Tag: ICC World Cup Final

  • ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌’

    ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌’

    ಅಹಮದಾಬಾದ್: ವಿಶ್ವಕಪ್‌ 2023ರ (World Cup 2023) ಟೂರ್ನಿಯಲ್ಲಿ ಉಪ ನಾಯಕನಾಗಿ ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಕೆ.ಎಲ್‌.ರಾಹುಲ್‌ (K.L.Rahul), ಭಾರತ ತಂಡದ ವಿಕೆಟ್‌ ಕೀಪರ್‌ ಆಗಿ ದಾಖಲೆಯೊಂದನ್ನು ಬರೆದಿದ್ದಾರೆ.

    ವಿಶ್ವಕಪ್‌ ಟೂರ್ನಿಯ ಒಂದರಲ್ಲಿ ವಿಕೆಟ್‌ ಕೀಪರ್‌ ಆಗಿ ಅತಿ ಹೆಚ್ಚು ಕ್ಯಾಚ್‌ ಹಿಡಿದ ಭಾರತದ ಆಟಗಾರನಾಗಿ ಕೂಲ್‌ ಕ್ಯಾಪ್ಟನ್‌ ಎಂ.ಎಸ್‌.ಧೋನಿ (M.S.Dhoni) ಅವರ ದಾಖಲೆಯನ್ನು ಕನ್ನಡಿಗ ಮುರಿದಿದ್ದಾರೆ. ಇದನ್ನೂ ಓದಿ: ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    ಈ ಟೂರ್ನಿಯಲ್ಲಿ ಕೆ.ಎಲ್‌.ರಾಹುಲ್‌ ಈವರೆಗೆ 17 ಕ್ಯಾಚ್‌ ಹಿಡಿದು ವಿರೋಧಿ ತಂಡದ ಆಟಗಾರರನ್ನು ಔಟ್‌ ಮಾಡಿದ್ದಾರೆ. 2015 ರ ವಿಶ್ವಕಪ್‌ ಟೂರ್ನಿಯಲ್ಲಿ ಎಂ.ಎಸ್‌.ಧೋನಿ ಅವರು 15 ಕ್ಯಾಚ್‌ ಹಿಡಿದು ಎದುರಾಳಿ ತಂಡದವರನ್ನು ಔಟ್‌ ಮಾಡಿದ್ದರು. ಈಗ ಧೋನಿ ದಾಖಲೆಯನ್ನು ರಾಹುಲ್‌ ಮುರಿದಿದ್ದಾರೆ.

    ಅಷ್ಟೇ ಅಲ್ಲದೇ ರಾಹುಲ್‌, ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ ಅವರ ದಾಖಲೆಯನ್ನು ಸರಿಗಟ್ಟುವ ಸನಿಹದಲ್ಲಿದ್ದಾರೆ. ಡಿ ಕಾಕ್‌ ಒಂದೇ ಆವೃತ್ತಿಯಲ್ಲಿ 19 ಕ್ಯಾಚ್‌ ಹಿಡಿದು ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 2003 ರ ವಿಶ್ವಕಪ್‌ ಆವೃತ್ತಿಯಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದು ಔಟ್‌ ಮಾಡಿ (21) ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಆ್ಯಡಮ್ ಗಿಲ್‌ಕ್ರಿಸ್ಟ್‌ ನಂಬರ್‌ ಒನ್‌ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup Final: ಆಸೀಸ್‌ಗೆ 241 ರನ್‌ಗಳ ಗುರಿ – ವಿಶ್ವಕಪ್‌ಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

    ಟೂರ್ನಿಯ ಒಂದರಲ್ಲಿ ಹೆಚ್ಚು ಕ್ಯಾಚ್‌ ಹಿಡಿದು ಔಟ್‌ ಮಾಡಿದ ಟಾಪ್ ವಿಕೆಟ್‌ಕೀಪರ್‌ಗಳು‌
    * ಆ್ಯಡಮ್ ಗಿಲ್‌ಕ್ರಿಸ್ಟ್‌ (ಆಸ್ಟ್ರೇಲಿಯಾ): 2003 ರಲ್ಲಿ 21 ಕ್ಯಾಚ್‌
    * ಕ್ವಿಂಟನ್‌ ಡಿ ಕಾಕ್‌ (ದಕ್ಷಿಣ ಆಫ್ರಿಕಾ): 2023 ರಲ್ಲಿ 19 ಕ್ಯಾಚ್‌
    * ಕೆ.ಎಲ್.ರಾಹುಲ್‌ (ಭಾರತ): 2023 ರಲ್ಲಿ 17 ಕ್ಯಾಚ್‌

