Tag: ICC World Test Championship

  • ಬಾಂಗ್ಲಾದೇಶಕ್ಕೆ ರಿಷಭ್ ಪಂಚ್ – ಭಾರತಕ್ಕೆ 80 ರನ್‌ಗಳ ಅಲ್ಪ ಮುನ್ನಡೆ

    ಬಾಂಗ್ಲಾದೇಶಕ್ಕೆ ರಿಷಭ್ ಪಂಚ್ – ಭಾರತಕ್ಕೆ 80 ರನ್‌ಗಳ ಅಲ್ಪ ಮುನ್ನಡೆ

    ಢಾಕಾ: ರಿಷಭ್ ಪಂತ್ (Rishabh Pant), ಶ್ರೇಯಸ್ ಅಯ್ಯರ್ (Shreyas Iyer) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ 2ನೇ ಟೆಸ್ಟ್‌ನ ಎರಡನೇ ದಿನದ ಅಂತ್ಯಕ್ಕೆ 80 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಬಾಂಗ್ಲಾದೇಶದ (Bangladesh) ವಿರುದ್ಧ ಮೊದಲ ಟೆಸ್ಟ್‌ನಲ್ಲಿ 188 ರನ್‌ಗಳ ಜಯ ಸಾಧಿಸಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ (Team India), 2ನೇ ಟೆಸ್ಟ್‌ನಲ್ಲೂ ಬ್ಯಾಟಿಂಗ್, ಬೌಲಿಂಗ್ ಅಬ್ಬರ ಮುಂದುವರಿಸಿದೆ. 2ನೇ ದಿನದಾಟದಲ್ಲಿ 80 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: 227 ರನ್‍ಗೆ ಬಾಂಗ್ಲಾ ಆಲೌಟ್ – ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದ ಉನಾದ್ಕಟ್

    2ನೇ ಟೆಸ್ಟ್ ಮೊದಲ ದಿನ 73.5 ಓವರ್‌ಗಳಲ್ಲಿ ಭಾರತ 227 ರನ್‌ಗಳಿಗೆ ಬಾಂಗ್ಲಾದೇಶ (Bangladesh) ತಂಡವನ್ನು ಕಟ್ಟಿಹಾಕಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ 8 ಓವರ್‌ಗಳಲ್ಲಿ 19 ರನ್ ಬಾರಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೇ 208 ರನ್‌ಗಳ ಹಿನ್ನಡೆ ಕಾಯ್ದುಕೊಂಡಿತ್ತು.

    ಇಂದು ಮತ್ತೆ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಎರಡನೇ ದಿನದ ಅಂತ್ಯಕ್ಕೆ 56.3 ಓವರ್‌ಗಳಲ್ಲಿ 314 ರನ್ ಗಳಿಸಿತು. ನಂತರ ಕ್ರೀಸ್‌ಗಿಳಿದ ಬಾಂಗ್ಲಾದೇಶ 6 ಓವರ್‌ಗಳಲ್ಲಿ 7 ರನ್‌ಗಳಿಸಿ, 8 ರನ್‌ಗಳ ಹಿನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ರನ್‌ ಓಡಲು ಪಂತ್‌ ನಿರಾಕರಣೆ – ಗುರಾಯಿಸಿದ ಕೊಹ್ಲಿ

    2ನೇ ದಿನದ ಇನ್ನಿಂಗ್ಸ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ (KL Rahul) ಹಾಗೂ ಶುಭಮನ್ ಗಿಲ್ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ರಾಹುಲ್ 45 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದರೆ, ಗಿಲ್ 39 ಎಸೆತಗಳಲ್ಲಿ 20 ರನ್ ಗಳಿಸಿದರು. ನಂತರದಲ್ಲಿ ಚೇತೇಶ್ವರ್ ಪೂಜಾರ (55 ಎಸೆತ) ಹಾಗೂ ವಿರಾಟ್ ಕೊಹ್ಲಿ (Virat Kohli) (73 ಎಸೆತ) ತಲಾ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಈ ವೇಳೆ ಸತತ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ಬರು ಆಟಗಾರರು ಸಿಕ್ಸರ್, ಬೌಂಡರಿ ಬಾರಿಸುವ ಜೊತೆಗೆ ಉತ್ತಮ ಇನ್ನಿಂಗ್ಸ್ ಕಟ್ಟಿದರು.

    104 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ 94 ರನ್ (7 ಬೌಂಡರಿ, 5 ಸಿಕ್ಸರ್) ಚಚ್ಚಿ ಶತಕ ವಂಚಿತರಾದರೆ, 105 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 87 ರನ್ (10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು.

    ನಂತರದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ 4 ರನ್, ಆರ್.ಅಶ್ವಿನ್ 12 ರನ್, ಉಮೇಶ್ ಯಾದವ್ 14 ರನ್, ಮೊಹಮ್ಮದ್ ಸಿರಾಜ್ 7 ರನ್ ಗಳಿಸಿದರೆ, ಜಯದೇವ್ ಉನಾದ್ಕಟ್ 14 ರನ್ ಗಳಿಸಿ ಅಜೇಯರಾಗುಳಿದರು.

    Live Tv
    [brid partner=56869869 player=32851 video=960834 autoplay=true]

  • ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ – ಫೈನಲ್‌ಗೆ ಏರಬೇಕಾದರೆ ಭಾರತ ಏನು ಮಾಡಬೇಕು?

    ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ – ಫೈನಲ್‌ಗೆ ಏರಬೇಕಾದರೆ ಭಾರತ ಏನು ಮಾಡಬೇಕು?

    ಚೆನ್ನೈ: ಭಾರತದ ವಿರುದ್ಧ 227 ರನ್‌ಗಳ ಅಂತರದಿಂದ ಗೆದ್ದ ಇಂಗ್ಲೆಂಡ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದ್ದು, ಮೊದಲ ಸ್ಥಾನದಲ್ಲಿದ್ದ ಭಾರತ 4ನೇ ಸ್ಥಾನಕ್ಕೆ ಜಾರಿದೆ.

    ಭಾರತ 4ನೇ ಸ್ಥಾನಕ್ಕೆ ಜಾರಿದ್ದರೂ ಟೆಸ್ಟ್‌ ಚಾಂಪಿಯನ್‌ ಫೈನಲ್‌ಗೆ ಏರಲು ಅವಕಾಶವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿಯುವುದರೊಂದಿಗೆ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ ಈಗಾಗಲೇ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ಗೆ ಏರಿದೆ.

    ಪ್ರಸ್ತುತ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ಪಟ್ಟಿಯಲ್ಲಿ ಇಂಗ್ಲೆಂಡ್‌ 11 ಜಯ, 4 ಸೋಲು, 3 ಡ್ರಾದೊಂದಿಗೆ 442 ಅಂಕ ಗಳಿಸಿದೆ. ಭಾರತ 8 ಜಯ, 4 ಸೋಲಿನೊಂದಿಗೆ 430 ಅಂಕ ಪಡೆದಿದೆ. ಆದರೆ ಪರ್ಸಂಟೇಜ್‌ ಆಫ್‌ ಪಾಯಿಂಟ್‌ನಲ್ಲಿ ಆಸ್ಟ್ರೇಲಿಯಾ ಮುಂದಿರುವ ಕಾರಣ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಾರಿದೆ.

    ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಹೋಗಬೇಕಾದರೆ ಭಾರತ ಮುಂದೆ ನಡೆಯಲಿರುವ ಟೆಸ್ಟ್‌ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ಸೋಲಬಾರದು. ಒಂದು ವೇಳೆ ಸೋತರೆ ಫೈನಲ್‌ಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದೆ. ಭಾರತ ಒಂದು ಪಂದ್ಯವನ್ನು ಡ್ರಾ ಮಾಡಿ 2-1 ಅಂತರ ಅಥವಾ 3-1 ಅಂತರದಿಂದ ಪಂದ್ಯ ಗೆದ್ದರೆ ಮಾತ್ರ ಫೈನಲ್‌ ಪ್ರವೇಶಿಸಲಿದೆ. ಇಂಗ್ಲೆಂಡ್‌ 4-0, 3-0, 3-1 ಅಂತರದಿಂದ ಗೆದ್ದರೆ ಫೈನಲ್‌ ಪ್ರವೇಶಿಸಲಿದೆ.

    ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ತವರಿಗೆ ಮರಳಿದ್ದ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದೆ. ಗೆಲ್ಲಲು 420 ರನ್‌ಗಳ ವಿಶ್ವ ದಾಖಲೆಯ ಗುರಿಯನ್ನು ಪಡೆದಿದ್ದ ಭಾರತ 58.1 ಓವರ್‌ಗಳಲ್ಲಿ192 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿದೆ.

    39 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದ್ದ ಭಾರತ ಜ್ಯಾಕ್‌ ಲೀಚ್‌ ಮತ್ತು ಜೇಮ್ಸ್‌ ಆಂಡರ್‌ಸನ್‌ ಬೌಲಿಂಗ್‌ಗೆ ತತ್ತರಿಸಿತು. ಕೊಹ್ಲಿ ಮತ್ತು ಅಶ್ವಿನ್‌ ನಡುವೆ 7ನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ಬಂದಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಜೊತೆಯಾಟ ಸಿಗದ ಕಾರಣ ಪಂದ್ಯವನ್ನು ಭಾರತ ಸೋತಿದೆ.