇ ಡಬಲ್‌ ಧಮಾಕ..!

    ಐಸಿಸಿ ಮಂಡಳಿಯು ಇಂದು ಸಭೆ ನಡೆಸಿತು. ಜೊತೆಗೆ ಶ್ರೀಲಂಕಾ ಕ್ರಿಕೆಟ್ ಸದಸ್ಯರಾಗಿ ಅದರ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿದೆ. ಶ್ರೀಲಂಕಾದಲ್ಲಿ ಕ್ರಿಕೆಟ್ ಹಾಗೂ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅವಶ್ಯಕತೆ ಮತ್ತು ಆಡಳಿತ, ನಿಯಂತ್ರಣ ಮತ್ತು/ಅಥವಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿರಬಾರದು ಎನ್ನುವ ಅಗತ್ಯವನ್ನು ಪೂರೈಸುವಲ್ಲಿ ಮಂಡಳಿ ವಿಫಲವಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ. ನವೆಂಬರ್‌ 21 ರಂದು ಐಸಿಸಿ ಮತ್ತೆ ಸಭೆ ಸೇರಲಿದೆ. ಸಭೆಯ ನಂತರ ಮುಂದಿನ ಕ್ರಮವು ಸ್ಪಷ್ಟವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಆ ಒಬ್ಬ ಆಟಗಾರ 20-30 ಓವರ್‌ ಆಡಿದ್ರೆ, ಸೆಮಿಸ್‌ ಪ್ರವೇಶ ಮಾಡ್ತೀವಿ – ಬಾಬರ್‌ ಆಜಂ

    2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡ 9 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 4 ಅಂಕ ಪಡೆದುಕೊಂಡಿತು. ಬ್ಯಾಟಿಂಗ್‌ ಬೌಲಿಂಗ್‌ ಹಾಗೂ ಕಳಪೆ‌ ಫೀಲ್ಡಿಂಗ್‌ನಿಂದಾಗಿ ವಿಶ್ವಕಪ್‌ನಲ್ಲಿ ಮುಖಬಂಗ ಅನುಭವಿಸುವಂತಾಯಿತು.