    ಭಾರತದ ವಿಕೆಟ್‌ಕೀಪರ್‌ಗಳು
    * ಕೆ.ಎಲ್.ರಾಹುಲ್‌: 2023 ರಲ್ಲಿ 17 ಕ್ಯಾಚ್‌
    * ರಾಹುಲ್‌ ದ್ರಾವಿಡ್‌: 2003 ರಲ್ಲಿ 15 ಕ್ಯಾಚ್‌
    * ಎಂ.ಎಸ್.ಧೋನಿ: 2015 ರಲ್ಲಿ 15 ಕ್ಯಾಚ್‌

  • ಅಂಪೈರ್‌ಗಳ ಆಯ್ಕೆ ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿದ್ದೇಕೆ? – ಯಾರು ಘಟಾನುಘಟಿಗಳು?

    ಅಂಪೈರ್‌ಗಳ ಆಯ್ಕೆ ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿದ್ದೇಕೆ? – ಯಾರು ಘಟಾನುಘಟಿಗಳು?

    ಅಹಮದಾಬಾದ್:‌ 13ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಆತಿಥೇಯ ಟೀಂ ಇಂಡಿಯಾ 20 ವರ್ಷಗಳ ಬಳಿಕ ಆಸ್ಟ್ರೇಲಿಯಾ ಎದುರು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಕಾದಾಟ ನಡೆಸಲಿದೆ.

    ಅಂದಹಾಗೆ ಈ ಹೈವೋಲ್ಟೇಜ್‌ ಫೈನಲ್‌ ಪಂದ್ಯದ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಅಂಪೈರ್‌ಗಳನ್ನ ಘೋಷಣೆ ಮಾಡಿದೆ. ಅದರಲ್ಲೂ ಟೀಂ ಇಂಡಿಯಾಕ್ಕೆ ಬ್ಯಾಡ್‌ಲಕ್‌ ಅಂಪೈರ್‌ ಎಂದೇ ಗುರುತಿಸಿಕೊಂಡಿರುವ ರಿಚರ್ಡ್‌ ಕೆಟೆಲ್‌ಬೊರೊ ಆನ್‌ಫೀಲ್ಡ್‌ ಅಂಪೈರ್‌ ಆಗಿ ಆಯ್ಕೆಯಾಗಿರುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ನಿದ್ದೆಗೆಡಿಸಿದೆ. ಏಕೆಂದರೆ ರಿಚರ್ಡ್‌ ಕೆಟೆಲ್‌ಬೊರೊ ಅಂಪೈರ್‌ ಆಗಿರುವ ಬಹುತೇಕ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಇದನ್ನೂ ಓದಿ: ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್‌ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಆಗಿದ್ದೇನು?

    ರಿಚರ್ಡ್‌ ಕೆಟೆಲ್‌ಬೊರೊ ಮತ್ತು ರಿಚರ್ಡ್‌ ಲಿಲ್ಲಿಂಗ್‌ವರ್ತ್‌ 2023ರ ವಿಶ್ವಕಪ್‌ ಫೈನಲ್‌ ಪಂದ್ಯದ ಆನ್‌ಫೀಲ್ಡ್‌ ಅಂಪೈರ್‌ಗಳಾಗಿ ಕೆಲಸ ಮಾಡಲಿದ್ದಾರೆ. ಅಂದಹಾಗೆ ಕೆಟೆಲ್‌ಬೊರೊ ಟೀಂ ಇಂಡಿಯಾ ಪಾಲಿಗೆ ನಾಕ್‌ಔಟ್‌ ಪಂದ್ಯಗಳಲ್ಲಿ ಬ್ಯಾಡ್‌ಲಕ್‌ ಎಂದೇ ಗುರುತಿಸಿಕೊಂಡಿದ್ದಾರೆ. 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೋತು ನಿರಾಸೆ ಅನುಭವಿಸಿದ ಸಂದರ್ಭದಲ್ಲೂ ಇದೇ ರಿಚರ್ಡ್‌ ಕೆಟೆಲ್‌ಬೊರೊ ಆನ್‌ಫೀಲ್ಡ್‌ ಅಂಪೈರ್‌ ಆಗಿದ್ದರು. ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಚಿಂತೆಯಲ್ಲಿ ಮುಳುಗುವಂತಾಗಿದೆ. ಇದನ್ನೂ ಓದಿ: ಶಾಲೆಗೆ ಸೇರಿಸಲು ಶರ್ಮಾ ಪೋಷಕರಲ್ಲಿ 275 ರೂ. ಫೀಸ್‌ ಕೂಡ ಇರ್ಲಿಲ್ಲ – ಬಾಲ್ಯದಲ್ಲಿ ಹಿಟ್‌ಮ್ಯಾನ್‌ ಕಷ್ಟದ ಜೀವನ!

    ಇನ್ನೂ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಕೂಡ ಭಾರತ ತಂಡದ ಪಾಲಿಗೆ ಬ್ಯಾಡ್‌ಲಕ್‌. ಭಾರತ ತಂಡ ನಾಕ್‌ಔಟ್‌ ಪಂದ್ಯಗಳಲ್ಲಿ ಸೋತಾಗ ಒಂದು ಕೆಟೆಲ್‌ಬೊರೊ ಅಂಪೈರ್‌ ಆಗಿರುತ್ತಾರೆ. ಇಲ್ಲ ಇಲ್ಲಿಂಗ್‌ವರ್ತ್ ಅಂಪೈರ್‌ ಆಗಿರುತ್ತಾರೆ ಎಂಬುದು ಕಾಕತಾಳೀಯ. ಐಸಿಸಿ ಟೂರ್ನಿಗಳಲ್ಲಿ ನ್ಯೂಟ್ರಲ್‌ ಅಂಪೈರ್‌ಗೆ ಕೆಲಸ ವಹಿಸುವುದು ನಿಯಮ. ಹೀಗಾಗಿ ಫೈನಲ್‌ ಆಡುತ್ತಿರುವ ರಾಷ್ಟ್ರಗಳ ಅಂಪೈರ್‌ನ ಬಿಟ್ಟು ಹೊರಗಿನವರಿಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಬ್ರಿಟನ್‌ನ ಅಂಪೈರ್‌ಗಳಾದ ರಿಚರ್ಡ್‌ ಕೆಟೆಲ್‌ಬೊರೊ ಮತ್ತು ಇಲ್ಲಿಂಗ್‌ವರ್ತ್‌ ಆಯ್ಕೆಯಾಗಿದ್ದಾರೆ.

    ರಿಚರ್ಡ್‌ ಕೆಟೆಲ್‌ಬೊರೊ ಇದ್ದಾಗ ಭಾರತ ಸೋತ ಪ್ರಮುಖ ಮ್ಯಾಚ್‌ಗಳು

    • 2014ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ
    • 2015ರ ಏಕದಿನ ವಿಶ್ವಕಪ್‌ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ
    • 2016ರ ಟಿ20 ವಿಶ್ವಕಪ್‌ ಸೆಮೀಸ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ
    • 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ
    • 2019ರ ಏಕದಿನ ವಿಶ್ವಕಪ್‌ ಸೆಮೀಸ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ

    ಇನ್ನು ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ಜೋಯೆಲ್‌ ವಿಲ್ಸನ್‌ 3ನೇ ಅಂಪೈರ್‌ ಆಗಿ ಕೆಲಸ ಮಾಡಲಿದ್ದಾರೆ. ಕ್ರಿಸ್‌ ಗ್ಯಾಫನಿ 4ನೇ ಅಂಪೈರ್‌ ಜವಾಬ್ದಾರಿ ವಹಿಸಲಿದ್ದಾರೆ. ಮ್ಯಾಚ್‌ ರೆಫ್ರಿಯಾಗಿ ಆಂಡಿ ಪೈಕ್ರಾಫ್ಟ್‌ ಪಂದ್ಯದ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.